Thursday, July 28, 2016


ಕಾನೂನು ಸಂಚಾರಿ ಸಾಕ್ಷರಥ ರಥಕ್ಕೆ ಚಾಲನೆ
ಚಿಕ್ಕನಾಯಕನಹಳ್ಳಿ,ಜು.28 : ಮನುಷ್ಯ ತನ್ನ ದಿನನಿತ್ಯದ ಬದುಕನ್ನು ಕಾನೂನಿನ ಮಿತಿಯ ಒಳಗಡೆಯೇ ನಡೆಸಬೇಕು, ನಿಯಮಗಳ ಸೂಕ್ಷ್ಮ ವಿಷಯಗಳನ್ನು ಅರಿತುಕೊಳ್ಳುವುದು ಅವಶ್ಯಕ  ಎಂದು ಪ್ರಧಾನ ಸಿವಿಲ್ ನ್ಯಾಯಾಧಿಶ ಸೋಮನಾಥ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಚಾಲನೆ ನೀಡಲಾಯಿತು.
 ದುಗಡಿಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಗ್ರಾಮಸ್ಥರಿಗೆ ಕಾನೂನು ಅರಿವು ನೆರವು ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ಕಾನೂನು ಸಂಚಾರಿ ರಥ ಸಂಚರಿಸುವ ಮೂಲಕ ಜನರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಹುಟ್ಟಿನಿಂದ ಸಾಯುವ ತನಕ ಕಾನೂನು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಮರಣ ಹೊಂದಿದ 7ದಿನಗಳ ಒಳಗೆ ಮರಣ ಪತ್ರವನ್ನು ಸಂಬಂದಪಟ್ಟ ಪುರಸಭೆ, ಗ್ರಾಮ ಪಂಚಾಯಿತಿಗೆ ನೀಡಿ ದೃಢೀಕರಣ ಪತ್ರ ಪಡೆಯಬೇಕು, ಅಪಘಾತವಾದ ಸಮಯದಲ್ಲಿ ವ್ಯಕ್ತಿಯನ್ನು ಬದುಕಿಸಲು ಕೈಲಾದ ಸಹಾಯ ಮಾಡಿ ಜೊತೆಗೆ ಅಪಘಾತವೆಸಗಿದ ಚಾಲಕನ ವಾಹನದ ಸಂಖ್ಯೆ  ಹಾಗೂ ವಾಹನ ಮಾಲೀಕರ ವಿವರವನ್ನು ಮುಚ್ಚಿಡದಂತೆ ಕಾನೂನಿನ ಗಮನಕ್ಕೆ ತರಬೇಕು ಎಂದರು.
ಸಹಾಯಕ ಸಕರ್ಾರಿ ಅಭಿಯೋಜಕ ಆರ್.ರವಿಚಂದ್ರ ಮಾತನಾಡಿ, ಯಾವುದೇ ವ್ಯಕ್ತಿ ಕಾನೂನು ತಿಳುವಳಿಕೆ ನನಗಿಲ್ಲ ಅಂತ ಅಪರಾದ ಕೃತ್ಯಗಳನ್ನು ಮಾಡಬಾರದು, ಬದುಕಿನ ನಿಯಮದಲ್ಲೇ ಕಾನೂನು ಅಳವಡಿಕೆಯಾಗಿರುತ್ತದೆ, ಮನುಷ್ಯನ ದುರಾಸೆಯಿಂದ ಹಣಗಳಿಸಿ  ಕಾನೂನಿಗೆ ಒಳಪಟ್ಟರೆ ದಂಡ ಕಟ್ಟಬೇಕಾಗುತ್ತದೆ, ವ್ಯವಹಾರ ಏನೇ ಮಾಡಲಿ ಅದಕ್ಕೆ ಸಂಬಂಧಿಸಿದ ಕಾನೂನು ಕಾಯ್ದೆಯ ನಿಯಮಗಳಿರುತ್ತವೆ ಅದನ್ನು ತಿಳಿಯಲು ಎಲ್ಲರೂ ವಿದ್ಯಾವಂತರಾಗಬೇಕು, ಮಕ್ಕಳಿಗೂ ಶಿಕ್ಷಣ ಕಡ್ಡಾಯವಾಗಿ ನೀಡಿ, ಶಿಕ್ಷಣ ಕೊಡಿಸಲು ಸಾಧ್ಯವಾಗದ ಕುಟುಂಬಸ್ಥರು ಉಚಿತ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಶಿಕ್ಷಣ ಪಡೆಯಲು ಸಹಕಾರ ಕೊರಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿಗಳಿಂದ ನಾಗರೀಕ ಸೌಲಭ್ಯ ಪಡೆಯುವುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎನ್.ಕೃಷ್ಣಮೂತರ್ಿ, ಸಹಾಯಕ ಸಂಚಾರಿ ಅಭಿಯೋಜಕ ಸಿ.ಬಿ.ಸಂತೋಷ್, ವಕೀಲ ಸಂಘದ ಅಧ್ಯಕ್ಷ ಟಿ.ಎಸ್.ಸೋಮಶೇಖರ್, ಕಾರ್ಯದಶರ್ಿ ಕೆ.ಎಂ.ಷಡಾಕ್ಷರಿ, ಬಿ.ಇ.ಓ ಕೃಷಮೂತರ್ಿ, ಸಿ.ಡಿ.ಪಿ.ಓ ತಿಪ್ಪಯ್ಯ, ಸಿ.ಪಿ.ಐ ಮಾರಪ್ಪ, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ವಿಜಿಯಮ್ಮ, ಉಪಾಧ್ಯಕ್ಷೆ ಪಾರ್ವತಮ್ಮ ದಯಾನಂದ್, ಮಲ್ಲೇಶಪ್ಪ ವಕೀಲರಾದ ಹೆಚ್.ಟಿ.ಹನುಮಂತಯ್ಯ, ಸಿ.ರಾಜಶೇಖರ್, ರತ್ನರಂಜಿನಿ, ಕಾರ್ಯದಶರ್ಿ ಗಂಗಾಧರ್, ರವಿಕುಮಾರ್, ದಿಲೀಪ್ ಮುಂತಾದವರು ಉಪಸ್ಥಿತರಿದ್ದರು. ಮಹದೇವಮ್ಮ ಪ್ರಾಥರ್ಿಸಿದರು. ಷಡಕ್ಷರಿ ಸ್ವಾಗತಿಸಿದರು. ಹನುಮಂತಯ್ಯ ನಿರೂಪಿಸಿದರು.
ಮಕ್ಕಳಿಗೆ ಸರಳ ಬೋಧನೆ ಅಗತ್ಯ : ಬಿಇಓ ಕೃಷ್ಣಮೂತರ್ಿ 
 ಚಿಕ್ಕನಾಯಕನಹಳ್ಳಿ,ಜು.28: ಶಿಕ್ಷಕರು ತಾವು ತಿಳಿದ ವಿಷಯವನ್ನು ಸರಳವಾಗಿ ವಿದ್ಯಾಥರ್ಿಗಳಿಗೆ ತಲುಪಿಸುವ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು.ಅದರಲ್ಲೂ ಗ್ರಾಮಾಂತರ ಮಕ್ಕಳಿಗೆ ಇಂಗ್ಲೀಷ್ ಬೋಧಿಸುವ ಶಿಕ್ಷಕರು ಸರಳ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
  ತಾಲ್ಲೂಕಿನ ಹಂದನಕೆರೆ ಹೋಬಳಿ ದೊಡ್ಡೆಣ್ಣೆಗೆರೆ ಗವಿರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ತಾಲ್ಲೂಕು ಆಂಗ್ಲಭಾಷಾ ಶಿಕ್ಷಕರಿಗಾಗಿ ನಡೆದ ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಅನಿವಾರ್ಯವಾಗಿದೆ. ಅಂತೆಯೇ ಕಲಿಕಾ ತಂತ್ರಗಳೂ ವಿಪುಲವಾಗಿವೆ. ಆಧುನಿಕ ತಂತ್ರಜ್ಞಾನವನ್ನು ಬೋಧನೆಯಲ್ಲಿ ಬಳಸಿಕೊಳ್ಳುವ ಮೂಲಕ ಸರಳವಾಗಿ ಭಾಷೆ ಕಲಿಸಬಹುದು ಎಂದರು.
  ಸಂಪನ್ಮೂಲ ವ್ಯಕ್ತಿ ಎಂ.ಪಿ.ಬಾಲಾಜಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಶಿಕ್ಷಕರು ಮಕ್ಕಳಲ್ಲಿ ಇರುವ ಇಂಗ್ಲಿಷ್ ಭಯವನ್ನು ಹೋಗಲಾಡಿಸಬೇಕು. ಭಾಷೆ ಭಯ ಹೋಗಲಾಡಿಸಲು ಪೂರಕ ವಾತಾವರಣ ನಿಮರ್ಿಸಿಕೊಳ್ಳಬೇಕು. ಭಾಷಾ ಶುದ್ಧತೆಕಡೆ ಗಮನ ಕೊಡಬೇಕು. ದಿನ ನಿತ್ಯ ಬಳಕೆಯಾಗುವ ಪದ ಸಂಪತ್ತಿನ ಬಗ್ಗೆ ಗಮನ ಹರಿಸಬೇಕು. ಸಂದಭರ್ೋಚಿತವಾಗಿ ಮಕ್ಕಳ ಜತೆ ಸಂವಹನ ನಡೆಸಬೇಕು ಎಂದರು.
  ಕಾರ್ಯಕ್ರಮದಲ್ಲಿ ತಾಲ್ಲೂಕು ಇಂಗ್ಲಿಷ್ ಭಾಷಾ ಬೊಧಕರ ಸಂಘದ ಅಧ್ಯಕ್ಷ ಬಿ.ಎಸ್.ನಟರಾಜ್, ಖಜಾಂಚಿ ದೇವರಾಜ್, ಮುಖ್ಯೋಪಾಧ್ಯಾಯ ಬಸವಲಿಂಗಪ್ಪ,ಸಂಘದ ಪದಾಧಿಕಾರಿಗಳಾದ  ಮಾಧವ್, ಕೆ.ವಿ.ನಟರಾಜ್, ಓಂಕಾರ್ ಮುಂತಾದವರು ಹಾಜರಿದ್ದರು.