Monday, May 20, 2013



ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ಸಭೆ ಮತ್ತು ರೈತರ ಸಲಹಾ ಸಮಿತಿ
ಚಿಕ್ಕನಾಯಕನಹಳ್ಳಿ,ಮೇ.20 : ಪ್ರತಿ ಹೋಬಳಿಯಲ್ಲಿ ಎರಡು ಕುಚ್ಚಗ್ರಾಮಗಳನ್ನು ರಚಿಸಿ, ಆ ಗ್ರಾಮಗಳಿಗೆ ನವಣೆ ಮತ್ತು ತೊಗರಿಬೇಳೆ ಬೆಳಸಿ ಕೃಷಿ ಪ್ರಾತ್ಯಕ್ಷಿಕೆ ತರಬೇತಿ ಕ್ಷೇತ್ರೋತ್ಸವ ಪ್ರವಾಸವನ್ನು ವ್ಯವಸ್ಥಿತವಾಗಿ ನಡೆಸುವಂತೆ  ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ಸಭೆ ಮತ್ತು ರೈತರ ಸಲಹಾ ಸಮಿತಿಯಲ್ಲಿ ರೈತರಿಗೆ ತಿಳಿಸಲಾಯಿತು.
ಕೃಷಿ ಇಲಾಖೆ ವತಿಯಿಂದ ಸೋಮವಾರದಂದು ನಡೆದ ಆತ್ಮಯೋಜನೆಯ ತಾಂತ್ರಿಕ ಸಭೆ, ತಾಲ್ಲೂಕು ರೈತರ ಸಲಹಾ ಸಮಿತಿಯಲ್ಲಿ ರೈತರು ಕೃಷಿಯಲ್ಲಿ ಬೆಳೆಗಳನ್ನು ಯಾವ ರೀತಿ ಬೆಳೆಯಬೇಕು ಅದಕ್ಕೆ ಅಳವಡಿಸಿಕೊಳ್ಳಬಹುದಾದ ವಿಧಾನದ ಬಗ್ಗೆ ತಿಳಿಸಲಾಯಿತು.
ತಾಂತ್ರಿಕ ಸಭೆಯಲ್ಲಿ ತಾಲ್ಲೂಕಿನ ಕೃಷಿ ಅಭಿವೃದ್ದಿ ಅಧಿಕಾರಿಗಳಾದ ಹೆಚ್.ಎನ್.ಕೃಷ್ಣಪ್ಪ, ಕೆವಿಕೆಯ ಕಾರ್ಯಕ್ರಮ ಸಂಯೋಜಕ ಸುಜಿತ್ ಜಿ.ಎಮ್, ಮತ್ತು ಕೃಷಿ ವಿಸ್ತರಣೆ ವಿಷಯ ತಜ್ಞರಾದ ಎಮ್.ಎಮ್.ಶಂಕರ್ ಭಾಗವಹಿಸಿ ರೈತರ ಸಲಹಾ ಸಮಿತಿಯ ಸದಸ್ಯರುಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಗೋಪಾಲನಹಳ್ಳಿ, ಕುಪ್ಪೂರು ಇತರೆ ಹಳ್ಳಿಗಳ ರೈತ ಸಲಹಾ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಅಧಿಕಾರಿಗಳಾದ ಕಾಂತರಾಜು ಕಾರ್ಯಕ್ರಮ ನಿರೂಪಿಸಿದರು.


ಹಳ್ಳಿಗಾಡಿನ ಜನ ಪ್ರಾಥಮಿಕ ಹಂತದಲ್ಲೇ ರೋಗ ತಪಾಸಣೆ ನಡೆಸಿಕೊಳ್ಳಿ
ಚಿಕ್ಕನಾಯಕನಹಳ್ಳಿ,ಮೇ.20 : ಹಳ್ಳಿಗಾಡಿನ ಜನ ಪ್ರಾಥಮಿಕ ಹಂತದಲ್ಲೇ ರೋಗ ತಪಾಸಣೆ ನಡೆಸಿಕೊಂಡು ಪರಿಹಾರ ಕಂಡುಕೊಳ್ಳುವುದರಿಂದ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುವುದನ್ನ ತಪ್ಪಿಸಬಹುದು ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸಲಹೆ ನೀಡಿದರು.
   ಪಟ್ಟಣದ ರೋಟರಿ ಭವನದಲ್ಲಿ ತಾಲ್ಲೂಕ್ ಡಾಕ್ಟರ್ಸ್ ಅಸೋಸಿಯೇಷನ್, ರೋಟರಿ ಕ್ಲಬ್ ಮತ್ತು ಸಕರ್ಾರಿ ಸಾರ್ವಜನಿಕ ಆಸ್ಪತ್ರೆ, ವಾಸನ್ ಐ ಕೇರ್ ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರೋಟರಿ ಸಂಸ್ಥೆ ಈ ರೀತಿಯ ಸಮಾಜ ಸೇವಾ ಕಾರ್ಯಗಳಿಗೆ ಯಾವಾಗಲೂ ಮುಂದಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಕರೆ ನೀಡಿದರು.
  ಶಿಬಿರದಲ್ಲಿ ಕಿವಿ,ಗಂಟಲು,ಮೂಗು ಹಾಗು ನೇತ್ರ ದೋಷ ತಪಾಸಣೆಯನ್ನು ಮಾಡಲಾಯಿತು. ಶಿಬಿರದ ಮೇಲ್ವಿಚಾರಣೆಯನ್ನು ಆಡಳಿತ ವೈದ್ಯಾಧಿಕಾರಿ ಡಾ.ಎನ್.ಎಂ.ಶಿವಕುಮಾರ್, ತಾ.ವೈದ್ಯಾಧಿಕಾರಿ ಡಾ.ಕೆ.ಎಂ.ಶಿವಕುಮಾರ್ ನಡೆಸಿದರೆ ರೊಟೇರಿಯನ್ಗಳಾದ ಸಿ.ಎನ್.ಪ್ರದೀಪ್ ಕುಮಾರ್, ಎಸ್.ಜಿ.ಸುರೇಶ್ ಮತ್ತು ಇಬ್ರಾಹಿಂಸಾಬ್ ಶಿಬಿರಾಧಿಪತ್ಯವನ್ನು ನೋಡಿಕೊಂಡರು. ಡಾಕ್ಟರ್ಸ್ ಅಸೋಷಿಯನ್ನ ಅಧ್ಯಕ್ಷ ಸಿ.ಜಿ.ಜಗದೀಶ್, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ಮತ್ತು ಕಾರ್ಯದಶರ್ಿ ಡಾ.ಜಿ.ಪ್ರಶಾಂತ್ ಕುಮಾರ್ ಶೆಟ್ಟಿ ಉಸ್ತುವಾರಿ ವಹಿಸಿದ್ದರು. ಇನ್ನರ್ ವ್ಹೀಲ್ ಅಧ್ಯಕ್ಷೆ ನಾಗರತ್ನಮ್ಮ ಉಪಸ್ತಿತರಿದ್ದರು. ನೂರಾರು ಜನ ಶಿಬಿರದ ಸದುಪಯೊಗ ಪಡೆದುಕೊಂಡರು.