Friday, June 22, 2012


ವೀರಶೈವ ಧರ್ಮಗ್ರಂಥ ಸಿದ್ದಾಂತ ಶಿಖಾಮಣಿ ರಷ್ಯಾ ಭಾಷೆಯಲ್ಲಿ ಬಿಡುಗಡೆ
    
ಚಿಕ್ಕನಾಯಕನಹಳ್ಳಿ,ಜೂ.22 : ಇದುವರೆಗೂ ಹಿಂದಿ, ಇಂಗ್ಲೀಷ್, ತಮಿಳು, ಮರಾಠಿ ಭಾಷೆಗಳಲ್ಲಿ ಇದ್ದ ಶ್ರೀ ಸಿದ್ದಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥವನ್ನು ರಷ್ಯಾ ಭಾಷೆಗೆ ತಜರ್ುಮೆಗೊಳಿಸುವ ಮೂಲಕ ರಷ್ಯಾ ದೇಶದ ಜನರಿಗೆ ವೀರಶೈವ ಧರ್ಮದ ಪವಿತ್ರ ಗ್ರಂಥದ ಆಚಾರ ವಿಚಾರ ಹಾಗೂ ಶಿವಯೋಗಗಳನ್ನು ಅರಿಯುವ ಮೌಲ್ಯ ದೊರಕಿದೆ ಎಂದು ಕಾಶಿ ಜಗದ್ಗುರು ಜಂಗಮವಾಡಿ ಮಠದ ಡಾ.ಚಂದ್ರಶೇಖರ ಶಿವಾಚಾರ್ಯಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನ ಕುಪ್ಪೂರು ಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಷ್ಯಾ ದೇಶದ ಮಾಸ್ಕೋ ನಗರದಲ್ಲಿ ಇದೇ ಜೂನ್ 2ರ 2012ರಂದು ತಜರ್ುಮೆಗೊಂಡ ಭಾರತೀಯ ಮೂಲ ಸಂಸ್ಕೃತಿ ಗ್ರಂಥವಾದ ಸಿದ್ದಾಂತ ಶಿಖಾಮಣಿ ಬಿಡುಗಡೆಗೊಂಡಿದೆ, ಈ ಗ್ರಂಥಕ್ಕೆ ರಷ್ಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಗ್ರಂಥದಲ್ಲಿರುವ ಯೋಗದ ಆಕರ್ಷಣೆಗೆ ಪಾಶ್ಚಿಮಾತ್ಯ ದೇಶಗಳಲ್ಲೂ ಆಕರ್ಷಣೆ ಹೆಚ್ಚುತ್ತಿದೆ. 
ಕಳೆದ 2ವರ್ಷದಿಂದ ಈ ಗ್ರಂಥದ ಬಗ್ಗೆ ಅನುವಾದ ಮಾಡಿದ ಉಗಂಡ ದೇಶದ ಯೂಲಿಯಾ ಗ್ರಂಥವನ್ನು ರಷ್ಯಾ ಭಾಷೆಗೆ ತಜರ್ುಮೆಗೊಳಿಸಿದ್ದಾರೆ. ಇವರು ಮೂಲತಹ ಸಾಪ್ಟ್ವೇರ್ ಇಂಜನಿಯರ್ ಆಗಿದ್ದು ಭಾರತ ದೇಶದ ಸಂಸ್ಕೃತ, ಹಿಂದಿ ಭಾಷೆಯ ಬಗ್ಗೆ ತಿಳಿದಿದ್ದಾರೆ.
ಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿ ಆರತಿ ಯೋಗ ವಿದ್ಯೆ ಬಗ್ಗೆ ತಿಳಿಸಲಾಗಿದೆ, ರಷ್ಯಾದಲ್ಲಿ ದೀಕ್ಷೆ ಪಡೆದ ಎಲ್ಲರೂ ಮಾಸ ಶಿವರಾತ್ರಿಯಂದು ಒಂದು ಕಡೆ ಸೇರಿ ಸಾಮೂಹಿಕ ಲಿಂಗ ಪೂಜೆ ಮಾಡುವ ಪರಿಪಾಠ ಮಾಡಿಕೊಂಡಿದ್ದಾರೆ.
ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ದೇಶ-ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಇರುವ ಗ್ರಂಥವನ್ನು ಆ ಭಾಷೆಗೆ ತಜರ್ುಮೆಗೊಳಿಸುವ ಮೂಲಕ ಸಂಸ್ಕೃತಿ ಹೆಚ್ಚಾಗಿ ಪ್ರಚಾರವಾಗಬೇಕು ಎಂದರು.
ಬೆಳೆಸಿರಿ ಟ್ರಸ್ಟ್ವತಿಯಿಂದ ನೋಟ್ ಬುಕ್ ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.22 : ತಾಲ್ಲೂಕಿನ ಲಕ್ಮೇನಹಳ್ಳಿ ಜನತಾ ಕಾಲೋನಿಯ 1ರಿಂದ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಶಾಲಾ ವಿದ್ಯಾಥರ್ಿಗಳಿಗೆ ಬೆಳೆಸಿರಿ ಟ್ರಸ್ಟ್ ವತಿಯಿಂದ ನೋಟ್ ಬುಕ್ ವಿತರಣೆ ಮಾಡಲಾಯಿತು.
ನಿವೃತ್ತ ನೌಕರರ ಸಂಘದ ಉಪಾದ್ಯಕ್ಷ ನಂಜುಂಡಪ್ಪ, ನಿವೃತ್ತ ಶಿಕ್ಷಣ ತರಬೇನಹಳ್ಳಿ ಕುಮಾರಸ್ವಾಮಿ, ಮುಖ್ಯೋಪಾಧ್ಯಾಯ ಮಂಜುನಾಥ್, ಟ್ರಸ್ಟ್ನ ನಿದರ್ೇಶಕ ಸಿ.ಹೆಚ್.ನಾಗರಾಜು, ನಿವೃತ್ತ ಸಹಾಯಕ ನಿದರ್ೇಶಕರು ಬಡವಿದ್ಯಾಥರ್ಿಗಳಿಗೆ  ನೋಟ್ಬುಕ್ ವಿತರಿಸಿದರು.
ಕನಕ ವಿದ್ಯಾಭಿವೃದ್ದಿ ನಿಧಿಯಿಂದ ವಿದ್ಯಾಥರ್ಿಗಳಿಗೆ ವಿವಧ ಸವಲತ್ತು ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.22 : ಪ್ರತಿಭಾ ಪುರಸ್ಕಾರ, ಉಚಿತ ನೋಟ್ಬುಕ್ ವಿತರಣೆ, ಕಾಲೇಜು ಶುಲ್ಕ ಪಾವತಿ ಸಹಾಯಧನ ವಿತರಣಾ ಸಮಾರಂಭವನ್ನು ಇದೇ 24ರ ಭಾನುವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ ಎಂದು ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಸಮಾರಂಭವನ್ನು ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ವತಿಯಿಂದ ಪಟ್ಟಣದ ಕನಕ ಭವನದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಬಿ.ಸಿ.ಎಂ. ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್, ಬಿ.ಇ.ಓ ಸಾ.ಚಿ.ನಾಗೇಶ್, ಮಾಜಿ ಪುರಸಭಾಧ್ಯಕ್ಷ ಸಿ.ಬಸವರಾಜು, ಕಂಬಳಿ ಸೊಸೈಟಿ  ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕನಕ ವಿದ್ಯಾಭಿವೃದ್ದಿ ಸಮಿತಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಉಪಸ್ಥಿತರಿರುವರು.
ಪುರಸಭೆಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಚಾಲನೆಗೆ ಗೃಹ ಸಚಿವರು ಚಿ.ನಾ.ಹಳ್ಳಿಗೆ
ಚಿಕ್ಕನಾಯಕನಹಳ್ಳಿ,ಜೂ.22 : ಪಟ್ಟಣದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭವನ್ನು ಇದೇ 27ರ ಬುಧವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಅಂದು ವಾಡರ್್ ನಂ.23ರಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನ ಶಂಕುಸ್ಥಾಪನೆ, ಸಂತೆ ಮೈದಾನ ಕಾಮಾಗಾರಿ ಶಂಕುಸ್ಥಾಪನೆ, ಪುರಸಭೆ ಸಭಾಂಗಣ ಕಟ್ಟಡ ನಿಮರ್ಾಣ ಶಂಕುಸ್ಥಾಪನೆ, ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗಡಿ ಮಳಿಗೆಗಳ ಮತ್ತು ಸುಲಭ ಶೌಚಾಲಯ ಉದ್ಘಾಟನೆ, ವಾಡರ್್ ನಂ.17ರ ಮುಸ್ಲಿಂ ಬ್ಲಾಕ್ ಮಾಂಸ ಮಾರಾಟದ ಮಾರುಕಟ್ಟೆ ಮತ್ತು 19ನೇ ವಾಡರ್್ನ ಸಾರ್ವಜನಿಕ ಶೌಚಾಲಯ ಉದ್ಘಾಟನೆ ನೆರವೇರಲಿದೆ. 
ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ನೆರವೇರಿಸಲಿದ್ದು, ಗೃಹ ಸಚಿವ ಆರ್. ಅಶೋಕ, ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ,  ಸಂಸದ ಜಿ.ಎಸ್.ಬಸವರಾಜು ಆಗಮಿಸಲಿರುವ ಈ ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸುವರು ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರುಗಳು, ಜಿ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಶಾಸಕರುಗಳು, ಪುರಸಭಾ ಸದಸ್ಯರುಗಳು ಸೇರಿದಂತೆ ಹಲವರು ಗಣ್ಯರು  ಸಭೆಯಲ್ಲಿ ಹಾಜರಿರುವರು ಎಂದು ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ ತಿಳಿಸಿದ್ದಾರೆ.

ತಾ.ಬಿ.ಜೆ.ಪಿ ವತಿಯಿಂದ ಕೇಂದ್ರ ಸಕರ್ಾರದ ಆಥರ್ಿಕ ನೀತಿಯ ವಿರುದ್ದ ರಸ್ತ ತಡೆ 


ಚಿಕ್ಕನಾಯಕನಹಳ್ಳಿ,ಜೂ.22 : ಬ್ರಿಟೀಷರ ಆಳ್ವಿಕೆಯ ದಬ್ಬಾಳಿಕೆಯು ಕೇಂದ್ರದ ಯುಪಿಎ ಸಕರ್ಾರದ ಮೂಲಕ ಮತ್ತೆ ಮುಂದುವರಿದೆ, ಪೆಟ್ರೋಲ್ ಬೆಲೆ ಹೆಚ್ಚಳ, ಹಾಗೂ ತಪ್ಪು ಆಥರ್ಿಕ ನೀತಿಯನ್ನು ಜಾರಿಗೊಳಿಸುತ್ತಾ ದೇಶದ ಜನರಿಗೆ ಬರೆ ಎಳೆಯುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಕೇಂದ್ರ ಸಕರ್ಾರದ ವಿರುದ್ದ ಕಿಡಿಕಾರಿದರು.
ಪಟ್ಟಣದ ನೆಹರು ಸರ್ಕಲ್ ಬಳಿ ಭಾಜಪ ಕಾರ್ಯಕರ್ತರು ಕೇಂದ್ರ ಸಕರ್ಾರದ ಆಥರ್ಿಕ ನೀತಿ ಹಾಗೂ ರಾಜಕೀಯ ನಿದರ್ಾರಗಳನ್ನು ವಿರೋಧಿಸಿ ಜನಸಂಘರ್ಷ ಅಭಿಯಾನ ಹಾಗೂ ಜೈಲ್ ಭರೋ ಕಾರ್ಯಕ್ರಮದ ಮೂಲಕ ಪಟ್ಟಣದಲ್ಲಿ ರಸ್ತೆ ತಡೆ ಏರ್ಪಡಿಸಿದ್ದರು.
ಪೆಟ್ರೋಲ್ ಬೆಲೆ ಜಾಸ್ತಿ ಆದಂತೆಲ್ಲಾ ಪ್ರತಿ ಬೆಲೆಯೂ ಹೆಚ್ಚುತ್ತಿದೆ, ಇದಕ್ಕೆ  ದೇಶದ ಎಲ್ಲಾ ಸಂಘ ಸಂಸ್ಥೆಗಳು, ಜನಸಾಮಾನ್ಯರು ಖಂಡಿಸಬೇಕು ಎಂದು ಕೆ.ಎಸ್.ಕೆ ತಿಳಿಸಿದರು.
ತಾಲ್ಲೂಕು ಭಾಜಪ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬೆಲೆ ಏರಿಕೆಯಾಗುತ್ತಿದೆ, 2004ರಿಂದ ಯುಪಿಎ ಸಕರ್ಾರ ದಿನನಿತ್ಯ ವಸ್ತುಗಳ ಬೆಲೆ ಏರಿಸಿರುವುದು ಸಕರ್ಾರದ ಸಾಧನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಜಪ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತರಾಮಯ್ಯ, ಪಕ್ಷದ ಕಾರ್ಯದಶರ್ಿಗಳಾದ ಕವಿತಾಕಿರಣ್ಕುಮಾರ್, ಸುರೇಶ್ಹಳೆಮನೆ, ತಾ.ಪಂ.ಸದಸ್ಯ ಕೆಂಕೆರೆ ನವೀನ್, ಎಂ.ಎಂ.ಜಗದೀಶ್, ಎಂ.ಎಸ್.ರವಿಕುಮಾರ್  ಎಬಿವಿಪಿ ಚೇತನ್ಪ್ರಸಾದ್ ಸೇರಿದಂತೆ ಭಾಜಪ ಕಾರ್ಯಕರ್ತರು ಉಪಸ್ಥಿತರಿದ್ದರು.