Tuesday, July 27, 2010

ಕುಪ್ಪೂರು ಶ್ರೀ ಹುಟ್ಟು ಹಬ್ಬವನ್ನು ತಾಲೂಕಿನ ನೀರಾವರಿ ಹೋರಾಟದ ದಿನವಾಗಿ ಆಚರಣೆ
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಇದೇ ಸಂದರ್ಭದಲ್ಲಿ ತಾಲೂಕಿನ ನೀರಾವರಿ ಹೋರಾಟದ ರೂಪುರೇಷೆಗಳನ್ನು ಚಚರ್ಿಸಲಾಗುವುದು ಎಂದು ರೈತ ಸಂಘದ ಮುಖಂಡ ಸತೀಶ್ ಕೆಂಕೆರೆ ಹಾಗೂ ಡಾ.ಪರಮೇಶ್ ತಿಳಿಸಿದ್ದಾರೆ.
ಕುಪ್ಪೂರು ಶ್ರೀ ಮರುಳುಸಿದ್ದೇಶ್ವರ ಗದ್ದಿಗೆ ಸಂಸ್ಥಾನ ಮಠಾಧ್ಯಕ್ಷರಾ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳ 36ನೇ ಹುಟ್ಟು ಹಬ್ಬವನ್ನು ಇದೇ 29ರ ಗುರುವಾರ ಕುಪ್ಪೂರಿನಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ತಾಲೂಕಿಗೆ ನದಿಪಾತ್ರಗಳಿಂದ ನೀರು ತರುವ ವಿಷಯವಾಗಿ ಚಚರ್ಿಸಲು 63 ಸಂಘಟನೆಗಳು ಭಾಗವಹಿಸಲಿವೆ ಎಂದು ಸತೀಶ್ ತಿಳಿಸಿದರು.
ತಾಲೂಕಿಗೆ ನೀರು ತರುವ ವಿಷಯವಾಗಿ ಹುಳಿಯಾರಿನಲ್ಲಿ 70 ದಿನಗಳ ಸುದೀರ್ಘ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಲ್ಲದೆ, ನೀರಾವರಿ ಸಚಿವರ ಬಳಿಯೂ ನಿಯೋಗ ತೆರಳಿ ಈ ಬಗ್ಗೆ ಸಕರ್ಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು, ಆ ಸಂದರ್ಭದಲ್ಲಿ ಸಚಿವರ ನೀಡಿದ ವಾಗ್ದಾನದಂತೆ ಕೆಲಸವಾಗಿರುವುದಿಲ್ಲ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಆಸಕ್ತಿವಹಿಸಿರುವುದಿಲ್ಲ, ಆದ್ದರಿಂದ ಮುಂದಿನ ನಮ್ಮ ನಡೆಯ ಬಗ್ಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳೊಂದಿಗೆ ಮತ್ತೊಮ್ಮೆ ಚಚರ್ಿಸುವ ಕುಪ್ಪೂರು ಶ್ರೀಗಳ ಹುಟ್ಟು ಹಬ್ಬದ ದಿನದಂದು ಕುಪ್ಪೂರಿನಲ್ಲಿ ಸಭೆ ಕರೆಯಲಾಗಿದೆ ಎಂದು ಸತೀಶ್ ಕೆಂಕೆರೆ ಹಾಗೂ ಡಾ.ಪರಮೇಶ್ವರ ತಿಳಿಸಿದ್ದಾರೆ.
ಶಿಕ್ಷಕರ ಸಂಘದ ಒಗ್ಗಟ್ಟನ್ನು ಹೊಡೆಯಬೇಡಿ ಸಂಘದ ಪದಾಧಿಕಾರಿಗಳ ಮನವಿ
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಕೆಲವು ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಧನೆಗಳನ್ನು ತಿಳಿದರೂ ಸಹ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಶಿಕ್ಷಕರಲ್ಲಿ ತಪ್ಪು ಕಲ್ಪನೆ ಮೂಡಿಸಿ ಸಂಘದ ಬಗ್ಗೆ ಅಪಪ್ರಚಾರ ಮಾಡಿ ಪಯರ್ಾಯ ಸಂಘ ರಚಿಸುತ್ತೇವೆಂದು ಶಿಕ್ಷಕರ ಹಾಗೂ ಸಂಘದ ಒಗ್ಗಟ್ಟನ್ನು ವಿಭಜಿಸಲು ಹೊರಟಿದ್ದಾರೆಂದು.ಪ್ರಾ.ಶಾ.ಶಿ. ಸಂಘದ ತಾಲೂಕು ಅಧ್ಯಕ್ಷ ಎಚ್.ಎಮ್.ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸಂಘದ ವಿರುದ್ದವಾಗಿ ರಾಜ್ಯಮಟ್ಟದಲ್ಲಿ ಹಲವಾರು ಸಂಘಗಳು ಉದಯವಾಗುತ್ತಿದೆ ಇವೆಲ್ಲಾ ಸೂಯರ್ೊದಯಕ್ಕೆ ಉದಯವಾಗಿ ಸೂಯೂಸ್ತ ಸಮಯಕ್ಕೆ ಅಸ್ತಂಗತವಾಗುತ್ತವೆ ಇದರಿಂದಾಗಿ ಈ ಸಂಘಗಳು ಶಿಕ್ಷಕರ ಪರವಾಗಿ ಹೋರಾಟ ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ಟೀಕಿಸಿರುವ ಅವರು, ನಮ್ಮ ಸಂಘವು ಚುನಾವಣೆಯ ನಂತರ ಒಂದು ವರ್ಷದಲ್ಲಿ ಪರಿಹಾರ ಭೋಧನೆಯನ್ನು ಶಾಲಾ ಅವಧಿಯಲ್ಲಿಯೇ ಮಾಡುವಂತೆ ಮತ್ತು ಅಕ್ಟೋಬರ್ ರಜೆ ಅವದಿಯು ಕಡಿತವಾಗಿದ್ದನ್ನು ಮೊದಲಿನಂತೆಯೇ ರಜೆ ಅವಧಿಯನ್ನು ನಿಗಧಿ ಪಡಿಸುವಂತೆ ಆದೇಶ ಮಾಡುವಲ್ಲಿ ನಮ್ಮ ಸಂಘ ಯಶಸ್ವಿಯಾಗಿದೆ, ಎಲ್ಲಾ ಶಿಕ್ಷಕರಿಗೂ ತಿಂಗಳ ಮೊದಲನೇ ವಾರದಲ್ಲಿ ವೇತನ ನೀಡಿ ಯಾವುದೇ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದೆ.
ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಶಿಕ್ಷಕರಿಗೆ ನಿವೇಶನ ಕೊಡಿಸುವುದರ ಮೂಲಕ ಪ್ರತಿ ತಾಲೂಕಿನಲ್ಲಿ ಶಿಕ್ಷಕರ ಬಡಾವಣೆ ನಿಮರ್ಿಸುವ ಪ್ರಯತ್ನ ಮಾಡಿದರೂ ಸಹ ಕೆಲವು ಮಂದಿ ಶಿಕ್ಷಕರು ಬೇರೆ ಬೇರೆ ಸಂಘ ಸ್ಥಾಪಿಸುತ್ತೇವೆಂದು ನಮ್ಮ ಸಂಘಕ್ಕೆ ಬೆಂಬಲ ನೀಡಿ ಎಂದು ಸಹಿ ಸಂಗ್ರಹಿಸಿರುವುದರಲ್ಲಿ ನಿರತರಾಗಿರುವುದು ಸಂಘದ ಗಮನಕ್ಕೆ ಬಂದಿದ್ದು ಯಾವುದೇ ರೀತಿಯಲ್ಲಿ ಇಂತಹ ಅನಾಮಧೇಯ ಸಂಘಟನೆಗಳ ಮನವಿಗೆ ಕಿವಿಗೊಡದೆ ಹಾಗೂ ಸಹಿ ಹಾಕಲು ನಿರಾಕರಿಸುವುದರ ಮೂಲಕ ಸಂಘಟನಾ ಶಕ್ತಿಯನ್ನು ಬಲಪಡಿಸಬೇಕೆಂದು ಉಪಾಧ್ಯಕ್ಷ ಎಸ್.ಸಿ.ನಟರಾಜ್, ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ್, ಸಂಘಟನಾ ಕಾರ್ಯದಶರ್ಿ ಶಾಂತಮ್ಮ, ಸಹಕಾರ್ಯದಶರ್ಿ ಎಲ್.ಅನಸೂಯಮ್ಮ ವಿನಂತಿಸಿದ್ದಾರೆ.
ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಸಾವು.
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಗಾಂಧಿನಗರ ಕೈಮರದ ಬಳಿ ಕೃಷಿ ಹೊಂಡಕ್ಕೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಕೋಡಿಪಾಳ್ಯದ ಗಂಗಾಧರಯ್ಯ ಎಂಬುವರಿಗೆ ಸೇರಿದ ಈ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಗೌಡನಕಟ್ಟೆಯ ಗೌರಮ್ಮ(45) ಎಂದು ಗುರುತಿಸಲಾಗಿದೆ, ಪಾಶ್ರ್ವವಾಯು ಪೀಡಿತಳಾದ ಈಕೆ ಮಾನಸಿಕವಾಗಿ ನೊಂದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಹಂದನಕೆರೆ ಪಿ.ಎಸೈ. ಟಿ.ವಿ.ರಾಜು ಪ್ರಕರಣ ದಾಖಲಿಸಿದ್ದಾರೆ.
ಬಿ2ಬಿ ಪಾದಯಾತ್ರೆಗೆ ಬಿ.ಸಿ.ಸಿ. ಪಾದಾರ್ಪಣೆ
ಚಿಕ್ಕನಾಯಕನಹಳ್ಳಿ,ಜು.27: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಬೆಂಗಳೂರು ಬಳ್ಳಾರಿ ಪಾದಯಾತ್ರೆಯಲ್ಲಿ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಭಾಗವಹಿಸುವುದಾಗಿ ಅಧ್ಯಕ್ಷ ಸಿ.ಬಸವರಾಜು ಹೇಳಿಕೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯ ವಿರುದ್ದ ಸಿ.ಬಿ.ಐ.ಗೆ ವಹಿಸುವಂತೆ ಒತ್ತಾಯಿಸುವುದು ಹಾಗೂ ಬಿ.ಜೆ.ಪಿ.ಸಕರ್ಾರದ ವೈಫಲ್ಯದ ವಿರುದ್ದ ಹಾಗೂ ನಾಡಿನ ರಕ್ಷಣೆಗಾಗಿ ಕೆ.ಪಿ.ಸಿ.ಸಿ.ಆಯೋಜಿಸಿರುವ ಈ ಪಾದಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ನ ಜನಾಂದೋಲನ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆಯನ್ನು ಒಳಗೊಂಡ ಸಾಮೂಹಿ ನಾಯಕತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಯಶಸ್ವಿಗಾಗಿ ಹಳ್ಳಿ ಹಳ್ಳಿಯಿಂದ ಸ್ವಯಂ ಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯರುಗಳಾದ ಸಿ.ಪಿ.ಮಹೇಶ್, ಬಾಬು ಸಾಹೇಬ್, ಧರಣಿ ಲಕ್ಕಪ್ಪ, ರೇಣುಕ ಗುರುಮೂತರ್ಿ, ಎಚ್.ಬಿ.ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೇಗೌಡ, ಚಿ.ಲಿಂ.ರವಿಕುಮಾರ್, ಶಿವಕುಮಾರಸ್ವಾಮಿ, ನಿಜಾನಂದಮೂತರ್ಿ, ರಾಮಕೃಷ್ಣಯ್ಯ, ಸಿ.ಎಂ.ಬೀರಪ್ಪ, ಸೇರಿದಂತೆ ಹಲವು ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಹಿಸಿದ್ದರು.


Sunday, July 25, 2010

Saturday, July 24, 2010


ಪ್ರತಿಭೆಗಳ ಭವಿಷ್ಯ ಬೆಳಗಿಸಲು ಸ್ಪಧರ್ೆಗಳನ್ನು ಏರ್ಪಡಿಸಲು ನಾಯಕರು ಮುಂದೆ ಬರಬೇಕು
ಚಿಕ್ಕನಾಯಕನಹಳ್ಳಿ,ಜು.24: ಪ್ರತಿಭೆಗಳನ್ನು ಗುರುತಿಸುವ ಮತ್ತು ಅವರ ಭವಿಷ್ಯವನ್ನು ಬೆಳೆಗಿಸುವ ಉತ್ತಮ ಕಾರ್ಯವು ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇಲ್ಲಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಸ್ಪಧರ್ಿಗಳು ಗೆಲುವು-ಸೋಲು ಎರಡು ಒಂದೇ ಮುಖಗಳೆಂದು ಭಾವಿಸಿ ಉತ್ತಮ ನೃತ್ಯಪ್ರದರ್ಶನವನ್ನು ನೀಡಿ ಮನರಂಜನೆ ಕೊಡಬೇಕು ಎಂದ ಅವರು ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆಯಲ್ಲಿ ಇನ್ನಿತರ ಸಣ್ಣಪುಟ್ಟ ಕಾರ್ಯಕ್ರಮ ನಡೆದು ಜಾತ್ರೆಯನ್ನು ಇನ್ನೂ ಹೆಚ್ಚು ಜನಪ್ರಿಯಗೊಳಿಸಬೇಕು ಎಂದರು.
ಕರಿಸಿದ್ದೇಶ್ವರ ಮಠದ ಶಿವಪ್ರಕಾಶ್ಶಿವಚಾರ್ಯಸ್ವಾಮಿ ಮಾತನಾಡಿ ಸ್ಪಧರ್ಿಗಳು ಸ್ಪಧರ್ೆಗೆ ಭಾಗವಹಿಸುವುದರ ಜೊತೆಗೆ ತಮ್ಮ ಪ್ರತಿಭೆಯಿಂದ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಅನ್ನಪೂರ್ಣಕಲಾ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪುರಸಭಾ ಸದಸ್ಯ ಸಿ.ಟಿ.ವರದರಾಜು, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಕುಶಾಲ್ ಗಾಮರ್ೆಂಟ್ಸ್ ಮಾಲೀಕ ಶಾಂತಕುಮಾರ್, ರವಿಚಂದ್ರ, ಶಶಿಕುಮಾರ್ ಉಪಸ್ಥಿತರಿದ್ದರು.
ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ನೆರವಾಗಬೇಕು
ಚಿಕ್ಕನಾಯಕನಹಳ್ಳಿ,ಜು.24 ಮಕ್ಕಳ ಭವಿಷ್ಯ ಮತ್ತು ಅವರ ಪ್ರಗತಿಗೆ ಸಕರ್ಾರ ರೂಪಿಸಿರುವ ಕಾರ್ಯಕ್ರಮಗಳ ಜೊತೆಗೆ ಪೋಷಕರು ನೆರವಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಪ್ರಸನ್ನರಾಮೇಶ್ವರ ದೇವಾಲಯದಲ್ಲಿ ನಡೆದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ಮಕ್ಕಳು ಪುಣ್ಯವಂತರು, ಸಕರ್ಾರದ ಹಲವಾರು ಯೋಜನೆಗಳು ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದು ಉನ್ನತ ಶಿಕ್ಷಣ ಪಡೆಯಬೇಕು ಎಂದರಲ್ಲದೆ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಬೇಕು ಎಂದರು.
ಸಮಾರಂಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಉಪಸ್ಥಿತರಿದ್ದರು.
ವಿದ್ಯುತ್ ಸಮಸ್ಯೆ ನೀಗಿಸಲು ಮನವಿ
ಚಿಕ್ಕನಾಯಕನಹಳ್ಳಿ,ಜು.24:ತಾಲೂಕಿನ ಗಾಂಧಿನಗರದ ನಿವೇಶನಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ಹೊತ್ತು ಹಾವು ಹಾಗೂ ಕಾಡು ಹಂದಿಗಳ ಹಾವಳಿ ಹೆಚ್ಚಾಗಿ ತುಂಬಾ ತೊಂದರೆ ಅನುಭವಿಸಿತ್ತಿದ್ದೇವೆ ಎಂದು ಗಾಂದಿನಗರದ ನಿವಾಸಿಗಳು ಪತ್ರಿಕೆಯ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗಾಂಧಿನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಿವೇಶನ ಪತ್ರಗಳನ್ನು ನೀಡಿದ್ದು ಅದರ ಜೊತೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು, ವಿದ್ಯುತ್ ಸಂಪರ್ಕವು ಗಾಂಧಿನಗರದಲ್ಲಿ ಇಲ್ಲದೆ ಹಲವಾರು ಪ್ರಾಣಿಗಳಿಂದ ಜನರ ಪ್ರಾಣಕ್ಕೆ ಸಂಚಕಾರವಿದೆ ಮತ್ತು ಇಲ್ಲಿನ ವಿದ್ಯಾಥರ್ಿಗಳಿಗೆ ರಾತ್ರಿ ಹೊತ್ತು ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ ಈ ಸಮಸ್ಯೆಯನ್ನು ಪರಿಹರಿಸಲು ಅಲ್ಲಿನ ನಿವಾಸಿಗಳು ಪುರಸಭೆಯವರನ್ನು ಕೋರಿದ್ದಾರೆ.




Friday, July 23, 2010



ಮಹಿಳಾ ಸ್ವಸಹಾಯ ಗುಂಪುಗಳಿಂದ ತಯಾರಿಸದ ಉತ್ಪನ್ನಗಳ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಜು.22: ಸಮಗ್ರ ಶಿಶು ಅಭಿವೃದ್ದಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಉಪವಿಭಾಗ ಮಟ್ಟದ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವು ಇದೇ ಜುಲೈ 23ರಿಂದ 25ರವರಗೆ ನಡೆಯಲಿದೆ.
ಮೇಳದ ಉದ್ಘಾಟನ ಸಮಾರಂಭವು ಜುಲೈ 23ರ ಶುಕ್ರವಾರ ಮಧ್ಯಾಹ್ನ 12-30ಕ್ಕೆ ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಆವರಣದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ತಿಪಟೂರು ಶಾಸಕ ಬಿ.ಸಿ.ನಾಗೇಶ್ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಜಿ.ಪಂ.ಸದಸ್ಯರಾದ ಜಯಮ್ಮದಾನಪ್ಪ, ರಘುನಾಥ್ ಹೆಚ್.ಬಿ.ಹೊನ್ನಯ್ಯ, ಸುಶೀಲಸುರೇಂದ್ರಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಿ, ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ಲಿಂಗದೇವರು, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿದರ್ೇಶಕ ಹೆಚ್.ಕೆ.ದಾಸಪ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ಡಾ.ವಿ.ವೇದಮೂತರ್ಿ ಉಪಸ್ಥಿತರಿರುವರು.
ಜಾತ್ರೆಯ ಪ್ರಯುಕ್ತ ಸಂಪೂರ್ಣ ರಾಮಾಯಣ ನಾಟಕ
ಚಿಕ್ಕನಾಯಕನಹಳ್ಳಿ,ಜು.22: ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಉಯ್ಯಾಲೋತ್ಸವದ ಅಂಗವಾಗಿ 10ನೇ ವರ್ಷದ ಸಂಪೂರ್ಣ ರಾಮಾಯಣ ನಾಟಕವನ್ನು ಮಿತ್ರ ಕಲಾ ಸಂಘದ ವತಿಯಿಂದ ಇದೇ 24ರ ರಾತ್ರಿ 9ಕ್ಕೆ ಏರ್ಪಡಿಸಲಾಗಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ನಾಟಕದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು ಹುಳಿಯಾರು ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ.ಸಂ.ಇ ಸಹಾಯಕ ಎಂ.ಎಸ್.ಚಂದ್ರಪ್ಪ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಸದಸ್ಯರಾದ ಗಾಯಿತ್ರಿದೇವಿ ಪುಟ್ಟಣ್ಣ, ಸಿ.ಪಿ.ಮಹೇಶ್, ಬಾಬುಸಾಹೇಬ್, ತಹಶೀಲ್ದಾರ್ ಟಿ.ಸಿ.ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿರುವರು.
ಐ.ಟಿ.ಐ.ಪರೀಕ್ಷೆಯಲ್ಲಿ ಅವ್ಯವಹಾರಕ್ಕೆ ಆಸ್ಪದವಿಲ್ಲ: ಎ.ಬಿ.ವಿ.ಪಿ
ಚಿಕ್ಕನಾಯಕನಹಳ್ಳಿ,ಜು.22: ಐ.ಟಿ.ಐ ಪರೀಕ್ಷೆಯಲ್ಲಿ ನಡೆಯುತ್ತಿರುವ ಪ್ರಶ್ನ ಪತ್ರಿಕೆ ಡೀಲ್ಗಳನ್ನು ತಡೆಯುವುದಕ್ಕೆ ಅಭಾವಿಪ ಸಂಘಟನೆ ಸಜ್ಜಾಗಿದ್ದು ನಕಲಿ ನಡೆದರೆ ಆ ಸ್ಥಳಗಳಿಗೆ ಪೋಲಿಸರ ಸಹಾಯದೊಂದಿಗೆ ಅಭಾವಿಪ ಕಾರ್ಯಕರ್ತರು ದಾಳಿ ಮಾಡಲಿದ್ದಾರೆ ಎಂದು ಅಭಾವಿಪ ನಗರ ಕಾರ್ಯದಶರ್ಿ ಚೇತನ್ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐ.ಟಿ.ಐ ನಡೆಸುವ ಸಂಸ್ಥೆಗಳೇ ವಿದ್ಯಾಥರ್ಿಗಳಿಂದ ಹಣ ವಸೂಲಿ ಮಾಡಿ ಪ್ರಶ್ನೆಪತ್ರಿಕೆ ನೀಡುತ್ತಿವೆ ಎಂಬ ಮಾಹಿತಿ ಅಭಾವಿಪ ಘಟಕಕ್ಕೆ ಬಂದಿದ್ದು ಯಾವುದೇ ವಿದ್ಯಾಥರ್ಿಗಳು ಸಂಸ್ಥೆಗಳಿಗೆ ಹಣ ನೀಡದೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಲು ತಿಳಿಸಿದರೆ. ಈ ಸ್ಕ್ಯಾಂಡಲ್ನಲ್ಲಿ ಯಾವುದೇ ಸಂಸ್ಥೆಗಳು ಕೈಜೋಡಿಸಿದ್ದರೆ ಅಂತಹ ಸಂಸ್ಥೆಗಳ ಅನುಮತಿಯನ್ನು ರದ್ದುಗೊಳಿಸುವಂತೆ ಸಕರ್ಾರಕ್ಕೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
ಶತಾಯುಷಿ ಮುದ್ದಪ್ಪ ನಿಧನ
ಚಿಕ್ಕನಾಯಕನಹಳ್ಳಿ,ಜು.22: ಪಟ್ಟಣದ ಹಿರಿಯ ನಾಗರಿಕ, ಕುರುಬ ಸಮಾಜದ ಧಾಮರ್ಿಕ ವಿಧಿವಿಧಾನಗಳ ಅನುಭವಿ, ಶತಾಯುಷಿ ಮಠದ ಮುಂದಲ ಮುದ್ದಪ್ಪ ನಿಧನರಾಗಿದ್ದಾರೆ.
ಪಟ್ಟಣದ ವಿವಿಧ ಧಾಮರ್ಿಕ ಕೆಲಸ ಕಾರ್ಯಗಳಲ್ಲಿ ಮುಂಚುಣಿಯಲಿದ್ದ ಮುದ್ದಪ್ಪನವರಿಗೆ ನೂರ ಒಂದು ವರ್ಷಗಳ ತುಂಬು ಜೀವನ ನಡೆಸುತ್ತಿದ್ದರು. ಶ್ರೀ ರೇಣುಕ ಜಯಂತಿ ಮಹೋತ್ಸವವದ ವಿಶ್ವಸ್ಥ ಮಂಡಳಿಯ ಪ್ರಮುಖರಾಗಿದ್ದರು.
ಮೃತರು ಪತ್ನಿ, ಐವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಹಾಗೂ ಬಂಧುಭಾಂದವರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನಕ್ಕೆ ಎ.ಪಿ.ಎಂ.ಸಿ. ಅಧ್ಯಕ್ಷ ಸಿ.ಬಸವರಾಜು, ಪುರಸಭಾ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ದೊರೆಮುದ್ದಯ್ಯ, ಸಿ.ಪಿ.ಮಹೇಶ್,ಸುಮಿತ್ರ ಕಣ್ಣಯ್ಯ, ಮಾಜಿ ಪುರಸಭಾ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಭೈರವ ಮಿನರಲ್ಸ್ನ ಸಿ.ಡಿ.ಸುರೇಶ್ ಸೇರಿದಂತೆ ಹಲವರು ಆಗಮಿಸಿದ್ದರು.

Wednesday, July 21, 2010

ವಿದ್ಯತ್ ಹರಿದು ಅಜ್ಜಿ ಮತ್ತು ಎಮ್ಮೆ ಸಾವು
ಚಿಕ್ಕನಾಯಕನಹಳ್ಳಿ,ಜು.19: ವಿದ್ಯುತ್ ಹರಿದು ಅಜ್ಜಿಯೊಬ್ಬರು ಹಾಗೂ ಎಮ್ಮೆ, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಡೆಕೆರೆ ಪಂಚಾಯ್ತಿಯ ಸೊಂಡೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ವರದಿಯಾಗಿದೆ.
ತಾಲೂಕಿನ ಸೊಂಡೇನಹಳ್ಳಿ ಗೊಲ್ಲರಹಟ್ಟಿಯ ಮರಿಯಮ್ಮ(60)ಕೊಂ ಚನ್ನಯ್ಯ ಎಂಬುವರು ತಮ್ಮ ತೋಟದಲ್ಲಿ ಎಮ್ಮೆ ಮೇಹಿಯಿಸುವಾಗ ಈ ಘಟನೆ ನಡೆದಿದೆ, ಮೃತ ಮರಿಯಮ್ಮನ ತೋಟದಲ್ಲಿದ್ದ ಟಿ.ಸಿ ಇಟ್ಟಿದ್ದ ಕಂಬದ ಬಳಿ ಎಮ್ಮೆ ಹೋಗಿದ್ದು ಎಮ್ಮೆಯನ್ನು ಹಿಡಿದುಕೊಳ್ಳಲು ಹೋದ ಅಜ್ಜಿ ಮರಿಯಮ್ಮನಿಗೂ ಕಂಬದಿಂದ ವಿದ್ಯುತ್ ಹರಿದಿದು ಎಮ್ಮೆ ಮತ್ತು ಅಜ್ಜಿ ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ ಸದಸ್ಯ ತಿಮ್ಮೇಗೌಡ ಈ ದುರ್ಘಟನೆಗೆ ಬೆಸ್ಕಾಂರವರ ನಿರ್ಲಕ್ಷವೇ ಕಾರಣ ಎಂದು ದೂರಿದ್ದಾರಲ್ಲದೆ ಈ ಅನಾಹುತಕ್ಕೆ ಕಾರಣರಾದ ಬೆಸ್ಕಾಂ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಚಿ.ನಾ.ಹಳ್ಳಿ ಪಿ.ಎಸ್.ಐ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಗ್ರಾಮದ ಸ್ವಚ್ಚತೆಗಾಗಿ ಶ್ರಮದಾನ ಮಾಡಿ, ಸಾಂಕ್ರಾಮಿಕ ರೋಗಗಳಿಂದ ದೂರವಿರಿ: ಜಿ.ಪಂ.ಸಿ.ಇ.ಓ
ಚಿಕ್ಕನಾಯಕನಹಳ್ಳಿ,ಜು.21: ಗ್ರಾಮದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ತಿಂಗಳಿಗೆ ಒಂದು ದಿನವಾದರೂ ಎಲ್ಲರೂ ಸೇರಿ ಶ್ರಮದಾನ ಮಾಡಿ ಎಂದು ಜಿ.ಪಂ, ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ತುಳಿಸಿಮದ್ದಿನೇನಿ ಮನವಿ ಮಾಡಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಮುದಾಯದ ಸಹಭಾಗಿತ್ವ''ಎಂಬ ವಿಷಯವಾಗಿ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳ ವಿಚಾರ ಸಂಕೀರ್ಣದಲ್ಲಿ ಭಾಗಹಿಸಿ ಮಾತನಾಡಿದರು.
ನಮ್ಮ ಗ್ರಾ.ಪಂ.ಗಳು ಎಲ್ಲಾ ಗ್ರಾಮಗಳಲ್ಲಿನ ಗುಂಡಿ, ಗೊಟರುಗಳು ಹಾಗೂ ತಿಪ್ಪೇಗುಂಡಿಗಳನ್ನು ಸ್ವಚ್ಚ ಮಾಡಿಸುವಷ್ಟು ಹಣವನ್ನು ಕೊಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಗ್ರಾಮಗಳಲ್ಲಿನ ಜನರು, ವಿದ್ಯಾಥರ್ಿಗಳು ಮುಂದೆ ನಿಂತು ಶ್ರಮದಾನ ಮಾಡಿದರೆ ಗ್ರಾಮದ ಸ್ವಚ್ಚತೆಯನ್ನು ಕಾಯ್ದುಕೊಳ್ಳಬಹುದು, ತನ್ಮೂಲಕ ಸೊಳ್ಳಗಳನ್ನು ನಿಯಂತ್ರಿಸಿಹುದು ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದರು.
ಗ್ರಾ.ಪಂ.ಗಳು ಸೋಡಿಯಂ ಲೈಟ್, ಟ್ಯೂಬ್ಲೈಟ್ಗಳ ಕಡೇ ಅತೀ ವ್ಯಾಮೋಹ ತೋರದೆ ಚರಂಡಿ ಹಾಗೂ ಶೌಚಾಲಯಗಳ ಕಡೆಯೂ ಗಮನ ನೀಡಿ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಇತ್ತೀಚೆಗೆ ಜನರು ಟಿ.ವಿ ಹಾಗೂ ಮೊಬೈಲ್ಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಶೌಚಾಲಯಗಳ ನಿಮರ್ಾಣಕ್ಕೆ ಗಮನ ಹರಿಸದೆ ಇರುವುದರ ಬಗ್ಗೆ ವಿಷಾದಿಸಿದ ಅವರು, ಮಹಿಳೆಯರು ಈ ಟಿ.ವಿ.ಗಳಲ್ಲಿನ ಧಾರವಾಹಿಗಳನ್ನು ನೋಡಿ ರಾಗ ದ್ವೇಷಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದು ಈ ಹಿಂದೆ ಇದ್ದ ಹೊಂದಾಣಿಕೆ ಹಾಗೂ ಸಾಮರಸ್ಯ ಜೀವನ ಕಾಣೆಯಾಗುತ್ತಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ನಮ್ಮ ತಾಲೂಕು ಮಲೇರಿಯಾ, ಚಿಕನ್ ಗುನ್ಯಾ ಹಾಗೂ ಇತ್ತೀಚೆಗೆ ಕಾಣಿಸಿಕೊಂಡಿರುವ ಡೆಂಗ್ಯೂ ಜ್ವರಗಳನ್ನು ಹರಡುವ ಸೊಳ್ಳೆಗಳು ಹೆಚ್ಚಾಗಿದ್ದು, ಈ ಸೊಳ್ಳೆಗಳನ್ನು ನಿಯಂತ್ರಿಸಲು ಐಕಾನ್ ಎಂಬ ಸೊಳ್ಳೆ ನಾಶಕವನ್ನು ಬಳಸಿದರೆ ಹತೋಟಿಗೆ ತರಲು ಸಾಧ್ಯ ಎಂದ ಅವರು, ಜಿ.ಪಂ.ನವರು ಈ ಐಕಾನ್ ಎಂಬ ಸೊಳ್ಳೆ ನಾಶಕವನ್ನು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಜೈವಿಕ ವಿಧಾನದಿಂದ ಸೊಳ್ಳೆ ನಾಶ ಪಡೆಸುವಂತ ಗಪ್ಪಿ-ಗಾಂಬೋಜಿಯ ಎಂಬ ಮೀನುಗಳನ್ನು ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳಿಗೆ ಬಿಡುವಂತೆ ಮೀನುಗಾರಿಕೆ ಇಲಾಖೆಯವರಿಗೆ ಸೂಚಿಸಿದರು.
ನೀರು ಸರಬರಾಜು ಮಾಡಲು ಜೊಡಿಸಿರುವ ಪೈಪ್ ಲೈನ್ಗಳು ತುತರ್ು ರಿಪೇರಿ ಇರುವಂತಹ ಕಡೆಗಳಿಗೆ ಟಾಸ್ಕಪೋಸರ್್ನಲ್ಲಿರುವ ಹಣವನ್ನು ಬಳಸಲು ಅವಕಾಶ ಮಾಡಿ ಕೊಡಲಾಗುವುದು ಎಂದರು.
ಜಿ.ಪಂ.ಅಧ್ಯಕ್ಷೆ ಕುಸುಮ ಜಗನಾಥ್ ಮಾತನಾಡಿ ಈ ದೇಶ ಅಭಿವೃದ್ದಿಯಾಗಬೇಕೆಂದರೆ ಗ್ರಾಮಗಳ ಅಭಿವೃದ್ದಿಯಿಂದ ಮಾತ್ರ ಸಾಧ್ಯ ಎಂದ ಅವರು, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಒಟ್ಟಾಗಿ ಕೂತು ಜನರ ಸಮಸ್ಯೆಗಳ ಬಗ್ಗೆ ಆಲೋಚಿಸಿ, ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಜಿ.ಪಂ.ಉಪಾಧ್ಯಕ್ಷ ಮದುಮಡು ರಂಗಸ್ವಾಮಿ ಮಾತನಾಡಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಸಣ್ಣ ಪುಟ್ಟ ಲೋಪಗಳು ಆಗುವುದು ಸಹಜ ಅದನ್ನು ಕೆದಕಲು ಹೋಗದೆ ಮುಂದೆ ಆಗಬೇಕಾದ ಅಭಿವೃದ್ದಿ ಕಾರ್ಯಗಳ ಕಡೆ ಗಮನ ಕೊಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿ.ಎಚ್.ಓ. ಡಾ.ಚನ್ನಮಲ್ಲಯ್ಯ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಉಪಾಧ್ಯಕ್ಷೆ ರುಕ್ಮಿಣಮ್ಮ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ,ಇ.ಓ. ಡಾ.ವೇದಮೂತರ್ಿ, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್, ತಾ.ಪಂ.ಸದಸ್ಯರಾದ ವೈ.ಆರ್.ಮಲ್ಲಿಕಾರ್ಜನಯ್ಯ, ಮಾತನಾಡಿದರು.
ತಾ.ಪಂ.ಸದಸ್ಯರುಗಳಾದ ಡಿ.ಆರ್.ರುದ್ರೇಶ್, ಜಾನಮ್ಮ ರಾಮಚಂದ್ರಯ್ಯ, ತಿಮ್ಮಕ್ಕ, ಕೆ.ಟಿ.ಗೋವಿಂದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್ ಸ್ವಾಗತಿಸಿದರು, ಸಿ.ಎ.ರಮೇಶ್ ನಿರೂಪಿಸಿ ವಂದಿಸಿದರು.
ದಿವ್ಯ ಜ್ಯೋತಿ ಕಲಾ ಸಂಘದಿಂದ ಏಕಾದಶಿ ಜಾತ್ರೆಯಲ್ಲಿ ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆ, ನವ ದಂಪತಿಗಳ ಸ್ಪಧರ್ೆ.
ಚಿಕ್ಕನಾಯಕನಹಳ್ಳಿ,ಜು.21: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ ಹಳೆಯೂರು ಆಂಜನೇಯ ಸ್ವಾಮಿಯ ಏಕಾದಶಿ ಜಾತ್ರೆಯ ಪ್ರಯುಕ್ತ 19ನೇ ವರ್ಷದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು ಹಾಗೂ ನವದಂಪತಿಗಳ ಸ್ಪಧರ್ೆಯ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ.
ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು 23ರ ಮಧ್ಯಾಹ್ನ 3ಗಂಟೆಗೆ ಪುರಸಭೆ ಮುಂಭಾಗ ಹಮ್ಮಿಕೊಂಡಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿ.ಪಿ.ಐ.ರವಿಪ್ರಸಾದ್, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ತಾ.ಸ.ನೌ.ಸಂಘದ ಅಧ್ಯಕ್ಷ ಪರಶಿವಮೂತರ್ಿ ಪುರಸಭಾ ಸದಸ್ಯರುಗಳಾದ ಮಹೇಶ್, ದೊರೆಮುದ್ದಯ್ಯ, ಧರಣಿ, ರೇಣುಕ, ಆರ್.ರವಿ, ಎಂ.ಎನ್.ಸುರೇಶ್, ಬಾಬು ಸಾಹೇಬ್, ಈಶ್ವರ ಭಾಗವತ್, ಎಂ.ಎಸ್.ರವಿಕುಮಾರ್, ಮುಖ್ಯಾಧಿಕಾರಿ ಹೊನ್ನಪ್ಪ, ಹುಚ್ಚೆಗೌಡ್ರು ಉಪಸ್ಥಿತರಿರುವರು.
ನವದಂಪತಿಗಳ ಸ್ಪಧರ್ೆ: ನವದಂಪತಿಗಳ ಸ್ಪಧರ್ೆಯ ಉದ್ಘಾಟನಾ ಸಮಾರಂಭವನ್ನು 24ರ ಮಧ್ಯಾಹ್ನ 3ಕ್ಕೆ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್, ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ಕುಮಾರ್, ಎ.ಪಿ.ಎಂ.ಸಿ.ಅಧ್ಯಕ್ಷ ಸಿ.ಬಸವರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಲೋಕೇಶ್, ಕಾಂಗ್ರೆಸ್ ಮುಖಂಡ ಸೀಮೆಣ್ಣೆ ಕೃಷ್ಣಯ್ಯ, ಬಿ.ಜೆ.ಪಿ ಮುಖಂಡರಾದ ಮೈಸೂರಪ್ಪ, ಸುರೇಶ್ಹಳೇಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಉಪಸ್ಥಿತರಿರುವರು.
ಸಮಾರೋಪ ಸಮಾರಂಭ: ನವದಂಪತಿಗಳ ಸ್ಪಧರ್ೆಯ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ 24ರ ಶನಿವಾರ ರಾತ್ರಿ 7ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರೋಪ ನೆರವೇರಿಸಲಿದ್ದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ರಂಗಾಯಣ ನಿದರ್ೇಶಕ ಲಿಂಗದೇವರು ಹಳೇಮನೆ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಚಲನಚಿತ್ರ ನಟರಾದ ದೊಡ್ಡಣ್ಣ, ಶಿವಧ್ವಜ್, ಅಚ್ಯುತ್ ನಟಿ ಹೇಮಶ್ರೀ, ನಿದರ್ೇಶಕ ಬಿ.ಎಸ್.ಲಿಂಗದೇವರು, ಸೆಲ್ವರಾಜ್, ರವೀಶ್ ಆಗಮಿಸಲಿದ್ದು ಸಮಾರಂಭದಲ್ಲಿ ಸಾವಿರ ಪಾಯದ ಸರದಾರ ನಾಗಣ್ಣ ನವರನ್ನು ವಿಶೇಷವಾಗಿ ಸನ್ಮಾನಿಸಲಿದ್ದಾರೆ.


Saturday, July 17, 2010

ಏಕದಶಿ ಜಾತ್ರೆಯ ಅಂಗವಾಗಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಜು.18: ಅನ್ನಪೂಣರ್ೇಶ್ವರಿ ಕಲಾ ಸಂಘದ ವತಿಯಿಂದ 12ನೇ ವರ್ಷದ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು ಇದೇ ಜುಲೈ 23ರ ಬೆಳಿಗ್ಗೆ 10-30ಕ್ಕೆ ಏರ್ಪಡಿಸಲಾಗಿದೆ ಎಂದು ಸಿ.ಎಸ್.ರೇಣುಕಮೂತರ್ಿ ತಿಳಿಸಿದ್ದಾರೆ.
ಸ್ಪಧರ್ೆಯನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಸಪ್ತತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಉದ್ಘಾಟನಾ ಸಮಾರಂಭವನ್ನು ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ್ಶಿವಾಚಾರ್ಯಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಅಬಕಾರಿ ಗುತ್ತಿಗೆದಾರ ಎನ್.ಜಿ.ನಾಗರಾಜು, ಕುಶಾಲ್ ಗಾಮರ್ೆಟ್ಸ್ ಮಾಲೀಕ ಶಾಂತಕುಮಾರ್ ಉಪಸ್ಥಿತರಿರುವರು.
ಸ್ಪಧರ್ೆಗೆ ಭಾಗವಹಿಸುವವರು ಜುಲೈ 22ಗುರುವಾರ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರನ್ನು ನೊಂದಾಯಿಸಿಬೇಕು ಹೆಚ್ಚಿನ ವಿವರಗಳಿಗಾಗಿ ಸಿ.ಎಸ್.ರೇಣುಕಮೂತರ್ಿ(9980163152), ಸಿ.ಎನ್.ರಾಮು(9742796001) ಮತ್ತು 9880311961, 9916815000 ಈ ದೂರವಾಣಿಗಳಲ್ಲಿ ಸಂಪಕರ್ಿಸಲು ಕೋರಿದ್ದಾರೆ.
ಕಲಾವಿದರನ್ನು ಬೆಳಸಿ ಕಲೆಯನ್ನು ಉಳಿಸಿ: ತಾ.ಪಂ.ಅಧ್ಯಕ್ಷ
ಚಿಕ್ಕನಾಯಕನಹಳ್ಳಿ,ಜು.18: ಇಂದಿನ ಎಲೆಕ್ಟ್ರಾನಿಕ್ ಯುಗದ ಮಧ್ಯೆಯೂ ರಂಗಕಲೆ ಮತ್ತು ಜನಪದ ಕಲೆಗಳು ಜೀವಂತವಾಗಿರುವುದು ವಿಶೇಷವಾಗಿದೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಗುಡ್ಡಗಾಡು ಪ್ರದೇಶವಾದ ಕೆಂಪರಾಯನಹಟ್ಟಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದುಳಿದ ಗ್ರಾಮಗಳಲ್ಲಿ ಕಾರ್ಯಕ್ರಗಳನ್ನು ನಡೆಸಿ ಯಶಸ್ವಿಯಾಗುತ್ತಿರುವ ಇಲಾಖೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಜಾನಪದ, ರಂಗಕಲೆಗಳನ್ನು ಉಳಿಸುವಲ್ಲಿ ಶ್ರಮಿಸುತ್ತಿರುವ ಜನಪದ ಕಲಾವಿದರ ಸಂಘದವರಿಗೆ ಮತ್ತು ಪಾರಂಪರಿಕ ಕಲೆಗಳನ್ನು ಉಳಿಸಿಕೊಂಡು ಬರುತ್ತಿರುವ ಯಾದವ ಜನಾಂಗವನ್ನು ಶ್ಲಾಘಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಶೋದಮ್ಮಮಹದೇವಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ರಂಗಕಲೆ ಮತ್ತು ಜಾನಪದ ಕಲೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ದೊರೆತು ಅದರ ಉಳಿವಿಕೆಯನ್ನು ಬೆಳಸಬೇಕು ಎಂದರು.
ತಾಲೂಕು ಜಾನಪದ ಕಲಾವಿದರ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಮಾತನಾಡಿ ಸಂಘಟನೆಯನ್ನು ಬೆಳೆಸಲು ಕಲಾವಿದರೆಲ್ಲರೂ ಐಕ್ಯತೆಯಿಂದ ಸಹಕಾರ ನೀಡಬೇಕೆಂದು ಕೋರುತ್ತಾ ಜಾನಪದ ಕಲಾವಿದರ ಸ್ಥಿತಿಗತಿಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ರಾತ್ರಿ ಇಡೀ ನಡೆದ ಕಾರ್ಯಕ್ರಮದಲ್ಲಿ ಕೋಲಾಟ, ಸೋಬಾನಪದ, ದೇವರ ಪದಗಳು, ಚಟ್ಟಿಮೇಳ, ಕರಡೇವುವಾದ್ಯ, ಭಜನೆ, ಮೊದಲಾದ ಕಾರ್ಯಕ್ರಮಗಳು ನಡೆದವು.
ಸಮಾರಂಭದಲ್ಲಿ ಗ್ರಾ.ಪಂ ಸದಸ್ಯ ಎನ್.ಕುಮಾರಯ್ಯ, ಉಪನ್ಯಾಸಕ ಶಿವಲಿಂಗಮೂತರ್ಿ, ಎಂ.ರಂಗಯ್ಯ, ಸಿ.ಎನ್.ಹನುಮಯ್ಯ, ಮಹಾಲಿಂಗಯ್ಯ, ಸಿ.ಎಂ.ಸೋಮಶೇಖರ್, ಸಿ.ಎ.ಚಿಕ್ಕನಾರಾಯಣಸ್ವಾಮಿ, ಉಪಸ್ಥಿತರಿದ್ದರು.

Friday, July 16, 2010


ಟೈಗರ್ ಸೊಳ್ಳೆಯಿಂದ ಡೆಂಗ್ಯೂ ಜ್ವರ, ಸೊಳ್ಳೆನಿಯಂತ್ರಣಕ್ಕೆ ಮುಂದಾಗಿ: ಟಿ.ಎಚ್.ಓ.
ಚಿಕ್ಕನಾಯಕನಹಳ್ಳಿ,ಜು.16: ಜ್ವರ ಕಾಣಿಸಕೊಂಡ ಕೂಡಲೇ ರಕ್ತ ಪರೀಕ್ಷೆಗೆ ಮುಂದಾಗಿ ರೋಗ ಪತ್ತೆ ಕಾರ್ಯ ಮೊದಲು ಆಗಬೇಕು, ಡೆಂಗ್ಯೂಗೆ ಟೈಗರ್ ಮಸ್ಕಿಟೊ ಎಂಬ ಸೊಳ್ಳ ಕಾರಣವಾಗಿದ್ದು ಸೊಳ್ಳೆಯನ್ನು ನಿಂಯತ್ರಿಸಲು ಜನರು ಮುಂದಾಗಬೇಕೆಂದು ಡಾ.ಶಿವಕುಮಾರ್ ಮನವಿ ಮಾಡಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ತಾಲೂಕಿನ ಕೆ.ಸಿ.ಪಾಳ್ಯದಲ್ಲಿ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದರು, 1950ರಿಂದಲೇ ಡೆಂಗ್ಯೂ ಜ್ವರ ಕಾಣಿಸಿದ್ದು ಇದೇನು ಹೊಸರೋಗವಲ್ಲ, ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅನೈರ್ಮಲ್ಯ ಕೂಡ ಹೆಚ್ಚಾಗಿ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆಗಳು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ ಎಂದರು.
ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾ.ಪಂ.ಗಳು ಹೆಚ್ಚು ಗಮನ ಹರಿಸಬೇಕೆಂದರಲ್ಲದೆ, ಜೂನ್ ತಿಂಗಳಿಂದ ಮಳೆ ಆರಂಭವಾದ್ದರಿಂದ ಗುಂಡಿ ಗೊಟರುಗಳಲ್ಲಿ ಮಳೆ ನಿಂತು ಸೊಳ್ಳೆ ಉತ್ಪದನಾ ಕೇಂದ್ರವಾಗಿವೆ ಎಂದರು. ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ಮಾಸಾಚರಣೆ ಮೂಡುವ ಮೂಲಕ ಜನರಲ್ಲಿ ಸೊಳ್ಳೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವ ಮೂಲಕ ಸೊಳ್ಳೆ ನಿಯಂತ್ರಿಸಬಹುದು, ತಾಲೂಕಿನಲ್ಲಿ ಈಗಾಗಲೇ ಮಲೇರಿಯಾ ಕಂಡು ಬಂದಂತ ಪ್ರದೇಶಗಳಲ್ಲಿ ಅಗತ್ಯ ಎಂದು ಕಂಡುಬಂದ ಪ್ರದೇಶದಲ್ಲಿ ಸೊಳ್ಳೆ ನಿರೋಧಕ ವಿಧಾನ ಮಾಡಲು ಫಾಗಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು. ತಾಲೂಕಿನ 25,059ಮಂದಿ ರಕ್ತ ಪರೀಕ್ಷೆಗೊಳಪಡಿಸಿದ್ದು ಇವುಗಳಲ್ಲಿ ಸಾಕಷ್ಟು ಜನರಿಗೆ ಮಲೇರಿಯ ಕಾಣಿಸಿಕೊಂಡಿದೆ ಎಂದರು.
ಚಿಕನ್ಗುನ್ಯಾ ಮಲೇರಿಯಾ ಡಂಗ್ಯೂ ನಿಯಂತ್ರಿಸಬೇಕಾದರೆ ಸ್ವಯಂ ಘೋಷಿತರಾಗಿ ಗ್ರಾಮಗಳ ಸ್ಚಚ್ಛತೆ ಮದ್ದು ಎಂದರು. ಡೆಂಗ್ಯೂ ಜ್ವರ ಮೂರು ಹಂತದಲ್ಲಿ ಜನರನ್ನು ಆಕ್ರಮಿಸಿಕೊಳ್ಳುವುದು, ಮೊದಲ ಹಂತದಲ್ಲಿರುವ ಜ್ವರವನ್ನು ನಿಯಂತ್ರಿಸಬಹುದು, ಆದರೆ ಎರಡು ಮತ್ತು ಮೂರನೇ ಹಂತಕ್ಕೆ ತಲುಪಿದ ಡೆಂಗ್ಯೂ ಜ್ವರಕ್ಕೆ ಯಾವುದೇ ತರಹದ ಚಿಕಿತ್ಸೆ ಇಲ್ಲ ಎಂದರು.
ಯಾವದೇ ವ್ಯಕ್ತಿಗೆ ವೈರಾಣುದಾಳಿಯಿಂದ ಜ್ವರ ಕಾಣಿಸಿಕೊಂಡರೆ ಕೂಡಲೇ ರಕ್ತ ಪರೀಕ್ಷೆಗೆ ಮುಂದಾಗಿ ರೋಗ ಪತ್ತೆ ಕಾರ್ಯ ಮೊದಲು ಆಗಬೇಕು ಆದ ನಂತರವೇ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಜ್ವರ 15ದಿನಗಳಿಂದ ಇದ್ದರೆ ಡೆಂಗ್ಯೂ ಎಂದು ಭಾವಿಸಬಹುದು ಎಂದರು.
ಟೈಗರ್ ಮಸ್ಕಿಟೋ ಎಂಬ ಆರೋಗ್ಯವಂತ ವ್ಯಕ್ತಿಯಮೇಲೆ ಸೋಂಕಿತವ್ಯಕ್ತಿಗೆ 2 ಮತ್ತು 3 ಬಾರಿ ದಾಳಿ ನಡೆಸಿ ಕಚ್ಚಿದಾಗ ಡಂಗ್ಯೂ ತೀವ್ರತರಕ್ಕೆ ಹೋಗಿ ವ್ಯಕ್ತಿ ಸಾಯುತ್ತಾನೆ ಎಂದರು.
ಇ.ಓ ಡಾ.ವೇದಮೂತರ್ಿ ಮಾತನಾಡಿ ಕೆ.ಸಿ ಪಾಳ್ಯಕ್ಕೆ ಭೇಟಿ ನೀಡಿ ಅಲ್ಲಿ ಜನತೆ ಚರಂಡಿಗಳನ್ನು ಕಸದ ತೊಟ್ಟಿಗಳಂತಿದ್ದು ಕೂಡಲೇ ಸ್ವಚ್ಛಗೊಳಿಸುವಂತೆ ಸೂಚಸಿ ಎಲ್ಲಾ ಗ್ರಾಮದ ಸ್ವಚ್ಛತೆಗೆ ಆದೇಶಿಸಿದ್ದೇವೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಿದ್ದರು.
ಪಡಿತರ ಕಾಡರ್್ ಪಡೆಯಲು ಸೂಚನೆ
ಚಿಕ್ಕನಾಯಕನಹಳ್ಳಿ,ಜು.15: ಪಡಿತರ ಚೀಟಿದಾರರು ಹಳೆಯ ಪಡಿತರ ಚೀಟಿ ವಾಪಸ್ಸು ನೀಡಿ 15ರೂ ಪಾವತಿಸಿ ಹೊಸದಾದ ಶಾಶ್ವತ ಪಡಿತರ ಚೀಟಿ ಪಡೆಯಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈ ಮೊದಲು ವಿತರಣೆ ಮಾಡಿದ್ದ ಪಡಿತರ ಚೀಟಿಗಳನ್ನು ನೀಡಿ ಉಳಿದಿರುವ ಶಾಶ್ವತ ಪಡಿತರ ಚೀಟಿಗಳು ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರದಶರ್ಿಸಲಾಗಿದ್ದು ಪಟ್ಟಿಯಲ್ಲಿರುವ ಕಾಡರ್ುಗಳನ್ನು ಜುಲೈ 15ರಿಂದ ತಾಲೂಕು ಕಛೇರಿಯಲ್ಲಿ ಪಡೆಯಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಕಾದಶಿ ಜಾತ್ರೆಯಲ್ಲಿ ಕುಸ್ತಿ ಪಂದ್ಯ
ಚಿಕ್ಕನಾಯಕನಹಳ್ಳಿ,ಜು.15: ಹಳೆಯೂರು ಆಂಜನೇಯಸ್ವಾಮಿ ಜಾತ್ರೆಯ ಪ್ರಯುಕ್ತ ಮಾರುತಿ ಗರಡಿ ಕುಸ್ತಿ ಸಂಘದ ವತಿಯಿಂದ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪದರ್ೆಯನ್ನು ಇದೇ ಜುಲೈ 24ರ ಶನಿವಾರ ಏರ್ಪಡಿಸಲಾಗಿದೆ.
ಸ್ಪಧರ್ೆಯನ್ನು ಕನ್ನಡ ಸಂಘದ ವೇದಿಕೆ ಮುಂಭಾಗದಲ್ಲಿ ಮಧ್ಯಾಹ್ನ 2ಗಂಟೆಗೆ ಹಮ್ಮಿಕೊಂಡಿದ್ದು ಸ್ಪಧರ್ೆಯ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ರೀಡಾ ಮತ್ತು ಜವಳಿ ಸಚಿವ ಗೂಳಿಹಟ್ಟಿಶೇಖರ್, ಮಾಜಿ ಶಾಸಕರಾದ ಕೆ.ಎಸ್.ಕಿರಣ್ಕುಮಾರ್, ಜೆ.ಸಿ.ಮಾಧುಸ್ವಾಮಿ, ಆಗಮಿಸಲಿದ್ದು, ಭೈರವ ಮಿನರಲ್ಸ್ ಮಾಲೀಕ ಸಿ.ಡಿ.ಸುರೇಶ್, ಮಾಜಿ.ಗ್ರಾ.ಪಂ ಅಧ್ಯಕ್ಷ ಹೆಚ್.ಬಿ.ಪಂಚಾಕ್ಷರಿ, ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಬಸ್ ಏಜೆಂಟ್ ವಸಂತ ಕುಮಾರ್, ಎಸ್.ಡಿ.ದಿಲೀಪ್ಕುಮಾರ್, ಚಂದ್ರಶೇಖರ್ ಗುಪ್ತ ಸ್ಪಧರ್ಿಗಳಿಗೆ ಬಹುಮಾನ ವಿತರಿಸಲಿದ್ದಾರೆ.


ಅಂತರ್ ರಾಷ್ಟ್ರೀಯ ಬಾಂಧವ್ಯ ಬೆಸೆಯುವಲ್ಲಿ ರೋಟರಿ ಪಾತ್ರ ಮಹತ್ವದ್ದು

ಚಿಕ್ಕನಾಯಕನಹಳ್ಳಿ,ಜು.15: ಸಮಾಜವನ್ನು ಕಟ್ಟುವ ಹಾಗೂ ದೇಶ ವಿದೇಶಗಳ ನಡುವೆ ಉತ್ತಮ ಬಾಂದವ್ಯ ಬೆಸೆಯುವಲ್ಲಿ ರೋಟರಿ ಸಂಸ್ಥೆ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಜಿಲ್ಲಾ ಗವನರ್್ರ್ ಎಚ್.ಕೆ.ವಿ.ರೆಡ್ಡಿ ತಿಳಿಸಿದರು.

ಪಟ್ಟಣದ ರೋಟರಿ ಶಾಲೆಯ ಆವರಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಸ್ವೀಕಾರ ಸಮಾರಂಭದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡಿದರು.

ಸಂಸ್ಥೆಯ ಸೇವಾ ವ್ಯಾಪ್ತಿಯು ವಿಶಾಲವಾಗಿದ್ದು, ಅತ್ಯಂತ ಬಡವರ ಬಳಿಗೆ ಬಂದಾಗ ಸಮಾಜಕಟ್ಟುವ ಕೆಲಸಕ್ಕೆ ಪ್ರೋತ್ಸಾಹಕರವಾಗಿರಬೇಕು ಎಂದರು ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದವರಿಗೆ ನೆರವಾಗುವುದು ಸಂಸ್ಥೆಯ ಧ್ಯೇಯ ಎಂದರಲ್ಲದೆ, ಈ ಕಾರ್ಯದಿಂದ ಸದಸ್ಯರ ಗೌರವವು ಹಿಮ್ಮಡಿಯಾಗಲಿದೆ ಎಂದರು. ಮಕ್ಕಳ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಮತ್ತು ಪಲ್ಸ್ಪೋಲಿಯೋ ಕಾರ್ಯದಲ್ಲಿ ರೋಟರಿ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದರು.

ನಮ್ಮ ಸಂಸ್ಥೆಯು ವಿಶ್ವದ ಬಹುತೇಕ ದೇಶಗಳಲ್ಲಿ ಈ ಸೇವೆಯನ್ನು ನಡೆಸುವ ಮೂಲಕ ಇದು ಅಂತರಾಷ್ಟ್ರೀಯ ಬಾಂದವ್ಯ ವೃದ್ದಿಗೆ ಸಹಕಾರಿ ಎಂದರು, ಉಳ್ಳವರು ತಮ್ಮ ಸಂಪಾದನೆಯಲ್ಲಿ ಸ್ವಲ್ಪಭಾಗ ಸಾಮಾಜಿಕ ಸೇವೆಗೆ ಮುಡುಪಾಗಿಟ್ಟರೆ ಸಮಾಜವು ಆಥರ್ಿಕವಾಗಿ ಮುಂದುವರಿಯಲಿದೆ ಎಂದರು.

ಜಿಲ್ಲಾ ಅಸಿಸ್ಟೆಂಟ್ ಗವನರ್್ರ್ ಸಿ.ಎನ್.ವೆಂಕಟರೆಡ್ಡಿ 'ನಾಯಕ' ಸಂದೇಶ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿಯಂತಹ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದರು ತಹಶೀಲ್ದಾರ್ ಟಿ.ಸಿ.ಕಾಂತರಾಜು 20ಮಂದಿ ರೈತರಿಗೆ ಸಾವಯುವ ಗೊಬ್ಬರ ಔಷಧಿ ಮತ್ತು ಪರಿಕರಗಳನ್ನು ವಿತರಿಸಿದರು ಮತ್ತು ಎಂ.ವಿ.ನಾಗರಾಜ್ರಾವ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಗ್ರಂಥ ಬಂಡಾರಕ್ಕೆ ಪುಸ್ತಕಗಳನ್ನು ದಾನವಾಗಿ ನೀಡಿದರು.

ಸಮಾರಂಭದಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ಕುಮಾರ್, ಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಕಾರ್ಯದಶರ್ಿ ಅಶ್ವತ್ಥ್ನಾರಾಯಣ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ರೋಟರಿ ಸಂಸ್ಥೆ ಸದಸ್ಯ ಕೆ.ವಿ.ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಎಂ.ವಿ.ನಾಗರಾಜ್ರಾವ್ ಸ್ವಾಗತಿಸಿ, ಪರಮೇಶ್ ನಿರೂಪಿಸಿ ಭುವನಸುಂದರ್ ವಂದಿಸಿದರು.


Tuesday, July 13, 2010

ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ
ಚಿಕ್ಕನಾಯಕನಹಳ್ಳಿ,ಜು.12: 2010-11ನೇ ವರ್ಷದ ರೋಟರಿ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಇದೇ ಜುಲೈ 14ರ ಸಂಜೆ 6.45ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾ 3190ರ ಗವನರ್್ರ್ ಪಿ.ಡಿ.ಜಿ. ಎಚ್.ಕೆ.ವಿ.ರೆಡ್ಡಿ ಅಧಿಕಾರ ಪ್ರಧಾನ ಮಾಡಲಿದ್ದಾರೆ.
ಜಿಲ್ಲಾ 3190ರ ಅಸಿಸ್ಟೆಂಟ್ ಗವನರ್್ರ್ ಸಿ.ಎನ್.ವೆಂಕಟರೆಡ್ಡಿ ಹೊಸ ಸದಸ್ಯರ ಸೇರ್ಪಡೆ ಮತ್ತು ನಾಯಕ ಪತ್ರಿಕೆ ಬಿಡುಗಡೆ ಮಾಡಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಹೊನ್ನಮ್ಮನ ಹತ್ಯೆ ವಿರೋಧಿಸಿ ಮೌನಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.12: ತಾಲೂಕಿನ ಗೋಪಾಲಪುರದಲ್ಲಿ ನಡೆದ ಹೊನ್ನಮ್ಮನ ಹತ್ಯೆಯ ಸಾಕ್ಷಾಧಾರಗಳು ನಾಶವಾಗದಂತೆ ನೋಡಿಕೊಂಡು, ಪ್ರಕರಣದ ತನಿಖೆ ಮತ್ತು ತೀರ್ಪನ್ನು ಆದಷ್ಟು ಬೇಗ ಮುಗಿಸಬೇಕೆಂದು ಕನರ್ಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಿತ ಬಿ.ಕೃಷ್ಣಪ್ಪ ಬಣ ಒತ್ತಾಯಿಸಿದ್ದಾರೆ.
ಪಟ್ಟಣದ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ತಹಶೀಲ್ದಾರ್ರವರಿಗೆ ನೀಡಿದ ಮನವಿ ಪತ್ರದಲ್ಲಿ ತಮ್ಮ ಹಲವು ಬೇಡಿಕೆಗಳನ್ನು ಪ್ರಸ್ತಾಪಿಸಿದ್ದು, ಹೊನ್ನಮ್ಮನ ಹತ್ಯೆಯ ಬಗ್ಗೆ ಸಕರ್ಾರ ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಹೊನ್ನಮ್ಮನ ಕುಟುಂಬಕ್ಕೆ ಸಕರ್ಾರಿ ಸೌಲಭ್ಯವನ್ನು ಒದಗಿಸಬೇಕು ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಕನರ್ಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರುಗಳಾದ ನಾರಾಯಣ್, ನರಸಿಂಹಮೂತರ್ಿ, ಸದಾಶಿವಯ್ಯ, ರಾಮಯ್ಯ ಉಪಸ್ಥಿತರಿದ್ದರು.


Sunday, July 11, 2010



ಹೊನ್ನಮ್ಮನ ಹತ್ಯೆ: ತನಿಖೆ ಕೈಗೆತ್ತಿಕೊಳ್ಳುವಂತೆ ಗೃಹ ಸಚಿವರಿಗೆ ಮನವಿ.ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಜು.11 ತಾಲೂಕಿನ ಗೋಪಾಲಪುರದಲ್ಲಿ ನಡೆದ ಹೊನ್ನಮ್ಮನ ಹತ್ಯಾ ಪ್ರಕರಣಕ್ಕೆ ಜೆ.ಡಿ.ಎಸ್ ಪಕ್ಷದ ಬೆಂಬಲವಿದೆ ಎಂಬ ವಿಷಯ ಶುದ್ದ ಸುಳ್ಳು ಮತ್ತು ಈ ಕೃತ್ಯದಲ್ಲಿ ಯಾವ ಪಕ್ಷದ ಕಾರ್ಯಕರ್ತರು ಕಾರಣರಾದರೂ ಸರಿ ಅವರಿಗೆ ಶಿಕ್ಷೆ ಆಗಬೇಕೆಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹಸಚಿವ ಡಾ.ವಿ.ಎಸ್.ಆಚಾರ್ಯರವರೊಂದಿಗೆ ಮಾತನಾಡಿದ್ದು ತನಿಖೆಯಾಗಲು ಕ್ರಮಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹೊನ್ನಮ್ಮನಿಗೂ ಹಾಗೂ ಗ್ರಾಮಸ್ಥರಿಗೂ ಹಲವು ವರ್ಷಗಳಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದರೂ ಈ ರೀತಿಯ ವಿಕೋಪಕ್ಕೆ ಹೋಗಿರಲಿಲ್ಲ, ಈ ಪ್ರಕರಣ ಕೊಲೆಯ ಹಂತದವರೆಗೆ ಹೋಗಿರುವುದು ದುರದೃಷ್ಟಕರ, ಚರಂಡಿ ಕಾಮಗಾರಿಗೆಂದು ಗೋಪಾಲಪುರಕ್ಕೆ ಚನ್ನರಾಯಪಟ್ಟಣದವರು ಬಂದಾಗ ಅಲ್ಲಿ ಆಗಾಗ್ಗೆ ಹೊನ್ನಮ್ಮನೊಂದಿಗೆ ಜಗಳ ನಡೆಯುತ್ತಿತ್ತು. ಮೊನ್ನೆ ಆದ ಈ ಕೃತ್ಯಕ್ಕೆ ಚನ್ನರಾಯಪಟ್ಟಣದವರು ಪ್ರೇರಣೆ ನೀಡಿದ್ದು, ಈ ಕೃತ್ಯದಲ್ಲಿ ಯಾವುದೇ ರಾಜಕೀಯ ಷಡ್ಯಂತ್ರವಿಲ್ಲ ಮತ್ತು ಈ ಕೃತ್ಯಕ್ಕೆ ಮುನ್ಸೂಚನೆ ಇದ್ದರೂ ಹಂದನಕೆರೆ ಪೋಲಿಸ್ ಸಿಬ್ಬಂದಿಯ ಬೇಜಾವಬ್ದಾರಿತನದಿಂದ ಹತ್ಯೆ ನಡೆದಿದೆ, ಹಂದನಕೆರೆ ಪೋಲಿಸರೇ ಇದಕ್ಕೆ ಮೂಲ ಕಾರಣರಾಗಿದ್ದು, ಈ ಘಟನೆ ಹಲವರ ದುರುದ್ದೇಶದಿಂದ ನಡೆದಿದೆಯೆ ಹೊರತು ಒಳಸಂಚಿನಿಂದ ಅಲ್ಲವೆಂದರು.
ಜಿ.ಪಂ. ಅಧ್ಯಕ್ಷರ ಆಯ್ಕೆ ಪೂರ್ವ ತಯಾರಿ ಹಾಗೂ ಸದನದಲ್ಲಿ ಭಾಗವಹಿಸಿದ್ದರಿಂದ ತಕ್ಷಣಕ್ಕೆ ಹೊನ್ನಮ್ಮನ ಹತ್ಯಾ ಸ್ಥಳಕ್ಕೆ ಆಗಮಿಸಲು ಆಗಲಿಲ್ಲ, ಕೃತ್ಯದ ನಂತರ ದಿನ ವಿಧಾನಸಭೆಯಲ್ಲಿ ವಿಷಯವನ್ನು ಮಂಡಿಸಿ ಒಂದು ಲಕ್ಷರೂ ಮೊತ್ತದ ಚೆಕ್ಕನ್ನು ಮತ್ತು 3ತಿಂಗಳಿಗೆ ಆಗುವ ಆಹಾರ ದಾಸ್ತಾನನ್ನು ಅವರ ಕುಟುಂಬಕ್ಕೆ ನೀಡಿರುವುದಲ್ಲದೆ, ಮಗನಾದ ಮಂಜುನಾಥನಿಗೆ ತಕ್ಷಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ನೇಮಿಸಲು ಸೂಚಿಸಿದ್ದೇನೆ ಎಂದರು. ಗ್ರಾಮದಲ್ಲಿ ಡಿ.ಸಿ. ಮತ್ತು ಎಸ್.ಪಿ.ಯವರ ನೇತೃತ್ವದಲ್ಲಿ ಶಾಂತಿಸಭೆ ನಡೆಸುವಂತೆ ತಿಳಿಸಿದ್ದೇನೆಂದರು.
ಗೋಷ್ಟಿಯಲ್ಲಿ ಹೊನ್ನಮ್ಮನ ಮಗ ಮಂಜುನಾಥ್, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ಎಂ.ಎನ್.ಸುರೇಶ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಯದ್ ಮುನೀರ್ ಉಪಸ್ಥಿತರಿದ್ದರು.
ಮಹಿಳಾ ಸಬಲೀಕರಣಕ್ಕಾಗಿ ಸ್ತ್ರೀಸಂಘಗಳಿಗೆ ಹೆಚ್ಚಿನ ಸಾಲ: ಕೆ.ಎನ್.ಆರ್.
ಚಿಕ್ಕನಾಯಕನಹಳ್ಳಿ,ಜು.11: ಬ್ಯಾಂಕ್ಗಳಿಂದ ಸಾಲಸೌಲಭ್ಯ ಪಡೆದವರು ಕೃಷಿಯ ಜೊತೆಗೆ ಹೈನುಗಾರಿಕೆ, ಗುಡಿಕೈಗಾರಿಕೆಯಂತಹ ಉಪಕಸುಬುಗಳನ್ನು ಅವಲಂಬಿಸಿದರೆ ನಷ್ಟ ಅನುಭವಿಸದೆ ಲಾಭ ಪಡೆದು ಸಾಲ ಮರುಪಾವತಿ ಮಾಡಬಹುದು ಎಂದು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ದೊಡ್ಡೆಣ್ಣೆಗೆರೆ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಡೆದ ವಿವಿಧ ಯೋಜನೆ ಅಡಿಯಲ್ಲಿ ಸಾಲಸೌಲಭ್ಯ ವಿತರಣಾ ಕಾರ್ಯಕ್ರದ ಉದ್ಘಾಟಸಿ ಮಾತನಾಡಿದ ಅವರು, ಸಾಲ ಪಡೆದವರು ಸಾಲವನ್ನು ಮರುಪಾವತಿ ಮಾಡಿದರೆ ಮತ್ತೆ ಅವರಿಗೆ ಸಾಲವನ್ನು ನೀಡುವುದು ಎಂದರಲ್ಲದೆ, ಮರುಪಾವತಿ ಹಣದಿಂದ ಸಾಲ ಪಡೆಯದವರಿಗೆ ಸಾಲ ನೀಡಿ ಅವರನ್ನು ಆಥರ್ಿಕವಾಗಿ ಸುಧಾರಿಸಬಹುದಾಗಿದೆ ಎಂದರು. ಸಾಲ ಮರುಪಾವತಿ ಮಾಡದೆ ಸಾಲ ಮನ್ನಾ ಆಗುತ್ತದೆಂದು ನಿರೀಕ್ಷಿಸಿದರೆ ಬಡ್ಡಿ ಹೆಚ್ಚಾಗಿ ತೊಂದರೆ ಒಳಪಡುತ್ತೀರ ಎಂದ ಅವರು, ಮಹಿಳೆಯರ ಸ್ವಸಹಾಯ ಸಂಘಗಳಿಗೆ ಇನ್ನೂ ಹೆಚ್ಚಿನ ರೀತಿಯ ಸಾಲವನ್ನು ನೀಡಿ ಅವರನ್ನು ಆಥರ್ಿಕವಾಗಿ ಸಬಲೀಕರಿಸಿ ಹಲವು ಕ್ಷೇತ್ರಗಳಿಗೆ ಅವರನ್ನು ತೊಡಗಿಸಬೇಕಾಗಿದೆ ಎಂದರು, ಇದಕ್ಕಾಗಿ ಚುನಾಯಿತ ಪ್ರತಿನಿಧಿಗಳು ಗ್ರಾಮಗಳ ಏಳಿಗೆಯ ಕುರಿತು ಹೆಚ್ಚು ಗಮನ ಹರಿಸಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಿಲ್ಲದ ಗ್ರಾಮಗಳಿಗೆ ಗ್ರಾಮೀಣ ಬ್ಯಾಂಕ್ಗಳು ಸ್ವಸಹಾಯ ಸಂಘಕ್ಕೆ ಮತ್ತು ರೈತರಿಗೆ ಹಲವು ರೀತಿಯ ಸಾಲಸೌಲಭ್ಯಗಳನ್ನು ನೀಡಿ ಗ್ರಾಮಗಳ ಆಥರ್ಿಕತೆಯನ್ನು ಹೆಚ್ಚಿಸಬೇಕು ಇದಕ್ಕಾಗಿ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಕೃಷಿ ಪತ್ತಿನ ಸಹಕಾರ ಸಂಘಗಳ ಕಟ್ಟಡದ ಕಾಮಗಾರಿಗೆ ಅರ್ಧಭಾಗದಷ್ಟು ಹಣವನ್ನು ನೀಡಲಿದೆ ಎಂದು ಹೇಳಿದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಈ ಸೊಸೈಟಿಗೆ 14 ಹಳ್ಳಿಗಳು ಸೇರಿದ್ದು ಎಲ್ಲಾ ರೀತಿಯ ಸಾಲ ಸೌಲಭ್ಯ ವಿತರಿಸಲು ಮುಂದಾಗಿದೆ ಎಂದ ಅವರು ಸಾಲಗಾರರು ಸಾಲವನ್ನು ಮರುಪಾವತಿ ಮಾಡಿದರೆ ಇನ್ನೊಬ್ಬರಿಗೆ ನೀಡಲು ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಡಿ.ಸಿ.ಸಿ ಬ್ಯಾಂಕ್ನಿಂದ ರಾಜಣ್ಣನವರನ್ನು ಬಿಟ್ಟರೆ ಜಿಲ್ಲೆಯ ಗಡಿಭಾಗಕ್ಕೆ ಆಗಮಿಸಿ ಯಾರೂ ಸಹ ಸಾಲಸೌಲಭ್ಯ ವಿತರಿಸಿಲ್ಲ ಮತ್ತು ಬ್ಯಾಂಕ್ಗಳಿಂದ ಸಾಲ ಪಡೆಯುವವರು ಹಣ ದುರುಪಯೋಗ ಮಾಡುವ ಬದಲು ಉದ್ಯೋಗ ರಚಿಸಿಕೊಂಡು ಅವರ ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದರಲ್ಲದೆ, ಸಾಲ ನೀಡಿದ ಗ್ರಾಮಗಳನ್ನು ರೈತರ ಕೇಂದ್ರವನ್ನಾಗಿ ಮಾಡಬೇಕೆಂದು ರಾಜಣ್ಣನವರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ದೊಡ್ಡೆಣ್ಣೆಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂತರಾಜ್ಅರಸ್, ನಿದರ್ೇಶಕರುಗಳಾದ ಸುಗಂಧರಾಜ್, ಲೋಕೇಶ್, ನಾಗಣ್ಣ, ಗ್ರಾ.ಪಂ.ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷರಾದ ಚಂದ್ರಶೇಖರ್, ದೊಡ್ಡಣ್ಣ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಡಿ.ಶಿವಕುಮಾರ್ ಸ್ವಾಗತಿಸಿ, ಚಿಕ್ಕಣ್ಣ ನಿರೂಪಿಸಿ, ಎಸ್.ಆರ್.ರಂಗಸ್ವಾಮಿ ವಂದಿಸಿದರು.






Friday, July 9, 2010

ಅಂಗನವಾಡಿ ನೌಕರರ ಹಲವು ಬೇಡಿಕೆಗಾಗಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.09: ಅಂಗನವಾಡಿ ನೌಕರರು 35 ವರ್ಷಗಳಿಂದ ದುಡಿಯುತ್ತಾ ಬಂದಿದ್ದರೂ ಗೌರವಧನ ಬಿಟ್ಟರೆ ಬೇರ್ಯಾವ ಸೌಲಭ್ಯಗಳನ್ನೂ ಸಕರ್ಾರಗಳು ನೀಡುತ್ತಿಲ್ಲ ಎಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪೂಣರ್ಿಮಾ ಆರೋಪಿಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲೂಕು ಕಛೇರಿಯವರಗೆ ನಡೆದ ಅಂಗನವಾಡಿ ನೌಕರರ ಪ್ರತಿಭಟನಾ ಮರೆವಣಿಗೆಯ ನಂತರ ಮಾತನಾಡಿದ ಅವರು ಅಂಗನವಾಡಿ ನೌಕರರು ಸಮಗ್ರ ಶಿಶು ಅಭಿವೃದ್ದಿ ಯೋಜನೆಯಲ್ಲಿ 65ವರ್ಷ ತುಂಬಿದರೂ ಇನ್ನೂ ನಿವೃತ್ತರಾಗದೆ ದುಡಿಯುತ್ತಲೇ ಇದ್ದು ಅವರಿಗೆ ಯಾವುದೇ ರೀತಿಯ ನಿವೃತ್ತಿ ಸೌಲಭ್ಯ ಸಿಗುತ್ತಿಲ್ಲ ಅವರಿಗೆ 65ವರ್ಷ ವಯಸ್ಸನ್ನು ನಿಗದಿ ಪಡಿಸಿ ಪ್ರತಿ ತಿಂಗಳು 1500 ಮತ್ತು 750ರೂಗಳ ಕನಿಷ್ಠ ನಿವೃತ್ತಿ ವೇತನ ನೀಡಿ 1ಲಕ್ಷದ 50ಸಾವಿರ ರೂಗಳ ಗ್ರಾಜ್ಯುಟಿ ಕೊಡಬೇಕು ಮತ್ತು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ಸಿದ್ದಪಡಿಸಿದ ಆಹಾರವನ್ನು ಕೂಡಲೇ ಬದಲಾಯಿಸಿ ವಸ್ತುಗಳ ರೂಪದ ಆಹಾರವನ್ನು ಕೇಂದ್ರಗಳಿಗೆ ಸರಬರಾಜು ಮಾಡಬೇಕು ಮತ್ತು ಎಲ್ಲಾ ಅಂಗನವಾಡಿ ನೌಕರರಿಗೂ ಬಿಪಿಎಲ್ ಕಾಡರ್್ ಮತ್ತು ವಸತಿ ಸೌಲಭ್ಯವನ್ನು ಒದಗಿಸಿಬೇಕು ಎಂದ ಅವರು ಎಸ್.ಎಸ್.ಎಲ್.ಸಿ ಓದಿದ ಸಹಾಯಕಿಯರಿಗೆ ಅಂಗನವಾಡಿ ಕಾರ್ಯಕತರ್ೆಯರಾಗಿ ತೆಗೆದುಕೊಳ್ಳಲು ನಿದರ್ೆಶನ ಜಾರಿಮಾಡಿ ಹುದ್ದೆಗಳನ್ನು ತುಂಬುವಾಗ ಮತ್ತು ವಗರ್ಾವಣೆ ಮಾಡುವಾಗ ಆಗುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಿ ಅಂಗನವಾಡಿ ಮೇಲ್ವಿಚಾರಕಿಯರ ಹುದ್ದೆಗೆ ಸಂಪೂರ್ಣ ಮೀಸಲಾತಿ ನೀಡಬೇಕು ಮತ್ತು ನಿವೃತ್ತಿಯಾಗುವ ನೌಕರರ ಸಂಬಳದ ಅರ್ಧ ಭಾಗದಷ್ಟು ನಿವೃತ್ತಿ ವೇತನ ನೀಡಿ ಬೆಲೆಯೇರಿಕೆಯ ಆಧಾರದಲ್ಲಿ ಗೌರವಧನ ಏರಿಸಬೇಕು ಮತ್ತು 3, 4 ಗ್ರೇಡ್ನ ನೌಕರರಾಗಿ ಖಾಯಂ ಮಾಡಬೇಕು ಎಂದು ತಮ್ಮ ಹಲವು ಬೇಡಿಕೆಗಳನ್ನು ಮುಂದಿಟ್ಟರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಕಾರ್ಯದಶರ್ಿ ಕೆ.ಜೆ.ಶಾರದ, ಅನ್ನಪೂರ್ಣಮ್ಮ, ನಾಗರತ್ನ ಮುಂತಾದವರಿದ್ದರು.

ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಜು.09: ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ರಥೋತ್ಸವ ಹಾಗೂ ಜಾತ್ರ ಮಹೋತ್ಸವ ಸಮಾರಂಭವು ಇದೇ ತಿಂಗಳ 22ರಿಂದ 24ರ ಶನಿವಾರದ ವರೆವಿಗೂ ಪಟ್ಟಣದಲ್ಲಿ ನಡೆಯಲಿದೆ.
ಜುಲೈ 22ರ ಗುರುವಾರ ಬೆಳ್ಳಿಪಲ್ಲಕ್ಕಿ ಉತ್ಸವ ಹಾಗೂ ಕುಂಚಾಕುರ ಕಲಾ ಯುವಕ ಮತ್ತು ವಾಣಿ ಚಿತ್ರಕಲಾ ವಿದ್ಯಾಲಯ ಸಂಯುಕ್ರ ಆಶ್ರಯದ್ಲಲಿ ಮಸೂಹ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
23ರ ಶುಕ್ರವಾರ ಬ್ರಹ್ಮರಥೋತ್ಸವವನ್ನು ಹಮ್ಮಿಕೊಂಡಿದ್ದು ದಿವ್ಯಜ್ಯೋತಿ ಕಲಾ ಸಂಘದ ವತಿಯಿಂದ ನವ ದಂಪತಿಗಳು ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪದರ್ೆ ಮತ್ತು ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಕ್ ಸಭಾಂಗಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು ಏರ್ಪಡಿಸಲಾಗಿದ್ದು 24ರ ಶನಿವಾರ ರಥೋತ್ಸವ ಮತ್ತು ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದ್ದು ಕಲ್ಪವೃಕ್ಷ ಕೋಆಪರೇಟಿವ್ ಸಭಾಂಗಣದಲ್ಲಿ ಮಧ್ಯಾಹ್ನ 3ಗಂಟೆಗೆ ನವದಂಪತಿಗಳ ಸ್ಪಧರ್ೆ ಮತ್ತು ಮಾರುತಿ ವ್ಯಾಯಾಮ ಶಾಲೆಯವರಿಂದ ಜಿದ್ದಾ ಜಿದ್ದಿನ ಕುಸ್ತಿಯನ್ನು ಹಮ್ಮಿಕೊಂಡಿದ್ದು ಸಂಜೆ ದಿವ್ಯಜ್ಯೋತಿ ಕಲಾ ಸಂಘದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಿತ್ರಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕವನ್ನು ಏರ್ಪಡಿಸಲಾಗಿದೆ.


Thursday, July 8, 2010

ಹೊನ್ನಮ್ಮಳ ಹತ್ಯೆ ಶಾಸಕರ ಬೆಂಬಲಿಗರಿಂದಲೇ: ಬಿ.ಜೆ.ಪಿ.ಕಾರ್ಯದಶರ್ಿ ಸುರೇಶ್ ಉವಾಚ
ಚಿಕ್ಕನಾಯಕನಹಳ್ಳಿ,ಜು.08: ಹೊನ್ನಮ್ಮನ ಹತ್ಯೆಯನ್ನು ಜೆ.ಡಿ.ಎಸ್ನ ಗುಂಪು ಬರ್ಭರವಾಗಿ ನಡೆಸಿದ್ದು ಅದರ ಮುಂದಾಳತ್ವವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷಿಣಿ ಮತ್ತು ಅವಳ ಗಂಡ ವಹಿಸಿದ್ದು ಆರೋಪಿಗಳಿಗೆ ಶಾಸಕರ ಬೆಂಬಲ ಈ ಕೃತ್ಯವನ್ನೆಸಗಲು ಪ್ರೇರಣೆ ನೀಡಿದೆ ಎಂದು ತಾಲೂಕು ಬಿ.ಜೆ.ಪಿ ಕಾರ್ಯಶರ್ಿ ಸುರೇಶ್ಹಳೇಮನೆ ಆರೋಪಿಸಿದ್ದಾರೆ.
ಈ ಸಂಬಂಧ ಈಗಾಗಲೇ ಅಪರಾಧಿಗಳನ್ನು ಬಂದಿಸಿದ್ದು ಇವರೆಲ್ಲಾ ಬಹುತೇಕ ಜೆ.ಡಿ.ಎಸ್ ಶಾಸಕರ ಬೆಂಬಲಿತ ಪುಂಡರ ಗುಂಪೇ ಆಗಿದೆ, ಈ ಕೃತ್ಯದನಂತರ ಶಾಸಕರು ಹತ್ಯೆಗೀಡಾದ ಹೊನ್ನಮ್ಮನ ಶವದ ಹತ್ತಿರವೂ ಸುಳಿಯದ ಇವರು, ಇಡೀ ಎರಡು ದಿನ ಪ್ರತಿಭಟನೆಯನ್ನು ದಲಿತ ಸಂಘಟನೆಗಳು ನಡೆಸಿದರೂ ಬರದೆ ಜೆ.ಡಿ.ಎಸ್.ನ ಕೈವಾಡವನ್ನು ಸಾಬೀತು ಪಡಿಸಿದ್ದಾರೆ.
ಆದರೆ ಈ ಎಲ್ಲಾ ಪ್ರಕರಣವನ್ನು ಮೀರಿದಂತೆ ಸಕರ್ಾರದಿಂದ ಹೊನ್ನಮ್ಮನ ಕುಟುಂಬಕ್ಕೆ ನೆರವಾಗಲು ಬಂದ ಒಂದು ಲಕ್ಷ ರೂ ಚೆಕ್ಕನ್ನು ಮಾತ್ರ ಹೊನ್ನಮ್ಮನ ಕುಟುಂಬಕ್ಕೆ ವಿತರಿಸಿದ್ದಾರೆ. ಒಂದು ಕೈಯಲ್ಲಿ ರಕ್ತ ಸುರಿಯುವ ಮಚ್ಚನ್ನು ಹಿಡಿದು ಮತ್ತೊಂದು ಕೈಯಲ್ಲಿ ಬಿ.ಜೆ.ಪಿ ಕಾರ್ಯಕತರ್ೆಯನ್ನು ತನ್ನ ಬೆಂಬಲಿಗರಿಂದ ಕೊಲ್ಲಿಸಿ ಮತ್ತು ಜೆ.ಡಿ.ಎಸ್ ಶಾಸಕರು ತಮ್ಮ ಅಧಿಕಾರದ ಅಮಲಿನಲ್ಲಿ ಹುಳಿಯಾರು ಪೋಲಿಸ್ ಠಾಣೆಗೆ ನುಗ್ಗಿದರೆ, ಅವರ ತಮ್ಮ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪರಿಶಿಷ್ಟ ಪಂಗಡದ ಮಹಿಳಾ ಪೋಲಿಸ್ ಪೇದೆಯ ಮೇಲೆ ನುಗ್ಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇನ್ನು ಸಾಸಲು ಗ್ರಾ.ಪಂ ಚುನಾವಣೆಯಲ್ಲಿ ಮತ ಕೇಳುವ ನೆಪದಲ್ಲಿ ಹಿಂದುಳಿದ ವರ್ಗದ ಮಹಿಳೆಯ ಮನೆಗೆ ನುಗ್ಗಿದ ಜೆ.ಡಿ.ಎಸ್ ಗೂಂಡಾಗಳ ಗುಂಪು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದು ಈ ಎಲ್ಲವನ್ನು ತನ್ನ ಅಧಿಕಾರದ ಬಲದಿಂದ ಮುಚ್ಚುವ ಪ್ರಯತ್ನವನ್ನು ಶಾಸಕರು ನಿರಂತರವಾಗಿ ಮಾಡುತ್ತಿದ್ದಾರೆ ಈಗ ದಲಿತೆ ಬಿ.ಜೆ.ಪಿ ಕಾರ್ಯಕತರ್ೆ ಹೊನ್ನಮ್ಮನ ಸರಿದಿ.
ಈ ಕೂಡಲೇ ಶಾಸಕರು ಮತ್ತು ಅವರ ಬೆಂಬಲಿಗರು ತಮ್ಮ ತಪ್ಪನ್ನು ಅರಿತು ತಿದ್ದುಕೊಂಡು ಮಾಡಬೇಕಾದ ಅಭಿವೃದ್ದಿ ಕಾರ್ಯಗಳನ್ನು ಮಾಡಿದರೆ ಸರಿ, ಇಲ್ಲದಿದ್ದರೆ ಮತದಾರನ ಮುಂದೆ ಈ ಎಲ್ಲವನ್ನೂ ಬಿಚಡಬೇಕಾಗುತ್ತದೆ ಎಂದು ಧಮಕಿ ಹಾಕಿದ್ದಾರೆ.

ಹೊನ್ನಮ್ಮನ ಹತ್ಯಾಕಾಂಡ: ಜೆ.ಡಿ.ಎಸ್ ಮೇಲೆ ಕೂಬೆ ಕೂರಿಸಲು ಹವಣಿಸುವ ಬಿ.ಜೆ.ಪಿ.ಕಾರ್ಯದಶರ್ಿ ಹೇಳಿಕೆ ಬಾಲಿಶ
ಚಿಕ್ಕನಾಯಕನಹಳ್ಳಿ,ಜು.08: ತಾಲೂಕಿನ ಗೋಪಾಲಪುರದಲ್ಲಿ ನಡೆದ ಹೊನ್ನಮ್ಮನ ಹತ್ಯಾ ಪ್ರಕರಣ ಘಟನೆಗೆ ಶಾಸಕರ ಕೈವಾಡವಿದೆ ಎಂದು ಆರೋಪಿಸಿರುವ ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ಹಳೇಮನೆಯವರಿಗೆ ಅರಿವಿನ ಕೊರತೆ ಇರುವುದರಿಂದ ಪಕ್ಷ ರಾಜಕಾರಣದ ಹೇಳಿಕೆ ನೀಡಿ ಅವರ ಬಾಲಿಶತನವನ್ನು ಪ್ರದಶರ್ಿಸಿದ್ದಾರೆ ಎಂದು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್ ಆರೋಪಿಸಿದ್ದಾರೆ.
ಶಾಸಕರು ಹತ್ಯಾ ಪ್ರಕರಣ ನಡೆದ ದಿನದಂದು ಕಾರ್ಯ ನಿಮಿತ್ತ ಕೇಂದ್ರ ಸ್ಥಾನದಲ್ಲಿ ಇರಲಿಲ್ಲ, ಅವರಿಗೆ ಸುದ್ದಿ ತಿಳಿದ ನಂತರ ತಾಲೂಕಿಗೆ ಆಗಮಿಸಿ ಹೊನ್ನಮ್ಮನ ಮಗನಾದ ಮಂಜುನಾಥನನ್ನು ಖುದ್ದು ಭೇಟಿ ಮಾಡಿ ಸಾಂತ್ವಾನ ಹೇಳಿ ಸಕರ್ಾರದ ವತಿಯಿಂದ ನೀಡಿದ ಪರಿಹಾರ ಧನ ಸ್ಥಳದಲ್ಲಿಯೇ ನೀಡಿದ್ದಾರೆ. ಈ ಕೃತ್ಯ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದಾರಲ್ಲದೆ, ಮರುದಿನ ಬೆಳಿಗ್ಗೆ ಸಿ.ಪಿ.ಐ ರವರ ಜೊತೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ನೊಂದ ಜನಕ್ಕೆ ಸಾಂತ್ವಾನ ಹೇಳಿ ಮುಂದೆ ಈ ರೀತಿ ಯಾವುದೇ ಹಿಂಸಾಚಾರ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲು ಪೋಲಿಸ್ ಅಧಿಕಾರಿಗೆ ಸೂಚಿಸಿದ್ದಾರಲ್ಲದೆ, ಜಿಲ್ಲಾ ಮಂತ್ರಿ ಸುರೇಶ್ಕುಮಾರ್ ಜೊತೆಯಲ್ಲಿ ಹಾಗೂ ಜಿಲ್ಲಾಧಿಕಾರಿ ಡಾ.ಸಿ.ಸೊಮಶೇಖರ್ ಜೊತೆಯಲ್ಲಿ ಪ್ರಕರಣದ ಬಗ್ಗೆ ಚಚರ್ಿಸಿ ಮೃತ ಹೊನ್ನಮನ ಮಗನಾದ ಮಂಜುನಾಥನಿಗೆ ಸಕರ್ಾರದ ವತಿಯಿಂದ ಅವನ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಕೊಡಿಸಲು ಪ್ರಯತ್ನಿಸಿತ್ತಿದ್ದಾರೆ. ಸಕರ್ಾರ ಹೊನ್ನಮ್ಮನ ಕುಟುಂಬಕ್ಕೆ ಒಂದು ಲಕ್ಷ ಹಣ ನೀಡಿದ್ದು, ಈ ಹಣ ಸಾಕಾಗುವುದಿಲ್ಲವೆಂದು, ಕನಿಷ್ಟ ಪಕ್ಷ 10ಲಕ್ಷ ರೂ.ಗಳನ್ನು ಪರಿಹಾರವಾಗಿ ಕೊಡಬೇಕೆಂದು ಒತ್ತಾಯಿಸಿದ್ದಾರೆ ಹಾಗೂ ಅವರ ಕುಟುಂಬದ ಸಾಲವನ್ನು ಮನ್ನಾ ಮಾಡಬೇಕೆಂದು ಸಕರ್ಾರವನ್ನು ಒತ್ತಾಯಿಸಿದ್ದಾರೆ ಹೊರತು, ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಸಕರು ಯಾರಿಗೂ ಪ್ರಚೋದನೆ ನೀಡುವುದಾಗಲಿ, ಬೆಂಬಲ ನೀಡುವುದಾಗಲಿ ಮಾಡಿಲ್ಲ ಇವೆಲ್ಲಾ ಹೊನ್ನಮ್ಮನ ಪರವಾಗಿ ಈ ಕ್ಷೇತ್ರದ ಶಾಸಕರಾಗಿ ಮಾಡಿರುವ ಕಾರ್ಯವೇ ಎಂದಿರುವ ಎಂ.ಬಿ.ನಾಗರಾಜು, ಈ ಪ್ರಕರಣದಲ್ಲಿ ಶಾಸಕರ ಕೈವಾಡವಿದೆ ಎನ್ನವುದು ರಾಜಕೀಯ ಪ್ರೇರಿತವಾಗಿದೆ ಎಂದಿದ್ದಾರೆ.
ನಮ್ಮ ನಾಯಕ ಸಿ.ಬಿ.ಸುರೇಶ್ಬಾಬುರವರಿಗೆ ಶಾಸಕ ಸ್ಥಾನದ ಜವಾಬ್ದಾರಿಯ ಅರಿವಿದ್ದು ಸುರೇಶ್ ಹಳೇಮನೆಯವರಿಂದ ಯಾವುದೇ ಪಾಠ ಕಲಿಯುವ ಅವಶ್ಯಕತೆಯಿಲ್ಲ, ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವ ಹೇಳಿಕೆಗಳನ್ನು ಮತ್ತು ಇಂತಹ ಗಂಭೀರ ಪ್ರಕರಣದಲ್ಲಿ ಹೇಳಿಕೆ ನೀಡುವಾಗ ತಮ್ಮ ಜವಾಬ್ದಾರಿ ಅರಿತು ವಸ್ತುನಿಷ್ಠವಾಗಿ ಹೇಳಿಕೆ ನೀಡಬೇಕೆಂಬ ಸಾಮಾನ್ಯ ಜ್ಞಾನವನ್ನು ಸುರೇಶ್ ಹಳೇಮನೆ ರೂಢಿಸಿಕೊಳ್ಳಲಿ ಎಂದು ಎಂ.ಬಿ.ಎನ್. ಹೇಳಿಕೆ ನೀಡಿದ್ದಾರೆ.
ಚಿ.ನಾ.ಹಳ್ಳಿ ಇನ್ನರ್ ವೀಲ್ ಕ್ಲಬ್ ಮಾದರಿಯಾಗಿದೆ: ಜಿಲ್ಲಾ ಚೇರ್ಮನ್
ಚಿಕ್ಕನಾಯಕನಹಳ್ಳಿ,ಜು.08: ಮಹಿಳೆಯರ ಆಥರ್ಿಕತೆ ಮತ್ತು ಅವರ ಅಭಿವೃದ್ದಿಯ ಏಳ್ಗೆಗಾಗಿ ನಮ್ಮ ಕ್ಲಬ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಉತ್ತಮ ಕೆಲಸವನ್ನು ನಿರ್ವಹಿಸುತ್ತಿರುವ ಇನ್ನರ್ವೀಲ್ ಕ್ಲಬ್ಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಜಿಲ್ಲಾ ಚೇರ್ಮನ್ ರೇಣುಅಯ್ಯರ್ ಹೇಳಿದ್ದಾರೆ.
ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ 2010-11ನೇ ವರ್ಷದ ಇನ್ನರ್ ವೀಲ್ ಕ್ಲಬ್ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿನ ಇನ್ನರ್ವೀಲ್ ಕ್ಲಬ್ ವಿದ್ಯಾಥರ್ಿ ವೇತನ, ಅಂಗವಿಕಲರಿಗೆ ಸಲಕರಣೆ ವಿತರಣೆ, ಸ್ತ್ರೀ ರೋಗಗಳ ತಪಾಸಣಾ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರಲ್ಲದೆ, ಸ್ತ್ರೀಯರಿಗೆ ಕ್ಲಬ್ ಆಥರ್ಿಕವಾಗಿ ಸಹಾಯ ಮಾಡುತ್ತಿದ್ದು ಎಂದರಲ್ಲದೆ, ಸ್ತ್ರೀಯರು ರಾಜಕೀಯವಾಗಿ, ಮತ್ತು ಕ್ರೀಡೆಗಳಂತಹ ಸ್ಫಧರ್ೆಗಳಲ್ಲಿ ತಾವು ಭಾಗವಹಿಸುವುದರ ಜೊತೆಗೆ ತಮ್ಮ ಮಕ್ಕಳನ್ನು ಸ್ಪಧರ್ಿಸುವಂತೆ ಪ್ರೋತ್ಸಾಹ ನೀಡಿ ಅವರನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ಪರಿವತರ್ಿಸಬೇಕು ಎಂದರು.
ಜಿಲ್ಲಾ 319ರ ಕಾರ್ಯದಶರ್ಿ ಆಶಾ ಶೈಲೇಂದ್ರ ಮಾತನಾಡಿ, ಇಲ್ಲಿನ ಇನ್ನರ್ವೀಲ್ ಕ್ಲಬ್ನ ಸಹೋದರಿಯರು ಪ್ರತಿಯೊಂದು ಸಮಾರಂಭದಲ್ಲೂ ತನ್ನ ಸಕ್ರೀಯ ಸದಸ್ಯರೊಂದಿಗೆ ಒಟ್ಟುಗೂಡಿ ರಾಜ್ಯ ಮಟ್ಟದ ಸಾಂಸ್ಕೃತಿಕತೆಸ್ಪಧರ್ೆಗಳಲ್ಲಿ ಜೊತೆಗೂಡಿ ಸ್ಪಧರ್ೆಗಳಲ್ಲಿ ಬಹುಮಾನ ತರುತ್ತಿರುವುದು ನಮ್ಮ ಇತರ ಕ್ಲಬ್ಗಳಿಗೆ ಮಾದರಿಯಾಗಿದೆ ಎಂದ ಅವರು, ಎಲ್ಲಾ ಮಹಿಳಾ ಕ್ಲಬ್ಗಳೂ ಈ ಒಗ್ಗಟ್ಟನ್ನೇ ಅನುಸರಿಸಬೇಕು ಎಂದರು.
ಇನ್ನರ್ವೀಲ್ಕ್ಲಬ್ ಅಧ್ಯಕ್ಷೆ ನಾಗರತ್ನರಾವ್ ಮಾತನಾಡಿ, ಕ್ಲಬ್ನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರ ಮತ್ತು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಏಳ್ಗೆಗಾಗಿ ನಮ್ಮೇಲ್ಲಾ ಕ್ಲಬ್ನ ಸಹೋದರಿಯರೊಂದಿಗೆ ಶ್ರಮಿಸುತ್ತೇನೆ ಎಂದರು.
ಸಮಾರಂಭದಲ್ಲಿ ಜಿಲ್ಲಾ 319ರ ಇ.ಎಸ್.ಒ ಮಾಲಿನಿರಾವ್ , ಇನ್ನರ್ವೀಲ್ ಕ್ಲಬ್ ಕಾರ್ಯದಶರ್ಿ ತೇಜಾವತಿ ಬಾಬು, ಸದಸ್ಯರಾದ ಚಂದ್ರಿಕಾಮೂತರ್ಿ, ಶಕುಂತಲಾ ಜಯದೇವ್, ಪುಷ್ಪಶಿವಣ್ಣ, ಮತ್ತು ರೋಟರಿ ಕ್ಲಬ್ನ ಅಧ್ಯಕ್ಷ ಶ್ರೀಕಂಠಯ್ಯ, ಅಶ್ವತ್ಥ್ನಾರಾಯಣ್ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತ ವಿದ್ಯಾಥರ್ಿವೇತನಕ್ಕೆ ಶೀಘ್ರ ಅಜರ್ಿ ಸಲ್ಲಿಸಿ: ಬಿ.ಇ.ಓ.
ಚಿಕ್ಕನಾಯಕನಹಳ್ಳಿ,ಜು.08: ತಾಲೂಕಿನ ಎಲ್ಲಾ ಶಾಲೆಯ ಒಂದರಿಂದ ಹತ್ತನೇ ತರಗತಿವರಗೆ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಮಂಜೂರಾತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ ತಿಳಿಸಿದ್ದಾರೆ.
ವಿದ್ಯಾಥರ್ಿಗಳು ಶಾಲಾ ಮುಖ್ಯಸ್ಥರ ದೃಡೀಕರಣದೊಂದಿಗೆ ಜುಲೈ 7ರೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯಕ್ಕೆ ಸಲ್ಲಿಸುವಂತೆ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಿದ್ದು ಪೋಷಕರು ವ್ಯಯಕ್ತಿಕ ಗಮನ ಹರಿಸಿ ವಿದ್ಯಾಥರ್ಿ ವೇತನದ ಅಜರ್ಿಗಳನ್ನು ತಿಳಿಸುವಂತೆ ಕೋರಿದ್ದಾರೆ.



Wednesday, July 7, 2010



10ನೇ ಬಾರಿ ಇನ್ನರ್ವೀಲ್ ಕ್ಲಬ್ ಅಧ್ಯಕ್ಷರಾಗಿ ನಾಗರತ್ನರಾವ್
ಚಿಕ್ಕನಾಯಕನಹಳ್ಳಿ,ಜು.07: 2010-11ನೇ ಸಾಲಿನ ಇನ್ನರ್ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಇದೇ ಜುಲೈ 8ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು ತಾಲೂಕಿನ ಇನ್ನರ್ವೀಲ್ ಕ್ಲಬ್ ಅಧ್ಯಕ್ಷರಾಗಿ ನಾಗರತ್ನರಾವ್ ಮತ್ತು ಕಾರ್ಯದಶರ್ಿಯಾಗಿ ತೇಜಾವತಿ ನರೇಂದ್ರರವರು ಆಯ್ಕೆಯಾಗಿದ್ದು ಜಿಲ್ಲಾ 319ರ ಚೇರ್ಮನ್ ರೇಣುಅಯ್ಯರ್ ಅಧಿಕಾರ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ 319ರ ಕಾರ್ಯದಶರ್ಿ ಆಶಾ ಶೈಲೇಂದ್ರ, ಮತ್ತು ಇ.ಎಸ್.ಒ ಮಾಲಿನಿರಾವ್ ಬಡವಿದ್ಯಾಥರ್ಿಗಳಿಗೆ ನೋಟ್ ಬುಕ್ ವಿತರಿಸಲಿದ್ದಾರೆ.
ಈ ಅವಧಿಯಲ್ಲಿ ಅಂಗವಿಕಲ ಮಕ್ಕಳಿಗೆ ಸಲಕರಣೆ ವಿತರಣೆ, ಮತ್ತು ಸ್ತ್ರೀ ರೋಗಗಳ ತಪಾಸಣಾ ಶಿಬಿರಗಳು ಸೇರಿದಂತೆ ವಿವಿಧ ಸೇವಾ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ವೋಲ್ಟೇಜ್ ವ್ಯತ್ಯಯದಿಂದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ
ಚಿಕ್ಕನಾಯಕನಹಳ್ಳಿ,ಜು.07: ವಿದ್ಯುತ್ನ ಅಧಿಕ ಪ್ರಮಾಣದ ವೋಲ್ಟೇಜ್ನ ಪ್ರಸರಣದಿಂದ ಮನೆಗಳ ಟಿ.ವಿ. ಮತ್ತು ಬಲ್ಪ್ಗಳು ಹೊಡೆದು ಸುಮಾರು 40ಸಾವಿರ ರೂ.ಗಳುಷ್ಟು ನಷ್ಟ ಸಂಭವಿಸಿರುವ ಘಟನೆ ಪಟ್ಟಣದ ಬನಶಂಕರಿ ಗುಡಿ ಬೀದಿಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಮಳೆ ಬಂದ ನಂತರ ಘಟನೆ ನಡೆದಿದ್ದು ರಾತ್ರಿಯಿಂದಲೇ ವೊಲ್ಟೇಜ್ ಹೆಚ್ಚಾಗಿ ಮನೆಯಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟಿ ಹೋಗಿದ್ದು ಮನೆಗಳಲ್ಲಿ ಅಳವಡಿಸಿದ್ದ ಬಲ್ಪ್ಗಳು ಮತ್ತು ಟಿ.ವಿ.ಗಳು ಸುಟ್ಟುಹೋಗಿವೆ.

ಜು.9ರಂದು ಅಂಗನವಾಡಿಗಳ ಬಂದ್
ಚಿಕ್ಕನಾಯಕನಹಳ್ಳಿ,ಜು.07: ಅಂಗನವಾಡಿ ನೌಕರರರು ತಮ್ಮ ಹಲವು ಬೇಡಿಕೆಗಳಿಗಾಗಿ ಜುಲೈ 9ರಂದು ಅಖಿಲ ಭಾರತ ಅಂಗನವಾಡಿ ನೌಕರರ ಮುಷ್ಕರದ ಪ್ರಯುಕ್ತ ತಾಲೂಕಿನ ಎಲ್ಲಾ ಅಂಗನವಾಡಿ ನೌಕರರು ಕೇಂದ್ರಗಳನ್ನು ಬಂದ್ ಮಾಡುವಂತೆ ಅಧ್ಯಕ್ಷೆ ಪೂಣರ್ಿಮ ಕರೆ ನೀಡಿದ್ದಾರೆ.
ಅಂಗನವಾಡಿ ನೌಕರರ ಹಲವು ಬೇಡಿಕೆಗಳಾದ 2010ರ ಬಜೆಟ್ನಲ್ಲಿ ಘೋಷಿಸಿರುವಂತೆ ನಿವೃತ್ತಿ ಸೌಲಭ್ಯವನ್ನು ಜಾರಿ ಮಾಡಬೇಕು, ನೌಕರರ ನಿವೃತ್ತಿಯಾಗುವ ಕಡೇ ಸಂಬಳದ ಅರ್ಧಭಾಗವನ್ನು ಪೆನ್ಷನ್ ಆಗಿ ಕೇಂದ್ರ ಸಕರ್ಾರವೇ ಕೊಡಬೇಕು, ಒಂದು ಲಕ್ಷ ಮತ್ತು ಐವತ್ತು ಸಾವಿರ ರೂಗಳ ಗ್ರಾಚ್ಯುಟಿಯನ್ನು ಕಾರ್ಯಕತರ್ೆ ಮತ್ತು ಸಹಾಯಕಿಯರಿಗೆ ಕೊಡಬೇಕು, ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ರೆಡಿಮೇಡ್ ಆಹಾರವನ್ನು ನಿಲ್ಲಿಸಿ, ಮೊದಲಿನಂತೆ ವಸ್ತುಗಳ ರೂಪದಲ್ಲಿ ಕೊಡಬೇಕು, ಅಂಗನವಾಡಿ ಕಾರ್ಯಕತೆ ಮತ್ತು ಸಹಾಯಕಿಯರಿಗೆ ಕುಶಲ ಮತ್ತು ಅರೆ ಕುಶಲ ಉದ್ಯೋಗಿಗಳಿಗೆ ಕೊಡುವ ಕನಿಷ್ಟ ಕೂಲಿಯನ್ನು ನಿಗದಿ ಮಾಡಬೇಕು ಮತ್ತು ಜಾರಿ ಮಾಡಬೇಕು, 3 ಮತ್ತು 4ನೇ ದಜರ್ೆ ನೌಕರರಾಗಿ ಖಾರ್ಯ ಮಾಡಬೇಕು, ಮತ್ತು ಐಸಿಸಿಎಸ್ ಯೋಜನೆಯನ್ನು ಖಾಸಗೀಕರಣ ಮಾಡಬಾರದು ಎಂಬ ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಾಲೂಕು ಅಂಗನವಾಡಿ ನೌಕರರ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೇಷ್ಮೇ, ಹತ್ತಿಗೆ ಸಿಗುವಷ್ಟು ಸೌಲಭ್ಯಗಳು ಉಣ್ಣೆಗೂ ಸಿಗಲಿ
ಚಿಕ್ಕನಾಯಕನಹಳ್ಳಿ,ಜು.07: ರೇಷ್ಮೆ ಹತ್ತಿಗೆ ದೊರೆಯುವಷ್ಟೇ ಸಕರ್ಾರಿ ಸೌಲಭ್ಯಗಳು ಉಣ್ಣೆಗೂ ದೊರೆಯಬೇಕು ಈ ವಿಷಯವಾಗಿ ಕೇಂದ್ರ ಸಕರ್ಾರಕ್ಕೆ ಮನವರಿಕೆ ಮಾಡಿಕೊಡಲು ಜನಪ್ರತಿನಿಧಿಗಳ ನಿಯೋಗದೊಂದಿಗೆ ದೆಹಲಿಗೆ ತೆರಳುವುದಾಗಿ ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಖಾದಿಯೇತರಸಹಕಾರ ಸಂಘಗಳ ಮಹಾ ಮಂಡಲದ ಅಧ್ಯಕ್ಷ ಆರ್.ಮಲ್ಲೇಶಪ್ಪ ತಿಳಿಸಿದರು.
ಪಟ್ಟಣದ ಶ್ರೀ ರೇವಣಸಿದ್ದೇಶ್ವ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಆವರಣದಲ್ಲಿ ನೇಕಾರ ಮಕ್ಕಳಿಗೆ ವಿದ್ಯಾಥರ್ಿ ವೇತನ ಹಾಗೂ ಮೃತ ನೇಕಾರರ ನಾಮಿನಿಗಳಿಗೆ ಅಂತ್ಯ ಸಂಸ್ಕಾರ ಸಹಾಯಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕೇಂದ್ರ ಸಕರ್ಾರ ಉಣ್ಣೆ ಉತ್ಪನ್ನಗಳನ್ನು ಕಡೆಗಣಿಸುತ್ತಿತ್ತು ಈ ಉತ್ಪನ್ನಗಳನ್ನು ಬಳಸುವ ಕಡೆಯಲ್ಲಾ ಪಯರ್ಾಯ ಉತ್ಪನ್ನಗಳಿಗೆ ಅವಕಾಶ ಕಲ್ಪಿಸುವ ಮೂಲಕ ಉಣ್ಣೆ ಉತ್ಪನ್ನಗಳ ಮಾರುಕಟ್ಟೆ ಕುಸಿಯುವಂತೆ ಮಾಡುತ್ತಿದೆ ಎಂದ ಅವರು ಹತ್ತಿ ಮತ್ತಿತರ ಉತ್ಪನ್ನಗಳಿಗೆ ಕೋಟಿಗಟ್ಟಲೆ ಅನುದಾನ ನೀಡಿ ಅವುಗಳನ್ನು ದೊಡ್ಡ ದೊಡ್ಡ ಉದ್ಯಮವನ್ನಾಗಿಸುತ್ತಿದೆ, ಉಣ್ಣೆಯ ಕಡೆ ಮಾತ್ರ ಕಿರುಗಣ್ಣಿನಿಂದಲೂ ನೋಡುತ್ತಿಲ್ಲವೆಂದರು.
ನಮ್ಮ ಉಣ್ಣೆ ನೇಕಾರರು ಸಹ ಕಂಬಳಿ ನೇಯ್ಗೆಯನ್ನು ಗುಡಿ ಕೈಗಾರಿಕೆಗಷ್ಟೇ ಸೀಮಿತಗೊಳಿಸಿದೆ ಎಂದರಲ್ಲದೆ, ಕಂಬಳಿ ನೇಕಾರರು ಯಂತ್ರಗಳನ್ನು ಬಳಸುವ ಮೂಲಕ ಅಧಿಕ ಉಣ್ಣೆ ಉತ್ಪನ್ನಗಳನ್ನು ತಯಾರಿಸಿ ದೊಡ್ಡ ಕೈಗಾರಿಕೆಯನ್ನಾಗಿಸುವಂತೆ ಮನವಿ ಮಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಎಂ.ಎಲ್.ಸಿ ಡಾ.ಎಂ.ಆರ್ ಹುಲಿನಾಯ್ಕರ್ ಮಾತನಾಡಿ ರಾಜ್ಯದ ಉಣ್ಣೆ ಸಹಕಾರ ಸಂಘಗಳ ಅಭಿವೃದ್ದಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು ಈ ಬಗ್ಗೆ ಸಕರ್ಾರದ ಅಧಿವೇಶನದಲ್ಲಿ ಮಾತನಾಡುವುದಾಗಿ ತಿಳಿಸಿದರಲ್ಲದೆ, ನೇಕಾರರ ಅಭಿವೃದ್ದಿಗೂ ದುಡಿಯುವುದಾಗಿ ತಿಳಿಸಿದರು.
ಉಣ್ಣೆ ಉತ್ಪನ್ನಗಳನ್ನು ಆಧುನಿಕ ಯುಗಮಾನಕ್ಕೆ ಹೊಂದಿಕೆಯಾಗುವಂತೆ ಉತ್ಪಾದಿಸುವುದರಿಂದ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಬಾರದು ಎಂದರು.
ವಿದ್ಯಾಥರ್ಿ ವೇತನ ವಿತರಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ನೇಕಾರರ ಸಮಸ್ಯೆಗಳನ್ನು ಸಕರ್ಾರದ ಮಟ್ಟದಲ್ಲಿ ಚಚರ್ಿಸಲು ಉತ್ಸುಕರಾಗಿರುವುದಾಗಿ ತಿಳಿಸಿದರಲ್ಲದೆ ನೇಕಾರರ ಮಕ್ಕಳ ವಿದ್ಯಾಭ್ಯಾಸಕ್ಕೂ ಯೋಜನೆಯೊಂದನ್ನು ರೂಪಿಸುವಂತೆ ಸಕರ್ಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಉಣ್ಣೆ ಸಹಕಾರ ಸಂಘಗಳ ಪುನಃಶ್ಚೇತನ್ಕ ಅಗತ್ಯವಿದ್ದು ಸೊಸೈಟಿಗೆ ವರಮಾನವನ್ನು ತಂದುಕೊಡುವಂತಹ ಯೋಜನೆಗಳನ್ನು ರೂಪಿಸುವಂತೆ ಸೊಸೈಟಿಯ ಆಡಳಿತ ಮಂಡಳಿಗೆ ಸೂಚಿಸಿದರು.
ಸಮಾರಂಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿದರ್ೇಶಕ ಸುನೀಲ್, ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿದರು.
ಸೊಸೈಟಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಸಿ.ಪಿ.ಗಿರೀಶ್ ಪ್ರಾಥರ್ಿಸಿದರು, ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿದರು. ಸಿ.ಎಸ್.ದೇವರಾಜು ವಂದಿಸಿದರು.

ತೀರ್ಥಪುರ, ತೀರ್ಥಹಳ್ಳಿ ನನ್ನ ಪಾಲಿನ ಪುಣ್ಯ ಧಾಮಗಳು:ದೇ.ಜ.ಗೌ
ಚಿಕ್ಕನಾಯಕನಹಳ್ಳಿ,ಜು.07: ನನ್ನ ಜೀವನದಲ್ಲಿ ಎರಡು ಪುಣ್ಯ ಸ್ಥಳಗಳೆಂದರೆ ತೀರ್ಥಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿ ಇವೆರಡೂ ನನ್ನ ಬಾಳನ್ನು ಬೆಳಗಿಸಿ ಗುರುಗಳ ಹುಟ್ಟೂರು ಎಂದು ನಾಡೋಜ ಕನರ್ಾಟಕ ರತ್ನ ಡಾ. ದೇ.ಜವರೇಗೌಡ ಮನಬಿಚ್ಚಿ ಮಾತನಾಡಿದರು.
ಪಟ್ಟಣದಲ್ಲಿ ಡಾ.ದೇಜವರೇಗೌಡರಿಗೆ ಕನರ್ಾಟಕ ರತ್ನ ಲಭಿಸಿದ ಹಿನ್ನೆಲೆಯಲ್ಲಿ ತಾಲೂಕು ಕ.ಸಾ.ಪ ಹಮ್ಮಿಕೊಂಡಿದ್ದ ಗೌರವಾರ್ಪಣೆಯನ್ನು ಸ್ವೀಕರಿಸಿ ಮಾತನಾಡಿದರು.
ತೀರ್ಥಹಳ್ಳಿ ಹಾಗೂ ತೀರ್ಥಪುರ ಇವೆರಡೂ ಸಹ ನನ್ನ ಬಾಳಿನ ಪುಣ್ಯ ಧಾಮಗಳು ಎಂದು ಬಣ್ಣಿಸಿದ ಅವರು ತೀರ್ಥಪುರದಲ್ಲಿ ಜನಿಸಿದ ತೀ.ನಂ.ಶ್ರೀಕಂಠಯ್ಯನವರು ನನ್ನ ಗುರುಗಳು ನನ್ನಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿದರೆ ತೀರ್ಥಹಳ್ಳಿ ತಾಲೂಕಿನಲ್ಲಿ ಹುಟ್ಟಿದ ಕು.ವೆಂ.ಪು.ರವರು ಸರಸ್ವತ ಲೋಕದಲ್ಲಿ ನನ್ನನ್ನು ನೆಲೆ ನಿಲ್ಲುವಂತೆ ಮಾಡಿ ನನ್ನಲ್ಲಿ ಮೇಲಿರುಮೆಯನ್ನು ಬೆಳೆಸಿದರು ಎಂದರು.
ಚಿಕ್ಕನಾಯಕನಹಳ್ಳಿಯ ಹೆಸರು ಕೇಳಿದಾಗಲೆಲ್ಲಾ ತೀ.ನಂ.ಶ್ರೀ.ಯವರ ವ್ಯಕ್ತಿತ್ವ ಕಣ್ಣುಮುಂದೆ ಬಂದು ನಿಲ್ಲುತ್ತದೆ ಎಂದ ಅವರು ಗುರುಗಳಾಗಿ ಅವರು ನನ್ನಂತಹ ಸಾವಿರಾರು ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿ ಈ ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಾಹಿತ್ಯದ ವಿದ್ಯಾಥರ್ಿಗಳು ಸೃಜನಶೀಲ ಮನಸ್ಸನ್ನು ವೃದ್ದಿಸಿಕೊಳ್ಳುತ್ತ ಹೋದಂತೆ ಅವರ ಸಾಹಿತ್ಯ ಕೃಷಿಯೂ ಫಲವತ್ತಾಗುತ್ತಾ ಹೋಗುತ್ತದೆ. ಓದು ಮತ್ತು ಬರಹವನ್ನು ಅಪ್ಪಿಕೊಂಡವರು ಜೀವನದಲ್ಲಿ ಸಂತೃಪ್ತಿಯನ್ನು ಕಾಣಬಲ್ಲರು, ಸಾಹಿತ್ಯದ ಕೃಷಿ ಮನಸ್ಸಿಗೆ ನೆಮ್ಮದಿಯನ್ನು ತರಬಲ್ಲದು ಎಂದುರ.
ಕನರ್ಾಟಕ ರತ್ನ ದೇ.ಜವರೇಗೌಡರಿಗೆ ಗೌರವಾರ್ಪಣೆಯನ್ನು ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಜವರೇಗೌಡರಂತಹ ವಿದ್ವಾಂಸರನ್ನು ಗೌರವಿಸುತ್ತಿರುವುದು ನಮ್ಮ ತಾಲೂಕಿಗೆ ಹಮ್ಮೆಯ ವಿಷಯ ಎಂದ ಅವರು ಸಕರ್ಾರ ಗೌಡರಿಗೆ ಕನರ್ಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದ ನಂತರದಲ್ಲಿ ನಾವೇ ಮೊದಲು ಅವರನ್ನು ಗೌರವಿಸುತ್ತಿರುವುದು ಎಂಬುದು ಸಹ ನಮ್ಮ ತಾಲೂಕಿನ ಹೆಚ್ಚುಗಾರಿಕೆಯ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಡಾ.ಜವರೇಗೌಡ ಅವರಿಗೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ರೋಟರಿಕ್ಲಬ್ನ ಕಾರ್ಯದಶರ್ಿ ಅಶ್ವತ್ಥ್ನಾರಾಯಣ್ ಪತ್ರಕರ್ತರ ಸಂಘದ ಕಾರ್ಯದಶರ್ಿ ಸಿ.ಹೆಚ್.ಚಿದಾನಂದ್, ಕನ್ನಡ ಸಂಘದ ಕೆ.ಜಿ.ಕೃಷ್ಣೇಗೌಡ ಸೇರಿದಂತೆ ಹಲವಾರು ಗೌರವಾರ್ಪಣೆ ಅಪರ್ಿಸಿದರು.
ಸಮಾರಂಭದಲ್ಲಿ ಕು.ವೆಂ.ಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ, ಪ್ರೊ.ನಾ.ದಯಾನಂದ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.

ಸಿ.ಎಂ.ರೇವಣ್ಣ, ಪ್ರೊ. ಕೆ.ಬಸವಯ್ಯ ಸ್ಮರಣ ಸಮಿತಿಯ 4ನೇ ವಷರ್ಾಚರಣೆ
ಚಿಕ್ಕನಾಯಕನಹಳ್ಳಿ,ಜು.07: ದಿವಂಗತರಾದ ಸಿ.ಎಂ.ರೇವಣ್ಣನವರು ಮತ್ತು ಪ್ರೊ.ಕೆ.ಬಸವಯ್ಯನವರ ಸ್ಮರಣ ಸಮಿತಿ ತನ್ನ 4ನೇ ವರ್ಷದ ವಾಷರ್ಿಕೊತ್ಸವ ಹಾಗೂ ಪುತ್ಥಳಿಗಳಿಗೆ ಪೂಜಾ ಕಾರ್ಯಕ್ರಮವನ್ನು ಇದೇ 10ರಂದು ಶನಿವಾರ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವನ್ನು ಪಟ್ಟಣದ ಕನಕ ಭವನದ ಮುಂಭಾಗದಲ್ಲಿರುವ ಪುತ್ಥಳಿ ಪ್ರತಿಷ್ಟಾಪನಾ ದೇಗುಲದಲ್ಲಿ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್, ಅಧ್ಯಕ್ಷ ರಾಜಪ್ಪ, ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಮಿತಿಯ ಹಿರಿಯರಾದ ಸಿ.ಡಿ.ಮುದ್ದಲಿಂಗಯ್ಯನವರನ್ನು ಸನ್ಮಾನಿಸಲಾಗವುದು ಎಂದು ಕಾರ್ಯದಶರ್ಿ ಎಂ.ಸೀರಯ್ಯ ತಿಳಿಸಿದ್ದಾರೆ.

Tuesday, July 6, 2010

ಪರಿಶಿಷ್ಟರ ಸಹಾಯಧನ ವಿತರಣೆಯಲ್ಲಿ ವಿಳಂಬ: ಆರೋಪ
ಚಿಕ್ಕನಾಯಕನಹಳ್ಳಿ,ಜೂ.06: 2009-10ನೇ ಸಾಲಿನಲ್ಲಿ ಮಹಿಳಾ ಸಂಘಗಳಿಗೆ ಸಕರ್ಾರದಿಂದ 40ಸಾವಿರ ರೂ. ಸಹಾಯಧನವನ್ನು ಮಂಜೂರು ಮಾಡಿದ್ದರೂ ಈವರೆವಿಗೂ ಸಹಾಯಧನ ವಿತರಣೆಯಾಗಿಲ್ಲ, ಇದು ಪರಿಶಿಷ್ಟ ಜಾತಿ ಮಹಿಳಾ ಸಂಘಗಳಿಗೆ ಸಕರ್ಾರ ಸುಳ್ಳು ಹೇಳಿ ಅನ್ಯಾಯ ಮಾಡಿದಂತಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ಡಿ.ಆರ್.ರುದ್ರೇಶ್ ಆರೋಪಿಸಿದ್ದಾರೆ.
ಸಕರ್ಾರದ ನಿದರ್ೇಶನದಂತೆ 100 ಮಹಿಳಾ ಸಂಘಗಳಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳ ಪಟ್ಟಿ ಮಾಡಿದ್ದು, ಇದುವರೆವಿಗೂ ಸಹಾಯ ಧನ ಮಂಜೂರಾಗಿರುವುದಿಲ್ಲ ಈ ವಿಷಯವನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ವಿಧಾನ ಸಭೆಯಲ್ಲಿ ಮಂಡಿಸಿ ಅನುದಾನ ಬಿಡುಗಡೆ ಮಾಡಿಸಿ ಕೊಡದಿದ್ದಲ್ಲಿ ಮಹಿಳಾ ಸಂಘಟನೆಗಳನ್ನು ಒಟ್ಟು ಗೂಡಿಸಿ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಕರ್ಾರದ ಗಮನ ಸೆಳೆಯಲು ಉಗ್ರ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಗ ಹರಡುವ ತಿಪ್ಪೆ ನೊಣಗಳಾಗಬೇಡಿ: ವೀರೇಶಾನಂದ ಸ್ವಾಮಿ
ಚಿಕ್ಕನಾಯಕನಹಳ್ಳಿ,ಜು.06: ಸದೃಡ ಮನಸ್ಸಿನ ವ್ಯಕ್ತಿಗಳು ಸಮಾಜಕ್ಕೆ ಸಿಹಿ ಹಂಚುವ ಜೇನು ನೊಣಗಳಾಗಬೇಕೆ ಹೊರತು ರೋಗ ಹರಡುವ ತಿಪ್ಪೆ ನೊಣಗಳಾಗಬಾರದು ಎಂದು ವೀರೇಶಾನಂದ ಸರಸ್ವತಿ ಸ್ವಾಮಿಗಳು ಹೇಳಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಹೊಂಬಾಳಮ್ಮ ದೇವಾಲಯ ಟ್ರಸ್ಟ್ ವತಿಯಿಂದ ನಡೆದ 20ನೇ ವರ್ಷದ ವಿದ್ಯಾಥರ್ಿ ವೇತನ ವಿತರಣಾ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಂಬಾಳಮ್ಮ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಸಿ.ಎಸ್.ಬಸಪ್ಪಭಾಗವತ್ ಮಾತನಾಡಿ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಬೆರೆತು ಒಟ್ಟಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಒಳ್ಳೆಯ ಪರಿವರ್ತನೆ ಕಾಣಬಹುದು ಮತ್ತು ಇಂತಹ ಕಾರ್ಯಕ್ರಮಗಳಿಗೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾಗುತ್ತದೆ ಎಂದರು.
ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಸೂರ್ಯನಾರಾಯಣ ಮಾತನಾಡಿ ಟ್ರಸ್ಟ್ ಸತತ 20 ವರ್ಷಗಳಿಂದ ಬಡ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನಾ ನೀಡಿ ಅವರ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಲಿ ಎಂದರು.
ಸಮಾರಂಭದಲ್ಲಿ ಕುರುಬರಶ್ರೇಣಿ ಶತಮಾನೋತ್ಸವ ನೆನಪಿಗಾಗಿ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಶಿರಾ ಪ್ರೆಸಿಡೆನ್ಸಿ ಸ್ಕೂಲ್ ಅಧ್ಯಕ್ಷ ಚಿದಾನಂದ್, ಕುರುಬರಶ್ರೇಣಿ ಶಾಲೆ ಹಿರಿಯ ವಿದ್ಯಾಥರ್ಿ ಸಂಘದ ಅಧ್ಯಕ್ಷ ಜಿ.ರಂಗಯ್ಯ, ದೇವಾಂಗ ಸಂಘದ ಅಧ್ಯಕ್ಷ ಶಂಕರಪ್ಪ ಬಟ್ಲೇರಿ, ಪುರಸಭಾ ಸದಸ್ಯರಾದ ಸಿ.ಟಿ.ವರದರಾಜು, ಸಿ.ಕೆ.ಕೃಷ್ಣಮೂತರ್ಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಿ.ಕೆ.ಮೇಘನಾಥ್ ಸ್ವಾಗತಿಸಿ, ಬಿ.ಕೆ.ಸುರೇಶ್ ನಿರೂಪಿಸಿ ನಾಗರಾಜ್ ಭಾಗವತ್ ವಂದಿಸಿದರು.


Monday, July 5, 2010





ಬಂದ್ ಸಂಪೂರ್ಣ ಯಶಸ್ವಿ: ಎ.ಟಿ.ಎಂ.ವಹಿವಾಟಿಗಿಲ್ಲ ಅಡ್ಡಿ
ಚಿಕ್ಕನಾಯಕನಹಳ್ಳಿ,ಜು.5: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ವಿರೋಧಿಸಿ ಬಿ.ಜೆ.ಪಿ. ಕರೆನೀಡಿದ್ದ ಭಾರತ್ ಬಂದ್ ಪಟ್ಟಣದಲ್ಲಿ ಸ್ವಯಂ ಘೋಷಿತವಾಗಿ ನಡೆಸಿದ್ದರಿಂದ ಶಾಂತರೀತಿಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಗ್ಗಿನಿಂದಲೇ ಆರಂಭಗೊಂಡ ಬಂದ್ ಪ್ರಕ್ರಿಯೆಯಿಂದಾಗಿ ಯಾವುದೇ ಅಂಗಡಿಗಳು ಬಾಗಿಲು ತೆರೆಯಲಿಲ್ಲ, ಬಸ್ ಗಳು ರಸ್ತೆಗೆ ಇಳಿಯಲಿಲ್ಲ, ಶಾಲಾ ಕಾಲೇಜ್ಗಳು ಮುಚ್ಚಿದ್ದವು, ಸಕರ್ಾರಿ ಕಛೇರಿಗಳು ಬಹುತೇಕ ಬಾಗಿಲು ಮುಚ್ಚಿದ್ದವು, ವಕೀಲರ ಸಂಘ ಬಂದ್ಗೆ ಬೆಂಬಲ ಘೋಷಿಸಿದ್ದರಿಂದ ಕೋಟರ್್ ಕಲಾಪ ನಡೆಯಲಿಲ್ಲ, ಕೇಂದ್ರ ಸಕರ್ಾರ ಕಛೇರಿಗಳು ಬಾಗಿಲು ಮುಚ್ಚಿದ್ದವು, ಬ್ಯಾಂಕ್ಗಳಲ್ಲಿ ಆರಂಭದಲ್ಲಿ ಸ್ವಲ್ಪ ಮಟ್ಟಿನ ವ್ಯವಹಾರ ನಡೆಯಿತಾದರೂ ಬಿ.ಜೆ.ಪಿ.ಕಾರ್ಯಕರ್ತರು ಬ್ಯಾಂಕ್ಗೆ ತೆರಳಿ ಬಾಗಿಲು ಹಾಕಿಸಿದರು, ಕೆನರಾ ಬ್ಯಾಂಕ್ನ ಎ.ಟಿ.ಎಂ. ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿತು.
ಆರಂಭದಲ್ಲಿ ರಸ್ತೆಗಳಲ್ಲಿ ಟೈರಿಗೆ ಬೆಂಕಿ ಹಚ್ಚುವ ಕೆಲಸ ನೆಡಿಯಿತು, ಹಾಲಿನ ಡೈರಿ, ಮೆಡಿಕಲ್ ಷಾಪ್ಗಳನ್ನು ಬಿಟ್ಟು ಉಳಿದೆಲ್ಲಾ ಅಂಗಡಿಗಳು ಬೀಗ ಮುದ್ರೆಗೊಂಡಿದ್ದರಿಂದ ರಸ್ತೆ ಎಲ್ಲಾ ಬಿಕೊ ಎನ್ನುತಿದ್ದವು.
ಬಂದ್ನಲ್ಲಿ ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಕಾರ್ಯದಶರ್ಿ ಸುರೇಶ್ ಹಳೇಮನೆ, ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸಮೂತರ್ಿ,ಪುರಸಭಾ ಸದಸ್ಯರುಗಳಾದ ಈಶ್ವರ್ ಭಾಗವತ್, ಎಂ.ಎಸ್.ರವಿಕುಮಾರ್, ಲಕ್ಷ್ಮಯ್ಯ, ವಿ.ಆರ್.ಮೇರುನಾಥ್, ಎಚ್.ಸಿದ್ದರಾಮಯ್ಯ, ನಗರ ಘಟಕ ಅಧ್ಯಕ್ಷ ಚೇತನ ಬಾಳೇಕಾಯಿ, ಎ.ಬಿ.ವಿ.ಪಿ. ಪದಾಧಿಕಾರಿಗಳಾದ ಚೇತನ ಪ್ರಸಾದ್, ಅಣೇಕಟ್ಟೆ ರಾಕೇಶ್, ಆನಂದ್, ಹರ್ಷ, ಮುಂತಾದವರು ಭಾಗವಹಿಸಿದ್ದರು.

ಅಕ್ರಮ ಮರಳು ತಡೆಯಲು ಟ್ರ್ಯಾಕ್ಟರ್ಗೆ ಅಡ್ಡಲಾಗಿ ಮಲಗಿದ ಗ್ರಾಮ ಲೆಕ್ಕಿಗ
ಚಿಕ್ಕನಾಯಕನಹಳ್ಳಿ,ಜು.05: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ನ್ನು ತಡೆಯಲು ಹೋದ ಇಬ್ಬರು ಗ್ರಾಮ ಲೆಕ್ಕಿಗರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ಮಾಡಲು ಯತ್ನಿಸಿದರೆಂದು ಇಬ್ಬರು ಟ್ರ್ಯಾಕ್ಟರ್ ಕಾಮರ್ಿಕರನ್ನು ತಹಶೀಲ್ದಾರ್ ಟಿ.ಸಿ.ಕಾಂತರಾಜು ಪೊಲೀಸರ ವಶಕ್ಕೆ ನೀಡಿದರು.
ಪಟ್ಟಣದ ಹೊರವಲಯದ ಮೇಲನಹಳ್ಳಿ ಕೆರೆಯ ಪಕ್ಕದಲ್ಲಿ 4.5 ಕೋಟಿ ರೂ ಅಂದಾಜಿನಲ್ಲಿ ಎ.ಪಿ.ಆರ್.ಪ್ರಾಜೆಕ್ಟ್ ನವರು ನಡೆಸುತ್ತಿರುವ ಮುರಾಜರ್ಿ ವಸತಿ ಶಾಲಾ ಕಾಮಗಾರಿಗೆ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗಳನ್ನು ತಡೆಯಲು ಹೋದ ಗ್ರಾಮ ಲೆಕ್ಕಿಗರಾದ ನೀಲಕಂಠಪ್ಪ ಹಾಗೂ ಉಮಾಪತಿ ಎಂಬ ಇಬ್ಬರು ಟ್ರ್ಯಾಕ್ಟರ್ಗಳನ್ನು ತಡೆದು ಮರಳನ್ನು ಎಲ್ಲಿಂದ ತಂದಿರುವವರೆಂಬುದರ ಬಗ್ಗೆ ಮಾಹಿತಿ ಪಡೆಯಲು ಹೋದಾಗ ಟ್ರ್ಯಾಕ್ಟರ್ ಚಾಲಕ ಸೇರಿದಂತೆ ಇನ್ನಿತರ ಕಾಮರ್ಿಕರು, ಗ್ರಾಮ ಲೆಕ್ಕಿಗರನ್ನು ನೂಕಾಡಿದ್ದಾರೆ, ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಿಗೂ ಟ್ರ್ಯಾಕ್ಟರ್ ಕಾಮರ್ಿಕರಿಗೂ ಮಾತಿಗೆ ಮಾತು ಬೆಳೆದು ವಿ.ಎ.ನೀಲಕಂಠಪ್ಪ ಟ್ರ್ಯಾಕ್ಟರ್ಗೆ ಅಡ್ಡಲಾಗಿ ಮಲಗಿದ್ದಾರೆ ಈ ಸನ್ನಿವೇಶದಲ್ಲಿ ಗ್ರಾಮಸ್ಥರು ನೀಲಕಂಠಪ್ಪ ಹಾಗೂ ಉಮಾಪತಿಯವರ ರಕ್ಷಣೆಗೆ ನಿಂತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಟಿ.ಸಿ.ಕಾಂತರಾಜು 70 ಟ್ರ್ಯಾಕ್ಟರ್ ಮರಳನ್ನು ಜಪ್ತಿ ಮಾಡಿ, ಮರಳು ಹೊಡೆದ ಟ್ರಿಪ್ ಶೀಟ್ನ್ನು ವಶ ಪಡಿಸಿಕೊಂಡು, ಸಕರ್ಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ ಹಾಗೂ ಅಕ್ರಮ ಮರಳು ಸಾಗಣಿಕೆ ವಿರುದ್ದ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿ ಆರೋಪಿಗಳಾದ ರಮೇಶ್ ಹಾಗೂ ಕರಿನಾಯ್ಕ ಎಂಬವವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Saturday, July 3, 2010



ನಾಡು ನುಡಿಯನ್ನು ಗೌರವಿಸುವವರೇ ನಿಜವಾದ ದೇಶಭಕ್ತರು: ದೇ.ಜ.ಗೌ.
ಚಿಕ್ಕನಾಯಕನಹಳ್ಳಿ,ಜು.3: ನಾಡು ನುಡಿಯ ಬಗ್ಗೆ ಅಭಿಮಾನ ಬೆಳಸಿಕೊಳ್ಳುವುದು ಎಲ್ಲರ ಕರ್ತವ್ಯ, ವ್ಯವಹಾರದ ದೃಷ್ಟಿಯಿಂದ ಎಲ್ಲಾ ಭಾಷೆ ಬೇಕು ನಿಜ ಆದರೆ ತಾಯಿ ಭಾಷೆ ಇವೆಲ್ಲಕ್ಕೂ ಶ್ರೇಷ್ಠವಾದದ್ದು, ತಾನು ಹುಟ್ಟಿದ ಭೂಮಿ ಪುಣ್ಯ ಕ್ಷೇತ್ರವೆಂಬುದನ್ನು ಪ್ರತಿಯೊಬ್ಬರು ಅರಿತಾಗಲೇ ದೇಶ ಭಕ್ತಿ ಮೂಡಲು ಸಾಧ್ಯ ಅದನ್ನು ಇಂದಿನ ಯುವಕರಿಗೆ ಕಲಿಸಬೇಕು ಎಂದು ಕನರ್ಾಟಕ ರತ್ನ ಡಾ.ದೇ.ಜವರೇಗೌಡ ಕರೆ ನೀಡಿದರು.
ತಾಲೂಕು ಸಾಹಿತ್ಯ ಪರಿಷತ್ತು ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಎಂ.ವಿ.ನಾಗರಾಜ್ ರಾವ್ ಅವರ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸರಸ್ವತಿಯ ಬಾಹುಗಳಲ್ಲಿ ಯಾವುದು ಶಕ್ತಿಶಾಲಿಯಾದ ಬಹು ಎಂಬುದನ್ನು ಹೇಳುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟವಾದ ಕೆಲಸ ಭಾಷೆಗಳ ವಿಷಯದಲ್ಲೂ ಸಹ ಎಂದ ಅವರು, ಮಾತೃ ಭಾಷೆಯನ್ನು ಸರಸ್ವತಿಗೆ ಹೋಲಿಸಿದರು.
ಯಾವುದೇ ಕ್ಷೇತ್ರದಲ್ಲಾಗಲಿ ಸೃಜನಶೀಲ ಮನಸ್ಸುಗಳು ಮಾತ್ರ ಉತ್ತಮ ಕೆಲಸವನ್ನು ಮಾಡಬಲ್ಲವು ಎಂದರಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಸೃಜನಶೀಲ ಮನಸ್ಸುಗಳು ಅಧಿಕವಾಗಬೇಕು ಎಂದರು.
ಸಾಹಿತಿ ಎಂ.ವಿ.ನಾಗರಾಜ್ ರಾವ್ರವರ ಹಿಂದಿ ಸಾಹಿತ್ಯ ಚರಿತ್ರೆ ಮೌಲ್ಯಯುತ ಗ್ರಂಥ ಇದನ್ನು ಲೇಖಕ ಸುಮಾರು ನಲವತ್ತು ವರ್ಷಗಳ ತನ್ನ ಅಧ್ಯಯನವನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಹಿಂದಿ ಸಾಹಿತ್ಯದ ಪ್ರತಿಯೊಂದು ಯುಗವನ್ನು ಉತ್ತಮವಾಗಿ ದಾಖಲಿಸುತ್ತಾ ಹೋಗಿದ್ದಾರೆ ಎಂದರಲ್ಲದೆ, ಹಿಂದಿ ಸಾಹಿತ್ಯ ಚರಿತ್ರೆಯನ್ನು ತನ್ನ ಮಾತೃಭಾಷೆಯಲ್ಲಿ ಬರೆಯುವ ಮೂಲಕ ಈ ಎರಡೂ ಭಾಷೆಗಳ ಕೊಂಡಿಯಂತೆ ಕೆಲಸ ಮಾಡಿದ್ದಾರೆ ಎಂದರು. ಈ ಪುಸ್ತಕವನ್ನು ಪ್ರತಿಯೊಬ್ಬ ಹಿಂದಿ ಸಾಹಿತ್ಯಾಸಕ್ತರು ಓದಲೇ ಬೇಕಾದಂತಹ ಕೃತಿಯೆಂದರು.
ಕು.ವೆಂ.ಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಮಾತನಾಡಿ, ಸಂಶೋಧನೆ, ಅಧ್ಯಯನ ಮತ್ತು ವಿಶ್ಲೇಷಣೆ ಈ ಮೂರು ಗುಣಗಳನ್ನು ಹೊಂದಿರುವ ಪುಸ್ತಕಗಳು ಮಾತ್ರ ಉತ್ತಮ ಕೃತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು. ಈ ಕೃತಿಯಲ್ಲಿ ಈ ಅಂಶವನ್ನು ಮನಗಂಡಿದ್ದೇನೆ ಎಂದರು.
ಹಿಂದಿ ಮತ್ತು ಕನ್ನಡ ಎರಡೂ ಭಾಷೆಯನ್ನು ಅಧ್ಯಯನ ಮಾಡಿರುವುದರಿಂದ ಈ ಕೃತಿಯನ್ನು ನಾನು ಮುಕ್ತವಾಗಿ ವಿಮಶರ್ೆ ಮಾಡಿದ್ದೇನೆ ಎಂದ ಅವರು, ಹಿಂದಿ ಸಾಹಿತ್ಯದಲ್ಲಿ ಬರುವ ಪ್ರತಿಯೊಂದು ಯುಗವನ್ನು ವಿಶ್ಲೇಷಣಾತ್ಮಕವಾಗಿ ಇಲ್ಲಿ ದಾಖಲಾಸಲಾಗಿದೆ ಎಂದರು.
ಲೇಖಕ ಪ್ರೊ.ನಾ.ದಯಾನಂದ ಮಾತನಾಡಿ, ಈ ಕೃತಿಯ ಪ್ರತಿಯೊಂದು ಹೆಜ್ಜೆಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ಹಿಂದಿ ಸಾಹಿತ್ಯ ಚರಿತ್ರೆಯನ್ನು ಕನ್ನಡದಲ್ಲಿ ಬರೆಯುವ ಮೂಲಕ ಹಿಂದಿ ಬಾರದವರೂ ಈ ಗ್ರಂಥವನ್ನು ಅವಲೋಕಿಸಿದರೆ ಈ ಸಾಹಿತ್ಯ ಚರಿತ್ರೆಯ ಬಗ್ಗೆ ಅಧಿಕೃತವಾಗಿ ಮಾತನಾಡಬಹುದಾದಂತಹ ಶಕ್ತಿಯನ್ನು ಪಡೆಯುತ್ತಾನೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಈ ತಾಲೂಕಿನ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಿರುವ ಎಂ.ವಿ.ನಾಗರಾಜ್ ರಾವ್ ಅವರು ಇನ್ನಿಷ್ಟು ಸಾಹಿತ್ಯ ಸೇವೆಯನ್ನು ಮಾಡಲಿ ಎಂದರು.
ಸಾಹಿತಿ ಆರ್.ಬಸವರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ದೇ.ಜವರೇಗೌಡ ಅವರಿಗೆ ತಾಲೂಕಿನ ಪರವಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ತಹಶೀಲ್ದಾರ್ ಟಿ.ಸಿ.ಕಾಂತರಾಜು ಗೌರವಾರ್ಪಣೆ ಸಲ್ಲಿಸಿದರು. ಹೇಮಂತ ಸಾಹಿತ್ಯದ ಮಾಲೀಕ ವೆಂಕಟೇಶ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗಮಣಿ ತಂಡ ಪ್ರಾಥರ್ಿಸಿದರು, ಎಂ.ವಿ.ನಾಗರಾಜ್ ರಾವ್ ಸ್ವಾಗತಿಸಿದರೆ, ಸಿ.ಗುರುಮೂತರ್ಿ ಕೊಟ್ಟಿಗೆಮನೆ ನಿರೂಪಿಸಿದರು, ಅಣಪ್ಪ ವಂದಿಸಿದರು.

Friday, July 2, 2010

ವಿದ್ಯಾಥರ್ಿ ವೇತನ ಹಾಗೂ ಮೃತ ನೇಕಾರರ ನಾಮಿನಿಗಳಿಗೆ ಅಂತ್ಯ ಸಂಸ್ಕಾರ ಸಹಾಯ ಧನ ವಿತರಣಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.02(1): ಶ್ರೀ ರೇವಣ ಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ 2009-10ನೇ ಸಾಲಿನ ರಾಜ್ಯವಲಯ ನೇಕಾರರ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯಾಥರ್ಿ ವೇತನ ಹಾಗೂ ಮೃತ ನೇಕಾರರ ನಾಮಿನಿಗಳಿಗೆ ಅಂತ್ಯ ಸಂಸ್ಕಾರ ಸಹಾಯಧನ ವಿತರಣಾ ಸಮಾರಂಭವನ್ನು ಜುಲೈ 3ರಂದು ಮಧ್ಯಾಹ್ನ 1ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಎಸ್.ಆರ್.ಎಸ್ ಸೊಸೈಟಿ ಮುಭಾಗ ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ವಿದ್ಯಾಥರ್ಿ ವೇತನ ವಿತರಣೆ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ರೇವಣ ಸಿದ್ದೇಶ್ವರ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ವಹಿಸಲಿದ್ದು ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಖಾದಿಯೇತರ ಸಂಘದ ಅಧ್ಯಕ್ಷ ಆರ್.ಮಲ್ಲೇಶಪ್ಪ ಸಹಾಯಧನ ವಿತರಿಸಲಿದ್ದು ಸಹಕಾರ ಸಂಘದ ಉಪನಿಬಂಧಕ ಆರ್.ಲೋಕೇಶ್ ಯಶಸ್ವಿನಿಕಾಡರ್್ ವಿತರಣೆ ಮಾಡಲಿದ್ದಾರೆ. ಜವಳಿ ಇಲಾಖೆ ಉಪನಿದರ್ೇಶಕ ಸುನೀಲ್ ಉಣ್ಣೆಉತ್ಪನ್ನಗಳ ಪ್ರದರ್ಶನ ಮಳಿಗೆ ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ಪ್ರಾಧ್ಯಾಪಕ ಡಾ.ಸಿ.ತಿಪ್ಪೇರುದ್ರಯ್ಯ, ಸಹಾಯಕ ಉಪನಿಬಂಧಕ ಕಾಂತರಾಜು, ತಿಪಟೂರು ತಹಶೀಲ್ದಾರ್ ವಿಜಯ್ಕುಮಾರ್, ಸ್ಥಳೀಯ ತಹಶೀಲ್ದಾರ್ ಟಿ.ಸಿ. ಕಾಂತರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು, ಬಿ.ಇ.ಓ ಪ್ರಭುಸ್ವಾಮಿ, ಶಿವಾನಂದ್, ಮುಕುಂದಯ್ಯ, ಶಿವಣ್ಣ, ಸಿ.ಕೆ.ಲೋಕೇಶ್, ಸುಲೋಚನಗುರುಲಿಂಗಯ್ಯ ಉಪಸ್ಥಿತರಿರುವರು.