Wednesday, November 12, 2014ಬೆಂಗಳೂರು ಮೆಟ್ರೋಗೆ ಕರಾಟೆಕಿಂಗ್ ಶಂಕರ್ನಾಗ್ ಹೆಸರಿಡಲು ಆಗ್ರಹ
ಚಿಕ್ಕನಾಯಕನಹಳ್ಳಿ,ನ.12: ಬೆಂಗಳೂರು ನಗರಕ್ಕೆ ಮೆಟ್ರೋ ಬರಬೇಕು ಎಂಬುದು ಶಂಕರ್ನಾಗ್ ಕನಸಾಗಿತು. ಈಗ ಆ ಕನಸು ನನಸಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು  ಬೆಂಗಳೂರು ಮೆಟ್ರೋಗೆ ಕರಾಟೆ ಕಿಂಗ್ ಶಂಕರ್ನಾಗ್ ಹೆಸರಿಡಬೇಕು ಎಂದು ಪಟ್ಟಣದ ಶಂಕರ್ನಾಗ್ ಅಭಿಮಾನಿ ಬಳಗದ ಮೊಹಮದ್ ಹುಸೇನ್ ಆಗ್ರಹಿಸಿದರು.
   ಪಟ್ಟಣದ ಶಂಕರ್ನಾಗ್ ಅಭಿಮಾನಿ ಬಳಗದ, ಜೈ ಮಾರುತಿ ಲಘು ವಾಹನಗಳ ಚಾಲಕ ಹಾಗೂ ಮಾಲೀಕರ ಸಂಘದ ಸಹಕಾರದೊಂದಿಗೆ ಕರಾಟೆ ಕಿಂಗ್ ಶಂಕರ್ನಾಗ್ರ 60ನೇ ಹುಟ್ಟು ಹಬ್ಬವನ್ನು ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಎದುರು ಸಂಭ್ರಮದಿಂದ ಆಚರಿಸಿದರು.    ಈ ಸಂದರ್ಭದಲ್ಲಿ ಮಾತನಾಡಿದ ಅವರು ನಂದಿಬೆಟ್ಟಕ್ಕೆ ರೋಪ್ ವೇ ಹಾಕಬೇಕು ಎಂಬುದೂ ಶಂಕರ್ನಾಗ್ ಕನಸಾಗಿತ್ತು ಅದನ್ನೂ ಮುಖ್ಯಮಂತ್ರಿಗಳು ಸಾಕಾರಗೊಳಿಸಬೇಕು ಎಂದರು.
   ಕೆಎಸ್ಆರ್ಟಿಸಿ ನಿಲ್ದಾಣದ ಒಳಗೆ ಬಸ್ಗಳು ಬಾರದೆ ನೆಹರು ಸರ್ಕಲ್ನಲ್ಲಿ ನಿಲ್ಲುತ್ತಿವೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಹಾಗೂ ಲಘು ವಾಹನಗಳು ರಸ್ತೆ ಬದಿಯಲ್ಲೇ ನಿಲ್ಲುತ್ತಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದೆ ಆದ್ದರಿಂದ ಶಾಸಕರು ನಿಲ್ದಾಣಕ್ಕೆ ಸ್ಥಳ ಕೊಡಿಸಿಕೊಡಬೇಕು ಮತ್ತು ಸಂಸದರ ನಿಧಿಯಲ್ಲಿ ನಿಲ್ದಾಣ ನಿಮರ್ಿಸಿ ಕೊಡಬೇಕು ಎಂದು ಮನವಿ ಮಾಡಿದರು.
  ಕಾರ್ಯಕ್ರಮದಲ್ಲಿ ಜೈ ಮಾರುತಿ ಲಘು ವಾಹನಗಳ ಚಾಲಕ ಹಾಗೂ ಮಾಲೀಕರ ಸಂಘ ಹಾಗೂ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ,ಉಪಾಧ್ಯಕ್ಷ ಮೊಹಮದ್ ಗೌಸ್,ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್,ನಿವೃತ್ತ ಶಿಕ್ಷಕ ಹನುಮಂತರಾಯಪ್ಪ,ಪುರಸಭೆ ಸದಸ್ಯ ಖಲಂದರ್ ಸೇರಿದಂತೆ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು. ಸಾರ್ವಜನಿಕರಿಗೆ ಕೇಕ್ ಹಾಗೂ ಲಘು ಉಪಾಹಾರ ನೀಡಲಾಯಿತು. 
  ನಮಗೆ ಶಂಕರ್ ನಾಗ್ ಪ್ರೇರಣೆ: ಚಾಲಕ ಮೊಹಮದ್ ಹುಸೇನ್, ಚಾಲಕ ಹಾಗೂ ಮಾಲೀಕರನ್ನು ಸಂಘಟಿಸಿ ಶಂಕರ್ನಾಗ್ ಅಭಿಮಾನಿ ಬಳಗ ಕಟ್ಟಿದ್ದಾರೆ. ಬಳಗದ ಗೆಳೆಯರು ಕಳೆದ 3ವರ್ಷಗಳಿಂದ ಶಂಕರ್ನಾಗ್ ಹುಟ್ಟು ಹಬ್ಬವನ್ನು ತಮ್ಮ ಮನೆಯ ಹಬ್ಬ ಎನ್ನುವಂತೆ ಕಾಳಜಿ ವಹಿಸಿ ಆಚರಿಸುತ್ತಾಬರುತ್ತಿದ್ದಾರೆ. ಅಲ್ಲದೆ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಹಾಗೂ ಹದಗೆಟ್ಟ ರಸ್ತೆಗಳ ಬಗ್ಗೆ ಇಲಾಖೆಗಳಿಗೆ ಎಚ್ಚರಿಸುತ್ತ ಬರುತ್ತಿದ್ದಾರೆ. ಈ ಎಲ್ಲಾ ಉಸಾಬರಿ ನಿಮಗೆ ಯಾಕೆ? ಎಂದು ಕೇಳಿದರೆ 'ಆಟೋರಾಜ ಶಂಕರ್ನಾಗ್ ಮೇಲಿನ ಅಭಿಮಾನದಿಂದ, ಅವರು ಚಾಲಕರಿಗೆ ಘನತೆ ತಂದುಕೊಟ್ಟವರು. ಅವರ ಅಭಿಮಾನಿಗಳಾಗಿ ಒಳ್ಳೆಯದು ಮಾಡದಿದ್ದರೆ ಹೇಗೆ? ಜನರ ಒಳಿತಿಗಾಗಿ  ಕೈಲಾದ ಕೆಲಸ ಮಾಡುತ್ತಿದ್ದೇವೆ' ಎನ್ನುತ್ತಾರೆ.

ಮಕ್ಕಳ ದಿನಾಚಾರಣೆ ವಿಶೇಷವಾಗಿ ಆಚರಿಸಲು ಸಿದ್ದತೆ
ಚಿಕ್ಕನಾಯಕನಹಳ್ಳಿ,ನ.12 : ನವಂಬರ್ 14ರಂದು ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಜವಹರ್ಲಾಲ್ ನೆಹರೂರವರ ಹುಟ್ಟುಹಬ್ಬದಂದು ಮಕ್ಕಳ ದಿನಾಚಾರಣೆಯನ್ನು ತಾಲ್ಲೂಕಿನಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು ಅಂದು ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಮಕ್ಕಳ ಜಾನಪದ ಹಾಗೂ ಕಲಾಮೇಳವನ್ನು ಸಂಘಟಿಸಲಾಗಿದೆ, ಶಾಲಾ ಮಕ್ಕಳೇ  ಸಮಾರಂಭದ ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಿ.ಬಿ.ಸುರೇಶ್ಬಾಬು ಅಭಿಮಾನಿಗಳ ಬಳಗದ ಸಿ.ಎಸ್.ನಟರಾಜ್ ತಿಳಿಸಿದ್ದಾರೆ.
ಮಕ್ಕಳ ದಿನಾಚಾರಣೆ ಅಂಗವಾಗಿ ನವಂಬರ್ 14ರಂದು ಬೆಳಗ್ಗೆ 11ಗಂಟೆಗೆ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ಪ್ರತಿಭಾನ್ವಿತ ಮಕ್ಕಳಿಂದ ಮಕ್ಕಳ ಜಾನಪದ ಹಾಗೂ ಕಲಾಮೇಳ ನಡೆಯಲಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ಹಾಗೂ ಶಿಕ್ಷಣ ಇಲಾಖೆ ಮತ್ತು ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ ಹಾಗೂ ತಾಲ್ಲೂಕು ಶಿಕ್ಷಕರ ಸಂಘದ  ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚಾರಣೆ ಕಾರ್ಯಕ್ರಮ ನಡೆಯಲಿದೆ. 
ಕಾರ್ಯಕ್ರಮದ ಉದ್ಘಾಟನೆಯನ್ನು ಕಿರುತೆರೆ ಕಲಾವಿದೆ ಪುಟ್ಟಗೌರಿ ಖ್ಯಾತಿಯ ಕುಮಾರಿ ಸಾನಿಯಾ ಅಯ್ಯರ್ ನೆರವೇರಿಸಲಿದ್ದು,  ಜಾನಪದ ಕಲಾಮೇಳದ ಉದ್ಘಾಟನೆಯನ್ನು ಪುಟಾಣಿ ಪಂಟ್ರು ಖ್ಯಾತಿಯ ಕಿರಿಯ ಕಲಾವಿದ ಮಧುಸೂಧನ್ ಉದ್ಘಾಟಿಸುವರು. ಪಟ್ಟಣದ ಪ್ರೌಢಶಾಲಾ ಹತ್ತನೇ ತರಗತಿ ವಿದ್ಯಾಥರ್ಿ ಹೆಚ್.ಕೆ.ದೀಪು ರಾಜಕುಮಾರ್ ಅಧ್ಯಕ್ಷತೆ ವಹಿಸುವರು. 
ಮುಖ್ಯ ಅತಿಥಿಗಳಾಗಿ ವಿದ್ಯಾಥರ್ಿಗಳಾದ ಶರತ್ ಹಳೇಮನೆ, ಡಿ.ಎಸ್.ಅಂಬಿಕಾ, ಗಗನ್, ಎಲ್.ಎನ್.ಸಂಜಯ್, ಚೈತ್ರ, ಸುಷ್ಮಾ ಚೌಡಿಕೆ ಸುದರ್ಶನ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 3ಕ್ಕೆ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮವನ್ನು ಹುಲಿಕಲ್ ನಟರಾಜ್ ಹಾಗೂ ತೇಜಸ್ವಿ ನಟರಾಜ್ರವರಿಂದ ಕಾರ್ಯಕ್ರಮ ನಡೆಯಲಿದೆ.

ಮಲ್ಲಿಗೆರೆ ಗ್ರಾ.ಪಂ.ನ ಸಮಸ್ಯೆ ಬಗೆಹರಿಸಲು ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ನ.12: ತಾಲೂಕಿನ ಮಲ್ಲೀಗೆರೆ ಗ್ರಾ.ಪಂ ನಲ್ಲಿ ಕಾರ್ಯದಶರ್ಿ ಕಳೆದ ಒಂದು ತಿಂಗಳಿಂದ ಕೆಲಸಕ್ಕೆ ಬಂದಿಲ್ಲ ಮತ್ತು ಇಲ್ಲಿ ಪಿಡಿಒ ಹುದ್ದೆ ಖಾಲಿ ಇದೆ ಒಂದು ತಿಂಗಳಿಂದ ಅಧಿಕಾರಿಗಳಿಲ್ಲದೆ ಯಾವುದೆ ಗ್ರಾಪಂ ಕಾರ್ಯಗಳು ಆಗದೆ, ಕುಡಿಯುವ ನೀರು, ವಾಸಸ್ಥಳ ಧೃಢೀಕರಣ ಪತ್ರ್ರ, ಕಸ ನಿಮರ್ೂಲನೆಯಂತಹ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲದೆ  ಜನರು ರೊಸಿ ಹೊಗಿದ್ದಾರೆ ಎಂದು ಗ್ರಾ.ಪಂ.ಸದಸ್ಯರೇ ಪ್ರತಿಭಟಿಸಿದ್ದಾರೆ.
  ಗ್ರಾ.ಪಂ ನಲ್ಲಿ ಕಾರ್ಯಗಳು ಕುಂಟಿತವಾಗಿವೆ, ಕಾರ್ಯ ನಿರ್ವಹಿಸುವಲ್ಲಿ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ  ವಿಫಲವಾಗಿದೆ,  ಈ ಕುರಿತು ಗ್ರಾಪಂ ಅಧ್ಯಕ್ಷೆಯಾದ ಗಿರಿಜಮ್ಮನವರಿಗೆ ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು ಹಲವಾರು ಭಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ  ಎಂದಿದ್ದಾರೆ.
ಆದ್ದರಿಂದ ಈ ಕೊಡಲೆ ಸಂಬಂದಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಅಧಿಕಾರಿಯನ್ನು ನಿಯೋಜಿಸಿ ಕ್ರೀಯಾ ಯೋಜನೆಯನ್ನು ಚಾಲ್ತಿಗೆ ತರುವಂತೆ ಆಗ್ರಹಿಸಿ ಗ್ರಾಪಂ ಮುಂದೆ ಗ್ರಾಪಂ ಸದಸ್ಯರಾದ ನಾಗಭೂಷಣ್, ಮತ್ತು ವಿಶ್ವನಾಥ್, ಹಾಗೂ ಗ್ರಾಮಸ್ಥರು ಪ್ರತಿಭಟಿಸಿ ಅಧ್ಯಕ್ಷರಿಗೆ ಮನವಿಸಲ್ಲಿದರು. ಇನ್ನು ಮುಂದೆಯು ಸಮಸ್ಯೆ ಸರಿಯಾಗದಿದ್ದರೆ ಗ್ರಾಪಂಗೆ ಬೀಗ ಜಡಿದು ಉಗ್ರ ವಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.
ಹಂದನಕೆರೆ ಹೋಬಳಿಯ ಮಲ್ಲಿಗೆರ ಗ್ರಾಪಂ ನಲ್ಲಿ ಸುಮಾರು 1 ತಿಂಗಳಿದ ಅಧಿಕಾರಿಗಳೆ ಇಲ್ಲದೆ ಯಾವುದೆ ಕೆಲಸಗಳು ಆಗುತ್ತಿಲ್ಲ, ಕೇಳಿದರೆ ಕಾರ್ಯದಶರ್ಿ ಗಂಗಾಧರಯ್ಯ ಬಂದಿಲ್ಲ ಯಾವುದೆ ಕಾರಣ ಕೊಡದೆ ಕೀಗಳನ್ನು ಕೊಡದೆ 1 ತಿಂಗಳಿದ ರಜೆ ಹಾಕಿದ್ದಾರೆ ಎಂದು ಬೀಲ್ ಕಲೆಕ್ಟರ್ ಬಂದವರಿಗೆ ಉತ್ತರಿಸಿ ಕಳುಹಿಸುತ್ತಿದ್ದಾರೆ.
 ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 10 ಗ್ರಾಮಗಳು ಇದ್ದು ಒಟ್ಟು 7500-8000 ಜನಸಂಖ್ಯೆಯನ್ನು ಹೋದಿದೆ. ಒಟ್ಟು 17 ಸದಸ್ಯರಿರವುವ ಗ್ರಾಪಂ ಕುಡಿಯುವ ನೀರಿನ ಸಮಸ್ಯೆ, ಕಸದ ಸಮಸ್ಯೆ, ಗ್ರಾಮ ನೈರ್ಮಲ್ಯದ ಸಮಸ್ಯೆ ಎದುರಾಗಿದೆ ಹಾಗೆಯೇ ಹಲವರಿಗೆ ಶೌಚಾಲಯದ ಬೀಲ್ ಹಾಗಿಲ್ಲ ಹಲವಾರು ಕಾಮಗರಿಗಳು ಅರ್ಧಕ್ಕೆ ನಿಂತಿವೆ ಸರ್ವಜನಿಕರು ಸಣ್ಣ ಕೆಲಸಗಳಿಗೂ ಕಾಯುವಂತಹ ಸ್ಥಿತಿ ಉದ್ಭಯಿಸಿದೆ. 
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮನವರ ಹೇಳಿಕೆ: ಮಲ್ಲಿಗೆರೆ ಗ್ರಾಪಂ ನಲ್ಲಿ ಕಾರ್ಯದಶರ್ಿ 1 ತಿಂಗಳಿದ ರಜೆಯಲ್ಲಿದ್ದು ಯಾರಿಗೂ ಚಾಜರ್ು ಹಾಕಾದೆ ಇರುವುದರಿಂದ ಈ ರಿತಿಯ ಸಮಸ್ಯಗಳು ಉಧ್ಬವಿಸಿವೆ ನಾನು ಈ ಕುರಿತು ತಾ.ಪಂ.ಇ.ಒ ಅವರಿಗೆ ಮನವಿಯನ್ನು ಮಾಡಿದ್ದೆನೆ ಆದರೆ ಅವರು ಯಾರನ್ನು ನಿಯೋಜಿಸದೆ ಇರುವುದು ಸಮಸ್ಯೆಯಾಗಿದೆ. ಅವರು ಯಾವ ಅಧಿಕಾರಿಯನ್ನು ನಿಯೋಜಿಸದೆ ಹೋದರೆ ನಾನು ಕೊಡ ಪ್ರತಿಭಟನೆಯ ಹಾದಿಯನ್ನೆ ಹಿಡಿದು ಜನರಿಗೆ ನ್ಯಾಯವನ್ನು ಒದಗಿಸ ಬೇಕಾಗುತ್ತದೆ ಎಂದರು.