Tuesday, January 19, 2016


ವಿವೇಕಾನಂದರು ಭಾರತದ ಪರಂಪರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ಚೇತನ  ಡಾ.ಯತೀಶ್ವರಶಿವಾಚಾರ್ಯಸ್ವಾಮೀಜಿ
 ಚಿಕ್ಕನಾಯಕನಹಳ್ಳಿ,: ಭಾರತದ ಪರಂಪರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು, ನಮ್ಮ ಸಂಸ್ಕೃತಿ, ಗುರುಹಿರಿಯರು ಹಾಗೂ ಪೂರ್ವಜರನ್ನು ಮರೆತಾಗ ಭಾರತ ನಾಶವಾದಂತೆ ಎಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮೀಜಿ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಅಭಾವಿಪಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 154ನೇ ಜಯಂತ್ಯೋತ್ಸವದ ಅಂಗವಾಗಿ ನಡೆದ ಯುವ ಘರ್ಜನೆಯ ಸಮಾವೇಶದಲ್ಲಿ ಮಾತನಾಡಿ, ವಿದ್ಯಾಥರ್ಿಗಳು ತಮ್ಮಲ್ಲಿರುವ ಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೇ ದೇಶಕ್ಕಾಗಿ ಉಪಯೋಗಿಸಿ, ದೇಶ ನಮಗೆ ಏನು ಮಾಡಿದೆ ಎಂಬುವುದಕ್ಕಿಂತ ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬ ಭಾವನೆ ಎಲ್ಲರಲ್ಲೂ ಮೂಡಿಬರಬೇಕಾಗಿದೆ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುಲು ಶ್ರಮಿಸಿದವರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು ಎಂದರು. ವಿಶ್ವದಾದ್ಯಂತ ತಮ್ಮ ಅಪಾರ ಪಾಂಡಿತ್ಯದ ಮೂಲಕ ಜ್ಞಾನವನ್ನು ವಿಶ್ವಕ್ಕೆ ಹರಡಿ ಮಾದರಿಯಾದವರು ಸ್ವಾಮಿವಿವೇಕಾನಂದರು
ಅಂಕಣಕಾರ ಗಿರೀಶ್ಭಾರಧ್ವಾಜ್ ಮಾತನಾಡಿ, ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ ಚಂದ್ರಶೇಖರ್ ಆಜಾದ್, ಮದನ್ಲಾಲ್ದಿಂಗ್ರ, ದಿ.ರಾಷ್ಟ್ರಪತಿ ಅಬ್ದುಲ್ಕಲಾಂ, ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೂ ಸ್ವಾಮಿ ವಿವೇಕಾನಂದರು ಆದರ್ಶವಾಗಿದ್ದಾರೆ, ಸ್ವಾಮಿ ವಿವೇಕಾನಂದರು ಇಂದಿಗೂ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ, ಸ್ವಾಮಿ ವಿವೇಕಾನಂದರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚರಿಸಿ ಇಲ್ಲಿನ ಬಡತನವನ್ನು ನೆನೆದು ಕಣ್ಣೀರಿಟ್ಟು ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಪ್ರಪಂಚದಾದ್ಯಂತ ಸಂಚರಿಸಿ ಭಾರತದ ಸಂಸ್ಕೃತಿಯನ್ನು ಬೆಳೆಸಿದರು, ಭಾರತ ಇಂಗ್ಲೀಷರ ಮೆಕಾಲೆ ಶಿಕ್ಷಣ ಪದ್ದತಿ ಜಾರಿಗೆ ಇದೆ ಇದನ್ನು ತೊಡೆದು ಹಾಕಿ ಸ್ವಾಮಿವಿವೇಕಾನಂದರ ಶಿಕ್ಷಣ ಪದ್ದತಿಯನ್ನು ತಂದಾಗ ಮಾತ್ರ ಭಾರತ ಪುನಹ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ಜಿಲ್ಲಾ ಎಬಿವಿಪಿ ಸಂಘಟನಾ ಕಾರ್ಯದಶರ್ಿ ಸಿದ್ದುಮದನಕಂಡಿ ಮಾತನಾಡಿ, ಯುವಕರು ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಚಿಂತಿಸಬೇಕಾಗಿದೆ, ಮಹಿಳೆಯರನ್ನು ಗೌರವಿಸಬೇಕು, ಮಹಿಳೆಯರು ವಿಶ್ವಸುಂದರಿಯಾಗುವ ಬದಲು ವಿಶ್ವಕ್ಕೆ ಮಾದರಿಯಾಗಬೇಕು, ಯುವಕರು ಸಿನಿಮಾದಲ್ಲಿ ನಾಯಕರಾಗುವ ಬದಲು ದೇಶ ಕಟ್ಟುವ ನಾಯಕರಾಗಬೇಕು ಎಂದರು.
ಉಪನ್ಯಾಸಕ ಧನಂಜಯ್ ಮಾತನಾಡಿ, ಇನ್ನೂರು ವರ್ಷಗಳು ನಾವು ಪರಕೀಯರ ಅಡಿಯಾಳಾಗಿ ಬದುಕಿರುವುದರಿಂದ ಇನ್ನೂ ನಾವು ವಿದೇಶಿ ಸಂಸ್ಕೃತಿಯಿಂದ ಹೊರಬಂದಿಲ್ಲ, ಪ್ರಪಂಚದ ಹಲವಾರು ನಾಗರೀಕತೆಗಳು ನಶಿಸಿಹೋಗಿದ್ದರೂ,  ಭಾರತ ಮಾತ್ರ ಹಿಂದೂ ನಾಗರೀಕತೆಯನ್ನು ಉಳಿಸಿಕೊಂಡು ಬಂದಿದ್ದೇವೆ, ದೇಶದಲ್ಲಿ ಸಂತರು, ಋಷಿ ಮುನಿಗಳು ಮಹನೀಯರು ನಮ್ಮ ಸ್ವತಂತ್ರಕ್ಕಾಗಿ ಹೋರಾಟ ಮಾಡಿ ಸ್ವತಂತ್ರ್ಯ ತಂದುಕೊಟ್ಟಿದ್ದಾರೆ, ಹಿಂದು ದೇಶ ಕಟ್ಟವು ಜವಬ್ದಾರಿ ಯುವಕರ ಮೇಲಿದೆ ಎಂದರು.
ಸಬ್ಇನ್ಸ್ಪೆಕ್ಟರ್ ವಿಜಯಕುಮಾರ್,  ಕಾಶಿಪ್ರಜ್ವಲ್, ದರ್ಶನ್, ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಜಾಗತೀಕರಣದ ಬದುಕಿನಲ್ಲಿ ಕೃಷಿಯು ತನ್ನ ನೆಲೆ ಕಳೆದುಕೊಳ್ಳುತ್ತಿದೆ
ಚಿಕ್ಕನಾಯಕನಹಳ್ಳಿ,ಜ.19:   ಮಿತಿಮೀರಿ ಬೆಳೆಯುತ್ತಿರುವ ಜಾಗತೀಕರಣದ ಬದುಕು ಹಾಗೂ ಮನುಷ್ಯನ ವೇಗದ ಬದುಕಿನ ನಡುವೆ ಸುಸ್ಥಿರ ಕೃಷಿಯು ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ಹುಳಿಯಾರು ಬಿ.ಎಂ.ಎಸ್. ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂತರ್ಿ ಬಿಳಿಗೆರೆ ಹೇಳಿದರು.
       ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ಯುವಸಪ್ತಾಹ ದಿನದ ಸಮಾರೋಪ ಸಮಾರಂಭದಲ್ಲಿ ಸುಸ್ಥಿರ ಕೃಷಿ-ಸುಸ್ಥಿರ ಜೀವನ ವಿಷಯವನ್ನು ಕುರಿತು ಮಾತನಾಡಿದರು.  ವಿದ್ಯಾಥರ್ಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಬದಲಾಗಲು ಸಾಧ್ಯ.  ನಮ್ಮಲ್ಲಿನ ಆಲೋಚನಾ ಕ್ರಮಗಳು ಬದಲಾಗಿ ನಾವು ಸಾಗುತ್ತಿರುವ ದಾರಿ ಮುಖ್ಯವಾಗುವ ಜೊತೆ ಗುರಿಯೂ ಬಹಳ ಮುಖ್ಯ ಎಂದು ತಿಳಿಸಿದರು.  ಎಲ್ಲರನ್ನು ಬದುಕಲು ಬಿಡುವುದೇ ಸುಸ್ಥಿರ ಜೀವನದ ಉದ್ದೇಶವಾಗಿದ್ದು, ಇಂದು ನೀರಾವರಿ ಭೂಮಿ ಕಣ್ಮರೆಯಾಗುತ್ತಿದ್ದು, ನಾವು ಸೇವಿಸುವ ಗಾಳಿ, ನೀರು ಮಲೀನಗೊಳ್ಳುತ್ತಿದ್ದು ಅನ್ನದ ಗುಣ ಸರ್ವನಾಶವಾಗಿದೆ ಎಂದು ಹೇಳುತ್ತಾ, ಮುಂದಿನ ಯುವ ಸಮುದಾಯ ಕೃಷಿಯುತ್ತ ತಮ್ಮ ಗಮನವನ್ನು ಹರಿಸಿದ್ದಲ್ಲಿ ಮುಂದಿನ ದಿನದಲ್ಲಿ ಆಶಾದಾಯಕ ಬೆಳವಣಿಗೆಯಾಗುತ್ತದೆ.  ಇಂತಹ ಆಲೋಚನೆಯನ್ನು ಇವತ್ತಿನ ಯುವಕರು ಮಾಡಬೇಕು ಎಂದು ತಿಳಿಸಿದರು.
       ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್.ಎಸ್. ಶಿವಕುಮಾರಸ್ವಾಮಿ ಮಾತನಾಡಿ ವಿದ್ಯಾಥರ್ಿಗಳಿಗೆ ಬದುಕಿನ ಪಾಠ ಅತ್ಯಗತ್ಯ.  ಅವರು ತಮ್ಮ ನೈತಿಕವಾದ ಹಕ್ಕುಗಳನ್ನು ತಿಳಿದುಕೊಂಡು ಮನುಷ್ಯತ್ವದ ಗುಣ ಬೆಳೆಸಿಕೊಂಡು ವಿವೇಕ ಕುರಿತು ಬದುಕಿನಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ನುಡಿದರು.
       ಸಮಾರಂಭದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಹೆಚ್.ಎಸ್. ಶಿವಯೋಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ರವಿಕುಮಾರ್. ಸಿ ಮತ್ತು ಡಾ. ಸಿ.ಕೆ. ಶೇಖರ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದು, ಕು. ರೋಜಾ ನಿರೂಪಿಸಿ, ಕು. ಜಯಲಕ್ಷ್ಮಿ ಸ್ವಾಗತಿಸಿ, ಶ್ರೀನಿವಾಸ. ಎ.ಎನ್ ವಂದಿಸಿದರು.