Wednesday, February 20, 2013

ಸುಂಟರಮಳೆ ಸಿದ್ದರಾಮೇಶ್ವರ ದೇವಾಲಯ ಪ್ರವೇಶಕ್ಕೆ                  ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಫೆ.19 : ಸುಂಟರಮೆಳೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿ ಜೀಣರ್ೋದ್ಧಾರ ನೂತನ ದೇವಾಲಯ ಪ್ರವೇಶ, ಪುನರ್ ಪ್ರಾಣ ಪ್ರತಿಷ್ಠಾನಪನಾ, ಹಾಗೂ ನೂತನ ಶಿಖರ ಕಳಶಾರೋಹಣವನ್ನು ಇದೇ 21, 22ರ ಗುರವಾರ ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
    21ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿ, ಹೆಂಜಾರು ಭೈರವೇಶ್ವರಸ್ವಾಮಿ, ಅತ್ತಿಮರದಮ್ಮ ಹಾಗೂ ಆಲದಮರದಮ್ಮದೇವಿಯವರ ಆಗಮನದೊಂದಿಗೆ ದೇವಾಲಯದ ಪ್ರಮೇಶ ನಡೆಯಲಿದೆ.
    22ರಂದು ನಡೆಯುವ ಧಾಮರ್ಿಕ ಸಮಾರಂಭದ ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮಿಯವರು ಶಿವಾಲಯದ ಗೋಪುರಕ್ಕೆ ಕಳಶಾರೋಹಣ ನೆರವೇರಲ್ಪಡುತ್ತದೆ.
    22ರಂದು ಬೆಳಗ್ಗೆ 11ಕ್ಕೆ ನಡೆಯುವ  ಧಾಮರ್ಿಕ ಸಭೆಗೆ ಕಾಯಕಯೋಗಿ ಡಾ.ಶಿವಕುಮಾರಸ್ವಾಮಿಯವರು ಆಗಮಿಸಲಿದ್ದು,  ದೇವಾಲಯದ ಉದ್ಘಾಟನೆ ನೆರವೇರಿಸಲಿದ್ದಾರೆ. ಧಾಮಿರ್ಕ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆಡೆಸಲಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು  ಕೆರಗೋಡಿ ರಂಗಾಪುರದ ಗುರುಪರದೇಶಿಕೇಂದ್ರಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ. ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ, ಗೋಡೆಕೆರೆ ಮಠದ ಸ್ಥಿರಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ, ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶಿಕೇಂದ್ರಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಉಪಸ್ಥಿತರಿರಲಿದ್ದು,
ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ದೇವಾಲಯದ ನಿಮರ್ಾತೃ ಎಸ್.ಎಲ್.ಶಾಂತಕುಮಾರ್ರವರಿಗೆ ಸನ್ಮಾನ ನಡೆಯಲಿದೆ ಎಂದರು.
    ಈ ಸಂದರ್ಭದಲ್ಲಿ ದಾನಿ ಎಸ್.ಎಲ್.ಶಾಂತಕುಮಾರ್, ತಾ.ಪಂ.ಸದಸ್ಯ ಶಶಿಧರ್, ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ ಉಪಸ್ಥಿತರಿದ್ದರು.

ಯಾವ ಪಕ್ಷಕ್ಕೆ ಸೇರಬೆಕೆಂಬ ವಿಷಯದಲ್ಲಿ  ನಮ್ಮ ಕಾರ್ಯಕರ್ತರು ನನ್ನನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಫೆ.19 : ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷದ ಮೂಲಕವೇ ಚುನಾವಣೆಗೆ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದು, ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷವು ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
    ನವೋದಯ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸ ಮಾತನಾಡಿದ ಅವರು ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪದರ್ಿಸಬೇಕೆಂಬ ನಮ್ಮ ನಿಧರ್ಾರವನ್ನೇ ಕಾರ್ಯಕರ್ತರು ಗೊಂದಲ ಮಾಡಿದ್ದಾರೆ, ಕೆಲವರು ಕೆಜೆಪಿ ಪಕ್ಷದಿಂದ ಸ್ಪಧರ್ಿಸಿ ಎಂದರೆ,  ಇನ್ನು ಕೆಲವರು ಕಾಂಗ್ರೆಸ್ ಪಕ್ಷದಿಂದ ಸ್ಪಧರ್ಿಸಿ ಎಂಬ ನಿಲುವನ್ನು ತಿಳಿಸುತ್ತಿರುವುದರಿಂದ ಚುನಾವಣೆಗೆ ಗೊಂದಲ ಏರ್ಪಟ್ಟಿದೆ ಎಂದರು.
 ಸುಂಟರಮಳೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯ ನೂತನ ದೇವಾಲಯಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಗಮನದಿಂದ ಯಾವುದೇ ರಾಜಕೀಯ ಬೆಳವಣಿಗೆಯಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕಂದಿಕೆರೆ ಶ್ರೀ ಗವಿಶಾಂತ ವೀರಸ್ವಾಮಿಗಳ ವೈಭವದ ಜಾತ್ರೋತ್ಸವ ಆರಂಭ
ಚಿಕ್ಕನಾಯಕನಹಳ್ಳಿ,ಫೆ.19 : ಅವಧೂತ ಶ್ರೀ ಗವಿಶಾಂತವೀರಸ್ವಾಮಿಗಳ 23ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಇದೇ ಫೆಬ್ರವರಿ 18ರಿಂದ 26ರವರಗೆ ಕಂದಿಕೆರೆಯಲ್ಲಿ ನಡೆಯಲಿದೆ.
18ರಂದು ವಿಘ್ನೇಶ್ವರ ಸ್ವಾಮಿಯವರಿಗೆ ಅಭಿಷೇಕ ಪೂಜೆ, 19ರಂದು ಭಜನಾಸಪ್ತಾಹ, 20ರಂದು ನವಗ್ರಹ ಸ್ವಾಮಿಗಳಿಗೆ ಮಹಾಮಂಗಳಾರತಿ, 21ರಂದು ಸುಬ್ರಹ್ಮಣ್ಯಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ, 22ರಂದು ಅಂಭಾದೇವಿಗೆ ಕುಂಕುಮಾರ್ಚನೆ ಮಹಾಮಂಗಳಾರತಿ, 23ರಂದು ಜಡೇಸಿದ್ದೇಶ್ವರಸ್ವಾಮಿಗೆ ರುದ್ರಾಭಿಷೇಕ, ಸಹಸ್ತ್ರ ನಾಮಪೂಜೆ, 24ರಂದು ಅವಧೂತ ಶಾಂತವೀರಸ್ವಾಮಿಗಳಿಗೆ ಗಂಗಾಸ್ನಾನ, ರುದ್ರಾಭಿಷೇಕ, ಸಹಸ್ತ್ರನಾಮಪೂಜಾ, 101ಪೂಜಾಧಿಗಳು ನಡೆಯಲಿದ್ದು 25ರಂದು ಬೆಳಗ್ಗೆ ರಥಕ್ಕೆ ಕಳಸ ಸ್ಥಾಪನೆ, ಪುಣ್ಯಾರ್ಚನೆ, ರಥದ ಗಾಲಿಗಳಿಗೆ ಅಭಿಷೇಕ, ಪೂಜೆ ನಿಬೂರು ಗ್ರಾಮಸ್ಥರಿಂದ ಬೆಳಗ್ಗೆ 10ಗಂಟೆಗೆ ರಥೋತ್ಸವಕ್ಕೆ ಕಳಸ ಸ್ಥಾಪನೆ ನೆರವೇರಲಿದೆ. 
26ರಂದು ಮಂಗಳವಾರ ಬೆಳಗ್ಗೆ 11ಗಂಟೆಗೆ ಸಾಧು ಸಂತರಿಗೆ ಕವದಿ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.

ಪ್ರಸನ್ನ ರಾಮೇಶ್ವರ ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ
ಚಿಕ್ಕನಾಯಕನಹಳ್ಳಿ,ಫೆ.19 : ಶ್ರೀ ಪಾರ್ವತಿ ಪ್ರಸನ್ನ ರಾಮೇಶ್ವರಸ್ವಾಮಿಯವರ ಗಿರಿಜಾ ಕಲ್ಯಾಣೋತ್ಸವ ಮತ್ತು ಬ್ರಹ್ಮರಥೋತ್ಸವವು ಇದೇ ಫೆಬ್ರವರಿ 23ರಿಂದ ಮಾಚರ್್ 1ರವರೆಗೆ ನಡೆಯಲಿದೆ.
23ರಂದು ಮಹಾಗಣಪತಿ ಪೂಜೆ, 24ರಂದು ಪ್ರಕಾರೋತ್ಸವ, 25ರಂದು ಮಂಟಪೋತ್ಸವ, 26ರಂದು ನಿತ್ಯಹೋಮ, ಬಲಿದಾನ, ಪ್ರಾಕಾರೋತ್ಸವ, 27ರಂದು ಅವಭೃತಸ್ನಾನ, 28ರಂದು ಅನ್ನಸಂತರ್ಪಣೆ ನಡೆಯಲಿದ್ದು 1ರಂದು ಪ್ರಸನ್ನರಾಮೇಶ್ವರಸ್ವಾಮಿಯವರಿಗೆ ವಿಭೂತಿ ಅಲಂಕಾರ, ಅರಿಶಿನ ಅಲಂಕಾರ ಹಾಗೂಸಂಜೆ 6.30ಕ್ಕೆ ಭೂಕೈಲಾಸೋತ್ಸವ ನಡೆಯಲಿದೆ.

              ಧಾಮರ್ಿಕ ಕಾರ್ಯಕ್ರಮದಲ್ಲಿ ರಾಜಕೀಯ
ಚಿಕ್ಕನಾಯಕನಹಳ್ಳಿ, :ಧಾಮರ್ಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೆರತ ಕಾರಣ ವಿವಿಧ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದ ಘಟನೆ ತಾಲ್ಲೂಕಿನ ಬೆಳಗುಲಿ ರಂಗನಾಥ ಸ್ವಾಮಿ ಬೆಟ್ಟದದಲ್ಲಿ ಭಾನುವಾರ ನಡೆದಿದೆ.
ತಾಲ್ಲೂಕಿನ ಬೆಳಗುಲಿ ಬೆಟ್ಟದ ಮೇಲೆ ಶ್ರೀ ಹೊನ್ನಮರಡಿ ರಂಗನಾಥಸ್ವಾಮಿಯ ದೇಗುಲಕ್ಕೆ ಈಚೆಗೆ ಭಕ್ತರ ನೆರವಿನಿಂದ ನೂತನ ಗೋಪುರ ನಿಮರ್ಾಣ ಮಾಡಲಾಗಿತ್ತು. ಈ ಗೋಪುರದ ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಕಾರ್ಯಕ್ರಮವನ್ನು ಭಾನುವಾರ ಆಲಯದವತಿ ಹಾಗೂ ಏಳುಹಳ್ಳಿಗಳ ಭಕ್ತಾದಿಗಳ ನೆರವಿನಿಂದ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಭಾನವಾರ ತಾಲ್ಲೂಕಿನ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರುಗಳನ್ನು ಆಹ್ವಾನಿಸಲಾಗಿತ್ತು.  ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಮುಖ ನಾಯಕರುಗಳು ಯಾವುದೇ ಸಾರ್ವಜನಿಕ ಸಂಪರ್ಕಗಳ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಇದೇರೀತಿ ಈ ಧಾಮರ್ಿಕ ಕಾರ್ಯಕ್ರಮಕ್ಕೆ ಮೊದಲಿಗೆ ಮಾಜಿ ಶಾಸಕ ಕೆ.ಎಸ್ಕಿರಣ್ಕುಮಾರ್  ಭಾನುವಾರ ಮಧ್ಯಾಹ್ನ 1-30 ಸಮಯದಲ್ಲಿ ಆಗಮಸಿದರು. ಅವರ ಹಿಂದೆ  ಸ್ಥಳೀಯ ಹಾಗೂ ಅವರ ಜೊತೆಯಲ್ಲಿದ್ದ ಬೆಂಬಲಿಗರೂ ಸಹ ಜೊತೆಗೂಡಿ ದೇವಸ್ಥಾನದ ಕಳಸಕ್ಕೆ ನಮನ ಸಲ್ಲಿಸಿ ಪೂಜೆ ಸಲ್ಲಿಸಿ ಸ್ವಲ್ಪಸಮಯವಿದ್ದು ವಾಪಸ್ ತೆರಳಿದರು. ನಂತರ ಅರ್ಧತಾಸಿನ ನಂತರ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿಯವರು ತಮ್ಮ ಸಂಗಡಿಗರೊಂದಿಗೆ  ಸಹ ಬೆಟ್ಟಕ್ಕೆ ಆಗಮಿಸಿದರು.  ಅವರು ದೇವಾಲಯಕ್ಕೆ ಆಗಮಿಸಿದಾಗ ಸ್ಥಳೀಯವಾಗಿ ಅಲ್ಲಿದ್ದ ಅವರ ಬೆಂಬಲಿಗರು ಅವರನ್ನು ಸುತ್ತುವರೆದು ಆಲಯಕ್ಕೆ ಕರೆದೊಯ್ದರು. ಈ ಸಂದರ್ಭದಲ್ಲಿ ಕೆಲ ಅಭಿಮಾನಿಗಳು ಅವರಗೆ ಜೈಕಾರ ಹಾಕಲು ಮುಂದಾದಾಗ ಮಾಧುಸ್ವಾಮಿಯವರೇ ಅದಕ್ಕೆ ತಡೆಒಡ್ಡಿದರು. ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಹಿಂತಿರುಗಿದರು. ಅವರು ಹೋದ ಸ್ವಲ್ಪ ಸಮಯಕ್ಕೆ ಹಾಲಿ ಶಾಸಕ ಸಿ.ಬಿ. ಸುರೇಶ್ಬಾಬು ಬೆಟ್ಟಕ್ಕೆ ಬರುತ್ತಿದ್ದಂತಯೇ ಅಲ್ಲಿನ ವಾತಾವರಣವೇ ಬದಲಾಗಿ ಶಾಸಕರನ್ನು ವಿವಿಧ ವಾದ್ಯ ಗೋಷ್ಠಿ ಹಾಗೂ ಪರಾಕು ಮತ್ತು ಜೈಕಾರದೊಂದಿಗೆ ದೇವಾಲಯಕ್ಕೆ ಸ್ವಾಗತಿಸಿ ಪೂಜೆ ಸಲ್ಲಿಸುವವರೆಗೂ ಅವರನ್ನು ಆದರದಿಂದ ನೋಡಿಕೊಳ್ಳಲಾಗಿತ್ತು. ಪೂಜೆ ಸಲ್ಲಿಸಿ ದೇವಾಲಯದಿಂದ ಹಿಂತಿರುಗುವ ಸಂದರ್ಭದಲ್ಲಿ ದೇವಾಲಯದ ಹೊರಗಡೆಯಿದ್ದ ಮಾಜಿ ಶಾಸಕರುಗಳ ಬೆಂಬಲಿಗರು ಹಾಲಿ ಶಾಸಕರಿಗೆ ವಿಶೇಷ ಸ್ವಾಗತ ಕೋರಿದ ಬಗ್ಗೆ ತಗಾದೆ ತೆಗೆದರು. ಮಾತಿನ ಚಕಮಕಿ ಎರಡೂ ಕಡೆಯಲ್ಲೂ  ನಡೆದು ಅದು ಮಿತಿಮೀರಿತು. ಅತೃಪ್ತರ ಒಂದು ಗುಂಪು ವಾದ್ಯ ನುಡಿಸುತ್ತಿದ್ದವರ ಮೇಲೆ ಮುಗಿಬಿದ್ದು ನಾದಸ್ವರ , ತಮಟೆ ಹಾಗೂ ಇನ್ನಿತರ ವಾದ್ಯಗಳನ್ನು ಕಿತ್ತೆಸೆದು ಅವರ ಮೇಲೆ ಕೈ ಮಾಡಿದರು. ಈ ಮಾರಾಮರಿಯು ಹಾಲಿ ಶಾಸಕರ  ಸಮ್ಮುಖದಲ್ಲಿ ನಡೆಯಿತು. ನಂತರ ಎರಡೂ ಗುಂಪುಗಳು ಸಮಾಧಾನಪಟ್ಟರೂ ಹಲವು ಮಂದಿ ಬೆಟ್ಟದ ಕೆಳಗೆ ನಡೆದ ಧಾಮರ್ಿಕ ಕಾರ್ಯಕ್ರಮಕ್ಕೆ ಹಾಜರಾಗದ ಕಾರಣ ವಿರಳ ಭಕ್ತಾದಿಗಳ ನಡುವೆ ಸಭೆ ಮುಗಿಯಿತು.
ಈ ಧಾಮರ್ಿಕ ಕಾರ್ಯಕ್ರಮದ ಅಂಗವಾಗಿ ಬೆಳಗುಲಿ ಗ್ರಾಮ ಹಾಗೂ ಬೆಟ್ಟದ ಸನಿಹದಲ್ಲಿ ವಿವಿಧ ಪಕ್ಷದ ಮುಖಂಡರು ಹಾಗೂ ಬೆಂಬಲಿಗರ ಫ್ಲೆಕ್ಸ್ಗಳು ಎಲ್ಲೆಲ್ಲಿಯೂ ರಾರಾಜಿಸುತ್ತಿದ್ದವು. ಈ ನಡುವೆ ಕಳಸ ಪ್ರತಿಷ್ಠಾಪನೆಯ ಅಂಗವಾಗಿ ಗ್ರಾಮದೇವತೆಗಳನ್ನು ಉತ್ಸವದ ಮೂಲಕ ಬೆಟ್ಟಕ್ಕೆ ಬರಮಾಡಿಕೊಂಡಿದ್ದು ವಾದ್ಯದವರನ್ನು ಥಳಿಸಿದ ಹಿನ್ನಲೆಯಲ್ಲಿ ವಾದ್ಯ ಕಲಾವಿದರು ಉತ್ಸವ ಮೂತರ್ಿಯನ್ನು ವಾಪಸ್ ಕರೆತರುವ ಸಮಯದಲ್ಲಿ ವಾದ್ಯ ನುಡಿಸುವುದಿಲ್ಲ ನಮಗೆ ಅವಮಾನವಾಗಿದೆ ಎಂದು ಪಟ್ಟುಹಿಡಿದ ಕಾರಣ ಸೋಮವಾರ ಸಂಜೆಯವರೆಗೂ  ಉತ್ಸವಮೂತರ್ಿಗಳು ಬೆಟ್ಟದ ಆಲಯದಲ್ಲಿಯೇ ಉಳಿಯಬೇಕಾಯಿತು. ಸಂಜೆ ಊರಿನ ಗಣ್ಯರ ಮನವೊಲಿಕೆಯಿಂದ ಉತ್ಸವಮೂತರ್ಿಗಳನ್ನು ಆಯಾ ಊರಿಗೆ ವಾದ್ಯಗೋಷ್ಠಿಯೊಂದಿಗೆ ಬಿಡಲಾಯಿತು. ಒಟ್ಟಿನಲ್ಲಿ ಧಾಮರ್ಿಕ ಕಾರ್ಯಕ್ರಮದಲ್ಲಿ ಕೆಟ್ಟ ರಾಜಕೀಯ ನುಸುಳಿದ ಪರಿಣಾಮ ಧಾಮರ್ಿಕತೆಯು ತನ್ನ ಅರ್ಥವನ್ನು ಕಳೆದುಕೊಂಡು ಘಟನೆ ಹಾಗೇ ಉಳಿಯಿತು.