Saturday, January 19, 2013


ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ 125 ಸ್ಥಾನ: ಸಂತೋಷ್ಲಾಡ್
                                           
ಚಿಕ್ಕನಾಯಕನಹಳ್ಳಿ,ಜ19 : ಜೆ.ಡಿ.ಎಸ್ನ 20ತಿಂಗಳ ಅವಧಿ, ಬಿಜೆಪಿಯ ನಾಲ್ಕುವರೆವರ್ಷದ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಯಾವ ಅಭಿವೃದ್ದಿ ಕಾರ್ಯಗಳು ಆಗದೆ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ, ಬರೀ ಇವರ  ಕಿತ್ತಾಟವನ್ನು ನೋಡಿ ಜನತೆ ಬೇಸತ್ತಿದ್ದಾರೆ ಆದ್ದರಿಂದ  ರಾಜ್ಯದ ಜನತೆ ಮುಂದೆ ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 125ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದಶರ್ಿ ಸಂತೋಷ್ಲಾಡ್ ತಿಳಿಸಿದರು.
ತಾಲೂಕಿನ  ಕಾಂಗ್ರೆಸ್ ಕಾರ್ಯಕರ್ತರ ಮನೆಬಾಗಿಲಿಗೆ ರಾಜ್ಯ ಪ್ರಧಾನ ಕಾರ್ಯದಶರ್ಿ ಸಂತೋಷ್ಲಾಡ್ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜುರವರ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ನೂತನವಾಗಿ ಉದಯಿಸಿರುವ ಕೆಜೆಪಿ ಮತ್ತು ಬಿಎಸ್ಆರ್ ಪಕ್ಷಗಳು ಏಕ ವ್ಯಕ್ತಿಗಳ  ಸ್ವಹಿತಾಸಕ್ತಿಗಾಗಿ ಆರಂಭವಾಗಿದೆ, ರಾಜ್ಯದ ಜನರ ಹಿತರಕ್ಷಣೆಗಾಗಿ ಅಲ್ಲ ಇದರಿಂದ ಈ ಬಾರಿಯ ಚುನಾವಣೆಯ ನಂತರ ಕೆಜೆಪಿ ಮತ್ತು ಬಿಎಸ್ಆರ್ ಎರಡೂ ಪಕ್ಷವು ರಾಜ್ಯದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವುದಿಲ್ಲವೆಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆನ್ನುವ ಬಯಕೆ ರಾಜ್ಯದ ಜನತೆಯಲ್ಲಿದೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿಯೂ ಪ್ರವಾಸ ಮಾಡಿದಾಗ ಇಲ್ಲಿಯೂ ಕಾಂಗ್ರೆಸ್ ಪಕ್ಷದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾರ್ಯಕರ್ತರುಗಳ ಮನೆಗೆ ಭೇಟಿ ನೀಡಿದಾಗ ಬಂದ  ಅಭಿಪ್ರಾಯಗಳು ಇವು  ಎಂದರು.
ಸ್ಥಳೀಯ ಯುವ ಆಕಾಂಕ್ಷಿಗೆ ಪಕ್ಷದ ಟಿಕೆಟ್: ತಾಲ್ಲೂಕಿನಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ ಹೊರಗಡೆಯ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರ ಕಾರಣದಿಂದಾಗಿ ಪಕ್ಷ ಹಿಂದುಳಿದಿರವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ಲಾಡ್, ಈ ಬಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಥಳೀಯ ಯುವ ಆಕಾಂಕ್ಷಿಗೆ ಪಕ್ಷದ ಟಿಕೆಟ್ ನೀಡಲು ಹೈಕಮಾಂಡ್ಗೆ ಮನವಿ ಮಾಡುವುದಾಗಿ ತಿಳಿಸಿದ ಅವರು ರಾಹುಲ್ಗಾಂಧಿರವರು ದೇಶಾದ್ಯಂತ ಯುವಶಕ್ತಿಗೆ ಆದ್ಯತೆ ನೀಡುತ್ತಿದ್ದು, ರಾಜ್ಯದಲ್ಲೂ ಯುವಶಕ್ತಿಗೆ ಹೆಚ್ಚಿನ ಪ್ರಾತಿನಿಧ್ಯತೆ ಸಿಗುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಮುಖಂಡರಾದ ಸತೀಶ್ಸಾಸಲು ಉಪಸ್ಥಿತರಿದ್ದರು.

ತೆಂಗು ಅಭಿವೃದ್ದಿ ತರಬೇತಿ ಕಾಯರ್ಾಗಾರದಲ್ಲಿ ಸಲಕರಣೆಯ ಪರಿಕರಗಳ ವಿತರಣೆ
ಚಿಕ್ಕನಾಯಕನಹಳ್ಳಿ,ಜ.19 : ರೈತರು ಉತ್ಪಾದಿಸಿದ ಬೆಳೆಯನ್ನು ವಿದ್ಯಾವಂತರು ಮಾರುಕಟ್ಟೆಗೆ ತಂದು ಮಾರುಕಟ್ಟೆಯಲ್ಲಿರುವ ಬೆಲೆಯ ಸ್ಥಿತಿಗತಿ ತಿಳಿದು ಮಾರಾಟ ಮಾಡಿದರೆ ರೈತರು ತಮಗೆ ಆಗುವ ನಷ್ಟವನ್ನು ತಪ್ಪಿಸಿಕೊಂಡು ತಮ್ಮ ಆಥರ್ಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ತೆಂಗು ಅಭಿವೃದ್ದಿ ಮಂಡಳಿ ಯೋಜನೆಯಡಿ ಹಮ್ಮಿಕೊಂಡಿದ್ದ ತರಬೇತಿ ಕಾಯರ್ಾಗಾರ ಕಾರ್ಯಕ್ರಮದಲ್ಲಿ ಹಂದನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಫಲಾನುಭವಿ ರೈತರಿಗೆ ಗೊಬ್ಬರ, ಸಲಕರಣೆಯ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಗಡಿ ಭಾಗದಲ್ಲಿರುವ ರೈತರಿಗೆ ಅನುಕೂಲವಾಗಲೆಂದು 60ಜನ ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಗಿದೆ, ಎಲ್ಲಾ ಬೆಳೆಗಳಿಗಿಂತ ತೋಟಗಾರಿಕೆ ಬೆಳೆಗೆ ಹೆಚ್ಚಿನ ಸವಲತ್ತು ನೀಡಿದ್ದು, ಈ ಬೆಳೆಯಲ್ಲಿ ತೆಂಗು ಜೀವನಾಡಿಯ ಬೆಳೆಯಾಗಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾದರೆ ಹಂದನಕೆರೆ ಹೋಬಳಿಗೆ ಪಂಚನಹಳ್ಳಿ ಭಾಗದಿಂದ ಶಾಶ್ವತವಾದ ನೀರನ್ನು ತರಿಸಲಾಗುವುದು ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು.
ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಮಾತನಾಡಿ ರೈತರು ತೆಂಗು ಬೆಳೆಯನ್ನು ಅಭಿವೃದ್ದಿ ಪಡಿಸಿಕೊಳ್ಳುವ ಮೂಲಕ ಆಥರ್ಿಕವಾಗಿ ಸದೃಡರಾಗಿ ತೋಟಗಾರಿಕೆ ಇಲಾಖೆ ಯೋಜನೆಯಡಿ ನೀಡಿರುವ ಸವಲತ್ತನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ರಾಮಚಂದ್ರಣ್ಣ, ದುಗಡಿಹಳ್ಳಿ ಗಂಗಾಧರಪ್ಪ ಉಪಸ್ಥಿತರಿದ್ದರು.


ಚಿ.ನಾ.ಹಳ್ಳಿಯಲ್ಲಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.19: ಪಕ್ಷ ಸಂಘಟನೆಗಾಗಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು  ತಿಪಟೂರಿನಿಂದ  ಶೆಟ್ಟಿಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯಲ್ಲಿ ಏರ್ಪಡಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗಾಗಿ ಬೂತ್ ಮಟ್ಟದ ಸಭೆಯನ್ನು ನಡೆಸಲಿದ್ದು, ಸಂಘಟನೆಯಲ್ಲಿರುವ ಲೋಪದೋಷಗಳನ್ನು ಕಾರ್ಯಕರ್ತರು ಸರಿಪಡಿಸಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ನಾರಾಯಣ್, ಬಿ.ಲಕ್ಕಪ್ಪ,   ಕ್ಯಾಪ್ಟನ್ ಸೋಮಶೇಖರ್, ಆರ್.ರಾಜೇಂದ್ರ, ಸೀಮೆಣ್ಣೆ ಕೃಷ್ಣಯ್ಯ,  ಕೃಷ್ಣೇಗೌಡ ಉಪಸ್ಥಿತರಿದ್ದರು. 


ಶ್ರೀ.ಕ್ಷೇ.ಧ.ಗ್ರಾ.ಯೋ ವತಿಯಿಂದ   ತಾಲೂಕು  ಕೃಷಿ ಉತ್ಸವ:
ಚಿಕ್ಕನಾಯಕನಹಳ್ಳಿ,ಜ.19 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ತಾಲ್ಲೂಕು ಮಟ್ಟದ ಕೃಷಿ ಉತ್ಸವವದ ಕೃಷಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ವಕೀಲ ಎಮ್.ಬಿ.ನಾಗರಾಜ್ ಆಯ್ಕೆಯಾಗಿದ್ದಾರೆ ಎಂದು ಶ್ರೀ.ಕ್ಷೇ.ಧ.ಯೋ. ಯೋಜನಾಧಿಕಾರಿ ರೋಹಿತಾಕ್ಷ ತಿಳಿಸಿದರು.
ಫೆಬ್ರವರಿ 10, 11 ರಂದು ಪಟ್ಟಣದಲ್ಲಿ ನಡೆಯುವ ಕೃಷಿ ಉತ್ಸವದ ಯಶಸ್ವಿಗೆ  ಸಮಿತಿಯನ್ನು ರಚಿಸಿದ್ದು,  ಉಪಾಧ್ಯಕ್ಷರುಗಳಾಗಿ ಸಿ.ಡಿ.ಚಂದ್ರಶೇಖರ್, ಶಶಿಧರ್, ವಿಶ್ವನಾಥ್ಅಣೆಕಟಟೆ, ಅರುಣ್ಕುಮಾರ್, ಬಸವರಾಜು, ಮಲ್ಲೇಶಯ್ಯ, ಸಿ.ವಿ.ಚಂದ್ರಣ್ಣ, ಗಂಗಾಧರ್, ಸತೀಶ್ಕೆಂಕೆರೆ, ಗುರುಪ್ರಸಾದ್, ಸುರೇಶ್, ನಿರಂಜನಮೂತರ್ಿ, ನಾಗೇಶಪ್ಪ, ರಾಮಚಂದ್ರಯ್ಯ, ರಾಜಕುಮಾರ್, ಲಿಂಗರಾಜು, ಪ್ರಕಾಶ್, ಶಶಿಕುಮಾರ್, ಕೃಷ್ಣಮೂತರ್ಿ, ನವನಾಜು, ನರಸಿಂಹಮೂತರ್ಿ, ಕೃಷ್ಣಪ್ಪ, ಗೌರವ ಸಲಹೆಗಾರರಾಗಿ ಕ್ಷೇ.ಧ.ಗ್ರಾ.ಯೋಜನೆಯ ನಿದರ್ೇಶಕ ಪುರುಷೋತ್ತಮ್, ಮುಖ್ಯ ಸಲಹೆಗಾರರಾಗಿ ರಾಜಕುಮಾರ್ಸಿಂಗದಹಳ್ಳಿ, ಗುರುಪ್ರಸಾದ್ ಕಂದಿಕೆರೆ, ಪ್ರಧಾನ ಕಾರ್ಯದಶರ್ಿಯಾಗಿ ಕ್ಷೇ.ಧ.ಗ್ರಾ.ಯೋ.ಯೋಜನಾಧಿಕಾರಿ ರೋಹಿತಾಕ್ಷ, ಕಾರ್ಯದಶರ್ಿಯಾಗಿ ರವಿಕುಮಾರ್, ಕೋಶಾಧಿಕಾರಿಯಾಗಿ ಪ್ರಕಾಶ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.