Tuesday, January 24, 2012



ಅಂಗನವಾಡಿ ಶಿಕ್ಷಕಿಯರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ನೀಡಿ
ಚಿಕ್ಕನಾಯಕನಹಳ್ಳಿ,ಜ.24: ಮಹಿಳೆಯರ ಮತ್ತು ಮಕ್ಕಳ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಕರ್ಾರ ಅವರ ಅಭಿವೃದ್ದಿಗೆ ಮುಂದಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು. 
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆದ ತಾಲೂಕು  ಅಂಗನವಾಡಿ ಕೇಂದ್ರಗಳಿಗೆ ಸಮಾರೋಪಾದಿ ಭೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿರುವ ವ್ಯವಸ್ಥೆಯನ್ನು ಪರಿಶೀಲನೆಮಾಡಿ ಅಂಗನವಾಡಿ ಕಾರ್ಯಕರ್ತರ ಜವಬ್ದಾರಿ ಬಗ್ಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಯಾವ ರೀತಿ ನೀಡಬೇಕು ಎಂಬುದನ್ನು ಪರಿಶೀಲಿಸುವ ಕಾರ್ಯಕ್ರಮ ಇದಾಗಿದೆ  ಎಂದರು.
 ಸ್ತ್ರೀಶಕ್ತಿ ಭವನ ನಿಮರ್ಿಸಲು ಸ್ಥಳೀಯ ಅಭಿವೃದ್ಧಿ ಅನುದಾನದಲ್ಲಿ 5 ಲಕ್ಷ ರೂ ಬಿಡುಗಡೆಯಾಗಿದ್ದು ಈ ಭವನದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವಂತ ಕಟ್ಟಡ ನಿಮರ್ಿಸಲು ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.
   ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಅಂಗನವಾಡಿ ಶಿಕ್ಷಕಿಯರಿಗೆ ಹಾಗೂ ಸಹಾಯಕರಿಗೆ ನೀಡುವ  ಸಂಬಳ ಕಡಿಮೆಯಾಗಿದ್ದು, ಅವರ ಸಂಬಳವನ್ನು  ಹೆಚ್ಚಿಸಬೇಕು ಎಂದರಲ್ಲದೆ,  ಚಿಕ್ಕಮಕ್ಕಳನ್ನು ಪೋಷಿಸಿ ಅವರಿಗೆ ಅಕ್ಷರ ಕಲಿಸುವುದು ತುಂಬ ಕಷ್ಟದ ಕೆಲಸ ಎಂದರು. 
  ಸಮಾಜದ ಅಭಿವೃದ್ದಿಯಲ್ಲಿ ಸ್ತೀಯರ ಪಾತ್ರ  ಬಹುಮುಖ್ಯ ಮಹಿಳೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಪಶ್ಚಿಮ ಬಂಗಾಳದಲ್ಲಿ 25ವರ್ಷ ರಾಜ್ಯವಾಳಿದ ಕಮ್ಯುನಿಷ್ಟ್ ಸಕರ್ಾರವನ್ನು ಕಿತ್ತೊಗೆಯಲು ಒಬ್ಬ ಮಹಿಳೆಯಿಂದ ಸಾಧ್ಯವಾಯಿತು, ಈ ನಿಟ್ಟಿನಲ್ಲಿ  ಮಮತಾ ಬ್ಯಾನಜರ್ಿ ಯಶಸ್ವಿಯಾಗಿ ಅಲ್ಲಿನ ಮುಖ್ಯಮಂತ್ರಿಯೂ ಆದರೂ ಎಂದರಲ್ಲದೆ,  ಈ ಯಶಸ್ವಿಗೆ ಅವರಲ್ಲಿದ್ದ ರೈತರ ಕಾಳಜಿ ಪ್ರಮುಖವಾಯಿತು ಎಂದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಅಂಗನವಾಡಿ ಕೇಂದ್ರಗಳು ಸಹಾಯಕವಾಗಿವೆ, ಊರಿಗೆ ಒಂದು ಅಂಗನವಾಡಿ ಕೇಂದ್ರ ಮತ್ತು  ದೇವಸ್ಥಾನ ಇರುವುದು ಇಂದಿನ ದಿನಮಾನದಲ್ಲಿ ಖಡ್ಡಾಯವಾಗಿದೆ ಎಂದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ  ರಾಮು, ಇ.ಓ ದಯಾನಂದ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಉಪಾಧ್ಯಕ್ಷೆ ಗಾಯಿತ್ರಮ್ಮ, ತಾ.ಪಂ.ಸದಸ್ಯರಾದ ಚೇತನಗಂಗಾಧರ್, ಪುರಸಭಾ ಸದಸ್ಯೆ ರುಕ್ಮಿಣಮ್ಮ, ಸಿಡಿಪಿಓ ಅನೀಸ್ಖೈಸರ್ ಮುಂತಾದವರಿದ್ದರು.

ಚಿ.ನಾ.ಹಳ್ಳಿಯಲ್ಲಿ  ಆಡಳಿತ ವೈಪಲ್ಯದ ವಿರುದ್ದ  ಕಾಂಗ್ರೆಸ್ ಪ್ರತಿಭಟನೆ
ಶೀರ್ಷಿಕೆ ಸೇರಿಸಿ
ಚಿಕ್ಕನಾಯಕನಹಳ್ಳಿ,ಜ.24 : ರಾಜ್ಯ ಬಿಜೆಪಿ ಸಕರ್ಾರದ ವೈಪಲ್ಯಗಳ ವಿರುದ್ದ ಮತ್ತು ನಿಷ್ಕ್ರಿಯ ಆಡಳಿತದ ವಿರುದ್ದ ಆಗ್ರಹಿಸಿ ಇದೇ 30ರ ಸೋಮವಾರದಂದು ಕಾಂಗ್ರೆಸ್ ಪಕ್ಷದ ವತಿಯಿಂದ ತಹಶೀಲ್ದಾರ್ರವರ ಕಛೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಚಿ.ನಾ.ಹಳ್ಳಿ ವಿಧಾನಸಭಾ ವ್ಯಾಪ್ತಿಯ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕರಾಗಿರುವ  ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರತಿಭಟನೆಯನ್ನು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಹಮ್ಮಿಕೊಂಡಿದ್ದು,  ಆರಂಭದಲ್ಲಿ ನೆಹರು ಸರ್ಕಲ್ನಿಂದ ತಹಶೀಲ್ದಾರ್ ಕಛೇರಿವರೆಗೂ ಮೆರವಣಿಗೆ ನಡೆಯಲಿದ್ದು,  ನಂತರ ತಹಶೀಲ್ದಾರ್ ಕಛೇರಿಯ ಬಳಿ ಧರಣಿ ಕಾರ್ಯಕ್ರಮ ನಡೆಯಲಿದೆ.  ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ  ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಷಫಿಅಹಮದ್, ಮಾಜಿ ಲೋಕಸಭಾ ಸದಸ್ಯ ಸಿ.ಪಿ.ಮೂಡಲಗಿರಿಯಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಶಾಸಕರಾದ ಆರ್.ನಾರಾಯಣ್, ಕೆ.ನಂಜೇಗೌಡ(ಮೂತರ್ಿ), ಕೆ.ಷಡಕ್ಷರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ,  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯಿತ್ರಿರಾಜು ಹಾಗೂ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ಯ ಪ್ರಧಾನ ಕಾರ್ಯದಶರ್ಿ  ಕೆ.ಜಿ.ಕೃಷ್ಣೆಗೌಡ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಿ.ಕೆ.ಮೊಹಮದ್ ಪೀರ್ಪಾಷ, ಪ.ಜಾ.ಘಟಕ ಅಧ್ಯಕ್ಷ ಶಿವಕುಮಾರ್, ತಿಮ್ಮನಹಳ್ಳಿ ಗ್ರಾ.ಪಂ.ಸದಸ್ಯ ರಾಘವೇಂದ್ರ ಉಪಸ್ಥಿತರಿದ್ದರು.

Monday, January 23, 2012


ಕಾವೇರಿ ಕಲ್ಪತರು ಬ್ಯಾಂಕ್ನ ನಿಂದ ಗ್ರಾಮೀಣ ಜನರಿಗೆ ವಿಮಾ ಸೌಲಭ್ಯ: ಪಿ.ಎನ್.ಸ್ವಾಮಿ
ಚಿಕ್ಕನಾಯಕನಹಳ್ಳಿ,ಜ.23 : ಗ್ರಾಮೀಣ ಪ್ರದೇಶದ ಜನರಿಗೆ ಜೀವವಿಮಾ ಪಾಲಿಸಿಯ ಅರಿವು ಆಗಲಿ, ಅದರಿಂದ ಸಿಗುವಂತಹ ಅನುಕೂಲಗಳು ಅವರಿಗೆ ದೊರೆಯಲಿ ಎಂಬ ಉದ್ದೇಶದಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಸರಳ ಸುಲಭ ಜೀವವಿಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತುಮಕೂರು ಬ್ಯಾಂಕ್ನ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ಪಿ.ಎಲ್.ಸ್ವಾಮಿ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಹಾಗೂ ಸರಳ ಸುಲಭ ಜೀವವಿಮೆ ಗುಂಪು ಸ್ವದನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವಿಮೆಯನ್ನು ಕಲ್ಪತರು ಗ್ರಾಮೀಣ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವ ಪ್ರತಿಯೊಬ್ಬರೂ ವಿಮೆ ಮಾಡಿಸಬಹುದಾಗಿದ್ದು, ಎಲ್ಲಾ ವಿಮಾ ಪಾಲಿಸಿಯಲ್ಲಿ ಇರುವಂತೆ ಈ ಪಾಲಿಸಿಯಲ್ಲಿಯೂ ಮನಿಬ್ಯಾಕ್ ಪಾಲಿಸಿ, ಎಂಡೋಮೆಂಟ್ ಪಾಲಿಸಿ, ಸ್ಕಾಲರ್ ಪಾಲಿಸಿ, ಸರಳ ಶೀಲ್ಡ್ ಪಾಲಿಸಿ, ಸರಳ್ ಪಾಲಿಸಿ ವಿಮಾ ಪಾಲಿಸಿಯಿದೆ ಎಂದ ಅವರು, ವಿಮಾ ಪಾಲಿಸಿ ಮಾಡಿಸುವುದರಿಂದ ಪಾಲಿಸಿ ಮಾಡಿಸಿದವರ ಕುಟಂಬದ ಜೀವನ ನಿರ್ವಹಣೆಯಾಗುವುದು ಇದಕ್ಕಾಗಿ ಪ್ರತಿಯೊಬ್ಬರಿಗೂ ವಿಮಾ ಪಾಲಿಸಿಯ ಅವಶ್ಯವಿದೆ ಎಂದ ಅವರು ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್ ಸಾಲ ನೀಡುವುದು ನಂಬಿಕೆಯ ಮೇಲೆ ಆ ನಂಬಿಕೆಯನ್ನು ಕಳೆದುಕೊಳ್ಳಬೇಡಿ, ಸಂಘಗಳಲ್ಲಿ ಇತ್ತೀಚಿಗೆ ಒಡಕು ಸೃಷ್ಠಿಯಾಗುತ್ತಿದೆ, ತಮ್ಮ ಸ್ವಂತಕ್ಕಾಗಿ ಸಂಘವನ್ನು ಒಡೆಯಬೇಡಿ ಸಂಘವನ್ನು ಸಂಘಟಿಸುವದಕ್ಕೆ ಧೈರ್ಯಮಾಡಿ ಎಂದು ಸಲಹೆ ನೀಡಿದರು.
ತುಮಕೂರು ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಎ.ಎನ್. ನೀಲಕಂಠರವರು ಮಾತನಾಡಿ,  ದೇಶದಲ್ಲಿ ವಿಮಾ ಪಾಲಿಸಿ ಹೊಂದಿರುವವರು ಶೇ.7ರಷ್ಟು ಮಾತ್ರ, ಗ್ರಾಮೀಣ ಪ್ರದೇಶದ ಜನರಿಗೆ ಈ ಪಾಲಿಸಿಯ ಬಗ್ಗೆ ಇನ್ನೂ ತಿಳಿದೇ ಇಲ್ಲ,  ಪಾಲಿಸಿಯಿಂದ ಸಿಗುವಂತಹ ಅನುಕೂಲಗಳು ಎಲ್ಲರಿಗೂ ಸಿಗಲಿ ಎಂಬ ಉದ್ದೇಶದಿಂದ ಸಾಧ್ಯವಾದಷ್ಟು ಸಾರ್ವಜನಿಕ ಸೇವೆ ಮಾಡವ ಬಯಕೆಯಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್,  ಸರಳ ಸುಲಭ ಜೀವವಿಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದ ಅವರು,  ಈ ವಿಮಾ ಪಾಲಿಸಿ 5 ರಿಂದ 10ವರ್ಷದ ಅವಧಿಯಾಗಿದ್ದು 50ಸಾವಿರ, 1ಲಕ್ಷ ಹಾಗೂ 3ಲಕ್ಷದ ವರೆವಿಗೂ ವಿಮಾ ಪಾಲಿಸಿ ಮಾಡಿಸಬಹುದು,  ಸಣ್ಣ, ಅತಿಸಣ್ಣ, ಕೂಲಿ ಕಾಮರ್ಿಕರು ಮತ್ತು ಆಥರ್ಿಕವಾಗಿ ಹಿಂದುಳಿದವರಿಗೆ ಸುಲಭವಾಗಿ ವಿಮಾ ಪಾಲಿಸಿ ದೊರಕಲಿ ಎಂಬ ಉದ್ದೇಶದಿಂದ ಬ್ಯಾಂಕ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಚಿ.ನಾ.ಹಳ್ಳಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ರಾಜಶೇಖರ್ ಉಪಸ್ಥಿತರಿದ್ದರು.
 C

Saturday, January 21, 2012


ಫೆಬ್ರವರಿ 10ರೊಳಗೆ ತಮ್ಮ ಗುರುತಿನ ಚೀಟಿ ನೀಡಿ, ಸಂಪೂರ್ಣ ಸುರಕ್ಷಾ ಯೋಜನೆಯ  ಸೌಲಭ್ಯ ಪಡೆಯಿರಿ
ಚಿಕ್ಕನಾಯಕನಹಳ್ಳಿ,ಜ.21 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ಸಂಪೂರ್ಣ ಸುರಕ್ಷಾ ಯೋಜನೆಯ  ಸೌಲಭ್ಯ ಪಡೆಯಲು ಯೋಜನಾ ಸದಸ್ಯರು ಫೆಬ್ರವರಿ 10ರೊಳಗೆ ತಮ್ಮ ಗುರುತಿನ ಚೀಟಿ ನೀಡಿ ಸೌಲಭ್ಯದ ನೊಂದಣಿ ಮಾಡಿಕೊಳ್ಳಬೇಕು, ಗುರುತಿನ ಚೀಟಿ ಇಲ್ಲದವರು ಯೋಜನೆ ವತಿಯಿಂದ ನೀಡುವ ಗುರುತಿನ ಚೀಟಿ ಪಡೆದು ನೊಂದಣಿ ಮಾಡಿಕೊಳ್ಳಬೇಕೆಂದು  ಶಿರಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ದಿನೇಶ್.ಡಿ ಹೇಳಿದರು.
ತಾಲ್ಲೂಕಿನ ಮತಿಘಟ್ಟ ಪ್ರೌಡಶಾಲಾ ಆವರಣದಲ್ಲಿ ನಡೆದ ಮತಿಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ  ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂಪೂರ್ಣ ಸುರಕ್ಷಾ ಯೋಜನೆಯು ಆರೋಗ್ಯದ ಅನುಕೂಲಕ್ಕಾಗಿ ಇರುವ ಯೋಜನೆ ಇದರಲ್ಲಿ ಯೋಜನೆಯ ಸದಸ್ಯರು, ಅವರ ಕುಟಂಬದವರು ನೊಂದಣಿ ಮಾಡಿಸಬಹುದಾಗಿದ್ದು 10ರಿಂದ 50 ಸಾವಿರದ ವರೆವಿಗೂ ಆಸ್ಪತ್ರೆಯ ಖಚರ್ಿನ ವೆಚ್ಚವನ್ನು ಈ ಯೋಜನೆಯಿಂದ ಭರಿಸಬಹುದಾಗಿದೆ, ಮುಂದಿನ ದಿನಗಳಲ್ಲಿ ಜೀವನ್ಮತ ಎಂಬ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭವಾಗಲಿದ್ದು ಜೀವ ವಿಮಾ ಪಾಲಿಸಿಯಂತೆ ಯೋಜನೆ ಜಾರಿಗೆ ತರಲಾಗುವುದು ಎಂದ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಈಗಾಗಲೇ 21 ಕಾರ್ಯಕ್ರಮಗಳ ಅನುಷ್ಠಾನವಾಗಿದ್ದು ಈ ಕಾರ್ಯಕ್ರಮಗಳ ಯಶಸ್ವಿಗೆ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಊರಿನ ಜನರು ಒಗ್ಗಟ್ಟಾಗಿ ಒಬ್ಬರ ಕೆಲಸವನ್ನು ಇನ್ನೊಬರು ಸಹಕಾರದಿಂದ ನೆರವೇರಿಸಿದರೆ ಊರಿನ ಅಭಿವೃದ್ದಿ ಹಾಗೂ ಸಂಘಶಕ್ತಿ ಬೆಳೆಯುತ್ತದೆ ಎಂದರು.
ನೂತನ ಒಕ್ಕೂಟಗಳ ಉದ್ಘಾಟನೆಯೊಂದಿಗೆ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಿದ್ದು ಇವರ ಅಧಿಕಾರಾವಧಿ 2ವರ್ಷಗಳಿದ್ದು ಇವರು ಗ್ರಾಮಗಳಲ್ಲಿ ಸಾಮಾಜಿಕ ಕೆಲಸಗಳು, ಶ್ರಮದಾನ ಕಾರ್ಯಗಳು, ತರಬೇತಿಗಳ ಆಯೋಜನೆಯನ್ನು ಏರ್ಪಡಿಸಿ ಗ್ರಾಮದ ಅಭಿವೃದ್ದಿ ಮಾಡಬೇಕಾಗಿದೆ ಎಂದರು.
ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ಮಾತನಾಡಿ 3 ಬಾರಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘಗಳ ನೂತನ ಒಕ್ಕೂಟಗಳ ಉದ್ಘಾಟನ ಕಾರ್ಯಕ್ರಮಗಳಿಗೆ ಭಾಗವಹಿಸಿ ಯೋಜನೆಯ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿದಿದ್ದೇನೆ, ಕಾರ್ಯಕ್ರಮಗಳ ತರಬೇತಿ, ಶ್ರಮದಾನ ಶಿಬಿರ ಹಾಗೂ ಇನ್ನಿತರ ಉಪಯೋಗ ಕಾರ್ಯಕ್ರಮಗಳಿಂದ  ಗ್ರಾಮಗಳ ಅಭಿವೃದ್ದಿ ಹಾಗೂ ಜನರ ಸಂಘಟನೆಯಾಗುತ್ತಿರುವುದು ಸಂತೋಷಕರ ವಿಷಯ ಎಂದರು. 
ತಾ.ಪಂ.ಸದಸ್ಯ ನಿರಂಜನಮೂತರ್ಿ ಮಾತನಾಡಿ ಆಥರ್ಿಕವಾಗಿ ಹಿಂದುಳಿದವರಿಗೆ ಸಂಸ್ಥೆ ಸಾಲ ನೀಡುವ ಮೂಲಕ ಜನಸಹಕಾರಿ ಕಾರ್ಯ ಮಾಡುತ್ತಿದೆ ಇದರಿಂದ ಗ್ರಾಮೀಣರ ಬದುಕು ಉತ್ತಮವಾಗುತ್ತದೆ, ಇಂತಹ ಸಂಸ್ಥೆಗಳ ಜೊತೆಗೆ ಸಕರ್ಾರ ಕೈಜೋಡಿಸಲು ಮುಂದೆ ಬಂದರೆ  ಜನರ ಭಾತೃತ್ವ ಭಾವನೆ ಉತ್ತಮವಾಗಿ ಗ್ರಾಮಗಳ ಅಭಿವೃದ್ದಿಯಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮತಿಘಟ್ಟ ಒಕ್ಕೂಟದ ಅಧ್ಯಕ್ಷ ಬಿ.ಆರ್.ರಾಜು ಮಾತನಾಡಿ ಈ ಯೋಜನೆಯಿಂದ ಸಂಘಟನೆಯ ಬೆಳವಣಿಗೆಯಾಗುತ್ತದೆ, ಒಬ್ಬರು ಇನ್ನೊಬ್ಬರ ಸಹಾಯಕ್ಕೆ, ಇನ್ನೊಬ್ಬರಿಗೆ ಮತ್ತೊಬ್ಬರು ಸಹಾಯ ಮಾಡುವ ಉತ್ತಮ ಯೋಜನೆಯು ಒಕ್ಕೂಟದಲ್ಲಿದೆ ಹಾಗೂ ಯೋಜನೆಯಿಂದ ಸದಸ್ಯರಿಗೆ ಹಲವಾರು ಸೌಲಭ್ಯಗಳು ದೊರಕುತ್ತಿವೆ ಈ ಯೋಜನೆಯು ಇನ್ನಷ್ಟು ಉತ್ತಮವಾಗಲು ಪದಾಧಿಕಾರಿಗಳೊಂದಿಗೆ ಗ್ರಾಮದ ಜನತೆ ಸಹಕಾರ ನೀಡಬೇಕು ಎಂದರು.
ಸಮಾರಂಭದಲ್ಲಿ ಮತಿಘಟ್ಟ ಹಾಗೂ ಮಾದಾಪುರ ಒಕ್ಕೂಟದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ,  ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್, ಮುಖ್ಯಶಿಕ್ಷಕ ಷಣ್ಮುಕಸ್ವಾಮಿ ಶಿಕ್ಷಕ ಶ್ಯಾಮಸುಂದರ್ ಹಾಜರಿದ್ದರು.

Saturday, January 14, 2012


ನೆನಪಿನಂಗಳದಿಂದ ಹೊರಬಂದ
ಗುರುವೇ ನಮಃ
                  ಪಾಂಡುರಂಗ ಜೆ.
                                ಕಾಲಯೇ ತಸ್ಮೈ ನಮಃ ಎಂಬಂತೆ ಕಾಲ ಉರುಳಿದಂತೆ ಜೀವನ ಸಾಗುವುದು, ಜೀವನ ಸಾಗುತ್ತಾ ಕಷ್ಟ-ಸುಖಗಳ ಏರುಪೇರು, ಸಂಭ್ರಮದ ಕಾರುಬಾರು ಕಂಡರೂ ಮನವರಿಕೆಯಾಗುವುದು ಮಾತ್ರ ಜೀವನದ ಕೊನೆ ಘಟ್ಟದಲ್ಲಿ ಎಂಬುದು ಜೀವಿಗಳ ವಿಲಕ್ಷಣ ಆದರೂ, ಕಾಲಕ್ಕೆ ಎಲ್ಲರೂ ತಲೆಬಾಗಬೇಕೆನ್ನುವುದು ಉತ್ತಮ ಗುಣ.
ಕನಸು ಕಾಣುವುದು ಮನುಷ್ಯನ ಸಹಜ ಗುಣ, ಆ ಕನಸನ್ನು ನನಸು ಮಾಡಲು ಇತರರ ಬಾಳಿಗೆ ಮುಳ್ಳಾಗುವುದು ಮೂರ್ಖತನವಾಗಿದೆ. ಕನಸನ್ನು ನನಸು ಮಾಡಬೇಕೆಂಬ ಜಂಜಾಟದಲ್ಲಿ ನಾವು ಏನು ಮಾಡುತ್ತಿದ್ದೇವೆ, ಏನು ಮಾಡಬೇಕೆಂಬದು ನಮ್ಮ ಅರಿವಿಗೆ ಬರದೇ ಇತರರ ಆಸೆಗಳನ್ನು ನುಚ್ಚು ನೂರು ಮಾಡುವುದು ನಮ್ಮ ತಿಳುವಳಿಕೆಗೆ ಬರದು.
ಪ್ರತಿಯೊಂದು ಸಮಯದಲ್ಲೂ ಇತರರಿಗಿಂತ ನಾನು ಮೊದಲಾಗಬೇಕು, ನನ್ನ ಕೈ ಮೊದಲಾಗಬೇಕು, ನಾನು ಅಂದುಕೊಂಡದ್ದು ನಡೆಯಲೇಬೇಕು ಎನ್ನುವ ಸ್ವಾರ್ಥ ಹೆಚ್ಚಾಗಬಾರದು, ಅದು ಹೆಚ್ಚಾದಂತೆ ಇತರರನ್ನು ತುಳಿಯಬೇಕೆಂಬ ದುರಾಸೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ  ಸಮಸ್ಯೆಗಳು ಉಂಟಾಗುತ್ತದೆ. ಸಮಸ್ಯೆಗಳನ್ನು ಸಮಥರ್ಿಸಿಕೊಳ್ಳಲು ಪ್ರತಿಷ್ಠೆ ತೋರ್ಪಡಿಸುತ್ತಾ ತಮ್ಮ ಗೌರವವನ್ನು ಕೆಡಿಸಿಕೊಂಡು ಭವಿಷ್ಯ ಹಾಳುಮಾಡಿಳ್ಳುವ ಸಂದರ್ಭ ಎದುರಾಗುತ್ತದೆ.
ನಿಮ್ಮ ಭವಿಷ್ಯಕ್ಕೆ ನೀವೇ ಹೊಣೆ, ಎಂಬ  ಸ್ವಾಮಿ ವಿವೇಕಾನಂದರ ಸಂದೇಶ ವಾಣಿ ಸತ್ಯವಾಗಿದೆ, ನಾವು ಏನಾಗಿರುವೆವೋ ಅದಕ್ಕೆ ನಾವೆ ಹೊಣೆ, ನಾವು ಏನಾಗಬೇಕೆಂದು ನಮ್ಮ ಇಚ್ಛೆಯಿರುವುದೋ ಹಾಗಾಗಲು ಶಕ್ತಿಯು ನಮ್ಮಲ್ಲಿಯೇ ಇರುವುದು ಅದಕ್ಕಾಗಿ ಇತರರಿಗೆ ವಂಚಿಸಬಾರದಾಗಿದೆ, ಈಗ ನಾವೇನಾಗಿರುವೆವೋ ಅದು ನಮ್ಮ ಪೂರ್ವಕರ್ಮಗಳ ಫಲವಾಗಿದ್ದಲ್ಲಿ ಮುಂದೆ ನಾವು ಹೇಗಾಗಬೇಕೆಂದು ನಮ್ಮ ಇಚ್ಛೆಯಿರುವುದೋ ಅದು ನಮ್ಮ ವರ್ತಮಾನ ಕರ್ಮದಿಂದಾಗಲು ಸಾಧ್ಯವಾಗುತ್ತದೆ ಆದ್ದರಿಂದ ಕಾರ್ಯ ಮಾಡುವಾಗ ರೀತಿ ನೀತಿಗಳ ಜೊತೆಯಾಗಿ ನಿರ್ವಹಿಸಬೇಕಾಗಿದೆ.
ಹೊಡೆದು ಆಳುವ ನೀತಿಯನ್ನು ಅನುಸರಿಸಿದ ಹಿಟ್ಲರ್ನಂತೆ ಸಮಾಜದಲ್ಲಿ ಜಾತಿಗಳು, ಧಾಮರ್ಿಕ ಭಾವನೆಗಳು, ಸಂಸ್ಕೃತಿ-ಸಾಹಿತ್ಯಗಳನ್ನು ಬಳಸಿಕೊಂಡು ಅವುಗಳಿಂದ ದಾರಿತಪ್ಪಿಸುವ ಮೂಲಕ ಸಮಾಜ ಅಧೋಗತಿಗೆ ಮುಂದಾಗುತ್ತಿದೆ, ಎನ್ನುವುದಕ್ಕಿಂತಲೂ ಅಧೋಗತಿಗೆ ಸಮಾಜವನ್ನು ತಳ್ಳಲ್ಪಡುತ್ತಿದ್ದಾರೆ.
ಪ್ರತಿಯೊಂದು ಸ್ವಾರ್ಥ ಕ್ರಿಯೆಯೂ ನಾವು ಗುರಿಯನ್ನು ಮುಟ್ಟಲು ಅಡ್ಡಿಯುಂಟು ಮಾಡುತ್ತದೆ ಮತ್ತು ಪ್ರತಿಯೊಂದು ನಿಸ್ವಾರ್ಥ ಕ್ರಿಯೆಯೂ ನಮ್ಮನ್ನು ಗುರಿಯಡೆಗೆ ಒಯ್ಯುತ್ತದೆ ಆದ್ದರಿಂದ ನೈತಿಕತೆಯನ್ನು ಬೆಳಸಿಕೊಳ್ಳಬೇಕಾಗುತ್ತದೆ.
ಒಳ್ಳೆಯ ಸಂಸ್ಕಾರಗಳಿದ್ದರೆ ಕೆಟ್ಟ ಆಲೋಚನೆಗಳನೆಲ್ಲಾ ಸಂಸ್ಕಾರ ದೂರ ಮಾಡುವುದು, ಅರಿವೇ ಇಲ್ಲದೆ ಮಾಡುವ ಕೆಲಸ ಮತ್ತು ಆಲೋಚನೆಗಳ ಮೇಲೆ ತಮ್ಮ ಪ್ರಭಾವವನ್ನು ಸಂಸ್ಕಾರ ಬೀರುವುದು. ಹೀನ ಸಂಸ್ಕಾರಗಳು ಇರುವವರೆಗೆ ಕೆಟ್ಟ ಕರ್ಮಗಳನ್ನು ಮಾಡುವುದು,  ಇಂತಹ ಅನೇಕ ಸಂಸ್ಕಾರಗಳು ಮನಸ್ಸಿನಲ್ಲಿದ್ದರೆ ಅವು ಕಲೆತು ಅಭ್ಯಾಸವಾಗಿ ಸಮಾಜ ಅಂಧಪತನಕ್ಕೆ ದೂಡಲ್ಪಡುತ್ತದೆ.  ಈ ರೀತಿಯ ಹಲವು ಸಮಾಜ ಕಂಟಕ ಹಾಗೂ ಇತರರಿಗೆ ಸಮಸ್ಯೆ ನೀಡುವವರಿಗೆ  ಇದು ನೀಡುವ ಸಂದರ್ಭದಲ್ಲಿ ಉತ್ತಮವೆನಿಸಿದರೂ ಅವರ ಜೀವನದ ಕಡೆ ಗಳಿಗೆಯಲ್ಲಿ ನೋವು ಅನುಭವಿಸುವುದು ತಪ್ಪುವುದಿಲ್ಲ, ಠ  ಇಂತಹ ಕೆಟ್ಟ ಅಭ್ಯಾಸವನ್ನು ಅಡಗಿಸಬೇಕಾದರೆ ನನ್ನಿಂದಲೇ ಎಲ್ಲಾ ಎನ್ನುವ (ವಾದ) ಅಹಂಕಾರ,  ಬಿಟ್ಟು ಅದಕ್ಕೆ ವಿರೋಧವಾದ ಒಳ್ಳೆಯ ಅಭ್ಯಾಸದೊಂದಿಗೆ ಪ್ರೀತಿ, ವಿಶ್ವಾಸ, ಸ್ನೇಹದೊಂದಿಗೆ ಸಹಕರಿಸುವ ರೂಢಿಯೊಂದೇ ದಾರಿಯಾಗಿದ್ದು  ಎಲ್ಲಾ ಕೆಟ್ಟ ಅಭ್ಯಾಸವನ್ನು ಒಳ್ಳೆಯ ಅಭ್ಯಾಸದಿಂದ ನಿಗ್ರಹಿಸುತ್ತಾ ಉತ್ತಮರೆನಿಸಬಹುದು ಆದರೆ  ಈ ಸಮಯದಲ್ಲಿ ತಮ್ಮ ಕಾರ್ಯಗಳಿಗೆ ಎದುರಾಗುವ  ಹಲವಾರು ನಿಂದನೆಗಳು, ಟೀಕೆಗಳಿಗೆ ಕಿವಿಗೊಡದೆ ಮುಂದಾಗಿ ತಮ್ಮ ಕಾರ್ಯ ಯಶಸ್ವಿಗೊಳಿಸಬೇಕು, ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬಂತೆ ಮುಂದಾಗುತ್ತಾ    ಉತ್ತಮ  ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು. 

                                          





ತಾಲೂಕಿಗೆ ಶೀಘ್ರ ಡಿಪ್ಲೋಮ ಕಾಲೇಜ್ ಮಂಜೂರು ಮಾಡಲು ಆಗ್ರಹಿಸಿ ರಸ್ತೆಗಿಳಿದ  ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಜ.13 : ತಾಲ್ಲೂಕಿನ ವಿದ್ಯಾಥರ್ಿಗಳಿಗೆ ತಾಂತ್ರಿಕ ಕೋಸರ್್ಗಳ ಅವಶ್ಯಕತೆ ಹೆಚ್ಚಿದ್ದು ಇದಕ್ಕಾಗಿ ತಾಲ್ಲೂಕಿನ ಎಲ್ಲಾ ಮುಖಂಡರು ಪಕ್ಷಭೇದ ಮರೆತು ಹೋರಾಟ ಮಾಡಬೇಕಾಗಿದೆ  ಎಂದು ತಾ. ಭಾಜಪ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಹೇಳಿದರು.
ತಾಲ್ಲೂಕಿಗೆ ತಾಂತ್ರಿಕ ಶಿಕ್ಷಣ  ಮತ್ತು ಡಿಪ್ಲೊಮ ಕಾಲೇಜು ಅನಿವಾರ್ಯವಾಗಿದ್ದು ಸಕರ್ಾರ ತಾಲ್ಲೂಕಿಗೆ ತಾಂತ್ರಿಕ ಕಾಲೇಜನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ 2ನೇ ಹಂತದ ಪ್ರತಿಭಟನೆ ನಡೆಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ವಿದ್ಯಾಥರ್ಿಗಳು ರಸ್ತೆ ತಡೆ ನಡೆಸಿದರಲ್ಲದೆ, ಪ್ರತಿಭಟನಾ ಸ್ಥಳಕ್ಕೆ  ತಹಶೀಲ್ದಾರ್ ಉಮೇಶ್ಚಂದ್ರರವರನ್ನು ಕರೆಸಿಕೊಂಡು ಪ್ರತಿಭಟನಾ ಸ್ಥಳದಲ್ಲಿ ತಹಶೀಲ್ದಾರ್ರವರಿಗೆ ಮನವಿ ಅಪರ್ಿಸಿದರು.
ಈ ಸಂದರ್ಭದಲ್ಲಿ ಅಭಾವಿಪ ತಾಲ್ಲೂಕು ಪ್ರಮುಖ್  ಚೇತನ್ಪ್ರಸಾದ್, ಸಹಕಾರ್ಯದಶರ್ಿ ದಿಲೀಪ್ ಮಾತನಾಡಿದರು.
    ಬಿಜೆಪಿ ಮುಖಂಡ ಶ್ರೀನಿವಾಸಮೂತರ್ಿ, ಅಭಾವಿಪ ಕಾರ್ಯಕರ್ತರುಗಳಾದ ರವಿ, ನಂದೀಶ್, ನಂದನ್, ಗುರುಪ್ರಸಾದ್, ಹಾಗೂ ವಿದ್ಯಾಥರ್ಿಗಳು ಮುಂತಾದವರಿದ್ದರು.


ಗ್ರಾಮೀಣ ಪರಿಸರದಲ್ಲಿರುವ  ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ದಿ ಪಡಿಸಿ
ಚಿಕ್ಕನಾಯಕನಹಳ್ಳಿ,ಜ.12: ಆಥರ್ಿಕ ಅಭಿವೃದ್ದಿ, ಉದ್ಯೋಗ ಅವಕಾಶಕ್ಕಾಗಿ ಹಾಗೂ ಹೊರಭಾಗದ ಜನರನ್ನು ನಮ್ಮ ಸ್ಥಳಗಳತ್ತ ಆಕಷರ್ಿಸುವ ಉದ್ದೇಶದಿಂದ  ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಪ್ರವಾಸೋದ್ಯಮ ನೆಲೆಯಾಗಿ ಕನರ್ಾಟಕ- ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಐತಿಹಾಸಿಕ ಸ್ಥಳ, ವೈವಿದ್ಯಮಯ ಪರಂಪರೆಗಳನ್ನು ಪರಿಚಯಿಸುವ ಮೂಲಕ ಇತಿಹಾಸ ಪರಂಪರಾ ತಾಣಗಳನ್ನು ಅಭಿವೃದ್ದಿ ಪಡಿಸಬೇಕು, ಈ ಶತಮಾನದ ಅಂಚಿಗೆ ಭಾರತ ಪ್ರವಾಸೋಧ್ಯಮದಲ್ಲಿ 2ನೇ ಸ್ಥಾನಕ್ಕೇರಲಿದೆ ಎಂದ ಅವರು,  ದೇಶದಲ್ಲಿ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಹಾಗೂ ತಾಣಗಳನ್ನು ಬೆಳಸುವಲ್ಲಿ ವೈಪಲ್ಯವೂ ಹೆಚ್ಚಾಗಿದೆ ಎಂದುರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಪ್ರೇಕ್ಷಣಿಯ ಸ್ಥಳಗಳನ್ನು ಪ್ರವಾಸೋದ್ಯಮವನ್ನಾಗಿ ಅಭಿವೃದ್ದಿ ಮಾಡಿದಾಗ ಮೈಕ್ರೋ ಟೂರಿಸಂ ಅಭಿವೃದ್ದಿ ಹೊಂದುತ್ತದೆ, ಆಗ ಟೂರಿಂಸ್ನ ನಕ್ಷೆಯಲ್ಲಿರುವ  ಪ್ರದೇಶಗಳು ಅಭಿವೃದ್ದಿ ಹೊಂದಿ ಪ್ರೇಕ್ಷಣಿಯ ಸ್ಥಳಗಳ ಮಹಿಮೆ ತಿಳಿಯುತ್ತದೆ ಎಂದರಲ್ಲದೆ,  ಒಂದು ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿದರೂ ರಾಜ್ಯದ ಪ್ರೇಕ್ಷಣಿಯ ಸ್ಥಳಗಳನ್ನು ಪೂತರ್ಿ ನೋಡಲು ಆಗುವುದಿಲ್ಲ ಆದರೂ ಬೇರೆ ರಾಜ್ಯಗಳಿಗೆ ಪ್ರವಾಸ ಹೋಗುತ್ತಾರೆ, ಇದಕ್ಕೆ ಕಾರಣ ಪ್ರೇಕ್ಷಣಿಯ ಸ್ಥಳಗಳಲ್ಲಿನ ನಿರಾಸಕ್ತಿಯಾಗಿದೆ, ಪ್ರೇಕ್ಷಣೀಯ ಸ್ಥಳಗಳ ಮಹಿಮೆಯನ್ನು ಲಿಖಿತ ಬರಹದ ಮೂಲಕ ನೋಡುಗರಿಗೆ ತಿಳಿಸಿದರೆ ರಾಜ್ಯಕ್ಕೂ ವಿದೇಶಿಗರೂ ಹೆಚ್ಚಿನದಾಗಿ ಬರುತ್ತಾರೆ ಎಂದರು.
 ಪ್ರವಾಸದ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಹೆಚ್ಚುಪ್ರಚಾರ ನೀಡಬೇಕು ಆ ಸ್ಥಳದ ಐತಿಹ್ಯ ಲಿಖಿತ ಬರವಣಿಗೆ ಮೂಲಕ ಇರಬೇಕು ಆಗ ಜನಸಾಮಾನ್ಯರು ಇತಿಹಾಸದ ಬಗ್ಗೆ ಸವಿವರವಾಗಿ ತಿಳಿದು ಪ್ರವಾಸದ ಬಗ್ಗೆ ಇತರರಿಗೂ ತಿಳಿಸುತ್ತಾರೆ ಎಂದರು.
ಬೆಂಗಳೂರು ವಿ.ವಿ.ಯ ಇತಿಹಾಸ ವಿಭಾಗದ ಪ್ರೊ.ಡಾ.ಎಸ್ ಷಡಾಕ್ಷರಿ ಮಾತನಾಡಿ  ಸಾಂಸ್ಕೃತಿಕ, ಸಂಪ್ರದಾಯ ಹಬ್ಬಗಳ ಆಚರಣೆಯನ್ನು ಉಳಿಸಿಕೊಂಡು ಆ ಮೂಲಕ ಇತಿಹಾಸ ವೈಭವವನ್ನು ತಿಳಿಸುವಲ್ಲಿ ಕನರ್ಾಟಕ ರಾಜ್ಯ ಮುಂಚೂಣಿಯಲ್ಲಿದೆ,   ಕನರ್ಾಟಕ ಶಕ್ತಿ ಸಂಪನ್ಮೂಲಗಳ ಬಳಕೆ ಹೊಂದಿದೆ ಆದರೆ ಅದು ಶಕ್ತವಾಗಿ ಬಳಕೆಯಾಗದೆ ನಶಿಸುತ್ತಿದೆ, ರಾಜ್ಯದ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ ದಾಖಲೆ ಹೊಂದಿದ ಸ್ಥಳಗಳಲ್ಲಿ ರಕ್ಷಣೆಯಿಲ್ಲದೆ ಹಾಳಾಗುತ್ತಿದೆ, ಇಲ್ಲಿನ ಸುಂದರ ಶಿಲೆಗಳು, ಗೋಡೆಗಳಲ್ಲಿರುವ ದಾಖಲೆಗಳನ್ನು ವಿರೂಪಗೊಳಿಸುವ ಮೂಲಕ ಇತಿಹಾಸ ದಾಖಲೆಗಳನ್ನು ಹಾಳುಗೆಡುವುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಇದರ ಬಗ್ಗೆ ಸಕರ್ಾರ ಗಮನಹರಿಸಿ ಸೂಕ್ತ ನಿಧರ್ಾರ ತಾಳಬೇಕು ಎಂದರು.
ಸಮಾರಂಭದಲ್ಲಿ ನವೋದಯ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ರಾಮಚಂದ್ರಪ್ಪ, ವೆಂಕಟರಾಮನ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಎರಡು ಅಧಿವೇಶನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಇರುವ ಸಾಧ್ಯತೆಗಳು ಹಾಗೂ ಸಾವಲುಗಳ ಬಗ್ಗೆ ಉಪನ್ಯಾಸ ನಡೆಯಿತು.


ತಮ್ಮಡಿಹಳ್ಳಿ ವಿರಕ್ತ ಮಠದಲ್ಲಿ ಶ್ರೀಸಿದ್ದರಾಮ ಜಯಂತಿಯ ಧ್ವಜಾರೋಹಣ ನಡೆಯಿತು: ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ
ಚಿಕ್ಕನಾಯಕನಹಳ್ಳಿ,ಜ.14  : ಪೂಜೆಗೆ ಪವಿತ್ರವಾದ ಮನಸ್ಸು, ಶುದ್ದ ಹೃದಯ ಅಗತ್ಯ, ಭಗವಂತನ ಇಚ್ಛೆಯಂತೆ ಎಲ್ಲರೂ ನಡೆಯಬೇಕಾಗುತ್ತದೆ, ಯಾವ ಕಾರ್ಯ ಎಲ್ಲಿ, ಯಾವಾಗ, ಯಾರಿಂದ ನಡೆಯಬೇಕೆಂಬುದು ಜಗದ ನಿಮರ್ಾಪಕನ ತೀಮರ್ಾ ಅದರಂತೆ ಇಂದು ತಮ್ಮಡಿಹಳ್ಳಿ ಕ್ಷೇತ್ರದಲ್ಲಿ ಸಿದ್ದರಾಮಜಯಂತಿ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠಾಧ್ಯಕ್ಷರಾದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ನುಡಿದರು.
ಅವರು ಭಕ್ತರ ಕೋರಿಕೆಯಂತೆ ತಮ್ಮಡಿಹಳ್ಳಿ ವಿರಕ್ತಮಠದಲ್ಲಿ ಶ್ರೀ ಗುರುಸಿದ್ದರಾಮೇಶ್ವರ ಜಯಂತಿಯ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.
ಭಕ್ತರು ಮತ್ತು ಸಮಾಜ ಒಂದೆಡೆ ಸೇರಿ ಭಗವಂತನ, ಸ್ಮರಣೆ ಮಾಡಬೇಕೆಂಬುದು ನಮ್ಮ ಲಿಂಗೈಕ್ಯ ಶ್ರೀಗಳ ಇಚ್ಛೆಯಾಗಿತ್ತು, ಅದರಂತೆ ಈಗ್ಗೆ 38 ವರ್ಷಗಳ ಹಿಂದೆ ಅರಸೀಕೆರೆಯಲ್ಲಿ ಕೆಲವೇ ಭಕ್ತರನ್ನು ಕೂಡಿಕೊಂಡು, ಪ್ರಥಮವಾಗಿ ಸಿದ್ದರಾಮ ಜಯಂತಿಯನ್ನು ಹಿರಿಯ ಶ್ರೀಗಳು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಆಚರಣೆಗೆ ತರಲಾಯಿತು. ಅದರಂತೆ ಅಂದಿನಿಂದ ಇಂದಿನವರೆಗೂ ಶ್ರೀ ಗುರುಸಿದ್ದರಾಮೇಶ್ವರರ ಜಯಂತಿ ರಾಜ್ಯದಲ್ಲಿ ಎಲ್ಲೇ ನಡೆದರೂ ಅಷ್ಟೇ ಏಕೆ ನೆರೆಯ ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶಗಳಲ್ಲಿ ಜಯಂತೆ ನಡೆದಾಗಲೂ ಸಹ ಶ್ರೀ ಮಠದ ಗುರುಗಳಿಂದಲೇ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುವುದು ನಡೆದುಕೊಂಡು ಬಂದ ಪರಂಪರೆಯಾಗಿದೆ.
ಈ ವರ್ಷ ತಿಪಟೂರು ತಾಲೂಕು ಕೆರೆಗೋಡಿ ರಂಗಾಪುರದಲ್ಲಿ ನಡೆಯುತ್ತಿರುವ 39ನೇ ಜಯಂತಿಯಲ್ಲಿ ಈ ಪರಂಪರೆಯನ್ನು ಬದಿಗೊತ್ತಿ ಭಕ್ತರ ಮನಸ್ಸನ್ನು ಘಾಸಿಗೊಳಿಸಲಾಗಿದೆ. ಸಿದ್ದರಾಮರ ಚಿಂತನೆಯನ್ನು ನಮ್ಮ ಶ್ರೀಗಳು ಅವಿಚ್ಛನವಾಗಿ ನಡೆಸಿಕೊಂಡು ಬಂದ ಪರಂಪರೆ ನಿಂತುಹೋಗಬಾರದೆಂಬ ಭಕ್ತರ ಒತ್ತಾಯಕ್ಕೆ ನಾವೆಲ್ಲ ಇಂದು ಇಲ್ಲಿ ಸೇರಿದ್ದೇವೆ, ಮಲ್ಲಯ್ಯನಿರುವಲ್ಲಿ ಸಿದ್ದರಾಮನೆಂಬುವಂತೆ ಮಲ್ಲಿಕಾಜರ್ುನ ಕ್ಷೇತ್ರದಲ್ಲಿ ಪ್ರಥಮವಾಗಿ ಮತ್ತು ವಿದ್ಯುಕ್ತವಾಗಿ ಜಯಂತಿಯನ್ನು ಆಚರಿಸುವುದರೊಂದಿಗೆ ಅಂಕುರಾರ್ಪಣೆ ಮಾಡಿದ್ದೇವೆ, ನಮಗೆ ಜನಜಂಗುಳಿ ಅದ್ದೂರಿ ಮುಖ್ಯವಲ್ಲ ನಾವು ಮಾಡುವ ಕಾರ್ಯ ಮುಖ್ಯ, ಸಿದ್ದರಾಮ ಎಂದು ಕಾಯಕವನ್ನೇ ನಂಬಿ ಬದುಕಿದವನು ನಮ್ಮ ದೇಶದ ಸಂವಿಧಾನ ನಿಮರ್ಾಣಕ್ಕೆ ಅನುಭವ ಮಂಟಪವೇ ಸ್ಪೂತರ್ಿ,  ಆದ್ದರಿಂದ ಧರ್ಮದ ನೆಲೆಗಟ್ಟಿನ ಮೇಲೆ ಸಂವಿಧಾನ ನಿಂತಿದೆ, ಮಠಕ್ಕೆ ಭೌತಿಕ ಆಸ್ತಿ ಇಲ್ಲದಿದ್ದರೂ ವಿಚಾರ ಪರಂಪರೆ ನಿಧಿ ಇದೆ, ಮುಂದಿನ ದಿನಗಳಲ್ಲಿ ಜನವರಿ 13 ಹಿರಿಯ ಶ್ರೀಗಳ ಲಿಂಗೈಕ್ಯ ದಿನವನ್ನು ಒಳಗೊಂಡಂತೆ 13 14 15 ಮೂರು ದಿನಗಳ ಕಾಲ ಸಿದ್ದರಾಮ ಜಯಂತಿಯನ್ನು ಅನುಚಾನವಾಗಿ ನಡೆಸಿಕೊಂಡು ಹೋಗುವಂತೆ ಭಕ್ತರ ಮನೋಭಿಲಾಷೆಯನ್ನು ಈಡೇರಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರಿಗೆ ತಿಳಿಸಿದರು.
ನನಗೆ ನೋವಾದರೆ ನಾನು ಸಹಿಸುತ್ತೇನೆ, ಆದರೆ ಭಕ್ತರ ಮನಸ್ಸಿಗೆ ನೋವಾದರ ಸಹಿಸುವುದಿಲ್ಲ, ಮಠದ ಪರಂಪರೆಗೆ ಗಾಸಿಯಾದ ಈ ಸೂತಕದ ಛಾಯೆ ಭಕ್ತರ ಮನಸ್ಸಿಗೆ ನೋವಾಗಿದೆ, ವ್ಯಕ್ತಗಿಂತ ಸಮಾಜ, ಸಮಾಜಕ್ಕಿಂತ ದೇಶ ಮುಖ್ಯ, ಯಾವುದೇ ಮಠ ಮತ್ತು ಸ್ವಾಮಿಗಳು ಪ್ರಸಿದ್ದಿ ಹೊಂದಬೇಕಾದರೆ ಭಕ್ತ ಸಮೂಹದ ಆಶಯ ಮುಖ್ಯ ಎಂದರು.
  ಹಿರಿಯ ಶ್ರೀಗಳು ನನಗೆ ಹಣ, ಆಸ್ತಿ ನೀಡಿಲ್ಲ, ಮಲ್ಲಿಕಾಜರ್ುನ ಬೆಟ್ಟದಷ್ಟು ಭಕ್ತ ಸಮೂಹ ನೀಡಿದ್ದಾರೆ. ಈ ಜಯಂತಿ ಆಚರಣೆಗೆ ಯಾರ ವಿರುದ್ದವೂ ಅಲ್ಲ, ಭಕ್ತರ ಅಬಿಷ್ಠೆಯನ್ನು ನೆರವೇರಿಸುವುದಷ್ಟೇ ನಮ್ಮ ಕರ್ತವ್ಯ  ಎಂದರು.
ಸಿದ್ದಲಿಂಗಶಾಸ್ತ್ರೀಯವರ ವೇದಘೋಷದೊಂದಿಗೆ ಪ್ರಾರಂಭವಾದ ಧಾಮರ್ಿಕ ಕಾರ್ಯಕ್ರಮದಲ್ಲಿ , ಮೈಸೂರಪ್ಪ, ದಿನೇಶ್, ಶ್ಯಾಮಸುಂದರ್, ಸಿದ್ದರಾಮಣ್ಣ, ಮತ್ತಿಹಳ್ಳಿ ಸಿದ್ದರಾಮಣ್ಣ, ನಿಟ್ಟೂರು ಪ್ರಕಾಶ್, ಕಾಂತರಾಜು, ಮಡೇನೂರು ಚಂದ್ರಣ್ಣ, ಗುಬ್ಬಿ ಉಮೇಶ್ ಮತ್ತಿತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹೀರಲಿಂಗನಗೆರೆ ಮಹಾಲಿಂಗಯ್ಯ ಪ್ರಾಥರ್ಿಸಿದರೆ ಶ್ಯಾಮಸುಂದರ್ ರಾಜಶೇಖರ್ ನಿರೂಪಿಸಿದರು.

ಉಪನ್ಯಾಸಕರ 8ದಿನಗಳ ವೇತನ ಕಡಿತ ಆದೇಶ ರದ್ದು ಪಡಿಸಿ: ವೈ.ಎ.ಎನ್.
ಚಿಕ್ಕನಾಯಕನಹಳ್ಳಿ,ಜ.14 : ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ವೇತನ ತಾರತಮ್ಮ ನಿವಾರಿಸಲು ಉಪನ್ಯಾಸಕರು ಹೋರಾಟ ಕೈಗೊಂಡು ಸಂದರ್ಭದಲ್ಲಿ ಮುಷ್ಕರ ನಡೆಸಿದ 8 ದಿನಗಳ ವೇತನ ಕಡಿತ ಮಾಡಿರುವುದು ಸಮಂಜಸವಲ್ಲ,  ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನ ತಕ್ಷಣ ಹಿಂಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.
 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಪ್ರತಿಭಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಹಕ್ಕಾಗಿದೆ, ಪ್ರತಿಭಟನೆ ಹತ್ತಿಕ್ಕುವವರಿಗೆ ಮುಖ್ಯಮಂತ್ರಿಗಳು ತಾಕೀತು ಮಾಡಬೇಕು, ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಉಪನ್ಯಾಸಕರ 8 ದಿನಗಳ ವೇತನ ತಕ್ಷಣ ಬಿಡುಗಡೆ ಮಾಡಬೇಕು, ಈ ಬಗ್ಗೆ ಮಾಚರ್್ ಬಜೆಟ್ನಲ್ಲಿ ಅದರ ಬಗ್ಗೆ ಮಂಡಿಸಬೇಕು, ನಾನು ಎಂ.ಎಲ್.ಸಿ ಆದ ಐದು ವರ್ಷದ ಅವಧಿಯಲ್ಲಿ ಹಲವು ವಿಷಯಗಳ ಬಗ್ಗೆ  ವಿಧಾನ ಪರಿಷತ್ನಲ್ಲಿ ಹೋರಾಟ ಮಾಡಿ ಸುಮಾರು 4 ಸಾವಿರ ಸಹಶಿಕ್ಷಕರಿಗೆ ಮುಖ್ಯ ಶಿಕ್ಷಕಕರಾಗಿ ಮುಂಬಡ್ತಿ ಪಡೆಯಲು ಸಹಕರಿಸಿರುವುದಲ್ಲದೆ,  529 ಉಪನ್ಯಾಸಕರಿಗೆ    ಖಾಯಂಆತಿ ಅದೇಶಕ್ಕೆ ದುಡಿದಿದ್ದೇನೆ, 2500 ಸಾವಿರ ಅರೆಕಾಲಿಕ ಶಿಕ್ಷಕರನ್ನು ಖಾಯಂ, ಹೆಚ್ಚುವರಿ ಶಿಕ್ಷಕರಿಗೆ ವೇತನ ಕೊಡಿಸುವಲ್ಲಿ ಶ್ರಮಿಸಿರುವುದಾಗಿ ಹೇಳಿಕೊಂಡರಲ್ಲದೆ, 1991ರ ತನಕ ಪ್ರಾರಂಭವಾದ ಎಲ್ಲಾ ಖಾಸಗಿ ಶಾಲೆಗಳಿಗೆ ಅನುದಾನ ಕೊಡಿಸುವಲ್ಲಿ, 94-95ರ ಸಂದರ್ಭದಲ್ಲಿ ಪ್ರಾರಂಭವಾದ ಶಾಲೆಗಳಿಗೆ ಸಕರ್ಾರ ಅನುದಾನ ಕೊಡಿಸುವುದನ್ನು ಮಾಚರ್್ ತಿಂಗಳಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಿರುವುದಾಗಿಯೂ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಭಾ.ಜ.ಪ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಮುಖಂಡ ಶ್ರೀನಿವಾಸ ಮೂತರ್ಿ, ಸಿ.ಎಂ.ಗಂಗಾಧರ್, ಎಂ.ಎಲ್.ಮಲ್ಲಿಕಾರ್ಜನಯ್ಯ, ಅರುಣ್ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ,ಜ.14 : ಗ್ರಾಮೀಣ ಪ್ರದೇಶದಲ್ಲಿ ಶ್ರೀ ಶಾರದ ವಿದ್ಯಾಪೀಠ ಸಂಸ್ಥೆ ಉತ್ತಮವಾಗಿ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿದೆ, ಈ ಸಂಸ್ಥೆಯ ಸೇವೆಯನ್ನು ಮೆಚ್ಚಿ ಸಂಸ್ಥೆಗೆ ಸಭಾಂಗಣ ನಿಮರ್ಿಸಲು ತಮ್ಮ ಅನುದಾನದಲ್ಲಿ 1.5 ಲಕ್ಷವನ್ನು ನೀಡುವುದಾಗಿ ಜಿ.ಪಂ.ಸದಸ್ಯೆ ಲೋಹಿತಾಬಾಯಿ ತಿಳಿಸಿದರು.
ತಾಲ್ಲೂಕಿನ ತಿಮ್ಮನಹಳ್ಳಿಯ ಶ್ರೀ ಶಾರದಾ ವಿದ್ಯಾಪೀಠ ಹಿರಿಯ ಪ್ರಾಥಮಿಕ ಮತ್ತು ಆಂಗ್ಲ ಪ್ರೌಡಶಾಲೆ, ಪದವಿ ಪೂರ್ವ ಕಾಲೇಜುಗಳ 2011-12ನೇ ಸಾಲಿನ ವಿದ್ಯಾಥರ್ಿ ಸಂಘದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಮಕ್ಕಳಿಗೆ ಸತತ ಪ್ರಯತ್ನ, ದೃಡನಿಧರ್ಾರಗಳ ಮುಖಾಂತರ ಏಳಿಗೆ ಕಾಣಬಹುದು ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಗೌರವ ಕಾರ್ಯದಶರ್ಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಣ್ಣಯ್ಯ ಸ್ವಾಗತಿಸಿದರೆ, ಪರಮೇಶ್ವರಪ್ಪ ವಂದಿಸಿದರು.



Wednesday, January 11, 2012



ಚಿ.ನಾ.ಹಳ್ಳಿ ತಾಲೂಕಿನಲ್ಲಿ ಏಡ್ಸ್ ಭಾದಿತರು 550 ಜನರಿದ್ದಾರೆ.
ಚಿಕ್ಕನಾಯಕನಹಳ್ಳಿ,ಜ.09 : ತಾಲ್ಲೂಕಿನಲ್ಲಿ ಹೆಚ್.ಐ.ವಿ ಏಡ್ಸ್ ಪೀಡಿತರು 550 ಜನರಿದ್ದಾರೆ, ಜಿಲ್ಲೆಗೆ ಗುಬ್ಬಿ ತಾಲ್ಲೂಕು ಮೊದಲಾದರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು 4ನೇ ಸ್ಥಾನ ಹೊಂದಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸ್ಪೂತರ್ಿ ನೆಟ್ವಕ್ಸರ್್ ಫಾರ್ ಪೀಪಲ್ ಸಫರಿಂಗ್ ವತಿಯಿಂದ ನಡೆದ 'ನಾವು ನಿಮ್ಮೊಂದಿಗೆ ನೀವು ನಮ್ಮೊಂದಿಗೆ' ಹೆಚ್.ಐ.ವಿ/ಏಡ್ಸ್ ಹಾಗೂ  ಟಿ.ಬಿ ಒಂದು ಹೆಜ್ಜೆ, ಅರಿವು ಮೂಡಿಸಲು  ಜಾಗೃತಿ ಮತ್ತು ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಹೆಚ್.ಐ.ವಿ ಸೋಂಕಿತರು ತಾಲ್ಲೂಕಿನ ಹುಳಿಯಾರು ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ, ಈಗಾಗಲೇ ಇರುವ ಹೆಚ್.ಐ.ವಿ ಪೀಡಿತರಲ್ಲಿ 35ರಷ್ಟು ಗಭರ್ಿಣಿ ಸ್ತ್ರೀಯರು ಈ ಸೋಂಕಿಗೆ ಒಳಗಾಗಿದ್ದಾರೆ ಇದಕ್ಕೆ ಕಾರಣ ಜಾಗೃತಿ ಇಲ್ಲದ ಹಾಗೂ ಈ ರೋಗದ ಬಗ್ಗೆ ಅರಿವಿನ ಸಮಸ್ಯೆಯೇ ಆಗಿದೆ ಎಂದ ಅವರು ಈ ಹೆಚ್.ಐ.ವಿ ಜಾಗೃತಿ ಬಗ್ಗೆ ಕಾಲೇಜು ಮಟ್ಟದಲ್ಲಿ, ಪಂಚಾಯಿತಿ ಮಟ್ಟಗಳಲ್ಲಿ ಜಾಗೃತಿ ಶಿಬಿರ ನಡೆಯಬೇಕು ಅದಕ್ಕಾಗಿ ನಮ್ಮ ಬೆಂಬಲವಿರುತ್ತದೆ ಹಾಗೂ ತಾಲ್ಲೂಕಿನಲ್ಲಿ ಈಗಿರುವ ಸೊಂಕಿತರಿಗೆ ಅಂತ್ಯೋದಯ ಕಾಡರ್್, ಮಾಶಾಸನ ನೀಡುವುದಾಗಿ ಭರವಸೆ ನೀಡಿದ ಅವರು ಹೆಚ್.ಐ.ವಿ ಸೋಂಕಿರುವವರು ದೃತಿಗೆಡದೆ ಆತ್ಮವಿಶ್ವಾಸ ಹೊಂದಲು ತಿಳಿಸಿದರು.
ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಮಾತನಾಡಿ ಸೊಂಕಿತರು ಜೀವನದಲ್ಲಿ ಜಿಗುಪ್ಸೆಯಾಗದೆ,  ಔಷದಿಗಳ  ಜೊತೆಗೆ ಆತ್ಮಸ್ಥೈರ್ಯ ಹೊಂದಬೇಕು ಅದಕ್ಕಾಗಿ ಧ್ಯಾನ, ಯೋಗದ ಕಡೆಯೂ ಮುಂದಾಗಬೇಕು ಆ ಮೂಲಕ ದೇಹಕ್ಕೆ ವಿರಾಮ ನೀಡಿದಾಗ ಒಂದು ರೀತಿಯಲ್ಲಿ ಆತ್ಮಸ್ಥೈರ್ಯದೊಂದಿಗೆ ಕಾಯಿಲೆ ಗುಣಮುಖವಾಗಲಿದೆ ಎಂದ ಅವರು,  ಸೊಂಕು ಹರಡುವುದು ಕೇವಲ ಹೆಣ್ಣು, ಗಂಡು ಸೇರಿದರೆ ಮಾತ್ರವಲ್ಲ ಅದು ಬೇರೆಯವರ ರಕ್ತ ಇನ್ನೊಬ್ಬರ ರಕ್ತದೊಂದಿಗೆ ಸೇರಿದಾಗಲೂ  ಹರಡುತ್ತದೆ, ರೋಗಿಗಳಿಗಾಗಿ  ಬಳಸುವ ಸಿರಿಂಜನ್ ಬದಲಿಸದೆ ಅದೇ ಸಿರಿಂಜನ್ನು ಬಳಸಿ,  ಶೇವಿಂಗ್ ಮಾಡುವಾಗ ಮತ್ತೊಬ್ಬರಿಗೆ  ಬಳಸಿದ ಬ್ಲೇಡ್ ಅನ್ನೇ ಬಳಸಿ  ಎಂದು ತಾಕೀತು ಮಾಡಬಾರದು,  ಈ   ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಇದಕ್ಕಾಗಿ ಕೇವಲ, ಇಂತಹ ಸಂದರ್ಭಗಳಲ್ಲಿ ಹೊಸ ಸಾಧನಗಳನ್ನು ಬಳಸಿ ತಮ್ಮ ಜೀವ ರಕ್ಷಿಸಿಕೊಳ್ಳಿ ಸಾರ್ವಜನಿಕರಿಗೆ ಸಲಹೆ ನೀಡಿದ ಅವರು ಸ್ಪೂತರ್ಿ ನೆಟ್ವರ್ಕ ಏರ್ಪಡಿಸಿರುವ ಈ ಜಾಗೃತಿ ಕಾರ್ಯಕ್ರಮಗಳು ಗ್ರಾಮ, ಹಳ್ಳಿಗಳಲ್ಲೂ ನಡೆಯಬೇಕು ಅಲ್ಲಿನ ಜನರಿಗೆ ಈ ಕಾರ್ಯಕ್ರಮದ ಪ್ರಯೋಜನ ಅರಿವಾಗಬೇಕು ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ವೈದ್ಯಾಧಿಕಾರಿ ಶಿವಕುಮಾರ್, ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ, ಶಿವಕುಮಾರ್, ತಿಪಟೂರಿನ ಲಿಂಗರಾಜು, ಕುಣಿಗಲ್ನ ಪುನೀತ್ಶೆಟ್ಟಿ, ರವಿ, ಟಿಪ್ಪು ಅಭಿಮಾನಿ ಸಂಘದ ಅಧ್ಯಕ್ಷ ಅಸ್ಲಂಪಾಷ ಉಪಸ್ಥಿತರಿದ್ದರು.

ಗ್ರಾಮೀಣ ಪರಿಸರದಲ್ಲಿರುವ  ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ದಿ ಪಡಿಸಿ

ಚಿಕ್ಕನಾಯಕನಹಳ್ಳಿ,ಜ.11: ಆಥರ್ಿಕ ಅಭಿವೃದ್ದಿ, ಉದ್ಯೋಗ ಅವಕಾಶಕ್ಕಾಗಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಪ್ರವಾಸೋದ್ಯಮ ನೆಲೆಯಾಗಿ ಕನರ್ಾಟಕ- ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಐತಿಹಾಸಿಕ ಸ್ಥಳ, ವೈವಿದ್ಯಮಯ ಪರಂಪರೆಗಳನ್ನು ಪರಿಚಯಿಸುವ ಮೂಲಕ ಇತಿಹಾಸ ಪರಂಪರಾ ತಾಣಗಳನ್ನು ಅಭಿವೃದ್ದಿ ಪಡಿಸಬೇಕು, ಈ ಶತಮಾನದ ಅಂಚಿಗೆ ಭಾರತ ಪ್ರವಾಸೋಧ್ಯಮದಲ್ಲಿ 2ನೇ ಸ್ಥಾನಕ್ಕೇರಲಿದೆ ಎಂದ ಅವರು ದೇಶದಲ್ಲಿ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಹಾಗೂ ತಾಣಗಳನ್ನು ಬೆಳಸುವಲ್ಲಿ ವೈಪಲ್ಯವೂ ಹೆಚ್ಚಾಗಿದೆ ಎಂದು ವಿಷಾಧಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಪ್ರೇಕ್ಷಣಿಯ ಸ್ಥಳಗಳನ್ನು ಪ್ರವಾಸೋದ್ಯಮವನ್ನಾಗಿ ಅಭಿವೃದ್ದಿ ಮಾಡಿದಾಗ ಮೈಕ್ರೋ ಟೂರಿಸಂ ಅಭಿವೃದ್ದಿ ಹೊಂದುತ್ತದೆ, ಆಗ ಟೂರಿಂಸ್ನ ನಕ್ಷೆಯಲ್ಲಿರುವ  ಪ್ರದೇಶಗಳು ಅಭಿವೃದ್ದಿ ಹೊಂದಿ ಪ್ರೇಕ್ಷಣಿಯ ಸ್ಥಳಗಳ ಮಹಿಮೆ ತಿಳಿಯುತ್ತದೆ ಎಂದರಲ್ಲದೆ,  ಒಂದು ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿದರೂ ರಾಜ್ಯದ ಪ್ರೇಕ್ಷಣಿಯ ಸ್ಥಳಗಳನ್ನು ಪೂತರ್ಿ ನೋಡಲು ಆಗುವುದಿಲ್ಲ ಆದರೂ ಬೇರೆ ರಾಜ್ಯಗಳಿಗೆ ಪ್ರವಾಸ ಹೋಗುತ್ತಾರೆ, ಇದಕ್ಕೆ ಕಾರಣ ಪ್ರೇಕ್ಷಣಿಯ ಸ್ಥಳಗಳಲ್ಲಿನ ನಿರಾಸಕ್ತಿಯಾಗಿದೆ, ಪ್ರೇಕ್ಷಣೀಯ ಸ್ಥಳಗಳ ಮಹಿಮೆಯನ್ನು ಲಿಖಿತ ಬರಹದ ಮೂಲಕ ನೋಡುಗರಿಗೆ ತಿಳಿಸಿದರೆ ರಾಜ್ಯದಲ್ಲೂ ವಿದೇಶಿಗರೂ ಹೆಚ್ಚಿನದಾಗಿ ಪ್ರವಾಸ ಮಾಡುತ್ತಾರೆ ಎಂದ ಅವರು ಪ್ರವಾಸದ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಹೆಚ್ಚನದಾಗಿ ಪ್ರಚಾರ ನೀಡಬೇಕು ಆ ಸ್ಥಳದ ಐತಿಹ್ಯ ಲಿಖಿತ ಬರವಣಿಗೆ ಮೂಲಕ ಇರಬೇಕು ಆಗ ಜನಸಾಮಾನ್ಯರು ಇತಿಹಾಸದ ಬಗ್ಗೆ ಸವಿವರವಾಗಿ ತಿಳಿದು ಪ್ರವಾಸದ ಬಗ್ಗೆ ಇತರರಿಗೂ ತಿಳಿಸುತ್ತಾರೆ ಎಂದರು.
ಬೆಂಗಳೂರು ವಿ.ವಿ.ಯ ಇತಿಹಾಸ ವಿಭಾಗದ ಪ್ರೊ.ಡಾ.ಎಸ್ ಷಡಾಕ್ಷರಿ ಮಾತನಾಡಿ  ಸಾಂಸ್ಕೃತಿಕ, ಸಂಪ್ರದಾಯ ಹಬ್ಬಗಳ ಆಚರಣೆಯನ್ನು ಉಳಿಸಿಕೊಂಡು ಆ ಮೂಲಕ ಇತಿಹಾಸ ವೈಭವವನ್ನು ತಿಳಿಸುವಲ್ಲಿ ಕನರ್ಾಟಕ ರಾಜ್ಯ ಮುಂಚೂಣಿಯಲ್ಲಿದೆ,   ಕನರ್ಾಟಕ ಶಕ್ತಿ ಸಂಪನ್ಮೂಲಗಳ ಬಳಕೆ ಹೊಂದಿದೆ ಆದರೆ ಅದು ಶಕ್ತವಾಗಿ ಬಳಕೆಯಾಗದೆ ನಶಿಸುತ್ತಿದೆ, ರಾಜ್ಯದ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ ದಾಖಲೆ ಹೊಂದಿದ ಸ್ಥಳಗಳಲ್ಲಿ ರಕ್ಷಣೆಯಿಲ್ಲದೆ ಹಾಳಾಗುತ್ತಿದೆ, ಇಲ್ಲಿನ ಸುಂದರ ಶಿಲೆಗಳು, ಗೋಡೆಗಳಲ್ಲಿರುವ ದಾಖಲೆಗಳನ್ನು ವಿರೂಪಗೊಳಿಸುವ ಮೂಲಕ ಇತಿಹಾಸ ದಾಖಲೆಗಳನ್ನು ಹಾಳುಗೆಡುವುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಇದರ ಬಗ್ಗೆ ಸಕರ್ಾರ ಗಮನಹರಿಸಿ ಸೂಕ್ತ ನಿಧರ್ಾರ ತಾಳಬೇಕು ಎಂದರು.
ಸಮಾರಂಭದಲ್ಲಿ ನವೋದಯ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ರಾಮಚಂದ್ರಪ್ಪ, ವೆಂಕಟರಾಮನ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಎರಡು ಅಧಿವೇಶನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಇರುವ ಸಾಧ್ಯತೆಗಳು ಹಾಗೂ ಸಾವಲುಗಳ ಬಗ್ಗೆ ಉಪನ್ಯಾಸ ನಡೆಯಿತು.
ಚಿರನಿದ್ರೆಗೆ ಜಾರಿದ ಸಾಹಿತ್ಯ ಲೋಕದ ಉತ್ಸಾಹಿ ಆರ್.ಬಸವರಾಜ್
ಚಿಕ್ಕನಾಯಕನಹಳ್ಳಿ,ಜ.06:  ಕನ್ನಡ ಸರಸ್ವತಾ ಲೋಕದ ಹಿರಿಯ, ನಿವೃತ್ತ ಉಪನ್ಯಾಸಕ, ನೂರು ಕೃತಿಗಳ ಕತೃ, ಉತ್ಸಾಹಿ,  ಆರ್.ಬಸವರಾಜು(82) ಇಹಲೋಕ ತ್ಯಜಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಸದಾ ಉತ್ಸಾಹಿಯಾಗಿದ್ದ ಆರ್. ಬಸವರಾಜು ರವರನ್ನು ಅವರ ಶಿಷ್ಯ ವೃಂದ ಹಾಗೂ ಸಾಹಿತ್ಯ ಪ್ರೇಮಿಗಳು ಆರ್.ಬಿ.ಎಂದೇ ಕರೆಯುತ್ತಿದ್ದರು. ಸಾಹಿತ್ಯ ರಚನೆಯಲ್ಲಿನ ಇವರ ಉತ್ಸಾಹವನ್ನು ಕಂಡ ಇವರ ಶಿಷ್ಯವೃಂದ 'ಉತ್ಸಾಹಿ' ಎಂಬ ಅಭಿನಂದನಾ  ಗ್ರಂಥವನ್ನು  ಅವರ 75ನೇ ವರ್ಷ ತುಂಬಿದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಪರ್ಿಸಿದ್ದರು. ಕಿರಿಯರಿಗೆ ಸಾಹಿತ್ಯ ಚರಿತ್ರೆ, ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗ ಕಲಾವಿದರು ಎಂಬ ಕೃತಿಯೂ ಸೇರಿದಂತೆ ಒಂದು ನೂರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅಪರ್ಿಸಿದ್ದರು.
ಚಿಕ್ಕನಾಯಕನಹಳ್ಳಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಸನ್ಮಾನಿತರಾಗಿದ್ದ ಆರ್.ಬಿ.ಯವರು  ಆರಂಭದಲ್ಲಿ ಶೃಂಗಾರ ಪ್ರಕಾಶನ ಇವರ ಕೃತಿಗಳನ್ನು ಹೊರತರುತ್ತಿತ್ತು, ನಂತರದಲ್ಲಿ ತಮ್ಮದೇ ಆದ ಬಸವೇಶ್ವರ ಪ್ರಕಾಶನವೆಂಬ ಸಂಸ್ಥೆಯನ್ನು ಕಟ್ಟಿ ಆ ಮೂಲಕ ಅವರ ಕೃತಿಗಳನ್ನು ನಾಡಿಗೆ ಅಪರ್ಿಸಿದ್ದರು. ಸಾಹಿತ್ಯ ಕ್ಷೇತ್ರದ ಸದಾ ವಿದ್ಯಾಥರ್ಿಯಾಗಿದ್ದ ಇವರು, ಮಕ್ಕಳಿಗೆ ಸಣ್ಣಕಥೆಗಾರರಿಗಿದ್ದರಲ್ಲದೆ, ಕಾದಂಬರಿಕಾರ, ವಿಡಂಬನಾಕಾರ, ಪ್ರಬಂಧಕಾರ, ಹಾಸ್ಯ ಸಾಹಿತಿ ಹಾಗೂ ರಂಗಾಸಕ್ತರಾಗಿದ್ದರಲ್ಲದೆ, ಪಟ್ಟಣದ ದಿವ್ಯಪ್ರಭಾ ಶಾಲೆಯ ಅಧ್ಯಕ್ಷರಾಗಿದ್ದರು.
ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಮೇಲೆ ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾಗಿದ್ದರು, ಕಳೆದ ಎರಡು ವಾರಗಳಿಂದೆ ತೀವ್ರತರದ ಡಯಾಬಿಟಿಕ್ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಲ್ಲಿ  ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಇವರು ಪತ್ಯಿ, ಮೂರು ಜನ ಮಕ್ಕಳು,ಮೊಮ್ಮಕ್ಕಳು, ಶಿಷ್ಯರು ಹಾಗೂ ಅಪಾರ ಸಂಖ್ಯೆಯ ಸಾಹಿತ್ಯಾಸಕ್ತರನ್ನು ಅಗಲಿದ್ದಾರೆ.
ಇಂದು ಅಂತ್ಯಕ್ರಿಯೆ: ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಬೆಂಗಳೂರಿನಲ್ಲಿ ಅಸುನೀಗದ ಇವರ ಅಂತ್ಯಕ್ರಿಯೆಯನ್ನು ಶನಿವಾರ 11.30ಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕು ಕಛೇರಿ ಮುಂಭಾಗದಲ್ಲಿರುವ ಆರ್.ಬಿ.ಯವರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಆರ್.ಬಿ.ಯವರಿಗೆ ಶ್ರದ್ದಾಂಜಲಿ:  ಆರ್.ಬಿ.ಯವರ ನಿಧನ ಸುದ್ದಿ  ಕೇಳಿ  ಶಾಸಕ ಸಿ.ಬಿ.ಸುರೇಶ್ ಬಾಬು, ಕುಪ್ಪೂರು ಶ್ರೀಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ,   ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಕೃಷ್ಣಮೂತರ್ಿ ಬಿಳಿಗೆರೆ,  ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್,  ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಸೋಮಶೇಖರ್, ದಿವ್ಯಪ್ರಭ ಶಾಲೆಯ ಕಾರ್ಯದಶರ್ಿ ಸಿ.ಟಿ.ಸುರೇಶ್ಕುಮಾರ್, ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟ್ಟಿಗೆಮನೆ ಸೇರಿದಂತೆ ಹಲವರು ಶ್ರದ್ದಾಂಜಲಿ ಅಪರ್ಿಸಿದ್ದಾರೆ.
ಆರ್.ಬಿ.ನಡೆದು ಬಂದ ಹಾದಿ: ಆರ್,ಬಸವರಾಜುರವರು ಮೂಲತಹ ತಿಪಟೂರಿನವರು ಆದರೂ ತಾಲ್ಲೂಕಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ಇವರು ಗ್ರಾಮೀಣ ಪ್ರದೇಶದ ರೈತ ಕುಟುಂಬದಲ್ಲಿ ಹುಟ್ಟಿ ಬಹಳ ಕಷ್ಟಪಟ್ಟು ಎಂ.ಎ. ಬಿ.ಎಡ್, ಶಿಕ್ಷಣವನ್ನು ಪಡೆದವರು. ಮಾಧ್ಯಮಿಕ ಶಾಲೆ, ಪ್ರೌಡಶಾಲೆಗಳಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ, ಸ್ಕೂಲ್ ಇನ್ಸ್ಪೆಕ್ಟರ್, ಪದವಿಪೂರ್ವ ಕಾಲೇಜಿನ ಅಧ್ಯಾಪಕರಾಗಿ, ಕಾರ್ಯ ನಿರ್ವಹಿಸಿ ತಮ್ಮ ಸಾವಿರಾರು ವಿದ್ಯಾಥರ್ಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದವರು, 
ಬಸವರಾಜುರವರು 1930 ಜುಲೈ 4ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ  ಈಡೇನಹಳ್ಳಿ ಗ್ರಾಮದಲ್ಲಿ ಜನಿಸಿದವರು, ಇವರ ತಂದೆ ರಂಗೇಗೌಡ, ತಾಯಿ ಮರುಳಮ್ಮ,     ಇವರು ಬೆನ್ನನಾಯಕನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ತಿಪಟೂರಿನಲ್ಲಿ ಮಾಧ್ಯಮಿಕ, ಪ್ರೌಢಶಾಲಾ ಶಿಕ್ಷಣ ಮುಗಿಸಿದರು, ನಂತರ ತುಮಕೂರಿನ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಮರಿಮಲ್ಲಪ್ಪ ಬಿ.ಎಡ್.ಕಾಲೇಜಿನಲ್ಲಿ ಬಿ.ಇಡಿ, ಧಾರವಾಡದ ಕನರ್ಾಟಕ ವಿಶ್ವವಿದ್ಯಾನಿಲಯದಲ್ಲಿ      ಎಂ.ಎ(ಕನ್ನಡ) ಮುಗಿಸಿ ರಂಗಭೂಮಿ ಹಾಗೂ ಸಾಹಿತ್ಯದ ಕಡೆ ಆಸಕ್ತ ವಹಿಸಿದರು.
ನಂತರ ತಿಪಟೂರಿನ ಸ.ಮಾ.ಶಾಲೆ 1955ರಲ್ಲಿ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿ, ಶಿವಮೊಗ್ಗ, ಶೃಂಗೇರಿ, ಸಕಲೇಶಪುರ, ಹೊಸನಗರ ಚಿಕ್ಕನಾಯಕನಹಳ್ಳಿಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಮಾಚರ್್ 31 1989ರಲ್ಲಿ ನಿವೃತ್ತಿ ಹೊಂದಿದ್ದರು.                                                                                                                                                                                                                                                         ಆರ್.ಬಿರವರ ಕೃತಿಗಳು :
ಕಥಾ ಸಂಗ್ರಹ: ಅನುರಾಗದ ಸುಳಿಯಲ್ಲಿ, ಸೂತ್ರದ ಬೊಂಬೆಯಲ್ಲ, ಕುರಿಗಳು ಸಾಕಿದ ತೋಳ, ನಿಮ್ಮ ಪ್ರೀತಿಯೊಂದೇ ಸಾಕು, ಮುಖವಾಡಗಳು.
ಕಾದಂಬರಿಗಳು : ಈಸೂರಿನ ಚಿರಂಜೀವಿಗಳು, ಆತ್ಮಾಹುತಿ, ತಿರುಮಂತ್ರ, ಪಥಬ್ರಾಂತರು, ಹೊಸಹಳ್ಳಿಯ ಬೆಳಕು, ಹುಚ್ಚಣ್ಣನ ನಗೆಲೋಕ, ಹುಚ್ಚಣ್ಣನ ನಗೆಲೋಕ-2, ಜೀವನ ಚರಿತ್ರೆ, ಮೋಳಿಗೆ ಮಾರಯ್ಯ,  ಅಗ್ರಪೂಜೆ, 
ಮಕ್ಕಳ ಸಾಹಿತ್ಯ : ರುದ್ರಾಕ್ಷಿಸರದ ಬೆಕ್ಕು ಮತ್ತಿತರ ಕಥೆಗಳು, ಪರಮಾನಂದಯ್ಯನ ಬೆತ್ತ ಮತ್ತಿತರ ಕಥೆಗಳು, ಅತ್ತೆಯನ್ನು ಸ್ವರ್ಗಕ್ಕೆ ಕಳಿಸಿದ ಸೊಸೆ ಮತ್ತಿತರ ಕಥೆಗಳು, ಜಿಪುಣಾಗ್ರೇಸರ ಕೊಣವೇಗೌಡ ಮತ್ತಿತರ ಕಥೆಗಳು, ಸುಣ್ಣದ ಚೀಲದಲ್ಲಿ ರಾಕ್ಷಸ ಮತ್ತಿತರ ಕಥೆಗಳು, ಪುಟಾಣಿಗಳಿಗೆ ಪುಟ್ಟ ಕಥೆಗಳು, ಈಸೂರಿನ ಸ್ವಾತಂತ್ಯ್ಯ ಹೋರಾಟ, ತಿಪಟೂರು ತಾಲ್ಲೂಕು ದರ್ಶನ , ಸರಳ ಹೊಸಗನ್ನಡ ವ್ಯಾಕರಣ, ಪ್ರಬಂಧ ಮತ್ತು ಪತ್ರ ಲೇಖನ ಸಂಚಯ, ತುಮಕೂರು ಜಿಲ್ಲೆಯ ರಂಗಕಲಾವಿದರು, ಒಂದು ಕಪ್ಪು ಕುದುರೆಯ ಆತ್ಮಕಥೆ, ಅಪಹೃತ ಬಾಲಕನ ಸಾಹಸಗಳು, ರಾಬಿನ್ ಸನ್ ಕ್ರೂಸೋ ಸಾಹಸಗಳು, ಹಕ್ಲ್ ಬರಿಫಿನ್, ರಾಬಿನ್ವುಡ್ ಸಾಹಸಗಳು, ಅರೇಬಿಯನ್ ನೈಟ್ಸ್ ಕಥೆಗಳು, ಡೇವಿಡ್ ಕಾಪರ್ ಪೀಲ್ಡ್, ಮೂವರು ಬಂದೂಕುಧಾರಿಗಳು, ಬೆನ್ಹರ್, ರಾಜಕುಮಾರ ಮತ್ತು ಭಿಕ್ಷುಕ, ಕಿಶೋರರಿಗೆ ಕರಿಗತೆಗಳು(ಮಕ್ಕಳ ಸಾಹಿತ್ಯ), ಕುವೆಂಪು(ಜೀವನ ಕೃತಿ ಪರಿಚಯ), ದ.ರಾ.ಬೇಂದ್ರೆ(ಜೀವನ ಕೃತಿ ಪರಿಚಯ), ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಡಾ.ಕೆ.ಶಿವರಾಮ ಕಾರಂತ, ಯು.ಆರ್.ಅನಂತಮೂತರ್ಿ, ವಿ.ಕೃ.ಗೋಕಾಕ್, ಜೆ.ಪಿ.ರಾಜರತ್ನಂ, ಡಿ.ವಿ.ಗುಂಡಪ್ಪ, ಪು.ತಿ.ನರಸಿಂಹಾಚಾರ್, ಕೆ.ಎಸ್.ನರಸಿಂಹಸ್ವಾಮಿ.
ಕಿರಿಯರಿಗೆ ಕನ್ನಡ ಸಾಹಿತ್ಯ ಚರಿತ್ರೆ : ಪಂಪನ ಕಾಲದ ಸಾಹಿತ್ಯ, ಶಿವಶರಣದ ಜೀವನ ವಚನಗಳು, ಶಿವಶರಣೆಯರ ಜೀವನ ವಚನಗಳು, ಹರಿಹರನ ಕಾಲದ ಸಾಹಿತ್ಯ, ದಾಸ ಸಾಹಿತ್ಯ, ಒಡೆಯರ ಕಾಲದ ಸಾಹಿತ್ಯ, ಆಧುನಿಕ ಯುಗದ ಸಣ್ಣಕತೆ ಕಾದಂಬರಿ, ಆಧುನಿಕ ಯುಗದ ಸಣ್ಣಕಥೆ ಕಾದಂಬರಿ, ಆಧುನಿಕ ಕಾವ್ಯ ಮತ್ತು ನಾಟಕ, ಪ್ರಬಂಧ, ವಿಮಷರ್ೆ, ಮಕ್ಕಳ ಸಾಹಿತ್ಯ ಇತ್ಯಾದಿ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ವಿಜೇತ ದಿಗ್ಗಜರು, ವಿಲಿಯಂ ಫ್ರೀಸ್ ಗ್ರೀನ್(ವಿಜ್ಞಾನ), ಪುರಂದರ ದಾಸರು, ಕುಮಾರವ್ಯಾಸ, ಲವಕುಶ ನಾಟಕ(ಮಕ್ಕಳಿಗಾಗಿ) , ಮಾಂಗಲ್ಯ ಭಾಗ್ಯ(ನಾಟಕ), ಹೀಗೊಬ್ಬ ಕಲಾ ಸಾಮ್ರಾಟ, ದೇಜಗೌ ಮತ್ತು ಇತರ ವ್ಯಕ್ತಿ ಚಿತ್ರಗಳು, ಬಸವಣ್ಣ ಮತ್ತು ಇತರ ವ್ಯಕ್ತಿ ಚಿತ್ರಗಳು, ಅಲ್ಲಾರಿ, ಕೆಂಪು ಫೈಲಲ್ಲವಾ ಅದು?, ಬಿಂದುವಿನಿಂದ ಸಿಂಧು, ಪ್ರಸ್ತುತ ಶಿಕ್ಷಣ ಒಂದು ಅವಲೋಕನ. 
ಸನ್ಮಾನ ಮತ್ತು ಪ್ರಶಸ್ತಿ : ಚಿ.ನಾ.ಹಳ್ಳಿ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಧುಗಿರಿಯಲ್ಲಿ ನಡೆದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕೈಂಕರ್ಯಕ್ಕಾಗಿ ಸನ್ಮಾನ, ಶಿಕಾರಿಪುರ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಚಿ.ನಾ.ಹಳ್ಳಿಯ ಕನ್ನಡ ರಾಜ್ಯೋತ್ಸವ ಸಂಧರ್ಭದಲ್ಲಿ ಕನ್ನಡ ಸಂಘದಿಂದ ಸನ್ಮಾನ, ತುಮಕೂರಿನ ನಗೆಮಲ್ಲಿಗೆ ಬಳಗದಿಂದ ಹಾಸ್ಯ ಸಾಹಿತ್ಯ ರಚನೆಗಾಗಿ ಸನ್ಮಾನ, ಆಯ್ದ ಕಥೆಗಳು ಕಥಾ ಸಂಗ್ರಹ ಕನರ್ಾಟಕ ವಿಶ್ವ ವಿದ್ಯಾನಿಲಯದ ದ್ವಿತೀಯ ಬಿ.ಎ ತರಗತಿಗೆ ಪಠ್ಯ ಪುಸ್ತಕ ಆಯ್ಕೆ, ಸಾಶಿಮ ಬದುಕ ಬರಹ ಪುಸ್ತಕ ರಚನೆಗಾಗಿ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಚಿ.ನಾ.ಹಳ್ಳಿಯಲ್ಲಿ ಸನ್ಮಾನ.