Saturday, July 26, 2014

ಪತ್ರಿಕಾ ಕಛೇರಿಯ ಮೇಲೆ ದಾಳಿ ಖಂಡಿಸಿ ವಿವಿಧ        ಸಂಘಟನೆಗಳಿಂದ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.26  : ಪ್ರಜಾಪ್ರಗತಿ ಪತ್ರಿಕಾ ಕಛೇರಿಯ ಮೇಲೆ ಕೆಪಿಸಿಸಿ ಅಧ್ಯಕ್ಷರ ಬೆಂಬಲಿಗರೆನ್ನಲಾದ ಪುಂಡರು ದಾಳಿ ನಡೆಸಿ ಕಛೇರಿಯ ವ್ಯವಸ್ಥಾಪಕರು, ಸಿಬ್ಬಂದಿಗಳಗೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲ್ಲೂಕಿನ ಹತ್ತುಕ್ಕೂ ಅಧಿಕ ಸಂಘ-ಸಂಸ್ಥೆಗಳು ನೆಹರು ಸರ್ಕಲ್ನಿಂದ ಬೈಕ್ ರ್ಯಾಲಿ ಹೊರಟು  ತಹಶೀಲ್ದಾರ್ ಕಛೇರಿ ತಲುಪಿ ಕಛೇರಿ  ಮುಂದೆ ಪ್ರತಿಭಟನೆ ನಡೆಸಿ, ಸಕರ್ಾರ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಶಿರಸ್ತೆದಾರ್ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
     ತಾಲ್ಲೂಕಿನ ಜನಪರ ವೇದಿಕೆ, ಸ್ಪಂದನ ಜನಸೇವಾ ಪ್ರಗತಿಪರರ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಬುಡಕಟ್ಟು ಅಲೆಮಾರಿ ಮಹಾ ಸಭಾ, ಮಡಿವಾಳ ಸಂಘ,  ಕುಂಚಾಂಕುರ ಕಲಾ ಸಂಘ, ವಿಕಲಚೇತನರ ಸಂಘ, ಪತ್ರಕರ್ತರ ಸಂಘ, ದಿವ್ಯ ಜ್ಯೋತಿ ಸಂಘ, ಆಟೋ ಚಾಲಕರ ಸಂಘ, ಜಯ ಕನರ್ಾಟಕ ಸಂಘಟನೆಗಳ ಮುಖಂಡರುಗಳು  ಪ್ರತಿಭಟನೆಯಲ್ಲಿ ಭಾಗವಹಿಸಿ,  ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಹಲ್ಲೆ ಮಾಡಿದವರನ್ನು ಶೀಘ್ರ ಬಂಧಿಸದಿದ್ದರೆ ಪ್ರತಿಭಟನೆ ತೀವ್ರಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
    ತಾಲ್ಲೂಕು ಜನಪರ ವೇದಿಕೆ ಸಂಘಟನೆಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಡಾ.ಜಿ.ಪರಮೇಶ್ವರ್ರವರ ಬಗ್ಗೆ ಮಲ್ಲಿಕಾಜರ್ುನ ಖಗರ್ೆ ನೀಡಿರುವ ಹೇಳಿಕೆಯನ್ನು ಪ್ರಜಾಪ್ರಗತಿ ಸೇರಿದಂತೆ ರಾಜ್ಯದ ಹಲವು ಪತ್ರಿಕೆಗಳಲ್ಲಿ ಈ  ವರದಿ ಬಂದಿದೆ, ಆದರೆ ಪರಮೇಶ್ವರ್ ಕಡೆಯವರೆಂದು ಹೇಳಿಕೊಂಡಿರುವ ಕೆಲವರು ಈ ವರದಿಯನ್ನು ಪ್ರಕಟಿಸಿದ್ದೇ ತಪ್ಪು ಎಂಬ ರೀತಿಯಲ್ಲಿ ವತರ್ಿಸಿ ದಾಂಧಲೆ ನಡೆಸಿರುವುದು, ಪತ್ರಿಕಾ ಸ್ವಾತಂತ್ರವನ್ನೇ ಹತ್ತಿಕ್ಕುವ ಕೆಲಸಕ್ಕೆ ಕೈಯಾಕಿದಂತಾಗಿದೆ ಎಂದರು.
  ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ, ಕೆ.ಪಿ.ಸಿ.ಸಿ. ಪಕ್ಷದ ಅಧ್ಯಕ್ಷರ ಬೆಂಬಲಿಗರಿಂದ ಪತ್ರಿಕಾ ಕಛೇರಿಯ ಮೇಲೆ ಗುಂಡಾಗಿರಿಯಾಗುತ್ತಿದ್ದರೂ ಇದನ್ನು ತಡೆಗಟ್ಟುವಲ್ಲಿ ಸಕರ್ಾರ ವಿಫಲವಾಗಿ ರಾಜ್ಯದ ಆಡಳಿತವನ್ನೇ ಪ್ರಶ್ನಿಸುವಂತಾಗಿದೆ, ಸಂವಿಧಾನದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾಯರ್ಾಂಗ ಹಾಗೂ ನಾಲ್ಕನೇ ಅಂಗವಾಗಿ ಪತ್ರಿಕಾರಂಗವಿದೆ ಈ ಮೇಲಿನ ಸಂವಿಧಾನದ ಮೂರು ಅಂಗಗಳ ತಪ್ಪುಗಳನ್ನು ತಿದ್ದುವಲ್ಲಿ ಪತ್ರಿಕಾರಂಗ ಕೆಲಸ ಮಾಡುತ್ತಿದೆ ಎಂದರಲ್ಲದೆ ಕೂಡಲೇ ಹಲ್ಲೆ ನಡೆಸಿದವರನ್ನು ಬಂಧಿಸದಿದ್ದರೆ ಸಂಘ ಸಂಸ್ಥೆಗಳ ಮುಖಂಡರುಗಳು ನಡೆಸುತ್ತಿರುವ ಪ್ರತಿಭಟನೆ ಉಗ್ರ ರೂಪ ಪಡೆದುಕೊಳ್ಳುವುದು ಎಂದರು.
    ದಲಿತ ಸಂಘರ್ಷ ಸಮಿತಿಯ ಮುಖಂಡ ಲಿಂಗದೇವರು ಮಾತನಾಡಿ ಸಮಾಜದ ಆಗು-ಹೋಗುಗಳನ್ನು ನೇರವಾಗಿ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ಪತ್ರಿಕೆ ಹಾಗೂ ಮಾಧ್ಯಮ ಮಾಡುತ್ತಿದೆ, ತನ್ನ ಲೇಖನಿಯಿಂದ ಸಮಾಜದಲ್ಲಿ ನಿಭರ್ೀತಿಯಿಂದ ಕೆಲಸ ನಿರ್ವಹಿಸುವ ಪತ್ರಿಕೆಯ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು ಸಕರ್ಾರ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದರು.
    ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವಲೋಚನ ಮಾತನಾಡಿ, ಹಿಂದೆ ಪತ್ರಿಕೆ ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆದರೆ ಸಕರ್ಾರ ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದವರ ಮೇಲೆ ಶೀಘ್ರ ಕಾನೂನು ಕ್ರಮ ತೆಗೆದುಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ವಿಷಯವನ್ನು ಕೇವಲವಾಗಿ ತೆಗೆದುಕೊಳ್ಳುತ್ತಿದೆ ಎಂದ ಅವರು ಸಕರ್ಾರ ಹಲ್ಲೆ ನಡೆಸಿದವರ ವಿರುದ್ದ ಶೀಘ್ರ ಬಂಧಿಸಿ, ನ್ಯಾಯ ದೊರಕಿಸಿಕೊಡುವಂತೆ ಹೇಳಿದರು.
    ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದಮನೆ, ಮಾತನಾಡಿ ಸಂವಿಧಾನದ 4ನೇ ಅಂಗವಾಗಿ ಕೆಲಸ ಸಮಾಜದಲ್ಲಿ ತನ್ನ ಕಾರ್ಯ ಮಾಡುತ್ತಿರುವ ಪತ್ರಿಕಾರಂಗದ ಮೇಲೆ ಪದೇ ಪದೇ ದಾಳಿ ನಡೆಯುತ್ತಿದೆ, ರಾಜಕೀಯ ವೈಷಮ್ಯದಿಂದ ಪತ್ರಿಕೆಯ ಮೇಲೆ ನಡೆಯುವ ಹಲ್ಲೆಯಂತಹ  ಘಟನೆಗಳು ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿದೆ ಎಂದರು.
         ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಂಟಿ ಕಾರ್ಯದಶರ್ಿ ಶಾಂತಕುಮಾರ್ ಮಾತನಾಡಿ ಸಮಾಜದ ಕಟ್ಟ-ಕಡೆಯ ವ್ಯಕ್ತಿಗಳನ್ನು ಗುರುತಿಸುವುದು ಹಾಗೂ ಸಮಾಜದ ತಪ್ಪುಗಳನ್ನು ನಿಭರ್ೀತಿಯಿಂದ ತಿಳಿಸಿ ಸರಿಪಡಿಸುವ ಪತ್ರಿಕೆಯ ಮೇಲೆ ನಡೆದಿರುವ ಹಲ್ಲೆಯು ಖಂಡನೀಯವಾದುದು ಎಂದರು.   
    ಪುರಸಭಾ ಸದಸ್ಯ ಅಶೋಕ್ ಮಾತನಾಡಿ ಸಮಾಜದಲ್ಲಿ ನಡೆಯುವ ಮಾಹಿತಿ ಹಾಗೂ ಅರಿವು, ತಿಳುವಳಿಕೆ ನೀಡುವ ಪತ್ರಿಕೆಯ ಮೇಲೆ ಹಲ್ಲೆ ನಡೆಸಿರುವವರನ್ನು ಶೀಘ್ರ ಬಂಧಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.   
    ಪ್ರತಿಭಟನೆಯಲ್ಲಿ ತಾಲ್ಲೂಕು ಮಡಿವಾಳರ ಸಮಜದ ಅಧ್ಯಕ್ಷ ಸಿ.ಎಸ್.ನಟರಾಜು, ಪತ್ರಕರ್ತರ ಸಂಘದ ಸಹ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಪತ್ರಿಕಾ ವಿತರಕರ ಮುಖಂಡ ಸಿ.ಆರ್. ಚಂದ್ರಶೇಖರ್(ಪುರಿಭಟ್ಟಿ), ಸ್ಪಂದನ ಜನಸೇವಾ ಒಕ್ಕೂಟದ ಅಧ್ಯಕ್ಷ ಯೋಗೀಶ್, ಉಪಾಧ್ಯಕ್ಷ ಶಿವಣ್ಣ, ಕಾರ್ಯದಶರ್ಿ ತ್ಯಾಗರಾಜು, , ರವಿಕುಮಾರ್(ಲ್ಯಾಬ್), ತಾ.ವಿಕಲಚೇತನರ ಸಂಘದ ಅಧ್ಯಕ್ಷೆ ಶಾಂತಮ್ಮ, ಜಯಕನರ್ಾಟಕ ಸಂಘಟನೆಯ ಅಧ್ಯಕ್ಷ ವೆಂಕಟೇಶ್, ಕಾರ್ಯದಶರ್ಿ ರಾಜುಬಗ್ಗನಹಳ್ಳಿ,  ಗೋಪಾಲ್, ಸಿದ್ದರಾಮಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.25 : ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಯಾದವ ಯುವ ಸೇನೆ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿತು.
    ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜ್ಯ ಯಾದವ ಯುವಸೇನೆ ಸಂಸ್ಥಾಪಕ ಅಧ್ಯಕ್ಷ ಅಮ್ಮನಹಟ್ಟಿ ಹರೀಶ್ಯಾದವ್ ಮಾತನಾಡಿ 2009ರಿಂದ 2011ರವರೆಗೆ ನಮ್ಮ ದೇಶದಲ್ಲಿ 14989 ಮಹಿಳೆಯರ ಮೇಲೆ ಅತ್ಯಾಚಾರವಾದ್ದು ಪ್ರಪಂಚದಲ್ಲಿ ನಮ್ಮ ದೇಶ ಮೂರನೇ ಸ್ಥಾನ ಪಡೆದಿದೆ ಎಂದರಲ್ಲದೆ  ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯವನ್ನು ತಡೆಯಲು ಸಕರ್ಾರ ಅತ್ಯಾಚಾರಿಗಳಿಗೆ ಉಗ್ರ ರೂಪದ ಕಾನೂನನ್ನು ಜಾರಿಗೆ ತರಬೇಕೆಂದು ತಿಳಿಸಿದರು.
    ಪ್ರತಿಭಟನೆಯಲ್ಲಿ ಯಾದವ ಯುವಸೇನೆ ರಾಜ್ಯ ಪ್ರಧಾನ ಕಾರ್ಯದಶರ್ಿ ಕೊಟ್ರೇಶ್ಯಾದವ್, ಕಾರ್ಯದಶರ್ಿ ನಾಗರಾಜ್ಯಾದವ್, ತಾಲ್ಲೂಕು ಅಧ್ಯಕ್ಷ ಚಂದ್ರು, ತಾ.ಪ್ರಧಾನ ಕಾರ್ಯದಶರ್ಿ ಬಾಲಕೃಷ್ಣ ಯಾದವ್, ಕುಮಾರ್ಯಾದವ್, ಶಂಕರ್ಯಾದವ್, ಅರಸೀಕೆರೆ ತಾ.ಅಧ್ಯಕ್ಷ ಗಂಗಾಧರ್, ಶಂಕರಣ್ಣಅಮ್ಮನಹಟ್ಟಿ, ಶಿವು, ರಂಗನಾಥ್, ಶಶಿಧರ್ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
           

ಬಿಜೆಪಿ ಯುವಮೋಚರ್ಾ ವತಿಯಿಂದ ಸಸಿ ನೆಡುವ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ,ಜು.25 : ತಾಲ್ಲೂಕು ಬಿಜೆಪಿ ಯುವಮೋಚರ್ಾ ವತಿಯಿಂದ ಅಟಲ್ಬಿಹಾರಿ ವಾಜಪೇಯಿ ಹುಟ್ಟಹಬ್ಬ ಹಾಗೂ ಕಾಗರ್ಿಲ್ ವಿಜಯೋತ್ಸವದ ಅಂಗವಾಗಿ ಅರಣ್ಯ ಇಲಾಖೆಯಿಂದ ಪಡೆದ ಸಸಿಗಳನ್ನು ಪಟ್ಟಣದ ಕಾಲೇಜುಗಳಲ್ಲಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
        ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಯುವಮೋಚರ್ಾ ಅಧ್ಯಕ್ಷ ಚೇತನ್ಪ್ರಸಾದ್ ಮಾತನಾಡಿ, ಅಟಲ್ಬಿಹಾರಿ ವಾಜಪೇಯಿರವರ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೀಯ ಬಿಜೆಪಿ ಪಕ್ಷ ಪ್ರತಿ ಮಂಡಲದಲ್ಲೂ ಸಸಿ ನೆಡಲು ಕರೆ ನೀಡಿದ್ದ ಹಿನ್ನಲೆಯಲ್ಲಿ ಹಾಗೂ ಭಾರತ ದೇಶ ಕಾಗರ್ಿಲ್ ಯುದ್ದದಲ್ಲಿ ವಿಜಯೋತ್ಸವ ಆಚರಿಸಿ 15ವರ್ಷವಾದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
 ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಮುಖಂಡ ಮಿಲ್ಟ್ರಿಶಿವಣ್ಣ, ಕಾರ್ಯಕರ್ತರುಗಳಾದ ಸುಧೀಂದ್ರ, ಮಂಜುನಾಥ್, ರೇಣುಕಸ್ವಾಮಿ, ನವಿಲೆ ಮಧು  ಉಪಸ್ಥಿತರಿದ್ದರು.

ಪುರಸಭೆಯ 14.94 ಲಕ್ಷ ರೂಗಳ ಉಳಿತಾಯ ಬಜೆಟ್
ಚಿಕ್ಕನಾಯಕನಹಳ್ಳಿ,ಜು.25 : ಪಟ್ಟಣದ ಪುರಸಭೆಯ 2014-15ನೇ ಸಾಲಿನಲ್ಲಿ ಆಯವ್ಯಯ ಬಜೆಟ್ನಲ್ಲಿ ಒಟ್ಟು ಆದಾಯ 17 ಕೋಟಿ 53 ಲಕ್ಷ ರೂಗಳಾಗಿದ್ದು, ಖಚರ್ು17 ಕೋಟಿ38 ಲಕ್ಷ ರೂಗಳಾಗಲಿದ್ದು, 14.94 ಲಕ್ಷ ರೂಗಳ ಉಳಿತಾಯ ಬಜೆಟ್ನ್ನು ಪುರಸಭಾ ಸದಸ್ಯರು ಸವರ್ಾನುಮತದಿಂದ ಅಂಗೀಕರಿಸಿದರು.
    ಪುರಸಭೆ ಅಧ್ಯಕ್ಷೆ ಪುಷ್ಪ.ಟಿ.ರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಸಭೆಯಲ್ಲಿ 2014-15ನೇ ಸಾಲಿನಲ್ಲಿ ಆರಂಭಿಕ ಶಿಲ್ಕು 478.33ಲಕ್ಷ ರೂ ಗಳಿದ್ದು,  ಚಾಲ್ತಿ ಸಾಲಿನ ಆದಾಯ 1274.50ಲಕ್ಷ ಸೇರಿ ಒಟ್ಟು ಪುರಸಭೆಯ ಆದಾಯ 1752.83ಲಕ್ಷ ರೂ ಆದಾಯದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಘನತ್ಯಾಜ್ಯ ವಿಲೇವಾರಿ, ನೌಕರರ ಸಂಬಳ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ವಿವಿಧ ಬಾಬ್ತುಗಳ ಖಚರ್ಿಗೆ ಒಟ್ಟು 1737.89ಲಕ್ಷಕ್ಕೆ ಸಭೆ ಅನುಮತಿ ನೀಡಿ 14.94ಲಕ್ಷ ಉಳಿತಾಯಕ್ಕೆ ಸಭೆಯಲ್ಲಿ ಸದಸ್ಯರು ಅನುಮೋದನೆ ನೀಡಿದರು.
    ಈ ಸಂದರ್ಭದಲ್ಲಿ ಸದಸ್ಯ ಸಿ.ಪಿ.ಮಹೇಶ್ ಮಾತನಾಡಿ ಹೊಸ ಬಸ್ ನಿಲ್ದಾಣದಲ್ಲಿರುವ ಪುರಸಭೆಯ ಹಳೆ ಮಳಿಗೆಗಳನ್ನು ತೆರವುಗೊಳಿಸಿ ಅಲ್ಲಿ ನೂತನವಾಗಿ ಅಂಗಡಿ ಮಳಿಗೆಗಳನ್ನು ಕಟ್ಟಲು ಒತ್ತಾಯಿಸಿದರು, ಈ ಪ್ರಸ್ತಾಪವನ್ನು   ಸವರ್ಾನುಮತದಿಂದ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು.
    ಪುರಸಭೆವತಿಯಿಂದ ಕಟ್ಟಿಸಲಾಗಿರುವ ಅಂಗಡಿ ಮಳಿಗೆಗಳಲ್ಲಿ ಎಷ್ಟು ಅಂಗಡಿಗಳಿಂದ  ಬಾಡಿಗೆ ಬರುತ್ತಿದೆ ಇದರ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯ ಸಿ.ಪಿ.ಮಹೇಶ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಂಗಾಧರ್ ಒಟ್ಟು ಐಡಿಎಸ್ಎಮ್ಟಿ ಯೋಜನೆ ಅಡಿಯಲ್ಲಿ ಹಾಗೂ 10ನೇ ಹಣಕಾಸು ಯೋಜನೆ ಅಡಿಯಲ್ಲಿ ಒಟ್ಟು 106 ಅಂಗಡಿ ಮಳಿಗೆಗಳಿದ್ದು ಇದರಿಂದ 83ಸಾವಿರ ಬಾಡಿಗೆ ಬರುತ್ತದೆ, 106ರ ಪೈಕಿ 14 ಮಳಿಗೆಗಳು ಖಾಲಿ ಇದ್ದು ಇವುಗಳನ್ನು ಹರಾಜು ಮಾಡಬೇಕಿದೆ ಎಂದರು.
    ಐಡಿಎಸ್ಎಮ್ಟಿ ಯೋಜನೆ ಅಡಿಯಲ್ಲಿ ನಿಮರ್ಿಸಿರುವ ಅಂಗಡಿ ಮಳಿಗೆಗಳನ್ನು ಮೂರು ವರ್ಷಕ್ಕೆ ಶೇ5ರಿಂದ ಶೇ.10ರಷ್ಟು ಬಾಡಿಗೆ ಹೆಚ್ಚಿಸಬಹುದು, 10ನೇ ಹಣಕಾಸು ಯೋಜನೆ ಅಡಿಯಲ್ಲಿ ನಿಮರ್ಿಸಿರುವ ಅಂಗಡಿ ಮಳಿಗೆಗಳಿಗೆ ಪಿ.ಡಬ್ಯೂ.ಡಿಯವರು ನಿಗಧಿ ಪಡಿಸಿದ ದರದಲ್ಲಿ ಬಾಡಿಗೆ ವಸೂಲಿ ಮಾಡುವಂತೆ  ಸದಸ್ಯರು ಹೇಳಿದರು.
    ಪುರಸಭೆಯ 22.75ರ ಅನುದಾನದಲ್ಲಿ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಮಡುವಂತೆ ಕಳೆದ ವರ್ಷ ಟೆಂಡರ್ ನೀಡಲಾಗಿತ್ತು ಇದುವರೆವಿಗೂ ಏಕೆ ಸರಬರಾಜು ಮಾಡಿಲ್ಲ ಎಂದು ಜೆ.ಎಸ್.ಎ. ಎಂಟರ್ಪ್ರೈಸಸ್ ಮಾಲೀಕರನ್ನು ಸದಸ್ಯರು ಪ್ರಶ್ನಿಸಿದರು.
    ಶೇ.22.75ರ ಅನುದಾನದಲ್ಲಿ ಎಸ್,ಸಿ, ಎಸ್.ಟಿ ಜನಾಂಗಕ್ಕೆ ಮೀಸಲಿಟ್ಟಿರುವ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಬಗ್ಗೆ ಜೆ.ಎಸ್.ಎ ಎಂಟರ್ ಪ್ರೈಸಸ್ ಕಂಪನಿಯವರು ಸಕರ್ಾರ ನಿಗಧಿ ಪಡಿಸಿದ ದರಕ್ಕಿಂತ ಹೆಚ್ಚಿನ ದರ ನಮೂದಿಸಿದ್ದಾರೆ ಎಂದು ಸದಸ್ಯರಾದ ರಾಜಶೇಖರ್ ಹಾಗೂ ದಯಾನಂದ್ ಪ್ರಶ್ನಿಸಿದಾಗ, ಜೆ.ಎಸ್.ಎ. ಎಂಟರ್ ಪ್ರೈಸಸ್ ಮಾಲೀಕ ಸಿ.ಎಲ್.ಜಯದೇವ್ ಮಾತನಾಡಿ ಕಂಪನಿಯ ದರವನ್ನು ನಮೂದಿಸಿದ್ದೇನೆ ಎಂದು ಹೇಳಿದರಲ್ಲದೆ, ಸಕರ್ಾರದ ಆದೇಶದಂತೆ ಠೇವಣಿ ಹಾಗೂ ಉಳಿದ ಪರಿಕರಗಳಿಗೆ 1870ರೂ ನಿಗಧಿಯಾಗಿದೆ, ಸಿಂಗಲ್ ಬರ್ನಲ್ ಸ್ಟೌವ್ಗೆ 900ರೂ ನಿಗಧಿಯಾಗಿದ್ದು ಒಟ್ಟು 2770 ರೂಗಳಾಗುತ್ತದೆ ಆದರೆ ನೀವು 8130 ದರ ನಿಗಧಿ ಪಡಿಸಿದ್ದೀರಿ ಎಂದಾಗ ಅಂದಿನ ದರ ಅಷ್ಟಿತ್ತು ಎಂದರು. ಇದಕ್ಕೆ ತೃಪ್ತರಾಗದ ಸದಸ್ಯರು ಸಕರ್ಾರದ ಆದೇಶದ ದಾಖಲೆಯನ್ನು ಒದಗಿಸುವಂತೆ ಸೂಚಿಸಿದರು.
    ಪಟ್ಟಣದ ವೀರಲಕ್ಕಮ್ಮ ಬಡಾವಣೆಯ ಸ್ಲಂ ನಿವಾಸಿಗಳಿಗೆ ವಾಸಸ್ಥಳ ದೃಢೀಕರಣ ಪತ್ರ ನೀಡುತ್ತಿಲ್ಲ ಆದರೆ ಕಂದಾಯ ಪಟ್ಟಣದಲ್ಲಿರುವ ಮನೆಗಳಿಗೆ ಏಕೆ ವಾಸಸ್ಥಳ ದೃಢೀಕರಣ ಪತ್ರ ನೀಡುವುದಿಲ್ಲ ಎಂದು ಸದಸ್ಯ ಸಿ.ಪಿ.ಮಹೇಶ್ ಪ್ರಶ್ನಿಸಿದರು.
    ಕಂದಾಯ ಪಟ್ಟಣದಲ್ಲಿ ವಾಸಿಸುತ್ತಿರುವ ಕಂದಾಯಕ್ಕಿಂತ ಸರ್ವೆ ನಂಬರ್ನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಎರಡು ಪಟ್ಟು ಕಂದಾಯ ಕಟ್ಟಿಸಿಕೊಂಡು ವಾಸಸ್ಥಳ ದೃಢೀಕರಣ ಪತ್ರ ನೀಡಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ತಿಳಿಸಿದರು.
    ಪುರಸಭೆ ವ್ಯಾಪ್ತಿಯಲ್ಲಿ 8ಸಾವಿರ ಮನೆಗಳ ಪೈಕಿ 2400 ನಲ್ಲಿಗಳಿರುವುದರಿಂದ ಕುಡಿಯುವ ನೀರಿನ ತೊಂದರೆಯಾಗದೆ, 2ವಾಡರ್್ಗಳ ನಲ್ಲಿಗಳಿಗೆ ಮೀಟರ್ ಅಳವಡಿಸುವ ಬಗ್ಗೆ ಕೆಲವು ಸದಸ್ಯರ ವಿರೋಧ, ಎಲ್ಲಾ ವಾಡರ್್ಗಳಿಗೂ ವಿಸ್ತರಿಸಲೂ ಕೆಲವು ಸದಸ್ಯರು ಒತ್ತಾಯಿಸಿದರು, ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣದ ಹತ್ತಿರ ಒತ್ತುವರಿ ಕಟ್ಟಡಗಳಿಂದ ದಂಡದ ರೀತಿಯಲ್ಲಿ ವಸೂಲಾದ 6ಲಕ್ಷರೂಗಳು ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿದ್ದು ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನೂತನ ಆಯ್ಕೆಯಾದ ಅಧ್ಯಕ್ಷರು ಹಾಗೂ 5ಜನ ಸದಸ್ಯರನ್ನು ಒಳಗೊಂಡ ಸಮಿತಿಯಲ್ಲಿ ಠೇವಣಿ ಇಡುವಂತೆ ಸದಸ್ಯ ಸಿ.ಪಿ.ಮಹೇಶ್ ಸಲಹೆ ನೀಡಿದರು, ಪುರಸಭಾ ಸದಸ್ಯ ಹಾಗೂ ಕೋ.ಅಪರೇಟಿವ್ ಬ್ಯಾಂಕ್ನ ಅಧ್ಯಕ್ಷರೂ ಆದ ಸಿ.ಎಸ್.ರಮೇಶ್ ಹಾಗೂ ಸಿ.ಪಿ.ಮಹೇಶ್ ನಡುವೆ ಪರಸ್ಪರ ವಾಕ್ಸ್ಮರ ನಡೆಯಿತು, ಹಿರಿಯ ಸದಸ್ಯ ಸಿ.ಎಮ್.ರಂಗಸ್ವಾಮಿ ಮಧ್ಯೆ ಪ್ರವೇಶಿಸಿ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಠೇವಣಿ ಮುಂದುವರೆಸಲು ತೀಮರ್ಾನಿಸಲಾಯಿತು.
    ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ರೇಣುಕಮ್ಮ, ರೇಣುಕಾಗುರುಮೂತರ್ಿ, ಪ್ರೇಮಾ, ಧರಣಿಲಕ್ಕಪ್ಪ, ಸಿ.ಆರ್.ತಿಮ್ಮಪ್ಪ, ಮಲ್ಲೇಶ್, ಸಿ.ಎಸ್.ರಮೇಶ್, ಹೆಚ್.ಬಿ.ಪ್ರಕಾಶ್, ಮಹಮದ್ ಖಲಂದರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಟಿ.ದಯಾನಂದ್, ಅಶೋಕ್ ಸೇರಿದಂತೆ  ಉಪಸ್ಥಿತರಿದ್ದರು.
ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.25 : ಕಟ್ಟಡ ಕಾಮರ್ಿಕರ ಅಪಘಾತ ಮರಣ ಅಥವಾ ಶಾಶ್ವತ ಅಂಗವಿಕಲತೆಗೆ ಆಂಧ್ರದ ಮಾದರಿಯಲ್ಲಿ 5ಲಕ್ಷರೂಗಳು ಹಾಗೂ ಸ್ವಾಭಾವಿಕ ಮರಣಕ್ಕೆ 3ಲಕ್ಷರೂ ಪರಿಹಾರ ಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.
    ಪಟ್ಟಣದ ನೆಹರು ಸರ್ಕಲ್ನಿಂದ ತಹಶೀಲ್ದಾರ್ ಕಛೇರಿವರೆಗೆ ಪ್ರತಿಭಟನೆ ನಡೆಸಿದ ಸಂಘ, ಸಕರ್ಾರಕ್ಕೆ  ಮನವಿ ಪತ್ರ ಸಲ್ಲಿಸಲಾಯಿತು,  ಕಾಮರ್ಿಕರ ಬೇಡಿಕೆಗಳಾದ ಮನೆ ಕಟ್ಟುವುದು, ಖರೀದಿಸುವುದಕ್ಕೆ 2ಲಕ್ಷ ಸಾಲ ಇದರಲ್ಲಿ 50ಸಾವಿರ ಸಬ್ಸಿಡಿ ನೀಡುವುದು ಉಳಿದ 1.50ಲಕ್ಷ ಹಣವನ್ನು ವಾಷರ್ಿಕ ಶೇ.5ರ ಬಡ್ಡಿದರದಲ್ಲಿ ಮಂಡಳಿಗೆ ಪಾವತಿಸಲು ಅವಕಾಶವಿದೆ,  ಹಾಗೂ 50ವರ್ಷ ತುಂಬಿದ ಮಹಿಳೆಯರಿಗೆ, 55ವರ್ಷ ತುಂಬಿದ ಪುರುಷರಿಗೆ ಪ್ರತಿಯೊಬ್ಬರಿಗೂ ಮಾಹೆಯಾನ 500ರೂಪಾಯಿ ಪಿಂಚಣಿ ಸೌಲಭ್ಯವಿದೆ ಆದರೆ ಈ ಎರಡು ಬೇಡಿಕೆಗಳನ್ನು 7ವರ್ಷ ಕಳೆದರೂ ನೊಂದಾಯಿತ ಫಲಾನುಭವಿಗೆ ಈ ಸೌಲಭ್ಯವನ್ನು ನೀಡಿರುವುದಿಲ್ಲ, ಹಾಗೂ ಹಲವಾರು ಬೇಡಿಕೆಗಳನ್ನು ಪುರಸ್ಕರಿಸುವಂತೆ ಮಂಡಳಿಗೆ ಸಂಘಟನೆ ವತಿಯಿಂದ ಒತ್ತಾಯಿಸದರೂ ಇದುವರೆವಿಗೂ ಪುರಸ್ಕರಿಸಿಲ್ಲ, ಹಾಗೂ ಈಗಾಗಲೇ ಹಲವಾರು ಸೌಲಭ್ಯಗಳನ್ನು ಪಡೆಯಲೆಂದು ಫಲಾನುಭವಿಗಳು ಅಜರ್ಿ ಹಾಕಿ ವರ್ಷಗಟ್ಟಲೆ ಕಳೆದರೂ ಸೌಲಭ್ಯವನ್ನು ನೀಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿರುವ ಅವರು, ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾಮರ್ಿಕರಾಗಿ ದುಡಿಯುತ್ತಿರುವ ಕಾಮರ್ಿಕ ವರ್ಗವಾಗಿದ್ದು ತೀರಾ ಕಡುಬಡವರಾಗಿದ್ದು ಹಿಂದುಳಿದ ವರ್ಗ, ದಲಿತವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
    ಪ್ರತಿಭಟನೆಯಲ್ಲಿ ಎ.ಐ.ಟಿ.ಯು.ಸಿ ರಾಜ್ಯ ಪ್ರಧಾನ ಕಾರ್ಯದಶರ್ಿ ಎನ್.ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್, ಜಿಲ್ಲಾ ಮುಖಂಡ ನಾಗಣ್ಣ, ತಾಲ್ಲೂಕು ಕಟ್ಟಡ ಕಾಮರ್ಿಕರ ಸಂಘದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಶ್ರೀನಿವಾಸಮೂತರ್ಿ, ರವಿಕುಮಾರ್, ಸಿ.ಎಸ್.ಯುವರಾಜು ಪ್ರಕಾಶ್, ಶ್ರೀನಿವಾಸ್, ಮಂಜುನಾಥ್, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನಕ್ಕಾಗಿ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಜು.25 : ತಾಲ್ಲೂಕಿನ ಮೆಟ್ರಿಕ್-ಪೂರ್ವ ನವೀಕರಣ ಹಾಗೂ ಹೊಸ ವಿದ್ಯಾಥರ್ಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನಕ್ಕಾಗಿ ಅಜರ್ಿ ಆಹ್ವಾನಿಸಲಾಗಿದೆ.
    5 ರಿಂದ 7 ನೇ ತರಗತಿಯ  ಬಾಲಕ ಬಾಲಕಿ ವಿದ್ಯಾಥರ್ಿಗಳಿಗೆ  250ರೂ ಹಾಗೂ 8 ರಿಂದ 10 ನೇ ತರಗತಿಯ ಬಾಲಕರಿಗೆ 500, ಬಾಲಕಿಯರಿಗೆ 600 ವಿದ್ಯಾಥರ್ಿ ವೇತನ ನೀಡಲಾಗುವುದು.
ಅಜರ್ಿ ಸಲ್ಲಿಸುವ ವಿದ್ಯಾಥರ್ಿಗಳು  ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ -1, 2ಎ, 3ಎ, ಮತ್ತು 3ಬಿ ಗಳಿಗೆ ಸೇರಿದವರಾಗಿರಬೇಕು, ಪ್ರಸ್ತುತ 5ನೇ ತರಗತಿಯಿಂದ 10 ನೇ ತರಗತಿಯವರಿಗೆ ವ್ಯಾಸಂಗ ಮಾಡುತ್ತಿರಬೇಕು, ಕುಟುಂಬದ ವಾಷರ್ಿಕ ಆದಾಯ ರೂ  44,500/-ರ ಒಳಗಿರಬೇಕು,  ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ. 75 ರಷ್ಟು ಹಾಜರಾತಿ ಇರಬೇಕು , ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ಸಕರ್ಾರದ ಮಾನ್ಯತೆ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು, ಸಕರ್ಾರದ/ಸಕರ್ಾರ ಅನುದಾನಿತ ವಿದ್ಯಾಥರ್ಿ ನಿಲಯಗಳಲ್ಲಿ ಪ್ರವೇಶ ಪಡೆಯದವರು ವಿದ್ಯಾಥರ್ಿ ವೇತನಕ್ಕೆ ಅರ್ಹತೆ ಹೊಂದಿರುತ್ತಾರೆ.
ವಿದ್ಯಾಥರ್ಿವೇತನಕ್ಕಾಗಿ ವಿದ್ಯಾಥರ್ಿಗಳು ಜಾತಿ ಪ್ರಮಾಣಪತ್ರ ಒಂದು ಬಾರಿ ನೀಡಿದ್ದಲ್ಲಿ ನಂತರದ ತರಗತಿಗಳಲ್ಲಿ ನೀಡುವ ಅವಶ್ಯಕತೆ ಇರುವುದಿಲ್ಲ, ಒಮ್ಮೆ ಪಡೆದ ಆದಾಯ ಪ್ರಮಾಣ ಪತ್ರ 5 ವರ್ಷಗಳವರೆಗೆ ಊಜರ್ಿತವಾಗಿರುತ್ತದೆ,  ವಿದ್ಯಾಥರ್ಿ ವೇತನವನ್ನು ಬ್ಯಾಂಕ್ ಖಾತೆಗೆ ಮಾತ್ರ ಜಮಾ ಮಾಡುವುದರಿಂದ ವಿದ್ಯಾಥರ್ಿಗಳು ತಮ್ಮ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗಿದ್ದು, ಬ್ಯಾಂಕ್ ಖಾತೆ ಸಂಖ್ಯೆ , ಬ್ಯಾಂಕಿನ ಹೆಸರು, ಬ್ಯಾಂಕಿನ ಎನ್ಇಎಪ್ಟಿ/ಐಎಫ್ಎಸ್ಸಿ ಕೋಡನ್ನು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಲ್ಲಿಸಬೇಕಾದೆ,   ಕಛೇರಿಯಿಂದ ದಿನಾಂಕ 20-8-2014 ರೊಳಗಾಗಿ ಅಜರ್ಿಯನ್ನು ಪಡೆದು, ಭತರ್ಿ ಮಾಡಿದ ನವೀಕರಣ ಹಾಗೂ ಹೊಸ ಅಜರ್ಿಗಳನ್ನು ಮುಖ್ಯೋಪಾದ್ಯಾಯರು 25-9-2014 ರೊಳಗೆ ಈ ಕಛೇರಿಗೆ ಸಲ್ಲಿಸತಕ್ಕದ್ದು. ನಂತರ ಬಂದಂತಹ ಅಜರ್ಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿಯಲ್ಲಿ ವಿವಿಧ ಹುದ್ದೆಗಳಿಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಜು.25 :  ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ತಿಮ್ಮನಹಳ್ಳಿ, ದೊಡ್ಡಬಿದರೆ, ಮುದ್ದೇನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗೆ ಹಾಗೂ  ಶೆಟ್ಟಿಕೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕತರ್ೆ ಹುದ್ದೆಗೆ ಕೇಂದ್ರ ವ್ಯಾಪ್ತಿಯ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ಸಿಡಿಪಿಓ ಅನೀಸ್ಖೈಸರ್ ತಿಳಿಸಿದ್ದಾರೆ.
    ತಿಮ್ಮನಹಳ್ಳಿ ಪಂಚಾಯ್ತಿಯ ಬಡಕೇಗುಡ್ಲು ಗ್ರಾಮದಲ್ಲಿನ ಹುದ್ದೆ ಸಾಮಾನ್ಯ ಮೀಸಲಾತಿಗಾಗಿ ಮೀಸಲಿರಿಸಿದ್ದರೆ,  ದೊಡ್ಡಬಿದರೆ ಪಂಚಾಯ್ತಿಯ ಭೈರಾಪುರತಾಂಡ್ಯ ಗ್ರಾಮದ ಹುದ್ದೆಯನ್ನು ಎಸ್.ಸಿ ಮೀಸಲಾತಿಗಾಗಿ, ಮುದ್ದೇನಹಳ್ಳಿ ಪಂಚಾಯ್ತಿಯ ಮಾಳಿಗೆಹಳ್ಳಿ ಗ್ರಾಮದ ಹುದ್ದೆಯನ್ನು  ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
 ಶೆಟ್ಟಿಕೆರೆ ಪಂಚಾಯ್ತಿಯ ಯೋಗಾಮಾಧನವಗರ ಗ್ರಾಮದ ಸಾಮಾನ್ಯ ಮೀಸಲಾತಿಗಾಗಿ ಅಂಗನವಾಡಿ ಕಾರ್ಯಕತರ್ೆ ಹುದ್ದೆಗೆ ಅಜರ್ಿ ಆಹ್ವಾನಿಸಲಾಗಿದ್ದು  ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ 13/08/2014 ರ ಸಂಜೆ5:30 ಗಂಟೆಯೊಳಗೆ ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳ ಕಛೇರಿ, ಚಿಕ್ಕನಾಯಕನಹಳ್ಳಿ  ಇವರಿಗೆ ತಲುಪುವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗೆ ಕಛೇರಿಯನ್ನು ಸಂಪಕರ್ಿಸಬಹುದಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.