Friday, June 28, 2013

ಸಕರ್ಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಸವಲತ್ತು ಸಿಗಲಿ ಪ್ರೊ.ಸಿ.ಹೆಚ್.ಮರಿದೇವರು
ಚಿಕ್ಕನಾಯಕನಹಳ್ಳಿ,ಜೂ.28 : ಕಾನ್ವೆಂಟ್ ಶಾಲೆಗಳ ಅಬ್ಬರದಲ್ಲಿ ಕನ್ನಡದ ಸೊಲ್ಲು ಅಡಗಿಹೋಗುತ್ತದೇನೋ ಎನ್ನುವಂತಾಗಿದೆ, ಇದಕ್ಕೆ ಕನ್ನಡಿಗರೆಲ್ಲ ಕಂಕಣ ಕಟ್ಟಿಕೊಂಡು ಕನ್ನಡವನ್ನು ಉಳಿಸುವ ಬೆಳೆಸುವ ಪ್ರತಿಜ್ಞೆಯನ್ನು ತೊಡಬೇಕು. ಸಕರ್ಾರ ಕನ್ನಡ ಶಾಲೆಗಳಿಗೆ ಕಾನ್ವೆಂಟ್ ಶಾಲೆಗಳಲ್ಲಿರುವಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಕನ್ನಡವನ್ನು ಸಂರಕ್ಷಿಸುವ ಹೊಣೆಗಾರಿಗೆ ತಾಳಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಇಂಗ್ಲೀಷ್ ಎಂಬ ಸಾಂಕ್ರಾಮಿಕ ರೋಗ ಕನರ್ಾಟಕ ರಾಜ್ಯಕಷ್ಟೇ ಅಲ್ಲ, ಇಡೀ ಭರತಖಂಡಕ್ಕೆಲ್ಲ ಹಬ್ಬಿದೆ. ಅದು ವಿಶ್ವವೆಲ್ಲವನ್ನೂ ಆವರಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಕನರ್ಾಟಕ ರಾಜ್ಯದಲ್ಲಿ ಕನ್ನಡ ಶಾಲೆಗಳ ಸ್ಥಿತಿ ಚಿಂತಾಜನಕ. ಸಕರ್ಾರವೇ ಕನ್ನಡ ಶಾಲೆಗಳನ್ನು ಮುಚ್ಚುವ ತರದೂರಿನಲ್ಲಿದೆ. ಇದೊಂದು ಬಹುದೊಡ್ಡ ದುರಂತ. ಸಾಹಿತ್ಯ ಜನಜೀವನದ ಗತಿಬಿಂಬವಾಗಬೇಕು ಮತ್ತು ಪ್ರತಿಬಿಂಬವಾಗಬೇಕು ನಿಜ. ಸಾಹಿತ್ಯವು ಜೀವನದಲ್ಲಿ ಅನ್ನ ಬಟ್ಟೆ ವಸತಿಗಳನ್ನು ಒದಗಿಸಿಕೊಡುವುದಿಲ್ಲ. ಆದರೆ ಅವುಗಳನ್ನು ಸನ್ಮಾರ್ಗದಲ್ಲಿ ಸಂಪಾದಿಸಿಕೊಳ್ಳಲು ತಿಳುವಳಿಕೆ ನೀಡುತ್ತದೆ. ಅದು ಜೀವನಕ್ಕೆ ಹೊಸ ದೃಷ್ಠಿ ನೀಡಲು ನೆರವಾಗುತ್ತದೆ. ಸತತ ಅಧ್ಯಯನದಿಂದ ಜೀವನ ನವನವೋನ್ಮೇಶಾಲಿಯಾಗುತ್ತದೆ. 
ಉತ್ತಮ ಸಂಸ್ಕೃತಿ ಸಂಸ್ಕಾರ ಮತ್ತು ನಾಗರಿಕತೆಗಳನ್ನು ರೂಪಿಸಿಕೊಳ್ಳಲು ಶಕ್ತಿ ನೀಡುತ್ತದೆ. ವ್ಯಕ್ತಿ ವ್ಯಕ್ತಿತ್ವವು ಪರಿಮಳಭರಿತವಾದ ದುಂಡುಮಲ್ಲಿಗೆಯ ಪುಷ್ಪದಂತೆ ಅರಳಲು ಸಹಾಯಕವಾಗುತ್ತದೆ. ಇಂದಿನ ರಾಜಕೀಯ, ಚಲನಚಿತ್ರ, ದೂರದರ್ಶನ, ಕ್ರಿಕೆಟ್ ಮೊದಲಾದವುಗಳಿಗೆ ಅತಿಯಾದ ಪ್ರಚಾರ ದೊರೆಯುತ್ತಿರುವುದರಿಂದ, ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವ ವರ್ಗ, ಅಭ್ಯಸಿಸುವ ವರ್ಗ ಕಡಿಮೆ ಆಗುತ್ತಿದೆಯೇನೊ ಎಂಬ ಅನುಮಾನ ಕಾಡುತ್ತಿದೆ. ಆದರೆ ಅವುಗಳಿಗಿಂತಲೂ ಸಾಹಿತ್ಯವನ್ನು ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳುವುದು ತುಂಬಾ ಒಳ್ಳೆಯದು.
ಇಂದಿಗೂ ಕ್ರಿಯಾಶೀಲವಾಗಿ ಹಾಗೂ ಸೃಜನಾತ್ಮಕವಾಗಿ ಉಳಿದಿರುವ ಒಂದು ಧೀಮಂತ ಭಾಷೆ ಕನ್ನಡ ಈ ಕನ್ನಡದ ಅಭಿವೃದ್ದಿಗಾಗಿ ಅನ್ಯಭಾಷೆಗಳಿಂದ ಕೊಳ್ಳೆಹೊಡೆದು ಕನ್ನಡ ಭಾಷಾ ಕಣಜವನ್ನು ತುಂಬಿಸಿ ಅದನ್ನು ಶ್ರೀಮಂತ ಮಾಡಬೇಕಾದ್ದು ಕನ್ನಡ ನಾಡಿನ ಎಲ್ಲ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ಈಲ್ಲೆಯಲ್ಲಿ ಗಮಕಕಲೆ, ಚಿತ್ರಕಲೆ, ನೃತ್ಯಕಲೆ, ಸಂಗೀತಕಲೆ, ಜಾನಪದ ಕಲೆ, ಶಿಲ್ಪಕಲೆ ಮತ್ತು ಕಲಾವಿದರುಗಳು ಅಗಣಿತ ಪ್ರಮಾಣದಲ್ಲಿದ್ದಾರೆ.
ಸಂಸ್ಕೃತ, ತಮಿಳು, ತೆಲುಗು ಭಾಷೆಗಳಿಗೆ ಸಿಕ್ಕಂತೆ ಕನ್ನಡಕ್ಕೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಲಭ್ಯವಾಗಿದೆ. ಆದರೆ ಅದಕ್ಕೆ ಸಿಕ್ಕಬೇಕಾದ ಸೌಲಭ್ಯಗಳು ಇನ್ನೂ ಲಭ್ಯವಾಗಿಲ್ಲ. ಆ ದಿಕ್ಕಿನಲ್ಲಿ ನಮ್ಮ ರಾಜ್ಯದ ಸಂಸದರು ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಇತ್ತೀಚೆಗೆ ಕೊಬರಿಗೆ ಸರಿಯಾದ ಬೆಲೆ ನಿಗದಿಗೊಳ್ಳದೇ ತೆಂಗು ಬೆಳೆವ ರೈತರು ಕಂಗಾಲಾಗಿ ಹೋಗಿದ್ದಾರೆ. ಜತೆಗೆ ಮಳೆಯ ಅಭಾವ, ಬೋರ್ವೆಲ್ಗಳೆಲ್ಲ ಬತ್ತಿಹೋಗಿರುವುದು, ಅಂತರ್ ಜಲ ಕುಸಿತ, ನುಸಿಪೀಡೆ, ಕಪ್ಪುತಲೆ ಹುಳುವಿನ ಬಾದೆ ಇತ್ಯಾದಿ ಅನೇಕಾನೇಕ ಸಂಕಷ್ಟಗಳಿಗೆ ಸಿಕ್ಕಿ ತೆಂಗು ಬೆಳೆಗಾರರು ನಲುಗಿಹೋಗಿದ್ದಾರೆ. ವಿಶೇಷವಾಗಿ ಈ ಸಮಸ್ಯೆಗಳ ನಿವಾರಣೆಗಾಗಿ ಪ್ರಸ್ತುತ ಸಕರ್ಾರದ ಜನಪ್ರತಿನಿಧಿಗಳು ನಮ್ಮ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ನಿಗಧಿಗೊಳಿಸಲು ಶ್ರಮಿಸಬೇಕಾಗಿದೆ.
ತೆಂಗು ಬೆಳೆಗಾರ ರೈತರ ನೆರವಿಗೆ ಇರುವುದೊಂದೇ ಮಾರ್ಗ. ಸಕರ್ಾರ ಭದ್ರಾ ಮೇಲ್ದಂಡೆ ಯೋಜನೆ, ನೇತ್ರಾವತಿ ತಿರುವು ಯೋಜನೆ ಮತ್ತು ವಾಟರ್ಗ್ರಿಡ್ ಕೆನಾಲ್ ಮೂಲಕ ರಾಜ್ಯದ ಅನೇಕ ಜಿಲ್ಲೆಗಳ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದರೆ ತೆಂಗು ಬೆಳೆ ರೈತರು ಬದುಕಲು ದಾರಿಯಾಗುತ್ತದೆ.
101ಜನ ವಿಭೂತಿ ಪುರುಷರ ಶಿಲಾ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವ ಹುಚ್ಚನ್ನು ಹತ್ತಿಸಿಕೊಂಡಿದ್ದೇನೆ. ಕೆವಲ ಶಿಲಾಪ್ರತಿಮೆಗಳನ್ನು ನಿಲ್ಲಿಸುವುದಷ್ಟೇ ಅಲ್ಲ. ಪ್ರತಿಯೊಂದು ಶಿಲಾಪ್ರತಿಮೆಯ ಪೀಠಭಾಗದಲ್ಲಿ ಅವರವರ ಸುಪ್ರಸಿದ್ದ ಧ್ಯೇಯವಾಕ್ಯಗಳನ್ನು ಶಿಲಾಫಲಕದಲ್ಲಿ ಕೆತ್ತಿಸಿ ಹಕುವುದು ಎಂದರಲ್ಲದೆ ಶಿಲಾಪ್ರತಿಮೆಗಳ ಸ್ಥಾಪನೆಗಾಗಿ ಸಿದ್ದರಮನಗರಕ್ಕೆ 3ಕಿ.ಮೀ ಚಿಕ್ಕನಾಯಕನಹಳ್ಳಿಗೆ 8ಕಿ.ಮೀ ತುಮಕೂರಿಗೆ 28 ಕಿ.ಮೀ ಬೆಂಗಳೂರಿಗೆ 118ಕಿ.ಮೀ ದೂರದಲ್ಲಿರುವ ಸುಂಟರಮಳೆಗೆ ಶ್ರೀ ಗುರುಸಿದ್ದರಾಮೇಶ್ವರರ ದಏವಾಲಯದ ಬೆಟ್ಟದ ತಪ್ಪಲಿನ ಪ್ರದೇಶ. ಅಲ್ಲಿ ಒಂದಷ್ಟು ಸಕರ್ಾರಿ ಭೂಮಿ ಇದೆ. ಅದನ್ನು ಲೀಸ್ ಪಡೆದುಕೊಳ್ಳಲು ಶ್ರೀ ಸಿದ್ದರಾಮೇಶ್ವರ ಸೇವಾ ಟ್ರಸ್ಟ್ನವರು ಅಜರ್ಿ ಸಲ್ಲಿಸುವವರಿದ್ದಾರೆ. ಅದಕ್ಕೆ ಜಿಲ್ಲಾ ಸಚಿವರಾದ ಟಿ.ಬಿ.ಜಯಚಂದ್ರರವರು ಹಾಗೂ ಸ್ಥಳೀಯ ಶಾಸಕ ಸುರೇಶ್ಬಾಬುರವರು ಹೆಚ್ಚು ಮುತುವಜರ್ಿ ವಹಿಸಿ ಆ ಜಮೀನನ್ನು ನಿಯಮಗಳ ಪ್ರಕಾರ ಲೀಸ್ ಕೊಡಿಸಬೇಕಾಗಿ ಪ್ರಾಥರ್ಿಸುತ್ತೇನೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಸಾಹಿತ್ಯದ ಸೋಂಕಿಲ್ಲದೇ ಪರಿಪೂರ್ಣ ಮನುಷ್ಯನಾಗಲು ಸಾಧ್ಯವಿಲ್ಲ ಎಂದ ಅವರು ಸಾಹಿತ್ಯದ ಓದು-ಬರವಣಿಗೆ ಮನಷ್ಯನ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತದೆ ಅಲ್ಲದೇ ಮಾನವೀಯತೆ ಹೃದಯ ವೈಶಾಲ್ಯತೆಯನ್ನು ಬೆಳೆಸಲು ಸಹಕಾರಿಯೆಂದರು.
ಸಾಹಿತ್ಯ ಸಮ್ಮೇಳನಗಳು ಕನ್ನಡದ ಬೇರುಗಳನ್ನು ಗಟ್ಟಿಮಾಡುವ ಕೆಲಸಮಾಡಬೇಕಿದೆ ಎಂದು ಆಶಿಸಿದ ಸಚಿವರು ಕನರ್ಾಟಕ ಏಕೀಕರಣವಾಗಿ 60 ವರ್ಷಗಳು ಕಳೆದಿದ್ದು, ಸಂಪೂರ್ಣ ಕನ್ನಡೀಕರಣದ ಆಶಯ ಇನ್ನೂ ಈಡೇರಿಲ್ಲ. ಕೇಂದ್ರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಸೌಲಭ್ಯ ಕಲ್ಪಿಸಿದ್ದರೂ ಆಡಳಿತ ಕ್ಷೇತ್ರದಲ್ಲಿ ಕನ್ನಡದ ಶಬ್ದ ಭಂಡಾರ ವಿಸ್ತ್ರತಗೊಳ್ಳದಿರುವುದು ವಿಷಾದನೀಯವೆಂದರು.
ಚಿ.ನಾ.ಹಳ್ಳಿಗೆ ಶಾಶ್ವತ ನೀರಿನ ಯೋಜನೆ: ಚಿಕ್ಕನಾಯಕನಹಳ್ಳಿ ನನಗೆ ಜನ್ಮ ನೀಡಿ, ರಾಜಕೀಯ ನೆಲೆ ಕಲ್ಪಿಸಿಕೊಟ್ಟ ತಾಲೂಕು ಎಂದು ಸ್ಮರಿಸಿದ ಸಚಿವರು ತೆಂಗು ಬೆಳೆದು ಸಮೃದ್ದ ಜೀವನ ನಡೆಸುತ್ತಿದ್ದ ಜನರು ಇಂದು ಮಳೆಯಿಲ್ಲದೆ, ಬೆಳೆಯಿಲ್ಲದೆ ಬರಗಾಲದಿಂದ ತತ್ತರಿಸಿದ್ದಾರೆ. ಈ ಭಾಗಕ್ಕೆ ನೀರು ಹರಿಸಬೇಕೆಂದು ದಿ.ಎನ್.ಬಸವಯ್ಯ ಅವರ ಕಾಲದಿಂದಲೂ ಪ್ರಯತ್ನ ನಡೆಯುತ್ತಾಬಂದಿದೆ. ಈ ಭಾಗಕ್ಕೆ ಶಾಶ್ವತ ನೀರು ಕಲ್ಪಿಸಲು ಬಜೆಟ್ನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಕನ್ನಡ ಭವನ ನಿಮರ್ಾನಕ್ಕೆ ಬದ್ದ: ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನೆನಪಿಗಾಗಿ ತುಮಕೂರಿನಲ್ಲಿ ನಿಮರ್ಿಸುತ್ತಿರುವ ಕನ್ನಡ ಭವನ ಪೂರ್ಣಗೊಳಿಸಲು ಬದ್ಧರಿರುವುದಾಗಿ ಭರವಸೆ ನೀಡಿದ ಸಚಿವರು ಚಿ.ನಾ.ಹಳ್ಳಿಯ ತೀನಂಶ್ರೀ ಭವನ ಹಾಗೂ ಕನ್ನಡ ಭವನ ನಿಮರ್ಾಣ ಪೂರ್ಣಗೊಳಿಸಲು ಸಹಕಾರ ನೀಡುವುದಾಗಿ ಘೋಷಿಸಿದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ರವರ ಕನ್ನಡಿಗನ ಕಣ್ಣಲ್ಲಿ ಕಠ್ಮಾಂಡು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅಬ್ಕಾರಿ ಆಯುಕ್ತ ಡಾ.ಸಿ.ಸೋಮಶೇಖರ್, ಕನ್ನಡ ಭಾಷೆಯ ಮೇಲೆ ಅನೇಕ ಆಕ್ರಮಣಗಳು ನಡೆದರೂ ಭಾಷೆಯ ಸತ್ವಕ್ಕೆ ಕುಂದು ಉಂಟಾಗಿಲ್ಲ.ಆದರೆ ದೃಶ್ಯ ಮಾಧ್ಯಮದವರ ಅಕ್ಷರ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದು, ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು. 
ಕನ್ನಡ ಭಾಷೆ, ನೆಲ,ಜಲ,ಬದುಕು ಹಾಗೂ ಸಂಸ್ಕೃತಿಯ ಮೇಲೆ ಆಕ್ರಮಣಗಳು ಹೆಚ್ಚಾಗಿರುವುದು ವಿಷಾದ ಸಂಗತಿಯಾಗಿದೆಯೆಂದರು. 
ಸಮ್ಮೇಳನದ ಅಂಗವಾಗಿ ಹೊರತಂದ ಕಣಜ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡಿಗರಿಗೆ ಸಿಇಟಿಯಲ್ಲಿ ಶೇ.50ರಷ್ಟು ಹಾಗೂ ಉದ್ಯೋಗದಲ್ಲಿ ಮೀಸಲು ಕಲ್ಪಿಸಬೇಕಲ್ಲದೇ 7ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಡ್ಡಾಯವಾಗಿ ಓದುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಚಾರ್ ಆಶಯ ನುಡಿಗಳನ್ನಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮ, ಜಿಲ್ಲಾಧಿಕಾರಿ ಸತ್ಯಮೂತರ್ಿ, ಸಿಇಓ ಗೋವಿಂದರಾಜು, ಜಿ.ಪಂ.ಉಪಾಧ್ಯಕ್ಷೆ ಮಮತ, ಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ , ತಾಲೂಕು ಕಸಾಫ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಪತ್ರಕರ್ತ ಚಿ.ನಿ.ಪುರುಷೋತ್ತಮ,ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಸಾಹಿತಿ ಎಂ.ವಿ.ನಾಗರಾಜರಾವ್, ನಿಕಟಪೂರ್ವ ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.
ಬಾಕ್ಸ್
ರಾಜ್ಯ ಸರಕಾರದ ಕಾನೂನು, ಅಧಿನಿಯಮಗಳನ್ನು ಸಂಪೂರ್ಣ ಕನ್ನಡೀಕರಣ ಗೊಳಿಸಲು ಚಿಂತನೆ ನಡೆದಿದ್ದು, ಅನೇಕ ಸವಾಲುಗಳು ಎದುರಾಗಿವೆ. ಆಡಳಿತ ಕನ್ನಡದ ಶಬ್ದ ಬಂಡಾರ ವಿಸ್ತರಣೆಗೆ ಕಸಾಪ ನೆರವು ಅಗತ್ಯವಾಗಿದೆ.,
-ಟಿ.ಬಿ.ಜಯಚಂದ್ರ ಕಾನೂನು ಸಚಿವರು


ಮೆರವಣಿಗೆಯ ಮೂಲಕ ಪ್ರಧಾನ ವೇದಿಕೆಗೆ ಆಗಮಿಸಿದ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು
ಚಿಕ್ಕನಾಯಕನಹಳ್ಳಿ,ಜೂ.28 : ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು ಕುಳಿತಿರುವ ಪುಷ್ಪಾಲಂಕೃತವಾದ ವಾಹನವು  ಕನ್ನಡ ಸಂಘದ ವೇದಿಕೆಯಿಂದ ಆರಂಭಗೊಂಡು, ಪಟ್ಟಣದ ರಾಜ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪ್ರಧಾನ ವೇದಿಕೆಗೆ ಕರೆದೊಯ್ಯಲಾಯಿತು.
ಸಮ್ಮೇಳನಾಧ್ಯಕ್ಷರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವೀರಗಾಸೆ, ಚಕ್ಕೆಭಜನೆ, ಗಾರುಡಿಗೊಂಬೆ, ಗೊವರನ ಕುಣಿತ, ಪೂಜಾ ಕುಣೀತ, ಹೆಜ್ಜೆಮೇಳ, ಮಹಿಳಾ ತಮಟೆ, ಕೋಲಾಟ, ಲಂಬಾಣಿ ನೃತ್ಯ, ಗಾಲ್ಡಿಗನ ಕುಣಿತ, ಕಂಸಾಳೆ, ಡೊಳ್ಳುಕುಣಿತ, ನಾದಸ್ವರ, ತಮಟೆ ವಾದ್ಯ, ಅರೇವಾದ್ಯ, ಕಹಳೆ, ಚಿಟ್ಟಿಮೇಳ, ಸೋಮನಕುಣಿತ, ಸ್ತ್ರೀಭಜನಾತಂಡ, ಗೊರವಯ್ಯನ ಕುಣಿತ ಹಾಗೂ ವಿವಿಧ ಜಾನಪದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಮ್ಮೇಳನದಲ್ಲಿ ಪ್ರದಶರ್ಿನಿ ಸಮುಚ್ಛಯ , ಗುಡಿಕೈಗಾರಿಕಾ ಪ್ರದಶರ್ಿನ, ಪುಸ್ತಕ ಮಳಿಗೆ ಉದ್ಘಾಟನೆ, ರಂಗೋಲಿ ಚಿತ್ತಾರ, ಕಣದ ರಾಶಿ, ಛಾಯಾಚಿತ್ರ ಪ್ರದರ್ಶನ, ಭುವೇಶ್ವರಿ ಶಿಲ್ಪ ಅನಾವರಣ ಸಾರ್ವಜನಿಕರನ್ನು ಆಕಷರ್ಿಸಿತು.
ಪಟ್ಟಣದ ತುಂಬ ಊರಿನ ಹಿರಿಯ ಹೆಸರಿನಿಂದ ಕೂಡಿದ ಬಾಗಿಲುಗಳು, ಕಮಾನುಗಳು ಆಕಷರ್ಿಸಿದವು.
ಮೆರವಣಿಗೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಾ.ಪಂ.ಅಧ್ಯಕ್ಷ ಶಶಿಧರ್, ಜಿ.ಪಂ.ಸದಸ್ಯ ಹೆಚ್.ಬಿಕ.ಪಂಚಾಕ್ಷರಿ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಸಿ.ಬಿ.ರೇಣುಕಸ್ವಾಮಿ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರವಿಚಂದ್ರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಸೀಮೆಎಣ್ಣೆ ಕೃಷ್ಣಯ್ಯ ಸೇರಿದಂತೆ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.