Saturday, June 25, 2016

ಶೆಟ್ಟಿಕೆರೆ ಆಸ್ಪತ್ರೆಗೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭೇಟಿ
ಚಿಕ್ಕನಾಯಕನಹಳ್ಳಿ,ಜೂ.25 : ಶೆಟ್ಟಿಕೆರೆ ಸಕರ್ಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಸರಿಯಾಗಿ ಬರದೇ ಇರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕು ವೈದ್ಯಾಧಿಕಾರಿಗಳು ಶೆಟ್ಟಿಕೆರೆ ಆಸ್ಪತ್ರೆಗೆ ಆಗ್ಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ರವರಿಗೆ ಸೂಚಿಸಿದ ಅವರು, ತಾಲ್ಲೂಕಿನ ಎಲ್ಲಾ ಸಕರ್ಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ, ವೈದ್ಯರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಾರೋ, ಇಲ್ಲವೋ ಎಂಬುವುದರ ಬಗ್ಗೆ ಗಮನ ಹರಿಸಿ ಹಾಗೂ ಸಿಬ್ಬಂದಿಗಳ ಪರಿಶೀಲನೆ ನಡೆಸಬೇಕು ಎಂದರು.
ಶೆಟ್ಟಿಕೆರೆ ಗ್ರಾಮಸ್ಥ ನರಸಿಂಹಮೂತರ್ಿ ಮಾತನಾಡಿ, ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಯೊಂದು ಪರೀಕ್ಷೆಗೂ ಹಣ ಕೇಳುತ್ತಾರೆ,  ಆರೋಗ್ಯ ರಕ್ಷಾ ಸಮಿತಿ ಇದ್ದರೂ  ಇದುವರೆಗೂ ಸಭೆಯನ್ನು ಕರೆಯದೆ ನಿರ್ಲಕ್ಷಿಸಿದ್ದಾರೆ ಇದರಿಂದ ಆರೋಗ್ಯ ರಕ್ಷಾ ಸಮಿತಿಯ ಮಾತನ್ನು ಯಾವ ಸಿಬ್ಬಂದಿ ಕೇಳುತ್ತಿಲ್ಲ ಎಂದು ಆರೋಪಿಸಿದರು. 
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಆಸ್ಪತ್ರೆ ಸಾರ್ವಜನಿಕರ ಸ್ವತ್ತು,  ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಪ್ರಮಾಣಿಕವಾಗಿ ಕರ್ತವ್ಯ ನೀಡಬೇಕು ಇದರಿಂದ ರೋಗಿಗಳಿಗೆ ವಿಶ್ವಾಸ ಮೂಡುತ್ತದೆ ಎಂದ ಅವರು, ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ ಅಧಿಕಾರಿಗಳು ಬೇರೆ ಕಡೆ ವರ್ಗವಾದಗ ಆ ಭಾಗದ ಗ್ರಾಮದ ಜನರು ಅದೇ ಅಧಿಕಾರಿಯೇ ಬೇಕು ಎಂದು ಅನೇಕ ಬಾರಿ ನನ್ನಲ್ಲಿ ಕೇಳಿಕೊಂಡಿದ್ದಾರೆ. ಈ ರೀತಿಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಮನಸ್ಸಿಲ್ಲಿರಬೇಕು, ಅದಕ್ಕಾಗಿ ಉತ್ತಮವಾದ ಅಭಿವೃದ್ದಿ ಕೆಲಸಗಳನ್ನು ಸ್ಥಳದಲ್ಲಿದ್ದು ಮಾಡುವಂತೆ ವೈದ್ಯಾಧಿಕಾರಿಗೆ ಸೂಚಿಸಿದ ಅವರು, ಆಸ್ಪತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು. ಆಸ್ಪತ್ರೆಯಲ್ಲೂ ಯಾವುದಾದರೂ ಕುಂದು ಕೊರತೆಗಳಿದ್ದಲ್ಲಿ ಸಂಸದರು, ಶಾಸಕರಿಗೆ, ಗ್ರಾಮ ಪಂಚಾಯಿತಿಯ ತಾಲ್ಲೂಕು ಪಂಚಾಯಿತಿಯ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಬಿಇಓ ಕೃಷ್ಣಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ, ಗ್ರಾ.ಪಂ.ಸದಸ್ಯ ದಯಾನಂದ್, ಮಾಜಿ ಗ್ರಾ.ಪಂ.ಅಧ್ಯಕ್ಷ ಶಶಿಧರ್, ಮಂಜುನಾಥ್, ಜಗದೀಶ್ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಮಲ್ಲಿಗೆರೆ ಮಾರ್ಗಕ್ಕೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ಗೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ 
ಚಿಕ್ಕನಾಯಕನಹಳ್ಳಿ,ಜೂ.25 : ತಾಲ್ಲೂಕಿನ ಮಲ್ಲಿಗೆರೆ ಮಾರ್ಗವಾಗಿ ಸಂಚರಿಸಲು ತಿಪಟೂರು ಕೆ.ಎಸ್.ಆರ್.ಟಿ.ಸಿ ಘಟಕದಿಂದ ನೀಡಿರುವ ನೂತನ ಕೆ.ಎಸ್.ಆರ್.ಟಿ.ಸಿ ಬಸ್ಗೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ ನೀಡಿದರು.
  ತಿಪಟೂರು ಘಟಕದ ಕೆ.ಎಸ್.ಆರ್.ಟಿ.ಸಿ ಘಟಕದಿಂದ ಚಿ.ನಾ.ಹಳ್ಳಿ ತಾಲ್ಲೂಕಿನ ಮಲ್ಲಿಗೆರೆ  ದವನದಹೊಸಹಳ್ಳಿ, ಕಾಮಲಾಪುರ, ಮತಿಘಟ್ಟ ಮೂಲಕ ಬರಗೂರು, ಬೈಲಪ್ಪನಮಠದ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ತಲುಪಿ ಇಲ್ಲಿಂದ ತಿಪಟೂರಿಗೆ ತೆರಳುವುದು, ಇದೇ ರೀತಿ ದಿನಕ್ಕೆ  ನಾಲ್ಕು ಬಾರಿ ಈ ಮಾರ್ಗಗಳಲ್ಲಿ ಬಸ್ ಸಂಚಾರದಿಂದ ತಿಪಟೂರು, ಚಿ.ನಾ.ಹಳ್ಳಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ಮಲ್ಲಿಗೆರೆ ಗ್ರಾ.ಪಂ.ಅಧ್ಯಕ್ಷೆ ಕರಿಯಮ್ಮ, ಉಪಾಧ್ಯಕ್ಷ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಎರಡು ಬಾರಿ ಉದ್ಘಾಟನೆ: ಶಾಸಕ ಸಿ.ಬಿ.ಸುರೇಶ್ಬಾಬು ಗುರುವಾರ ಬೆಳಗ್ಗೆ ತಾಲ್ಲೂಕಿನ ಮಲ್ಲಿಗೆರೆ ಕರಿಯಮ್ಮ ದೇವತೆಗೆ ಪೂಜೆ ಸಲ್ಲಿಸಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರೆ, ಮಧ್ಯಾನ್ಹ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತೊಮ್ಮೆ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಸಾರ್ವಜನಿಕರು ಉಬ್ಬೇರಿಸುವಂತೆ ಮಾಡಿದರು.

ಹೈಮಾಸ್ಟ್ ದೀಪ ಸರಿಪಡಿಸಲು ಮುಂದಾದ ಪುರಸಭೆ 
ಚಿಕ್ಕನಾಯಕನಹಳ್ಳಿ,ಜೂ.25 : ಮಾಧ್ಯಮಗಳ ಬಿತ್ತರವಾದ ವರದಿಯಿಂದ ಎಚ್ಚೆತ್ತ ಪುರಸಭೆ ಪಟ್ಟಣದ ನೆಹರು ವೃತ್ತದಲ್ಲಿರುವ ಹೈಮಾಸ್ಟ್ ದೀಪದ ರಿಪೇರಿಗೆ ಮುಂದಾಗಿದೆ.
ಕಳೆದ ಮೂರು ತಿಂಗಳಿನಿಂದ ಪಟ್ಟಣದ ಹೃದಯ ಭಾಗವಾದ ನೆಹರು ವೃತ್ತದಲ್ಲಿ ಹೈಮಾಸ್ಟ್ ದೀಪವಿದ್ದರೂ ಬೆಳಗದೆ ರಾತ್ರಿ ವೇಳೆ ಕತ್ತಲು ಆವರಿಸುತ್ತಿತ್ತು, ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಹಿನ್ನಲೆಯಲ್ಲಿ ಪುರಸಭಾ ಅಧಿಕಾರಿಗಳು ಶನಿವಾರ ಹೈಮಾಸ್ಟ್ ದೀಪದ ದುರಸ್ತಿಗೆ ಚಾಲನೆ ನೀಡಿದ್ದಾರೆ. ಇದರಂತೆ ಬಿ.ಹೆಚ್.ರಸ್ತೆಯ ಉದ್ದಕ್ಕೂ 25ಕ್ಕೂ ಹೆಚ್ಚು ವಿದ್ಯುತ್ ದೀಪಗಳು ದುರಸ್ತಿಯಲ್ಲಿವೆ, ಈ ಎಲ್ಲಾ ದೀಪಗಳನ್ನು ಸರಿಪಡಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜುಲೈ ತಿಂಗಳ 15ರಿಂದ ಆರಂಭವಾಗುವ ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಮೂರು ದಿನಗಳು ನಡೆಯಲಿದ್ದು  ರಾಜ್ಯದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ತೊಂದರೆಯಾಗದಂತೆ ಪಟ್ಟಣದ ಎಲ್ಲಾ ಬೀದಿದೀಪಗಳನ್ನು ದುರಸ್ತಿಗೊಳಿಸಬೇಕು ಹಾಗೂ ನೀರಿನ ಸಮಸ್ಯೆ ತಲೆದೋರಿದಂತೆ ಪುರಸಭೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 
ಸವಿತಾ ಸಮಾಜದ ಅಧ್ಯಕ್ಷರಾಗಿ ಸುಪ್ರೀಂ ಸುಬ್ರಹ್ಮಣ್ಯ
 ಅವಿರೋಧವಾಗಿ ಆಯ್ಕೆಯಾಗಿದ್ದಾರೆ.