Saturday, March 30, 2013

ಪುಂಡಾನೆಗಳ ದಾಳಿ ವ್ಯಕ್ತಿ ಸಾವು ಬದುಕಿನ ಮಧ್ಯೆ ಹೋರಾಟ
ಚಿಕ್ಕನಾಯಕನಹಳ್ಳಿ,ಮಾ.30 : ಕಳೆದ ವಾರ ತಾಲ್ಲೂಕಿನ ಸುತ್ತಮುತ್ತಲಿನ ಬಾಳೆ ತೋಟಗಳಲ್ಲಿ ದಾಳಿ ನಡೆಸಿದ್ದ ಪುಂಡಾನೆಗಳು ಶನಿವಾರ ಹೊಸೂರಿನ ಶ್ರೀನಿವಾಸ್(34) ಎಂಬ ರೈತನ ಮೇಲೆ ದಾಳಿ ನಡೆಸಿದ ಪರಿಣಾಮ ಶ್ರೀನಿವಾಸ್ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
    ಪುಂಡಾನೆಗಳು ತಾಲ್ಲೂಕಿನ ಹಂದನಕೆರೆ ಹೋಬಳಿಯ ಹೊಸೂರು ಗ್ರಾಮದ ತೋಟದಲ್ಲಿ ದಾಳಿ ಇಟ್ಟಾಗ ಈ ಘಟನೆ ಸಂಭವಿಸಿದ್ದು ಗುಡ್ಡದ ಸಾಲಿನ ಆಶ್ರೀಹಾಳ್, ಜಾಣೆಹಾರ್, ಅಜ್ಜಿಗುಡ್ಡೆ, ಹೊಸಹಳ್ಳಿಯ ತೋಟಗಳಿಗೆ ನುಗ್ಗಿದ ಸಲಗಗಳು, ತೋಟವನ್ನು ಧ್ವಂಸಗೊಳಿಸಿ ನಂತರ ಬ್ಯಾಲಕೆರೆ, ಸಾಲನಕೆರೆ, ನವಿಲೆ, ತಮ್ಮಡಿಹಳ್ಳಿ ಮುಖಾಂತರ ಶುಕ್ರವಾರ ರಾತ್ರಿ ಸಂಚರಿಸಿದ ಮೂರು ಪುಂಡಾನೆಗಳು ಬೆಳಗಿನ ವೇಳೆಗೆ ಮತಿಘಟ್ಟ, ಗಾಂಧಿನಗರ, ಬರಣಾಪುರ ಮಾರ್ಗವಾಗಿ ಸಂಚರಿಸಿ ಬೆಳಗ್ಗೆ 10ಘಂಟೆ ಸುಮಾರಿಗೆ ರಂಗಾಪುರಗೊಲ್ಲರಹಟ್ಟಿ ಬಳಿಯ ಹಿರೇದೇವರ ತೋಪಿನಲ್ಲಿ ತಂಗಿದ್ದವು. ಈ ಸಂದರ್ಭದಲ್ಲಿ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹೊಸೂರಿನ ಶ್ರೀನಿವಾಸ್ ಮೇಲೆ ದಾಳಿ ಮಾಡಿದ ಆನೆಗಳು ಮಾರಣಾಂತಿಕವಾಗಿ ಗಾಯಗೊಳಿಸಿಸಿದ್ದವು. ಶ್ರೀನಿವಾಸ್ನಿಗೆ ತಿಪಟೂರು ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯಿಂದ ಗಾಯಗೊಂಡ ಶ್ರೀನಿವಾಸನ ಕುಟುಂಬಕ್ಕೆ 5ಲಕ್ಷರೂಪಾಯಿ ಪರಿಹಾರ ನೀಡುವಂತೆ ಸಕರ್ಾರವನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.
    ಕಾಡಾನೆಗಳು ಕಳೆದ ಒಂದು ವಾರದಿಂದಲೂ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆಗಳ ಸುತ್ತಮುತ್ತಲೂ ನೀರನ್ನು ಹುಡುಕಿ ಅಲೆಯುತ್ತಿವೆ. ಮತ್ತು ಮಾರ್ಗ ಮಧ್ಯೆ ಸಿಗುವ ರೈತರ ಬಾಳೆ, ಅಡಕೆ, ತರಕಾರಿ ತೋಟಗಳನ್ನು ನಾಶ ಮಾಡುತ್ತಾ ಮುಂದುವರೆದಿವೆ. ಅಲ್ಲದೆ ಆನೆಗಳನ್ನು ಕಂಡ ಜನರು ಗಾಬರಿಗೊಂಡು ಆನೆಗಳನ್ನು ನಿರಂತರವಾಗಿ ಗಾಸಿಗೊಳಿಸುತ್ತಿದ್ದು ಸಲಗಗಳು ವ್ಯಾಘ್ರಗೊಳ್ಳಲು ಕಾರಣವಾಗಿದ್ದು ಕೋಪಗೊಂಡ ಆನೆಗಳು ದಾಳಿ ನಡೆಸುತ್ತಿವೆ ಎಂದು ಅರಣ್ಯಾಧಿಕಾರಿ ಮಾರುತಿ ತಿಳಿಸಿದರಲ್ಲದೆ ಜನರು ಆನೆಗಳನ್ನು ಗಾಬರಿಗೊಳಿಸದೆ ಸುರಕ್ಷಿತ ತಾಣಗಳಿಗೆ ಮರಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.  
    ಸದ್ಯ ಆನೆಗಳು ಹೊಸೂರ ಬಳಿಯ ಹಿರೆದೇವರ ತೋಪಿನಲ್ಲಿ ಬೀಡುಬಿಟ್ಟಿದ್ದು  ರಾತ್ರಿಯ ವೇಳೆಗೆ ಅಲ್ಲಿಂದ ಕದಲಬಹುದು ಎಂದು ಅರಣ್ಯಪಾಲಕರು, ವನರಕ್ಷಕರು ಮತ್ತು ಸಿಬ್ಬಂದಿವರ್ಗ ಅಲ್ಲಿಯೇ ಮೊಕ್ಕಾಂ ಹೂಡಿದೆ. ಸ್ಥಳಕ್ಕೆ ತುರುವೇಕೆರೆಯ ಆರ್.ಎಪ್ ರವಿ, ತಿಪಟೂರು ಎಎಸ್ಎಪ್ ನಾಗೇಂದ್ರರಾವ್, ಮತ್ತಿತರರು ಹಾಜರಿದ್ದರು.
  ಕಳೆದ ಶನಿವಾರ ಬೆಳ್ಳಂಬೆಳಗ್ಗೆ ಕಾಡೇನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೂರು ಸಲಗಗಳು ತಾಲ್ಲೂಕಿನ ಜನತೆಯಲ್ಲಿ ಭೀತಿ ಹುಟ್ಟಿಸಿದ್ದವು ಮತ್ತು ನಾನಾ ಭಾಗಗಳಲ್ಲಿ ಸಂಚರಿಸಿ ಲಕ್ಷಾಂತರ ರೂ ಮೌಲ್ಯದ ಬೆಳೆ ಧ್ವಂಸಗೊಳಿಸಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಮಾಡಿ ಕರಿ ಹಿಂಡನ್ನು ತುರುವೇಕೆರೆ ತಾಲ್ಲೂಕ್ಗೆ ಹಟ್ಟುವಲ್ಲಿ ಸಫಲವಾಗಿದ್ದರು ಅದೇ ಮೂರು ಸಲಗದ ಹಿಂಡು ಮತ್ತೆ ತಾಲ್ಲೂಕಿಗೆ ಮರಳಿ ದಾಳಿ ನಡೆಸಿವೆ.