Tuesday, May 10, 2016


ಮಕ್ಕಳ ಬೇಸಿಗೆ ಶಿಬಿರ ಆರಂಭ 
ಚಿಕ್ಕನಾಯಕನಹಳ್ಳಿ,ಮೇ.10 : ಮಕ್ಕಳಲ್ಲಿ ಬೌದ್ದಿಕ ಹಾಗೂ ಮನಸ್ಸಿನ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಪ್ರಭಾರ ಸಿ.ಡಿ.ಪಿ.ಓ ಪರಮೇಶ್ವರಪ್ಪ ಹೇಳಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಬದುಕು ಸಂಸ್ಥೆ, ಶಿಶು ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ 10 ದಿನಗಳ ಕಾಲ ನಡೆಯಲಿರುವ  ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
   5 ರಿಂದ 15 ವರ್ಷದ ವರೆಗಿನ ವಿವಿಧ ವಯೋಮಾನದ ಮಕ್ಕಳ ಮನಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಶಿಬಿರದ ರೂಪುರೇಷೆಗಳನ್ನು ತಯಾರಿಸಲಾಗಿದೆ. ಶಿಬಿರದಲ್ಲಿ ಆಸಕ್ತಿ ಮೂಡುವಂತಹ ಆಕಷರ್ಿಣಿಯ ಚಟುವಟಿಕೆಗಳು ನಡೆಯಲಿವೆ. ಯೋಗ, ಕರಕುಶಲ, ಬೊಂಬೆ ಮಾಡುವುದು, ಮುಖವಾಡ, ಗಾಯನ, ನೃತ್ಯ ಇವೆಲ್ಲವನ್ನು ಇಲ್ಲಿ ಕಲಿಸಲಾಗುವುದು. ಎಂದರು.
ಕ್ಷೇತ್ರ ಸಂಪನ್ಮೊಲನಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ, ಬಿಸಿಲಿನ ತಾಪದಿಂದ ಮಕ್ಕಳಲ್ಲಿನ ಆರೋಗ್ಯ ವ್ಯತ್ಯಯವಾಗುತ್ತಿದೆ. ಜೊತೆಗೆ ಮಕ್ಕಳು ಬೀದಿಗಳಲ್ಲಿ ಆಟವಾಡುವಾಗ ಅನಾಹುತಗಳಿಗೆ ಒಡ್ಡಿಕೊಳ್ಳುತ್ತಾರೆ. ಇಂತಹವುಗಳನ್ನು ತಪ್ಪಿಸಲೆಂದೇ ಸಕರ್ಾರ ಬೇಸಿಗೆ ಶಿಬಿರಗಳಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಪೋಷಕರು ಸಮಯಕ್ಕೆ ಸರಿಯಾಗಿ ಮಕ್ಕಳನ್ನು ಕಳುಹಿಸಿಕೊಡಿ ಎಂದರು.
ಸಂಪನ್ಮೂಲ ವ್ಯಕ್ತಿ ಬಸವರಾಜು ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ಶ್ರವಣದ ಮೂಲಕ ಆಲಿಸುವ ಮನನ ಮಾಡಿಕೊಂಡು, ವಜ್ರ ವೈಡೂರ್ಯಗಳನ್ನು ಶೇಖರಿಸಿಡುವಂತೆ ಕಲಿತ ವಿದ್ಯೆಯನ್ನು ಮನಸ್ಸಿನಲ್ಲಿ ದಾಖಲಿಸಿಕೊಳ್ಳಬೇಕು ಎಂದರು.
ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಸಿಗೆ ಶಿಬಿರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಕ್ಕಳ ಮಾನಸಿಕ ಬೆಳವಣಿಗೆಯ ವೃದ್ದಿಗೆ ಸಹಕಾರವಾಗಲಿವೆ ಎಂದರು.
ಈ ಸಂದರ್ಭದಲ್ಲಿ ಮಹದೇವಮ್ಮ, ಎಸ್.ಬಿ.ಕುಮಾರ್, ಕವಿತ, ಕುಮಾರಸ್ವಾಮಿ, ಅನುಸೂಯಮ್ಮ, ದಯಾನಂದ್, ಶಾರದಮ್ಮ ಮತ್ತಿತ್ತರರು ಹಾಜರಿದ್ದರು.
ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮ 
ಚಿಕ್ಗಕನಾಯಕನಹಳ್ಳಿ,ಮೇ.10 : ವಿಶಿಷ್ಠಾಧ್ವೈತ ತತ್ವದ ಮೂಲಕ ಭಕ್ತನಿಗಿಂತ ಭಕ್ತಿಮುಖ್ಯ ಎಂದು ಸಾರಿದವರು ರಾಮಾನುಜಾಚಾರ್ಯರಯ ಎಂದು ವೈಷ್ಣವ ಜನಾಂಗದ ಮುಖಂಡ ವೆಂಕಟೇಶ್ ತಿಳಿಸಿದರು. 
   ಪಟ್ಟಣದ ಹೊಸಬಾಗಿಲು ಸಮೀಪ ಇರುವ ರಾಮಾನುಜಾಚಾರ್ಯರ ಧ್ಯಾನಕೇಂದ್ರದಲ್ಲಿ ,ತಾಲ್ಲೂಕು ವೈಷ್ಣವ ಸಮಾಜದಿಂದ ರಾಮಾನುಜಾಚಾರ್ಯರ 999ನೇ ಜಯಂತಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಬ್ಯಾಟರಾಯಸ್ವಾಮಿ ಹಾಗೂ ರಾಮಾನುಜಾಚಾರ್ಯರ ವಿಗ್ರಹಗಳಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪೂಜಾಕಾರ್ಯಗಳು ಜರುಗಿದವು.
  ವೈಷ್ಣವ ಜನಾಂಗದ ಮುಖಂಡ ವೆಂಕಟೇಶ್ ಮಾತನಾಡಿ, ರಾಮಾನುಜಾಚಾರ್ಯರು ತಮಿಳುನಾಡಿನ ಪೆರಂಬದೂರಿನಲ್ಲಿ ಜನಿಸಿ, ಶ್ರೀವೈಷ್ಣವ ಧರ್ಮವನ್ನು ದೇಶದೆಲ್ಲಡೆ ಪಸರಿಸಿದ ಮಹಾನ್ ಪುರುಷ ಎಂದರು.
ಮುಂದಿನ  ವರ್ಷ ರಾಮಾನುಜಚಾರ್ಯರಿಗೆ  ಸಾವಿರ ವರ್ಷ ತುಂಬುತ್ತದೆ. 2017ಕ್ಕೆ  ಮೇಲುಕೋಟೆಯಲ್ಲಿ ಕೇಂದ್ರಸಕರ್ಾರ ಹಾಗೂ ರಾಜ್ಯ ಸಕರ್ಾರಗಳ ನೆರವಿನೊಂದಿಗೆ ವಿಶೇಷ ಸಮಾರಂಭವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
  ಮುಖಂಡ ದೇವರಾಜು ಮಾತನಾಡಿ, ತಾಲ್ಲೂಕಿನಲ್ಲಿರುವ ವೈಷ್ಣವ ಸಂಘದ ಕಟ್ಟಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜನಾಂಗಕ್ಕೆ ಸಮುದಾಯ ಭವನದ ಅವಶ್ಯಕತೆ ಇದೆ. ತಾಲ್ಲೂಕು ಆಡಳಿತ ಎರಡೂ ಸವಲತ್ತುಗಳನ್ನು ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೃಷ್ಣಮೂತರ್ಿ, ರಂಗಸ್ವಾಮಿ, ದೇವರಾಜು, ವೆಂಕಟೇಶ್, ಮಂಜುನಾಥ್ , ದೇವರಾಜು ಇತರರು ಹಾಜರಿದ್ದರು.

ಕಾಮರ್ಿಕರ ದಿನಾಚಾರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮೇ.10 : ಕಾಮರ್ಿಕರ ದಿನಾಚಾರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಮೇ 11ರ ಬುಧವಾರ ಮಧ್ಯಾಹ್ನ 12.30ಕ್ಕೆ ಏರ್ಪಡಿಸಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಐ-ಟೆಕ್ಸ್ ಅಪಾರೆಲ್ಸ್ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳ; ಐ-ಟೆಕ್ಸ್ ಅಪಾರೆಲ್ಸ್. ಉದ್ಘಾಟನೆ; ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ಅಧ್ಯಕ್ಷತೆ; ಐ-ಟೆಕ್ಸ್ ಅಪಾರೆಲ್ಸ್ ಮಾಲೀಕ ರವಿಶಂಕರ್. 
ಮುಖ್ಯ ಅತಿಥಿಗಳು; ಕಾಮರ್ಿಕ ನಿರೀಕ್ಷಕರಾದ ಭಾರತಿ, ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್, ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ಕಾರ್ಯದಶರ್ಿ ಕೆ.ಎಂ.ಷಡಕ್ಷರಿ ಉಪನ್ಯಾಸ;. ವಕೀಲ ದಿಲೀಪ್ ವಿಷಯ ;ಕಾಮರ್ಿಕರ ಹಿತರಕ್ಷಣೆ.