Thursday, May 5, 2011





ಬಸವೇಶ್ವರ ಜಯಂತ್ಯೋತ್ಸವ

ಸಮಾರಂಭಚಿಕ್ಕನಾಯಕನಹಳ್ಳಿ,ಮೇ.05: ಮಹಾನ್ ಮಾನವತಾವಾಧಿ, ಸಮಾಜ ಸುಧಾರಕ ಶೇಷ್ಠ ವಚನಕಾರ ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 6ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲೂಕು ಆಡಳಿತ ಮತ್ತು ಬಸವ ಸಮಿತಿಯವರ ಸಂಯುಕ್ತಾಶ್ರಯದಲ್ಲಿ, ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.ಈ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಅನಾವರಣಗೊಳಿಸಲಿದ್ದು ಕಾನೂನು ಸಲಹೆಗಾರರಾದ ಶೋಭ ವಿಶೇಷ ಉಪನ್ಯಾಸ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ಶಿವಯೋಗಿಸ್ವಾಮಿ, ಎಂ.ಆರ್.ಹುಲಿನಾಯ್ಕರ್, ವೈ.ಎಂ.ನಾರಾಯಣಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿನಾಗರಾಜು, ಉಪಾಧ್ಯಕ್ಷೆ ಲಲತಿತಮ್ಮ ಮಂಜುನಾಥ್, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತೀಮ, ಪುರಸಭೆ ಉಪಾಧ್ಯಕ್ಷ ಆರ್.ರವಿ, ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಜಿ.ಪಂಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ ಉಪಸ್ಥಿತರಿರುವರು.
ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂನರ್ಿಮೆಂಟ್ಚಿಕ್ಕನಾಯಕನಹಳ್ಳಿ,

ಈ.05: ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂನರ್ಿಮೆಂಟ್ನ್ನು ಇದೇ 7 ಮತ್ತು 8ರಂದು ಏರ್ಪಡಿಸಲಾಗಿದೆ.ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಥಮ ಬಾರಿಗೆ ಟೂನರ್ಿಮೆಂಟ್ನ್ನು ಕುರುಬರಹಳ್ಳಿಯ ಬಸವೇಶ್ವರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾ ಸದಸ್ಯ ಎಂ.ಎನ್.ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ತಂಬಾಕು ಸೇವನೆಯ ವ್ಯವಸ್ಥೆ ತೊಲಗಲಿಚಿಕ್ಕನಾಯಕನಹಳ್ಳಿ,ಮೇ.05:

ಆಸ್ಪತ್ರೆಗಳಲ್ಲಿ ಭಯಂಕರ ರೋಗಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ತಂಬಾಕು ಸೇವನೆ ಮಾಡುವವರೆ ಹೆಚ್ಚಾಗಿದ್ದು ಈ ವ್ಯವಸ್ಥೆಯನ್ನು ತೊಡೆದು ಹಾಕುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪ ತಿಳಿಸಿದರು.ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆದ ಕಾಮರ್ಿಕರ ದಿನಾಚರಣೆ ಮತ್ತು ತಂಬಾಕು ಸೇವನೆ ವಿರೋದಿ ದಿನಾಚರಣೆಯಲ್ಲಿ ಮಾತನಾಡಿದ ಅವರು ಕಾಮರ್ಿಕರ ದಿನಾಚರಣೆಯ ಜೊತೆಗೆ ತಂಬಾಕು ಪಾಲನೆಯ ನಿಮರ್ೂಲನೆಯ ದಿನಾಚರಣೆ ಅಗತ್ಯವಾಗಿದೆ, ತಂಬಾಕು ಸೇವಿಸುವ ಹಲವರು ತಮ್ಮ ಸಂಸಾರದ ಸುಖವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಕಾಮರ್ಿಕರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ, ಕಾಮರ್ಿಕರು ಕಾಯರ್ೋನ್ಮುಖರಾಗಿದ್ದಾಗ ಆಗುವ ಆಕಸ್ಮಿಕ ಅವಗಡಗಳಿಗೆ ಹೆಚ್ಚು ಗಮನ ಹರಿಸಬೇಕು ಎಂದ ಅವರು, ತಂಬಾಕು ಸೇವನೆ ನಿಷೇದವಾದದು ಎಂದು ತಂಬಾಕಿನ ಮೇಲೆ ಬರೆದರೂ ಯಾರೂ ಅದರ ಬಗ್ಗೆ ಗಮನ ಹರಿಸದೇ ಅದರಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಅಲ್ಲದೇ ಚಿಕ್ಕ ವಯಸ್ಸಿನ ಮಕ್ಕಳು ತಂಬಾಕು ಸೇವನೆ ಮಾಡುತ್ತಿದ್ದಾರೆ ಇಂತಹ ತಪ್ಪು ವ್ಯವಸ್ಥೆ ಬದಲಾಗಬೇಕು ಎಂದರು.ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್ ಮಾತನಾಡಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಉಂಟಾಗುವುದುದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಸಲುವಾಗಿ ತಂಬಾಕಿನ ಸೇವನೆಯಿಂದ ದೂರು ಉಳಿಯುವುದು ಒಳ್ಳೆಯದು ಎಂದರು.ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್, ಉಪಾಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಕೀಲ ಶ್ರೀಧರ್ ಸ್ವಾಗತಿಸಿದರೆ, ವಕೀಲ ಹನುಮಂತಪ್ಪ ನಿರೂಪಿಸಿ, ಶಿರಸ್ತೆದಾರ್ ಕೆ.ವಿ.ಕುಮಾರ್ ವಂದಿಸಿದರು.