Friday, June 12, 2015


ತಾಲ್ಲೂಕಿನ 28 ಗ್ರಾಮ ಪಂಚಾಯತ್ಗಳ  ಅಧ್ಯಕ್ಷ, ಉಪಾಧ್ಯಕ್ಷರುಗಳ ಮೀಸಲಾತಿ ವಿವರಗಳು
ಚಿಕ್ಕನಾಯಕನಹಳ್ಳಿ,ಜೂ.12 : ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷಗಳ ಸ್ಥಾನಗಳಿಗೆ  ಮೀಸಲಾತಿಯನ್ನು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ಲಾಟರಿ ಮೂಲಕ ನಿಗಧಿಪಡಿಸಿದರು.
ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ನಡೆದ ಪ್ರಕ್ರಿಯೆಯಲ್ಲಿ 28 ಗ್ರಾ.ಪಂ.ಗಳ ಎಲ್ಲಾ ಸದಸ್ಯರು ಭಾಗವಹಿಸಿದ್ದು,  ಸಕರ್ಾರ ನಿಗಧಿಪಡಿಸಿದ್ದ ಮೀಸಲು ಪಟ್ಟಿ ಪ್ರಕಟಗೊಳಿಸಿದ  ಜಿಲ್ಲಾಧಿಕಾರಿಗಳು, ಮಾತನಾಡಿ, ಪಂಚಾಯತ್ ರಾಜ್ ಅಧಿನಿಯಮ 1993ರ ಚುನಾವಣೆ ನಂತರ ಮೊದಲ ಮೀಸಲಾತಿ ಪ್ರಕಟಗೊಂಡಿದ್ದು ಅಲ್ಲಿಂದ 2000, 2002, 2005, 2007, 2010, 2012ನ ಸಾಲಿನ ನಿಗದಿತ ಮೀಸಲಾತಿ ಪರಿಗಣಿಸಿ ಅಂದರೆ ಈ ಹಿಂದೆ ಮೀಸಲಾತಿ ದೊರೆತ ಕ್ಯಾಟಗರಿಯನ್ನು ಬಿಟ್ಟು ಅಧ್ಯಕ್ಷ, ಉಪಾಧ್ಯಕ್ಷ ಗಳಿಗೆ ಜಾತಿವಾರು ಮೀಸಲಾತಿ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ನೇತೃತ್ವದಲ್ಲಿ ಎಡಿಸಿ ಡಾ.ಅನುರಾಧ ಘೋಷಿಸಿದರು. ತಹಶೀಲ್ದಾರ್ ಕಾಮಾಕ್ಷಮ್ಮ, ವಿಜಯ್ರಾಜ್, ಅಧಿಕಾರಿಗಳಾದ ಅಡಪದ್ ಮತ್ತು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಸೂಡಿ, ಬರಗೂರು, ಗಾಣದಾಳು ಹೊಯ್ಳಳಕಟ್ಟೆ, ತೀರ್ಥಪುರ, ಹೊನ್ನೆಬಾಗಿ, ಶೆಟ್ಟಿಕೆರೆ ಈ ಭಾಗಗಳಲ್ಲಿ ಮೀಸಲಾತಿ ಪಟ್ಟಿಯಲ್ಲಿ ಅಭ್ಯಥರ್ಿಗಳು ಬದಲಿಸುವಂತೆ ಹಾಗೂ ಮಹಿಳಾ ಮೀಸಲಾತಿಗೆ ಬದಲಾಗಿ ಸಾಮಾನ್ಯರಿಗೆ ಆದ್ಯತೆ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ಅಹವಾಲು ಸಲ್ಲಿಸಿದರು, ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಸಕರ್ಾರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಶೇ.50ರಷ್ಟು ಮೀಸಲಾತಿ ಕಾಯ್ದಿರಿಸಿದ್ದು  ಈ ಉದ್ದೇಶದ ಅನುಸಾರವಾಗಿ ಹಲವು ಜಾತಿಗಳ ಅನುಗುಣವಾಗಿ ಮಾನದಂಡಗಳನ್ನು ಇಟ್ಟುಕೊಂಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು. 

ತಾಲ್ಲೂಕಿನ 28 ಗ್ರಾಮ ಪಂಚಾಯತ್ಗಳ ಮೀಸಲಾತಿ ವಿವರಗಳು
ಕ್ರ.ಸಂ ಗ್ರಾಮ ಪಂಚಾಯಿತಿ ಹೆಸರು ಅಧ್ಯಕ್ಷ ಮೀಸಲಾತಿ ಉಪಾಧ್ಯಕ್ಷ ಮೀಸಲಾತಿ
1                    ದಸೂಡಿ ಪರಿಶಿಷ್ಠ ಜಾತಿ(ಮಹಿಳೆ)                    ಸಾಮಾನ್ಯ
2                 ಹೊಯ್ಸಳಕಟ್ಟೆ            ಸಾಮಾನ್ಯ(ಮಹಿಳೆ)        ಪರಿಶಿಷ್ಠ ಜಾತಿ(ಮಹಿಳೆ)
3                  ಗಾಣದಾಳು ಪರಿಶಿಷ್ಠ ಜಾತಿ(ಮಹಿಳೆ)            ಸಾಮಾನ್ಯ
4                     ಕೆಂಕೆರೆ          ಹಿಂದುಳಿದ ವರ್ಗ ಬ(ಮಹಿಳೆ)            ಸಾಮಾನ್ಯ
5                    ಹುಳಿಯಾರು      ಸಾಮಾನ್ಯ(ಮಹಿಳೆ)                   ಪರಿಶಿಷ್ಠ ಜಾತಿ
6                     ಯಳನಡು             ಸಾಮಾನ್ಯ                     ಸಾಮಾನ್ಯ(ಮಹಿಳೆ)
7                     ಕೋರಗೆರೆ             ಸಾಮಾನ್ಯ                    ಪರಿಶಿಷ್ಠಪಂಗಡ(ಮಹಿಳೆ)
8                    ದೊಡ್ಡ ಎಣ್ಣೆಗೆರೆ       ಸಾಮಾನ್ಯ (ಮಹಿಳೆ)              ಪರಿಶಿಷ್ಠ ಜಾತಿ
9                  ಹಂದನಕೆರೆ      ಪರಿಶಿಷ್ಠ ಜಾತಿ        ಹಿಂದುಳಿದ ವರ್ಗ ಅ (ಮಹಿಳೆ)
10                 ಚೌಳಕಟ್ಟೆ              ಸಾಮಾನ್ಯ                ಪರಿಶಿಷ್ಠ ಪಂಗಡ (ಮಹಿಳೆ)
11                 ತಿಮ್ಲಾಪುರ              ಸಾಮಾನ್ಯ                  ಹಿಂದುಳಿದ ವರ್ಗ ಅ
12                 ದೊಡ್ಡಬಿದರೆ ಸಾಮಾನ್ಯ (ಮಹಿಳೆ)              ಸಾಮಾನ್ಯ
13               ಬರಕನಾಳು           ಪರಿಶಿಷ್ಠ ಜಾತಿ               ಸಾಮಾನ್ಯ (ಮಹಿಳೆ)
14              ಘಮ್ಮನಹಳ್ಳಿ               ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ (ಮಹಿಳೆ)
15               ರಾಮನಹಳ್ಳಿ                ಪರಿಶಿಷ್ಠ ಜಾತಿ (ಮಹಿಳೆ)      ಸಾಮಾನ್ಯ
16                  ಕಂದಿಕೆರೆ              ಸಾಮಾನ್ಯ (ಮಹಿಳೆ)        ಪರಿಶಿಷ್ಠ ಜಾತಿ
17                 ಬೆಳಗುಲಿ              ಹಿಂದುಳಿದ ವರ್ಗ ಅ           ಸಾಮಾನ್ಯ (ಮಹಿಳೆ)
18              ಬರಗೂರು                    ಸಾಮಾನ್ಯ                  ಸಾಮಾನ್ಯ(ಮಹಿಳೆ)
19               ಮತಿಘಟ್ಟ                ಹಿಂದುಳಿದ ವರ್ಗ ಅ           ಸಾಮಾನ್ಯ (ಮಹಿಳೆ)
20              ಮಲ್ಲಿಗೆರೆ          ಹಿಂದುಳಿದ ವರ್ಗ ಅ (ಮಹಿಳೆ)             ಸಾಮಾನ್ಯ
21             ಕುಪ್ಪೂರು                ಸಾಮಾನ್ಯ                         ಹಿಂದುಳಿದ ವರ್ಗ ಅ
22               ಶೆಟ್ಟಿಕೆರೆ           ಪರಿಶಿಷ್ಠ ಪಂಗಡ                 ಹಿಂದುಳಿದ ವರ್ಗ ಬ (ಮಹಿಳೆ)
23             ದುಗಡಿಹಳ್ಳಿ       ಹಿಂದುಳಿದ ವರ್ಗ ಅ(ಮಹಿಳೆ)          ಪರಿಶಿಷ್ಠ ಪಂಗಡ
24          ಮುದ್ದೇನಹಳ್ಳಿ             ಸಾಮಾನ್ಯ                    ಪರಿಶಿಷ್ಠ ಜಾತಿ (ಮಹಿಳೆ)
25       ಹೊನ್ನೆಬಾಗಿ                   ಪರಿಶಿಷ್ಠ ಪಂಗಡ (ಮಹಿಳೆ)              ಸಾಮಾನ್ಯ
26        ತೀರ್ಥಪುರ                      ಸಾಮಾನ್ಯ                         ಸಾಮಾನ್ಯ  (ಮಹಿಳೆ)
27 ಗೋಡೆಕೆರೆ                         ಪರಿಶಿಷ್ಠ ಪಂಗಡ (ಮಹಿಳೆ)                   ಸಾಮಾನ್ಯ
28 ಜೆ.ಸಿ.ಪುರ                               ಪರಿಶಿಷ್ಠ ಜಾತಿ                      ಹಿಂದುಳಿದ ವರ್ಗ ಅ (ಮಹಿಳೆ)

ಚಿತ್ರ ಶೀಷರ್ಿಕೆ
12ಚಿಕ್ಕನಾಯಕನಹಳ್ಳಿ ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ, ಎಡಿಸಿ ಡಾ.ಅನುರಾಧ ಘೋಷಿಸಿದರು. ತಹಶೀಲ್ದಾರ್ ಕಾಮಾಕ್ಷಮ್ಮ, ವಿಜಯ್ರಾಜ್, ಅಧಿಕಾರಿಗಳಾದ ಅಡಪದ್ ಮತ್ತು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ,ಜು.12 : ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ 5 ವರ್ಷಗಳ ಅವಧಿಗೆ ಮೀಸಲು ಪಟ್ಟಿ ಪ್ರಕಟಗೊಂಡಿದ್ದು ಇವುಗಳಲ್ಲಿ ಕೆಲವು ಅವಿರೋಧವಾಗಿ ಆಯ್ಕೆಯಾಗುವಂತಹ ಲಕ್ಷಣಗಳು ಕಂಡುಬಂದಿದೆ.
  ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ ಹೊರತು ಪಡಿಸಿದರೆ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ,  ಹಿಂದುಳಿದ ವರ್ಗ ಅ ಮತ್ತು ಬ ಇವುಗಳಲ್ಲಿ ಮೀಸಲು ಪಟ್ಟಿಯಲ್ಲಿ ಕೆಲವು ಪಂಚಾಯಿತಿಗಳಲ್ಲಿ ಮೀಸಲಿರುವ ಅಭ್ಯಥರ್ಿಗಳು ಒಂದಕ್ಕಿಂತ ಹೆಚ್ಚಿಲ್ಲದ ಕಡೆ ಅವಿರೋಧವಾಗಿ ಆಯ್ಕೆಯಾಗುವ ಸಂಭವನೀಯತೆ ಇದೆ. 
ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಅನುಸೂಚಿತ ಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಈ ಕ್ಷೇತ್ರದಲ್ಲಿ ಶೆಟ್ಟಿಕೆರೆ ಬ್ಲಾಕ್ 1ರಲ್ಲಿ ಬಿ ನಾಗಮಣಿ ಬಿಟ್ಟರೆ ಈ ಪಂಗಡಲ್ಲಿ ಯಾರೊಬ್ಬರೂ ಇಲ್ಲದ ಕಾರಣ ಅವರ ಆಯ್ಕೆ ಖಚಿತವಾಗಿದೆ.
ಗೋಡೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಎಸ್.ಟಿ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಸೋಮನಹಳ್ಳಿ ಬ್ಲಾಕಿನ ದ್ರಾಕ್ಷಾಯಿಣಿ ಎಂಬುವವರು ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಇವರ ಆಯ್ಕೆ ಖಚಿತವಾಗಿದೆ.
  ಕೆಂಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗ ಬಿ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಗೌಡಗೆರೆ ಬ್ಲಾಕಿನ ಜಯಮ್ಮ ಎಂಬುವವರು ಈ ವರ್ಗಕ್ಕೆ ಸೇರಿದ ಏಕೈಕ ಮಹಿಳೆಯಾಗಿದ್ದು ಸಾಮಾನ್ಯ ಮಹಿಳೆ ಸ್ಥಾನದಲ್ಲಿ ಅಭ್ಯಥರ್ಿಗಳು ಈ ವರ್ಗಕ್ಕೆ ಸೇರಿದ್ದರೆ ಮಾತ್ರ ಸ್ಪಧರ್ೆ ಸಂಭವಿಸುತ್ತದೆ ಇಲ್ಲದೆ ಹೋದಲ್ಲಿ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಕೋರಗೆರೆ ಪಂಚಾಯ್ತಿ ಪರಿಶಿಷ್ಠ ಪಂಗಡದ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಿದ್ದು ಈ ಪಂಚಾಯ್ತಿಯಲ್ಲಿ ಭಟ್ಟರಳ್ಳಿ ಬ್ಲಾಕಿನ ಗೀತಮ್ಮ ಎಂಬುವವರು ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿದ್ದು ಇವರಿಗೆ ಉಪಾಧ್ಯಕ್ಷ ಸ್ಥಾನ ಒಲಿಯಲಿದೆ.
ಚೌಳಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪರಿಶಿಷ್ಠ ಪಂಗಡ ಮಹಿಳೆಗೆ ಉಪಾಧ್ಯಕ್ಷ ಸ್ಥಾನ  ಮೀಸಲಿದ್ದು ಈ ಕ್ಷೇತ್ರದ ಅಧಿಕೃತ ಅಭ್ಯಥರ್ಿಯಾಗಿ ಎಸ್.ಕಾಂತಲಕ್ಷ್ಮಿಯವರು ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದರು ಉಪಾಧ್ಯಕ್ಷ ಸ್ಥಾನ ಕೂಡ ಅವರಿಗೆ ಅದೃಷ್ಠ ಲಕ್ಷ್ಮೀಯಾಗಿ ಒಲಿಯಲಿದ್ದಾಳೆ. ಈ ಕ್ಷೇತ್ರದಲ್ಲಿ ಸಾಮಾನ್ಯ ಮಹಿಳೆ ನಾಲ್ಕು ಸದಸ್ಯರಿದ್ದು ಈ ನಾಲ್ವರಲ್ಲಿ  ಪರಿಶಿಷ್ಠ ಪಂಗಡದವರು ಸೇರಿದ್ದರೆ ಮಾತ್ರ ಚುನಾವಣೆ ಸಂಭವಿಸಲಿದೆ.
ಮತಿಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಹಿಂದುಳಿದ ವರ್ಗ ಎ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಈ ವರ್ಗದಿಂದ ಮಾದಾಪುರ ಬ್ಲಾಕಿನ ವಿಮಲ ಏಕೈಕ ಅಭ್ಯಥರ್ಿಯಾಗಿದ್ದು  ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಇಬ್ಬರು ಮಹಿಳೆಯರು ಇರುವ ಕಾರಣ ಈ ವರ್ಗಕ್ಕೆ ಸೇರಿದ್ದರೆ ಮಾತ್ರ ಚುನಾವಣೆ ನಡೆಯಲಿದೆ.
ದುಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗ ಅ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಕಾರೆಹಳ್ಳಿ ಬ್ಲಾಕ್ನ ವಿಜಯಮ್ಮ ಈ ವರ್ಗಕ್ಕೆ ಸೇರಿದವರಾಗಿದ್ದು ಸಾಮಾನ್ಯ ಕ್ಷೇತ್ರದಿಂದ ಹಿಂದುಳಿದ ವರ್ಗ ಎ ವರ್ಗಕ್ಕೆ ಸೇರಿದ ಮಹಿಳೆಯರಿದ್ದರೆ ಮಾತ್ರ ಚುನಾವಣೆ ನಡೆಯಲಿದ್ದು ಉಪಾಧ್ಯಕ್ಷ ಸ್ಥಾನ ಅನುಸೂಚಿತ ಪಂಗಡ ಮಹಿಳೆಗೆ ಮೀಸಲಿರುವ ಕಾರಣ ಗೌಡನಹಳ್ಳಿ ಕ್ಷೇತ್ರದ ಪಾರ್ವತಮ್ಮ ಮೀಸಲಾತಿ ಹೊಂದಿರುವ ಕಾರಣ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಹೊನ್ನೆಬಾಗಿ ಗ್ರಾಮ ಪಂಚಾಯಿತಿ ಪರಿಶಿಷ್ಠ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿರುವ ಕಾರಣ ಈ ವರ್ಗದ ಬಾವನಹಳ್ಳಿ ಕ್ಷೇತ್ರದಿಂದ ಲೋಕಮ್ಮ ಈ ಪಂಚಾಯಿತಿಯಲ್ಲಿ ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿರುವುದರಿಂದ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಒಟ್ಟಾರೆ ಈ ಮೀಸಲು ನಿಗಧಿ ಪಡಿಸಿದ ಆಧಾರದ ಮೇಲೆ ಸಾಮಾನ್ಯ ಸ್ಥಾನದಲ್ಲಿ ಸಂಬಂಧಿಸಿದ ಜಾತಿಗೆ ಸೇರಿದವರು ಇಲ್ಲದಿದ್ದರೆ,  ಇವರ ಆಯ್ಕೆ ಅವಿರೋಧವಾಗಲಿದ್ದು ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ಡಿವಿಪಿ ಶಾಲೆಯ ಮುಂಭಾಗ ಧರಣಿ 



ಚಿಕ್ಕನಾಯಕನಹಳ್ಳಿ,ಜೂ.12 : ಡಿವಿಪಿ ಶಾಲೆಯಲ್ಲಿ ಓದುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ಎಂದು ಪೋಷಕರಿಗೆ ಹೇಳಿದ್ದಲ್ಲದೆ ಅವರ ಆಹಾರ ಪದ್ದತಿಯ ಬಗ್ಗೆ ಕೇವಲವಾಗಿ ಮಾತನಾಡಿದ್ದರಿಂದ ಆಕ್ರೋಶಗೊಂಡ ಸಮುದಾಯದ ವಿದ್ಯಾಥರ್ಿಗಳು ಹಾಗೂ ಪೋಷಕರು  ಡಿವಿಪಿ ಶಾಲೆ ಮುಂಭಾಗ ಕೆಲಕಾಲ ಧರಣಿ ನಡೆಸಿದರು.
ಪಟ್ಟಣದ ಡಿವಿಪಿ ಶಾಲೆಯಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ಮಕ್ಕಳು ಓದಿನ ಕಡೆ ಹೆಚ್ಚು ಗಮನ ನೀಡುವುದಿಲ್ಲ, ಶಾಲೆಗೆ ನಿತ್ಯ ಹಾಜರಾಗುವುದಿಲ್ಲ ಇದರಿಂದ ನಮ್ಮ ಶಾಲೆಯ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುತ್ತದೆ ನೀವು ಬೇರೆ ಶಾಲೆಗೆ ಟಿ.ಸಿ.ತೆಗೆದುಕೊಂಡು ಹೋಗಿ ಎಂದು ಹೇಳಿದ್ದಲ್ಲದೆ, ಅವರ ಆಹಾರ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡಿದ ಮು.ಶಿ.ಹಾಗೂ ಶಿಕ್ಷಕರೊಬ್ಬರ ಮೇಲೆ ಪೋಷಕರು ಹರಿಹಾಯ್ದರು. 
ಕೆಲ ಕಾಲ ಶಾಲೆಯ ಮುಂದೆ ಷಾಮಿಯಾನ ಹಾಕಿ ಪ್ರತಿಭಟಿಸಿದ ಘಟನೆಯೂ ನಡೆಯಿತು, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಪ್ರತಿಭಟನಾ ಸ್ಥಳಕ್ಕೆ ಬರುವವರೆಗೆ ಕದಲುವುದಿಲ್ಲವೆಂದು ಕುಳಿತಿದ್ದರು, ಸ್ಥಳಕ್ಕೆ ಬಂದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಬಿ.ಸುರೇಶ್ಬಾಬು ಪೋಷಕರನ್ನು ಸಮಾಧಾನ ಪಡಿಸಿದ್ದಲ್ಲದೆ, ಶಿಕ್ಷಕರ ವಿರುದ್ದ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆದರು.
ಶಿಕ್ಷಕರಿಗೆ ನೋಟೀಸ್:  ಪೋಷಕರ ದೂರಿನ ಮೇರೆಗೆ ಸಂಬಂಧಿಸಿದ ಇಬ್ಬರು ಶಿಕ್ಷಕರಿಗೆ ಆಡಳಿತ ಮಂಡಳಿ ನೋಟೀಸ್ ನೀಡಲಾಗಿದೆ. ಎಂದು ತಿಳಿದು ಬಂದಿದೆ.