Wednesday, June 23, 2010

ಲಾರಿ ಹರಿದು ಯುವಕ ಸ್ಥಳದಲ್ಲೇ ಸಾವು
ಚಿಕ್ಕನಾಯಕನಹಳ್ಳಿ,ಜೂ.23: ಪಟ್ಟಣದ ಹೊರವಲಯದ ಹೊಸಹಳ್ಳಿ ಬಳಿ
ಲಾರಿಯೊಂದು ಯುವಕನ ತಲೆಯ ಮೇಲೆ ಹರಿದ ಪರಿಣಾಮ ಮೋಹನ್(17) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹೊಸಹಳ್ಳಿಯ ಮೋಹನ್ ತೋಟವೊಂದರಲ್ಲಿ ಕೆಲಸ ಮಾಡಿ ಸೈಕಲ್ನಲ್ಲಿ ಮನೆಗೆ ವಾಪಸ್ ಬರುವಾಗ ಚಿ.ನಾ.ಹಳ್ಳಿ ಕಡೆಯಿಂದ ಬಂದ ಲಾರಿಯ ಹೊಡತಕ್ಕೆ ಸಿಕ್ಕ ಯುವಕ ಆಯ ತಪ್ಪಿ ನೆಲಕ್ಕೆ ಉರುಳಿದ್ದಾನೆ ಇದೇ ಸಂದರ್ಭದಲ್ಲಿ ಲಾರಿಯ ಚಕ್ರ ಮೋಹನನ ತಲೆಯ ಮೇಲೆ ಹರಿದು ಸಾವನ್ನಿಪ್ಪಿದ್ದಾನೆ.
ಪ್ರಕರಣವನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿದ್ದಾರೆ.
ಅಂಬೇಡ್ಕರ್ ಶಾಲೆಯಲ್ಲಿ ವಿದ್ಯಾಥರ್ಿ ಸಂಘ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಜೂ.23: ಪಟ್ಟಣದ ಡಾ.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ವಿದ್ಯಾಥರ್ಿ ಸಂಘದ ಉದ್ಘಾಟನೆ, ಉಚಿತ್ ನೋಟ್ ಬುಕ್ ಗಳ ವಿತರಣೆ ಹಾಗೂ ನೂತನ ವಿದ್ಯಾಥರ್ಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಿದ್ಯಾಥರ್ಿಗಳನ್ನು ಕುರಿತು ಮಾತನಾಡಿದರು.
ಸಂಸ್ಥೆಯ ಕಾರ್ಯದಶರ್ಿ ಗೋ.ನಿ.ವಸಂತಕುಮಾರ್ ವಿದ್ಯಾಥರ್ಿಗಳಿಗೆ ನೋಟ್ ಬುಕ್ ವಿತರಿಸಿದರು. ಜಾನಪದ ಕಲಾವಿದ ರಂಗಯ್ಯ ಗೀತೆಗಳನ್ನು ಹಾಡಿದರು, ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಂ.ಆನಂದ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಸಿ.ಎಸ್.ದೇವರಾಜು ಸ್ವಾಗತಿಸಿದರೆ, ಕೆ.ಎನ್.ರಾಮಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಮುದ್ದರಂಗಪ್ಪ ವಂದಿಸಿದರು.