Monday, November 29, 2010ಕಸಬ್ನನ್ನು ಶೀಘ್ರ ಗಲ್ಲಿಗೇರಿಸಿ ಎಬಿವಿಪಿ ಒತ್ತಾಯ
ಚಿಕ್ಕನಾಯಕನಹಳ್ಳಿ,ನ,29: ಮುಂಬೈ ಬಾಂಬ್ ಸ್ಪೋಟ ನಡೆದು ಎರಡು ವರ್ಷ ಕಳೆದರೂ ಉಗ್ರ ಕಸಬ್ಗೆ ಗಲ್ಲು ಶಿಕ್ಷೆ ನೀಡದಿರುವುದಕ್ಕೆ ವ್ಯವಸ್ಥೆಯ ವಿರುದ್ದ ಬೇಸರ ವ್ಯಕ್ತಪಡಿಸಿರುವ ಅಭಾವಿಪ ತಾಲೂಕು ಘಟಕ ಕಸಬ್ನನ್ನು ಶೀಘ್ರ ಗಲ್ಲಿಗೇರಿಸುವಂತೆ ಆಗ್ರಹಿಸಿದೆ.
ಪಟ್ಟಣದ ನೆಹರು ಸರ್ಕಲ್ನಲ್ಲಿ ನಡೆದ ಮುಂಬೈ ಬಾಂಬ್ ಸ್ಪೋಟದ ಕರಾಳ ದಿನದ ನೆನಪು ಮತ್ತು ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ನೂರಾರು ದೀಪಗಳನ್ನು ಹಚ್ಚಿ ಮೌನ ಆಚರಣೆಯ ಮೂಲಕ ಅಭಾವಿಪ ಕಾರ್ಯಕರ್ತರು ವೀರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಈ ಕರಾಳ ದಿನ ಮತ್ತೆ ಮರುಕಳಿಸಬಾರದೆಂಬ ಉದ್ದೇಶದಿಂದ ಮತ್ತು ಭಯೋತ್ಪಾದನೆಯನ್ನು ದೇಶಾದ್ಯಂತ ಹತ್ತಿಕ್ಕಲು ಯುವಶಕ್ತಿ ಮುಂದಾಗಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಮುಖಂಡರಾದ ಸಿ.ಡಿ.ಚಂದ್ರಶೇಖರ್, ಮಿಲ್ಟ್ರಿಶಿವಣ್ಣ ಮಾತನಾಡಿ ಉಗ್ರ ಕಸಬ್ಗೆ ಗಲ್ಲು ಶಿಕ್ಷೆ ನೀಡುವುದಕ್ಕೆ ಮತ್ತು ದೇಶದ ಸೈನಿಕರ ಸೌಕರ್ಯದ ಕೊರತೆಯ ಬಗ್ಗೆ ವಿಷಾದಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಎ.ಬಿ.ವಿ.ಪಿ ಹಿರಿಯ ಕಾರ್ಯಕರ್ತ ರಾಕೇಶ್, ರಕ್ಷಣಾ ವೇದಿಕೆ ಅಧ್ಯಕ್ಷ ಗುರುಮೂತರ್ಿ, ಎಸ್.ಐ ಶಿವಕುಮಾರ್, ಎ.ಬಿ.ವಿ.ಪಿ ಕಾರ್ಯಕರ್ತರಾದ ಮನು, ದಿಲೀಪ್, ರವಿ. ಮಧು, ದರ್ಶನ್, ನಂದನ್, ಜಗದೀಶ್, ನವೀನ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು

ಹಾಲಿನ ಬೆಲೆ ಹೆಚ್ಚಳಕ್ಕೆ ಗ್ರಾಹಕರು ಸ್ಪಂದಿಸಿ: ಹಳೇಮನೆ
ಚಿಕ್ಕನಾಯಕನಹಳ್ಳಿ,ನ.29: ಹಾಲು ಉತ್ಪಾದಕರ ಮನೆಬಾಗಿಲಿಗೆ ಕೆ.ಎಂ.ಎಫ್ ನೀಡುವ ಸವಲತ್ತುಗಳನ್ನು ಸಂಘಗಳ ಮೂಲಕ ಕೊಂಡೊಯ್ಯುವ ಕೆಲಸಕ್ಕೆ ನಮ್ಮ ತಂಡ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಜಿಲ್ಲಾ ಹಾಲೂ ಒಕ್ಕೂಟದ ಅಧ್ಯಕ್ಷರಾಗಿ ಎರಡನೇಬಾರಿಗೆ ಆಯ್ಕೆಯಾದ ತಮಗೆ ಅಭಿಮಾನಿಗಳು ಹಾಗೂ ಹಿತೈಷಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮೊದಲ ಬಾರಿ ಅಧ್ಯಕ್ಷನಾಗಿದ್ದಾಗ ಕೇವಲ 470 ಸಂಘಗಳು ಇದ್ದವು ಇದನ್ನು ಅರಿತು ಸಂಘಗಳನ್ನು ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಹೆಚ್ಚು ಸಂಘಗಳನ್ನು ಸ್ಥಾಪಿಸಲು ಗುರಿಯನ್ನು ಹೊಂದಲಾಯಿತು ಎಂದರು.
ಈಗ ಜಿಲ್ಲೆಯಲ್ಲಿ 856 ಸಂಘಗಳಾಗಿವೆ, ಈ ಎಲ್ಲಾ ಸಂಘಗಳು ಲಾಭದಲ್ಲಿ ನಡೆಯುತ್ತಿದ್ದು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಘಗಳಿಗೆ ಒತ್ತು ನೀಡುತ್ತೇನೆ ಎಂದ ಅವರು ಜಿಲ್ಲೆಯಲ್ಲಿ ಕೇವಲ 3ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 5ಲಕ್ಷ ಲೀಟರ್ ಹಾಲನ್ನು ಹೊಂದಲು ತೀಮರ್ಾನಿಸಿಲಾಗಿದೆ, ಇದಕ್ಕಾಗಿ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದರು. ಹಾಲಿನ ಉತ್ಪಾದನೆಯಿಂದ ಉತ್ಪಾದಕರಿಗೆ ಆಗುತ್ತಿರುವ ಲಾಭ ನಷ್ಟಗಳ ಅರಿವು ಜನರಿಗೆ ತಿಳಿದಿದ್ದು ಹಾಲಿನ ಬೆಲೆಯಲ್ಲಿ ಆಗುವ ಏರುಪೇರುಗಳಿಗೆ ಜನರು ಸಹಕರಿಸಬೇಕು ಎಂದರು.
ರಾಜ್ಯದಲ್ಲೇ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಪ್ರಥಮವಾಗಿ ನಂದಿನಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿದ್ದು ಪ್ರತಿಯೊಬ್ಬರು ಸಹಕರಿಸಿ ಬೆಂಬಲಿಸಿದರೆ ಹೆಚ್ಚಿನ ಸಂಘದ ಅಸ್ಥಿತ್ವಕ್ಕೆ ಪ್ರಾಮುಖ್ಯತೆ ನೀಡುತ್ತೇನೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಿ.ಅಶೋಕ್ ಮಾತನಾಡಿ ಹಾಲು ಒಕ್ಕೂಟವು 300ಕೋಟಿ ಲಾಭದಿಂದ ರೈತರಿಗೆ ಹಲವಾರು ಯೋಜನೆ ತಂದಿದ್ದು ಆಥರ್ಿಕವಾಗಿ ಸಹಕಾರಿಯಾಗಿದೆ ಮತ್ತು ಹಾಲಿನ ಹೆಚ್ಚಿನ ಉತ್ಪಾದನೆಗೆ ರೈತರಿಗೆ ಪಶುವೈದ್ಯ ಸೇವೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಂ.ಹಾ.ಉ, ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ತು.ಹಾ.ಒ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಹಾ.ಒ. ಉಪ ವ್ಯವಸ್ಥಾಪಕ ನಿಜಲಿಂಗಪ್ಪ, ನಿದರ್ೇಶಕ ತ್ರಯಂಬಕ, ಸುಭ್ರಾಯ್ಭಟ್, ಮಹೇಂದ್ರ, ಜಿ.ರಾಜು, ಸೋಮರಾಜ್, ಬಸಪ್ಪ, ಯರಗುಂಟಪ್ಪ, ಬುದ್ದಿಪ್ರಸಾದ್ ಉಪಸ್ಥಿತರಿದ್ದರು.
ಅಪಘಾತ ಒಬ್ಬನ ಸಾವು
ಚಿಕ್ಕನಾಯಕನಹಳ್ಳಿ,ನ.29: ರಸ್ತೆ ಅಪಘಾತದಲ್ಲಿ ಜಾಣೇಹಾರ್ನ ತಿಮ್ಮಯ್ಯ(55) ಎಂಬಾತ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಲಾರಿಯ ಚಕ್ರಕ್ಕೆ ಸಿಕ್ಕಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ತಿಮ್ಮಯ್ಯ ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳದಿದ್ದಾನೆ. ಪ್ರಕರಣವನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿದ್ದಾರೆ.