Monday, October 18, 2010

ಹಿರಿಯ ನಾಗರೀಕರಿಗೆ ಸನ್ಮಾನ ಹಾಗೂ ಪುಸ್ತಕ ಬಿಡುಗಡೆ
,ಅ.18: ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಹಿರಿಯ ನಾಗರೀಕರಿಗೆ ಸನ್ಮಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಮತ್ತು ಇನ್ನರ್ವೀಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದ್ದಾರೆಇದೇ 20ರ ಬುಧವಾರ ಸಂಜೆ 5-30ಕ್ಕೆ ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ಕುಪ್ಪೂರು ಗದ್ದಿಗೆ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಉದ್ಘಾಟನೆ ನೆರವೇರಿಸುವರು. ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಗಾಂಧಿವಾದಿ ದಿ. ಜಿ.ವಿ.ನಾರಾಯಣಮೂತರ್ಿಯವರ 'ಲೋಕನಾಯಕ ಜೆ.ಪಿ ಪುಸ್ತಕ ಬಿಡುಗಡೆ ಮತ್ತು ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕರಾದಎಸ್.ಎ.ನಭಿ(ಸಮಾಜಸೇವೆ),ಸಿ.ಕೆ.ಸೀತಾರಾಮಯ್ಯ(ಕಾನೂನು), ಸಿ.ಎಚ್.ಮರಿದೇವರು(ಶಿಕ್ಷಣ ಮತ್ತು ಸಾಹಿತ್ಯ), ಪೈಲ್ವಾನ್ ಶಿವರಾಮಯ್ಯ(ಕುಸ್ತಿಪಟು), ಶಿವಣ್ಣ(ಸಸ್ಯಸಂರಕ್ಷಣೆ), ಗುಂಡಮ್ಮ(ಗೃಹಕಾರ್ಯನಿವರ್ಾಹಕ)ರವರಿಗೆ ಸನ್ಮಾನಿಸಲಾಗುವುದು. ಗೌರವಾನ್ವಿತ ಅತಿಥಿಗಳಾಗಿ ಲೇಖಕ ನಾ.ದಯಾನಂದ, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿರುವರು ಎಂದು ಕ.ಸಾ.ಪ. ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ

ರೋಟರಿಯಿಂದ ಸಸಿ ನೆಡು-ಬೆಳಸು ಕಾರ್ಯಕ್ರಮಚಿಕ್ಕನಾಯಕನಹಲ್ಲಿ
,ಅ.18: ಸಸಿ ನೆಡು-ಬೆಳಸು ಕಾರ್ಯಕ್ರಮವನ್ನು ರೋಟರಿ ಹಾಗೂ ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ನ ಎನ್.ಎಸ್.ಎಸ್. ಘಟಕದ ವತಿಯಿಂದ ಇದೇ 20ರ ಬುಧವಾರ ಸಂಜೆ 4-45ಕ್ಕೆ ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ಕಾರ್ಯದಶರ್ಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.ಸಮಾರಂಭವನ್ನು ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ಕುಪ್ಪೂರು ಪೀಠಾದ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಭಾಗವಹಿಸಲಿದ್ದು, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ 3190 ಅಸಿಸ್ಟೆಂಟ್ ಗವರ್ನರ್ ಪಿ.ಶಾಂತಿಲಾಲ್, ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಲೇಖಕ ನಾ.ದಯಾನಂದ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ಪ್ರಾಚಾರ್ಯ ಎ.ಎನ್.ವಿಶ್ವೇಶ್ವರಯ್ಯ, ಸಿ.ಪಿ.ಐ ರವಿಪ್ರಸಾದ್, ಸಾಮಾಜಿಕ ಅರಣ್ಯ ಇಲಾಖೆ ಆರ್.ಎಫ್.ಓ. ಪಿ.ಎಚ್.ಮಾರುತಿ, ಮೈನ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ವಕೀಲ ಸಿ.ಕೆ.ಸೀತಾರಾಮಯ್ಯ, ಲೇಖಕ ಮರಿದೇವರು ಉಪಸ್ಥಿತರಿರುವರು.
ಥಿಯೋಸಫಿಕಲ್, ರೋಟರಿಯಿಂದ ಉಚಿತ ಹೃದ್ರೋಗ ತಪಾಸಣಾ ಶಿಬಿರ
ಚಿಕ್ಕನಾಯಕನಹಳ್ಳಿ,ಅ.18: ಥಿಯೋಸಫಿಕಲ್ ಸೊಸೈಟಿ ಮತ್ತು ರೋಟರಿ ಕ್ಲಬ್ ವತಿಯಿಂದ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಇದೇ 22ರ ಶುಕ್ರವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಶಿಬಿರದಲ್ಲಿ ಹಳೇ ಸಾಗರ್ ಅಪೋಲೋ ಆಸ್ಪತ್ರೆಯ ಪರಿಣಿತ ವೈದ್ಯರುಗಳು ಹೃದಯ ತಪಾಸಣಾ ಚಿಕಿತ್ಸೆ, ಮತ್ತು ಇ.ಸಿ.ಜಿ, ಮತ್ತು ಇ.ಸಿ.ಎಚ್.ಒ ಗಳ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದು, ಯಶಸ್ವಿನಿ ಕಾಡರ್ು ಫಲಾನುಭವಿಗಳಿಗೆ ಕೂಡ ಉಚಿತ ಚಿಕಿತ್ಸೆ ಸೌಲಭ್ಯಗಳನ್ನು ಮತ್ತು ಅಗತ್ಯವಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಸಂಘಟನಾ ಸಂಸ್ಥೆಗಳೇ ತಮ್ಮ ಖಚರ್ಿನಲ್ಲಿ ಆ ದಿನವೇ ಕರೆದುಕೊಂಡು ಹೋಗಿ ಔಷದೋಪಚಾರಗಳನ್ನು ಕೊಡಲಾಗುವುದು ಎಂದು ಥಿಯೋಸಫಿಕಲ್ ಸೊಸೈಟಿಯ ಕಾರ್ಯದಶರ್ಿ ಸಿದ್ದರಾಮಯ್ಯ ತಿಳಿಸಿದ್ದಾರೆ