Saturday, April 30, 2016ಪಟ್ಟಣದಲ್ಲಿ ಸೋರಿಕೆಯಾಗುವ ನೀರು ತಡೆಗಟ್ಟಲು ಪುರಸಭಾಧ್ಯಕ್ಷ ಮನವಿ
ಚಿಕ್ಕನಾಯಕನಹಳ್ಳಿ,:ಪಟ್ಟಣದಲ್ಲಿ ಪ್ರತಿನಿತ್ಯ 3ಲಕ್ಷ ಲೀಟರ್ ನೀರು ಸೋರಿಕೆಯಾಗುತ್ತಿದೆ. ಪೋಲಾಗುತ್ತಿರುವ ನೀರನ್ನು ತಡೆಗಟ್ಟಿದರೆ 3ದಿನಗಳಿಗೊಮ್ಮೆ ಎಲ್ಲಾ ವಾಡರ್್ಗಳಿಗೂ ಕುಡಿಯುವ ನೀರು ಒದಗಿಸಬಹುದು ಎಂದು ಪುರಸಭೆ ಅಧ್ಯಕ್ಷ ಸಿ.ಟಿ.ದಯಾನಂದ್ ಹೇಳಿದರು. 
ತಾಲ್ಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಿಸಿದ ಬಳಿಕ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ತಡರಾತ್ರ ಸಭೆಕರೆದು ಸಮಸ್ಯೆ ಆಲಿಸುವ ಸಂದರ್ಭದಲ್ಲಿ ಪುರಸಭೆ ಸದಸ್ಯರು ಪಟ್ಟಣದಲ್ಲಿ ತಲೆದೋರಿರುವ ಸಮಸ್ಯೆಯನ್ನು ವಿವರಿಸಿದರು.
   ಪಟ್ಟಣದಲ್ಲಿ 23ಸಾವಿರ ಜನಸಂಖ್ಯೆ ಇದೆ.ಪ್ರತಿನಿತ್ಯ ಪಟ್ಟಣಕ್ಕೆ 20ಲಕ್ಷ ಲೀಟರ್ ಅವಶ್ಯಕತೆ ಇದೆ. ಪಟ್ಟಣದಲ್ಲಿ 59 ಕೊಳವೆಬಾವಿ ಇದ್ದು, 27 ಬರಿದಾಗಿವೆ. ಹೊಸದಾಗಿ ಕೊರೆಸಲಾಗಿರುವ 9 ಕೊಳವೆಬಾವಿಗಳಿಗೆ ಮೋಟ್ರು ಅಳವಡಿಸಬೇಕಿದೆ. 23 ಕೊಳವೆಬಾವಿಗಳಲ್ಲಿ ನೀರು ಲಭ್ಯ ಇದ್ದು, 6.5ಲಕ್ಷ ನೀರು ಲಭ್ಯ ಇದೆ.ಇದರಲ್ಲಿ ಅರ್ಧದಷ್ಟು ನೀರು ಸೋರಿಕೆಯಾಗುತ್ತಿದೆ ಎಂದು ಪುರಸಭೆ ಇಂಜಿನಿಯರ್ ಮಹೇಶ್ಬಾಬು ಸಭೆಗೆ ವಿವರಣೆ ನೀಡಿದರು.
  ನೀರು ಸರಬರಾಜು ಮಾಡಲು ಅಳವಡಿಸಿರುವ ಕೊಳವೆ ಮಾರ್ಗ 30 ವರ್ಷ ಹಳೆಯದಾಗಿದ್ದು ನೀರು ಸೋರಿಕೆಯಾಗುತ್ತಿದೆ ಹಾಗೂ 171 ರೈಸಿಂಗ್ ಮೈನ್ಗಳು ಇದ್ದು ನಿರಂತರವಾಗಿ ನೀರು ಪೋಲಾಗುತ್ತಿದೆ. ನೀರಿನ ಅಪವ್ಯಯ ತಪ್ಪಿಸಲು ಹೊಸ ಕೊಳವೆ ಮಾರ್ಗ ಹಾಕಬೇಕು ಹಾಗೂ ಅಕ್ರಮ ರೈಸಿಂಗ್ ಮೈನ್ಗಳಿಗೆ ಕಡಿವಾಣ ಹಾಕಬೇಕು ಎಂದರು.
  
  ಹೇಮಾವತಿ ನಾಲೆಯಿಂದ ಪಟ್ಟಣದ ಕೆರೆಗೆ ಕುಡಿಯುವ ನೀರು ಹರಿಸಲು ಅವಶ್ಯವಿರುವ ಹೊಸ ಮೋಟ್ರು ಅಳವಡಿಸಲು ರೂ.50ಲಕ್ಷದ ಕ್ರಿಯಾ ಯೋಜನೆ ಹಾಗೂ ಹೇಮಾವತಿ ನೀರನ್ನು ಸಂಗ್ರಹಿಸಲು ಚಿಕ್ಕನಾಯಕನಹಳ್ಳಿಕೆರೆಗೆ ಸಿಮೆಂಟ್ ಬೆಡ್ಡಿಂಗ್ ಹಾಕಲು ಕ್ರಿಯಾ ಯೋಜನೆ ರೂಪಿಸಿ ಹಾಗೂ ಹೊಸದಾಗಿ ಹತ್ತು ಕೊಳವೆ ಬಾವಿಗಳನ್ನು ಕೊರೆಸಲು ಪ್ರಸ್ತಾವನೆ  ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮಾತನಾಡಿ ಪಟ್ಟಣಕ್ಕೆ ಅಗತ್ಯವಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಾ,  ಕುಡಿಯುವ ನೀರು ಸಮಸ್ಯೆಯ ಬಗ್ಗೆ,  ನೆನಗುದಿಗೆ ಬಿದ್ದಿರುವ ಯು.ಜಿ.ಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿರುವ ಬಗ್ಗೆ ಹಾಗೂ  ಹೆಚ್ಚುವರಿ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ  ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಮಾಡುವುದು ಹಾಗೂ ಕೆ.ಎಸ್.ಆರ್.ಟಿ.ಸಿ ಡಿಪೋಗೆ ಸ್ಥಳ ಮಂಜೂರು ಮಾಡಬೇಕೆಂದು ಬೇಡಿಕೆಯನ್ನು ಓದಿ ಹೇಳಿದರು.
ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜು ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿನ ನಾನಾ ಅಭಿವೃದ್ದಿ ಕಾರ್ಯಗಳಿಗಾಗಿ, ಗಣಿ ಪುನಶ್ಚೇತನ ಯೋಜನೆ ಅಡಿಯಲ್ಲಿ ರೂ.32 ಕೋಟಿ ಹಣ ಮೀಸಲಿಡಲಾಗಿದೆ ಎಂದರು.

ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಪಟ್ಟಣದಲ್ಲಿ ಡಾಂಬರು ರಸ್ತೆ ನಿಮರ್ಿಸಿರುವುದರಿಂದ ರಸ್ತೆಯ ಎರಡೂ ಬದಿಗಳಲ್ಲೂ ಪೈಪ್ಲೈನ್ ಮಾಡಲು ಹಣ ಬಿಡುಗಡೆ ಮಾಡಬೇಕು.ಪುರಸಭೆಗೆ ಕೈಲಾಸರಥ ಮುಂಜೂರು ಮಾಡಬೇಕುನೀರು ಸೋರಿಕೆ ತಡೆಗಟ್ಟಲು .ರೈಸಿಂಗ್ ಮೈನ್ಗೆ ಲಾಕ್ ಸಿಸ್ಟಮ್ ಅಳವಡಿಸಬೇಕು ಹಾಗೂ ಮೊಕದ್ದಮೆ ಹಿಂಪಡೆದು ಕೆರೆ ಅಂಗಳದಲ್ಲಿ ಸಂತೆ ಮೈದಾನ ನಿಮರ್ಿಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್,ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಎಂ.ಕೆ.ರವಿಚಂದ್ರ, ಹೆಚ್.ಬಿ.ಪ್ರಕಾಶ್, ಮಲ್ಲಿಕಾಜರ್ುನಯ್ಯ, ರೂಪಶಿವಕುಮಾರ್, ರೇಣುಕಮ್ಮ, ಪ್ರೇಮದೇವರಾಜು, ಪುಷ್ಪ.ಟಿ.ರಾಮಯ್ಯ, ಧರಣಿ.ಬಿ.ಲಕ್ಕಪ್ಪ, ಮಹಮದ್ಖಲಂದರ್, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮೂರಲ್ಲಿ ಅಷ್ಟೊಂದು ಜನ ಸಾಯ್ತಾರಾ: ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ವಿದ್ಯುತ್ ಚಿತಾಗಾರ ಮುಂಜೂರು ಮಾಡಿ ಎಂದು ಸದಸ್ಯರೊಬ್ಬರು ಕೇಳಿದ ತಕ್ಷಣ, ನಿಮ್ಮೂರಲ್ಲಿ ಅಷ್ಟೊಂದು ಜನ ಸಾಯ್ತಾರಾ ಎಂದು ಜಿಲ್ಲಾಧಿಕಾರಿ  ಮೋಹರಾಜ್ ಪ್ರಶ್ನಿಸಿದರು..ಚಿತಾಗಾರ ಬೇಕೆಂದರೆ ಪ್ರತಿದಿನ ಸಾವು ಸಂಭವಿಸಲೇಬೇಕು ಎಂದು ಧ್ವನಿ ಗೂಡಿಸಿದರು.ಸಭೆ ನಗೆಗಡಲಲ್ಲಿ ತೇಲಿತು.

ಕಾರಿಗೆ ಲಾರಿ ಡಿಕ್ಕಿ ಯುವಕರು ಸಾವು
ಚಿಕ್ಕನಾಯಕನಹಳ್ಳಿ,ಏ.30: ಈರುಳ್ಳಿ ತುಂಬಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ ಮತ್ತೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಇನ್ನು ಮೂವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ ಅಗ್ನಿಶಾಮಕ ಠಾಣೆಯ ಬಳಿ ಈ ಅಪಘಾತ ಸಂಬಂವಿಸಿದ್ದು, ಚಿಕ್ಕನಾಯಕನಹಳ್ಳಿ ಕಡೆಯಿಂದ ಹೋರಟ ಕಾರು ಹುಳಿಯಾರಿನ ಕಡೆಯಿಂದ ಬಂದ ಲಾರಿ ಮುಖಾಮುಖಿಯಾದ್ದರಿಂದ ಕಂದಿಕೆರೆಯ ಚೇತನ್(25), ಕಿರಣ್(25) ಇಬ್ಬರು ಸ್ಥಳದಲ್ಲೇ ಸಾವನ್ನಪಿದರೆ, ಸಿ.ಆರ್.ಯೋಗಿಶ್  ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ, ಉಳಿದ ಗಾಯಾಳುಗಳಾದ  ಕೆ.ಎನ್. ಯೋಗೀಶ್, ನಾಗರಾಜ್, ಹರೀಶ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಸ್ಥಳಕ್ಕೆ ಸಿ.ಪಿ.ಐ.ಮಾರಪ್ಪ, ಪಿ.ಎಸೈ.ವಿಜಯಕುಮಾರ್ ಭೇಟಿ ನೀಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 ಈಜಲು ಹೋದ ಯುವಕ ಸಾವು ಚಿಕ್ಕನಾಯಕನಹಳ್ಳಿ,ಏ.30: ಕುಡಿದ ಅಮಲಿನಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ತಾಲೂಕಿನ ಸಿಂಗದಹಳ್ಳಿ ದೊಡ್ಡ ಕೆರೆಯಲ್ಲಿ ನಡೆದಿದೆ.
ಸಿಂಗದಹಳ್ಳಿ  ಗ್ರಾಮದ ವಾಸಿ ಮೀನಿನ ನರಸಿಂಹಮೂತರ್ಿಯ ಅಳಿಯ ಹತ್ಯಾಳ್ನ ಸ್ವಾಮಿ(35) ತಮ್ಮ ಮಾವನ ಮನೆಗೆ ಬಂದ ಸಂದರ್ಭದಲ್ಲಿ ಮಾವನ ಮನೆಯವರು ಮದುವೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ನಡೆದಿದೆ.   ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಧ್ಯ ಪಾನ ಸೇವಿಸಿ ಈಜಲು ಹೋಗಿದ್ದಾನೆ. ಕೆರೆಯ ಸಮೀಪ ಯಾರೂ ಇಲ್ಲದ ಸಂದರ್ಭದಲ್ಲಿ  ಕೆರೆಯ ತೂಬಿನ ಮೇಲಿದ್ದ ಜಿಗಿದಿದ್ದಾನೆ, ಈ ಸಂದರ್ಭದಲ್ಲಿ ಮೃತ ಸ್ವಾಮಿಯ ಆಯಕಟ್ಟಿನ ಜಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದು, ಕೈಕಾಲ ಆಡಿಸಲು ಸಾಧ್ಯವಾಗದೆ ನೀರಿನೊಳಗೆ ಊದುಕೊಂಡಿದ್ದಾನೆ ಎಂದು ಕೆರೆಯ ಸಮೀಪದ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಜಯಣ್ಣ ಪತ್ರಿಕೆ ತಿಳಿಸಿದರು. 
 ಕೆರೆಯ ದಡದಲ್ಲಿ ಬಟ್ಟೆ ಬಿಚ್ಚಿಟ್ಟದ್ದನ್ನು ಮನಗಂಡಿದ್ದರು, ಆದರೆ ಕೆರೆಯೊಳಗೆ  ಯಾರೂ ಈಜಾಡುತ್ತಿರುವುದು ಕಾಣದೆ ಇದ್ದಾಗ ಗಾಬರಿಗೊಂಡ ಸಿಂಗದಹಳ್ಳಿ ಗ್ರಾಮಸ್ಥರು ಕೆರೆಯ ನೀರಿಗೆ ಇಳಿದು ಹುಡುಕಾಡಿದ್ದಾರೆ, ಹಲವು ಘಂಟೆಗಳವರೆಗೆ ಹುಡುಕಾಟದ  ನಂತರ ಮೃತ ದೇಹ ನೀರಿನಲ್ಲಿರುವುದು ಪತ್ತೆಯಾಗಿದೆ. ಪೊಲೀಸರ ಸ್ಥಳಕ್ಕೆ ಆಗಮಿಸಿದ ನಂತರ ಮೃತ ದೇಹವನ್ನು ಹೊರತೆಗೆಯಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Friday, April 29, 2016


ಬರಪೀಡಿತ  ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಬೇಟಿ, ರೈತರ ಸಭೆ 
ಚಿಕ್ಕನಾಯಕನಹಳ್ಳಿ,:  ಹೇಮಾವತಿ ನಾಲೆಯಿಂದ ಕೊಂಡ್ಲಿಕೆರೆ ಹಾಗೂ ನಡುವನಹಳ್ಳಿ, ಜೆ.ಸಿ ಪುರದಿಂದ  ತೀರ್ಥಪುರ ಭಾಗಗಳಿಗೆ ನೀರು ಹರಿಸುವ ಕಾರ್ಯಕ್ಕೆ ಯೋಜನೆಯನ್ನು ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ತಿಳಿಸಿದರು.
 ತಾಲ್ಲೂಕಿನ ತೀರ್ಥರಾಮಲಿಂಗೇಶ್ವರ ವಜ್ರದಲ್ಲಿ ಶುಕ್ರವಾರ ತಾಲ್ಲೂಕು ಬರಪೀಡಿತ ಪ್ರದೇಶಕ್ಕೆ ಬರ ಪರಿಹಾರ ವೀಕ್ಷಣೆಯ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ರೂ.8 ಕೋಟಿವರೆಗೂ ಹಣ ಬಿಡುಗಡೆ ಮಾಡಲು ಜಿಲ್ಲಾಡಳಿತ ಸಿದ್ದವಿದೆ ಎಂದರು.
ಮಳೆಗಾಲದಲ್ಲಿ ಹರಿದು ಪೋಲಾಗುವ ನೀರನ್ನು ಇಂಗಿಸಲು ಸೇತುವೆ ಸಹಿತ ಬ್ಯಾರೇಜ್, ಚೆಕ್ಡ್ಯಾಂ ನಿಮರ್ಿಸಲು ಕ್ರಮ ಕೈಗೊಳ್ಳಲಾಗುವುದು. ಬರಗಾಲದ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ನೀರು ಹಾಗೂ ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. 
ಶಾಸಕ ಸಿ.ಬಿ ಸುರೇಶ್ಬಾಬು ಮಾತನಾಡಿ, ದೊಡ್ಡರಾಂಪುರದ ಮೂಲಕ ತೀರ್ಥರಾಮೇಶ್ವರ ವಜ್ರಕ್ಕೆ ಬರಲು ಬ್ರಿಡ್ಬ್ ಕಂ ಬ್ಯಾರೇಜ್  ನಿಮರ್ಿಸಲು ರೂ.1.5 ಕೋಟಿ ವೆಚ್ಚದಲ್ಲಿ ನಕ್ಷೆ ತಯಾರಾಗಿದೆ. ಕಾಮಗಾರಿ ಮುಗಿದರೆ  ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ. ಪಟ್ಟಣ ಹೊರತು ಪಡಿಸಿ ತಾಲ್ಲೂಕಿನ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಕೊರತೆ ಇಲ್ಲ. ಪಟ್ಟಣದಲ್ಲಿ ಮಾತ್ರ ನೀರಿನ ಬರವಿದ್ದು ಎಂಟು-ಹತ್ತು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂದರು.
ಗಣಿಗಾರಿಕೆಯಿಂದ ಬಂದ ಹಣದಲ್ಲಿ 81 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ತೀಮರ್ಾನಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರಿಕರು ಒಟ್ಟಿಗೆ ಸೇರಿ ಹಳ್ಳಿಗಳ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ. ಎಂದರು.
ತುಮಕೂರು ಅಭಿವೃದ್ದಿ ರೆವಲ್ಯೂಷನ್ ಪೋರಂ ಕಾರ್ಯದಶರ್ಿ ಕುಂದರನಹಳ್ಳಿ ರಮೇಶ್ ಮಾತನಾಡಿ, ಮಂಗಳೂರಿನ ಪಿಣಕುಲ ಪ್ರವಾಸಿ ತಾಣದ ಮಾದರಿಯಲ್ಲಿ ತೀರ್ಥರಾಮೇಶ್ವರ ವಜ್ರವನ್ನು ಅಭಿವೃದ್ದಿ ಪಡಿಸಬೇಕಿದೆ ಎಂದರು.
 ಸಭೆಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ತಹಶೀಲ್ದಾರ್ ಆರ್.ಗಂಗೇಶ್, ತೀರ್ಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಭೂಷಣ, ರೈತರಾದ ರಾಮಕೃಷ್ಣಯ್ಯ, ಲಿಂಗರಾಜು, ಚೇತನ್, ರಾಜಣ್ಣ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಇಟಿ ತರಬೇತಿ ಶಿಬಿರಕ್ಕೆ ಜಿಲ್ಲಾಧಿಕಾರಿ ಭೇಟಿ
ಚಿಕ್ಕನಾಯಕನಹಳ್ಳಿ,ಏ.29 : ಸ್ಮಧರ್ಾತ್ಮಕ ಪರೀಕ್ಷೆಗಳಾದ ಐ.ಎ.ಎಸ್, ಐ.ಎ.ಎಮ್, ಕೆ.ಎ.ಎಸ್, ಕೆ.ಪಿ.ಎಸ್.ಸಿ, ಸಿಇಟಿ ಈ ರೀತಿಯ ಯಾವುದೇ ಪರೀಕ್ಷೆಗಳು ದಿನಕಳೆದಂತೆ ಬದಲಾಗುತ್ತಾ ಹೋಗುತ್ತಿದ್ದು ಈ ಬದಲಾವಣೆಗೆ ತಕ್ಕಂತೆ ವಿದ್ಯಾಥರ್ಿಗಳು ತರಬೇತಿ ಪಡೆಯುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ತಿಳಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಉಚಿತ ಸಿಇಟಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶದ ಸೌಲಭ್ಯ ಪೆಡೆದುಕೊಳ್ಳಲು ಮುಂದಾಗುತ್ತಿದ್ದಾರೆ ಇದಕ್ಕೆ ನಾಗರೀಕರು ಪ್ರಸಕ್ತ ದಿನಮಾನಗಳಲ್ಲಿ ಸಿಗುವ ಸೌಕರ್ಯಗಳಿಗೆ ಶಿಕ್ಷಣದ ಅಗತ್ಯತೆ ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಸಿಇಟಿ ತರಬೇತಿ ಪಡೆಯುತ್ತಿರುವ ವಿದ್ಯಾಥರ್ಿಗಳು ಅಂದುಕೊಂಡಷ್ಟು ಅಂಕಗಳನ್ನು ಪಡೆಯದೇ ಇದ್ದರೆ ಅದರ ಬಗ್ಗೆ ಯೋಚಿಸದೆ, ಹೆಚ್ಚಿನ ತರಬೇತಿ ಮತ್ತೊಂದು ಪರೀಕ್ಷೆಗೆ ಅನುಕೂಲವಾತ್ತದೆ ಎಂದು ತಿಳಿದುಕೊಳ್ಳಬೇಕು, ತಮ್ಮಲ್ಲಿರುವ  ಆತ್ಮವಿಶ್ವಾಸವನ್ನು ವಿದ್ಯಾಥರ್ಿಗಳು ಎಂದಿಗೂ ಕಳೆದುಕೊಳ್ಳಬಾರದು, ಈ ವರ್ಷ ಪಡೆಯುತ್ತಿರುವ ತರಬೇತಿ ಮತ್ತೊಂದು ಸ್ಮಧರ್ಾತ್ಮಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದ ಅವರು ಹಣವಿದ್ದರೆ ವಿದ್ಯೆ ದೊರೆಯುವುದಿಲ್ಲ, ವಿದ್ಯೆ ಪಡೆಯಲು ಶ್ರಮ, ಸಾಧನೆ ಮಾಡುವ ಗುರಿ ಹೊಂದಿರಬೇಕು ಆಗಲೇ ವಿದ್ಯಾಥರ್ಿಗಳು ತಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಪಟ್ಟಣದಲ್ಲಿ ಆರಂಭಿಸಿರುವ ಉಚಿತ ಸಿಇಟಿ ತರಬೇತಿ ಶಿಬಿರವನ್ನು ಪ್ರತಿ ವರ್ಷ ನಡೆಸಲಾಗುವುದು, ಈ ತರಬೇತಿ ಶಿಬಿರ ಪ್ರಥಮ ವರ್ಷವಾಗಿರುವುದರಿಂದ ವಿದ್ಯಾಥರ್ಿಗಳಿಗೆ ಕೆಲವು ತೊಂದರೆಗಳಾಗಿದೆ ಅದನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಬರುವ ವಿದ್ಯಾಥರ್ಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಹಾಗೂ ಉಚಿತ ಸಿಇಟಿ ತರಬೇತಿ ಪಡೆಯುತ್ತಿರುವ 3 ಸಾವಿರ ರ್ಯಾಂಕಿಂಗ್ ಒಳಗೆ ಬರುವ ಎಲ್ಲಾ ವಿದ್ಯಾಥರ್ಿಗಳಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾಥರ್ಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಕೆಐಎಡಿಬಿ ಜಂಟಿ ನಿದರ್ೇಶಕ ಸಿ.ಟಿ.ಮುದ್ದುಕುಮಾರ್, ಬೆಂಗಳೂರು ಆಂತರಿಕ ಭದ್ರತೆ ಡಿ.ವೈ.ಎಸ್.ಪಿ ಸಿ.ಆರ್.ರವೀಶ್ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ ಐಟಂ.
ವೈದ್ಯನಾಗುವ ಆಸೆ ಇತ್ತು : ವೈದ್ಯನಾಗಿ ನಂತರದಲ್ಲಿ ಐಎಎಸ್ ಬರೆಯಬೇಕೆಂಬ ಎರಡು ಗುರಿ ಇತ್ತು ಆದರೆ, ನನಗೆ ವೈದ್ಯನಾಗುವ ಅವಕಾಶವೇ ಸಿಗಲಿಲ್ಲ,  ನಂತರ  ಐಎಎಸ್ ಪರೀಕ್ಷೆ ಬರೆದೆ, ನಾಲ್ಕನೇ  ಬಾರಿಗೆ ನನಗೆ ಐ.ಎ.ಎಸ್.ಗೆ ಅವಕಾಶ ಲಭಿಸಿತು, ನಾನು ಒಬ್ಬ ನಿಮ್ಮಂತೆ ತಾಲೂಕು ಪ್ರದೇಶದಿಂದಲೇ ಬಂದವನು, ಆದರೆ ನಮ್ಮ ಕಡೆ ಅನುಕೂಲಸ್ಥಿತಿ ಇದ್ದರೂ, ಐ.ಎ.ಎಸ್. ಪರೀಕ್ಷೆ ಬರೆಯುವ ಜೊತೆಯಲ್ಲಿ  ಕೆಲ ದಿನಗಳ ಕಾಲ ಐಎಎಸ್ ಪರೀಕ್ಷೆ ಬರೆಯುವವರಿತೆ ತರಬೇತಿ ನೀಡುವ ತರಬೇತುದಾರನಾಗಿದ್ದೆ ನಂತರ ಐಎಎಸ್ ಪರೀಕ್ಷೆ ತೇರ್ಗಡೆಯಾಗಿ ಜಿಲ್ಲಾಧಿಕಾರಿಯಾದೆ ಎಂದು ಡಿ.ಸಿ.ಮೋಹನ್ ರಾಜ್ ತಮ್ಮ ಮನದಾಳದ ಮಾತುಗಳನ್ನು ವಿದ್ಯಾಥರ್ಿಗಳ ಮುಂದಿಟ್ಟರು.

ಸಾಸಲು ಬನಶಂಕರಿ ದೇವಿಯ ಜಾತ್ರಾಮಹೋತ್ಸವ 
ಚಿಕ್ಕನಾಯಕನಹಳ್ಳಿ,ಏ.29:  ಬಿರು ಬಿಸಿಲಿನಂಥ  ಪ್ರಕೃತಿ ವಿಕೋಪ ಎದುರಾಗಿದೆ.  ಮಳೆ ಇಲ್ಲದೆ ಜನ ಜಾನುವಾರುಗಳು ನೀರಿನಹಾಹಾಕಾರ ಎದುರಿಸುತ್ತಿವೆ. ಇದು ಮನುಷ್ಯ ದೈವಕ್ಕೆ ಸಮ ಎಂದುಕೊಂಡಿದ್ದರ ಫಲ ಎಂದು  ಕೆರೆಗೋಡಿ ರಂಗಾಪುರ ಮಠದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದ ಶ್ರೀಬನಶಂಕರಿದೇವಿ ನೂತನ ದೇವಾಲಯದ ಪ್ರಾರಂಭೋತ್ಸವ ವಾಷರ್ಿಕ ಪೂಜಾ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಡೆದ ಧಾಮರ್ಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಬರ ಸಮೀಕ್ಷೆ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಬಂದು ಹೋಗುತ್ತಾರೆ. ದೇವರ ಕರುಣೆ ಇಲ್ಲದೆ ಇಂಥ ಸಮಸ್ಯೆಗಳಿಗೆ ಪರಿಹಾರ ದೊರಕದು ಎಂದರು.
   ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀಡಾ.ಅಭಿನವ ಮಲ್ಲಿಕಾಜರ್ುನ ಮಹಾಸ್ವಾಮೀಜಿ, ಮಾತನಾಡಿ, ನೀರು,ಗಾಳಿ ಮಣ್ಣು ಮುಂತಾದ ಪಕೃತಿ ಅಂಶಗಳಲ್ಲಿ ಭಗವಂತನನ್ನು ಕಾಣುವಂತಹ ಸಂಸ್ಕೃತಿ ನಮ್ಮದು. ಸಂಪತ್ತಿಗೆ , ಹಣಕ್ಕೆ ಭಗವಂತನ ಒಲಿಯುವುದಿಲ್ಲ ಎಂದರು. 1931ರಲ್ಲಿ ಈ ರೀತಿಯ ಬೀಸಿಲು ಇತ್ತು,  ಇದು ಗುಲಬರ್ಗ, ರಾಯಚೂರುಗಳ ಕಡೆಗಳಲ್ಲಿ ಇರುವಂತಹ  ತಾಪಮಾನ ನಮ್ಮಲ್ಲೂ ಸೃಷ್ಠಿಯಾಗಿದೆ  ಎಂದರು.
     ಗೋಡೆಕೆರೆಯ ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಬಿ.ಲಕ್ಕಪ್ಪ, ತಾ.ಪಂ.ಸದಸ್ಯೆ ಜಯಮ್ಮ, ಪಟೇಲ್ ಎಸ್ ಬಸವರಾಜು, ಆಡಿಟರ್ ಚಂದ್ರಶೇಖರ್, ಎಸ್.ಟಿ.ರವಿಕುಮಾರ್, ಸಾ.ಚಿ.ನಾಗೇಶ್, ವೆಂಕಟೇಶ, ನಟರಾಜ್, ಉಪನ್ಯಾಸಕ ದಿನೇಶ್, ಸಿದ್ದಲಿಂಗಮೂತರ್ಿ, ಉಮೇಶ್, ಸುರೇಶ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Thursday, April 21, 2016


ತೋಟಕ್ಕೆ ಆಕಸ್ಮಿಕ ಬೆಂಕಿ
ಚಿಕ್ಕನಾಯಕನಹಳ್ಳಿ,ಏ.21 : ಪಟ್ಟಣದ ಹೊರವಲಯದ ಕೋಡಗಲ್ ರಸ್ತೆಯ ಎರಡು ತೋಟಗಳಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದರಿಂದ ಮಾವಿನ ತೋಟ ಹಾಗೂ ತೆಂಗಿನ ತೋಟದ ಮರಗಳು ಸಂಪೂರ್ಣ ಬೆಂದುಹೋಗಿದೆ.
ಕೋಡುಗಲ್ ರಸ್ತೆಯ ಮೇರುನಾಥ್ ಎನ್ನುವವರ ಮಾವಿನ ತೋಟದಲ್ಲಿನ 40 ಮಾವಿನ ಗಿಡ, 6 ಸಪೋಟದ ಗಿಡ ಬೆಂದು ಹೋಗಿವೆ, ತುಮಕೂರಿನ ಶಿವಣ್ಣ ಎನ್ನುವವರ ತೆಂಗಿನ ತೋಟಕ್ಕೂ ಬೆಂಕಿ ಹರಡಿ 10ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂದು ಹೋಗಿವೆ.
ಸಣ್ಣದಾಗಿ ಹತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ಕಾಡ್ಗಿಚ್ಚಿನಂತೆ ಹರಡಿ ಎರಡು ತೋಟಗಳ ಒಣ ಗರಿಗಳಿಗೆ ಹತ್ತಿಕೊಂಡು ಬೆಂದವು, ಕೂಡಲೇ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರಿಂದ ಅಗ್ನಿಶಾಮಕದವರು ಆಗಮಿಸಿ ಬೆಂಕಿ ನಂದಿಸಿದರು. ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರಿಂದ ನೂರಾರು ತೆಂಗಿನ ಮರಗಳು ಬೆಂಕಿಯಿಂದ  ಉಳಿಯಿತು.


ಸಂಘ ಅಭಿವೃದ್ದಿಗೆ ಶ್ರಮಿಸಿ : ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ, : ಮಾಳಿಗೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ದಿಯಾಗಲು ಸಂಘ ಚಿನ್ನಾಭರಣ ಸಾಲ, ಅಡಮಾನಸಾಲ, ವಾಹನ ಸಾಲ ಹಾಗೂ ಪಿಗ್ಮಿ ಸಂಗ್ರಹಧಾರಣೆ ಮಾಡಿದರೆ ಆಥರ್ಿಕವಾಗಿ ಅಭಿವೃದ್ದಿಯಾಗಲಿದೆ ಎಂದು ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿರಾಜ್ಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ಮಾಳಿಗೆಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಬೆಳೆ ಸಾಲದ ಸಾಲ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದ ಅವರು, ಸಂಘ ಪಡಿತರ ಧಾನ್ಯ, ಸೀಮೆಎಣ್ಣೆ ಮಾತ್ರ ವಿತರಿಸದರೆ ಅಭಿವೃದ್ದಿಯಾಗದು ಅದರ ಜೊತೆಗೆ ಸಾರ್ವಜನಿಕರು ಸದಾ ವ್ಯವಹಾರ ನಡೆಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಆಗಲೇ ಬ್ಯಾಂಕ್ನಲ್ಲಿ ವ್ಯವಹಾರ ಉತ್ತಮವಾಗಿ ನಡೆದು ಸಂಘವೂ ಅಭಿವೃದ್ದಿಯಾಗುತ್ತದೆ ಹಾಗೂ ಹೆಚ್ಚಿನ ಸಾಲಸೌಲಭ್ಯವನ್ನೂ ವಿತರಿಸಬಹುದು ಎಂದರಲ್ಲದೆ ಸಂಘದಲ್ಲಿ ಅಡಮಾನ ಹಾಗೂ ಚಿನ್ನಾಭರಣ ಸಾಲದ ಸೌಲಭ್ಯ ಮಾಡಿದರೆ ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ ಉಚಿತವಾಗಿ ತಿಜೋರಿ ಪೆಟ್ಟಿಗೆ (ಸೇಪ್ಲಾಕರ್)ನ್ನು ನೀಡುತ್ತೇವೆ ಹಾಗೂ ಸಂಘದ ಬೆಳವಣಿಗೆಗೆ ನಾವೂ ಪ್ರಯತ್ನ ಪಡುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದು ರೈತರ ಒಳಿತಿಗಾಗಿ ಅನೇಕ ರೈತಪರ ಯೋಜನೆಗಳನ್ನು ಜಾರಿಗೊಳಿಸಿದೆ, ಸಾಲ ಮಾಡಿ ಸಾವನ್ನಪ್ಪಿದ ರೈತರಿಗೆ ಕುಟುಂಬಗಳಿಗೆ ಹೊರೆಯಾಗಬಾರದೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜಣ್ಣನವರು ಸಾಲಮನ್ನಾ ಯೋಜನೆಯನ್ನೂ ಜಾರಿಗೆ ತಂದು ರೈತ ಪರ ಬ್ಯಾಂಕ್ ಆಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಳಿಗೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಮರುಳಸಿದ್ದಪ್ಪ, ಉಪಾಧ್ಯಕ್ಷ ನಾಗರಾಜನಾಯ್ಕ, ನಿದರ್ೇಶಕರುಗಳಾದ ಗುರುಮೂತರ್ಿ, ಶಿವಣ್ಣ, ಕುಮಾರ್, ಫಾಲಾಕ್ಷಮೂತರ್ಿ, ಮಹದೇವಮ್ಮ, ಕಮಲಮ್ಮ, ಷಡಕ್ಷರಿ, ವಿಶ್ವಣ್ಣ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ ಹೋಂಗಾಡ್ಸರ್್ನ ಪ್ಲಟೂನ್ ಕಮಾಂಡರ್ ಮಂಜುನಾಥರಾಜ್ ಅರಸ್ರವರಿಗೆ ಬೆಂಗಳೂರಿನ ಜಯನಗರ ಅಗ್ನಿಶಾಮಕ ತರಬೇತಿ ಕಛೇರಿಯ ಆವರಣದಲ್ಲಿ ನಡೆದ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭದಲ್ಲಿ  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಳ್ಳಿ ಪದಕ ನೀಡಿ ಗೌರವಿಸಿದರು.

ಚಿಕ್ಕನಾಯಕನಹಳ್ಳಿ ಪಟ್ಟಣದ ಉಡೇವು ಬೀದಿಯಲ್ಲಿ ತಿಂಗಳಮಾಮನ ಆಚರಣೆ ಹಿನ್ನೇಲೆಯಲ್ಲಿ ಸಾರ್ವಜನಿಕರಿಗಾಗಿ ರಂಗೋಲಿ ಸ್ಪದರ್ೇಯನ್ನು ಏರ್ಪಡಿಸಲಾಗಿತ್ತು ರಂಗೋಲಿ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ಮಹಿಳೆಯರು.Wednesday, April 20, 2016ಡಿಸಿಸಿ ಬ್ಯಾಂಕ್ನಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೂ ನೆರವು : ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ, : ಹಲವು ದಶಕಗಳಿಂದಲೂ ತಾಲ್ಲೂಕಿಗೆ ನೀರಾವರಿ, ರೈಲ್ವೆ ಯೋಜನೆ ಸೌಕರ್ಯಗಳು ದೊರಕದೆ ತಾಲ್ಲೂಕು ಹಿಂದುಳಿಯುತ್ತಲೇ ಇದೆ, ಬರಪೀಡಿತ ಪ್ರದೇಶವಾದ್ದರಿಂದ ತಾಲ್ಲೂಕಿನ ರೈತರಿಗೆ ಸರಿಯಾದ ಫಸಲೂ ದೊರಯುತ್ತಿಲ್ಲ,  ಇಂತಹ ಸಂದಿಗ್ದ ಸ್ಥಿತಿಯಲ್ಲಿ  ಜಿಲ್ಲಾ ಡಿಸಿಸಿ ಬ್ಯಾಂಕ್ ರೈತರಿಗೆ, ಸ್ತ್ರೀಶಕ್ತಿ ಸಂಘಗಳಿಗೆ, ವ್ಯಾಪಾರಿಗಳಿಗೆ, ಕಾಮರ್ಿಕರಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ  ನೆರವಾಗಲು ಸಾಲ ಸೌಲಭ್ಯ ನೀಡಿ ಆಥರ್ಿಕವಾಗಿ ಸದೃಢರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಕಿಸಾನ್ ಕ್ರೆಡಿಟ್ ಸಾಲ  ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನ ಕಳೆದಂತೆ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ, ದೇಶದಲ್ಲಿ ಶೇ.80ರಷ್ಟಿದ್ದ ರೈತರು ಬರಗಾಲ ಮತ್ತಿತರರ ಕಾರಣಗಳಿಂದ ಹಲವು ವರ್ಷಗಳೀಂದಿಚೆಗೆ ತೀರಾ ಕಡಿಮೆಯಾಗಿದೆ, ತಾಲ್ಲೂಕಿನ ರೈತರು ಮಳೆ ಇಲ್ಲದೇ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ ಇಂತಹ ಕಷ್ಟದ ಸ್ಥಿತಿ ಎದುರಾಗಿರುವುದರಿಂದ ಬ್ಯಾಂಕ್ ಆಥರ್ಿಕ ಸದೃಢತೆಗಾಗಿ ಹಂತ-ಹಂತವಾಗಿ ಸಾಲ ಸೌಲಭ್ಯ ವಿತರಣೆ ಮಾಡುತ್ತಿದೆ ಎಂದರು.
ಇದುವರೆಗೂ ಹೊಸ ಸದಸ್ಯರಿಗೆ ಈಗ ಸಾಲ ಸೌಲಭ್ಯ ವಿತರಿಸುತ್ತಿದ್ದೇವೆ, ಸಾಲಕ್ಕಾಗಿ ಅಜರ್ಿ ಸಲ್ಲಿಸಿದ್ದ ಎಲ್ಲಾ ರೈತರಿಗೂ ಸಾಲ ವಿತರಿಸುತ್ತಿದ್ದು,  ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲವನ್ನು ಎಕ್ಟೇರ್ವಾರು, ಬೆಳೆವಾರು ವಿತರಿಸುವ ಯೋಚನೆ ಇದೆ ಎಂದರು.   ಕಸಬಾ ಸೊಸೈಟಿ ವ್ಯಾಪ್ತಿಯಲ್ಲಿನ ಷೇರುದಾರರು, ಸಾಲ ಸೌಲಭ್ಯ ಪಡೆಯುತ್ತಾರೆ ಆದರೆ ಅವರಲ್ಲಿರುವ ಹಣವನ್ನು ಠೇವಣಿ ಇಡಲು  ವಾಣಿಜ್ಯ  ಬ್ಯಾಂಕ್ಗಳಿಗೆ ಹೋಗುತ್ತಾರೆ ಎಂದರಲ್ಲದೆ,  ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನೀಡುವ ಬಡ್ಡಿಗಿಂತ  ನಮ್ಮಲ್ಲಿ ಠೇವಣಿಯ ಮೇಲೆ ಹೆಚ್ಚಿನ ಬಡ್ಡಿ ನೀಡುತ್ತೇವೆ ಎಂದರು.  ನಮ್ಮ  ಸೊಸೈಟಿ, ಡಿ.ಸಿ.ಸಿ. ಬ್ಯಾಂಕ್ಗಳಲ್ಲಿ ಡೆಪಾಸಿಟ್ ಹಣ ಉಳಿತಾಯ ಮಾಡಿ ಇದರಿಂದ  ಬರುವಂತಹ ಹಣ ರೈತರಿಗೆ ಸೇರುತ್ತದೆ ಎಂದರಲ್ಲದೆ, ಬ್ಯಾಂಕು ಗಳಿಸಿದ ಲಾಭದಲ್ಲಿ ಸಾವನ್ನಪ್ಪಿದ ರೈತರು ನಮ್ಮ ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಮನ್ನಾ ಮಾಡಿದ್ದೇವೆ, ಈ ಯೋಜನೆ ದೇಶದಲ್ಲೇ ಮೊದಲು ನಮ್ಮ ಡಿ.ಸಿ.ಸಿ.ಬ್ಯಾಂಕ್ ಮಾಡಿದೆ ಎಂದರು.
ಕಸಬಾ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೊಸ ಸಾಲವೆಂದು ಈ ವರ್ಷ 40ಲಕ್ಷವನ್ನು ಡಿಸಿಸಿ ಬ್ಯಾಂಕ್ ವತಿಯಿಂದ ನೀಡಿದ್ದೇವೆ, ಹೆಚ್ಚಿನ ಆಥರ್ಿಕ ಸಂಪನ್ಮೂಲವನ್ನು ಪ್ರಾಥಮಿಕ ಸಂಘಗಳು ಕೃಡಿಕರಿಸಿಕೊಳ್ಳುವಂತೆ ಹಾಗೂ ಈ ಸೊಸೈಟಿ ಹಲವು ಹಳ್ಳಿಗಳು, ಪಟ್ಟಣ  ಒಳಗೊಂಡಿರುವುದರಿಂದ ಹೆಚ್ಚಿನ ಸಾಲ ವಿತರಿಸುವಂತೆ ಮನವಿ ಬಂದಿದ್ದು ಮುಂದಿನ ದಿನಗಳಲ್ಲಿ ಎಕ್ಟೇರ್ವಾರು, ಬೆಳೆವಾರು ಹೆಚ್ಚಿನ ರೀತಿಯ ಸಾಲ ವಿತರಿಸುವ ಯೋಚನೆ ಇದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುರುಮೂತರ್ಿ ಮಾತನಾಡಿ, ಸಾಲ ಕೊಡಿಸುವ ವ್ಯವಸ್ಥೆಯನ್ನು ನಮ್ಮ ಬ್ಯಾಂಕ್ನಲ್ಲಿ ಆರು ವರ್ಷಗಳಿಂದಲೂ ನೀಡುತ್ತಾ ಬಂದಿದ್ದೇವೆ ಈಗಾಗಲೇ ಬ್ಯಾಂಕ್ನಿಂದಲೇ 520ಜನರಿಗೆ ಸಾಲ ವಿತರಿಸಿದ್ದೇವೆ ಹಾಗೂ ಸಣ್ಣ ಹಿಡುವಳಿದಾರರಿಗೆ ಹಾಗೂ ದೊಡ್ಡ ಹಿಡುವಳಿದಾರರಿಗೆ ಅವರ ಜಮೀನುಗಳನ್ನು ಆಧಾರಿಸಿ  ಹೆಚ್ಚಿನ ಸಾಲದ ನೀಡುವಂತೆ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿದರ್ೇಶಕ ಎಂ.ಬಿ.ದಿನೇಶ್ ಮಾತನಾಡಿ,  ರೈತರಿಗೆ ಸಾಲವನ್ನು  ಹೆಚ್ಚಿನ ಸಾಲ ವಿತರಣೆ ಮಾಡಲು ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ನಿದರ್ೇಶಕರು ಸಹಕರಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಮಾತನಾಡಿ, ಇದುವರೆಗೆ ಸಾಲ ಪಡೆಯದ ಹೊಸ ಸದಸ್ಯರಿಗೆ ಸಾಲ ವಿತರಣೆ ಮಾಡುವ ಉದ್ದೇಶದಿಂದ ಬ್ಯಾಂಕ್ನಿಂದ ಸಾಲ ವಿತರಿಸಲಾಗುತ್ತಿದ್ದು ಇಂದು 119ಜನರಿಗೆ 36ಲಕ್ಷ ರೂಗಳಷ್ಟು ಸಾಲವನ್ನು  ವಿತರಿಸಲಾಗುತ್ತಿದೆ ಎಂದರಲ್ಲದೆ, ಸೊಸೈಟಿ ಈಗಾಗಲೇ ಸ್ವಂತ ಹಣದಿಂದ 875ಜನರಿಗೆ 6.5ಕೋಟಿಯಷ್ಟು ಹಣ ಸಾಲ ವಿತರಿಸಿದ್ದು ಸಂಸ್ಥೆ ಉತ್ತಮವಾಗಿ ನಡೆಯುತ್ತಿದೆ ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ಯಕ್ಷೆ ನಾಗಮಣಿ, ನಿದರ್ೇಶಕರುಗಳಾದ ಶಿವಣ್ಣ, ಪ್ರಸನ್ನಕುಮಾರ್, ರವೀಶ್, ವಾಣಿ, ಬ್ಯಾಂಕ್ನ ಸಿಇಓ ಜಿ.ಎಸ್.ಮಧು ಉಪಸ್ಥಿತರಿದ್ದರು.
ಪುರಸಭೆ  ಸದಸ್ಯರಿಂದ ಸಿಬ್ಬಂದಿಗೆ ಪ್ರಶ್ನೆಗಳ ಸುರಿಮಳೆ : ಮೌನಕ್ಕೆ ಶರಣಾದ ಅಧಿಕಾರಿಗಳು
ಚಿಕ್ಕನಾಯಕನಹಳ್ಳಿ,ಏ.18 : ಪುರಸಭೆಯ ಖಚರ್ು ವೆಚ್ಚದ ಬಗ್ಗೆ ಸದಸ್ಯರುಗಳ ಪ್ರಶ್ನೆಗೆ ಸಿಬ್ಬಂದಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದು, ಪಟ್ಟಣದಲ್ಲಿರುವ ಅಂಗಡಿಗಳಲ್ಲಿ  ವಸ್ತುವಿನ ಮೇಲೆ ಮುದ್ರಿಸಿರುವ  ದರಕ್ಕಿಂತ ದುಪ್ಪಟ್ಟು ಬೆಲೆ ನಮೂದಿಸಿ ವಸ್ತು ಖರೀದಿಸಿರುವುದು, ಕೆಲವು ಪುರಸಭೆ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಾರದಿರುವಬಗ್ಗೆ ಬಗ್ಗೆ ಸಭೆಯಲ್ಲಿ ಚಚರ್ೆಗೆ ಬಂದಿತು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಟಿ ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ,  ಪುರಸಭೆಯಿಂದ ಖಚರ್ು ಮಾಡಿದಂತಹ ಹಣದ ಬಗ್ಗೆ ಸರಿಯಾದ ಲೆಕ್ಕ ಕೊಡುತ್ತಿಲ್ಲ, ಮೂರು ನಾಲ್ಕು ಬಿಲ್ ಮಾಡಿದ ಹಣವನ್ನು ಒಂದೇ ಲೆಕ್ಕಕ್ಕೆ ಸೇರಿಸುತ್ತಿದ್ದಾರೆ ಇದರಿಂದ ಯಾವುದಕ್ಕೆ  ಎಷ್ಟು ಹಣ ಖಚರ್ಾಗಿದೆ ಎನ್ನುವುದು ತಿಳಿಯುತ್ತಿಲ್ಲ, ಯಾವುದೇ ಬಿಲ್ ಮಾಡಿದರೂ ಬಿಲ್ ವೆಚ್ಚವನ್ನು ಬೇರೆ ಬೇರೆಯೇ ತೋರಿಸಿ ಎಂದರು.
ಪುರಸಭೆಯಲ್ಲಿ ಕೆಲವು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಇದರಿಂದ ಸಾರ್ವಜನಿಕರು ಕಛೇರಿಗೆ ಬಂದು ಖಾಲಿ ಕುಚರ್ಿಗಳನ್ನು ನೋಡಿಕೊಂಡು ಕೆಲಸವಾಗದೆ ವಾಪಾಸ್ ಹಿಂದಿರುಗುವ ಸ್ಥಿತಿ ಎದುರಾಗಿದೆ ಎಂದು ಸದಸ್ಯೆ ರೇಣುಕಗುರುಮೂತರ್ಿ ಆರೋಪಿಸಿದರು. 
ಪಟ್ಟಣದಲ್ಲಿ ನಿಮರ್ಿತವಾಗಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಬರುವ ಹಣ ಯಾವುದರಲ್ಲಿ ಎಷ್ಟೆಷ್ಟು ಹಣ ಬರುತ್ತಿದೆ ಎಂದು ತಿಳಿಯುತ್ತಿಲ್ಲ ಎಲ್ಲದಕ್ಕೂ ಒಂದೇ ಆದಾಯ ಸೇರಿಸಿದ್ದೀರ ಇದರಿಂದ ಹಣದ ಲೆಕ್ಕವೂ ಸಿಗುತ್ತಿಲ್ಲ ಕೂಡಲೇ ಬೇರೆ ಬೇರೆ ಲೆಕ್ಕ ಬರೆಯುವಂತೆ ಸದಸ್ಯ ಸಿ.ಪಿ.ಮಹೇಶ್ ತಿಳಿಸಿದರು.
ಪಟ್ಟಣದ ಜೋಗಿಹಳ್ಳಿ ಆಂಜನೇಯಸ್ವಾಮಿ ದೇವಾಲಯ ಬಳಿ ಹೊಸ ಬಸ್ ನಿಲ್ದಾಣದ ಹತ್ತಿರ ಪ್ರವಾಸಿ ಮಂದಿರದ ಬಳಿ ಹಾಗೂ ತಾಲ್ಲೂಕು ಕಛೇರಿ ಹತ್ತಿರ ಮತ್ತು ಕಾಳಿದಾಸ ಪತ್ತಿನ ಸಹಕಾರ ಸಂಘದ ಬಳಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಪುರಸಭೆ ಸಾಮಾನ್ಯ ಸಭೆಯಲ್ಲಿ ತಿಮರ್ಾನಿಸಲಾಯಿತು.
ಕುಡಿಯುವ ನೀರನ್ನ ಒದಗಿಸಲು ಜಿಲ್ಲಾಧಿಕಾರಿಗಳಿಗೆ 25 ಲಕ್ಷರೂ ಮುಂಜೂರು ಮಾಡಲು ಕ್ರಿಯಾ ಯೋಜನೆ ಸಿದ್ದಪಡಿಸಿ ಕಳುಹಿಸಲಾಗಿದೆ, ಹಣ ಬಂದ ತಕ್ಷಣ ಕೊಳವೆ ಬಾವಿಗಳ ದುರಸ್ತಿ ಪಂಪು ಮೋಟಾರು ಅಳವಡಿಸಲು ಹಾಗೂ ಪೈಪ್ ಲೈನ್ ದುರಸ್ತಿಗೆ, ಹೊಸ ಕೊಳವೆ ಬಾವಿ, ಕೊರೆಸಲು ಹಣ ಉಪಯೋಗಿಸಲಾಗುವುದು ಎಂದು ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸಭೆಗೆ ತಿಳಿಸಿದರು.
ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಕೊರೆದಿರುವ ಬೋರ್ವೆಲ್ಗಳ ಎಲ್ಲೆಲ್ಲಿ ಕೊಳವೆ ಬಾವಿ. ಕೊರೆಸಲಾಗಿದೆ ಯಾವ ಬೋರ್ವೆಲ್ಗಳಿಗೆ  ಪಂಪ್ಮೋಟಾರ್, ಬಿಟ್ಟಿದ್ದೇವೆ ಆ ಸ್ಥಳ ಭೇಟಿ ನೀಡಿ ಪರಿಶೀಲಿಸಲು ಎಲ್ಲ ಪುರಸಭಾ ಸದಸ್ಯರು ಆಗಮಿಸುವಂತೆ ತಿಳಿಸಿದರು.
ಕುಡಿಯುವ ನೀರಿನ ಕ್ರಿಯಾ ಯೋಜನೆ ತಯಾರಿಸುವಾಗ ಸದಸ್ಯರ ಗಮನಕ್ಕೆ ತಂದು ಯಾವ ಸ್ಥಳಗಳಲ್ಲಿ ನೀರು ಬರುತ್ತಿದೆಯೋ  ಅಂತಹ ಸ್ಥಳಗಳಲ್ಲಿ ಪುರಸಭಾ ಸದಸ್ಯರ ಅಭಿಪ್ರಾಯ ಪಡೆದು ಕ್ರಿಯಾ ಯೋಜನೆ ತಯಾರಿಸಿ,  ಅಧಿಕಾರಿಗಳು ನೀವೇ ಕ್ರೀಯಾ ಯೋಜನೆ ತಯಾರು ಮಾಡಿದರೆ ಸದಸ್ಯರು ಏಕೆ ಬೇಕು ಎಂದು ಸಿ.ಡಿ ಚಂದ್ರಶೇಖರ್ ಪ್ರಶ್ನಿಸಿದರು. 
ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆ ಇರುವಾಗ ಕೆಲವು ವಾಡರ್್ಗಳಲ್ಲಿ ಕುಡಿಯುವ ನೀರಿಲ್ಲ, ಕೆಲವು ವಾಡರ್್ಗಳಲ್ಲಿ ನೀರು ಹೆಚ್ಚಾಗಿ ಚರಂಡಿಗೆ ಬಿಡುತ್ತಿದ್ದಾರೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಸಲಹೆ ನೀಡಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿರುವ ಪುರಸಭೆಗೆ ಸೇರಿದ ಸ್ಥಳದಲ್ಲಿ ಪ್ಲೇನಿಂಗ್, ಮಿಷನ್, ಹಾಗೂ ಚಪ್ಪಲಿ ಅಂಗಡಿಗಳನ್ನು ತೆರವುಗೊಳಿಸಿ ಹೊಸ ವಾಣಿಜ್ಯ ಮಳಿಗೆಗಳನ್ನು ಕಟ್ಟಲು ಸಭೆ ತಿಮರ್ಾನಿಸಲಾಯಿತು.
ಕೆ.ಎಸ್.ಆರ್,ಟಿ,ಸಿ ಬಸ್ ನಿಲ್ದಾಣದ ಎದುರಿಗೆ ಇರುವ ಹಳೇ ವಿದ್ಯಾಥರ್ಿ ಭವನ್ ಇದ್ದ ಪುರಸಭೆಯ ನಿವೇಶನ ಹಾಗೂ ತಾ ಗಾಡಿ ಕಾಖರ್ಾನೆ ಪುರಸಭೆಯ ಆಸ್ತಿಯಾಗಿದ್ದು ಈ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಲು ಸಭೆ ತಿಮರ್ಾನಿಸಿತು. ಈ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿಮರ್ಿಸಲು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ನಂತರ ಮಳಿಗೆ ಕಟ್ಟಿ ಇಲ್ಲದೆ ಹೋದರೆ ಕೋಟರ್ಿಗೆ ಹೋಗುವ ಸಂಭವವಿರುತ್ತದೆ ಎಂದು ಸದಸ್ಯ ಸಿ.ಎಂ.ರಂಗಸ್ವಾಮಿ ಸಲಹೆ ನೀಡಿದರು.
ಪುರಸಭೆಯ ಐ.ಡಿ.ಎಸ್.ಎಮ್.ಟಿ, ಪುರಸಭೆ ಅನುದಾನ, 10ನೇ ಹಣಕಾಸು ಯೋಜನೆ, ಸೇರಿದಂತೆ ವಿವಿಧ ಯೋಜನೆಗಳಲ್ಲಿ ನಿಮರ್ಿಸಿರುವ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡದೇ ಪಿ.ಡ್ಲ್ಯೂಡಿಯವರು ನಿಗಧಿ ಪಡಿಸಿದ ದರದಲ್ಲಿ ಪ್ರಸ್ತುತ ಅಂಗಡಿ ನಡೆಸುತ್ತಿರುವವರಿಗೆ ಅಂಗಡಿ ನೀಡಲು ಪುರಸಭೆ ನಿರ್ಣಯ ಕೈಗೊಂಡಿದ್ದು ನಂತರ ಮುಖ್ಯಾಧಿಕಾರಿಗಳು  ಸಕರ್ಾರದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡದು ಹರಾಜು ಮಾಡುವಂತೆ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು..
ಕೆಲವರು ಹೊಸ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಗಳನ್ನು 3800ರೂ ಬಾಡಿಗೆ ಪುರಸಭೆಗೆ ನೀಡುತ್ತಿದ್ದು ಆ ಅಂಗಡಿಗಳನ್ನು ಕೆಲವರು ದಿನವೊಂದಕ್ಕೆ 1000ರೂಪಾಯಿ ವರೆಗೆ ಬೇನಾಮಿಯಾಗಿ ವಸೂಲಿ ಮಾಡುತ್ತಿದ್ದಾರೆ ಇದರಿಂದ ಪುರಸಭೆಗೆ ಆದಾಯ ಕಡಿಮೆಯಾಗುತ್ತಿದೆ ಆದ್ದರಿಂದ ಯಾರು ಅಂಗಡಿ ಇಟ್ಟುಕೊಂಡಿದ್ದಾರೋ ಅವರಿಗೆ ಆ ಮಳಿಗೆಗೆ ಲೈಸೇನ್ಸ್ ವಿತರಿಸಿ ಎಂದು ಸದಸ್ಯರು ತಿಳಿಸಿದರು. 
ಪಟ್ಟಣದ ಪುರಸಭೆಯ ಮುಂಭಾಗದಲ್ಲಿರುವ ಅಶೋಕ ಮರಗಳನ್ನು ತೆರವುಗೊಳಿಸಿ ಅಲ್ಲಿ ವಾಹನ ನಿಲ್ದಾಣವನ್ನು ಮಾಡಲು ಸಭೆ ತಿಮರ್ಾನಿಸಿತು.
 ಸಭೆಯಲ್ಲಿ ಉಪಾಧ್ಯಕ್ಷೆ ಇಂದಿರಾ ಪ್ರಕಾಶ್, ರೇಣುಕಮ್ಮ, ಸಿ.ಪಿ.ಮಹೇಶ್, ಮಹಮದ್ಖಲಂದರ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಎಂ.ಕೆ.ರವಿಚಂದ್ರ, ಧರಣಿಲಕ್ಕಪ್ಪ, ಪ್ರೇಮಾದೇವರಾಜ್, ಪುಷ್ಪ.ಟಿ.ರಾಮಯ್ಯ, ಅಶೋಕ್, ಹೆಚ್.ಬಿ.ಪ್ರಕಾಶ್, ಗೀತಾರಮೇಶ್, ರೇಣುಕಮ್ಮಗುರುಮೂತರ್ಿ, ನೇತ್ರಾವತಿಶಿವಕುಮಾರ್, ಸಿ.ಎಸ್.ರಮೇಶ್, ರೂಪಶಿವಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.


ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ನಡೆದ ಅಣ್ಣಮ್ಮದೇವಿ ಮಹೋತ್ಸವ ಕಾರ್ಯಕ್ರಮದಲ್ಲಿ ಕನರ್ಾಟಕ ಜಾಗೃತಿ ಸೇನೆ ವತಿಯಿಂದ ಗ್ರಾಮೀಣ ಪ್ರದೇಶದ ಚಿಕ್ಕನಾಯಕನಹಳ್ಳಿಯ ಪತ್ರಕರ್ತರಾದ ಸಿ.ಬಿ.ಲೋಕೇಶ್ರವರನ್ನು ಸನ್ಮಾನಿಸಲಾಯಿತು.ರಾಜ್ಯಾಧ್ಯಕ್ಷರಾದ ಆನಂದಪ್ಪ, ರಾಜ್ಯಾ ಕಾರ್ಯದಶರ್ಿ ಗುರುಲಿಂಗಪ್ಪ, ಪಧಾದಿಕಾರಿಗಳಾದ ಬಾಲಕೃಷ್ಣರಾವ್, ಲಿಂಗದೇವರು, ಲಕ್ಷ್ಮಣ್,ವೆಂಕಟೇಶ್, ರಮೇಶ್, ಸೋಮಣ್ಣ ಮುಂತಾದವರು.
Saturday, April 16, 2016


ಗಾಳಿಗೆ ಧರೆಗುರುಳಿದ ಮರಗಳು, ಹೆಂಚುಗಳು
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಜೆ.ಸಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಗಸರಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಬೀಸಿದ ಬಾರಿ ಬಿರುಗಾಳಿಗೆ ತೆಂಗು, ಅಡಿಕೆ ಹಾಗೂ ಬಾಳೆ ನೆಲಕ್ಕುರುಳಿ ಮನೆಗಳ ಸೂರು ಹಾರಿ ಹೋಗಿವೆ.
ಬಿಸಿಲಿನ ತಾಪಕ್ಕೆ ತಾಲ್ಲೂಕಿನ ಜನರು ಹೈರಾಣರಾಗಿದ್ದರು, ಗುರುವಾರ ರಾತ್ರಿ ಪಟ್ಟಣ ಸೇರಿದಂತೆ ಕಸಬಾ ಹಾಗೂ ಶೆಟ್ಟಿಕೆರೆ ಹೋಬಳಿಯ ಹಲವು ಭಾಗಗಳಲ್ಲಿ ಮಳೆ ಸಿಂಚನ ಆಗಿದೆ. ಮಳೆಗಿಂತಲೂ ಗಾಳಿ ಅಧಿಕವಾಗಿದ್ದರಿಂದ ಬಾಳೆ, ತೆಂಗು ಹಾಗೂ ಅಡಿಕೆ ಮರಗಳು ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ.
ಅಗಸರಹಳ್ಳಿಯ 2ಕ್ಕೂ ಹೆಚ್ಚು ರೈತರ ತೋಟಗಳು ಮಳೆಗಾಳಿಗೆ ಬಲಿಯಾಗಿವೆ. ಬೋರೇಗೌಡರ ತೋಟದಲ್ಲಿ 35 
ಫಲಭರಿತ ತೆಂಗಿನ ಮರ, ಗಂಗಮ್ಮ ಅವರ ತೋಟದಲ್ಲಿ 5 ಫಲಭರಿತ ತೆಂಗಿನಮರ, 30ಕ್ಕೂ ಹೆಚ್ಚು ಅಡಿಕೆಮರ, 30ಕ್ಕೂ ಹೆಚ್ಚು ಬಾಳೆ, ನಾಗರಾಜು ತೋಟದಲ್ಲಿ 4 ಫಲಭರಿತ ತೆಂಗಿನ ಮರ ಹಾಗೂ ನೂರಾರು ಬಾಳೆಗಿಡ, ರಾಜಶೇಖರ್  ತೋಟದಲ್ಲಿ ನೂರಕ್ಕೂ ಹೆಚ್ಚು ತೆಂಗು, ಅಡಿಕೆ, ಬಾಳೆ ಮರಗಳು, ಧರೆಗುಳಿವೆ.
ಗಂಗಾಧರಯ್ಯ  ಮನೆಯ ನೂರಾರು ಹೆಂಚುಗಳು, ಕುಮಾರಸ್ವಾಮಿಯ ಮನೆಯ ತಗಡಿನ ಮೇಲ್ಚಾವಣಿ 80 ಅಡಿ ದೂರಕ್ಕೆ ಹಾರಿಹೋಗಿದೆ. ದಾಕ್ಷಾಯಿಣಮ್ಮ ಅವರ ಮನೆಯ ಹೆಂಚುಗಳು ಸಂಪೂರ್ಣ ಬಿರುಗಾಳಿಗೆ ನಾಶವಾಗಿದೆ, ಶಂಕರಯ್ಯ ಅವರ ಮನೆ ಹೆಂಚುಗಳು ಬಿರುಗಾಳಿಗೆ ಹಾರಿಹೋಗಿ 50ಮೀ. ದೂರದಲ್ಲಿ ಬಿದ್ದಿವೆ. 
  ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಬಂದ ನಂತರ ಪರಿಹಾರವನ್ನು ವಿತರಿಸಲಾಗುವುದು ಎಂದು ತಹಶೀಲ್ದಾರ್ ಆರ್.ಗಂಗೇಶ್ ತಿಳಿಸಿದರು.

ಕೋಟ್-1
  ಗುರುವಾರ ರಾತ್ರಿ ಮಳೆ ಗಾಳಿಗೆ ಜೀವನಾಧಾರವಾಗಿದ್ದ ಬಾಳೆ ತೆಂಗು, ಅಡಿಕೆ ತೋಟಗಳು ಬಲಿಯಾಗಿವೆ. ತಾಲ್ಲೂಕು ಆಡಳಿತ ಶೀಘ್ರ ಸವರ್ೆಕಾರ್ಯ ನಡೆಸಿ ಪರಿಹಾರ ಒದಗಿಸಿಕೊಡಬೇಕು.
                       ಬೋರೇಗೌಡ,ರೈತ,ಅಗಸರಹಳ್ಳಿ. 

ಕೋಟ್-2
ಅಗಸರಹಳ್ಳಿ ಒಂದರಲ್ಲೇ 20 ರೈತರಿಗೆ ಸೇರಿದ ತೋಟಗಳಲ್ಲಿ ಬಾಳೆ.ತೆಂಗು,ಅಡಿಕೆ ಮರಗಳು ಮಳೆಗಾಳಿಗೆ ಉರುಳಿವೆ.ಸವರ್ೇಕ್ಷಣೆ ನಡೆಸಿ ಅನಾಹುತವನ್ನು ಅಂದಾಜಿಸಲಾಗುವುದು.
                          ಆರ್.ಗಂಗೇಶ್,ತಹಶಿಲ್ದಾರ್.


Thursday, April 14, 2016ಜ್ಞಾನ, ಬುದ್ದಿವಂತಿಕೆ, ನಾಯಕತ್ವದ ಗುಣ ಕೆಲವೇ ಜಾತಿಗಳ ಸ್ವತ್ತಲ್ಲ : ಉಪನ್ಯಾಸಕ ಡಾ.ಆರ್.ತಿಮ್ಮರಾಯಪ್ಪ
ಚಿಕ್ಕನಾಯಕನಹಳ್ಳಿ: ಜ್ಞಾನ ಬುದ್ದಿವಂತಿಕೆ, ನಾಯಕತ್ವದ ಗುಣ ಕೆಲವೇ ಜಾತಿಗಳ ಸ್ವತ್ತು ಎಂದು  ಬಲಿತ ಜಾತಿಗಳು ಸಮಾಜದಲ್ಲಿ ಭ್ರಮೆ ಸೃಷ್ಠಿಸಿವೆ ಎಂದು ಮೈಸೂರು ಮಹಾರಾಜ ಕಾಲೇಜಿನ ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ಡಾ|| ಆರ್.ತಿಮ್ಮರಾಯಪ್ಪ ಅಭಿಪ್ರಾಯ ಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಗುರುವಾರ ನಡೆದ ಡಾ.ಅಂಬೇಡ್ಕರ್ ಹಾಗೂ ಜಗಜೀವನರಾಂರವರ ಜನ್ಮದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹುಟ್ಟಿನಿಂದ ಯಾರು ಮಹಾನ್ ವ್ಯಕ್ತಿಗಳಾಗುವುದಿಲ್ಲ ಗುಲಾಮರೂ ಆಗುವುದಿಲ್ಲ, ಜ್ಞಾನ ಬುದ್ದಿವಂತಿಕೆ ನಾಯಕತ್ವದಗುಣ ಸಾಧನೆ ಸ್ವತ್ತಲ್ಲಿ ಎಂದು ರುಜುವಾತು ಮಾಡಿದ ಮಹನಿಯರ ಸಾಲಿನಲ್ಲಿ  ಡಾ.ಬಾಬಾ ಸಾಬ್ ಅಂಬೇಡ್ಕರ್ ಪ್ರಮುಖರು ಎಂದರು.
ಅಂಬೇಡ್ಕರ್ ಹೋರಾಟದ ಆಶಯಗಳನ್ನು ನೆನಪಿಸುವ ಹಲವು  ವಿಶ್ವ ಮಟ್ಟದ ಹೋರಾಟಗಳು ನಡೆದಿವೆ.ಅಬ್ರಾಹಂ ಲಿಂಕನ್ ಗುಲಾಮಗಿರಿಯ ವಿರುದ್ದ, ಜೋಸಫ್ ಸ್ಟಾಲೀನ್ ಬಂಡವಾಳ ಶಾಹಿಗಳ ವಿರುದ್ದ ಹಾಗೂ ನೆಲ್ಸನ್ ಮಂಡೇಲಾ ವರ್ಣಬೇಧ ನೀತಿ ವಿರುದ್ದ ಹೋರಾಟ ಮಾಡಿದ್ದಾರೆ ಎಂದರು.
ಡಾ|| ಅಂಬೇಡ್ಕರ್ರವರು ಭಾರತದಲ್ಲಿ ತಾಂಡವವಾಡುತ್ತಿದ್ದ ಆಥರ್ಿಕ, ಸಾಮಾಜಿಕ ಅಸಮಾನತೆಯನ್ನು ಕಂಡುಂಡು ದಲಿತರು ರಾಜಕೀಯವಾಗಿ ಆಥರ್ಿಕವಾಗಿ ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯ ಇನ್ನೂ ನನಸಾಗಿಲ್ಲ ಎಂದರು.
 ಶಾಸಕ ಸಿ.ಬಿ ಸುರೇಶ್ಬಾಬು ಮಾತನಾಡಿ, ಕಳೆದ ವರ್ಷ ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ರೂ. 600 ಕೋಟಿ ಖಚರ್ಾಗಿಲ್ಲ.ಅಧಿಕಾರಿಗಳ ಉಧಾಸೀನ ದೋರಣೆಯೇ ಇದಕ್ಕೆ ಕಾರಣ ಎಂದರು.
ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ನೀಡುತ್ತಿರುವ ಸವಲತ್ತುಗಳನ್ನು  ಬಳಸಿಕೊಂಡು ದಲಿತರು ಹಾಗೂ ಹಿಂದುಳಿದ ವರ್ಗದ ಮಕ್ಕಳು ಉನ್ನತ ವ್ಯಾಸಂಗ ಪಡೆಯಬೇಕು. ಪರಿಶಿಷ್ಠ ಜಾತಿ ಕಾಲೋನಿಗಳಲ್ಲಿ ಅಂಬೇಡ್ಕರ್ ಭವನ ಹಾಗೂ ಪರಿಶಿಷ್ಟ ಪಂಗಡಗಳಿಗೆ ವಾಲ್ಮೀಕಿ ಭವನ ನಿಮರ್ಿಸಲು ತಲಾ ರೂ.25ಲಕ್ಷ ಅನುದಾನ ನೀಡಲಾಗುವುದು ಎಂದರು. 
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿನಿಯರಾದ ಎಂ. ಬಿ ವಿದ್ಯಾ, ಎಲ್,ಹೇಮಾ, ಪ್ರಗತಿ ಪರ ರೈತ ಮಹಿಳೆ ಅರ್ಚನಾಮಂಜುನಾಥ್, ಅಂಗನವಾಡಿ ಕಾರ್ಯಕತರ್ೆ ಎಲ್.ಭಾಗ್ಯಮ್ಮ, ಕಲಾವಿದ ಸಿ.ಎಸ್. ಚಂದ್ರಯ್ಯ, ಮುಂತಾದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ  ಭಾವಚಿತ್ರ  ಮೆರವಣಿಗೆ ನಡೆಯಿತು. ತಾಲ್ಲೂಕು ಕಛೇರಿಯಿಂದ ಹೊರಟ ಮೆರವಣಿಗೆ ಬಿ.ಹೆಚ್ ರಸ್ತೆಯಲ್ಲಿ ಸಾಗಿ ಬಂತು.ನೆಹರು ಸರ್ಕಲ್ ಮೂಲಕ ವಿವಿಧ ಕಲಾ ತಂಡಗಳು ಕನ್ನಡ ಸಂಘ ವೇದಿಕೆಗೆ ಆಗಮಿಸಿತು, 
ಪುರಸಭೆ ಅಧ್ಯಕ್ಷ ಸಿ.ಟಿ ದಯಾನಂದ್ ಕಾರ್ಯಕ್ರಮ ಉದ್ಘಾಟಿಸಿದರು, ಜಿ.ಪಂ ಸದಸ್ಯರಾದ ರಾಮಚಂದ್ರಯ್ಯ, ಯಳನಡು ಸಿದ್ದರಾಮಯ್ಯ, ಮಹಲಿಂಗಪ್ಪ, ಮಂಜುಳಮ್ಮ, ಕಲ್ಲೇಶ್, ತಾ.ಪಂ ಸದಸ್ಯರಾದ ಹೆಚ್.ಎನ್.ಕುಮಾರ್, ತಿಮ್ಮಯ್ಯ, ಪುರಸಭಾ ಸದಸ್ಯರಾದ ಅಶೋಕ್, ಸಿ.ಡಿ ಚಂದ್ರಶೇಖರ್, ತಹಸಿಲ್ದಾರ್ ಆರ್ ಗಂಗೇಶ್, ಇ.ಓ ಕೃಷ್ಣಮೂತರ್ಿ, ಸಿ.ಡಿ.ಪಿ.ಓ ಅನಿಸ್ ಕೈಸರ್,  ದಲಿತ ಮುಖಂಡರಾದ ಬೇವಿನಹಳ್ಳಿ ಚೆನ್ನಬಸವಯ್ಯ, ತೀರ್ಥಪುರ ಕುಮಾರ್, ಆರ್.ಪರಶಿವಮೂತರ್ಿ, ಬಿಳಿಗೇಹಳ್ಳಿ ರಾಜು, ಮುಂತಾದವರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಎಸ್.ಎಂ ಲೋಕೇಶಮೂತರ್ಿ ಸ್ವಾಗತಿಸಿ ಲಿಂಗದೇವರು ನಿರೂಪಿಸಿದರು, ಬಿ.ಇ.ಓ ಕೃಷ್ಣಮೂತರ್ಿ ವಂದಿಸಿದರು, ಗಂಗಾಧರ್ ತಂಡ ಅಂಬೇಡ್ಕರ್ ಕುರಿತ ಕ್ರಾಂತಿಗೀತೆ ಹಾಡಿತು.


ಬಾಲಕಿಯರ ಹಾಸ್ಟಲ್ಗೆ ಪುರಸಭೆ ವತಿಯಿಂದ ಮಂಚ ವಿತರಣೆ
ಚಿಕ್ಕನಾಯಕನಹಳ್ಳಿ,ಏ.14 : ಬಾಲಕಿಯರ ಹಾಸ್ಟಲ್ ಕಟ್ಟಡ ನಿಮರ್ಾಣಕ್ಕೆ ಎರಡು ಕೋಟಿ ಹಣ ಮಂಜೂರಾಗಿದೆ ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಮುಂಬರುವ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿ ನಿಲಯಕ್ಕೆ ಪುರಸಭೆ ವತಿಯಿಂದ 2015-16ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿಯ ಶೇ.7.25ರ ಯೋಜನೆಯಡಿ 40 ಮಂಚಗಳನ್ನು ವಿತರಿಸಿ ಮಾತನಾಡಿ, ಹಾಸ್ಟಲ್ ವಿದ್ಯಾಥರ್ಿಗಳ ಸೌಕರ್ಯಕ್ಕಾಗಿ ಪುರಸಭೆ ವತಿಯಿಂದ ನೀಡುತ್ತಿರುವ ಮಂಚ ಸದ್ಬಳಕೆಯಾಗಲಿ. ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾಭ್ಯಾಸ ಮುಂದುವರೆಸಿ ಎಂದು ಸಲಹೆ ನೀಡಿದರು.
  ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಹಲವು ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಸಕರ್ಾರ ವಿವಿಧ ರೀತಿಯ ಯೋಜನೆ ರೂಪಿಸಿ ಸೌಕರ್ಯಗಳನ್ನು ಒದಗಿಸುತ್ತಿದೆ. ಪುರಸಭೆ ವಿದ್ಯಾಥರ್ಿಗಳಿಗೆ ಅನುಕೂಲವಾಗಲಿ ಎಂದು ಮಂಚಗಳನ್ನು ನೀಡಿದೆ ಎಂದರು.
 ಪುರಸಭೆ ಅಧ್ಯಕ್ಷ ಸಿ.ಟಿ.ದಯಾನಂದ್, ಜಿ.ಪಂ.ಸದಸ್ಯ ಮಹಾಲಿಂಗಯ್ಯ, ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಅಶೋಕ್, ನಿಲಯ ಮೇಲ್ವಿಚಾರಕಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ದೇಶದ ಒಳಿತಿಗಾಗಿ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ : ಬಿ.ಇ.ಓ ಕೃಷ್ಣಮೂತರ್ಿ
ಚಿಕ್ಕನಾಯಕನಹಳ್ಳಿ,ಏ.14 : ದೇಶದ ಎಲ್ಲಾ ಜನಾಂಗದ ಒಳಿತಿಗಾಗಿ ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮಹಾನ್ ಪುರುಷ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಶ್ಲಾಘಿಸಿದರು.
ಪಟ್ಟಣದ ಅಂಬೇಡ್ಕರ್ ಪ್ರೌಡಶಾಲೆಯಲ್ಲಿ ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ರವರ 125ನೇ  ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅಂಬೇಡ್ಕರ್ ಚಿಕ್ಕವಯಸ್ಸಿನಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳನ್ನು ಮುಂದಿನ ಜನಾಂಗ ಅನುಭವಿಸುವುದು ಬೇಡ ಎಂದು ತುಳಿತಕ್ಕೊಳಗಾದವರು ಹಾಗೂ ಅಂತ್ಯಜರಿಗೆ ಸಂವಿಧಾನದಲ್ಲಿ ವಿಶೇಷ ಸವಲತ್ತು ನೀಡಿದ್ದಾರೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂ ಸ್ವಸ್ಥ ಸಮಾಜದ ಎರಡು ಕಣ್ಣುಗಳು. ಸಮಾನತೆ ಹರಸುತ್ತ ಸಮಾಜವನ್ನು ಔನತ್ಯಕ್ಕೆ ಕೊಂಡೋಯ್ದರು. ಸಂವಿಧಾನ ಶಿಲ್ಪಿಯಾಗಿ ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂ ಹಸಿರು ಕ್ರಾಂತಿಯ ಹರಿಕಾರರಾಗಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವ ಸಾರಿದರು ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರೌಡಶಾಲೆಯ ಗೋ.ನಿ.ವಸಂತ್ಕುಮಾರ್, ನಿವೃತ್ತ ಮುಖ್ಯಶಿಕ್ಷಕ ರಾಮಣ್ಣ, ಶಿಕ್ಷಕ ಪ್ರದೀಪ್, ಸಂಸ್ಥೆಯ ಮಹದೇವಣ್ಣ, ಮುಖ್ಯಶಿಕ್ಷಕ ರಾಮ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

ನಾಲ್ಕನೇ ಬಾರಿ ನೆಹರು ಸರ್ಕಲ್ನಲ್ಲಿ ಲಾರಿ ಮಗುಚಿ ಬಿದ್ದಿರುವುದು
ಚಿಕ್ಕನಾಯಕನಹಳ್ಳಿ,ಏ.14 : ಪಟ್ಟಣದ ನೆಹರು ವೃತ್ತದ ತಿರುವಿನಲ್ಲಿ ಹತ್ತಿ ತುಂಬಿಕೊಂಡಿದ್ದ ಲಾರಿಯೊಂದು ಬುಧವಾರ ರಾತ್ರಿ ಮಗುಚಿ ಬಿದ್ದಿದೆ.
ಚಾಮರಾಜನಗರ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ 150ಎ ಚಿ.ನಾ.ಹಳ್ಲಿ ಪಟ್ಟಣದ ಮೂಲಕ ಹಾದು ಹೋಗುತ್ತದೆ, ನಿತ್ಯ ಹುಳಿಯಾರು ಚಿಕ್ಕನಾಯಕನಹಳ್ಳಿ, ಮೈಸೂರು ಕಡೆಗೆ ಹೋಗುವಾಗ ಪಟ್ಟಣದ ನೆಹರು ವೃತ್ತದ ಮೂಲಕವೇ ಹಾದು ಹೋಗಬೇಕು, ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ, ರಾತ್ರಿ ವೇಳೆ ನೆಹರು ವೃತ್ತದಲ್ಲಿ ಸರಿಯಾದ ನಾಮಫಲಕವಾಗಲಿ, ರಸ್ತೆಯಲ್ಲಿ ಸಿಗ್ನಲ್ ಇಲ್ಲದೆ ಇರುವುದರಿಂದ ತಿರುವಿದೆ ಎಂಬುದು ವಾಹನ ಚಾಲಕರಿಗೆ ಗೊತ್ತಾಗುವುದಿಲ್ಲ, ಇದರಿಂದ ವಾಹನ ಚಾಲಕರಿಗೆ ಮಾರ್ಗದರ್ಶನ ಎಲ್ಲಿದೆ, ಎಲ್ಲಿಗೆ ರಸ್ತೆಯ ಮಾರ್ಗ ಸಂಚರಿಸುತ್ತದೆ ತಿಳಿಯುವುದಿಲ್ಲ, ಈಗಾಗಲೇ ಇದೇ ಜಾಗದಲ್ಲಿ ನಾಲ್ಕೈದು ಬಾರಿ ಲಾರಿಗಳು ಮಗುಚಿ ಬಿದ್ದು ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೆಹರು ವೃತ್ತದಲ್ಲಿ ಸರಿಯಾದ ನಾಮಫಲಕ ಹಾಗೂ ಸಿಗ್ನಲ್ ಲೈಟ್ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

15ವರ್ಷಗಳ ನಂತರ ನಡೆಯಲಿರುವ ಬೆಳಗುಲಿ ಹೊನ್ನಮರಡಿ ರಂಗನಾಥಸ್ವಾಮಿ ಜಾತ್ರೆ
 ಚಿಕ್ಕನಾಯಕನಹಳ್ಳಿ,ಏ.14  : ತಾಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಶ್ರೀ ಹೊನ್ನಮರಡಿ ರಂಗನಾಥಸ್ವಾಮಿ ದೊಡ್ಡ ಜಾತ್ರೆ 15 ವರ್ಷಗಳ ಬಳಿಕ ನಡೆಯುತ್ತಿದೆ.
ಸತತ 11 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ 15ರಿಂದ 25ರವರೆಗೆ ನಡೆಯುವ ನಾನಾ ಧಾಮರ್ಿಕ ಕಾರ್ಯಕ್ರಮಗಳು ನಡೆಯಲಿವೆ. ಏ.15 ಬೆಳಗ್ಗೆ ಧ್ವಜಾರೋಹಣ, 16ರಶನಿವಾರ ಪರ್ವತಾರೋಹಣ ಕಳಸ ಸ್ಥಾಪನೆ, 17ರ ಬೆಳಗ್ಗೆ ದಾಸೋಹ, ರಾತ್ರಿ  ಹನುಮಂತೋತ್ಸವ, 18ರಂದು ರಾತ್ರಿ 8ಕ್ಕೆ ಗರುಡೋತ್ಸವ ,19ರಂದು ಮಂಗಳವಾರ ಸಪರ್ೋತ್ಸವ, 20ರ ಬುಧವಾರ ಅಶ್ವಾರೋಹಣ, 21ರ ಧ್ವಜಾರೋಹಣೋತ್ಸವ, ನೂರೆಂದೆಡೆ ಸೇವೆ, ಹೊಸಕೆರೆ ಉಡುಸಲಮ್ಮ ದೇವಿಗೆ 101 ಎಡೆ ಸೇವೆ, 22ರಂದು ಮಧ್ಯಾಹ್ನ 12ರಿಂದ 1.30ರವರೆಗೆ ಅಭಿಜಿನ್ ಮುಹೂರ್ತದಲ್ಲಿ ಬೆಳಗುಲಿ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. 23ರಂದು ರಾತ್ರಿ 8ಕ್ಕೆ ಆಳುಪಲ್ಲಕ್ಕಿ ಉತ್ಸವ, 24ರಂದು ಅಡ್ಡಪಲ್ಲಕ್ಕಿ ಉತ್ಸವ, 25ರಂದು ಬೆಳಗ್ಗೆ 12ರಿಂದ ಗಂಗಾಸ್ನಾನ ಅಗ್ನಿಕುಂಡೋತ್ಸವ ಸಂಜೆ ಅವಾಮೃತ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ದೇವಸ್ಥಾನದ ಸಮಿತಿ ಮುಖಂಡರು ಕೋರಿದ್ದಾರೆ. 

Monday, April 11, 2016


ಡಿಸಿಸಿ ಬ್ಯಾಂಕ್ನಿಂದ ಹಲವು ರೀತಿಯ ಸಾಲ ವಿತರಣೆ : ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ,ಏ.11 :  ರಾಮನಹಳ್ಳಿ ಪ್ರಾ.ಕೃ.ಸ.ಸಂಘದ ವತಿಯಿಂದ ರೈತರಿಗೆ ಬೆಳೆಸಾಲ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ, ವಾಹನ ಸಾಲ,  ಆಭರಣ ಅಡಮಾನ ಸಾಲ ಸೇರಿದಂತೆ ಇತರೆ ಡಿ.ಸಿ.ಸಿ. ಬ್ಯಾಂಕ್ ಮತ್ತು ಸಂಘದ ಸ್ವಂತ ಬಂಡವಾಳದಿಂದ ರೈತರಿಗೆ ಸುಮಾರು ಮೂರುವರೆ ಕೋಟಿ ರೂಗಳ ಸಾಲ ವಿತರಿಸಲಾಗಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು.
ತಾಲ್ಲೂಕಿನ ರಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನ ಸಾಲ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಂಘ ಇಂದು 114 ಜನ ರೈತರಿಗೆ 22 ಲಕ್ಷದ 88 ಸಾವಿರ ರೂಗಳ ಸಾಲವನ್ನು ವಿತರಿಸಲಾಗಿದೆ ಎಂದರು. ರೈತರು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಸಲು ಕೋರಿದರು, ಡಿ.ಸಿ.ಸಿ.ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದು, ರೈತರಿಗೆ ಅನೇಕ ರೀತಿಯ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಬೆಳೆಸಾಲ, ಅಡಮಾನಸಾಲ, ಹೈನುಗಾರಿಕೆ ಸಾಲ, ಅಲೆಮಾರಿಗಳಿಗೆ  ವ್ಯಾಪಾರ ಸಾಲ, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲವನ್ನು ಜಿಲ್ಲಾದ್ಯಂತ ನೀಡುತ್ತಿದ್ದು, ಬ್ಯಾಂಕ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಈ ಬಾರಿ ಬ್ಯಾಂಕಿಗೆ ಬಂದ ಲಾಭದ ಹಣದಿಂದ ಒಂದು ಲಕ್ಷ ರೂಗಳ ಮಿತಿಗೆ ಒಳಪಟ್ಟಿರುವ  ವ್ಯವಸಾಯ ಸಾಲವನ್ನು  ಪಡೆದು ಮರಣಹೊಂದಿರುವ ರೈತ ಕುಟುಂಬದವರಿಗೆ ನೆರವಾಗಿದೆ, ಜಿಲ್ಲೆಯಲ್ಲಿ 1720 ಜನ ಸಾಲಗಾರರಿಗೆ ಸುಮಾರು ನಾಲ್ಕುವರೆ ಕೋಟಿ ರೂ ಮನ್ನಾ ಮಾಡಲಾಗಿದೆ,  ಇದು ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರ ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು. 
    ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ನಲ್ಲಿ ಸಾಲ ಪಡೆದು ಮರಣ ಹೊಂದಿರುವ ರೈತರುಗಳ ಸಾಲವನ್ನು ಮನ್ನಾವಾಗಿರುವ ಕುಟುಂಬದವರಿಗೆ   ತೀರುವಳಿ ಪತ್ರವನ್ನು ಇದೇ ತಿಂಗಳ 13 ರಂದು ತುಮಕೂರಿನ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ನಡೆಯುವ  ಸಮಾರಂಭದಲ್ಲಿ ನೀಡಲಾಗುವುದು ಎಂದರು. ಈ ಭಾಗಕ್ಕೆ ನೀರಾವರಿ ಸೌಲಭ್ಯವಿಲ್ಲದೆ ರೈತರು ಕಂಗಾಲಾಗಿದ್ದಾರೆ, ಹೇಮಾವತಿ ನಾಲೆ ಅಥವಾ ಇನ್ಯಾವುದೇ ಮೂಲದಿಂದಲಾದರೂ ಸರಿಯೇ ಇಲ್ಲಿಗೆ ನೀರು ತರುವುದು ಅಗತ್ಯವಾಗಿದೆ, ನೀರಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ, ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು. 
ರಾಮನಹಳ್ಳಿ ಸೊಸೈಟಿಯ ನಿದರ್ೇಶಕ ಸತ್ಯ ನಾರಾಯಣ್ ಮಾತನಾಡಿ, ಐದಾರು ತಿಂಗಳಿಂದ   ಸಾಲ ಕೊಡಲು ಸಾಧ್ಯವಾಗಿರಲಿಲ್ಲ, ಡಿ.ಸಿ.ಸಿ.ಬ್ಯಾಂಕ್ನ ನಿದರ್ೇಶಕರ ಪ್ರಯತ್ನದಿಂದ  ಈ ವರ್ಷ 1 ಕೋಟಿ 70ಲಕ್ಷ ಸಾಲವನ್ನು ಡಿಸಿಸಿ ಬ್ಯಾಂಕ್ ಬಿಡುಗಡೆ ಮಾಡಿದೆ,  116 ಜನ ಬಡ ರೈತರಿಗೆ ಪಾಣಿಯ ಮುಖಾಂತರವಾಗಿ ಸಾಲವನ್ನು ಪ್ರಾಥಮಿಕ ಸಹಕಾರಿ ಬ್ಯಾಂಕ್ ಸಾಲವನ್ನು ನೀಡಿದೆ ಈ ಸಾಲವನ್ನು ರೈತರು ಸದುಪಯೋಗ ಪಡಿಸಿಕೊಂಡು ಮರುಪಾವತಿ ಮಾಡಬೇಕು ಎಂದರು.
ನಿದರ್ೇಶಕ ಆರ್.ಬಿ.ಕುಮಾರ್ ಮಾತನಾಡಿ. ಸಾಲ ಪಡೆದ ರೈತರು ಮರು ಪಾವತಿಯನ್ನು ಸರಿಯಾಗಿ ಮಾಡುತ್ತಾರೆ ಎಂದು ನಂಬಿ ಸಾಲ ಕೊಡುಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಿಮ್ಮನಹಳ್ಳಿ ತಾ.ಪಂ. ಇಂದ್ರಕುಮಾರಿ, ರಾಮನಹಳ್ಳಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಉಪಾಧ್ಯಕ್ಷೆ  ಗಿರಿಜಮ್ಮ, ನಿದರ್ೇಶಕ ಮರುಳಸಿದ್ದಪ್ಪ, ಮಂಜುನಾಥ್, ಜೋಗಣ್ಣ, ರಘನಾಥ್, ಸತ್ಯನಾರಾಯಣ್, ಆರ್.ಬಿ.ಕುಮಾರ್, ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ರಂಗಸ್ವಾಮಿ  ಮತ್ತಿತರರು ಉಪಸ್ಥಿತರಿದ್ದರು.

ಬಸವನ ಉಪಟಳ ತಾಳಲಾರದೆ ಮಠದಲ್ಲಿ ಕಟ್ಟಿಹಾಕಿದ ಜನತೆ
ಚಿಕ್ಕನಾಯಕನಹಳ್ಳಿ,ಏ.11:  ಊರ ಜನರಿಗೆ ಉಪಟಳ ನೀಡುತ್ತಿದ್ದ ದೇವರ ಮುದ್ರೆ ಹೊತ್ತಿರುವ ಬಸವನನ್ನು ಗ್ರಾಮಸ್ಥರೇ ಒಗ್ಗೂಡಿ ಮಠದಲ್ಲಿ ಕಟ್ಟಿಹಾಕಿದ ಘಟನೆ ತಾಲ್ಲೂಕಿನ ಹಂದನಕೆರೆಯಲ್ಲಿ ನಡೆದಿದೆ.
    ಕಳೆದ ಒಂದು ವರ್ಷದಿಂದ ದೇವರ ಬಸವ ಪುಂಡಾಟ ಪ್ರಾರಂಭಿಸಿದೆ. ಕಳೆದ 2 ತಿಂಗಳಿಂದ ಬಸವ ವಾಘ್ರವಾಗುತ್ತಿದೆ.ದೇವರ ಬಸವ ಕಳೆದಚ 2 ತಿಂಗಳ ಹಿಂದೆ ಮಹಿಳೆಯೊಬ್ಬರನ್ನು ತಿವಿದು ಸಾಯಿಸಿದೆ.ಕಳೆದ ವಾರ ಮತ್ತೋರ್ವಚ ಮಹಿಳೆ ಗೂಳಿ ದಾಳಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ.ಊರಿನ ಸಾಕು ದನಗಳು,ವಾಹನಗಳು ಹಾಗೂ ಜನರ ಮೇಲೆ ನಿರಂತರ ದಾಳಿ ನಡೆಸುತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
  ಗ್ರಾಮಸ್ಥ ಸಿದ್ದಣ್ಣ ಮಾತನಾಡಿ,ಊರಿನಲ್ಲಿ ಈಗಾಗಲೆ ರೇವಣಸಿದ್ಧೇಶ್ವರ ಮಠಕ್ಕೆ 4 ದೇವರ ಬಸವಗಳು ಇವೆ.ಅದರಲ್ಲಿ 4 ವರ್ಷ ಪ್ರಾಯದ ಬಸವ ಹಾಗೂ 1 ಬಸವಿ ಜನರಿಗೆ ತೊಂದರೆ ನೀಡುತ್ತಿವೆ.ನಗಾರಿ ಬಸವನ್ನು ಹೊರತುಪಡಿಸಿ ಉಳಿದ 3 ಬಸವಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
   ಚಿಕ್ಕಂದಿನಿಂದಲೂ  ಬಸವ ತನ್ನ ಪರಾಕ್ರಮವನ್ನು  ತೋರಿಸುತ್ತಿತ್ತು. ಊರಿನವರು ಬಸವ ಸಣ್ಣದು ಎಂದು ಗಮನ ಹರಿಸಿರಲಿಲ್ಲ, ಬಸವ ಈಗ ಆಳೆತ್ತರಕ್ಕೆ ಬೆಳೆದು ಕಟ್ಟುಮಸ್ತಾದ ದೇಹವನ್ನು ಹೊಂದಿದೆ. ಸದರಿ ಬಸವ ಹಳ್ಳಿಕಾರ್ ಜಾತಿಗೆ ಸೇರಿದೆ.ಬಸವನನ್ನು ಹೆಸರುಘಟ್ಟದ ವೀರ್ಯ ಸಂಗ್ರಹ ಕೇಂದ್ರದ ವಶಕ್ಕೆ ಪಡೆಯಬೇಕು.ಆಮೂಲಕ ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಸಂವರ್ಧನೆಗೆ ಸಾಧ್ಯವಾಗುತ್ತದೆ ಎಂದರು.
ಹಳೆ ಸಂಪ್ರದಾಯದಂತೆ ನಗಾರಿ ಬಡೆಯಲು ಬಸವನನ್ನು ಬೆಳೆಸಿ ದೇವಸ್ಥಾನಕ್ಕೆ ಬಿಟ್ಟಿದ್ದೆವು. ಆದರೆ ಈ ಬಸವ ಮನುಷ್ಯರ ಮೇಲೆ ತನ್ನ ಶಕ್ತಿಯನ್ನು ಪ್ರದಶರ್ಿಸುತ್ತಿದೆ. ರಾಮಕ್ಕ ಎಂಬುವರು ಬಸವನ ದಾಳಿಗೆ ಬಲಿಯಾಗಿದ್ದಾರೆ. ಹಲರನ್ನು ತಿವಿದು ಗಂಭೀರವಾಗಿ ಗಾಯಗೊಳಿಸಿದೆ. ರೋಸಿ ಹೋಗಿ ಬಸವನನ್ನು ಗ್ರಾಮಸ್ಥರೆಲ್ಲ ಸೇರಿ ಕಟ್ಟಿಹಾಕಿದ್ದೇವೆ ಎಂದರು.
ಗ್ರಾಮಸ್ಥ ಪರಮೇಶ್ ಮಾತನಾಡಿ, ಎತ್ತಿನ ಬಂಡಿಯಲ್ಲಿ ಕುಟುಂಬ ಸಮೇತ ತೆರಳುತ್ತಿದ್ದ ವೇಳೆ ಬಸವ ಏಕಾಏಕಿ ಬಂಡಿಗೆ ಕಟ್ಟಿದ್ದ ಎತ್ತುಗಳ ಮೇಲೆ ದಾಳಿ ಮಾಡಿತು. ಗಾಡಿಯನ್ನು ಕೆಡವಿತು,. ಇದರಿಂದ ಗಾಡಿಯಲ್ಲಿದ್ದ ಎಲ್ಲರೂ ಕೆಳಕ್ಕೆ ಬಿದ್ದೆವು, ನಮ್ಮ ಸಂಬಂಧಿಕರೊಬ್ಬರ ಮೇಲೆ ಗಾಡಿಯ ಚಕ್ರ ಹರಿದು ಗಂಭೀರ ಗಾಯಗಳಾದವು.  ಈ ಘಟನೆಗಳು ಬಸವನಿಂದಾಗಿ ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ ಎಂದರು.
ಗ್ರಾಮಸ್ಥೆ ನಂಜಮ್ಮ ಮಾತನಾಡಿ, ಬಸವನ ಉಪಟಳ ತಾಳಲಾರದೆ ಬಸವ ಸಂಚರಿಸುವ ರಸ್ತೆಯಲ್ಲಿ ನಡೆದಾಡಲು ಭಯಪಡುವಂತಾಗಿದೆ.ಮನೆ ಮುಂದೆ ನಿಲ್ಲಿಸಿದ್ದ ಗಾಡಿಯನ್ನು ಜಖಂಗೊಳಿಸಿದೆ.ಸೋಮವಾರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ತುಳಿದು ಜಖಂಗೊಳಿಸಿದೆ.


ಎಂ.ಎಚ್.ಕಾವಲ್ ಗ್ರಾಮಸ್ಥರು ಕುಡಿಯುವ ನೀರಿಗೆ ಒತ್ತಾಯಿಸಿ ತಾ.ಪಂ. ಕಛೇರಿ ಮುಂದೆ ಪ್ರತಿಭಟನೆ.
ಚಿಕ್ಕನಾಯಕನಹಳ್ಳಿ11: ತಾಲೂಕಿನ ಮರಳುಹಳ್ಳದ ಕಾವಲ್ ಗ್ರಾಮದ ಜನ ಕುಡಿಯುವ ನೀರಿಗಾಗಿ ಒತ್ತಾಯಿಸಿ ತಾ.ಪಂ.ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.  
 ಮುದ್ದೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ  ಎಂ,ಹೆಚ್.ಕಾವಲ್ ಕಾಲೋನಿಯ ಜನ ತಾಲ್ಲೂಕು ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಸಿ ಸುಮಾರು 30ಮನೆಗಳಿರುವಂತಹ ಕಾಲೋನಿಯಲ್ಲಿ ಒಂದು ಬೋರ್ವೆಲ್ ಇದ್ದು,  ಅದರಲ್ಲಿ ನೀರು ಬರುವುದು ನಿಂತುಹೋಗಿ ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ  ಜನರು  ತೀವ್ರವಾಗಿ  ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದೇವೆ  ಎಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ  ಪಂಚಾಯಿತಿ ಸದಸ್ಯೆ ಯಶೋದಮ್ಮ ಮಲ್ಲೇಶಯ್ಯ ಮಾತನಾಡಿ ಪಂಚಾಯಿತಿಯಿಂದ ಬೋರ್ವೆಲ್ಗೆ ಪಂಪು ಮೋಟಾರ್ ಆಳವಡಿಸಿ ಪೈಪ್ಲೈನ್ ಕಾರ್ಯವೆಲ್ಲ ಮುಗಿದಿದ್ದು ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ,  ಇಂದು ಭೇಟಿ ಮಾಡಿ ಒತ್ತಾಯಿಸಿದ್ದು ಇನ್ನು ಎರಡು ದಿನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಲೋನಿಯ ಜಯಮ್ಮ ಮಾತನಾಡಿ,  ಬೋರ್ವೆಲ್ನಲ್ಲಿ ನೀರು ಬರದೇ ನಿಂತುಹೋಗಿದ್ದು ಸುಮಾರು ಒಂದು ತಿಂಗಳಿಂದ ಕೈಪಂಪಿನಲ್ಲೇ ನೀರನ್ನು ಪಡೆಯುತ್ತಿದ್ದು ಅದರಲ್ಲೂ ಸಹ ನೀರು ಕಡಿಮೆಯಾಗಿದೆ,  ಈ ಬಗ್ಗೆ ಪಂಚಾಯಿತಿಯವರಿಗೆ ತಿಳಿಸಿದ್ದು ಅವರು ಒಂದು  ವರ್ಷದ ಹಿಂದೆಯೇ ಬೋರ್ವೆಲ್ ಕೊರೆದಿದ್ದು ಅದರಲ್ಲಿ ನೀರು ಬಂದಿತ್ತು,  ಆದಕ್ಕೆ ಪಂಚಾಯಿತಿಯಿಂದ ಮೋಟಾರ್ ಪಂಪು ಎಲ್ಲವನ್ನು ಆಳವಡಿಸಿದ್ದರೂ,  ವಿದ್ಯುತ್ಸಂಪರ್ಕ ಕಲ್ಪಿಸದೇ ಇದ್ದು ನೀರಿನ ಸಮಸ್ಯೆ ಉಂಟಾಗಿದೆ ಆದ್ದರಿಂದ ಕೂಡಲೇ ಸಂಬಂಧಪಟ್ಟ ಬೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡಿ,  ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗೌರಮ್ಮ ಮಾತನಾಡಿ,  ನಮ್ಮ ಜನಪ್ರತಿನಿಧಿಗಳು ನಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ,  ಸಾಮಾನ್ಯಜನರಿಗೆ ಮೂಲಭೂತ ಸವಲತ್ತುಗಳನ್ನು ನೀಡುವಲ್ಲಿ ಪಂಚಾಯಿತಿ ಸದಸ್ಯರು ವಿಫಲರಾಗಿದ್ದಾರೆ,  ಕೇವಲ ಬೋರ್ವೆಲ್ ಕೊರೆದು ಪಂಪು ಮೋಟಾರ್ ಆಳವಡಿಸಿ ತಮ್ಮ ಕೆಲಸವಾಯಿತು ಎಂದು ಕೈಕಟ್ಟಿಕುಳಿತಿದ್ದಾರೆ,  ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಕಾಲೋನಿಯ ಜಗದೀಶ್ ಮಾತನಾಡಿ,  ನಮ್ಮ ಕಾಲೋನಿಯಲ್ಲಿ ಶುದ್ದನೀರಿನ ಘಟಕವನ್ನು ಪ್ರಾರಂಭಿಸಲು  ಜಿಪಿಎಸ್ ಮಾಡಿ,  ಸುಮಾರು ತಿಂಗಳುಗಳೇ ಕಳೆದರೂ ಯಾವುದೇ ಕ್ರಮ ಕೈ ಗೊಂಡಿಲ್ಲ ತ್ವರಿತವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಶುದ್ದನೀರಿನ ಘಟಕವನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಲೋನಿಯ ಇಂದ್ರಮ್ಮ, ಮಂಜುಳ, ಉಮೇಶ, ಜಗದೀಶ್, ಶಂಕರಯ್ಯ, ಮಾಜಿ ಸದಸ್ಯರಾದ ವೀರಭದ್ರಯ್ಯ, ಕೆಂಚಪ್ಪ, ಹಾಗೂ ಸದಸ್ಯ ಮಂಜುನಾಥ್ ಹಾಜರಿದ್ದರು.

ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿ ಚುನಾವಣೆ 
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ 3 ಜನ ಗ್ರಾಮ ಪಂಚಾಯಿತಿ ಸದಸ್ಯರು  ನಿಧನ ಹೊಂದಿದ್ದು ಆ ಸ್ಥಾನಗಳಿಗೆ  ಏಪ್ರಿಲ್ 17ರಂದು ಚುನಾವಣೆಯು ನಡೆಯಲಿದೆ.
ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದ್ರೆಹಳ್ಳಿ, ಗ್ರಾಮಪಂಚಾಯಿತಿ ಅನುಸೂಚಿತ ಜಾತಿ ಮಹಿಳೆಗೆ ಮೀಸಲಿದ್ದು 4 ಜನ ಅಭ್ಯಥರ್ಿಗಳು ಅಂತಿಮ ಕಣದಲ್ಲಿ, ಎಸ್.ಹೆಚ್ ಜೈ.ಗೀತಾ, ರುಕ್ಮಿಣಿಬಾಯಿ, ಸಿ.ಶೋಭ, ಹಾಗೂ ಸುನೀತಾ, ಕಣದಲ್ಲಿದ್ದಾರೆ.
 ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರ ಸಾಮಾನ್ಯ ಮಹಿಳೆಗೆ ಮೀಸಲಿದ್ದು ಅಂತಿಮ ಕಣದಲ್ಲಿ ಆರ್.ಪಂಕಜ, ಹಾಗೂ ಬಿ.ಎಮ್.ವೀಣಮ್ಮ ಸ್ಪದರ್ಿಸಿದ್ದಾರೆ.
ತೀರ್ಥಪುರ ಗ್ರಾಮ ಪಂಚಾಯಿತಿಯ ದೊಡ್ಡರಾಂಪುರ, ಅನುಸೂಚಿತ ಪಂಗಡ ಮಹಿಳೆಗೆ ಮೀಸಲಿದ್ದು ಅಂತಿಮ ಕಣದಲ್ಲಿ ಕರಿಯಮ್ಮ, ಗೌರಮ್ಮ, ನಾಗಮ್ಮ, ಕಣದಲ್ಲಿದ್ದಾರೆ.


ಚಿಕ್ಕನಾಯಕನಹಳ್ಳಿಯಲ್ಲಿ ಇಂದು ದೇವರದಾಸಿಮಯ್ಯ ಜಯಂತಿ

ಚಿಕ್ಕನಾಯಕನಹಳ್ಳಿ,ಏ.10:  ತಾಲ್ಲೂಕು ಆಡಳಿತ, ತಾಲ್ಲೂಕು ದೇವಾಂಗ ಸಂಘ ಹಾಗೂ ಇತರೆ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಇದೇ 12(ಇಂದು) ರಂದು ಆಚರಿಸಲಾಗುತ್ತಿದೆ.
ಪಟ್ಟಣದ ಪುರಸಭಾ ಕಚೇರಿಯ ಮುಂಭಾಗದಿಂದ ದೇವರ ದಾಸಿಮಯ್ಯನವರ ಭಾವಚಿತ್ರ ಮೇರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. 
ನಂತರ ಮಧ್ಯ್ಯಾಹ್ನ 12-30ಕ್ಕೆ ಕನ್ನಡ ಸಂಘದ ವೇಧಿಕೆಯಲ್ಲಿ ಸಮಾರಂಭ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದಾರೆ,  ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ನೆರೆವೆರಿಸಲಿದ್ದು ದೇವರದಾಸಿಮಯ್ಯನವರ ಭಾವಚಿತ್ರವನ್ನು ಪುರಸಭಾ ಉಪಾಧ್ಯ್ಯಕ್ಷೆ ಬಿ.ಇಂದಿರಾ ನೆರೆವೆರಿಸುವರು, ತುಮಕೂರು ಸ.ಪ್ರ.ದಜರ್ೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಶಿವಲಿಂಗಮೂತರ್ಿ ಉಪನ್ಯಾಸ ನೀಡಲಿದ್ದು ಈ ಸಂದರ್ಭದಲ್ಲಿ ಸಾಧಕರಾದ ನೇಕಾರ ಹೊಸಹಳ್ಳಿ ರಂಗನಾಥ್, ಮೀನುಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿದರ್ೇಶಕ ಸಿ.ಎಸ್.ನಾಗರಾಜಯ್ಯ, ಹುಳಿಯಾರಿನ ಅನಂತಕುಮಾರ್, ನೇಕಾರ ಎಸ್.ಸಿದ್ದಪ್ಪ, ಲಕ್ಷ್ಮೀದೇವಯ್ಯ, ಅಕ್ಷರ ದಾಸೋಹದ ನಿದರ್ೇಶಕ ತಿಮ್ಮರಾಜು ಇವರುಗಳನ್ನು ಸನ್ಮಾನಿಸಲಾಗುವುದು.
ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಜಯಂತಿ
ಚಿಕ್ಕನಾಯಕನಹಳ್ಳಿ11: ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಹಾಗೂ ಇತರೆ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಜಯಂತಿಯನ್ನು ಇದೇ 14ರಂದು  ಆಚರಿಸಲಾಗುತ್ತಿದೆ.
ಗುರುವಾರ ಬೆಳಗ್ಗೆ 9-30ಕ್ಕೆ ತಾಲ್ಲೂಕು ಕಚೇರಿಯ ಮುಂಭಾಗದಿಂದ ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಭಾವಚಿತ್ರ ಮೇರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. 
ನಂತರ ಮದ್ಯಾಹ್ನ 12-00ಕ್ಕೆ ಕನ್ನಡ ಸಂಘದ ವೇಧಿಕೆಯಲ್ಲಿ ಸಮಾರಂಭ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ನೆರೆವೆರಿಸಲಿದ್ದು ಡಾ||ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರವನ್ನು ಜಿ.ಪಂ.ಸದಸ್ಯ ಎಸ್.ಟಿ.ಮಹಲಿಂಗಯ್ಯ, ನೆರೆವೆರಿಸುವರು, ಡಾ|ಬಾಬು ಜಗಜೀವನರಾಂ ರವರ ಭಾವಚಿತ್ರವನ್ನು ಪುರಸಭಾ ಉಪಾದ್ಯಕ್ಷೆ ಬಿ.ಇಂದಿರಾ ನೆರೆವೆರಿಸುವರು, ಮೈಸೂರಿನ ಮಹಾರಾಜ ಕಾಲೇಜಿನ ವಾಣಿಜ್ಯ ಶಾತ್ಸ್ರದ ಮುಖ್ಯಸ್ಥ ಡಾ|| ಆರ್ ತಿಮ್ಮರಾಯಪ್ಪ ಉಪನ್ಯಾಸ ನೀಡಲಿದ್ದು ಈ ಸಂದರ್ಭದಲ್ಲಿ ವಿದ್ಯಾಥರ್ಿನಿಯರಾದ ಎಂ.ಬಿ.ದಿವ್ಯ, ಎಲ್.ಹೇಮಾ, ದಸೂಡಿಯ ಪ್ರಗತಿಪರ ರೈತ ಮಹಿಳೆ ಅರ್ಚನಾ , ಹನುಮಂತಪುರದ ಅಂಗನವಾಡಿ ಕಾರ್ಯಕತರ್ೆ ಎನ್.ಭಾಗ್ಯಮ್ಮ, ಕಲಾವಿದ ಸಿ.ಎಸ್.ಚಂದ್ರಯ್ಯ, ಪತ್ರಿಕಾ ಪ್ರತಿನಿಧಿ ಸಿ.ಹೆಚ್.ಚಿದಾನಂದ್ ಇವರುಗಳನ್ನು ಸನ್ಮಾನಿಸಲಾಗುವುದು.Saturday, April 9, 2016


ಯುಗಾದಿ ಸಂಭ್ರಮಕ್ಕೆ ಎಣ್ಣೆಸ್ನಾನ ಮಾಡಿಕೊಂಡು ಹಬ್ಬ ಆಚರಣೆ
ಚಿಕ್ಕನಾಯಕನಹಳ್ಳಿ,ಏ.09 : ಯುಗಾದಿ ಹೊಸ ವರ್ಷದ ಹಬ್ಬವನ್ನು ಹಿರಿಯರು, ಮಕ್ಕಳು ಎಣ್ಣೆಸ್ನಾನ ಮಾಡಿಕೊಂಡು ಮನೆಯನ್ನು  ಮಾವಿನ ತೋರಣ ಹಾಗೂ ಬೇವಿನ ಹೂವಿಗಳನ್ನು ಮನೆಯಲ್ಲಿ ಸಿಂಗರಿಸಿ, ಗೋವಿಗೆ ನವಗ್ರಹದಾನ್ಯವನ್ನು ನೀಡಿ ಯುಗಾದಿ ಹಬ್ಬವನ್ನು ಸಂತೋಷದಿಂದ ಆಚರಿಸಿದರು.
ಬೇವು ಬೆಲ್ಲ ಹಂಚಿ ನೆರೆಹೊರೆಯ ಸಾಮರಸ್ಯವನ್ನು ವೃದ್ದಿಕೊಳ್ಳಿಸುವುದು ಯುಗಾದಿ ಹಬ್ಬದ ವಾಡಿಕೆ, ಅದೇ ರೀತಿ ಜನರು ತಮ್ಮ ತಮ್ಮ ಇಷ್ಟದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ಮುಂಜಾನೆಯೇ ಎದ್ದು, ಹಬ್ಬಕ್ಕೆ ಬೇಕಾದಂತಹ ತಯಾರಿ ಮಾಡಿಕೊಂಡ ಜನತೆ ಹೊಸವರ್ಷ ಹಾಗೂ ಯುಗಾದಿಯ ಸಂಭ್ರಮವನ್ನು ನೆರೆಹೊರೆಯವರೊಂದಿಗೆ ಶುಭಾಷಯ ಹೇಳುವ ಮೂಲಕ ಹಂಚಿಕೊಂಡರು.
ಎಣ್ಣೆಸ್ನಾನ : ಯುಗಾದಿಯಂದು ಎಣ್ಣೆಸ್ನಾನ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ವಿಶೇಷ, ಅದರಂತೆ ಚಿಕ್ಕಮಕ್ಕಳಿನಿಂದ , ಯುವಕರು, ಹಿರಿಯರವರೆಗೆ ಪ್ರತಿಯೊಬ್ಬರೂ ಮೈಗೆ ಹರಳೆಣ್ಣೆಯನ್ನು ಹಚ್ಚಿಕೊಂಡಿದ್ದರು, ಚಿಕ್ಕಮಕ್ಕಳು ಎಣ್ಣೆ ಹಚ್ಚಿಕೊಂಡು ಜೂಟಾಟ, ಚೆಂಡಾಟ ದಂತಹ ಆಟಗಳನ್ನು ಆಡಿದರೆ ಯುವಕರು ಕಬ್ಬಡ್ಡಿ, ಥ್ರೋಬಾಲ್, ದೇಹಪ್ರದರ್ಶನ ದಂತಹ ಆಟಗಳನ್ನು ಆಡುತ್ತಿದ್ದದ್ದು ವಿಶೇಷವಾಗಿತ್ತು.
ಮಹಿಳೆಯರು ಎಂದಿನಂತೆ ತಮ್ಮ ತಮ್ಮ ಮನೆಗಳಲ್ಲಿ ಯುಗಾದಿ ಹಬ್ಬಕ್ಕೆ ಹೋಳಿಗೆ ಊಟವನ್ನು ಸಿದ್ದಪಡಿಸಿ ಹಬ್ಬದ ಹೆಸರಿನಲ್ಲಿ ಸಿಹಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದದ್ದು ಎಲ್ಲೆಡೆಯೂ ಕಂಡುಬಂದಿತು. 

ಗೋಪಾಲನಹಳ್ಳಿಯಲ್ಲಿ ಹಾರಕ ಸಿರಿಧಾನ್ಯ ಬೆಳೆಯ ಬಗ್ಗೆ ಸಚಿವರ ಮಾಹಿತಿ
ಚಿಕ್ಕನಾಯಕನಹಳ್ಳಿ,ಏ.09 : ಗೋಪಾಲನಹಳ್ಳಿಯ ಹಾರಕ ಬೆಳೆಗಾರರ ಸಂಘದ ಸಿರಿಧಾನ್ಯ ಸಂಸ್ಕರಣಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಸಿ.ಬಿ.ಸುರೇಶ್ಬಾಬು ಭೇಟಿ ನೀಡಿ ಸಿರಿಧಾನ್ಯಗಳಾದ ಹಾರಕ, ನವಣೆ, ಸಾವೆ, ಕೊರಲೆ ಬೀಜದಿಂದ ಅಕ್ಕಿ ಬೇರ್ಪಡಿಸುವ ಯಂತ್ರ ಮತ್ತು ಇನ್ಸಿಂಪ್ ಯೋಜನೆಯಿಂದ ಕೃಷಿ ಇಲಾಖೆ ಶೇ.100ರ ರಿಯಾಯಿತಿಯಲ್ಲಿ ವಿತರಿಸುವ ಹಿಟ್ಟುಮಾಡುವ ರಾಗಿಶುದ್ದೀಖರಿಸುವ ತೂಕದ ಸೀಲಿಂಗ್ ಮಿಷನ್ಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಕರ್ಾರದ ಸವಲತ್ತುಗಳನ್ನು ಹಾರಕ ಬೆಳೆಗಾರರ ಸಂಘ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದಕ್ಕೆ ತೃಪ್ತಿವ್ಯಕ್ತಪಡಿಸಿ, ಬಹಳ ದಿನಗಳಿಂದ ಈ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಬೇಕೆಂದು ಕೊಂಡಿದ್ದೆ ಎಂದರಲ್ಲದೆ ಸಂಘದ ಸದಸ್ಯರುಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಮುದ್ದಹನುಮೇಗೌಡ ಮಾತನಾಡಿ, ಸಿರಿಧಾನ್ಯಗಳಿಂದಲೇ ತಯಾರಿಸಿದ ಹಾರಕದ ಮೊಸರು, ಹಾರಕದ ಟೊಮಟೊಬಾತ್, ನವಣೆಪಾಯಸ ಸಂಪ್ರದಾಯಕ ಬೆಳೆಗಳ ಆಹಾರ ಆರೋಗ್ಯಕ್ಕೂ ತುಂಬ ಸಹಕಾರಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಸಿರಿಧಾನ್ಯಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದ್ದು ನಗರಗಳಲ್ಲಿ ಸಿರಿಧಾನ್ಯಗಳ ಮಳಿಗೆಗಳ ಸ್ಥಾಪನೆಯಿಂದ ಈ ಆಹಾರಗಳನ್ನು ಬಳಸುವವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು. ಗೋಪಾಲನಹಳ್ಳಿಯಲ್ಲಿ ಕಳೆದ 5-6ವರ್ಷಗಳಿಂದ ಸಿರಿಧಾನ್ಯಗಳ ಉಳಿವಿಗಾಗಿ ಯುವಕರ ಸಂಘ ರಚಿಸಿ ಹಾರಕ ಬೆಳೆಯನ್ನು ಪುನಃ ಮರಳಿ ಉಳಿಸಿದ ಯುವಕರ ಸಂಘದವರನ್ನು ಪ್ರಶಂಸಿದರು.
ಹಾರಕ ಬೆಳೆಗಳಾದ ನವಣೆ, ಸಾವೆ, ಕೊರಲೆ, ಅಕ್ಕಿಯನ್ನು ಕೊಂಡೊಯ್ದದ್ದು ವಿಶೇವಾಗಿತ್ತು, ಆಗಮಿಸಿದ್ದ ಗಣ್ಯರಿಗೆ ಸಿರಿಧಾನ್ಯಗಳಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.  
ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ.ಸದಸ್ಯ ಕಲ್ಲೇಶ್, ನಾರಾಯಣ್, ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. ಗೋಪಾಲನಹಳ್ಳಿ ಹಾರಕ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್, ಸದಸ್ಯರಾದ ಜಿ.ಪಿ.ಮಂಜುನಾಥ್, ಜಿ.ಎಸ್.ನಿರಂಜನ್, ಸುರೇಶ್, ರಂಗಯ್ಯ, ಬಸವರಾಜು, ಪ್ರದೀಪ್, ಜಿ.ಎಸ್.ರಘು ಮತ್ತಿತರರು ಉಪಸ್ಥಿತರಿದ್ದರು.

ಮಾಕುವಳ್ಳಿಯ ಎಂ.ಎನ್.ಕಲ್ಲಯ್ಯ ನಿಧನ
ಚಿಕ್ಕನಾಯಕನಹಳ್ಳಿ,ಏ.9: ತಾಲೂಕಿನ ಶೆಟ್ಟೀಕೆರೆಯ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಮಾಕುವಳ್ಳಿ ಎಂ.ಎನ್.ಕಲ್ಲಯ್ಯ(80) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಾಕುವಳ್ಳಿ ಗ್ರಾಮದ ಕರಿಯಮ್ಮ ದೇವಾಲಯದ ಗುಡಿಗೌಡರಾಗಿದ್ದ ಇವರು, ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮಗಳ ಮನೆಯಿದ್ದ ಎಳ್ಳೆನಹಳ್ಳಿಯಿಂದ ತಮ್ಮ ಸ್ವಗ್ರಾಮವಾದ ಮಾಕುವಳ್ಳಿಗೆ ಬರುವ ಮಾರ್ಗ ಮಧ್ಯೆ ದ್ವಿಚಕ್ರವಾಹನದಲ್ಲಿ ಬರುವಾಗ ಮರದಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಇವರು ಒಬ್ಬ ಮಗಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಗ್ರಾಮಸ್ಥರ ಆಗ್ರಹ
ಚಿಕ್ಕನಾಯಕನಹಳ್ಳಿ,ಏ.9: ತಾಲ್ಲೂಕಿನ ನವಿಲೆ ಹಾಗೂ ಮೇಲನಹಳ್ಳಿ ಕೆರೆಗಳಲ್ಲಿ ಮರಳು ಲೂಟಿಯಾಗುತ್ತಿದೆ. ಅಕ್ರಮವಾಗಿ ಮರಳು ಸಾಗಿಸುತ್ತಿರುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೇಲನಹಳ್ಳಿ ಮತ್ತು ಮಾರಸಂದ್ರ ಗ್ರಾಮಸ್ಥರು ತಾಲ್ಲೂಕು ಕಛೇರಿ ಎದುರು ಪ್ರತಿಭಟಿಸಿದರು.
 ಈ ಸಂದರ್ಭದಲ್ಲಿ  ಗ್ರಾಮಸ್ಥ ಎಂ.ರಾಜಶೇಖರ್ ಮಾತನಾಡಿ, ಸುತ್ತ ಮುತ್ತಲಿನ ಹಳ್ಳಿಗಳ ರೈತರನ್ನೇ ಬಳಸಿಕೊಂಡು ಎತ್ತಿನ ಗಾಡಿಗಳಲ್ಲಿ ಕೆರೆಯಿಂದ ಮರಳನ್ನು ಹೊರಗಡೆ ಸಾಗಿಸಲಾಗುತ್ತಿದೆ, .ತೋಟ, ಹೊಲಗಳಲ್ಲಿ ಮರಳನ್ನು ಸಂಗ್ರಹಿಸಲಾಗುತ್ತಿದೆ. ರಾತ್ರಿ ವೇಳೆ ಟ್ರಾಕ್ಟರ್ಗಳ ಮೂಲಕ ಸಂಗ್ರಹವಾದ ಮರಳನ್ನು ಪಟ್ಟಣಗಳಿಗೆ ಸಾಗಿಸಲಾಗುತ್ತಿದೆ. ಈ ದಂಧೆ ನಿರಂತರವಾಗಿ ಕಳೆದ ಎರಡು ತಿಂಗಳಿಂದಲೂ ನಡೆಯುತ್ತಿದೆ.ಆದರೂ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಪೊಲೀಸರಾಗಲಿ ಮರಳು ಲೂಟಿಯನ್ನು ತಡೆಯಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
  ಗ್ರಾಮಸ್ಥರಾದ ಹರೀಶ್ ಹಾಗೂ ರಮೇಶ್ ಮಾತನಾಡಿ,ಕೆರೆಗಳಲ್ಲಿ ಮರಳು ಬಾಚುತ್ತಿರುವುದರಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ.ಪ್ರತೀ ದಿನ 50ಕ್ಕೂ ಹೆಚ್ಚು ಎತ್ತಿನ ಗಾಡಿ ಮರಳು ಸಾಗಿಸುತ್ತಿವೆ ದಿನವೊಂದಕ್ಕೆ ಸುಮಾರು 800 ಎತ್ತಿನಗಾಡಿ ಮರಳು ಕೆರೆಯಿಂದ ಹೊರಕ್ಕೆ ಸಾಗಿಸಲ್ಪಡುತ್ತಿವೆ, ಅಲ್ಲಿಂದ ಟ್ರ್ಯಾಕ್ಟರ್ಗಳಲ್ಲಿ ಪಟ್ಟಣಗಳಿಗೆ ಹೊಡೆಯಲಾಗುತ್ತಿದೆ ಎಂದ ಅವರು, ಇದರಿಂದ ಕಾರ್ಯನಿರ್ವಹಿಸುತ್ತಿದ್ದ ಕೊಳವೆಬಾವಿಗಳು ಏಕಾಏಕಿ  ಬತ್ತುತ್ತಿವೆ. ತೆಂಗು,ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತಿವೆ ಎಂದರು.
  ಮರಳು ತುಂಬಲು ಅಮಾಯಕ ರೈತರು ಹಾಗೂ ಕೂಲಿ ಕಾಮರ್ಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಮರಳು ದಿಬ್ಬಕುಸಿದು ಅಮಾಯಕ ಕಾಮರ್ಿಕರು ಬಲಿಯಾಗಿರುವ ಉದಾಹರಣೆಗಳು ಇವೆ. ತಕ್ಷಣ ಮರಳು ಲೂಟಿ ನಿಲ್ಲಿಸಬೇಕು ಎಂದು ಮನವಿ ಸಲ್ಲಿಸಿದರು.
 ತಹಶಿಲ್ದಾರ್ ಆರ್.ಗಂಗೇಶ್ ಮನವಿ ಸ್ವೀಕರಿಸಿ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ಪರಿಶಿಲಿಸಲಾಗುವುದು .ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು : ಎನ್.ಪಿ.ಕುಮಾರಸ್ವಾಮಿ
ಚಿಕ್ಕನಾಹಯಕನಹಳ್ಳಿ,ಏ.9: ಶಿಕ್ಷಣ ಮಕ್ಕಳ ಹಕ್ಕು ಅದನ್ನು ಕಿತ್ತುಕೊಳ್ಳುವ ಹಕ್ಕು ಹುಟ್ಟಿಸಿದ ತಂದೆ ತಾಯಿಗೂ ಇಲ್ಲ ಎಂದು ಹಂದನಕೆರೆ ಹೋಬಳಿ ಶಿಕ್ಷಣ ಸಂಯೋಜಕ ಎನ್.ಪಿ.ಕುಮಾರಸ್ವಾಮಿ ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ರಂಗಾಪುರ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,  ಪೋಷಕರು ತಮ್ಮ, ಅಜ್ಞಾನದ ಕಾರಣಕ್ಕೋ,ಆಥರ್ಿಕ ಸಂಕಷ್ಟದ ಕಾರಣಕ್ಕೋ ಅಥವಾ ಇನ್ನಿತರೆ ಸಮಸ್ಯೆಗಳಿಂದಲೋ ಮಕ್ಕಳನ್ನು ಶಾಲೆ ಬಿಡಿಸುವ ಪ್ರಕರಣಗಳು ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಇದೆ. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಅದನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದರು.
  ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ, ಮಕ್ಕಳು ಅರ್ಧಕ್ಕೆ ಶಾಲೆ ಬಿಡಬಾರದು ಎಂಬ ಕಾರಣಕ್ಕೆ ಅನೇಕ ಸೌಲಭ್ಯ ನೀಡಿದೆ.ಸೌಲಭ್ಯ ಬಳಸಿಕೊಂಡು ಗ್ರಾಮಾಂತರ ಪ್ರದೇಶದ ವಿದ್ಯಾಥರ್ಿಗಳು ದೊಡ್ಡ ಸ್ಥಾನಕ್ಕೆ ಏರಬೇಕು ಎಂದರು.
  ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ,ಸಕರ್ಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಖಾಸಗಿ ಶಾಳೆ ಶಿಕ್ಷಕರುಗಳಿಗಿಂತ ಉನ್ನತ ಹಾಗೂ ಗುಣಮಟ್ಟದ ತರಬೇತಿ ಹೊಂದಿರುತ್ತಾರೆ. ಸಕರ್ಾರಿ ಶಾಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ಸಿಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಳಗುಲಿ ಗ್ರಾಪಂ ಅಧ್ಯಕ್ಷ ಮಧುಚಂದ್ರ, ಸದಸ್ಯೆ ರಂಗಮ್ಮ, ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಮಾಜಿ ಸದಸ್ಯ ಚೌಡಯ್ಯ, ಮುಖಂಡರಾದ ಕರಿಯಪ್ಪ, ಆರ್.ಬಿ.ರಂಗಧಾಮಯ್ಯ,ಆರ.ಎಲ್.ಶಾಂತರಾಜು,ಶ್ರೀಕಂಠಯ್ಯ, ಮುಖ್ಯೋಪಾಧ್ಯಾಯ ಶಿವಣ್ಣ ಮುಂತಾದವರು ಹಾಜರಿದ್ದರು.

ಬುದ್ದಿಗಿಂತ ಹೃದಯವಂತಿಕೆ, ಓದಿಗಿಂತ ಅನುಭವ ದೊಡ್ಡದು
  ಚಿಕ್ಕನಾಯಕನಹಳ್ಳಿ,ಏ.9: ಬುದ್ದಿಗಿಂತ ಹೃದಯವಂತಿಕೆ, ಓದಿಗಿಂತ ಅನುಭವ ಹಾಗೂ ವ್ಯಕ್ತಿಗಿಂತ ಸಮಾಜ ಯಾವಾಗಲೂ ದೊಡ್ಡದು ಎಂಬ ಸತ್ಯವನ್ನು ವಿದ್ಯಾಥರ್ಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿ ಹೇಳಿದರು.
ಈಚೆಗೆ ತಾಲ್ಲೂಕಿನ ಬಗ್ಗನಹಳ್ಳಿ ಗ್ರಾಮದಲ್ಲಿ ನವೋದಯ ಪ್ರಥಮದಜರ್ೆ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂಕುಚಿತ ಮನೋಭಾವನೆ ಹಾಗೂ ಯಾಂತ್ರಿಕತೆ ಬದುಕನ್ನು ಭಾವ ಶೂನ್ಯವಾಗಿಸಿವೆ.  ಭಾವನಾತ್ಮಕತೆ ಕೇವಲ ವ್ಯಕ್ತಿ ಹಾಗೂ ಮನೆಗೆ ಸೀಮಿತವಾಗಿದೆ. ಸುತ್ತಮುತ್ತಲ ಪರಿಸರ ಹಾಗೂ ಗ್ರಾಮವೂ ನಮ್ಮದೇ ಎಂಬ ಹೃದಯ ವೈಶಾಲ್ಯತೆ ಮರೆಯಾಗುತ್ತಿದೆ  ಎಂದರು.
  ಎನ್ಎಸ್ಎಸ್ ಶಿಬಿರಗಳು ವಿದ್ಯಾಥರ್ಿಗಳಿಗೆ ಅನುಭವ ಹಾಗೂ ಜನರಲ್ಲಿ ಅರಿವು ಮೂಡಿಸುವಂತಿರಬೇಕು. ಬೀದಿ, ಗ್ರಾಮ ಹಾಗೂ ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದೆಂದರೆ ಇತರರಿಗೆ ತೊಂದರೆಯಾಗದಂತೆ ಬಾಳುವುದೇ ಆಗಿದೆ. ಪ್ರಗತಿಯ ತೇರು ಸ್ವಚ್ಛತೆ ಹಾಗೂ ಸೇವೆ ಎಂಬ ಗಾಲಿಗಳ ಮೇಲೆ ಚಲಿಸುವಂತದ್ದು ಎಂದರು. 
   ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಸಿ.ರವಿಕುಮಾರ್  ಐದು ದಿನಗಳ ಶಿಬಿರದ ಮಾಹಿತಿಯನ್ನು ಓದಿದರು.ಎನ್ಎಸ್ಎಸ್ ವಿದ್ಯಾಥರ್ಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಫೈರ್ ಕ್ಯಾಂಪ್ ನಡೆಸಲಾಯಿತು. ಶಿಬಿರಾಥರ್ಿಗಳು, ಗ್ರಾಮಸ್ಥರು ಖುಷಿಯಿಂದ ಪಾಲ್ಗೊಂಡರು. ನವೋದಯ ವಿದ್ಯಾಸಂಸ್ಥೆಯ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಕಾಲೇಜಿನ ಹಿರಿಯ ವಿದ್ಯಾಥರ್ಿ ಸಂಘದ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಗ್ರಾಮಪಂಚಾಯಿತಿ ಸದಸ್ಯ ಚಂದ್ರಶೇಖರ್, ಶಿಬಿರಾಧಿಕಾರಿ ಲೋಕೆಶ್, ಹಾಜರಿದ್ದರು.
Thursday, April 7, 2016


ಯಳನಡು ಸಿದ್ದರಾಮೇಶ್ವರ ಜಾತ್ರಾಮಹೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆ : 
ಚಿಕ್ಕನಾಯಕನಹಳ್ಳಿ,ಏ.07 : ಹನ್ನೆರಡು ವರ್ಷಗಳ ನಂತರ ನಡೆಯಲಿರುವ ಯಳನಡು ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನರ ಸೇರುತ್ತಾರೆ ಹಾಗೂ ಮುಖ್ಯಮಂತ್ರಿ ಬರುವ ನಿರೀಕ್ಷೆಯಿದ್ದು ಅಧಿಕಾರಿಗಳು ಈಗಿನಿಂದಲೇ ಸಿದ್ದರಾಗಿ, ಬರುವವರಿಗೆ ಬಸ್ನ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೇ 11 ರಿಂದ 22ರವರೆಗೆ ನಡೆಯಲಿರುವ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಹಲವು ವರ್ಷಗಳ ನಂತರ ನಡೆಯಲಿದೆ,  ಇದಕ್ಕಾಗಿ ಗ್ರಾಮಸ್ಥರೆಲ್ಲರೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿಸಲು ಮುಂದಾಗುತ್ತಿದ್ದಾರೆ ಅದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು ಹಾಗೂ ಜಾತ್ರೆಯಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರು ಸರಬರಾಜು ಮಾಡುವಂತೆ ಅಧಿಕಾರಿಗೆ ಸೂಚಿಸಿದರು. 
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಯಳನಡು ದೇವಸ್ಥಾನ ಬಳಿ ಹೈಮಾಸ್ಕ್ ದೀಪ ಅಳವಡಿಸುವಂತೆ ಹಾಗೂ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ, ನೀರಿನ ಸಮಸ್ಯೆ ಉಲ್ಭಣಿಸದಂತೆ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಗಂಗೇಶ್ ಮಾತನಾಡಿ, ಜಾತ್ರಾ ಮಹೋತ್ಸವಕ್ಕಾಗಿ ಸಿದ್ದತೆ ಮಾಡಿಕೊಳ್ಳಲು ಬೆಸ್ಕಾಂ, ಆಸ್ಪತ್ರೆ, ನೀರು ಸರಬರಾಜು ಹಾಗೂ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳ ಜೊತೆ ಚಚರ್ಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ, ಯಳನಡುಸಿದ್ದರಾಮೇಶ್ವರರ ರಥೋತ್ಸವ ಸಂಚರಿಸುವ ಭಾಗದಲ್ಲಿ ರಸ್ತೆ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸದಸ್ಯರಾದ ಕಲ್ಲೇಶ್, ನಾರಾಯಣ್, ಮಾಜಿ ಶಾಸಕ ಬಿ.ಲಕ್ಕಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಬಾಕ್ಸ್ ಕಾಲಂ-1
ತಾಲ್ಲೂಕಿನ ಹಂದನಕೆರೆ ಹೋಬಳಿ ದೊಡ್ಡೆಣ್ಣೆಗೆರೆ ಬಳಿಯ ಲಂಬಾಣಿ ಜನಾಂಗದ ಭೀಮಾಸತಿ ದೇವಸ್ಥಾನಕ್ಕೆ 10 ಎಕರೆ ಜಮೀನಿನ ಅವಶ್ಯಕತೆ ಇದೆ, ದೇವಸ್ಥಾನದ ಸಮಿತಿಯವರಿಗೆ ನೆರವು ನೀಡಿ ಎಂದು ತಹಶೀಲ್ದಾರ್ಗೆ ಸಚಿವರು ತಿಳಿಸಿದರು,  ಆಗೆಯೇ ತಹಶೀಲ್ದಾರರೇ,.. ಒಮ್ಮೆ ಭೀಮಾಸತಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ,  ಇದರಿಂದ ನಿಮಗೆ ಹೆಣ್ಣು ಮಕ್ಕಳಾಗುತ್ತವೆ ಎಂದು ಸಚಿವ ಟಿ.ಬಿ.ಜಯಚಂದ್ರ ಸಭೆಯಲ್ಲಿದ್ದ ತಹಶೀಲ್ದಾರ್ಗೆ ಹೇಳಿದರು, ಇದಕ್ಕೆ ಪ್ರತಿಯಾಗಿ ಸಂಸದ ಮುದ್ದಹನುಮೇಗೌಡ ಮಾತನಾಡಿ,  ಸಚಿವರೇ ಈಗಾಗಲೇ ನೀವೂ ಭೀಮಾಸತಿಗೆ ಪೂಜೆ ಸಲ್ಲಿಸಿದ್ದೀರಿ ಆದರೂ ಹೆಣ್ಣು ಮಕ್ಕಳು ನಿಮಗಾಗಿಲ್ಲ ಏಕೆ ಎಂದು ಸಚಿವರಿಗೆ ಟಾಂಗ್ ನೀಡಿದರು. ಈ ಸಂಭಾಷಣೆ ಸಭೆಯಲ್ಲಿದ್ದವರಲ್ಲಿ ನಗು ಉಕ್ಕಿಸಿತು.


ಯುಗಾದಿ ಹಬ್ಬದ ಹಿನ್ನೇಲೆಯಲ್ಲಿ ಬೇವಿನ ಹೂ ಹಾಗೂ ಮಾವಿನ ಎಲೆಗಾಗಿ ಮರವೇರಿದ ಜನರು
ಚಿಕ್ಕನಾಯಕನಹಳ್ಳಿ07: ನೂತನ ಸಂವತ್ಸರವಾದ ದುಮರ್ುಖಿಗೆ ಆಹ್ವಾನ ನೀಡುವ ಪ್ರಥಮ ಹಬ್ಬವಾದ ಯುಗಾದಿಯ ಮುನ್ನಾದಿನ ಜನರು ಮಾವಿನ ತೋರಣ ಹಾಗೂ ಬೇವಿನ ಹೂವಿಗಾಗಿ ತೋಟಗಳತ್ತ ಮುಖಮಾಡಿ ಮರವೇರಿದ್ದು ಸಾಮಾನ್ಯವಾಗಿತ್ತು.
ತಾಲ್ಲೂಕಿನ ಕಾರೇಹಳ್ಳಿ ಗೇಟ್ ಬಳಿ ಬೇವಿನ ಮರವನ್ನೇರಿ ಬೇವಿನ ಹೂವಿಗಾಗಿ ಜನರು ಮುಗಿಬಿದ್ದಿದ್ದ ದೃಶ್ಯ ಕಂಡುಬಂದಿತು,  ಈ ಬಾರಿ ಬೇವಿನ ಹೂ ಕಡಿಮೆಇದ್ದು ತಾಲ್ಲೂಕಿನ ಹಲವೆಡೆ ಜನ ಬೇವಿನ ಹೂಗಳನ್ನು ಸಂಗ್ರಹಿಸಲು ತೋಟ ರಸ್ತೆ ಬದಿ ಹಾಗೂ ಹೊಲಮಾಳಗಳಲ್ಲಿ ಸುತ್ತಾಡುತ್ತಿದ್ದುದು ಕಂಡುಬಂತು.
ಯುಗಾದಿಯಲ್ಲಿ ಬೇವು ಬೆಲ್ಲ ಹಂಚಿ ನೆರೆಹೊರೆಯ ಸಾಮರಸ್ಯವನ್ನು ವೃದ್ದಿಕೊಳ್ಳಿಸುವುದು ವಾಡಿಕೆಯಾಗಿದ್ದು ಅದರಂತೆ ಗ್ರಾಮಾಂತರ ಭಾಗಗಳಷ್ಟೇ ಅಲ್ಲದೇ ಪಟ್ಟಣ ಪ್ರದೇಶಗಳಲ್ಲೂ ಬೇವಿನ ಹೂವಿಗಾಗಿ ಬೇಡಿಕೆ ಇದ್ದಿದ್ದು ಕಂಡು ಬಂದಿತು.
ಹಿಂದುಗಳಿಗೆ ಹೊಸವರ್ಷಚರಣೆಯ ಹಿನ್ನೆಲೆಯಲ್ಲಿ ಹೊಸ ಬಟ್ಟೆ, ಉಡುದಾರ ಖರೀದಿ ಬರಾಟೆಯಲ್ಲಿತ್ತು,  ಬೆಂಗಳೂರು ಸೇರಿದಂತೆ ಹಲವೆಡೆಗಳಿಂದ ತಮ್ಮ ಊರುಗಳಿಗೆ ಬರುವಂತಹ ಜನರು ಸಾಮಾನ್ಯವಾಗಿತ್ತು.
ಪಟ್ಟಣದ ಖಾಸಗಿ ಬಸ್ಸ್ಟ್ಯಾಂಡ್ ಬಳಿ ಹೂವಿನ ಹಾಗೂ ತರಕಾರಿ ವ್ಯಾಪಾರ ಹೆಚ್ಚಾಗಿ ಕಂಡುಬಂದಿದ್ದು ಹೂವಿನ ಹಾಗೂ ಹಣ್ಣುಗಳ ಬೆಲೆ ಮಾಮುಲಿ ದಿನಗಳಿಗಿಂತ ಸ್ವಲ್ಪ ಹೆಚ್ಚಾಗಿತ್ತು ಆದರೂ ಜನರು ಕೊಳ್ಳುವುದು ಮಾತ್ರ ಕಡಿಮೆಯಾಗಿರಲಿಲ್ಲ.
ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ 
ಚಿಕ್ಕನಾಯಕನಹಳ್ಳಿ,ಏ.07 : ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆ ಮಕ್ಕಳು ಹೆಚ್ಚಿನ ಜ್ಞಾನ ಹೊಂದಿರುತ್ತಾರೆ ಅದನ್ನು ಹೊರ ತೆಗೆಯುವುದು ಶಿಕ್ಷಕರ ಮೇಲಿದೆ, ಶಿಕ್ಷಕರ ಜೊತೆಗೆ ಪೋಷಕರು ಸ್ಪಂದಿಸಿ ಮಕ್ಕಳಿಗೆ ಮನೆಯಲ್ಲಿ ಶಿಕ್ಷಕರು ಏನು ಪಾಠ ಮಾಡಿದ್ದಾರೆಯೆಂದು ಪ್ರತಿನಿತ್ಯ ಮನನ ಮಾಡಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಹೆಸರಹಳ್ಳಿ ಗ್ರಾಮದಲ್ಲಿನ ಶಾಲಾ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾತನಾಡಿ, ಮಕ್ಕಳ ವಿದ್ಯಾಭ್ಯಾಸ, ಶಾಲಾ ಕಾರ್ಯಗಳ ಬಗ್ಗೆ ಸಮೃದ್ದಿಯಾಗಿ ನಡೆಯಲು ಎಸ್.ಡಿಎಂ.ಸಿ ಸದಸ್ಯರು, ಪೋಷಕರು, ಶಿಕ್ಷಕರು, ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದರು.
ಶಿಕ್ಷಕ ಈಶ್ವರಪ್ಪ ಮಾತನಾಡಿ ಸಕರ್ಾರ ಹಲವಾರು ಸವಲತ್ತುಗಳನ್ನು ನೀಡುತ್ತಿದೆ, ಸಕರ್ಾರಿ ಶಾಲೆಗಳ ಶಿಕ್ಷಕರು ಸಿಇಟಿಯಂತಹ ಸ್ಮಧರ್ಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉತ್ತಮ ಜ್ಞಾನ ಹೊಂದಿರುತ್ತಾರೆ, ಮಕ್ಕಳನ್ನು ಸಕರ್ಾರಿ ಶಾಲೆಗಳಲ್ಲಿ ಓದಿರುವ ಹಲವಾರು ವ್ಯಕ್ತಿಗಳು ಇಂದು ದೇಶದ ಗಣ್ಯ ವ್ಯಕ್ತಿಗಳಾಗಿದ್ದಾರೆ ಎಂದರಲ್ಲದೆ ನಮ್ಮ ಶಾಲೆಯ ವಿದ್ಯಾಥರ್ಿಗಳು ಹವಮಾನ ಮತ್ತು ವಾಯುಗುಣ ಎಂಬ ವಿಷಯದ ಕೃಷಿಯಲ್ಲಿ ಮಕ್ಕಳು ಹವಮಾನ ಶೀಷರ್ಿಕೆಯಡಿಯಲ್ಲಿ ಚೆಂಡು ಹೂವಿನ ಬಗ್ಗೆ ಸಾಕಾಷ್ಟು ವಿಷಯಗಳ ಸಂಗ್ರಹಸಿ ಜಿಲ್ಲಾ ವಿಜ್ಞಾನ ಸಮಾವೇಷದಲ್ಲಿ ಆಯ್ಕೆಯಾಗಿ ಗೋಕಾಕ್ನಲ್ಲಿ ನೆಡೆದ ರಾಜ್ಯ ಮಟ್ಟದ ವಿಜ್ಞಾನ ಸಮಾವéೇಷದಲ್ಲಿ ಭಾಗವಹಿಸಿ ನಮ್ಮ ಶಾಲೆಗೆ ಹೆಸರು ತಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಚನ್ನಬಸವಯ್ಯ, ಗ್ರಾ,ಪಂ ಸದಸ್ಯ ದಯಾನಂದ್, ಎಸ್.ಡಿ.ಎಂ ಸಿ ಅಧ್ಯಕ್ಷ ಪ್ರಕಾಶ್, ಕಲ್ಲೇಶಯ್ಯ, ಮಲ್ಲೇಶಯ್ಯ, ಬಸವರಾಜು, ಶಿವಶಂಕರ್, ಗೋಪಾಲ್, ನಂಜಯ್ಯ, ಮುಖ್ಯೋಪಾಧ್ಯಯ ಕೃಷ್ಣಮೂತರ್ಿ, ಶಿಕ್ಷಕರುಗಳಾದ ಜಯಣ್ಣ, ವಿಶ್ವೇಶ್ವರಯ್ಯ, ಗೀತಾ, ಶೋಭ ಮತ್ತಿತ್ತರರು ಉಪಸ್ಥಿತರಿದ್ದರು.

ಕೆ.ಎಸ್.ಆರ್.ಟಿ.ಸಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ 

ಚಿಕ್ಕನಾಯಕನಹಳ್ಳಿ,ಏ.: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಆಕ್ಸೆಲ್ ಬ್ಲೇಡ್ ತುಂಡಾದ ಪರಿಣಾಮ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿಹೊಡೆದು,  ವಿದ್ಯುತ್ ತಂತಿ ಹರಿದು ವಿದ್ಯುತ್ ಕಂಬ ಬಸ್ಸಿನ ಮೇಲೆ ಬಿದ್ದ ಘಟನೆ ತಾಲ್ಲೂಕಿನಲ್ಲಿ ದೊಡ್ಡರಾಂಪುರದ ಬಳಿ ನಡೆದಿದೆ.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ದೊಡ್ಡರಾಂಪುರದ ರಸ್ತೆಯಲ್ಲಿ ಚಿಕ್ಕನಾಯಕನಹಳ್ಳಿ ಕಡೆಯಿಂದ ಕೊಂಡ್ಲಿಕ್ರಾಸ್ ಕಡೆಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಚಕ್ರಗಳಿಗೆ ಅಳವಡಿಸಲಾಗಿದ್ದ  ಆಕ್ಸೆಲ್ ಬ್ಲೇಡ್ಗಳು ತುಂಡಾದ  ಕಾರಣ ಚಾಲಕನ ಹಿಡಿತ ತಪ್ಪಿ ಬಸ್ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ,  ಜೊತೆಗೆ  ವಿದ್ಯುತ್ ತಂತಿ ತುಂಡಾಗಿ ಬಸ್ಸಿನ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು ಬಸ್ ಪಕ್ಕದಲ್ಲೇ ಇದ್ದ ಕಮರಿಗೆ  ಬೀಳುವಂತಿದ್ದು ಚಾಲಕನ ಜಾಗರೂಕತೆಯಿಂದ ಹೆಚ್ಚಿನ ಅಪಘಾತ ಸಂಬವಿಸಿಲ್ಲ. ಹಾಗೂ  ಯಾವುದೇ ಪ್ರಾಣಾಪಯವಾಗಿಲ್ಲ ಬಸ್ಸಿನಲ್ಲಿ ಸುಮಾರು 20 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.


Wednesday, April 6, 2016


ಜಮೀನು ಬಿಟ್ಟುಕೊಟ್ಟ ರೈತರಿಗೆ ಸಚಿವರಿಂದ ಪರಿಹಾರದ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ, :  ತಾಲ್ಲೂಕಿನ 24 ಕೆರೆಗಳಿಗೆ ನೀರು ಹಾಯಿಸುವ ಬಹು ನಿರೀಕ್ಷಿತ ಹೇಮಾವತಿ ನಾಲಾ ಕಾಮಗಾರಿಗೆ ಭೂಮಿ ಕಳೆದುಕೊಂಡಿರುವ 28 ರೈತರಿಗೆ ಪರಿಹಾರದ ಚಕ್ ವಿತರಣೆಯಾಗುವ ಕಾಮಗಾರಿ ಪುನರಾರಂಭವಾಗುವ ಹಾಗೂ ರೈತರಿಗೆ ನ್ಯಾಯ ದೊರಕುವ ಭರವಸೆ ಮೂಡಿತು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಬುಧವಾರ ಕಂದಾಯ ಅದಾಲತ್ ಮಾದರಿಯಲ್ಲಿ ಹೇಮಾವತಿ ನಾಲೆಗೆ ಜಮೀನು ನೀಡಿರುವ 28 ರೈತರಿಗೆ ಮೊದಲ ಹಂತದ ಭಾಗವಾಗಿ ರೂ.1.75ಕೋಟಿ ಮೊತ್ತದ ಪರಿಹಾರ ಚೆಕ್ ವಿತರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಸಿದ್ಧರಾಮಯ್ಯ ಸಕರ್ಾರ 73 ಕಿಮೀ ಹೇಮಾವತಿ ನಾಲೆಯ ಅಗಲೀಕರಣಕ್ಕಾಗಿ ರೂ.563 ಕೋಟಿ ಹಣವನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಿದೆ. 6ತಿಂಗಳ ಗಡುವು ಇಟ್ಟುಕೊಂಡು ಕಾರ್ಯ ಆರಂಭವಾಗಿದ್ದು ಜೂನ್ ಕೊನೆಯ ವೇಳೆಗೆ ಕಾಮಗಾರಿ ಪೂರ್ಣವಾಗಲಿದೆ, ಇದು ಕನರ್ಾಟಕದ ಚರಿತ್ರೆಯಲ್ಲೇ ಮೊದಲು ಎಂದರಲ್ಲದೆ ಕಳೆದ 40 ವರ್ಷಗಳ ಹಿಂದೆ ಚಿಕ್ಕನಾಯಕನಹಳ್ಳಿ ಸಮೃದ್ಧ ತಾಲ್ಲೂಕು ಆಗಿತ್ತು. ಈಗ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ, ಅಂತರ್ಜಲ ಅಪಾಯದ ಮಟ್ಟ ತಲುಪಿದೆ.  ಪ್ಲೋರಾಸಿಸ್ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ಕಾರಣ ಎಂದರು.
   ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 25.ಟಿ.ಎಮ್.ಸಿ ನೀರಿನ ಲಭ್ಯವಿದೆ. ಆದರೆ  18ರಿಂದ19 ಟಿಎಂಸಿ ಮಾತ್ರ ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ. ಹೇಮಾವತಿ ಅಣೆಕಟ್ಟೆಯ ಸಂಗ್ರಹ ಸಾಮಥ್ರ್ಯ 65ಟಿ.ಎಂ.ಸಿ ಆದರೆ 85ಟಿಎಂಸಿ ವರೆಗೂ ನೀರು ಸಂಗ್ರಹ ವಾಗುತ್ತದೆ. ಇದರಲ್ಲಿ ಹಾಸನದ ಪಾಲು 18ರಿಂದ19 ಟಿಎಂಸಿ ಆದರೆ 40ಟಿಎಂಸಿ ವರೆಗೂ ಹಾಸನ ಜಿಲ್ಲೆ ಬಳಸಿಕೊಳ್ಳುತ್ತಿದೆ.ಹೆಚ್ಚುವರಿ 20ಟಿಎಂಸಿ ನೀರು ತುಮಕೂರು ಜನರ ಹಕ್ಕು ಎಂದ ಅವರು ರಾಜ್ಯ ಸಕರ್ಾರ ರೈತರಿಂದ ಕೊಬ್ಬರಿಯನ್ನು ನಫೆಡ್ ಮೂಲಕ ಖರೀದಿಸುತ್ತಿದ್ದು 30ರಿಂದ 40ಕೋಟಿ ನಷ್ಟವಾದರೂ ಸಹ ರೈತರ ಹಿತ ರಕ್ಷಣೆಗೆ ಮಧ್ಯೆ ಪ್ರವೇಶಿಸುತ್ತಿದೆ ಎಂದರು.
ಅನುಮಾನ ಬೇಡ: ಪರಿಹಾರದ ಹಣ ಸಿಗುವುದೋ ಇಲ್ಲವೋ ಎಂಬ ಅನುಮಾನ ರೈತರಲ್ಲಿ ಇದೆ.ಯಾವುದೇ ಕಾರಣಕ್ಕೂ ಅನುಮಾನ ಬೇಡ.ಗಡಬನಹಳ್ಳಿಯಿಂದ ಸಾಸಲು ಕೆರೆವರೆಗೆ ನಾಲೆ ನಿಮರ್ಾಣಕ್ಕೆ 150 ಎಕರೆ ಜಮೀನು ಬೇಕು.ಪರಿಹಾರಕ್ಕಾಗಿ ರೂ.25ಕೋಟಿ ಅಗತ್ಯವಿದೆ.ಈಗ ಹಣ ಹಾಗೂ ಕಾನೂನಿನ ತೊಡಕಿಲ್ಲ ಜಮೀನು ಬಿಟ್ಟುಕೊಟ್ಟ 15ದಿನಗಳ ಒಳಗಾಗಿ ಪರಿಹಾರ ನಿಮ್ಮ ಕೈ ಸೇರುತ್ತದೆ.ಬೇರೆ ಯಾರ ಮಾತನ್ನೂ ಕೇಳಬೇಡಿ ನನ್ನ ಮೇಲೆ ಭರವಸೆ ಇಡಿ ಎಂದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸಕರ್ಾರದ ಮೇಲೆ ರೈತರ ನಂಬಿಕೆಯನ್ನು ಉಳಿಸಿಕೊಳ್ಳು ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಲಾಗುತ್ತಿದೆ. ಯೋಜನೆಗೆ 700 ರೈತರ ಜಮೀನು ಕಳೆದುಕೊಳ್ಳುತ್ತಿದ್ದಾರೆ, ಕಾನೂನಿನ ತೊಡಕು ದೂರವಾಗಿದ್ದು ಎಲ್ಲರಿಗೂ ಪರಿಹಾರ ದೊರೆಯುತ್ತದೆ. ಪರಿಹಾರ ನಿಗಧಿ ಮಾಡುವಾಗ ಅಧಿಕಾರಿಗಳು ಸ್ವಲ್ಪ ಉದಾರತೆ ತೋರಿ ಎಂದ ಅವರು    ತೆಂಗು ಬೆಳೆಗಾರರ ಪರಿಸ್ಥಿತಿಯನ್ನು ಕೇಂದ್ರಕ್ಕೆ ವರದಿ ಮಾಡಿರುವ ಗೋರಕ್ ಸಿಂಗ್ ವರದಿ ಅವೈಜ್ಞಾನಿಕವಾಗಿದೆ, ಕನರ್ಾಟಕದ ತೆಂಗು ಬೆಳೆಗಾರರಿಗೆ ಕೆರಳ ಮಾದರಿಯಲ್ಲಿ ಯೋಜನೆಗಳನ್ನು ರೂಪಿಸಬೇಕು, ಕೊಬ್ಬರಿಗೆ ಕ್ವಿಂಟಾಲ್ಗೆ ರೂ.10ಸಾವಿರ ಕನಿಷ್ಟ ಬೆಲೆ ಘೋಷಿಸಬೇಕು ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಜಮೀನು ಬಿಟ್ಟು ಕೊಟ್ಟ ಗೋಪಾಲನಹಳ್ಳಿ ಹಾಗೂ ಸಾಸಲು ಗ್ರಾಮಗಳ 48 ರೈತರಿಗೆ ಹಣ ಬಿಡುಗಡೆಯಾಗಿದೆ, 28 ರೈತರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ, ಇನ್ನು ಕೆಲವು ರೈತರ ಸರಿಯಾದ ದಾಖಲೆಗಳನ್ನು ನೀಡದ ಕಾರಣ ಚಕ್ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು ನೀರು ಹರಿಯುವ ಭಾಗದಲ್ಲಿನ ರೈತರು ಹೇಮಾವತಿ ನಾಲೆಗಾಗಿ ಜಮೀನು ಬಿಟ್ಟುಕೊಟ್ಟರೆ ಮಂಡ್ಯ ಭಾಗದಲ್ಲಿ ಬೆಳೆಯುವ ಬೆಳೆಯಂತೆ ಇಲ್ಲಿಯೂ ಉತ್ತಮ ಫಸಲು ಬೆಳೆಯಬಹುದು ಎಂದರು.
   ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಪಕ್ಷ ಬೇಧ ಮರೆತು ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ, ಹೇಮಾವತಿ ನಾಲಾ ಕಾಮಗಾರಿ ಈಗಾಗಲೇ ತಡವಾಗಿದೆ, ರೈತರು ಜಮೀನುಗಳನ್ನು ಬಿಟ್ಟುಕೊಟ್ಟು ಕಾಮಗಾರಿ ಪ್ರಾರಂಭವಾಗಲು ಅನುವು ಮಾಡಿಕೊಂಡಿ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ ಎಂದರು. 
ವಿಶೇಷ ಭೂಸ್ವಾಧಿನಾಧಿಕಾರಿ ಆರತಿ ಆನಂದ್ ಪ್ರಾಸ್ತವಿಕ ನುಡಿಗಳನ್ನಾಡಿ ಈ ಭಾಗದ ರೈತರ ಆಳಲನ್ನು ನೋಡಿ ಯುಗಾದಿಯ ಹಬ್ಬದ ಕೊಡುಗೆಯ ರೂಪದಲ್ಲಿ ಈ ಪರಿಹಾರದ ಚೆಕ್ನ್ನು ವಿತರಿಸುತ್ತಿದ್ದು ಇನ್ನು 65ಎಕರೆ ಜಮೀನಿನ 9ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ನೀಡ ಬೇಕಿದೆ ಎಂದ ಅವರು ರೈತರು ಯಾವುದೇ ಮದ್ಯವತರ್ಿಗಳ ಹಾವಳಿಗೆ ತುತ್ತಾಗದೇ ನೇರವಾಗಿ ನಮ್ಮನ್ನು ಬೇಟಿಯಾಗ ಬಹುದು ಇದು ಕೇವಲ ಸಾಂಕೇತಿಕವಾಗಿ ಚೆಕ್ ವಿತರಿಸಿದ್ದು ಮುಂದಿನ ದಿನಗಳಲ್ಲಿ ಯೋಜನೆಗೆ ಜಮೀನು ನೀಡಿರುವ ಎಲ್ಲಾ ರೈತರಿಗೂ ಪರಿಹಾರನವನ್ನು ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ಮಠದ ಅಭಿನವಮಲ್ಲಿಕಾಜರ್ುನದೇಶೀಕೇಂದ್ರಸ್ವಾಮೀಜಿ, ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯದೇಶಿಕೇಂದ್ರಸ್ವಾಮಿಜಿ, ಮಾಧಿಹಳ್ಳಿ ಮಠದ ಚನ್ನಮಲ್ಲಿಕಾಜರ್ುನಸ್ವಾಮಿಜಿ ಆಶಿರ್ವಚನ ನೀಡಿದರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಅನಿತಾ, ತಹಸೀಲ್ದಾರ್ ಗಂಗೇಶ್, ಜಿ.ಪಂ,ಸದಸ್ಯ ಕಲ್ಲೇಶ್, ಹೊನ್ನವಳ್ಳಿ ಜಿ.ಪಂ.ಸದಸ್ಯ ನಾರಾಯಣ್, ಮಾಜಿ ಶಾಸಕ ಬಿ.ಲಕ್ಕಪ್ಪ, ಕಾಂಗ್ರೇಸ್ ಮುಖಂಡ ಸಿಮೇಎಣ್ಣೆ ಕೃಷ್ಣಯ್ಯ, ಶೆಟ್ಟಿಕೆರೆ ಗ್ರಾ,ಪಂ,ಅಧ್ಯಕ್ಷೆ ನಾಗಮಣಿ, ತಾ.ಪಂ.ಸದಸ್ಯೆ ಜಯಮ್ಮ ಉಪಸ್ಥಿತರಿದ್ದರು.

ಅಪಘಾತ ಸುದ್ದಿ
ಚಿಕ್ಕನಾಯಕನಹಳ್ಳಿ,ಏ.06 : ಕೆ.ಬಿ.ಕ್ರಾಸ್ನಿಂದ ಚಿ.ನಾ.ಹಳ್ಳಿಗೆ ಗಾರೆಕೆಲಸ ಮುಗಿಸಿಕೊಂಡು ಆಟೋದಲ್ಲಿ ಬರುವಾಗ ಆಟೋ ಪಲ್ಟಿಯಾದ ಪರಿಣಾಮ ಧೃವಕುಮಾರ್ ಎಂಬುವವರಿಗೆ ತೀವ್ರಗಾಯಗಳಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯ ಮೃತಪಟ್ಟಿದ್ದಾನೆ.
ಕೆ.ಬಿ.ಕ್ರಾಸ್ನಿಂದ ಚಿ.ನಾ.ಹಳ್ಳಿಗೆ  ಆಟೋದಲ್ಲಿ ಧೃವಕುಮಾರ್ ತನ್ನ ಸ್ನೇಹಿತರಾದ ಮುದ್ದಪ್ಪ, ರವಿ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ಆಟೋ ಚಾಲಕನ ಅಜಾಗುರೂಕತೆ ಹಾಗೂ ಅತಿ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದರಿಂದ,  ಜೆ.ಸಿ.ಪುರ ಬಳಿ ಆಟೋ ಮಗುಚಿ ಬಿದ್ದು ಮೂರು ಜನರು ಗಾಯಗೊಂಡರು, ತಕ್ಷಣವೇ ಇವರು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಸೇರಿಸಲಾಯಿತು ಅಲ್ಲಿ ಪ್ರಥಮ ಚಿಕಿತ್ಸೆಪಡೆದಿದ್ದಾರೆ,  ತೀವ್ರವಾಗಿ ಗಾಯಗೊಂಡ ಧೃವಕುಮಾರ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಸಕರ್ಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ತುಮಕೂರಿನ ಗುಬ್ಬಿ ಗೇಟ್ ಬಳಿ ಮೃತಪಟ್ಟಿದ್ದಾನೆ. ಈ ಸಂಬಂಧ ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕನಾಯಕನಹಳ್ಳಿ,ಏ.06 : ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ  ಬಾಲಕಿಗೆ ಮೋಟಾರು ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಚಿನ್ಮಯಿ(11) ಯನ್ನು  ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಿನ್ಮಯಿ ಮನೆಯ ಹತ್ತಿರ ರಸ್ತೆಯಲ್ಲಿ ದಯಾನಂದ ಎನ್ನುವವರು ಮೋಟಾರ್ ಸೈಕಲನ್ನು ಅತಿವೇಗದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ,  ಚಿನ್ಮಯಿಗೆ ಢಿಕ್ಕಿ ಹೊಡೆದಪರಿಣಾಮ ತೀವ್ರವಾಗಿ ಗಾಯಗೊಂಡ ಚಿನ್ಮಯಿಯನ್ನು ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು,  ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಸಂಬಂಧ ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Saturday, April 2, 2016

9 ಮತ್ತು 23ನೇ ವಾಡರ್್ಗೆ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ಚಿಕ್ಕನಾಯಕನಹಳ್ಳಿ.ಏ.02 : ಕೋಳಚೆ ನಿಮರ್ೂಲನ ಮಂಡಳಿ ಅನುದಾನದ ಅಡಿಯಲ್ಲಿ ಪಟ್ಟಣದ ಬೋವಿಕಾಲೋನಿಯಲ್ಲಿ 25ಲಕ್ಷ ರೂ. ವೆಚ್ಚದ ಸಿ.ಸಿ.ರಸ್ತೆ ನಿಮರ್ಿಸುವುದಾಗಿ ಕ್ಷೇತ್ರದ ಶಾಸಕ ಸಿ.ಬಿ ಸುರೇಶ್ಬಾಬು ತಿಳಿಸಿದರು.
  ಚಿಕ್ಕನಾಯಕನಹಳ್ಳಿ ಪಟ್ಟಣದ 9ನೇವಾಡರ್್ನ ವಿನಾಯಕನಗರದ ಎ.ಡಿ.ಕಾಲೋನಿ ಹಾಗೂ 23ನೇ ವಾಡರ್್ನ ಎ.ಕೆ ಕಾಲೋನಿಯಲ್ಲಿ ಕೋಳಚೆ ನಿಮರ್ೂಲನ ಮಂಡಳಿ 25ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು ಹಾಗೂ ಪಟ್ಟಣದಲ್ಲಿ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿಯಲ್ಲಿ ಎಲ್ಲರೂ ಸ್ವಚ್ಛ ನಗರಕ್ಕೆ ಮುಂದಾಗಿ ಎಂದರಲ್ಲದೆ ಸಕರ್ಾರ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
  ಜಿ.ಪಂ.ಸದಸ್ಯ ಮಹಾಲಿಂಗಯ್ಯ, ಪುರಸಭಾ ಅಧ್ಯಕ್ಷ ಸಿ.ಟಿ ದಯಾನಂದ್, ಉಪಾಧ್ಯಕ್ಷೆ ಇಂದಿರಾ, ಪುರಸಭಾ ಸದಸ್ಯರುಗಳಾದ ರೇಣುಕಮ್ಮ, ಎಂ.ಕೆ.ರವಿಚಂದ್ರ, ಕೃಷ್ಣಮೂತರ್ಿ, ಅಶೋಕ್, ರಾಜಶೇಖರ್, ಹೆಚ್.ಬಿ.ಪ್ರಕಾಶ್, ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು, ಕರವೇ ಗುರುಮೂತರ್ಿ, ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಇತರರು ಹಾಜರಿದ್ದರು.   ಜಿ.ಪಂ.ಸದಸ್ಯ ಮಹಾಲಿಂಗಯ್ಯ, ಪುರಸಭಾ ಅಧ್ಯಕ್ಷ ಸಿ.ಟಿ ದಯಾನಂದ್, ಉಪಾಧ್ಯಕ್ಷೆ ಇಂದಿರಾ, ಪುರಸಭಾ ಸದಸ್ಯರುಗಳಾದ ರೇಣುಕಮ್ಮ, ಎಂ.ಕೆ.ರವಿಚಂದ್ರ, ಕೃಷ್ಣಮೂತರ್ಿ, ಅಶೋಕ್, ರಾಜಶೇಖರ್, ಹೆಚ್.ಬಿ.ಪ್ರಕಾಶ್, ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು, ಕರವೇ ಗುರುಮೂತರ್ಿ, ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಇತರರು ಹಾಜರಿದ್ದರು. 
ಒಂದೇ ದಿನ ಡಾ.ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರ ದಿನಾಚಾರಣೆ ನಡೆಸಲು ಸಿದ್ದತೆ
ಚಿಕ್ಕನಾಯಕನಹಳ್ಳಿ,ಏ.02 : ಡಾ.ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರ ಜನ್ಮದಿನಾಚಾರಣೆಯಲ್ಲಿ ಎಸ್.ಸಿ, ಎಸ್.ಟಿ ಜನಾಂಗದವರು ಸೇರಿದಂತೆ ಇತರೆ ಜನಾಂಗದಲ್ಲಿ ಉತ್ತಮ ಸಮಾಜ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಸನ್ಮಾನಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆ ತೀಮರ್ಾನಿಸಿತು. 

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಾ.ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರ ದಿನಾಚಾರಣೆಯನ್ನು ಏಪ್ರಿಲ್ 14ರಂದು ಒಂದೇ ದಿನ ನಡೆಸುವಂತೆ ಪೂರ್ವಭಾವಿ ಸಭೆಯಲ್ಲಿ ತೀಮರ್ಾನಿಸಲಾಯಿತು. 
ಡಾ||ಅಂಬೇಡ್ಕರ್ ಹಾಗೂ ಜಗಜೀವನರಾಂರವರ ಜನ್ಮದಿನಾಚರಣೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಂದ ಜನರನ್ನು ಸಭೆಗೆ ಕರೆತರಲು ಗ್ರಾಮಪಂಚಾಯಿತಿ ಶೇ.3% ಅನುದಾನವನ್ನು ಬಳಸಿಕೊಳ್ಳವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದ ಅವರು ತಾಲ್ಲೂಕಿನ ಎಲ್ಲ ದಲಿತ ಕಾಲೋನಿಗಳಲ್ಲಿ ಡಾ|| ಅಂಬೇಡ್ಕರ್ ಭವನ ನಿಮರ್ಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
 ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಗ್ರಾಮ ಪಂಚಾಯಿತಿಗಳು ಡಾ||ಅಂಬೇಡ್ಕರ್ ಹಾಗೂ ಜಗಜೀವನರಾಂ ರವರ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲು ಸಕರ್ಾರದ ಆದೇಶವಿದೆ ಎಲ್ಲರೂ  ಜಯಂತಿಯನ್ನೂ ಆಚರಿಸುವಂತೆ ಅಧಿಕಾರಿಗಳಿಗೆ, ಸಂಘ-ಸಂಸ್ಥೆಗಳ ಮುಖಂಡರಿಗೆ ತಿಳಿಸಲಾಯಿತು.
 ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ನೇತೃತ್ವದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ಸಭೆ ತಿಮರ್ಾನಿಸಿತು, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ವಿದ್ಯಾಥರ್ಿಗಳು ಹಾಗೂ ಒಬ್ಬ ಪ್ರಗತಿಪರ ರೈತ ಕಲಾವಿದ ಚಂದ್ರಯ್ಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಚಿದಾನಂದರವರಿಗೆ ಸನ್ಮಾನಿಸಲು ತಿಮರ್ಾನಿಸಿತು.
ಜಯಂತಿ ದಿನದಂದು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಅಂಗನವಾಡಿ ನೌಕರರು, ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಜಯಂತಿಯಲ್ಲಿ ಭಾಗವಹಿಸುವಂತೆ ಹಾಗೂ ವಿವಿಧ ಇಲಾಖೆಗಳಲ್ಲಿ ಆಯ್ಕೆ ಮಾಡುವ ಫಲಾನುಭವಿಗಳಿಗೆ ಸಹಾಯಧನ ಹಾಗೂ ವಿವಿಧ ಇಲಾಖೆಯಲ್ಲಿ ನೀಡುವ ಪರಿಕರಗಳನ್ನು ವಿತರಿಸಲು ತೀಮರ್ಾನಿಸಲಾಯಿತು. 
ಪೂರ್ವಭಾವಿ ಸಭೆಯಲ್ಲಿ ಪುರಸಭಾದ್ಯಕ್ಷ ಸಿ.ಟಿ ದಯಾನಂದ್, ಜಿ.ಪಂ ಸದಸ್ಯರಾದ ರಾಮಚಂದ್ರಯ್ಯ, ಮಹಲಿಂಗಯ್ಯ, ಮಂಜುಳಮ್ಮ, ತಾ.ಪಂ ಸದಸ್ಯರಾದ ಹೆಚ್.ಎನ್. ಕುಮಾರ್, ಇಂದಿರಮ್ಮ, ಪುರಸಭಾ ಉಪಾದ್ಯಕ್ಷೆ, ಇಂದಿರಾಪ್ರಕಾಶ್, ಪುರಸಭಾ ಸದಸ್ಯ ಅಶೋಕ್, ತಾ||ಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ದಲಿತ ಸಂಘರ್ಷ ಸಮಿತಿಯ ಬೇವಿನಹಳ್ಳಿ ಚನ್ನಬಸವಯ್ಯ, ಲಿಂಗದೇವರು, ಮಲ್ಲಿಕಾಜರ್ುನ್, ಗೋವಿಂದಪ್ಪ, ತಿಮ್ಮಣ್ಣ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಯುವಶಕ್ತಿಯೇ ದೇಶದ ಶಕ್ತಿ
ಚಿಕ್ಕನಾಯಕನಹಳ್ಳಿ,ಏ.02 :  ದೇಶದ ಶಕ್ತಿ ಯುವ ಶಕ್ತಿಯಾಗಿದ್ದು ಅವರು ಹದಿ ಹರೆಯದ ವಯಸ್ಸಿನಲ್ಲಿ ಮಾನಸಿಕ ಸಿಮಿತ ಕಳೆದುಕೊಂಡು ತಪ್ಪು ಹಾದಿ ತುಳಿದರೆ ಜೀವನ ಪರ್ಯಂತ ಕೊರಗಬೇಕಾಗುತ್ತದೆ ಎಂದು  ಐ.ಸಿ.ಟಿ.ಸಿ ಆಪ್ತ ಸಮಾಲೋಚಕ ನವೀನ್ ತಿಳಿಸಿದರು.
    ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಪರಿಸರ ಅಧ್ಯಯನ ವಿಭಾಗ, ಯುವ ರೆಡ್ ಕ್ರಾಸ್ ಘಟಕ ಹಾಗೂ ನ್ಯಾಕ್ ವತಿಯಿಂದ ಆಯೋಜಿಸಿದ್ದ ಎಚ್.ಐ.ವಿ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ಎಲ್ಲಾ ರೋಗಗಳಿಗೂ ಔಷದಿ ಕಂಡು ಹಿಡಿಯಲಾಗಿದೆ ಆದರೆ ಏಡ್ಸ್ ಅಂತಹ ಮಾಹಮಾರಿ ರೋಗಕ್ಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಇಂದು ಮನುಷ್ಯನಿಗೆ ತಿಳುವಳಿಕೆ ಇಲ್ಲದೆ ಇರುವುದರಿಂದ ಹಲವು ಎಚ್.ಐ.ವಿ ರೋಗಿಗಳು ಸರಿಯಾಗಿ ಆಸ್ಪತ್ರೆಗೆ ವಿಚಾರ ತಿಳಿಸದೆ ಬೇಗನೆ ಸಾವನ್ನು ಅಪ್ಪುತ್ತಾರೆ, ಎಚ್.ಐ.ವಿ ವೈರೆಸ್ ಬಂದಂತಹ ವ್ಯಕ್ತಿಗಳು ಕೂಡ ಸುಮಾರು 15 ರಿಂದ 20 ವರ್ಷ ಬದುಕ ಬಹುದಾಗಿದೆ ಅದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ವಿದ್ಯಾಥರ್ಿಗಳು ಕೇವಲ ಶೈಕ್ಷಣಿಕವಾಗಿ ಓದುತ್ತಿದ್ದು  ಅದರ ವಿಚಾರವನ್ನು  ಜೀವನದಲ್ಲಿ  ತಿಳಿದುಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ ಹಾಗಾಗಿ ಇಂತಹ ವಿಚಾರದ ಬಗ್ಗೆ ಗಂಬೀರವಾಗಿ ತಾವು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
   ರೆಡ್ ಕ್ರಾಸ ಘಟಕದ ಸಂಚಾಲಕ ಕೆ.ಎಸ್ ಚಂದ್ರಶೇಖರ್  ಮಾತನಾಡಿ ವಿದ್ಯಾಥರ್ಿಗಳಲ್ಲಿ ಇಂದು ಆಕರ್ಷಣೆಯ ಮನೋವೃತ್ತಿ ಅಧಿಕವಿದ್ದು ಕೆಟ್ಟದನ್ನು ಬೇಗ ಪಡೆದುಕೊಳ್ಳುವ ನೀವು ಒಳ್ಳೆಯದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿಲ್ಲ ಇಂದು ದೇಶದಲ್ಲಿ ಸಾಕಷ್ಟು ಯುವ ಜನತೆ ಇಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಇದರಿಂದ ದೇಶದ ಮಾನವ ಸಂಪನ್ಮೊಲ ಸರಿಯಾಗಿ ಬಳಸಿಕೊಳ್ಳಲು ಸಾದ್ಯವಾಗುತ್ತಿಲ್ಲ ಎಂದರು.
    ಪರಿಸರ ಅಧ್ಯಯನ ವಿಭಾಗ ಉಪನ್ಯಾಸಕ ಪ್ರಸನ್ನ ಮಾತನಾಡಿ ಇಂದು ಭಾರತ ದೇಶ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದು ಇದೆ ರೀತಿಯಲ್ಲಿ ಎಡ್ಸ ಮುಕ್ತ ದೇಶವಾಗಿ ಮಾಡಬೇಕು ಎಂದರೆ ಅದು ನಿಮ್ಮಂತಹ ಯುವ ಜಾನಂಗದಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನ್ಯಾಕ್ ಸಂಚಾಲಕ ಡಾ. ಶ್ರೀನಿವಾಸ್, ಐ.ಕ್ಯೊ.ಎ.ಸಿ ಸಂಚಾಲಕ ಶೈಲೇಂದ್ರಕುಮಾರ್, ಪ್ರದ್ಯಾಪಕಿ ದರ್ಶನ ಇನ್ನಿತರರು ಹಾಜರಿದ್ದರು.