Thursday, March 28, 2013

ಸಿ.ಬಿ.ಎಸ್, ಜೆ.ಸಿ.ಎಂ.ಇಬ್ಬರಲ್ಲೇ ಅಧಿಕಾರ ಹಂಚಿಕೆ: ಇತಿಹಾಸ  ಮರುಕಳಿಸುವುದೋ, ಬದಲಾಗುವುದೋ......!?
                                        (ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ : ಇತ್ತೀಚಿನ ಮೂವತ್ತುವರ್ಷಗಳ ರಾಜಕಾರಣದ ಇತಿಹಾಸದಲ್ಲಿ ನಡೆದಿರುವ ಎಂಟು ಚುನಾವಣೆಗಳ ಪೈಕಿ ಒಮ್ಮೆಗೆದ್ದವರು ಹಿಂದೆಯೇ ಪುನರ್ ಆಯ್ಕೆ ಬಯಸಿದರೆ ಆರಿಸಿ ಬಂದ ಉದಾಹರಣೆ ಇಲ್ಲ. ಆದರೆ ಈ ಭಾರಿ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಈ ಸಲದ ಚುನಾವಣೆ ಇಲ್ಲಿನ ಮತದಾರರ ಪಾಲಿಗಿ ದೊಡ್ಡ ಕುತೂಹಲವನ್ನೇ ಹುಟ್ಟು ಹಾಕಿದೆ.
     ಕಳೆದ ಮೂವತ್ತು ವರ್ಷಗಳ ಚುನಾವಣೆಯಲ್ಲಿ ಎರಡು ಜಾತಿಗಳು ಮಾತ್ರ ಇಡೀ ವಿಧಾನ ಸಭೆಯ ಅಧಿಕಾರವನ್ನು ಉಂಡಿವೆ ಹೊರತು ಬೇರೆ ಜಾತಿಗಳಿಗೆ ಅದರ ರುಚಿಯನ್ನೂ ತೋರಿಸಲ್ಲ. ಉಳಿದವರು ಕೇವಲ ಸಣ್ಣ ಪುಟ್ಟ ಚುನಾವಣೆಗೆ ತೃಪ್ತಿ ಪಟ್ಟಕೊಳ್ಳಬೇಕಾಗಿದೆ. ಇದು ಈ ಕ್ಷೇತ್ರದ ಅನಿವಾರ್ಯತೆಯೋ ಅಥವಾ ಅಂತಹ ಪ್ರಬಲವಾದ ನಾಯಕರು ಇನ್ನೂ ಹುಟ್ಟಿಲ್ಲವೊ...! ಹುಟ್ಟಲು ಬಿಟ್ಟಿಲ್ಲವೋ....?.     ಲಿಂಗಾಯಿತರು ಮತ್ತು ಕುರುಬರು ಅದರಲ್ಲೂ ಕಳೆದ ಎರಡು ದಶಕಗಳಿಂದ ಇಬ್ಬರು ವ್ಯಕ್ತಿಗಳು ಮಾತ್ರ ಎಂ.ಎಲ್.ಎ.ಗಳಾಗಿದ್ದಾರೆ, ಬೇರೆಯವರು ಇದರ ಕನಸೂಕಾಣದಂತೆ ಮಾಡಿಬಿಟ್ಟದೆ. ಈ ಕ್ಷೇತ್ರದ ರಾಜಕಾರಣವನ್ನು ಕಂಡವರಿಗೆ ಗೊತ್ತಿರುವ ವಿಷಯ, ಸಿ.ಬಿ.ಸುರೇಶ್ ಬಾಬು, ಇಲ್ಲಾ ಜೆ.ಸಿ.ಮಾಧುಸ್ವಾಮಿ. ಇವರಿಬ್ಬರೇ ಅಧಿಕಾರ ಮಾಡಿಕೊಂಡು ಬಂದಿದ್ದಾರೆ. ಮೂರನೇಯವರಿಗೆ ಅವಕಾಶವೇ ಸಿಕ್ಕಿಲ್ಲ. ಆದರೆ ಈ ಬಾರಿ ಆ ರೀತಿಯ ವಾತಾವರಣವಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ಹೆಚ್ಚು ಬಿರುಸಾಗಿ ಓಡಾಡುತ್ತಿದ್ದಾರೆ. ಆಗಾಗಿ ಮೂರ ಜನ ಪ್ರಬಲ ನಾಯಕರು ಹೀಗಾಗಲೇ ಕಣದಲ್ಲಿದ್ದಾರೆ. ಕಾಂಗ್ರೆಸ್ ತಮ್ಮ ಪಕ್ಷದ ಅಭ್ಯಾಥರ್ಿ ಯಾರೆಂಬುದನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡದೇ ಇರುವುದರಿಂದ ಹಾಗೂ ಕಳೆದ ಮೂವತ್ತು ವರ್ಷಗಳಿಂದ ಇಲ್ಲಿ ಕಾಂಗ್ರೆಸ್  ಅಧಿಕಾರ ಹಿಡಿಯುವಲ್ಲಿ ವಿಫಲವಾಗಿರುವುದರಿಂದ ಕಾಂಗ್ರೆಸ್ನ್ನು ಆ ಪಕ್ಷದ ರಾಜ್ಯ ನಾಯಕರುಗಳೇ ಈ ಕ್ಷೇತ್ರದ ಮಟ್ಟಿಗೆ  ಡಮ್ಮಿ ಮಾಡಿದ್ದಾರೆ, ಹಾಗಾಗಿ ಈ ಭಾರಿಯ ಚುನಾವಣಾ ಫಲಿತಾಂಶವನ್ನು ಒಂದು ರೇಂಜಿಗೆ ನಾಮಪತ್ರ ಹಿಂತೆಗೆದುಕೊಳ್ಳುವ ದಿನದಂದೇ ಹೇಳುಬಹುದು ಎಂಬ ಮಾತುಗಳು ಬರುತ್ತಿದ್ದರೂ ಅದು ಅಷ್ಟು ಸಲುಭವಿಲ್ಲವೆಂಬುದನ್ನು ಕ್ಷೇತ್ರದ ಒಳಗೆ ಸುತ್ತಾಡಿದವರೆಗೆ ಮಾತ್ರ ತಿಳಿದ ವಿಷಯ.
     ಚಿಕ್ಕನಾಯಕನಹಳ್ಳಿ ವಿಧಾನಾ ಸಭಾ ಕ್ಷೇತ್ರದ ರಾಜಕೀಯ ವಿಶ್ಲೇಷಕರು ನೀಡುವ ಅಂಕಿ ಅಂಶವನ್ನು ಮತ್ತು ಅದರ ಹಿಮ್ಮಾಹಿತಿಯನ್ನು ಪಡೆದು ನೋಡಿದರೆ ಈ ಬಾರಿಯ ಚುನಾವಣೆ ಯಾವ ಸ್ವರೂಪವನ್ನು ಕಂಡುಕೊಳ್ಳಬಹದು ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬಹದು ಅದಕ್ಕಾಗಿ ಈ ಕೆಳಗಿನ ಮಾಹಿತಿ ನಿಮ್ಮ ಅರಿವಿಗಾಗಿ. 
    ಕಳೆದ ಮುವತ್ತು ವರ್ಷಗಳ ಚುನಾವಣೆಯಲ್ಲಿ ಜಯಗಳಿಸಿದವರೆಂದರೆ, 1983ಬಿ.ಜೆ.ಪಿ.ಯಿಂದ ಎಸ್.ಜಿ.ರಾಮಲಿಂಗಯ್ಯ, 1985ರಲ್ಲಿ ಕಾಂಗ್ರೆಸ್ನಿಂದ ಬಿ.ಲಕ್ಕಪ, 1989ರಲ್ಲಿ ಜತನಾದಳದ ಜೆ.ಸಿ.ಮಾಧುಸ್ವಾಮಿ, 1994ರಲ್ಲಿ ಕೆ.ಸಿ.ಪಿ.ಯ ಎನ್.ಬಸವಯ್ಯ, 1997ರ ಉಪಚುನಾವಣೆಯಲ್ಲಿ  ಜೆ.ಡಿ.ಯು.ನ ಜೆ.ಸಿ.ಮಾಧಸ್ವಾಮಿ, 1999ರಲ್ಲಿ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು, 2004ರಲ್ಲಿ ಜೆ.ಡಿ.ಯು.ನ ಜೆ.ಸಿ.ಮಾಧುಸ್ವಾಮಿ, 2008ರ ಚುನಾವಣೆಯಲ್ಲಿ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ ಬಾಬು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಅಂಶಗಳ ಮೇಲೆ ಜಾತಿವಾರು ಲೆಕ್ಕಾಚಾರಗಳ ಆಧಾರದ ಮೇಲೆ ನಡೆದಿರುವ ಈ ಚುನಾವಣೆಗಳನ್ನು ಒಮ್ಮೆ ವಿಶ್ಲೇಷಿಸಿದರೆ 2013 ಚುನಾವಣೆಯ ಮುನ್ನೋಟ ಸಿಗಬಹುದು. 
ಸೌಮ್ಯವಾದಿ ಎಸ್.ಜಿ.ರಾಮಲಿಂಗಯ್ಯನವರಿಗೆ ಜಯ:    1983ರಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಒಟ್ಟು 77514 ಮತದಾರರಿದ್ದು ಇದರಲ್ಲಿ 59016 ಮತ ಚಲಾವಣೆಗೊಂಡು ಶೇ.76.14ರಷ್ಟು ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಒಟ್ಟು 10ಜನ ಕಣದಲ್ಲಿದ್ದರು,  ಬಿ.ಜೆ.ಪಿ.ಯ ಎಸ್.ಜಿ.ರಾಮಲಿಂಗಯ್ಯ 29614 ಮತಗಳನ್ನು ಪಡೆದು 3371ಮತಗಳ ಅಂತರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಉಳಿದಂತೆ ಕಾಂಗ್ರೆಸ್ ಪಕ್ಷದಿಂದ ಸ್ಪಧರ್ಿಸಿದ್ದ ಎನ್.ಬಸವಯ್ಯನವರು 26243 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ, ಸ್ವತಂತ್ರ ಅಬ್ಯಾಥರ್ಿಗಳಾಗಿದ್ದ ಸಿ.ಎಸ್.ನಾರಾಯಣರಾವ್ 961 ಮತಗಳನ್ನು ಪಡೆದು ಮೂರನೇ ಸ್ಥಾನ ತೃಪ್ತಿ ಪಟ್ಟುಕೊಂಡರು, ಉಳಿದ ಏಳು ಜನ ಸ್ವತಂತ್ರ ಅಬ್ಯಾಥರ್ಿಗಳಾದ ಬಿ.ಶಂಕರಲಿಂಗಪ್ಪ, ಸಿ.ಎಸ್.ಲಕ್ಷ್ಮಮ್ಮ, ಜಿ.ಚಂದ್ರಶೇಖರ್, ಮಹಾಲಿಂಗಯ್ಯ, ಡಿ.ಜಿ.ದೇವಪ್ರಸಾದ್, ಹೆಚ್.ರಂಗಪ್ಪ, ಟಿ.ಸಿದ್ದಯ್ಯ ನವರುಗಳು  ಎರಡು ನೂರು ಮತಗಳನ್ನು ದಾಟಲಿಲ್ಲ. ಈ ಚುನಾವಣೆಯಲ್ಲಿ ಎನ್.ಬಸವಯ್ಯನವರಿಗೆ ಹಿನ್ನೆಡೆಯಾಗಲು ಕಾರಣ ಎನ್.ಬಿ.ಯವರ ಹೆಸರು ಹೇಳಿಕೊಂಡು ಅವರು ಬೆಂಬಲಿಗರು ನಡೆಸಿದ್ದ ಅವಾಂತರಗಳಿಂದ ಸೌಮ್ಯವಾಗಿದ್ದ ಎಸ್.ಜಿ.ರಾಮಲಿಂಗಯ್ಯನವರನ್ನು ಮತದಾರರು ಕೈಹಿಡಿದರು.
ಕಾಂಗ್ರೆಸ್ನಿಂದ ಬಿ.ಲಕ್ಕಪ್ಪ ಜಯ:    1985ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಎಂಟು ಜನ ಕಣದಲ್ಲಿದ್ದು ಒಟ್ಟು ಮತದಾರರ ಸಂಖ್ಯೆ 82877 ಇತ್ತು, ಇದರಲ್ಲಿ ಮತಚಲಾವಣೆಗೊಂಡಿದ್ದು 65714 ಮತಗಳು ಮಾತ್ರ ಶೇ.79.29ರಷ್ಟು ಮತದಾನ ನಡೆದಿತ್ತು, ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಬಿ.ಲಕ್ಕಪ್ಪ 20815 ಮತಗಳನ್ನು ಪಡೆದು 2518 ಮತಗಳ ಅಂತರದಿಂದ ಜಯಶೀಲರಾಗಿದ್ದರು, ಆಗ ಸ್ವತಂತ್ರ ಅಬ್ಯಾಥರ್ಿಯಾಗಿದ್ದ ಎನ್.ಬಸವಯ್ಯನವರು 18297 ಮತಗಳನ್ನು ಪಡೆದಿದ್ದರು, ಮೊದಲ ಬಾರಿಗೆ ಜನತಾಪಕ್ಷದಿಂದ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ 14513 ಮತಗಳನ್ನು ಪಡೆದರೆ ಬಿ.ಜೆ.ಪಿ.ಯಿಂದ ಸ್ಪಧರ್ಿಸಿದ್ದ ಎಸ್.ಜಿ.ರಾಮಲಿಂಗಯ್ಯ 9750 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದರು, ಉಳಿದಂತೆ ನಾಲ್ಕು ಜನ ಸ್ವತಂತ್ರ ಅಭ್ಯಾಥರ್ಿಗಳಾಗಿ ಸ್ಪಧರ್ಿಸಿದ್ದರು ಆ ಪೈಕಿ ಮುಕ್ಕಣ್ಣಪ್ಪ 761 ಮತಗಳನ್ನು ಪಡೆದರೆ ರಘುನಾಥ್ 520 ಮತಗಳನ್ನು ಪಡೆದರೆ  ಸಿ.ಎಸ್.ನಾರಾಯಣರಾವ್, ಮಹಾಲಿಂಗಯ್ಯ ಇನ್ನೂರು ಐವತ್ತು ಮತಗಳನ್ನು ದಾಟಲಿಲ್ಲ. ಬಿ.ಲಕ್ಕಪ್ಪ ಜಯಗಳಿಸಲು ಕಾರಣ ಕಾಂಗ್ರೆಸ್ ಅಲೆ.
ಜತನಾದಳ ಜೆ.ಸಿ.ಮಧುಸ್ವಾಮಿ ಜಯ: 1989ರಲ್ಲಿ ನಡೆದ ಚುನಾವಣೆಯಲ್ಲಿ 9ಜನ ಕಣದಲ್ಲಿದ್ದರು, ಕ್ಷೇತ್ರದಲ್ಲಿ 107509 ಮತದಾರರಿದ್ದರು, ಈ ಪೈಕಿ 83144 ಜನ ಮಾತ್ರ ಮತಚಲಾಯಿಸಿದ್ದು ಶೇ.77.34 ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಜತತಾದಳದಿಂದ ಜೆ.ಸಿ.ಮಾಧುಸ್ವಾಮಿ 26291 ಮತಗಳನ್ನು ಪಡೆದು 628 ಮತಗಳ ಅಂತರದಲ್ಲಿ ಮೊದಲ ಬಾರಿಗೆ  ಜಯಗಳಿಸಿದ್ದರು, ಕಾಂಗ್ರೆಸ್ನಿಂದ ಸ್ಪಧರ್ಿಸಿದ್ದ ಬಿ.ಲಕ್ಕಪ್ಪ 25663 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಜೆ.ಪಿ.ಜನತಾ ಪಕ್ಷದಿಂದ ಸ್ಪಧರ್ಿಸಿದ್ದ ಎನ್.ಬಸವಯ್ಯ 25317 ಮತಗಳನ್ನು ಪಡೆದಿದ್ದರು, ಸ್ವತಂತ್ರ ಅಭ್ಯಾಥರ್ಿ ಬಿ.ಎಸ್.ಚನ್ನಯ್ಯ 819 ಮತಗಳು, ಬಿ.ಜೆ.ಪಿ.ಯಿಂದ ಬಿ.ಬಿ.ಸಿದ್ದಲಿಂಗಮೂತರ್ಿ 624 ಮತಗಳು, ಸ್ವತಂತ್ರ ಅಭ್ಯಾಥರ್ಿಗಳಾದ ಸಿ.ಎಸ್.ನಾರಾಯಣರಾವ್, ಎಚ್.ಎನ್.ದೊಡ್ಡೇಗೌಡ, ಎಚ್.ಚನ್ನಯ್ಯ, ಯು.ಬಿ.ಚನ್ನಪ್ಪನವರುಗಳು ಐನೂರು ಮತಗಳನ್ನು ದಾಟಲಿಲ್ಲ.  ಜಯ ುತಗಳನ್ನು ಪಡೆದು 3371ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇವರ ವಿರುದ್ದ ಕಾಂಗ್ರೆಸ್ ಅಭ್ಯಥರ್ಿಯಾಗಿ ಎನ್.ಬಸವಯ್ಯ26243, ಸಿ.ಎಸ್.ನಾರಾಯಣ್ರಾವ್, ಬಿ.ಶಂಕರಲಿಂಗಪ್ಪ, ಜಿ.ಚಂದ್ರಶೇಖರ್, ಮಹಾಲಿಂಗಯ್ಯ, ಡಿ.ಜಿ.ದೇವಪ್ರಸಾದ್ ಸ್ಪಧರ್ಿಸಿದ್ದರು. ಒಟ್ಟು 77514 ಮತಗಳಿಂದ 59016 ಮತಗಳು ಚಲಾವಣೆಯಾಗಿದ್ದವು.
 ಹೊಸ ಅಬ್ಯಾಥರ್ಿ ಹುಡುಕಾಟ ಮತ್ತು ಲಿಂಗಾಯಿತ ಮತದಾರ ಒಲವು.   
ಕೆ.ಸಿ.ಪಿ.ಯಿಂದ ಎನ್.ಬಸವಯ್ಯ ಜಯ:    1994ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಂಗಾರಪ್ಪನವರ ಕೆ.ಸಿ.ಪಿಯಿಂದ ಎನ್.ಬಸವಯ್ಯ (ಕೆಸಿಪಿ)ಯಿಂದ ಸ್ಪಧರ್ಿಸಿ 38025 ಮತಗಳನ್ನು ಪಡೆದು 13885 ಮತಗಳ ಅಂತರದಿಂದ ಜಯಗಳಿಸಿದ್ದರು. ಇವರ ವಿರುದ್ದವಾಗಿ ಜೆ.ಸಿ.ಮಾಧುಸ್ವಾಮಿ24140(ಜೆಡಿ), ಬಿ.ಲಕ್ಕಪ್ಪ15587ಕಾಂಗ್ರೆಸ್, ಎಸ್.ಜಿ.ರಾಮಲಿಂಗಯ್ಯ, ಎಸ್.ಸಿದ್ದರಾಮಣ್ಣ, ಚಂದ್ರಹಾಸ ಸ್ಪಧರ್ಿಸಿದ್ದರು. ಕೆ.ಸಿ.ಪಿ.ಯಿಂದ ಎನ್.ಬಸವಯ್ಯ ಜಯಗಳಿಸಿದರೂ ನಂತರ ಜೆ.ಡಿ.ಎಸ್.ಗೆ ಸೆರ್ಪಡೆಗೊಂಡರು. ಬಸವಯ್ಯನವರ ಗೆಲುವಿಗೆ ಕಾರಣ ಮೇಲೆ ಅಭಿಮಾನ ಹೆಚ್ಚಾಗಿದ್ದು ಹಾಗೂ ಜನರ ಭಾವನೆಗಳ ಕಾರ್ಯಗಳಿಗೆ ಒತ್ತು ನೀಡಿದ್ದು,
1997ರ ಉಪಚುನಾವಣೆ: ಜೆ.ಡಿ.ಯು ಜೆ.ಸಿಮಾಧುಸ್ವಾಮಿ ಆಯ್ಕೆ: 1997ರಲ್ಲಿ ಎನ್.ಬಸವಯ್ಯನವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ನಡೆಸಬೇಕಾಯಿತು, 97ರ ಡಿಸೆಂಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆ.ಸಿ.ಮಾಧುಸ್ವಾಮಿ ಜೆ.ಡಿ.ಯು.ನಿಂದ ಸ್ಪಧರ್ಿಸಿ ಜಯಗಳಿಸಿದರು, ತಂದೆಯ ಮರಣಾನಂತರ ಸಿ.ಬಿ.ಸುರೇಶ್ ಬಾಬು, ಬಸವಯ್ಯನವರ ಉತ್ತರಾಧಿಕಾರವನ್ನು ಪಡೆಯಲು ಯತ್ನಿಸಿದರಾದರೂ ಆ ಬಾರಿ ಫಲ ದೊರೆಯಲಿಲ್ಲ, ಸಿ.ಬಿ.ಎಸ್. ಆ ಚುನಾವಣೆಯಲ್ಲಿ ಜೆ.ಡಿ.ಎಸ್.ನಿಂದ ಸ್ಪಧರ್ಿಸಿದ್ದರು, ಬಿ.ಜೆ.ಪಿ.ಯಿಂದ ತಿಪಟೂರು ತಾ.ಪಂ.ಅಧ್ಯಕ್ಷರಾಗಿದ್ದ  ಯಾದವ ಜನಾಂಗದ ಶಂಕರಪ್ಪನವರನ್ನು ಕಣಕ್ಕಿಳಿಸಿದ್ದರು, ಲಕ್ಕಪ್ಪ ಯಥಾ ಪ್ರಕಾರ ಚುನಾವಣಾ ಕಣದಲ್ಲಿದ್ದರು. ಮಾಧುಸ್ವಾಮಿ ಜಯಗಳಿಸಲು ಕಾರಣ ಅವರ ಅಭಿವೃದ್ದಿ ಕೆಲಸಗಳು, ಜಾತಿ ಲೆಕ್ಕಾಚಾರದಲ್ಲಿ ಜೆ.ಸಿ.ಎಂ.ರವರ ಚಾಕಚಕ್ಯತೆ ಹಾಗೂ ಜೆ.ಎಚ್.ಪಟೇಲರು ಬಹರಂಗ ಸಭೆಯಲ್ಲಿ ಜೆ.ಸಿ.ಎಂ.ಗೆಲ್ಲಿಸುವಂತೆ ಸೂಚ್ಯವಾಗಿ ಹೇಳಿದ ಪರಿ.
ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ಆಯ್ಕೆ:     1999ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಮತದಾದರಿದದ್ದು 118884 ಚಲಾವಣೆಗೊಂಡ ಮತಗಳು 92097, ಶೇ/77.47ರಷ್ಟು ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಸಿ.ಬಿ.ಸುರೇಶ್ ಬಾಬು 43961 ಮತಗಳನ್ನು ಪಡೆದು 14943 ಮತಗಳ ಅಂತರದಿಂದ ಗೆಲವನ್ನು ಕಂಡರು, ಜೆ.ಡಿ.ಯು ನಿಂದ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ 29018 ಮತಗಳನ್ನು ಪಡೆದರೆ, ಕಾಂಗ್ರೆಸ್ನಿಂದ ಸ್ಪಧರ್ಿಸಿದ್ದ ಎಚ್.ಎಂ.ಸುರೇಂದ್ರಯ್ಯ 16145 ಮತಗಳನ್ನು ಪಡೆದಿದ್ದರು. ಸುರೇಶ್ಬಾಬು ಜಯಗಳಿಸಲು ಕಾರಣ ಸಿ.ಬಿ.ಎಸ್.ರವರ ಸೌಮ್ಯ ಮಾತುಗಳು, ಆತ್ಮೀಯತೆ ಹಾಗೂ ಜೆ.ಸಿ.ಎಂ.ರವರ ನಿಷ್ಠುರ ವರ್ತನೆ ಮತ್ತು ಬಿರುನುಡಿಗಳು.
    ಜೆ.ಡಿ.ಯುನ ಜೆ.ಸಿ.ಮಾಧುಸ್ವಾಮಿ ಆಯ್ಕೆ: ನಿಂದ 2004ರ ಚುನಾವಣೆಯಲ್ಲಿ ಜೆ.ಸಿ.ಮಾಧುಸ್ವಾಮಿ 1628 ಮತಗಳ ಅಂತರದಿಂದ ಜಯಗಳಿಸಿದ್ದರು, ಜೆ.ಡಿ.ಎಸ್.ನಿಂದ ಸ್ಪಧರ್ಿಸಿದ್ದ ಸಿ.ಬಿ.ಸುರೇಶ್ ಬಾಬು 41412 ಮತಗಳನ್ನು ಪಡೆದರೆ, ಕಾಂಗ್ರೆಸ್ನಿಂದ ಸೀಮೆಣ್ಣೆ ಕೃಷ್ಣಯ್ಯ 6872 ಮತಗಳನ್ನು ಪಡೆದಿದ್ದರು, ಜತನಾ ಪಕ್ಷದಿಂದ ಬಿ.ಲಕ್ಕಪ್ಪ ಸ್ಪಧರ್ಿಸಿ 2510 ಮತಗಳನ್ನು ಪಡೆದಿದ್ದರು, ಹೆಚ್.ಟಿ.ನಾಗರಾಜು ಎಂಬವವರು 1631 ಮತಗಳನ್ನು, ಸೀಬಿ ನರಸಿಂಹಯ್ಯ 730 ಮತಗಳನ್ನು ಪಡೆದಿದ್ದರು. ಜೆ.ಸಿ.ಎಂ.ರವರ ಗೆಲುವಿಗೆ ಕಾರಣ ಸುರೇಶ್ ಬಾಬು ಆಡಳಿತದ ವೈಖರಿ ಮತ್ತು ಜಾತಿ ಲೆಕ್ಕಾಚಾರ
    ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ಜಯ: 2008ರಲ್ಲಿ ನಡೆದ ಚುನಾವಣೆ ಪ್ರಮುಖ ಬದಲಾವಣೆಗಳನ್ನು ತಂದಿದ್ದು, ವಿಧಾನ ಸಭಾ ಕ್ಷೇತ್ರವಾರು ಪುನರ್ ವಿಂಗಡಣೆಯಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರ ತನ್ನ ವ್ಯಾಪ್ತಿ ವಿಸ್ತಾರವಾಯಿತು, ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತಿಪಟೂರಿನ  ಕಿಬ್ಬನಹಳ್ಳಿ ಹೋಬಳಿ ಸೇರಿತ್ತು, ಈ ಚುನಾವಣೆಯಲ್ಲಿ ಅದು ತಪ್ಪಿ, ಚಿ.ನಾ.ಹಳ್ಳಿ ತಾಲೂಕಿನ ಐದು ಹೋಬಳಿಗಳ ಜೊತೆಗೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ಸೇರಿದ್ದರಿಂದ ಕ್ಷೇತ್ರದ ಮತದಾರ ಸಂಖ್ಯೆಗೆ ಹೆಚ್ಚಾಯಿತು, 2008ರಿಂದ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 184288 ರಷ್ಠಯಿತು, ಈ ಬಾರಿ ಸಿ.ಬಿ.ಸುರೇಶ್ಬಾಬು(ಜೆಡಿಎಸ್)67046 ಮತಗಳನ್ನು ಪಡೆದು ಅಂದರೆ 29044 ಭಾರಿ ಅಂತರದಿಂದ ಜಯಗಳಿಸಿದ್ದರು. ಕೆ.ಎಸ್.ಕಿರಣ್ಕುಮಾರ್(ಬಿಜೆಪಿ)38002, ಜೆ.ಸಿ.ಮಾಧುಸ್ವಾಮಿ24008(ಜೆಡಿಯು), ಎನ್.ರೇಣುಕಪ್ರಸಾದ್3941(ಕಾಂಗ್ರೆಸ್), ಅರುಣ.ಯಳನಡು3550(ಎಸ್ಯುಪಿ), ಕೆ.ಎಸ್.ಸತೀಶ್ಕುಮಾರ್2327(ಪಕ್ಷೇತರ), ಹೇಮಶ್ರೀ ಎಚ್.ಎನ್.1991(ಬಿಎಸ್ಪಿ), ಅನಂತಯ್ಯ1598(ಎಸ್ಪಿ), ಡಿ.ಜಯಣ್ಣಗೌಡ826(ಪಕ್ಷೇತರ) ಸ್ಪಧರ್ಿಸಿದ್ದರು. ಒಟ್ಟು 184288 ಮತಗಳಲ್ಲಿ 143589 ಮತಗಳು ಚಲಾವಣೆಗೊಂಡಿದ್ದವು.
        2013ರ ಮೇ 5ರಂದು ನಡೆಯುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸಿ.ಬಿ.ಸುರೇಶ್ಬಾಬು, ಕೆಜೆಪಿ ಪಕ್ಷದಿಂದ ಜೆ.ಸಿ.ಮಾಧುಸ್ವಾಮಿ, ಬಿಜೆಪಿಯಿಂದ ಕೆ.ಎಸ್.ಕಿರಣ್ಕುಮಾರ್ ಸ್ಪಧರ್ಿಸಲಿದ್ದು ಕಾಂಗ್ರೆಸ್ನಿಂದ ಯಾವ ಅಭ್ಯಥರ್ಿ ಸ್ಪಧರ್ಿಸಲಿದ್ದಾರೆಂಬುದು ಇನ್ನೂ ನಿಗೂಡವಾಗಿದ್ದು ಬಿಎಸ್ಆರ್ ಕಾಂಗ್ರೆಸ್ ಹಾಗೂ ಪಕ್ಷೇತರರಾಗಿ ಕೆಲವು ಅಭ್ಯಥರ್ಿಗಳು ಸ್ಪಧರ್ಿಸಲಿದ್ದು ಇವರಲ್ಲಿ ಯಾವ ಯಾವ ಜಾತಿಯವರು ಸ್ಪಧರ್ಿಸುತ್ತಾರೆ ಎಂಬ ಆಧಾರದ ಮೇಲೆ ಚುನಾವಣೆಯ ಫಲಿತಾಂಶ ನಿಂತಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರ ಪಕ್ಷಕ್ಕಿಂತ ಜಾತಿ ನೋಡಿ ಮತ ಹಾಕುವ ಪದ್ದತಿ ಇದೆ, ಅದೇ ರೀತಿ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆ ಅದಕ್ಕೆ ವಿರುದ್ದವಾದವರನ್ನು ಗೆಲ್ಲಿಸಿಕೊಂಡು ಬಂದಿರುವುದರಿಂದ ಈ ಕ್ಷೇತ್ರವನ್ನು ಇಂತಿಷ್ಟೇ ಸರಿ ಎಂದು ಹೇಳಲು ಕಷ್ಟಸಾಧ್ಯ. ಇನ್ನೂ ಒಂದು ತಿಂಗಳಲ್ಲಿ ನಡಿಯುವ ರಾಜಕೀಯದ ಮೇಲಾಟವನ್ನು ಗಮನಿಸುವುದೇ ಸದ್ಯಕ್ಕೆ ನಮಗಿರುವ ಕುತೂಹಲ.