Friday, October 8, 2010

ಚುನಾಯಿತ ಸಂಘಕ್ಕೆ ಮಾತ್ರ ಅಧಿಕಾರ: ಜಿಲ್ಲಾಧ್ಯಕ್ಷ
ಚಿಕ್ಕನಾಯಕನಹಳ್ಳಿ,ಅ.08: ಕೇವಲ ಕೈಲಾಗದವರು ಸ್ವಯಂ ಘೋಷಿತ ಶಿಕ್ಷಕರ ಸಂಘ ರಚಿಸಿಕೊಂಡಿದ್ದು ಅವರ ಸ್ವಂತ ಸಮಸ್ಯೆ ಬಗೆಹರಿಸಲು ಸಾದ್ಯವಿಲ್ಲದಿರುವಾಗ ಶಿಕ್ಷಕರ ಸಮಸ್ಯೆ ಬಗೆಹರಿಸಲು ಹೇಗೆ ಸಾದ್ಯ ಎಂದು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಪ್ರಶ್ನಿಸಿದ್ದಾರೆ.
ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬುದ್ದಿವಂತ ಶಿಕ್ಷಕರು ಚುನಾಯಿಸಿ ಅಧಿಕಾರಕ್ಕೆ ಶಿಕ್ಷಕರ ಸಂಘ ಒಡೆದು ಸಂಘದ ಶಿಕ್ಷಕರನ್ನು ಬೇರೆ ಕಡೆ ಸೆಳೆಯಲು ಸಾದ್ಯವಿಲ್ಲವೆಂದು ಮತ್ತು ನಾಲ್ಕು ತಿಂಗಳಿಂದ ಒದ್ದಾಡಿ ಸಂಘದ ಉದ್ಘಾಟನೆಗೆ ಕೇವಲ 88ಜನ ಶಿಕ್ಷಕರು ಬಂದಿದ್ದರು ಆದರೆ ಚುನಾಯಿತ ಸಂಘದ ಸಂತೋಷ ಕೂಟದ ಸಮಾರಂಭಕ್ಕೆ ಹಾಗೂ ಸಂಘಟನೆಯ ಸಂಘಕ್ಕೆ ಬಲಯುತವಾಗಿ ತಾಲೂಕಿನಿಂದ ಶಿಕ್ಷಕರೆಲ್ಲರೂ ಸೇರಿ 800 ಜನ ಶಿಕ್ಷಕರು ಸೇರಿದ್ದಾರೆ, ಇಷ್ಟು ಜನ ಶಿಕ್ಷಕರು ಸೇರಿರುವುದೇ ನಮ್ಮ ಶಿಕ್ಷಕರ ಸಂಘಟನೆಗೆ ಸಾಕ್ಷಿಯಾಗಿದ್ದು ತಾಲೂಕಿನ ಎಲ್ಲಾ ಶಿಕ್ಷಕರು ಬಹಳ ಅಭಿಮಾನದಿಂದ ನಮ್ಮ ಸಂಘಕ್ಕೆ ಸಹಕಾರ ನೀಡುತ್ತಿದ್ದಾರೆ ಅದಕ್ಕಾಗಿ ಎಲ್ಲರಿಗೂ ಅಭಾರಿಯಾಗಿ ಸದಾ ಸೇವೆ ಮಾಡಲು ಸಿದ್ದನಿದ್ದೇನೆ ಎಂದ ಅವರು ರಾಜ್ಯದಿಂದ ಬಂದ ವಿರೋಧಿ ಬಣದ ರಮಾದೇವಿ ಸೋತು ಸುಣ್ಣವಾಗಿ ನೆಲೆ ಇಲ್ಲದೆ ಒದ್ದಾಡುತ್ತಿದ್ದಾರೆ ಅವರ ಸಂಘಕ್ಕೆ ಮಾನ್ಯತೆ ಕೊಡಬೇಡಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ತಾ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ಚುನಾವಣೆಯಿಂದ ಗೆದ್ದ ಸಂಘಕ್ಕೆ ಮಾನ್ಯತೆ ಇದ್ದು ಆ ಸಂಘ ಮಾತ್ರ ಶಿಕ್ಷಕರ ಬೇಕು ಬೇಡಿಕೆ ಈಡೇರಿಸುವುದಕ್ಕೆ ಸಾಧ್ಯ, ದಿನಕ್ಕೆ ಸಾವಿರ ಸಂಘ ಹುಟ್ಟುತ್ತವೆ ಸಾವಿರ ಸಂಘ ಸಾಯುತ್ತವೆ ನಮ್ಮ ಸಂಘ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ ಎಂದರು.
ಕುಣಿಗಲ್ ತಾಲೂಕಿನ ರಾಜ್ಯ ಪದಾಧಿಕಾರಿ ನಾಗರಾಜು ಮಾತನಾಡಿ ಹೊಸ ಸಂಘ ಪ್ರಾರಂಭ ಮಾಡುತ್ತಿರುವ ರಮಾದೇವಿ, ಗೋಪಿನಾಥ್, ಬಿ.ಎಲ್.ಬಸವರಾಜು ನಮ್ಮ ಸಂಘದಲ್ಲಿ ಸೋತು ಸುಣ್ಣವಾಗಿ ಭ್ರಷ್ಟಾಚಾರ ಮಾಡಿ ನಿಲ್ಲಲು ನೆಲೆ ಇಲ್ಲದೆ ಹೊಸ ಸಂಘಕ್ಕೆ ಹೋಗಿದ್ದಾರೆ ಎಂದ ಅವರು ಮಾಜಿ ಅಧ್ಯಕ್ಷರಾದ ಗೋಪಿನಾಥ್ 3ಸಾರಿ ಅಮಾನತ್ತುಗೊಂಡಿದ್ದರು ಅಂತವರು ಶಿಕ್ಷಕರನ್ನು ಕಾಪಾಡಲು ಹೇಗೆ ಸಾಧ್ಯವಿಲ್ಲ ಎಂದರು.
ಜಿಲ್ಲಾ ಸಂಘಟನಾ ಕಾರ್ಯದಶರ್ಿ ಚುಡಾಮಣಿ ಮಾತನಾಡಿ ತಿಳಿಗೇಡಿಗಳು ಮಾಡುವ ಸಂಘಕ್ಕೆ ಬೆಲೆ ಇಲ್ಲ, ಅಧ್ಯಕ್ಷರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು ಶಿಕ್ಷಕರು ಅವರ ಜೊತೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.
ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಘುನಾಥ್, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ರಾಜ್ಯ ಶಿಕ್ಷಕ ಸಂಘದ ಉಪಾಧ್ಯಕ್ಷ ಶೋಭಾ, ಷಣ್ಮುಖ, ತಿಮ್ಮಯ್ಯ, ರಾಮಚಂದ್ರಯ್ಯ, ನರಸಿಂಹಮೂತರ್ಿ, ಗೊರವಣ್ಣ, ಎನ್.ಪ್ರಕಾಶ್, ಜಯರಾಮಯ್ಯ, ಸಿದ್ದರಾಮಣ್ಣ, ಪುಟ್ಟರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಾರದಮ್ಮ,ವಿಜಯಲಕ್ಷ್ಮಮ್ಮ ಪ್ರಾಥರ್ಿಸಿದರೆ, ಶಶಿಧರ್ ಎಸ್,ಎನ್ ಸ್ವಾಗತಿಸಿ, ಪಲ್ಲಕ್ಕಿ ಬಸವರಾಜು ನಿರೂಪಿಸಿ, ನಟರಾಜು ವಂದಿಸಿದರು.

ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಅ.08: ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 12ರ ಮಂಗಳವಾರ ಬೆಳಿಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಸಂಸದ ಜಿ.ಎಸ್.ಬಸವರಾಜು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಡಾ.ಎ.ಎಚ್.ಶಿವಯೋಗಿಸ್ವಾಮಿ, ವೈ.ವಿ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕುಸುಮ ಜಗನ್ನಾಥ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕ ಟಿ.ಗಂಗಾಧರಯ್ಯ, ಪುರಸಭಾಧ್ಯಕ್ಷ ಸಿ.ಎಸ್.ರಾಜಣ್ಣ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿರುವರು ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.