Saturday, November 2, 2013


ಕನ್ನಡವನ್ನು ಉಳಿಸಿ ಬೆಳೆಸೋಣ : ಶಾಸಕ ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಕಾಮಾಕ್ಷಮ್ಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾಧ್ಯಕ್ಷೆ ಗೀತಾರಮೇಶ್, ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಕಸಾಪ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,ನ.01 : ನಮ್ಮ ಆಚಾರ, ವಿಚಾರದೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸೋಣ, ನಾಡಿನ ನೆಲ, ಜಲದ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡು ಮುನ್ನೆಡೆಯೋಣ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ನೆಲ, ಜಲಗಳಿಗಾಗಿ ಅವಿರತವಾಗಿ ದುಡಿದವರೆಲ್ಲರನ್ನು ಸ್ಮರಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ಮಾತನಾಡಿ ಹೆಸರಾಗಲಿ ಕನರ್ಾಟಕ, ಉಸಿರಾಗಲಿ ಕನ್ನಡ ಎಂಬ ಕವಿವಾಣಿ ಸದಾ ಎಲ್ಲರ ಜಾಗೃತ ಅರಿವಾಗಿರಲಿ, ಈ ನೆಲದಲ್ಲಿ ಕನ್ನಡ ವಿಜೃಂಭಿಸಲಿ, ಕನ್ನಡ ಆಡಳಿತದಲ್ಲಿ ಸದಾ ಕನ್ನಡ ಮೆರೆಯಲಿ, ಕನ್ನಡ ನಾಡು ನುಡಿಗಾಗಿ ದುಡಿದ, ದುಡಿಯುತ್ತಿರುವ ತಾಲ್ಲೂಕಿನ ಮಹಾನ್ ಚೇತನಗಳು ಎಲ್ಲರಿಗೂ ಆದರ್ಶವಾಗಿರಲಿ, ಮಕ್ಕಳೇ ಚೆನ್ನಾಗಿ ಕನ್ನಡ ಓದಿ, ಕನ್ನಡ ಬರೆಯಿರಿ, ಕನ್ನಡ ಕಲಿಯಿರಿ, ಕನ್ನಡ ಪುಸ್ತಕ ಪ್ರೇಮ ನಿಮ್ಮದಾಗಿರಲಿ ಎಂದ ಅವರು ಕನ್ನಡದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಆ ಮೂಲಕ ಕನ್ನಡ ತಾಯಿ ಸೇವೆ ಮಾಡಿ ಸಾರ್ಥಕವಾಗೋಣ ಎಂದರು.
    ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿದರು,     ಸಮಾರಂಭದಲ್ಲಿ ಹಾಮರ್ೋನಿಯಂ ಕಲಾವಿದ ಶಂಕರಲಿಂಗಪ್ಪ , ಬಾಲ ಪ್ರತಿಭೆ ಟಿ.ಜಿ.ಪ್ರಶಾಂತ್ರವರನ್ನು ಸನ್ಮಾನಿಸಲಾಯಿತು.
    ಶಾಲಾ ಮಕ್ಕಳು ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಸ್ಥಬ್ಧಚಿತ್ರಗಳ ವೇಷಭೂಷಣದಲ್ಲಿ ಪಾಲ್ಗೊಂಡಿದ್ದರು.
    ಈ ಸಂದರ್ಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್, ಪುರಸಭಾಧ್ಯಕ್ಷೆ ಗೀತಾರಮೇಶ್, ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಕಸಾಪ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಪೌರಾಣಿಕ ನಾಟಕಗಳ ರಂಗದೃಶ್ಯಾವಳಿಯಲ್ಲಿ ಪಟ್ಟಣದ ಕಾಳಮ್ಮನಗುಡಿ ಶಾಲಾ ಮಕ್ಕಳಿಂದ ನಾಟಕ ನಡೆಯಿತು. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಗಂಗಾಧರಯ್ಯ, ಸಿದ್ದು ಜಿ.ಕೆರೆ, ಶಾಲೆಯಶಿಕ್ಷಕರುಗಳಾದ ಜಯಮ್ಮ, ಸಿ.ಟಿ.ರೇಖಾ ಉಪಸ್ಥಿತರಿದ್ದರು.
 

ಶೀರ್ಷಿಕೆ ಸೇರಿಸಿಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಬಸ್ ಏಜೆಂಟ್ ಗಂಗಾಧರ್ರಾವ್ ಎಮ್.ಎಮ್.ನಾಯಕನ ಪಾತ್ರವೇಷಧಾರಿಯಾಗಿದ್ದರು. ಶಾಸಕ ಸಿ.ಬಿ.ಸುರೇಶ್ಬಾಬು, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭಾ ಸದಸ್ಯರಾದ ಅಶೋಕ್, ರವಿಚಂದ್ರ, ಮಹಮದ್ ಖಲಂದರ್, ಕೆ.ಜಿ.ಕೃಷ್ಣೆಗೌಡ ಭಾಗವಹಿಸಿದ್ದರು.

ಚಿಕ್ಕನಾಯಕನಹಳ್ಳಿ ಪಟ್ಟಣದ  ಆಟೋಚಾಲಕರು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.

 

ಚಿಕ್ಕನಾಯಕನಹಳ್ಳಿಯ ಗ್ರಾಮೀಣ ಪ್ರತಿಭೆ ಹರೀಶ್ ರಾಷ್ಟ್ರೀಯ ಖೋ-ಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಇವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸಿ.ಎಸ್.ಪ್ರದೀಪ್ಕುಮಾರ್, ಪಾಲ್ ಹ್ಯಾರಿಸ್ ಫೆಲೋ ರೋ.ಎಂ.ವಿ.ನಾಗರಾಜ್ ರಾವ್, ಕಾರ್ಯದಶರ್ಿ ಡಾ.ಪ್ರಶಾಂತ್ಕುಮಾರ್ ಶೆಟ್ಟಿ, ತಾ.ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿಯ ಡಿವಿಪಿ ಶಾಲೆಯಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಬಿ.ಇ.ಓ ಸಾ.ಚಿ.ನಾಗೇಶ್, ಡಿವಿಪಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು ಪಾಲ್ಗೊಂಡಿದ್ದರು.
ಚಿಕ್ಕನಾಯಕನಹಳ್ಳಿ,ನ.01 : ದೇಶದಲ್ಲೇ ತೃತೀಯ ಸ್ಥಾನ ಹೊಂದಿರುವ ಕನ್ನಡ ಭಾಷೆಯನ್ನು ಆಚರಿಸುವುದರ ಜೊತೆಗೆ ಉಳಿಸಿ, ಬೆಳೆಸುವುದು ಕನ್ನಡಾಭಿಮಾನಿಗಳ ಕರ್ತವ್ಯ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ಪಟ್ಟಣದ ಡಿವಿಪಿ ಶಾಲೆಯಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಕನ್ನಡ ಭಾಷೆ ಎಲ್ಲಾ ಎಲ್ಲಾ ಭಾಷೆಗಳಿಗಿಂತ ಉತ್ತಮ ಹಾಗೂ ನಮಗೆ ಹೆಮ್ಮೆಯ ಕನ್ನಡ ಭಾಷೆ ಎಂದರು.
    ಸಮಾರಂಭದಲ್ಲಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಚಂದ್ರಶೇಖರಶೆಟ್ಟರು ಉಪಸ್ಥಿತರಿದ್ದರು.