Friday, August 12, 2011

ವೀರಶೈವನೌ.ಕ್ಷೇ.ಸಂಘದಿಂದಪ್ರತಿಭಾ ರಸ್ಕಾರಚಿಕ್ಕನಾಯಕನಹಳ್ಳಿ,ಆ.12 : ತಾಲ್ಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವೀರಶೈವ ವಿದ್ಯಾಥರ್ಿಗಳಿಗೆ 2010-11ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ , ದ್ವಿತೀಯ ಪಿಯುಸಿ, ಹಾಗೂ ಬಿ.ಎ, ಬಿಎಸ್.ಸಿ. ಬಿಕಾಂಗಳಲ್ಲಿ ಶೇ.80 ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅಜರ್ಿ ಆಹ್ವಾನಿಸಲಾಗಿದೆ.ತಾಲ್ಲೂಕಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದವರು ಮಾತ್ರ ಆಗಸ್ಟ್ 20ರೊಳಗೆ ಅಜರ್ಿಗಳನ್ನು ಜೆರಾಕ್ಸ್ ಅಂಕಪಟ್ಟಿಯನ್ನು ಮುಖ್ಯ ಶಿಕ್ಷಕರ ದೃಡೀಕರಣದೊಂದಿಗೆ ಟಿ.ಬಿ.ಮಲ್ಲಿಕಾಜರ್ುನಯ್ಯ ಸಂಸ್ಕೃತ ಶಿಕ್ಷಕರು, ಜ್ಞಾನಪೀಠ ಪ್ರೌಡಶಾಲೆ, ಚಿಕ್ಕನಾಯಕನಹಳ್ಳಿ ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ 9880672343, 9448049821 ದೂರವಾಣಿಗೆ ಸಂಪಕರ್ಿಸಲು ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾ.ಅ.ಯೋಜನೆ ರೈತರಿಗೆ ಆಥರ್ಿಕ ಶಿಸ್ತು ಮೂಡಿಸುತ್ತಿದೆ.ಚಿಕ್ಕನಾಯಕನಹಳ್ಳಿ,ಆ.12 : ಗ್ರಾಮಗಳ ಅಭಿವೃದ್ದಿಯ ಜೊತೆಗೆ ಜನರಲ್ಲಿ ಶಿಸ್ತು, ಬದ್ದತೆ, ವ್ಯವಹಾರ ಚಟುವಟಿಕೆ ಹಾಗೂ ಬದುಕುವ ಕಲೆಯನ್ನು ಬದಲಾಯಿಸುವ ಗುರಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಯೋಜನೆಯಾಗಿದೆ ಎಂದು ಸಂಘದ ಯೋಜನೆಯ ಮೇಲ್ವಿಚಾರಕರಾದ ನಾಗರಾಜ್ ಹೇಳಿದರು.ತಾಲ್ಲೂಕಿನ ಮತಿಘಟ್ಟ ಗ್ರಾಮದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಧರ್ಮಸ್ಥಳದ ಧಮರ್ಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು ಸಾಮಾಜಿಕ ಬದುಕಿನಲ್ಲಿ ಆಥರ್ಿಕ ಅಭಿವೃದ್ದಿಯೊಂದಿಗೆ ಸರ್ವತೋಮುಖ ಬೆಳವಣಿಗೆ ಹೊಂದಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಸಮಾರಂಭದಲ್ಲಿ ತಾ.ಪಂ.ಸದಸ್ಯ ನಿರಂಜನಮೂತರ್ಿ, ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರವಿಚಂದ್ರ ನಿರೂಪಿಸಿದರೆ ಸೇವಾ ಪ್ರತಿನಿಧಿ ಶಂಕರಪ್ಪ ವಂದಿಸಿದರು.

ಸ್ವತಂತ್ರ ದಿನಾಚರಣೆ ಸಂಭ್ರಮಚಿಕ್ಕನಾಯಕನಹಳ್ಳಿ,ಆ.12 : ಸ್ವಾತಂತ್ರ್ಯ ದಿನಾಚರಣಾ ಸಮಾರಂಭವನ್ನು ಆಗಸ್ಟ್ 15ರ ಬೆಳಗ್ಗೆ 8.30ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಧ್ವಜಾರೋಹಣದ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ರೈತ ಮುಖಂಡ ಸತೀಶ್ ಕೆಂಕೆರೆ, ಆಂಜನೇಯ ದೇವಾಸ್ಥನದ ಕನ್ವೀನರ್ ಚಂದ್ರಶೇಖರಶೆಟ್ಟರು, ಶ್ರಮಿಕ ಜೀವಿ ಶಿವಣ್ಣರವರಿಗೆ ಸನ್ಮಾನಿಸಲಾಗುವುದು.ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷ ಬಿಬಿಪಾತೀಮ, ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಸಿ.ಎಸ್.ನಾರಾಯಣರಾವ್ ಉಪಸ್ಥಿತರಿರುವರು.ವಿ
ಕನಕ ಭವನದ ಕಾಮಗಾರಿ ಚಾಲನೆ, ಸಂಗೊಳ್ಳಿ ರಾಯಣ್ಣನ 215ನೇ ಜಯಂತೋತ್ಸವಚಿಕ್ಕನಾಯಕನಹಳ್ಳಿ,ಆ.12: ಕನಕ ಸೇವಾ ಸಮಿತಿಯ ವತಿಯಿಂದ ಕನಕ ಭವನದ ಮೊದಲನೇ ಹಂತದ ಕಾಮಗಾರಿ ಚಾಲನಾ ಸಮಾರಂಭ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 215 ಜಯಂತೋತ್ಸವವನ್ನು ಇದೇ 13 ರ ಶನಿವಾರ ಬೆಳಿಗ್ಗೆ 10.30ಕ್ಕೆ ಕನಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದಶರ್ಿ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.ಸಮಾರಂಭದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದ ಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದಾರೆ, ಉದ್ಘಾಟನೆಯನ್ನು ಸಂಸದ ಜಿ.ಎಸ್.ಬಸವರಾಜು ನೆರವೇರಿಸಲಿದ್ದಾರೆ.ಬಡಮಕ್ಕಳಿಗೆ ವಸ್ತ್ರವಿತರಣೆಯನ್ನು ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್ ನೆರವೇರಿಸಲಿದ್ದು, ಎಂ.ಎಲ್.ಸಿ. ಡಾ. ಎಂ.ಆರ್.ಹುಲಿನಾಯ್ಕರ್ ಪುಸ್ತಕ ವಿತರಣೆ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ರಾಜ್ಯ ಕುರುಬರ ಸಂಘದ ಕಾರ್ಯದಶರ್ಿ ಕೆ.ಎಂ.ರಾಮಚಂದ್ರಪ್ಪ, ಕೋಶಾಧಿಕಾರಿ ಆರ್.ರಾಮಕೃಷ್ಣಪ್ಪ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ರಂಗಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು, ಸಂಪಾದಕ ಎಸ್.ನಾಗಣ್ಣ, ಆನಂದ್ ಬಿ. ಅಪ್ಪುಗೋಳ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.