Saturday, August 21, 2010


ಆಗಷ್ಟ್ 23ರಂದು ಯಾದವ ಜನಾಂಗದವರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಆ,21: ಜಿಲ್ಲಾ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಇದೇ 23ರ ಸೋಮವಾರ ಬೆಳಗ್ಗೆ 11ಗಂಟೆಗೆ ತುಮಕೂರಿನ ಪುರಭವನದ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾಡುಗೊಲ್ಲರ ಮುಖಂಡರುಗಳಾದ ತೀರ್ಥಪುರ ವಾಸುದೇವ, ಗೋಡೆಕೆರೆ ಶಿವಣ್ಣ ತಿಳಿಸಿದ್ದಾರೆ.
ಕಾಡುಗೊಲ್ಲರು ಅತ್ಯಂತ ಹಿಂದುಳಿದ ಅಲೆಮಾರಿ, ಅರೆಅಲೆಮಾರಿ, ಬುಡಕಟ್ಟು ಸಂಪ್ರದಾಯಕ್ಕೆ ಸೇರಿದವರಾಗಿದ್ದು ಆಥರ್ಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದಾರೆ, ಸಕರ್ಾರದ ಮೀಸಲಾತಿ ಇದ್ದರೂ ಸಹ ಇತರೆ ಜಾತಿಗಳ ಸೇರ್ಪಡೆಯಾಗಿ ನಮ್ಮ ಜನಾಂಗಕ್ಕೆ ಸಕರ್ಾರಿ ಶಾಲಾ ಮಕ್ಕಳ ಹಾಜರಾತಿ ಸಕರ್ಾರದ ಪ್ರಾಯೋಜಿತ ಯೋಜನೆಗಳಲ್ಲಿ ವಂಚಿತರಾಗಿದ್ದೇವೆ ಇದರ ಅನ್ಯಾಯದ ವಿರುದ್ದವಾಗಿ ಸಕರ್ಾರಕ್ಕೆ ಮನವಿಯನ್ನು ನೀಡುವ ಮೂಲಕ ರಸ್ತೆತಡೆಯನ್ನು ಹಮ್ಮಿಕೊಳ್ಳಲಾಗಿದೆ, ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿಯನ್ನು ನೀಡಲಾಗುತ್ತದೆ. ಪ್ರತಿಭಟನೆಗೆ ಯಾದವ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.