Saturday, January 16, 2016

ಪುರಸಭೆ ಸಭೆಯಲ್ಲಿ ಅಭಿವೃದ್ದಿ ಮಾತು ಶೂನ್ಯ, ಕಿತ್ತಾಟದ್ದೇ ಮೇಲಾಟ
  • 11 ಗಂಟೆಗೆ ಆರಂಭವಾದ ಸಭೆ ಮಧ್ಯದಲ್ಲಿ ಮೊಟಕುಗೊಂಡು 1ಗಂಟೆಗೆ ಪುನರಾರಂಭ.
  • ಏಕವಚನದಲ್ಲಿ ಸದಸ್ಯರ ಚೀರಾಟ, ಕೂಗಾಟ
  • ಮುಖ್ಯಾಧಿಕಾರಿ ಹಜಾಮ ಪದಬಳಕೆ, ಸದಸ್ಯರ ಆಕ್ರೋಶ. ಕ್ಷಮೆಯಾಚಿಸಿದ ಮುಖ್ಯಾಧಿಕಾರಿ.
  • ಕೆಲವಿಷಯಗಳ ಬಗ್ಗೆ ಮಾತ್ರ ಚಚರ್ೆ, ಉಳಿದ ವಿಷಯ ಮುಂದೂಡಿಕೆ.

ಚಿಕ್ಕನಾಯಕನಹಳ್ಳಿ,ಜ.16 : ಸದಸ್ಯರುಗಳೇ ಒಂದು ತಿಳಿದುಕೊಳ್ಳಿರಿ ಕಾನೂನು ಇಲ್ಲಿ ಹೇಗೆ ಹೇಳುತ್ತೀರೋ ಕಛೇರಿಯಲ್ಲಿಯೂ ಅದೇ ರೀತಿ ಇರಬೇಕು, ಸಭೆಯಲ್ಲಿ ಒಂದು ರೀತಿ ಮಾತನಾಡುತ್ತೀರಿ ಛೇಂಬರ್ನಲ್ಲಿ ಇನ್ನೊಂದು ರೀತಿ ಮಾತನಾಡುತ್ತೀರಿ ಎಂದು ಮುಖ್ಯಾಧಿಕಾರ ಪಿ.ಶಿವಪ್ರಸಾದ್ ನೇರವಾಗಿ ಆರೋಪಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಪ್ರೇಮದೇವರಾಜುರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಟ್ಟಡ ಪರವಾನಿಗೆ ವಿಚಾರ ಬಂದಾಗ, ಸದಸ್ಯರು ಪರವಾನಿಗೆ ನೀಡದೆ ಮುಖ್ಯಾಧಿಕಾರಿ ಸತಾಯಿಸುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದಾಗ ಮೇಲಿನಂತೆ ಮುಖ್ಯಾಧಿಕಾರಿ ಖಾರವಾಗಿ ಹೇಳಿದರು.
ಸದಸ್ಯ ರಾಜಶೇಖರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ, ಪಿಡಬ್ಲ್ಯೂಡಿ ಕಛೇರಿ ಮುಂಭಾಗದಲ್ಲಿ ಗ್ಯಾರೇಜ್ಗೆ ಹಣ ಪಡೆದು ಶಾಶ್ವತ ಪರವಾನಿಗೆ ನೀಡಿದ್ದೀರಿ ಆದರೆ ಜನಸಂದಣಿಯೇ ಇಲ್ಲದ ಹಾಗಲವಾಡಿ ಗೇಟ್ ಬಳಿ ಇರುವ ಕ್ಷೌರಿಕ ಅಂಗಡಿಗೆ ತಾತ್ಕಾಲಿಕವಾಗಿ ಪರವಾನಿಗೆ ನೀಡಿದ್ದೀರಿ ಏಕೆ ಎಂದು ಪ್ರಶ್ನಿಸಿದರು ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಅವರು ಮಾತಿನ ಭರಾಟೆಯಲ್ಲಿ ಮಾನವೀಯತೆ ದೃಷ್ಠಿಯಿಂದ ಅಜಾಮರಿಗೆ ತೊಂದರೆ ಕೊಡಬಾರದು ಎಂದು ತಾತ್ಕಾಲಿಕ ಪರವಾನಿಗೆ ನೀಡಿದ್ದೇನೆ ಎಂದರು.
ಮುಖ್ಯಾಧಿಕಾರಿಯ ಅಜಾಮ ಎಂಬ ಪದದ ಬಳಕೆಗೆ ಸದಸ್ಯರೆಲ್ಲರೂ ಆಕ್ರೋಶ ವ್ಯಕ್ತಪಡಿಸಿದರು, ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಸುಶಿಕ್ಷಿತ ಅಧಿಕಾರಿ ಬಾಯಲ್ಲಿ ಈ ರೀತಿಯ ಜಾತಿ ನಿಂದನೆಯ ಮಾತು ಬಂದಿರುವುದು ಅಕ್ಷಮ್ಯ ಕೂಡಲೇ ಅಧಿಕಾರಿ ಸಭೆಯಿಂದ ಹೊರನಡೆಯಬೇಕು ಹಾಗೂ ಈ ಹೇಳಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.
ಈ ಎಲ್ಲಾ ಘಟನೆ ನಂತರ ಮುಖ್ಯಾಧಿಕಾರಿ ಮಾತನಾಡಿ, ಬಾಯ್ತಪ್ಪಿನಿಂದಾಗಿ ಇಂತಹ ಮಾತು ಹೊರಬಂದಿದ್ದು ಎಲ್ಲರಲ್ಲೂ ಪದದ ಬಳಕೆಯ ಬಗ್ಗೆ ಕ್ಷಮೆ ಕೋರುತ್ತಿದ್ದೇನೆ ಎಂದರು.
ಸದಸ್ಯ ಮಹಮದ್ಖಲಂದರ್ ಮಾತನಾಡಿ, ಜೋಗಿಹಳ್ಳಿಯ ರವಿ ಎಂಬುವವರಿಗೆ ಮನೆ ಕಟ್ಟುವ ಪರವಾನಿಗೆ ನೀಡಲು ಮೊದಲು ತಿರಸ್ಕರಿಸಿದ್ದ ಮುಖ್ಯಾಧಿಕಾರಿ ನಂತರ ಹಣ ಪಡೆದು ಪರವಾನಿಗೆ ನೀಡಿದ್ದಾರೆ, ದುಡ್ಡು ಕೊಟ್ಟಾಗ ಕಾನೂನು ಬದಲಾಗುತ್ತದೆಯೇ ಎಂದು ಆರೋಪಿಸಿದರು.
ಪುರಸಭೆ ಕಾಮಗಾರಿ ಹಾಗೂ ಆದಾಯದ ಖಚರ್ು ವೆಚ್ಚವನ್ನು ಸಭೆಗೆ ನೀಡುತ್ತಿಲ್ಲ, ಸದಸ್ಯರಿಗೆ ನೀಡುವ ಮಾಹಿತಿಯಲ್ಲಿ ಕಾಮಗಾರಿಯ ಹೆಸರು ಇರುತ್ತದೆಯೇ ಹೊರತು ನಿಗದಿತ ಹಣ ನಮೂದಾಗಿರುವುದಿಲ್ಲ ಇದು ಸದಸ್ಯರನ್ನೇ ಮರಳು ಮಾಡುವ ಅಧಿಕಾರಿಗಳ ತಂತ್ರ ಎಂದು ಸದಸ್ಯರುಗಾಳದ ರೇಣುಕಾಗುರುಮೂತರ್ಿ, ಸಿ.ಡಿ.ಚಂದ್ರಶೇಖರ್, ಸಿ.ಟಿ.ದಯಾನಂದ್, ಎಂ.ಕೆ.ರವಿಚಂದ್ರ ಆರೋಪಿಸಿದರು.
ಪೌರಕಾಮರ್ಿಕರಿಗೆ ನೀಡುತ್ತಿರುವ ಬೆಳಗಿನ ಉಪಹಾರ ಸಮರ್ಪಕವಾಗಿಲ್ಲ, ನಿಯಮದಂತೆ ಒಬ್ಬ ಕಾಮರ್ಿಕನಿಗೆ 450ಗ್ರಾಂ ಆಹಾರ ನೀಡಬೇಕು ಆದರೆ ಎರಡು ಗುಂಡು ಇಡ್ಲಿ, ಒಂದು ವಡೆ ನೀಡಲಾಗುತ್ತಿದೆ ಇದನ್ನು ಆರೋಗ್ಯ ನಿರೀಕ್ಷಕರು ತಪಾಸಣೆಗೆ ಒಳಪಡುಸುತ್ತಿಲ್ಲ ಎಂದು ಸದಸ್ಯ ಸಿ.ಡಿ.ಚಂದ್ರಶೇಖರ್ ಆರೋಪಿಸಿದರು.
ಪುರಸಭೆಗೆ ಸಕರ್ಾರ ನೀಡುವ ಎಸ್.ಏಪ್.ಸಿ, ಐಡಿಎಸ್ಎಮ್ಟಿ ಶೇ.24% ಹಾಗೂ 14% ರಲ್ಲಿ ಪುರಸಭೆಗೆ ಎಷ್ಟು ಹಣ ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡುವಂತೆ ಸದಸ್ಯ ಎಂ.ಕೆ.ರವಿಚಂದ್ರ ಹಾಗೂ ಸಿ.ಟಿ.ದಯಾನಂದ್ ಆಗ್ರಹಿಸಿದರು.
ಪಟ್ಟಣದಲ್ಲಿ ಪುರಸಭೆ ವತಿಯಿಂದ ವಿವಿಧ ಯೋಜನಗಳಿಗೆ ರಸ್ತೆ, ಅಭಿವೃದ್ದಿ ಕಾಮಗಾರಿ ನಡೆದಿದೆ, ಸಿ.ಸಿ.ರಸ್ತೆ ಕಳಪೆ ಕಾಮಗಾರಿಯಿಂದ ಜಲ್ಲಿಕಲ್ಲುಗಳು ಎದ್ದು ಹೋಗಿವೆ ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸದಸ್ಯ ಸಿ.ಡಿ.ಚಂದ್ರಶೇಖರ್ ಪುರಸಭಾ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಕಾಮಗಾರಿ ವೀಕ್ಷಣೆಗೆ ಪ್ರತ್ಯೇಕ ವಿಭಾಗವಿದೆ ಈ ಬಗ್ಗೆ ತಪಾಸಣೆಗೆ ಜಿಲ್ಲಾಧಿಕಾರಿಗೆ ವರದಿ ಕಳುಹಿಸುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ಎಲ್ಲಾ ವಾಡರ್್ಗಳಲ್ಲಿ ಕಸದ ರಾಶಿ ಬಿದ್ದಿದೆ ಕೂಡಲೇ ತೆರವುಗೊಳಿಸುವಂತೆ ಸದಸ್ಯ ಎಂ.ಕೆ.ರವಿಚಂದ್ರ ಆಗ್ರಹಿಸಿದರು. ಪುರಸಭೆಯ ಟ್ರಾಕ್ಟರ್ಗಳು ಕೆಟ್ಟುಹೋಗಿದ್ದು ರಿಪೇರಿಯಾದ ನಂತರ ಕಸವಿಲೇವಾರಿ ಮಾಡಲಾಗುವುದು ಎಂದಾಗ ಕಸವಿಲೇವಾರಿಗೆ ಬಾಡಿಗೆ ಟ್ರಾಕ್ಟರ್ ತೆಗೆದು ಕೊಂಡು ವಿಲವೇರಿ ಮಾಡುವಂತೆ ಸಲಹೆ ನೀಡಿದರು.
ಪುರಸಭೆ ವತಿಯಿಂದ ನೂತನವಾದ ಟ್ರಾಕ್ಟರ್ ಖರೀದಿಗೆ ಸಂಬಂಧಿಸಿದಂತೆ ಸ್ವರಾಜಮಜ್ಡ್ ಟ್ರಾಕ್ಟರ್ ಖರೀದಿಸಿ ಉತ್ತಮ ಕ್ಷಮತೆಯ ಟ್ರಾಕ್ಟರ್ ಆಗಿದೆ ಇದನ್ನೇ ಖರೀದಿಸುವಂತೆ ಸದಸ್ಯರು ಹೇಳಿದರು. 

ಮಧ್ಯದಲ್ಲೇ ಎದ್ದು ಹೋದ ಸದಸ್ಯರು.
ವಿರೋಧ ಪಕ್ಷದ ಸದಸ್ಯ ಸಿ.ಪಿ.ಮಹೇಶ್ ಜಗಜೀವನರಾಂ ನಗರದ ಕೆಲವರ ನಿವೇಶನದಲ್ಲಿ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾರೆ ಎಂದು ಸಭೆಯ ಮಧ್ಯದಲ್ಲಿ ಕೆಲವರನ್ನು ಅನುಮತಿ ಪಡೆಯದೇ ಕರೆದುಕೊಂಡು ಬಂದಿದ್ದಾರೆ ಎಂದು ಅಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಮಾತಿನ ಚಕಮಕಿ ನಡೆಸಿ, ಸಭೆಯಿಂದ ಹೊರನಡೆದ ಪ್ರಸಂಗ ನಡೆಯಿತು, ಇದರಿಂದ ಪುರಸಭಾ ಅಧ್ಯಕ್ಷೆ ಪ್ರೇಮದೇವರಾಜ್ ಸಹ ಸಭೆಯಿಂಧ ಹೊರ ನಡೆದರು ನಂತರ ಪುರಸಭಾಧ್ಯಕ್ಷೆ ಪ್ರೇಮಾದೇವರಾಜ್ ಕಛೇರಿಯಲ್ಲಿ ಸದಸ್ಯರು, ಹಾಗೂ ವಿರೋಧ ಪಕ್ಷದ ಸದಸ್ಯ ಸಿ.ಪಿ.ಮಹೇಶ್ ಹಿಂದಿನ ಸಭೆಗಳ ಸಮಯದಲ್ಲಿ ಇದೇ ರೀತಿ ಸಭೆ ನಡೆಯುವಾಗ ಸಾರ್ವಜನಿಕ ಸಮಸ್ಯೆಗೆ ಸದಸ್ಯರು ಸಭೆಗೆ ಕರೆದುಕೊಂಡು ಬಂದು ಸಮಸ್ಯೆ ಬಗೆಹರಿಸಿದ್ದರು ಎಂಬ ವಾದ ಆಡಳಿತ ಪಕ್ಷದ ಸದಸ್ಯರು ಸಭೆ ನಡೆಯುವಾಗ ಸಾರ್ವಜನಿಕರು ಸಭೆ ನಡೆಯುವಾಗ ಪ್ರವೇಶವಿಲ್ಲ ಎಂಬ ವಾದವಿವಾದ ನಡೆಸಿ ಸುಮಾರು ಒಂದುವರೆ ಗಂಟೆಗಳ ಕಾಲ ಸಮಯ ಕಾಲಹರಣವಾಯಿತು, ಈ ವಾದವಿವಾದದ ಸಮಯದಲ್ಲಿ ಪುರಸಭಾ ಸದಸ್ಯೆ ಜೆ.ಡಿ.ಎಸ್.ನ ರೇಣುಕಮ್ಮ ಹಾಗೂ ಕಾಂಗ್ರೆಸ್ ಸಿ.ಪಿ.ಮಹೇಶ್ ಏಕವಚನದಲ್ಲಿ ಬೈದಾಡಿದರು. ಸದಸ್ಯರ ಒಪ್ಪಿಗೆ ನಂತರ ಪುನಃ 1 ಗಂಟೆಗೆ ಸಭೆ ಆರಂಭವಾಯಿತು.
ಹೇಮಾವತಿ ನಾಲೆಯಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಕುಂದರನಹಳ್ಳಿ ಬಳಿಯ ಪಂಪ್ ಹೌಸ್ ಮೋಟಾರು ಕೆಟ್ಟು ಹೋಗಿದ್ದು ಇದನ್ನೇ ರೀಪೇರಿ ಮಾಡಿಸುವಂತೆ ಸದಸ್ಯರು ಹೇಳಿದ್ದರೂ 250 ಹೆಚ್.ಪಿ. ಮೋಟಾರು ಅಳವಡಿಸುವಂತೆ ರೇಕಾಡರ್್ ಮಾಡಿದ್ದೀರಿ ಎಂದು ಸದಸ್ಯರು ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಿಂದಿನ ಸಭೆ ನಡುವಳಿಯಲ್ಲಿ ಹೊಸತು ಖರೀದಿ ಮಾಡುವಂತೆ ಸದಸ್ಯರು ಹೇಳಿಲ್ಲ ಈಗಿರುವ ಪೈಪ್ ಲೈನ್ 250  ಹೆಚ್.ಪಿ ಮೋಟಾರು ಅಳವಡಿಸಿದರೆ ಹೆಚ್ಚು ಪ್ರಸರ್ ನೀರು ಬರುವುದರಿಂದ ಪೈಪ್ಲೈನ್ ತಡೆಯುವುದಿಲ್ಲ ಎಂಬ ಕಾರಣದಿಂದ 175ಹೆಚ್.ಪಿ. ಮೋಟಾರು ರೀಪೇರಿ ಮಾಡಿಸಿ ಎಂದು ಹೇಳಿದ್ದೇವೆ ಎಂದರು.
ಪುರಸಭಾ ಸದಸ್ಯೆ ರೇಣುಕಮ್ಮ ಮಾತನಾಡಿ ಅಧಿಕಾರಿಗಳು ಸದಸ್ಯರು ಹೇಳಿದಂತೆ ರೇಕಾಡರ್್ ಮಾಡದೇ ತಮಗೆ ಇಷ್ಟ ಬಂದಂತೆ ಬರೆದುಕೊಂಡರೇ ಹೇಗೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ಮಹಮದ್ಖಲಂದರ್, ರಾಜಶೇಖರ್, ಸಿ.ಡಿ.ಚಂದ್ರಶೇಖರ್, ಸಿ.ಪಿ.ಮಹೇಶ್, ಸಿ.ಟಿ.ದಯಾನಂದ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಅಶೋಕ್, ಹೆಚ್.ಬಿ.ಪ್ರಕಾಶ್, ಇಂದಿರಾಪ್ರಕಾಶ್, ಪುಷ್ಪ.ಟಿ.ರಾಮಯ್ಯ, ಧರಣಿ.ಬಿ.ಲಕ್ಕಪ್ಪ, ರೇಣುಕಾಗುರುಮೂತರ್ಿ, ರೇಣುಕಮ್ಮಸಣ್ಣಮುದ್ದಯ್ಯ, ರೂಪಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 
ತಾಲ್ಲೂಕು ಸವಿತಾ ಸಮಾಜದಿಂದ ಖಂಡನೆ: ಪುರಸಭೆ ಸಾಮಾನ್ಯ ಸಭೆ ನಡೆಯುತ್ತಿದ್ದಾಗ ಮುಖ್ಯಾಧಿಕಾರಿ ಪಿ.ಶಿವಪ್ರಕಾಶ್, ಹಜಾಮ ಎಂಬ ಪದ ಬಳಸಿ ಜನಾಂಗಕ್ಕೆ ಅವಹೇಳನ ಮಾಡಿದ್ದಾರೆ,  ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕಿರುವ ಅಧಿಕಾರಿಯೇ ಅಮಾನವೀಯವಾಗಿ ಮಾತನಾಡಿರುವುದು ಖಂಡನೀಯ. ಈ ಘಟನೆಯನ್ನು ಖಂಡಿಸಿ ಸಮಾಜದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುಪ್ರೀಂ ಸುಬ್ರಮಣ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.