Tuesday, January 29, 2013


ಜಾತಿವರು ಜನಗಣತಿ ನಡೆಯಲು ಸಕರ್ಾರಕ್ಕೆ ಮನವಿ
ಚಿಕ್ಕನಾಯಕನಹಳ್ಳಿ,ಜ.28 : 2004-05ರಲ್ಲಿ ಜಾತಿವಾರು ಜನಗಣತಿಗೆ ಕೇಂದ್ರ ಸಕರ್ಾರ ಅನುಮತಿ ನೀಡಿತ್ತು, ಆದರೆ ಅಲ್ಲಿಂದ ಇಲ್ಲಿಯವರೆಗೆ ಎರಡು ಮೂರು ಆಯೋಗ ವರದಿ ನೀಡಿದರೂ ಸಕರ್ಾರದ ನಿರ್ಲಕ್ಷತನದಿಂದ ಅನುಷ್ಠಾನಗೊಂಡಿಲ್ಲ, ನಾನು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಮತ್ತೊಮ್ಮೆ ಜಾತಿವರು ಜನಗಣತಿ ನಡೆಯಲು ಸಕರ್ಾರಕ್ಕೆ ನನ್ನ ಮೊದಲನೆ ಆಯೋಗದ ಸಭೆಯಲ್ಲಿಯೇ ವರದಿ ನೀಡಿರುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಜಾತಿವಾರು ಜನಗಣತಿ ವಗರ್ೀಕರಣದ ಬಗ್ಗೆ ಹಿಂದುಳಿದ ವರ್ಗಗಳ  ವಿಚಾರವಾಗಿ ಹೊಸದಾಗಿ ಸೇರಿಸುವಿಕೆ ಅಥವಾ ತೆಗೆಯುವಿಕೆಯ ಸಮಸ್ಯೆಯಿದ್ದರೆ ಕಾನೂನು ಮಿತಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿಯೂ,  ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಲ್ಲಿ ಈ ವರ್ಗಗಳಿಗೆ ತೊಂದರೆ ಉಂಟಾಗಿ, ಆ ಬಗ್ಗೆ ನಮ್ಮ ಗಮನಕ್ಕೆ ತಂದರೆ ಪರಿಶೀಲಿಸಿ ನ್ಯಾಯ ಒದಗಿಸುವುದಾಗಿ ತಿಳಿಸಿದರು.
ಹಿಂದುಳಿದ ವರ್ಗದ ಜಾತಿಗಳ ಸಮಸ್ಯೆ ಬಗೆಹರಿಸಲು ಸಮೀಕ್ಷೆ ಮಾಡಿ ಮುಖ್ಯಂತ್ರಿಗಳಿಗೆ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದಶರ್ಿಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ ಅವರು, 1972ರಲ್ಲಿ ಆರಂಭಗೊಂಡ ಆಯೋಗದಿಂದ ಇಲ್ಲಿಯವರೆಗೂ ಬೇರೆ ಯಾವ ಅಧ್ಯಕ್ಷರುಗಳು ಇಷ್ಟು ಬೇಗ ವರದಿ ನೀಡಿರುವುದಿಲ್ಲ ಎಂಬ ಬಗ್ಗೆ 
ಹಿಂದುಳಿದ ವರ್ಗಗಳ ಆಥರ್ಿಕ ಹಿನ್ನಲೆ, ಶೈಕ್ಷಣಿಕ ಹಿನ್ನಲೆ, ಆಚಾರ ವಿಚಾರ, ಪದ್ದತಿ, ಸಾಮಾಜಿಕ, ಸಂಸ್ಕಾರ ಹಿನ್ನಲೆಗಳನ್ನು ಅರಿತು ಮತ್ತೊಮ್ಮೆ ಜಾತಿ ಪುನರ್ವಿಂಗಡನೆ ಮಾಡಲು ತಿಳಿಸಿರುವುದಾಗಿ ಹಾಗೂ ಈಗಿನ ಪರಿಸ್ಥಿತಿ ಬದಲಾಗಿರುವುದರಿಂದ ಬ್ರಿಟೀಷ್ ಅಧಿಕಾರಿಗಳು ಬಹಳ ವರ್ಷದ ಹಿಂದೆ ಬರೆದಿದ್ದ ತಷ್ಟರ್ ಪುಸ್ತಕವನ್ನು ಬದಲಾಯಿಸಲು ಕುಲಶಾಸ್ತ್ರಜ್ಞರನ್ನು ಭೇಟಿ ಮಾಡಿ ವಿಶೇಷವಾಗಿರುವಂತಹ ಗ್ರಂಥವನ್ನು ರಚಿಸಲು ಮುಂದಾಗಿದ್ದು ಉನ್ನತ ಅಧ್ಯಯನ ಮಾಡಲು  ಈ ಗ್ರಂಥದಿಂದ ಪ್ರತಿಯೊಬ್ಬ ವಿದ್ಯಾಥರ್ಿಗಳಿಗೂ ಅನುಕೂಲವಾಗಲಿದೆ, ಈ ಗ್ರಂಥ ಸಿದ್ದವಾಗಲು 2ಕೋಟಿಯಷ್ಟು ಹಣ ವೆಚ್ಚವಾಗಲಿದ್ದು ಗ್ರಂಥ ಸಿದ್ದವಾಗಿ ಮಾರಾಟವಾದರೆ ಸುಮಾರು 6ಕೋಟಿಯಷ್ಟು ಲಾಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಮಡಿವಾಳ ಜನಾಂಗದ ಅಧ್ಯಕ್ಷ ಹಾಗೂ ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ,  ಎಂ.ಎಲ್.ಮಲ್ಲಿಕಾರ್ಜನಯ್ಯ, ನಾಗರಾಜು ಸೇರಿದಂತೆ ಹಲವರಿದ್ದರು.
ಆಧಾರ್ ಕಾಡರ್್ ಬಗ್ಗೆ ತಿಳಿಸಲು ಬೃಹತ್ ಪಾದಯಾತ್ರೆ
ಚಿಕ್ಕನಾಯಕನಹಳ್ಳಿ,ಜ.29:  ಆಧಾರ್ ಕಾಡರ್್ ಸವಲತ್ತುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಾದಯಾತ್ರೆಯು ಫೆಬ್ರವರಿ 3ರಿಂದ ಆರಂಭಗೊಳ್ಳುವುದು, ತಿಪಟೂರಿನಲ್ಲಿ ಉದ್ಘಾಟನೆಗೊಂಡು, ಶೆಟ್ಟಿಕೆರೆ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ಬರುತ್ತದೆ, 4ನೇ ತಾರೀಖು ಕಿಬ್ಬನಹಳ್ಳಿ ಮಾರ್ಗವಾಗಿ ದೊಡ್ಡಗುಣಿಯಲ್ಲಿ ತಂಗಿದ ನಂತರ 5ರಂದು ಗುಬ್ಬಿ, 6ರಂದು ಹೆಗ್ಗರೆಯಲ್ಲಿರುವ  ಗಂಗಾಧರಯ್ಯ ಮೆಮೋರಿಯಲ್ ಹಾಲ್ನಲ್ಲಿ ಸಭೆ ನಡೆಯಲಿದ್ದು ಕೇಂದ್ರದ ಹಲವಾರು ಮುಖಂಡರು ಭಾಗವಹಿಸಲಿದ್ದಾರೆ.
ಸಕರ್ಾರದಿಂದ ಜನ ಸಾಮಾನ್ಯರಿಗೆ ತಲುಪುತ್ತಿರುವ ಅನುದಾನಗಳು ಮಾಸಾಶನ ಇನ್ನಿತರ ಸಹಾಯಧವನ್ನು ನೇರವಾಗಿ ತಲುಪಲು ಮಹತ್ವಾಕಾಂಕ್ಷಿ ವ್ಯವಸ್ಥೆಯೊಂದನ್ನು ಕಾಂಗ್ರೇಸ್ ಸಕರ್ಾರ ಜಾರಿಗೊಳಿಸಿದೆ. ಇನ್ನು ಮುಂದೆ ಫಲನುಭಾವಿಗಳು ಆಧಾರ್ ಕಾಡರ್್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ವಿವರಗಳನ್ನು ಅವರ ಬ್ಯಾಂಕ್ ಖಾತೆಗೆ ಸಮೀಕರಿಸಿ ಅದರ ಮೂಲಕ ಫಲಾನುಭವಿಗಳಿಗೆ ತಲುಪಬೇಕಾದ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಬಹುದಾಗಿದೆ, ಉದ್ಯೋಗ ಖಾತ್ರಿ ಯೋಜನೆಯಡಿ ಸವಲತ್ತು ಪಡೆಯುತ್ತಿರುವವರು, ವೃದ್ದಾಪ್ಯ ವೇತನ, ವಿಧವಾ ವೇತನಾ, ಅಂಗವಿಕಲರ ವೇತನ, ಶಾಲಾ ಶಿಕ್ಷಕರು ಮತ್ತು ವಿದ್ಯಾಥರ್ಿಗಳ ವಿದ್ಯಾಥರ್ಿ ವೇತನ ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಸೇರಿದಂತೆ ನಿಧರ್ಿಷ್ಟ ಅವಧಿಗೆ ಸಂಬಳದ ರೂಪದಲ್ಲಿ ಹಣ ಪಡೆಯುತ್ತಿರುವವರು ಹಾಗೂ ಇತರ ಸೌಲಭ್ಯ ಪಡೆಯಲು ಆಧಾರ್ ಅವಶ್ಯಕತೆಯಾಗಿದ್ದು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸಕರ್ಾರ ದಿಟ್ಟ ಹೆಜ್ಜೆ ಇಟ್ಟಿದ್ದು ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಆರ್.ನಾರಾಯಣ್, ಬಿ.ಲಕ್ಕಪ್ಪ, ಕಾಂಗ್ರೆಸ್ ಪಕ್ಷದ ವಿಧಾನಸಭಾ ವೀಕ್ಷಕ ಕ್ಯಾಪ್ಟನ್ ಸೋಮಶೇಖರ್, ಆರ್.ರಾಜೇಂದ್ರ, ತುಮಕೂರು ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಆರ್.ರಾಜೇಂದ್ರ,  ಯುವ  ಮುಖಂಡರುಗಳಾದ ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ, ವಾಸು ಸೇರಿದಂತೆ ಹಲವರಿದ್ದರು.
aPÀÌ£ÁAiÀÄPÀ£ÀºÀ½îAiÀÄ MPÀÌ°UÀ ¸ÀªÀÄÄzÁAiÀÄzÀªÀgÀÄ D¢ZÀÄAZÀ£ÀVj ªÀĺÁ¸ÀA¸ÁÜ£À ¦ÃoÁzsÀåPÀëgÁzÀ ¨Á®UÀAUÁzsÀgÀ£ÁxÀ¸Áé«ÄUÀ¼À ¨sÀPÀÛ ¸ÀAUÀªÀÄ ¥ÀÄuÁågÁzsÀ£À ¸ÀªÀÄgÀA¨sÀPÉÌ vÉgÀ¼À®Ä ±Á¸ÀPÀ ¹.©.¸ÀÄgÉñï¨Á§Ä 30§¸ïUÀ¼À ªÀåªÀ¸ÉÜ PÀ°à¹zÀÝgÀÄ.  D¢ZÀÄAZÀ£ÀVjUÉ vÉgÀ¼ÀªÀ ¨sÀPÀÛjUÉ ©¼ÉÆÌqÀĪÀ ¸ÀAzÀ¨sÀðzÀ°è  MPÀÌ°UÀ ¸ÀªÀÄÄzÁAiÀÄzÀªÀgÁzÀ ªÀiÁf f.¥ÀA.¸ÀzÀ¸Àå ¤AUÀ¥Àà, ªÀiÁf. UÁæ.¥ÀA.¸ÀzÀ¸Àå £ÁUÀgÁdÄ, ©.J¸ï.¤AUÀ¥Àà, ºÉZï.©.J¸ï.£ÁgÁAiÀÄtUËqÀ, mË£ï ¨ÁåAPï ªÀiÁf CzsÀåPÀë ¹.J¸ï.£ÀlgÁeï G¥À¹ÜvÀjzÀÝgÀÄ.



ಪ್ರಜಾಪ್ರಗತಿಗೆ 25ರ ಸಂಭ್ರಮ
ಚಿಕ್ಕನಾಯಕನಹಳ್ಳಿ,ಜ.29: ಪ್ರಜಾಪ್ರಗತಿ ಓದುಗರ ಬಳಗ ಹಾಗೂ ರೋಟರಿ ಕ್ಲಬ್ ವತಿಯಿಂದ ಇದೇ30ರಂದು(ಇಂದು) ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮವನ್ನು ಸಂಜೆ 6ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು,  ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ವಹಿಸಲಿದ್ದು, ಉದ್ಘಾಟನೆಯನ್ನು ಕವಿ-ಲೇಖಕ ಎಸ್.ಜಿ.ಸಿದ್ದರಾಮಯ್ಯ ನೆರವೇರಿಸಲಿದ್ದಾರೆ, ಸಮಾರಂಭದಲ್ಲಿ  ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣನವರಿಗೆ ಗೌರವಾಭಿನಂದನೆ ಸಲ್ಲಿಸಲಿದ್ದು, 'ಓದುಗನೆ ಪತ್ರಿಕೆಯ ವಾರಸುದಾರ' ವಿಷಯವಾಗಿ  ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ಬಿಳಿಗೆರೆ ಶಿವಕುಮಾರ್ ಮಾತನಾಡಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ 'ಓದುಗನೆ ಪತ್ರಿಕೆಯ ವಾರಸುದಾರ' ವಿಷಯವಾಗಿ  ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಎಂ.ಸಿ.ಲಲಿತ, ಬಿ.ಇ.ಓ ಸಾ.ಚಿ.ನಾಗೇಶ್, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ಉಪಸ್ಥಿತರಿರುವರು.