Tuesday, November 11, 2014

ಬಸ್ಪ್ರಯಾಣ ದರ ಕಡಿಮೆ ಮಾಡಲು ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ನ.11 :-ಕೇಂದ್ರ ಸಕರ್ಾರ ಪೆಟ್ರೋಲ್ ಹಾಗೂ ಡಿಸೆಲ್ ದರವನ್ನು ಕಡಿಮೆ ಮಾಡಿದರೂ ರಾಜ್ಯ ಸಕರ್ಾರ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಿಲ್ಲ ಅದ್ದರಿಂದ ಕೂಡಲೇ ಪ್ರಯಾಣದರ ಕಡಿಮೆ ಮಾಡುವಂತೆ ಒತ್ತಾಯಿಸಿ ರಾಜ್ಯ ಸಕರ್ಾರವನ್ನು ಒತ್ತಾಯಿಸಿ ತಾಲ್ಲೂಕು ಬಿಜೆಪಿ ಘಟಕ ರಸ್ತೆ ತಡೆದು ಪ್ರತಿಭಟನೆ ನಡೆಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್ ಮಾತನಾಡಿ,  ಕೇಂದ್ರದ ಬಿಜೆಪಿ ಸಕರ್ಾರ ಪ್ರಧಾನಿ ಮೋದಿಯವರ ಸಕರ್ಾರ ಸತತವಾಗಿ ಪೆಟ್ರೋಲ್ದರಲ್ಲಿ ಲೀಟರ್ಗೆ 9ರೂಪಾಯಿ ಹಾಗೂ ಡಿಸೇಲ್ ದರದಲ್ಲಿ 7ರೂಪಾಯಿಗಳನ್ನು ಅಧಿಕಾರಕ್ಕೆ ಬಂದ ಆರು ತಿಂಗಳಿಂದಲೂ ಕಡಿಮೆ ಮಾಡುತ್ತಾ ಬಂದಿದೆ, ಆದರೆ ಇಲ್ಲಸಲ್ಲದ ನೆಪ ಹೇಳುತ್ತಾ ರಾಜ್ಯ ಸಕರ್ಾರ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರವನ್ನು ಕಡಿಮೆಮಾಡುವಲ್ಲಿ ಯಾವುದೇ ದೋರಣೆ ತಾಳಿಲ್ಲ ಇದು ಖಂಡನೀಯವಾಗಿದ್ದು ಕೇವಲ ಒಂದು ರೂಪಾಯಿಗೆ ಅಕ್ಕಿ ನೀಡಿದ್ದನ್ನೇ ತನ್ನ ಸಾಧನೆ ಎಂದು ಬಿಂಬಿಸುತ್ತಿರುವ ರಾಜ್ಯ ಸಕರ್ಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಇಂದು ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸುವುದರಲ್ಲಿ ಚಿಂತೆಮೂಡುತ್ತಿದೆ ಈ ನಿಟ್ಟಿನಲ್ಲಿ ನೈತಿಕ ಹೊಣೆಹೊತ್ತ ಕಾನೂನು ಸಚಿವರು ರಾಜಿನಾಮೆ ನೀಡಬೇಕು ಎಂದರು.
ಮುಂದಿನ ಒಂದು ತಿಂಗಳಳೊಗೆ ಬಸ್ಪ್ರಯಾಣದರ ಕಡಿಮೆ ಮಾಡದಿದ್ದರೆ ಇನ್ನೂ ಉಗ್ರವಾದ ಹೋರಾಟ ಮಾಡಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮದ್ಯಮವರ್ಗದ ಹಾಗೂ ಬಡವರು ಓಡಾಡುವಂತಹ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡುವಲ್ಲಿ ಸಕರ್ಾರ ನಷ್ಟವನ್ನು ತೋರಿಸುತ್ತಿದ್ದು ಇದು ಅವರ ದುರಾಡಳಿತವನ್ನು ತೊರಿಸುತ್ತಿದೆ ಎಂದರಲ್ಲದೆ,  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದೇ ಇರುವುದು ವಿಷಾದನೀಯವಾಗಿದ್ದು ಕೂಡಲೇ ಇದಕ್ಕೆ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ.ನ ಉಪಾದ್ಯಕ್ಷ ವಸಂತ್ಕುಮಾರ್, ಸದಸ್ಯ ಸೀತರಾಮಯ್ಯ, ಬಿಜೆಪಿ ಮುಖಂಡ ಚೇತನ್ಪ್ರಸಾದ್ ಮಾತನಾಡಿದರು.ಪ್ರತಿಭಟನೆಯಲ್ಲಿ ತಾ.ಪಂ ಸದಸ್ಯರಾದ ಕೆಂಕೆರೆ ನವೀನ್, ತಾ||ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮಿಲ್ಟ್ರೀಶಿವಣ್ಣ, ಘಟಕದ ಪ್ರ.ಕಾರ್ಯದಶರ್ಿ ಹನುಮಜಯ, ಮುಖಂಡರಾದ ನವಿಲೆ ಮಧು, ನರಸಿಂಹಮೂತರ್ಿ, ಗಂಗಾಧರಯ್ಯ, ರಾಮಲಿಂಗಯ್ಯ, ಮಹಿಳಾ ಮೋಚರ್ಾದ ಮಾಲ ಮುಂತಾದವರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ದೊಡ್ಡಮಾರಯ್ಯ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವಿಕರಿಸಿದರು.

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ಬಗ್ಗೆ ಸಭೆ
ಚಿಕ್ಕನಾಯಕನಹಳ್ಳಿ,ನ.11 : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಭಾವೈಕ್ಯ ಧರ್ಮ ಸಮಾರಂಭವನ್ನು ಇದೇ 13 ಮತ್ತು 14ರಂದು ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಏರ್ಪಡಿಸಲಾಗಿದೆ ಎಂದು ಮಹೋತ್ಸವದ ಸ್ವಾಗತ ಕಮಿಟಿ ಅಧ್ಯಕ್ಷ ಹಾಗೂ ಪುರೋಹಿತರಾದ ಶಿವಶಂಕರಶಾಸ್ತ್ರಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹೋತ್ಸವಕ್ಕೆ ಸುಮಾರು 10 ಸಾವಿರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಬರುವ ಭಕ್ತರಿಗೆಲ್ಲರಿಗೂ ದಾಸೋಹದ ವ್ಯವಸ್ಥೆಯಿದೆ ಎಂದರು.
 13ರಂದು ಸಂಜೆ 4.30ಕ್ಕೆ ಗ್ರಾಮದೇವತೆ ಉಡುಸಲಮ್ಮ ದೇವಿಯ ಆಗಮನ ಹಾಗೂ ಗಂಗಾಪೂಜೆ ನೆರವೇರಲಿದೆ. ಅಂದೇ ಪ್ರಾತಃಕಾಲಕ್ಕೆ ಗ್ರಾಮದ ಸರ್ವದೇವತೆಗಳಿಗೆ ರುದ್ರಾಭಿಷೇಕ ವಿಶೇಷ ಅಲಂಕಾರ ಅಷ್ಠೋತ್ತರ ಮಹಾಮಂಗಳಾರತಿ ನಡೆಯಲಿದೆ, ಬೆಳಗ್ಗೆ 9.30ಕ್ಕೆ ರಂಭಾಪುರಿ ಮಹಾಸನ್ನಿಧಿಯವರ ಅಡ್ಡಪಲ್ಲಕ್ಕಿ ಮಹೋತ್ಸವ, ಪುರಪ್ರವೇಶೋತ್ಸವವು ಗ್ರಾಮದ ಕೆರೆಕೋಡಿಯಿಂದ ಪ್ರಾರಂಭಗೊಂಡು ಪೂರ್ಣಕುಂಭದ ಸ್ವಾಗತದೊಂದಿಗೆ ವೇದಘೋಷ, ಮಂಗಳವಾದ್ಯ, ಸಾಂಸ್ಕೃತಿಕ ಕಲಾತಂಡಗಳ ಸಮೇತ ಗ್ರಾಮದ ರಾಜಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆಯು ಸಾಗಿ ಮಾನವ ಧರ್ಮ ಮಂಟಪಕ್ಕೆ ಆಗಮಿಸುವದು.
ಮಧ್ಯಾಹ್ನ 12ಕ್ಕೆ ಭಾವೈಕ್ಯಧರ್ಮ ಸಮಾರಂಭ ನಡೆಯಲಿದ್ದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸಾನಿಧ್ಯ ವಹಿಸಲಿದ್ದಾರೆ. ಗಂಡಸಿ ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿರುವರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು.
ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿಜಿ, ನೊಣವಿನಕೆರೆ ಕಾಡಸಿದ್ದೇಶ್ವರಸ್ವಾಮಿ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮಿಜಿ, ತಮ್ಮಡಿಹಳ್ಳಿ ವಿರಕ್ತಮಠದ ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪದೇಶಾಮೃತ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮಿ, ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮಿ, ಅಂಬಲದೇವರಹಳ್ಳಿ ಮಠದ ಉಜ್ಜನೀಶ್ವರಶಿವಾಚಾರ್ಯಸ್ವಾಮಿ, ಚನ್ನಬಸವೇಶ್ವರ ಗದ್ದುಗೆ ಮಠದ ಗೋಸಲ ಚನ್ನಬಸವೇಶ್ವರಶಿವಾಚಾರ್ಯಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಜಿಲ್ಲಾಧಿಕಾರಿ ಸತ್ಯಮೂತರ್ಿ, ನಿವೃತ್ತ ಪೋಲಿಸ್ ಆಯುಕ್ತ ಜ್ಯೋತಿಪ್ರಕಾಶ್ಮಿಜರ್ಿ ಸೇರಿದಂತೆ ಹರಗುರು ಚರಮೂತರ್ಿಗಳು, ಸಾಹಿತಿಗಳು, ಕಲಾವಿದರು, ಗಣ್ಯವಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರವಿಕುಮಾರಶಾಸ್ತ್ರಿ, ಕುಮಾರಸ್ವಾಮಿ, ಹೊನ್ನೆಬಾಗಿ ಕಾತರ್ಿಕ್, ಮೋಹನ್ಕುಮಾರ್ ಉಪಸ್ಥಿತರಿದ್ದರು.

 ಸ್ತ್ರೀಶಕ್ತಿ ಮಹಿಳಾ ಸಮಾವೇಶಕ್ಕೆ ಪಾಲ್ಗೊಳ್ಳಲು ಸಿದ್ದರಿರುವ ಮಹಿಳೆಯರು 
ಚಿಕ್ಕನಾಯಕನಹಳ್ಳಿ,ನ.11:-ಸುಮಾರು 250 ಸಂಘಗಳಿಂದ 550ಜನ ಸ್ತ್ರೀಯರು ನಮ್ಮ ತಾಲ್ಲೂಕಿನಿಂದ ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅನೀಸ್ಖೈಸರ್ ತಿಳಿಸಿದರು.
 ಚಿತ್ರದುರ್ಗದ ಸಕರ್ಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಸ್ತ್ರೀಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋರಟಿದ್ದ ತಾಲ್ಲೂಕಿನ ಸ್ತ್ರೀಶಕ್ತಿ ಸಂಘಗಳ ಸದಸ್ಯರ ಬಸ್ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿ, ಸಮಾವೇಶದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸುತ್ತು ನಿಧಿಯನ್ನು ವಿತರಿಸಲಿದ್ದು ನಮ್ಮ ತಾಲ್ಲೂಕಿಗೆ 22ಲಕ್ಷದ 50ಸಾವಿರ ರೂಪಾಯಿಗಳಷ್ಟು ಸುತ್ತು ನಿಧಿ ಬರಲಿದ್ದು ತಲ ಒಂದು ಸಂಘಕ್ಕೆ 5ಸಾವಿರದಂತೆ ಸ್ತ್ರೀ ಶಕ್ತಿ ಸಂಘಗಳಿಗೆ ವಿತರಣೆ ಮಾಡುತ್ತಿದ್ದು ಅದರ ಉದ್ದೇಶದಿಂದ ಚಿತ್ರ ದುರ್ಗದಲ್ಲಿ ಸ್ತ್ರೀಶಕ್ತಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.
 ಈ ಸಮಾವೇಶದಲ್ಲಿ ನಮ್ಮ ತಾಲ್ಲೂಕಿನಿಂದ 250ಸಂಘಗಳಿಂದ ಸುಮಾರು 550ಜನ ಸ್ತ್ರೀಯರು ಪಾಲ್ಗೋಳ್ಳುತ್ತಿದ್ದಾರೆ ಮೊದಲ ಹಂತದಲ್ಲಿ ಸಕರ್ಾರ ಸಮಾವೇಶದಲ್ಲಿ ಸುತ್ತುನಿದಿ ವಿತರಿಸುತ್ತಿದ್ದು ನಂತರದಲ್ಲಿ  ಎಲ್ಲಾ ಸಂಘಗಳಿಗೂ ಇದನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸಿಡಿಪಿಒ ಪರಮೇಶ್ವರಪ್ಪ ಹಾಗೂ ತಾಲ್ಲೂಕಿನ ಎಲ್ಲಾ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಇದ್ದರು.



 ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಕನಕ ಜಯಂತ್ಯೋತ್ಸವದ ಮೆರವಣಿಗೆಯಲ್ಲಿ ಯುವಕರೊಂದಿಗೆ  ನೃತ್ಯಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಹೆಜ್ಜೆ ಹಾಕಿದರು.