Thursday, June 2, 2016

 ಸಕರ್ಾರಿ ಇಲಾಖೆ ನೌಕರರ ಮುಷ್ಕರ  : ಸಾರ್ವಜನಿಕರಿಗೆ ಸಮಸ್ಯೆ

ಚಿಕ್ಕನಾಯಕನಹಳ್ಳಿ,ಜೂ.02 : ಸಕರ್ಾರಿ ಕಛೇರಿಗಳು ತೆರೆದಿದೆ,  ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಕಛೇರಿಗಳು ಬಣಗುಡುತ್ತಿವೆ, ಸಾರ್ವಜನಿಕರು ಕೆಲಸಗಳಿಗೆ ಕಛೇರಿಗೆ ಆಗಮಿಸಿ ಕೆಲಸವಾಗದೆ ಹಿಂತಿರುಗತ್ತಿದ್ದು ಸವರ್ೆ ಸಾಮಾನ್ಯವಾಗಿತ್ತು.
ರಾಜ್ಯ ಸಕರ್ಾರಿ ನೌಕರರ ಸಂಘ ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಕರೆಕೊಟ್ಟಿದ್ದ ಮುಷ್ಕರಕ್ಕೆ ಬೆಂಬಲಿಸಿ ತಾಲೂಕಿನ ಸಕರ್ಾರಿ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ,  ತಾಲೂಕು ಕೇಂದ್ರದ  ಎಲ್ಲಾ ಸಕರ್ಾರಿ ಕಛೇರಿಗಳು ಬಿಕೋ ಎನ್ನುತ್ತಿದ್ದರೆ,  ಶಾಲಾ ಕಾಲೇಜ್ಗಳು ಬಾಗಿಲನ್ನೇ ತೆರೆದಿರಲಿಲ್ಲ.
 ತಮ್ಮ ಬೇಡಿಕೆಯಾದ  ಕೇಂದ್ರ ಸಕರ್ಾರಿ ನೌಕರರಿಗೆ ನೀಡುವಂತಹ ವೇತನ ಸೌಲಭ್ಯವನ್ನು ರಾಜ್ಯ ಸಕರ್ಾರಿ ನೌಕರರಿಗೂ ನೀಡಬೇಕೆಂದು ರಾಜ್ಯ ಸಕರ್ಾರಿ ನೌಕರರುಗಳು ಗುರುವಾರ ಮುಷ್ಕರವನ್ನು ಆರಂಭಿಸಿದ್ದರು, ಈ ವೇಳೆ ನೌಕರರು ಕಛೇರಿಗಳಿಗೆ ತೆರಳಿದ್ದರೂ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ದೂರದೂರುಗಳಿಂದ ಆಗಮಿಸಿದ್ದ ರೈತರು, ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸಾಗುತ್ತಿದ್ದರು.
ತಾಲ್ಲೂಕು ಕಛೇರಿಯಲ್ಲಿ ಅಜರ್ಿ ಪಡೆಯಲು ಬಂದಿದ್ದ ರೈತರು ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಮಕ್ಕಳಿಗೆ ಶಾಲೆಗೆ ಸೇರಿಸುವುದಕ್ಕೋಸ್ಕರ ಜಾತಿ ಆದಾಯ ಪ್ರಮಾಣ ಪತ್ರ ಹಾಗೂ ಪಹಣಿ ಪಡೆಯಲು ಕಛೇರಿಗಳಿಗೆ ಆಗಮಿಸಿದ್ದೇವೆ, ಇಲ್ಲಿ ನೋಡಿದರೆ ಕಛೇರಿಗಳಲ್ಲಿ ಯಾವ ನೌಕರರು, ಅಧಿಕಾರಿಗಳು ಸಿಗುತ್ತಿಲ್ಲ, ಕಛೇರಿಗೆ ನೌಕರರು ಆಗಮಿಸುವುದಿಲ್ಲ ಎಂದು ಮೂರು ದಿನಗಳ ಹಿಂದೆಯೇ ಕಛೇರಿಗಳಲ್ಲಿ ನಾಮಫಲಕ ಹಾಕಿದ್ದರೆ ಯಾರಿಗೂ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದರು.
ತಾಲೂಕ ಕಛೇರಿ ಮುಂದೆ ಪ್ರತಿಭಟನೆ: ತಾಲ್ಲೂಕು ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರದ ಮಾದರಿಯಲ್ಲೇ ರಾಜ್ಯ ಸಕರ್ಾರವೂ ನೌಕರರಿಗೆ ವೇತನ ಹಾಗೂ ಸವಲತ್ತುಗಳನ್ನು ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಕರ್ಾರ ಇದುವರೆಗೂ ವೇತನ ತಾರತಮ್ಯ ನಿವಾರಿಸಿಲ್ಲ,  ರಾಜ್ಯ ಸಕರ್ಾರ ಜಾರಿಗೆ ತಂದಿರುವ ಅನೇಕ ಯೋಜನೆಗಳನ್ನು ಸಕರ್ಾರಿ ನೌಕರರು ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ ಆದರೂ ಸಕರ್ಾರ ರಾಜ್ಯ ಸಕರ್ಾರಿ ನೌಕರರ ಮನವಿಯನ್ನು ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿದರು.
ತಾಲ್ಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೊಯ್ಸಲಕಟ್ಟೆ ಪ್ರಕಾಶ್ ಮಾತನಾಡಿ, ಸಕರ್ಾರಿ ನೌಕರರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ, ಅನೇಕ ಬಾರಿ ಪದಾಧಿಕಾರಿಗಳು ಮಾತುಕತೆಗೆ ಮುಂದಾದರೂ ಸಕರ್ಾರ ಸ್ಪಂದಿಸುತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಕಾರ್ಯದಶರ್ಿ ಎಸ್.ಕೆ.ಈರಯ್ಯ, ರಾಜ್ಯ ಪರಿಷತ್ ಪ್ರತಿನಿಧಿ ಅಜಯ್, ಬಸವರಾಜ್(ಪಲ್ಲಕ್ಕಿ), ಸಿ.ಜಿ.ಶಂಕರ್, ಉಪಧ್ಯಾಯರ ಸಹಕಾರ ಸಂಘದ ಕಾರ್ಯದಶರ್ಿ ಶಿವಕುಮಾರ್ ಸೇರಿದಂತೆ ಸಕರ್ಾರಿ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಎಂ.ಎಸ್.ಈಶ್ವರಪ್ಪ, ಸಿ.ವೀಣಾ, ಕೆ.ಆರ್.ರಮೇಶ್, ಎಂ.ಎಸ್.ಲೋಕೇಶ್, ಲಕ್ಷಮ್ಮ, ರೂಪ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು  ಉಪಸ್ಥಿತರಿದ್ದರು.
ಬಾಕ್ಸ್ ಐಟಂ-1
ಎರಡು ಬಣಗಳಾದ ನೌಕರರು, ಪತ್ಯೇಕವಾಗಿ ಮನವಿ ಪತ್ರ ಅಪರ್ಿಸಿದರು.

ರಾಜ್ಯ ಸಕರ್ಾರಿ ನೌಕರರ ಸಂಘ ಕರೆಕೊಟ್ಟ ಮುಷ್ಕರಕ್ಕೆ ಎಲ್ಲಾ ಇಲಾಖೆಯವರು ಒಮ್ಮದಿಂದ ಮುಷ್ಕರಕ್ಕೆ ಬೆಂಬಲಿಸಿದರು. ಶಿಕ್ಷಕರ ಸಂಘ, ಅನುದಾನಿತ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು. ಆದರೆ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೊಯ್ಸಳಕಟ್ಟೆ ಪ್ರಕಾಶ್  ಹಾಗೂ ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ನೇತೃತ್ವದಲ್ಲಿ ಎರಡು ತಂಡಗಳೂ ಪ್ರತ್ಯೇಕವಾಗಿ  ತಹಶೀಲ್ದಾರ್ ಮನವಿ ಪತ್ರ ಸಲ್ಲಿಸಿದರು.  ಇದು ಶಿಕ್ಷಕರಲ್ಲೇ ಎರಡು ಗುಂಪುಗಳಾಗಿರುವುದನ್ನು ಎತ್ತಿ ತೋರಿಸಿತು.
ವಿವಿಧ ಇಲಾಖೆಯ ನೌಕರರು,  ಸಕರ್ಾರಿ ನೌಕರರ ಸಂಘದ ಕಛೇರಿಯಿಂದ ತಾ.ನೌಕರರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಆರ್.ಪರಶಿವಮೂತರ್ಿ ನೇತೃತ್ವದಲ್ಲಿ ತಾಲ್ಲೂಕು ಕಛೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದರು.
ಇತ್ತ ತಾ.ಶಿಕ್ಷಕರ ಸಂಘದ ಅಧ್ಯಕ್ಷ ಹೊಯ್ಸಳಕಟ್ಟೆ ಪ್ರಕಾಶ್ ನೇತೃತ್ವದ ತಂಡ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ತೆರಳಿ ಎರಡೂ ತಂಡಗಳು ಪ್ರತ್ಯೇಕವಾಗಿ  ತಹಶೀಲ್ದಾರ್ ರವರಿಗೆ   ಮನವಿ ಪತ್ರ ಅಪರ್ಿಸಿದರು.

ಸಾಲ್ಕಟ್ಟೆ ಗ್ರಾಮದಲ್ಲಿ ಬಹಿಷ್ಕಾರ ; ತಹಶೀಲ್ದಾರ್ಗೆ ಮನವಿ

ಚಿಕ್ಕನಾಯಕನಹಳ್ಳಿ,ಜೂ.02 : ತಾಲ್ಲೂಕಿನ ಸಾಲ್ಕಟ್ಟೆ ಲಂಬಾಣಿ ತಾಂಡ್ಯದಲ್ಲಿ ಎರಡು ಕುಟುಂಬಗಳಿಗೆ ಕಳೆದ ಐದು ವರ್ಷಗಳಿಂದ ಬಹಿಷ್ಕಾರ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು,   ಈಗಲೂ ಕೆಲವು ಗ್ರಾಮಗಳಲ್ಲಿ  ಸಾಮಾಜಿಕ ಬಹಿಷ್ಕಾರದಂತಹ ಹೇಯ ಕೃತ್ಯ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ತಾಲ್ಲೂಕಿನ ಸಾಲ್ಕಟ್ಟೆ ಲಂಬಾಣಿ ತಾಂಡ್ಯದ ಶಂಕರನಾಯ್ಕ ಮತ್ತು ಮೂತರ್ಿನಾಯ್ಕ, ಕುಟುಂಬದವರಿಗೆ  ಬಹಿಷ್ಕಾರ ಹಾಕಿದ್ದಾರೆ, ಈ ಕುರಿತು ತಹಶೀಲ್ದಾರ್ರವರಿಗೆ ಮನವಿ ಪತ್ರವನ್ನು  ಸಲ್ಲಿಸಲಾಗಿದೆ.
ಕಳೆದ ಐದು ವರ್ಷಗಳ ಹಿಂದ ಸಣ್ಣ ಗಲಾಟೆಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು, ನಂತರ ನ್ಯಾಯಾಲಯ ಮೊಕದ್ದಮೆ ವಜಾ ಮಾಡಿತ್ತು, ಆಗಲೇ ಗ್ರಾಮದಿಂದ ಬಹಿಷ್ಕಾರ ಹಾಕಲಾಯಿತು. ಆಗಿನಿಂದಲೂ ಈ ಎರಡೂ ಕುಟುಂಬದವರನ್ನು ತಾಂಡ್ಯದ ಜನ ಮಾತನಾಡಿಸುವಂತಿಲ್ಲ, ಊರಿನಲ್ಲಿ ಯಾವೊಂದು ಕಾರ್ಯಕ್ಕೂ ಇವರು ಭಾಗವಹಿಸುವಂತಿಲ್ಲ, ಇವರಿಗೆ ಕುಡಿಯಲು ನೀರು ಕೊಡುವಂತಿಲ್ಲ, ಇವರೇ ಹಾಕಿಸಿಕೊಂಡಿದ್ದ ನಲ್ಲಿಯ ಸಂಪರ್ಕವನ್ನು ಕಡಿತ ಮಾಡಿಸುವ ಅಮಾನವೀಯ ವರ್ತನೆಯಿಂದ ಬೆಂದು ಬಸವಳಿದು ಕೊನೆಗೆ ತಹಶೀಲ್ದಾರ್ ರವರಿಗೆ ಮನವಿ ಅಪರ್ಿಸಿದ್ದಾರೆ.
 ಈ ಬಗ್ಗೆ ಎರಡೂ ಕುಟುಂಬದವರು ತಮಗಾಗಿರು ಅನ್ಯಾಯದ ಬಗ್ಗೆ  ತಾಲ್ಲೂಕು ಬಂಜಾರ ಸಂಘಕ್ಕೆ ಮನವಿ ನೀಡಿದ್ದಾರೆ. ಸಂಘದ ಅಧ್ಯಕ್ಷ ಜಿ.ರಘುನಾಥ್ ತಮ್ಮ ಗ್ರಾಮದಲ್ಲಿ ಹಿರಿಯರು, ತಾಂಡ್ಯದ  ನಾಯಕ್,  ಡಾವ್ ಕಾರಬಾರಿ ಮತ್ತು ಗ್ರಾಮಸ್ಥರನ್ನು ಸೇರಿಕೊಂಡು ನ್ಯಾಯ ಮಾಡಿದರೆ ಒಳ್ಳೆಯ ಬೆಳವಣಿಗೆ ಎಂದು ಸಲಹೆ ನೀಡಿದ್ದರು. ಇದರಂತೆ ಸಾಲ್ಕಟ್ಟೆ ಲಂಬಾಣಿ ತಾಂಡ್ಯದಲ್ಲಿರುವ ಸ್ಥಳೀಐ ಸಂಘಕ್ಕೆ ಅಜರ್ಿ ನೀಡಿ ಎಲ್ಲರೂ ಒಂದಾಗಿ ಹೋಗಲು ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿದೆವು.
ನ್ಯಾಯಕ್ಕೆ ಸೇರಿಸಿದಾಗ ದಂಡಕ್ಕಟುವಂತೆ ಒತ್ತಾಯಿಸಿದರು,  ದೇವಸ್ಥಾನದ ಖಚರ್ು 10ಸಾವಿರ ದಂಡ ಕಟ್ಟಿದರೆ ಗ್ರಾಮಕ್ಕೆ ಸೇರಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ, ಕಡು ಬಡವರಾದ ನಾವು ಕೂಲಿ ನಾಲಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದೇವೆ, ಗ್ರಾಮದಲ್ಲಿ ಕುಡಿಯುವ ನೀರು, ತಿರುಗಾಡುವ ದಾರಿಯ ವಿಚಾರದಲ್ಲಿ ಮಾನಸಿಕ ಕಿರುಕುಳವಾಗುತ್ತಿದ್ದು ಇದರಿಂದ ಬದುಕಲು ಹಿಂಸೆಯಾಗುತ್ತಿದೆ, ಹೆಣ್ಣು ಮಕ್ಕಳು ತಿರುಗಾಡಲು ಭಯದ ವಾತಾವರಣವಿದೆ ಎಂದು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅಪಘಾತವಲ್ಲ ಕೊಲೆ : ಮೃತನ ಕುಟುಂಬಸ್ಥರ ಆರೋಪ 

ಚಿಕ್ಕನಾಯಕನಹಳ್ಳಿ,ಜೂ.02 : ತಾಲ್ಲೂಕಿನ ಹಂದನಕೆರೆ ಹೋಬಳಿಯ ದವಣದಹೊಸಹಳ್ಳಿ ಬಳಿಯ ಸೋಮಜ್ಜನಕಟ್ಟೆಯಲ್ಲಿ ಕಳೆದ ಭಾನುವಾರ ರಾತ್ರಿ  ಕಾರು ಸಮೇತ ನೀರಿಗೆ ಬಿದ್ದು  ಮೃತನಾಗಿರುವ ಮೋಹನ್ಕುಮಾರ್(35) ಅಪಘಾತದಲ್ಲಿ ಸಾವನ್ನಪ್ಪಿಲ್ಲ,  ಅದು ಪೂರ್ವಯೋಜಿತ  ಕೊಲೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೃತ ಮೋಹನ್ಕುಮಾರ್ನ ತಾಯಿ ತಿಮ್ಮಕ್ಕ  ಮಾತನಾಡಿ, ಮೇ 29ರ ಭಾನುವಾರ ರಾತ್ರಿ 10ಗಂಟೆಯ ಸಮಯದಲ್ಲಿ, ಅದೇ ಗ್ರಾಮದ ಪರಮೇಶ್ ಎಂಬುವವರು ಕಾರಿನಲ್ಲಿ ಬಂದು ಮೋಹನ್ಕುಮಾರ್ರವರನ್ನು ಕರೆದು ಕೊಂಡು ಹೋದ ನಂತರ ಮತ್ತೆ ಮನೆಗೆ ಹಿಂತಿರುಗಿಲ್ಲ, ಜೊತೆಯಲ್ಲಿ ತೆರಳಿದ್ದ ಪರಮೇಶ್ ಅಪಘಾತವಾಗಿದೆ ಎಂದು ಬೇರೆಯವರಿಗೆ ಹೇಳಿ ತಲೆಮರೆಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಹೇಳಿದರು.
ಮೃತನ ಹೆಂಡತಿ ಪರಿಮಳ ಮಾತನಾಡಿ, ಅಂದು ನಾನು ಊರಿನಲ್ಲಿ ಇರಲಿಲ್ಲ, ಮೋಹನ್ಕುಮಾರ್ ಮೃತಪಟ್ಟಿದ್ದಾರೆ ಎಂದು ತಿಳಿದ ಮೇಲೆ ನೋಡೋಕೆ ಕೆರೆ ಬಳಿ ಹೋದಾಗ ಅವರ ಮೈ, ಕೈಯ ಮೇಲೆ ಹೊಡೆದಿರುವ ಗಾಯದ ಗುರುತುಗಳಿದ್ದವು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಬಂಧಿಕರಾದ ದವನದಹೊಸಹಳ್ಳಿಯ ಕೃಷ್ಣಪ್ಪ, ಕುಮಾರಯ್ಯ, ಹೆಚ್.ಆರ್.ತಿಮ್ಮಯ್ಯ, ಮಹಾಲಿಂಗಯ್ಯ, ಮೋಹನ್ಕುಮಾರ್, ಈಶ್ವರಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂಬಂಧ ಹಂದನಕೆರೆ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.