Monday, July 21, 2014


     ವಿಕಲ ಚೇತನ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ

ಚಿಕ್ಕನಾಯಕನಹಳ್ಳಿ,ಜು.21 : ವಿಕಲ ಚೇತನ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಅವರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಪ್ರೇರಿಪಿಸುವುದು ಪೋಷಕರ ಹಾಗೂ ಶಿಕ್ಷಕರ ಕರ್ತವ್ಯ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಲತಾಕೇಶವಮೂತರ್ಿ ಹೇಳಿದರು.
                             
 ಪಟ್ಟಣದ ಬಿ.ಆರ್.ಸಿ. ಕಛೇರಿಯಲ್ಲಿ 2014-15ನೇ ಸಾಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತ ಸಂಬಂಧದಲ್ಲೇ ಮದುವೆಗಳನ್ನು ಪುನರಾವತರ್ಿತವಾಗಿ ಆಗುವುದರಿಂದ ಅಂಗ ವೈಕಲ್ಯಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಆದ್ದರಿಂದ ಪೋಷಕರು ದುಡುಕದೆ ಸಕರ್ಾರದ ನಿಯಮದಂತೆ ಮದುವೆ ಮಾಡಿದರೆ ಅವರ ಮುಂದಿನ ಜೀವನ ಉತ್ತಮವಾಗಿರುತ್ತದೆ ಎಂದರು.
 ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ತಾಲ್ಲೂಕಿನಲ್ಲಿ 253 ಶಾಲಾ ಮಕ್ಕಳು ನಾನಾ ಕಾರಣಗಳಿಂದ ಶಾಲೆ ಬಿಟ್ಟಿದ್ದು, ಈ ಪೈಕಿ 252 ಶಾಲೆ ಬಿಟ್ಟ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗಿದೆ ಎಂದರಲ್ಲದೆ,  ಕೆಲವು ಕುರಿಗಾಯಿ ಹಾಗೂ ಕೂಲಿ ಕಾಮರ್ಿಕರ ಮಕ್ಕಳು ಪೋಷಕರ ಜೊತೆಯಲ್ಲಿ ಗುಳೇ ಹೋಗಿದ್ದು ಅವರ ಮಕ್ಕಳನ್ನು ಆಯಾ ಭಾಗದ ಶಿಕ್ಷಕರ  ಗಮನಕ್ಕೆ ತರುವ ಮೂಲಕ ಶಾಲೆಗೆ ಕರೆತರಲಾಗಿದೆ. ವಿಕಲಚೇತನ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳುವುದು ಸಮಾಜದ ಜನಪ್ರತಿನಿಧಿಗಳು ಹಾಗೂ ಪೋಷಕರ ಕರ್ತವ್ಯ ಎಂದ ಅವರು,  ಮಕ್ಕಳಲ್ಲಿರುವ ದೌರ್ಬಲ್ಯವನ್ನು ಶಿಕ್ಷಕರು ಗುರುತಿಸಿ ಅಂತಹ ಮಕ್ಕಳಿಗೆ ಅಗತ್ಯವಾದ ಚಿಕಿತ್ಸೆ ಹಾಗೂ ಪರಿಕರಗಳನ್ನು ನೀಡಲಾಗುವುದು ಎಂದರು.
 ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಮಾತನಾಡಿದ ಅವರು, ಗಭರ್ಿಣಿ ಸ್ತ್ರೀಯರಲ್ಲಿ ಅಪೌಷ್ಠಿಕ ಆಹಾರ ಸೇವನೆ, ಗಂಡು ಹೆಣ್ಣು ವಯಸ್ಸಿಗೆ ಬರುವ ಮೊದಲೇ ಮದುವೆ ಮಾಡುವುದು, ಸಂಬಂಧಗಳಲ್ಲಿ ಮದುವೆಯಾಗುವುದರಿಂದಲೂ ಮಕ್ಕಳ ವಿಕಲಚೇತನರಾಗಿ ಹುಟ್ಟುವರು ಎಂದರು.
 ಶಿಬಿರದಲ್ಲಿ 30ಬುದ್ದಿಮಾಂದ್ಯ ಮಕ್ಕಳಿಗೆ ಹಾಗೂ 37 ದೈಹಿಕ ನ್ಯೂನ್ಯತೆ ಇರುವ ಮಕ್ಕಳು, 18ಶ್ರವಣ ನ್ಯೂನ್ಯತೆಯ ಹಾಗೂ 10 ದೃಷ್ಠಿದೋಷ ಸೇರಿ ಒಟ್ಟು 101 ವಿಕಲಚೇತನ ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು. ನಂತರ ನ್ಯೂನ್ಯತೆಗೆ ತಕ್ಕಂತೆ ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
 ಹುಬ್ಬಳ್ಳಿಯ ಮನೋವಿಕಾಸ ಬುದ್ದಿಮಾಂಧ್ಯ ಕೇಂದ್ರದ ವೈದ್ಯರಾದ ಡಾ.ಸಾವಿತ್ರಿ, ಡಾ.ಅನುಷ, ಡಾ.ವಿರೂಪಾಕ್ಷ, ಡಾ.ಬನ್ಸಿ, ಡಾ.ಕುಮಾರ್ ಹಾಗೂ ಡಾ.ಕರಿಯಪ್ಪ ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದರು.
 ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ ಉದ್ಘಾಟಿಸಿದರು. ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸಂಯೋಜಕರಾದ ನಾಗರಾಜು, ರಾಜಶೇಖರ್, ಸಿ.ಆರ್.ಪಿ.ದುರ್ಗಯ್ಯ,ರಾಜಣ್ಣ, ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ದಿನಾಚಾರಣೆ ವಿಜೃಂಭಣೆಯಿಂದ ಆಚರಿಸಲು ತೀಮರ್ಾನ

ಚಿಕ್ಕನಾಯಕನಹಳ್ಳಿ : ಆಗಸ್ಟ್ 15ರಂದು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚಾರಣೆಯನ್ನು ವಿಜೃಂಭಣೆಯಿಂದ ನಡೆಸಲು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ತೀಮರ್ಾನಿಸಲಾಯಿತು.
 ಸ್ವಾತಂತ್ರ ದಿನಾಚಾರಣೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಾದ ಚಿ.ನಾ.ಹಳ್ಳಿ ದೊಡ್ಡಟ್ಟಿ ಹನುಮಂತಯ್ಯ, ಗಾಣದಾಳುವಿನ ಸೂಲಗಿತ್ತಿ ನೈರೂಭಿ, ಚಿ.ನಾ.ಹಳ್ಳಿ ಮೂಲದವರಾಗಿದ್ದು, ಲಿವರ್ ಕಸಿ ವೈದ್ಯರಾದ ಡಾ.ಸುಶೃತ್ರವರನ್ನು ಸನ್ಮಾನಿಸಲು ಸಭೆ ತೀಮರ್ಾನಿಸಿತು.
 ದಿನಾಚಾರಣೆಯ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ ಧ್ವಜಾರೋಹಣ ಸಂದೇಶ ತಿಳಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ವಿವಿಧ ಗಣ್ಯರು ಉಪಸ್ಥಿತರಿರುವರು.
 ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ, ತಹಶೀಲ್ದಾರ್ ಕಾಮಾಕ್ಷಮ್ಮ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಮಹಮದ್ ಖಲಂದರ್ಸಾಬ್, ಹೆಚ್.ಬಿ.ಪ್ರಕಾಶ್, ಸಿ.ಪಿ.ಮಹೇಶ್, ತಾ.ಪಂ.ಸದಸ್ಯೆ ಚೇತನಗಂಗಾಧರ್, ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. 
 ರಾಷ್ಟ್ರೀಯ ಹಬ್ಬಗಳ ಬಗ್ಗೆ ನಡೆಯುವ ಸಭೆಗೆ ಗೈರುಹಾಜರಾದ ಮೀನುಗಾರಿಕೆ ಇಲಾಖೆ, ಎ.ಪಿ.ಎಂ.ಸಿ ಹಾಗೂ ಜಲಾನಯನ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ತಹಶೀಲ್ದಾರ್ ಕಾಮಾಕ್ಷಮ್ಮರವರಿಗೆ ಸೂಚಿಸಿದರು.

ಚಿ.ನಾ.ಹಳ್ಳಿಗೆ ಲೋಕಾಯುಕ್ತರ ಭೇಟಿ
ಚಿಕ್ಕನಾಯಕನಹಳ್ಳಿ,ಜು.21 : ತುಮಕೂರು ಜಿಲ್ಲಾ ಲೋಕಾಯುಕ್ತ ಪೋಲಿಸ್ ನಿರೀಕ್ಷಕರು ಜುಲೈ 23ರಂದು ಬುಧವಾರ ಮಧ್ಯಾಹ್ನ 3ರಿಂದ 5ರವರೆಗೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರಗೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಆದ್ದರಿಂದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.