Saturday, June 11, 2016


ಕನಕ ವಿದ್ಯಾಭಿವೃದ್ದಿ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ 
ಚಿಕ್ಕನಾಯಕನಹಳ್ಳಿ,ಜೂ.11 : ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು ಎಂದು ಪೋಷಕರು ಆಸೆ ಪಡುವ ಜೊತೆಗೆ, ಮಕ್ಕಳು ಯಾವ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ ಎಂದು ಗಮನ ಹರಿಸಿ ಆ ವಿಷಯದಲ್ಲಿ ಅವರಿಗೆ ಪ್ರೋತ್ಸಾಹಿಸುವುದು ಅವಶ್ಯಕ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗಂಗಾಧರ ಕೊಡ್ಲಿಯವರ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ಉಚಿತ ನೋಟ್ಬುಕ್ ವಿತರಣೆ, ಕಾಲೇಜು ಶುಲ್ಕ ಪಾವತಿ, ಸಹಾಯ ಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತ ಗ್ರಾಮದ ಬಡ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸುವುದು ಅವಶ್ಯಕ ಅಂತಹ ಕೆಲಸವನ್ನು ಕನಕ ವಿದ್ಯಾಭಿವೃದ್ದಿ ಸಮಿತಿ ಮಾಡುತ್ತಿರುವುದು ಶ್ಲಾಘನೀಯ, ಈ ಸಮಿತಿ ಬೆಳೆಯಲು ದಿವಂಗತ ಕಣ್ಣಯ್ಯನವರ ಪಾತ್ರ ಬಹು ದೊಡ್ಡದು ಅವರ ಶ್ರಮ ಮತ್ತು ಬಡ ವಿದ್ಯಾಥರ್ಿಗಳ ಏಳಿಗೆಗೆ ಶ್ರಮಿಸುತ್ತಿದ್ದ ರೀತಿಯಿಂದಲೇ ಸಮಿತಿ ಪ್ರತಿ ವರ್ಷ ನೂರಾರು ವಿದ್ಯಾಥರ್ಿಗಳಿಗೆ ನಗದು ಹಾಗೂ ನೋಟ್ಬುಕ್ ವಿತರಣೆ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದರು.
ಶಿಕ್ಷಣವನ್ನು ಬಹಳ ಎಚ್ಚರಿಕೆಯಿಂದ ಬೋಧಿಸುವುದು ಅಗತ್ಯವಾಗಿದೆ, ಉತ್ತಮ ದಾರಿ ಹಾಗೂ ಒಳ್ಳೆಯ ಪರಿಸರವನ್ನು ಶಿಕ್ಷಣದಿಂದ ಮಾತ್ರ ನೀಡಲು ಸಾಧ್ಯ, ದೇಶಕ್ಕಾಗಿ ದುಡಿಯುವದು, ಸಮಾಜಮುಖಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ ಎಂದರಲ್ಲದೆ ಜಿಲ್ಲೆಯಲ್ಲಿ ಚಿ.ನಾ.ಹಳ್ಳಿ, ಶಿರಾ, ಪಾವಗಡ ಶೈಕ್ಷಣಿಕವಾಗಿ ಬೆಳೆದಿದೆ ಎಂದರು.
ಬಿಇಓ ಕೃಷ್ಣಮೂತರ್ಿ ಮಾತನಾಡಿ, ವಿದ್ಯಾಥರ್ಿಗಳು ದಿನನಿತ್ಯ ಶಿಕ್ಷಣದಲ್ಲಿ ಬದಲಾವಣೆ ಕಾಣಬೇಕು, ಸ್ಮಧರ್ಾತ್ಮಕ ಯುಗಕ್ಕೆ ತಕ್ಕಂತೆ ಓದುವುದು ವಿದ್ಯಾಥರ್ಿಗಳು ಕಲಿಯಬೇಕು ಆಗಲೇ ಬೆಳೆಯಲು ಸಾಧ್ಯ, ಹುಳಿಯಾರಿನ ವಿದ್ಯಾಥರ್ಿಯೊಬ್ಬ ಪಿಸಿಎಂಬಿ ಯಲ್ಲಿ ಶೇ.100% ಅಂಕ ಪಡೆದರೂ ಸಿಇಟಿಯಲ್ಲಿ ಕಡಿಮೆ ಅಂಕ ಪಡೆದದ್ದರಿಂದ ಮೆಡಿಕಲ್ ಸೀಟ್ ದೊರೆತಿಲ್ಲ ಎಂದರಲ್ಲದೆ ಶ್ರಮ, ಶ್ರದ್ದೆ ಇದ್ದರೆ ಯಾವ ಕೆಲಸವಾದರೂ ಸುಲಭವಾಗುತ್ತದೆ ಎಂದರು.
ಕನಕ ವಿದ್ಯಾಭಿವೃದ್ದಿ ಸಮಿತಿಯ ಕಾರ್ಯದಶರ್ಿ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಬಡಮಕ್ಕಳ ಸ್ಥಿತಿ ಅರಿತು 2003ರಲ್ಲಿ ಆರಂಭವಾದ ವಿದ್ಯಾಭಿವೃದ್ದಿ ಸಮಿತಿ ಸಾವಿರಾರು ವಿದ್ಯಾಥರ್ಿಗಳಿಗೆ ನೆರವಾಗಿದೆ ಅಂದಿನಿಂದಲೂ ಇಂದಿನವರೆಗೆ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸುತ್ತಾ, ವಿದ್ಯಾಥರ್ಿಗಳಿಗೆ ಉಚಿತ ನೋಟ್ಬುಕ್ ವಿತರಿಸುತ್ತಾ ಕಾರ್ಯ ಮಾಡುತ್ತಿದೆ ಎಂದರಲ್ಲದೆ ಈ ಸಮಿತಿಯಿಂದ ಅನುಕೂಲ ಪಡೆದ ಉನ್ನತ ಮಟ್ಟದಲ್ಲಿರುವ ವಿದ್ಯಾಥರ್ಿಗಳು ಸಮಿತಿಗೆ ಸಹಾಯ ಮಾಡಿದರೆ ಮುಂದಿನ ಮಕ್ಕಳ ಭವಿಷ್ಯಕ್ಕೆ ನೆರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. 
ಸಮಾರಂಭದಲ್ಲಿ ಕನಕ ವಿದ್ಯಾಭಿವೃದ್ದಿ ಸಮಿತಿಯ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಸಿ.ಡಿ.ರಾಮಲಿಂಗಯ್ಯ, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕಂಬಳಿ ಸೊಸೈಟಿ ಅಧ್ಯಕ್ಷ ಕೆ.ಪಿ.ಧೃವಕುಮಾರ್  ಮತ್ತಿತರರು ಉಪಸ್ಥಿತರಿದ್ದರು.

ಭಗೀರಥ ಜಯಂತಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ.11 :ತಾಲ್ಲೂಕು ಆಡಳಿತ ಮತ್ತು ಉಪ್ಪಾರ ಸಂಘ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂನ್ 13ರಂದು ಮಧ್ಯಾಹ್ನ 12.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ಶ್ರೀ ಭಗೀರಥ ಜಯಂತಿ ನಡೆಯಲಿದೆ.
ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮನಂದ ಪುರಿ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸುವರು. ಶಾಸಕ ಸಿ.ಬಿಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ ಅಧ್ಯಕ್ಷೆ ಕೆ.ಹೊನ್ನಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಭಗೀರಥರ ಭಾವಚಿತ್ರ ಆನಾವರಣಗೊಳಿಸುವರು. ತುಮಕೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಾಸಂತಿಉಪ್ಪಾರ ಉಪನ್ಯಾಸ ನೀಡುವರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನೇಕಾರ ದೇವಿಕರಿಯಪ್ಪ, ಉಪ್ಪಾರ ಸಂಘದ ಉಪಾಧ್ಯಕ್ಷ ಈರಲಕ್ಕಪ್ಪ, ಕುಂಬಾರ ಸಮಾಜದ ಹನುಮಂತಯ್ಯ, ಮಾಜಿ. ಜಿ.ಪಂ.ಸದಸ್ಯ ಕೆಂಚಪ್ಪ, ನಾಟಿ ವೈದ್ಯ ಪುಟ್ಟಯ್ಯ ಇವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಗೃಹ ಸಚಿವ ಡಾ|ಜಿ ಪರಮೇಶ್ವರ್, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಸಂಸದೀಯ ಕಾರ್ಯದಶರ್ಿ ಪುಟ್ಟರಂಗಶೆಟ್ಟಿ, ತುಮಕೂರು ಜಿ.ಪಂ ಅಧ್ಯಕ್ಷೆ ಎಮ್.ಲತಾ ಮತ್ತಿತ್ತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ಭೋಧಿವೃಕ್ಷ ಸಾಂಸ್ಕೃತಿಕ ಬಳಗದ ವತಿಯಿಂದ ಕಾರ್ಯಕ್ರಮ  

ಚಿಕ್ಕನಾಯಕನಹಳ್ಳಿ,ಜೂ.11 : ಹೆಂಡ ಬೇಡ, ಕಂಡ ಬೇಡ ತಬ್ಬಲಿ ಜಾತಿಗಳಿಗೆ ವಸತಿ ಶಾಲೆಗಳನ್ನು ಕೊಡಿ ಎಂದು ಎಪ್ಪತ್ತರ ದಶಕದಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ಹೋರಾಡಿದ ಫಲವಾಗಿ ಮೊರಾಜರ್ಿ, ಕಿತ್ತೂರು ರಾಣಿ ಚೆನ್ನಮ್ಮ, ವಾಜಪೇಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಹೇಳಿದರು. 
ಪಟ್ಟಣದ ಡಿವಿಪಿ ಪ್ರೌಢಶಾಲೆಯಲ್ಲಿ ಬೋಧಿವೃಕ್ಷ ಸಾಂಸ್ಕೃತಿಕ ಬಳಗದ ವತಿಯಿಂದ ನಡೆದ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮ ದಿನಾಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಮಾನತೆಯ ಫಲವಾಗಿ ದಲಿತ ಸಂಘರ್ಷ ಸಮಿತಿ ಜನ್ಮ ತಾಳಿತು, ತಬ್ಬಲಿ ಜಾತಿಗಳು ರಾಜಕೀಯವಾಗಿ ಸದೃಡವಾದಾಗ ಮಾತ್ರ ಪ್ರೊ.ಬಿ.ಕೃಷ್ಣಪ್ಪನವರ ಕನಸು ಹಾಗೂ ಡಿಎಸ್ಎಸ್ ಹೋರಾಟಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದರು.
ಇಂದು ಬಿ.ಕೃಷ್ಣಪ್ಪನವರು ಬದುಕಿದ್ದರೆ ಕನರ್ಾಟಕದ ರಾಜಕೀಯ ಚಿತ್ರಣ ಬದಲಾಗುತ್ತಿತ್ತು, ಬಿ.ಕೆ ಇಲ್ಲದ ದಲಿತ ಸಂಘರ್ಷ ಸಮಿತಿ ತಬ್ಬಲಿಯಾಗಿದೆ, ದಲಿತ ಸಂಘರ್ಷ ಸಮಿತಿಯ ಲಕ್ಷಾಂತರ ಕಾರ್ಯಕರ್ತರು ಸಂಘಟನೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸಮಾಜದಲ್ಲಿ ನೆಲೆಯೂರುವ ಅಸ್ಪೃಶ್ಯತೆ, ಬಂಡವಾಳ ಶಾಹಿ ಹಾಗೂ ಭೂಮಾಲೀಕರ ದಬ್ಬಾಳಿಕೆಯ ವಿರುದ್ದ ಹೋರಾಟ ಮುಂದುವರೆಸಬೇಕು ಎಂದರು.
ಡಿಎಸ್ಎಸ್ ತಾಲ್ಲೂಕು ಸಂಚಾಲಕ ಲಿಂಗದೇವರು ಮಾತನಾಡಿ, ದಲಿತ ಸಂಘರ್ಷ ಸಮಿತಿಯನ್ನು ಬಿ.ಕೃಷ್ಣಪ್ಪನವರು ಎಲ್ಲಾ ಜಾತಿಯ ಬಡವರ ಧ್ವನಿಯಾಗಿ ಕಟ್ಟಿದ್ದರು, ಬಿ.ಕೆಯವರು ನಿಧನ ಹೊಂದಿದಾಗ ಅವರ ಸಂಸ್ಕಾರಕ್ಕೂ ಜಾಗ ಇರಲಿಲ್ಲ, ಡಿಎಸ್ಎಸ್ನ ಪದಾಧಿಕಾರಿಗಳು ಇದನ್ನು ಅರ್ಥಮಾಡಿಕೊಂಡು ಅರ್ಥಪೂರ್ಣ ಹೋರಾಟವನ್ನು ಮುಂದುವರೆಸಬೇಕು ಎಂದರು.
ಬೋಧಿವೃಕ್ಷ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಅಶ್ವತ್ಥ್ನಾರಾಯಣ್ ಮಾತನಾಡಿ, ಇಂದು ಸಂಘಟನೆಗಳು ಜೀವಸತ್ವವನ್ನು ಕಳೆದುಕೊಂಡಿವೆ, ಬಿ.ಕೃಷ್ಣಪ್ಪನವರ ತಾತ್ವಿಕ ಒಳನೋಟವನ್ನು ಅರ್ಥಮಾಡಿಕೊಂಡು ಹೋರಾಟಗಾರರು ಮುಂದುವರೆಯಬೇಕು ಎಲ್ಲಾ ಜಾತಿಯ ಮಾನವೀಯ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಡಿಎಸ್ಎಸ್ ಕಟ್ಟುವ ಅವಶ್ಯಕತೆ ಇದೆ ಎಂದರು.
ಬಿ.ಕೃಷ್ಣಪ್ಪನವರು ರಾಯಚೂರಿನಲ್ಲಿ ನಡೆದಿದ್ದ ಬೋಳು ಬಂಡಪ್ಪರವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾಡಿದ್ದ ಭಾಷಣದ ಧ್ವನಿಮುದ್ರಿಕೆಯನ್ನು ಕೇಳಿಸಿ ಅದರ ಮೇಲೆ ಚಚರ್ೆ, ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರುಗಳಾದ ಜೆ.ಸಿ.ಪುರ ಗೋವಿಂದರಾಜು, ಕೆ.ನಂಜುಂಡಯ್ಯ, ಕೆ.ಆರ್.ರಂಗಸ್ವಾಮಿ, ಬಿಳಿಗೆಹಳ್ಳಿ ರಾಜು, ಪುರಸಭೆ ಸದಸ್ಯ ಸಿ.ಡಿ.ಚಂದ್ರಶೇಖರ್, ಕಟ್ಟೆಮನೆ ರಂಗಸ್ವಾಮಿ, ಶೆಟ್ಟಿಕೆರೆ ದೇವರಾಜು, ತಮ್ಮಡಿಹಳ್ಳಿ ರವಿ, ಸಿ.ಎನ್.ಹನುಮಯ್ಯ, ಹುಳಿಯಾರು ರಾಜಪ್ಪ, ಡಾ.ಮಲ್ಲಿಕಾಜರ್ುನ್, ಮುಖ್ಯೋಪಾಧ್ಯಾಯ.ಜಿ.ನರಸಿಂಹಮೂತರ್ಿ, ಕಂಟಲಗೆರೆ ಗುರುಪ್ರಸಾದ್ ಮುಂತಾದವರು ಹಾಜರಿದ್ದರು.

ಬಿ.ಕೆ.ಸಂಪರ್ಕಕ್ಕೆ ಬಾರದಿದ್ದರೆ ನಾನು ರೌಡಿಯಾಗುತ್ತಿದ್ದೆ: ನಾನು ಕಗ್ಗಲ್ಲು ಬಿ.ಕೆ.ಎಂಬ ಶಿಲ್ಪಿ ನನ್ನನ್ನು ಶಿಲೆಯಾಗಿಸಿದರು. ಈ ಕುಂದೂರು ತಿಮ್ಮಯ್ಯನಿಗೆ ಸಾಮಾಜಿಕವಾಗಿ ಒಂದಿಷ್ಟು ಘನತೆ,ಗೌರವ ಸಿಕ್ಕಿದ್ದರೆ ಅದು ಪ್ರೊ.ಬಿ.ಕೃಷ್ಣಪ್ಪ ಅವರಿಂದ ನಾನು ಬೆಂಗಳೂರಿನಲ್ಲಿದ್ದಾಗ ಭೂಗತ ಪಾತಕಿ ಶ್ರೀರಾಂಪುರ ಕಿಟ್ಟಿ ಪರಿಚಯವಾಯಿತು. ಆ ಮೂಲಕ ಕೊತ್ವಾಲ್ ರಾಮಚಂದ್ರ ಹಾಗೂ ಜಯರಾಜ್ ಸಂಪರ್ಕವೂ ಸಿಕ್ಕಿತು. ನಾನು ಭೂಗತ ಜಗತ್ತಿ ಜಾರುತ್ತಿದ್ದಾಗ ಆಕಸ್ಮಿಕವಾಗಿ ಪ್ರೂ.ಬಿ.ಕೃಷ್ಣಪ್ಪ ಅವರ ಪರಿಚಯವಾಯಿತು. ಅವರು ನೀಡಿದ ಸಾಮಾಜಿಕ ಪ್ರಜ್ಞೆ ನನ್ನನ್ನು ಭೂಗತ ಲೋಕದಿಂದ ಹೊರಬರುವಂತೆ ಮಾಡಿತು. ಬಿ.ಕೆ.ಇಲ್ಲದಿದ್ದರೆ ನಾನು ರೌಡಿಯಾಗಿರುತ್ತಿದ್ದೆ ಎಂದು ಕುಂದೂರು ತಿಮ್ಮಯ್ಯ ಹೇಳಿದರು.