Friday, February 5, 2016

ಸಾಹಿತಿ ಸಾ.ಶಿ.ಮರುಳಯ್ಯನವರು ನಿಧನ ತಾಲ್ಲೂಕಿಗೂ ತುಂಬಲಾರದ ನಷ್ಟ
ಚಿಕ್ಕನಾಯಕನಹಳ್ಳಿ: ಸಾಹಿತಿ ಸಾ.ಶಿ.ಮರುಳಯ್ಯನವರು ನಿಧನದಿಂದ ಒಬ್ಬ ಶ್ರೇಷ್ಟ ಕವಿ ಹಾಗೂ ಸಾಹಿತಿಯನ್ನು ಕಳೆದುಕೊಂಡಿರುವುದು ರಾಜ್ಯಕ್ಕೂ ಹಾಗೂ ತಾಲ್ಲೂಕಿಗೂ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿ ಎಮ್.ವಿ.ನಾಗರಾಜ ರಾವ್ ವಿಷಾದಿಸಿದರು.
ಪಟ್ಟಣದ ನೆಹರು ವೃತ್ತದಲ್ಲಿ ನಡೆದ ಸಾಹಿತಿ ಸಾಶಿ. ಮರುಳಯ್ಯನವರ ಶ್ರದ್ದಾಂಜಲಿ ಸಭೆಯಲ್ಲಿ ಮಾತಾನಾಡಿ,  85 ವರ್ಷ ತುಂಬು ಜೀವನ ನಡೆಸಿದ ಡಾ|| ಸಾ.ಶಿ.ಮರುಳಯ್ಯನವರು  ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ವಿಸ್ತರಿಸಲು ರಾಜ್ಯಾದ್ಯಾಂತ ಓಡಾಡಿದ ಮೇರು ಚೇತನವಾಗಿದ್ದರು. ಡಾ|| ಸಾ.ಶಿ.ಮರುಳಯ್ಯನವರು ಸಾಹಿತಿಯಾಗಿ ಕವಿಯಾಗಿ, ವಾಗ್ಮಿಯಾಗಿ, ಉತ್ತಮ ಆಡಳಿತಗಾರರಾಗಿ ಜನಪ್ರಿಯರಾಗಿದ್ದರು. ಕುಪ್ಪೂರು ಮಠದ ಬಗ್ಗೆ ಸಾ.ಶಿ.ಮರುಳಯ್ಯರವರು ಅವಿನಾಭಾವ ಸಂಬಂಧ ಹೊಂದಿದ್ದರು ಅವರ ನಿಧನದಿಂದ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ಸಾ.ಶಿ.ಮರವರ ಆತ್ಮಕ್ಕೆ ಶಾಂತಿ ಕೋರಿದರು ಅವರ ಕುಟುಂಬ ದುಃಖ ಭರಿಸುವಂತಾಗಲಿ ಎಂದರು..
ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಸಾ.ಶಿ.ಮರುಳಯ್ಯನವರು ಇಡೀ ತಾಲ್ಲೂಕು ಹೆಮ್ಮೆ ಪಡುವಂತಹ ವ್ಯಕ್ತಿತ್ವ ಹೊಂದಿದ್ದರು ಅವರ ಸಾಧನೆಯಿಂದ ತಾಲ್ಲೂಕಿನ ಹೆಸರು ರಾಜ್ಯಾದ್ಯಂತ ಚಾಲ್ತಿಯಲ್ಲಿತ್ತು, ಸಾಶಿಮರವರು ಕ್ರಿಯಾಶೀಲ ವ್ಯಕ್ತಿಯಾಗಿದ್ದರು ಅವರು ಭಾಗವಹಿಸಿದ ಸಮ್ಮೇಳನ, ಗೋಷ್ಠಿಗಳಲ್ಲಿ ಯುವ ಸಾಹಿತಿಗಳಿಗೆ ಸಂಚಲನ ಮೂಡುತ್ತಿತ್ತು ಹಾಗೂ ಅವರಿಗೆ ಸ್ಪೂತರ್ಿಯಾಗಿದ್ದರು ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಸಾ.ಶಿ.ಮ.ರವರ ಜನ್ಮದಿನದಂದು ಶೆಟ್ಟೀಕೆರೆಯಲ್ಲಿ ತಾ.ಕಸಾಪ ವತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ನೆನೆಸಿಕೊಂಡರು.
ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ಸಾ.ಶಿ.ಮರುಳಯ್ಯನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯ ಬೆಳೆಯಲು ಅವರ ಕೊಡುಗೆಯೂ ಇದೆ,  ಅಮೇರಿಕಾ ಹಾಗೂ ಶ್ರೀಲಂಕದಲ್ಲೂ ಕನ್ನಡವನ್ನು ವಿಸ್ತರಿಸುವಂತಹ ಕೆಲಸವನ್ನು ಮಾಡಿದ್ದಾರೆ. ಹಾಗೂ ಪ್ರಪ್ರಥಮವಾಗಿ ಐ.ಎ.ಎಸ್.ನ್ನು ಕನ್ನಡ ಮಾಧ್ಯಮದಲ್ಲಿ ಬರೆಯುವವರಿಗೆ ತರಬೇತಿಯನ್ನು ನೀಡಿದ್ದರು, ಅದರ ಮೌಲ್ಯಮಾಪಕರಾಗಿಯೂ ಕೆಲಸ ಮಾಡಿದ್ದಾರೆ  ಮತ್ತು ಕೆ.ಎ.ಎಸ್ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸವನ್ನು ಮಾಡಿದ್ದಾರೆ., ತಮ್ಮ ಹುಟ್ಟೂರಾದ ಸಾಸಲಿನಲ್ಲಿ  'ತವರೂರ ಬಾಗಿನ' ಎಂಬ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಸಾ.ಶಿ.ಮರುಳಯ್ಯನವರು ಸಾವಿನಲ್ಲೂ ತಮ್ಮ ಮೇರು ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಜಿ.ಎಸ್.ಎಸ್ ವೈದ್ಯಕೀಯ ಮಹಾವಿಶ್ವ ವಿದ್ಯಾನಿಲಯಕ್ಕೆ ತಮ್ಮ ದೇಹವನ್ನು ದಾನ ಮಾಡಿದ್ದಾರೆ.ಕುಪ್ಪೂರು ಗದಿಗೆ ಮಠದ ಭಕ್ತಾರಾಗಿ ಸಾಸಲು ಗ್ರಾಮಕ್ಕೆ ಭೇಟಿ ನೀಡಿದಾಗ ಗದ್ದಿಗೆಗೆ ಬಂದು ತಪ್ಪದೇ ಹೋಗುತ್ತಿದ್ದರು, ತಾಲ್ಲೂಕು ಸಾಸಲುನಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷರಾಗಿ ಸಮರ್ಥವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಪ್ರೇಮದೇವರಾಜು, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ,  ಸದಸ್ಯ ಹೆಚ್.ಬಿ.ಪ್ರಕಾಶ್, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ ಸಂತಾಪ ಸೂಚಿಸಿದರು.
ಸಂತಾಪ ಸಭೆಯಲ್ಲಿ ಕುಂಚಾಕುಂಕರ ಕಲಾಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್, ಪತ್ರಕರ್ತರುಗಳಾದ ವಿ.ಆರ್.ಮೇರುನಾಥ್, ಮಂಜುನಾಥ್ರಾಜ್ಅರಸ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಸವಿತಾ ಸಮಾಜದ ಅಧ್ಯಕ್ಷ ಸುಪ್ರಿಂಸುಬ್ರಹ್ಮಣ್ಯ, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಕಸಾಪ ಹೆಚ್.ಬಿ.ಕುಮಾರ್, ಶ್ರೀನಿವಾಸಮೂತರ್ಿ, ಕೆ.ಜಿ.ಕೃಷ್ಣೆಗೌಡ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಹುಟ್ಟೂರಿನ ವರದಿ:  ನಾಡಿನ ಹೆಮ್ಮೆಯ ಪುತ್ರ ಸಾ.ಶಿ.ಮರಳಯ್ಯ ನವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯ ಗ್ರಾಮಸ್ಥರು ನೀರವ ಮೌನಕ್ಕೆ ಶರಣಾಯಿತು, ಅಬಾಲ ವೃದ್ದರಾಗಿ ಎಲ್ಲರೂ ಸಾಶಿಮ ಹುಟ್ಟಿದ ಮನೆಯ ಬಳಿ ಬಂದು ಕಂಬನಿ ಮಿಡಿದರು, ದುಃಖ ಮುಡುಗಟ್ಟಿತ್ತು. ಹಿರಿಯ ಜೀವಗಳು ಅಲ್ಲಿನ ಜನರೊಂದಿಗೆ ತಮ್ಮ ಹಳೆಯ ನೆನಪಿನಂಗಣದ ನುಡಿಯನ್ನು ಹಂಚಿಕೊಳ್ಳುತ್ತಿದ್ದರು.
ಗ್ರಾಮದ ಸಕರ್ಾರಿ ಪ್ರೌಢಶಾಲೆ ಕಟ್ಟಿಸುವಲ್ಲಿ ಅವರ ತೆಗೆದುಕೊಂಡ ಕಾಳಜಿ ಹಾಗೂ ದಾನಿಗಳಿಂದ ಕಾಮಗಾರಿ ಕೊಡಿಸಿದ ಧನಸಹಾಯದ ನೆರವನ್ನು ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು ಸ್ಮರಿಸಿಕೊಂಡರೆ, ಶಾಲಾ ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ಮೌನ ಆಚರಿಸಿ ಶಾಲೆಗೆ ರಜೆ ಘೋಷಿಸಿದರು. ಸಾಶಿಮರವರ ಇಚ್ಚೆಯಂತೆ ಅವರ ಪಾಥರ್ಿವ ಶರೀರವನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜ್ಗೆ ದಾನ ಮಾಡುತ್ತಾರೆಂಬ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ಹಲವರು ಪಾಥರ್ಿವ ಶರೀರರದ ಅಂತಿಮ ದರ್ಶನ ಪಡೆಯಲು ಬೆಂಗಳೂರಿನ ಕಡೆ ಹೊರಟರು.
ಗಣ್ಯರ ನುಡಿ ನಮನ: 
ಡಾ.ಸಾ.ಶಿ.ಮರುಳಯ್ಯನವರು ತಮ್ಮ ಅಪಾರ ಪಾಂಡಿತ್ಯದಿಂದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇಡೀ ರಾಷ್ಟ್ರದಲ್ಲಿ ಹೆಸರು ಮಾಡಿದ ವ್ಯಕ್ತಿತ್ವ ಅವರದ್ದು, ಅವರಿಂದಾಗಿ ನಮ್ಮ ತಾಲೂಕು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ, ಅವರು ದೈಹಿಕವಾಗಿ ಇಲ್ಲವೆಂಬದು  ಸಾಕಷ್ಟು ನೋವು ತಂದಿದೆ. ಅವರ ಹೆಸರು ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿದೆ ಅದೇ ರೀತಿ  ತಾಲೂಕಿನಲ್ಲೂ ಅವರ ನೆನಪು  ಶಾಶ್ವತವಾಗಿ ಉಳಿಯವಂತೆ ಮಾಡುವ ಕರ್ತವ್ಯ ನಮ್ಮದು.
ಸಿ.ಬಿ.ಸುರೇಶ್ಬಾಬು,  ಶಾಸಕರು. ಚಿಕ್ಕನಾಯಕನಹಳ್ಳಿ.

ಡಾ.ಸಾ.ಶಿ.ಮರುಳಯ್ಯನವರು ಸಾಹಿತ್ಯ, ಶಿಕ್ಷಣ ಹಾಗೂ ಗ್ರಾಮೀಣ ವಿದ್ಯಾಥರ್ಿಗಳಿಗೆ ರಾಷ್ಟ್ರ, ರಾಜ್ಯ ಮಟ್ಟದ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುವ ವಿದ್ವಾಂಸರಾಗಿದ್ದರು,  ಅವರ ಸಾವು ಈ ಎಲ್ಲಾ ಕ್ಷೇತ್ರಗಳಿಗೆ ಅಷ್ಟೇ ಅಲ್ಲ, ನಾಡಿಗೆ ಭರಿಸಲಾರದ ನಷ್ಟವನ್ನುಂಟು ಮಾಡಿದೆ, ಕುಪ್ಪೂರು ಗದ್ದಿಗೆ ಮರಳಸಿದ್ದೇಶ್ವರ ಮಠದ ಶ್ರೀರಕ್ಷೆಯಲ್ಲಿ ಬೆಳೆದ ಅವರ ವ್ಯಕ್ತಿತ್ವ  ಮತ್ತು ಕೌಟಂಬಿಕ ಜೀವನದಿಂದಾಗಿ ಶ್ರೀಮಠದ ನಿಕಟ ಸಂಪರ್ಕದಲ್ಲಿದ್ದರು. ಅವರ ಸೇವೆ ನಾಡಿನ ಅನೇಕ ಮಠಗಳಿಗೂ ಸಂದಿದೆ. 
    ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ. ಕುಪ್ಪೂರು ಗದ್ದಿಗೆ ಶ್ರೀಮರಳುಸಿದ್ದೇಶ್ವರ ಮಠ. 
ಸಾ.ಶಿ. ಮರುಳಯ್ಯನವರ ನಿಧನದಿಂದ ಕನ್ನಡ ಸರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಘಿದೆ ರಾಜ್ಯದ  ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಸಾಶಿಮ ಮಿತ ಭಾಷೆಯಾಗಿ ಆದರ್ಶವಾದ ವ್ಯಕ್ತಿತ್ವವನ್ನು ಹೊಂದಿದ್ದರು ಇಂದಿನ ಯುವ ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು ಇನ್ನೂ ಹಲವಾರು ವರ್ಷಗಳ ಕಾಲ ನಮ್ಮ ಜೊತೆಯಲ್ಲಿದ್ದು ಸಾಹಿತ್ಯ ಕೃಷಿಯನ್ನು ಮಾಡಬೇಕಾಗಿತ್ತು.              

                           ತಮ್ಮಡಿಹಳ್ಳಿ ,ವಿರಕ್ತ ಮಠದ ಡಾ|| ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮೀಜಿ.
ಸಾಶಿಮರುಳಯ್ಯರವರು ಬಡತನದಿಂದ ಬಂದವರು ವಾರನ್ನ ಮಾಡಿಕೊಂಡು ವಿದ್ಯಾಬ್ಯಾಸ ಮಾಡಿದ್ದರು ಕುಪ್ಪೂರು ಗದ್ದಿಗೆ ಮಠ ತಿಪಟೂರು ಗುರುಕುಲ ಹಾಗೂ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು ರಾಜ್ಯ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಐಎ.ಎಸ್. ಹಾಗೂ ಕೆ.ಎ.ಎಸ್ ವಿದ್ಯಾಥರ್ಿಗಳಿಗೆ ಪಾಠ ಮಾಡಿದ್ದಾರೆ ಇವರ ಸಾಹಿತ್ಯ ಕೃಷಿ ಮಾಡಿ  ರಾಜ್ಯದಲ್ಲಿ ಉತ್ತಮ ಸಾಹಿತಿಗಳಾಗಿದ್ದಾರೆ. ಚಿ.ನಾಹಳ್ಳಿ ತಾಲ್ಲೂಖಿನ ತಿ.ನಂ.ಶ್ರೀ ಕಂಠಯ್ಯ ಬಿಟ್ಟರೇ. ಸಾಶಿಮರುಳಯ್ಯನವರು ತಾಲ್ಲೂಕಿಗೆ ಉತ್ತಮ ಹೆಸರು ತಂದುಕೊಟ್ಟವರು. 

                                         ಜೆ.ಸಿ ಮಾಧುಸ್ವಾಮಿ ಮಾಜಿ ಶಾಸಕರು, ಚಿಕ್ಕನಾಯಕನಹಳ್ಳಿ.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಡಾ.ಸಾ.ಶಿ.ಮರುಳಯ್ಯನವರು,  ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿದ್ದಾಗ ಪ್ರಥಮವಾಗಿ ಅವರ ಹುಟ್ಟೂರಿನ ಸಾಸಲು ಗ್ರಾಮದಲ್ಲಿ ಸಮ್ಮೇಳನ ನಡೆಸಲಾಗಿತ್ತು, ಸಾ.ಶಿ.ಮರುಳಯ್ಯನವರು ಊರಿನ ಸ್ನೇಹಿತರಾಗಿ, ಗ್ರಾಮದ ಆಸ್ತಿಯಾಗಿದ್ದರು, ಚಿಕ್ಕಮಗುವಿನಿಂದ ಹಿಡಿದು ದೊಡ್ಡವರಿಗೂ ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲಾ ಜನಾಂಗದ ಮಕ್ಕಳನ್ನು ಎತ್ತಿ ಆಡಿಸುತ್ತಿದ್ದರು, ಹಳ್ಳಿಗೆ ಬಂದಾಗ ನಾಟಕ, ಮನೋರಂಜನೆ ಹಾಗೂ ಎಲ್ಲರ ಜೊತೆಯಲ್ಲಿ ಹರಟೆ ಹೊಡೆಯುತ್ತಿದ್ದರು ಸಾಸಲು ಗ್ರಾಮಕ್ಕೆ ಸಕರ್ಾರಿ ಪ್ರೌಡಶಾಲೆಯನ್ನು ತರಲು ಶ್ರಮಿಸಿದರು, ಗ್ರಾಮದ ಹಳೇ ಬನಶಂಕರಿ ದೇವಾಲಯವನ್ನು 3ಕೋಟಿ ವೆಚ್ಚದಲ್ಲಿ ಮರುನಿಮರ್ಾಣಕ್ಕೆ ತುಂಬ ಸಹಕಾರ ನೀಡಿದರು, ಇವರ ಅಗಲಿಕೆಯಿಂದ ತಾಲ್ಲೂಕು ಒಬ್ಬ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡಂತಾಗಿದೆ.
                              ಆಡಿಟರ್ ಚಂದ್ರಶೇಖರ್, ಗ್ರಾಮಸ್ಥರು, ಸಾಸಲು. 



ರಾಜ್ಯದ ಹೆಸರಾಂತ ಸಾಹಿತಿ ಡಾ.ಸಾ.ಶಿ.ಮರುಳಯ್ಯನವರು
ಚಿಕ್ಕನಾಯಕನಹಳ್ಳಿ : ರಾಜ್ಯದ ಹೆಸರಾಂತ ಸಾಹಿತಿಯಾಗಿದ್ದ ತಾಲ್ಲೂಕಿನ ಸಾಸಲು ಗ್ರಾಮದ ಡಾ.ಸಾ.ಶಿ.ಮರುಳಯ್ಯನವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಶುಕ್ರವಾರ ನಿಧನ ಹೊಂದಿದ್ದಾರೆ.
ಸಾ.ಶಿ.ಮರುಳಯ್ಯನವರು ಸಾಸಲು ಗ್ರಾಮದಲ್ಲಿ 1931ರಲ್ಲಿ ತಂದೆ ಶಿವರುದ್ರಪ್ಪ, ತಾಯಿ ಸಿದ್ದಮ್ಮನವರ ಮಗನಾಗಿ ಜನಿಸಿದರು, ಸಾಸಲು ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಶೆಟ್ಟಿಕೆರೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ತಿಪಟೂರಿನಲ್ಲಿ ಪ್ರೌಡಶಿಕ್ಷಣ, ಚಿತ್ರದುರ್ಗದಲ್ಲಿ ಪಿ.ಯು.ಸಿ, ಮೈಸೂರು ಮಹರಾಜ ಕಾಲೇಜಿನಲ್ಲಿ ಬಿ.ಎ, ಹಾನರ್ಸ್, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ ಪದವಿ ನಂತರ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದು ನಂತರ ತುಮಕೂರು ದಾವಣಗೆರೆ, ಮಂಗಳೂರು, ಬೆಂಗಳೂರು ಸೇರಿದಂತೆ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ, 1995ರಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 1998ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಡಾ.ಸಾ.ಶಿ.ಮರುಳಯ್ಯನವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು, ದೇವರಾಜು ಬಹದ್ದೂರು ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ 2015ರಲ್ಲಿ ನಾಡಪ್ರಭು ಕೆಂಪೆಗೌಡ ಪ್ರಶಸ್ತಿಯನ್ನು ಪಡೆದಿದ್ದಾರೆ.
ಡಾ.ಸಾ.ಶಿ.ಮರುಳಯ್ಯನವರಿಗೆ ಎರಡು ಗಂಡು, ಒಬ್ಬ ಮಗಳಿದ್ದು, ಮೊದಲನೆ ಮಗ ಶಿವಪ್ರಸಾದ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಎರಡನೇ ಮಗ ರವಿ ಅಮೇರಿಕಾದ ಕ್ಯಾಲಿಪೋನರ್ಿಯಾದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, ಮಗಳು ರಾಗಿಣಿ ಅಮೇರಿಕಾದಲ್ಲಿ ಗಂಡನ ಮನೆಯಲ್ಲಿದ್ದಾರೆ.