Friday, August 5, 2011ಧರ್ಮದ ಪವಿತ್ರತೆಯಿಂದಿರಲಿ ರಕ್ಷಾಬಂಧನಚಿಕ್ಕನಾಯಕನಹಳ್ಳಿ,ಆ.05 : ಧರ್ಮದ, ಸದ್ಗುಣ ಬಂಧನವನ್ನು ಪವಿತ್ರತೆಯಿಂದ ಕಂಡುಕೊಂಡಾಗ ಸೋದರ ಸೋದರಿಯರ ರಕ್ಷಾಬಂಧನಕ್ಕೆ ಅರ್ಥಕಂಡುಬರುತ್ತದೆ ಎಂದು ದಾವಣಗೆರೆಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಲೀಲಕ್ಕನವರು ಹೇಳಿದರು. ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ರಕ್ಷಾಬಂಧನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸೋದರ, ಸೋದರಿಯರು ರಕ್ಷಾಬಂಧನವನ್ನು ಕಟ್ಟಿವುದರ ಮೂಲಕ ಕಾಮ, ಕ್ರೋಧ, ಅಹಂಕಾರವನ್ನು ತ್ಯಜಿಸುತ್ತಾ ಉಡುಗೊರೆ ನೀಡಿದರೆ ರಕ್ಷಾಬಂಧನಕ್ಕೆ ರಕ್ಷಣೆಯೆಂಬ ನಿಜವಾದ ಅರ್ಥ ದೊರಕುತ್ತದೆ ಎಂದ ಅವರು ರಕ್ಷಾ ಬಂಧನವು ಕೇವಲ ಒಡ ಹುಟ್ಟಿದವರು ಮಾತ್ರ ಆಚರಿಸುವುದಲ್ಲ ಅದನ್ನು ನೆರೆಹೊರೆಯರ ಜೊತೆಯಲ್ಲಿ ಆಚರಿಸಬೇಕು ಎಂದರು. ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಮಾತನಾಡಿ ರಕ್ಷಾಬಂಧನವು ರಕ್ಷಣೆಯ, ಬಾಂದವ್ಯದ ಸಂಕೇತವಾಗಿದ್ದು ರಕ್ಷಾಬಂಧನವು ಸೋದರ, ಸೋದರಿಯರ ಹಾಗೂ ನೆರೆಹೊರೆಯವರೊಂದಿಗೆ ಆತ್ಮೀಯತೆಯನ್ನು ಬೆಳೆಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಬ್ರಹ್ಮವಿದ್ಯಾಸಮಾಜದ ಅನ್ನಪೂರ್ಣಕ್ಕ, ಸುಹಾಸಿನಿಯವರು ಭಾಗವಹಿಸಿದ್ದರು.
ತಾಯಂದಿರು ಹಾಲುಣಿಸದಿದ್ದರೆ, ದುಶ್ಚಟಗಳಿಗೆ ದಾರಿಚಿಕ್ಕನಾಯಕನಹಳ್ಳಿ,ಆ.04 : ಆಧುನಿಕತೆಗೆ ಮಾರು ಹೋಗಿ ತಮ್ಮ ಮಕ್ಕಳಿಗೆ ತಾಯಂದಿರು ಹಾಲುಣಿಸುತ್ತಿಲ್ಲ ಇದರಿಂದ ಮಗುವು ದುಶ್ಚಟಗಳಿಗೆ ಬಲಿಪಶುವಾಗುವ ಸಂಭವ ಹೆಚ್ಚಾಗಿದೆ ಎಂದು ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಅಭಿಪ್ರಾಯಪಟ್ಟರು. ಪಟ್ಟಣದ ವಿನಾಯಕ ನಗರದ ಅಂಗನವಾಡಿಯಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ತನ್ಯಪಾನ ವಷರ್ಾಚರಣೆಯು 22 ವರ್ಷಗಳಿಂದ ನಡೆದುಕೊಂಡು ಬಂದು ಹಲವರಿಗೆ ಈ ಕಾರ್ಯಕ್ರಮದ ಮೂಲಕ ತಿಳುವಳಿಕೆ ನೀಡಿದರೂ ತಾಯಂದಿರು ಈಗಿನ ಆಧುನಿಕತೆಗೆ ಮಾರು ಹೋಗಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಕ್ಕಳಿಗೆ ಹಾಲುಣಿಸಲು ಬೇಜಾವಬ್ದಾರಿತನ ತೋರುತ್ತಿದ್ದು ಈಗೆ ತಾಯಂದಿರು ಹಾಲುಣಿಸದಿದ್ದರೆ ತಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ತಾವೇ ದುಶ್ಚಟಗಳಿಗೆ ದಾರಿ ತೋರಿದಂತಾಗುತ್ತದೆ ಎಂದ ಅವರು ಮಗುವಾದ ನಂತರ ಸುಮಾರು 6ತಿಂಗಳವರೆವಿಗೂ ತಮ್ಮ ಮಕ್ಕಳಿಗೆ ತಾಯಂದಿರು ಹಾಲುಣಸಬೇಕು ಎಂದು ಸಲಹೆ ನೀಡಿದರು. ಶಿಶು ಅಭಿವೃದ್ದಿ ಮೇಲ್ವಿಚಾರಕಿ ನಾಗರತ್ನ ಮಾತನಾಡಿ ಮಗು ಜನಿಸಿದ ಅರ್ಧ ಗಂಟೆಯೊಳಗೆ ತಾಯಂದಿರು ಮಗುವಿಗೆ ಹಾಲುಣಿಸಿದರೆ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ, ತಾಯಂದಿರು 2ವರ್ಷಗಳ ತನಕ ಮಗುವಿಗೆ ಹಾಲುಣಿಸಿದರೆ ಮಗುವು ಆರೋಗ್ಯವಾಗಿ ಬೆಳೆಯುತ್ತದೆ ಎಂದ ಅವರು ಆಗಷ್ಟ್ 1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು ಇಂತಹ ಕಾರ್ಯಕ್ರಮಗಳಿಗೆ ತಾಯಂದಿರು ಭಾಗವಹಿಸಿ ಸೂಕ್ತ ಸಲಹೆ ಪಡೆಯಬೇಕು ಎಂದರು. ಪುರಸಭೆ ಸದಸ್ಯೆ ಶಾರದ ಶಂಕರಬಾಬು ಮಾತನಾಡಿ ತಾಯಿಯ ಎದೆ ಹಾಲಿನಿಂದ ಮಗುವು ರೋಗ ನಿರೋಧಕ ಶಕ್ತಿ ಪಡೆಯಲಿದೆ ಹಾಗೂ ಮಗುವಿಗೆ ಹಾಲುಣಿಸುವುದರಿಂದ ತಾಯಿಯ ಹಾಗೂ ಮಗುವ ಭಾಂದವ್ಯ ಹೆಚ್ಚತ್ತದೆ ಎಂದರು.ಸಮಾರಂಭದಲ್ಲಿ ಪುರಸಭೆ ಸದಸ್ಯ ಧರಣಿಲಕ್ಕಪ್ಪ ಉಪಸ್ಥಿತರಿದ್ದರು.
ಆರಂಭಗೊಂಡ ದಕ್ಕಲಿಗ ಜಾತಿ ಸಮುದಾಯದ ರಾಜ್ಯ ಸಂಘಟನೆ ಚಿಕ್ಕನಾಯಕನಹಳ್ಳಿ,ಆ.04 : ತಾಲ್ಲೂಕಿನ ಚಿಕ್ಕೇನಹಳ್ಳಿ ಮಠದಲ್ಲಿ ನಡೆದ ಅಲೆಮಾರಿ ಬುಡಕಟ್ಟು ಮಹಾಸಭಾದ ಸಭೆಯಲ್ಲಿ ದಕ್ಕಲಿಗ ಜಾತಿ ಸಮುದಾಯದ ರಾಜ್ಯ ಸಂಘಟನೆ ಆರಂಭಗೊಂಡಿತು.ದಕ್ಕಲಿಗರ ರಾಜ್ಯ ಸಂಘಟನೆಯ ಸಂಚಾಲಕರಾಗಿ ಚಿಕ್ಕನಾಯಕನಹಳ್ಳಿ ಡಿ.ಶಾಂತರಾಜು, ಯಾದಗಿರಿಯ ಜಿಲ್ಲೆಯ ಮಲಕಪ್ಪ, ರಾಯಚೂರು ಜಿಲ್ಲೆಯ ಮಾರುತಿ ಆಯ್ಕೆಯಾದರು.ಬೆಂಗಳೂರಿನಲ್ಲಿ ಆಗಸ್ಟ್ನಲ್ಲಿ ನಡೆಯುವ ದಕ್ಕಲಿಗರ ಮಹಾ ಸಮಾವೇಶವನ್ನು ಸಂಗಟಿಸಲು ಸಭೆಯಲ್ಲಿ ತೀಮರ್ಾನಿಸಿದ್ದು ಜಿಲ್ಲಾ ಸಂಘಟನೆಗೆ ಡಾ.ರಘುಪತಿಯವರನ್ನು ಗೌರವ ಅಧ್ಯಕ್ಷರನ್ನಾಗಿ, ದೊರೈರಾಜ್ರವರನ್ನು ಸಂಘಟನೆಯ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಯಿತು.