Saturday, April 6, 2013

ಶಾಸಕರು ಕ್ಷೇತ್ರವನ್ನು  ಅಭಿವೃದ್ದಿ ಪಡಿಸುವಲ್ಲಿ, ಆಡಳಿತ 
               ನಡೆಸುವಲ್ಲಿ  ವಿಫಲ: ಜೆ.ಸಿ.ಎಂ.
                    
ಚಿಕ್ಕನಾಯಕನಹಳ್ಳಿ,ಏ.06 : ಈಗಿನ ಶಾಸಕರ ಆಡಳಿತದ ಅವಧಿಯಲ್ಲಿ ತಾಲ್ಲೂಕಿನಲ್ಲಿ ಯಾವುದಾದರೂ ಒಂದು ಆಸ್ಪತ್ರೆಯಾಗಲಿ, ಶಾಲಾ ಕಾಲೇಜಾಗಲಿ ಅಥವಾ ಸಕರ್ಾರಿ ಕಛೇರಿ ಕಟ್ಟಡ ಆಗಿಲ್ಲ ಆದರೆ ಯಾವ ಉದ್ದೇಶಕ್ಕಾಗಿ ಶಾಸಕ ಸ್ಥಾನದಲ್ಲಿ ಇರುವರೋ ತಿಳಿಯದು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಆರೋಪಿಸಿದ್ದಾರೆ.
    ತಾಲ್ಲೂಕಿನ ಜೆ.ಸಿ.ಪುರದಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಶಾಸಕರ ಅನುದಾನ ಎಲ್ಲಾ ಶಾಸಕರಿಗೂ ಬರುತ್ತದೆ, ಆದರೆ ಹೆಚ್ಚುವರಿಯಾಗಿ ಯಾವ ಅನುದಾನ ತರಲು ಸಾಧ್ಯವಾಗಿಲ್ಲ, ತಾಲ್ಲೂಕಿನ ನೀರಿನ ಸಮಸ್ಯೆ ನೀಗಿಸಲು ದುಡ್ಡಿನ ಕೊರತೆ ಇಲ್ಲ, ಆದರೆ ಕೆಲಸ ಮಾಡುವವರೇ ಇಲ್ಲಿ ದಿಕ್ಕಿಲ್ಲದಂತಾಗಿದ್ದಾರೆ ಎಂದು ಆರೋಪಿಸಿದರು.
    ನನ್ನ ಶಾಸಕ ಅವಧಿಯಲ್ಲಿ ಬರಗಾಲ ಬಂದರೆ ಒಂದೇ ಸಮನೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ತಿಳಿಸುತ್ತಿದ್ದೆ ಆದರೆ ತಾ.ಪಂ, ಗ್ರಾ.ಪಂ ಸಭೆ ನಡೆಸದೆ ಶಾಸನ ಸಭೆಯ ಬಗ್ಗೆ ಕೇಳುವವರೆ ಇಲ್ಲದಂತಾಗಿ ಜನಪರ ಚಚರ್ೆಗಳೆ ನಡೆಯುತ್ತಿಲ್ಲವಾಗಿದೆ ಎಂದರಲ್ಲದೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ, ಪಿತೂರಿ ನಡೆಯುತ್ತಿದೆ ಆದರೂ ನಮ್ಮ ಕಾರ್ಯಕರ್ತರು ನಮ್ಮ ನಡುವೆ  ಯಾವ ವ್ಯತ್ಯಾಸವೂ ಉಂಟಾಗಿಲ್ಲ ಎಂದರು.
    ಚುನಾವಣೆ ಸಮಯದಲ್ಲಿ ಕಾರ್ಯಕರ್ತರು ಒಬ್ಬಬ್ಬರನ್ನು ಓಲೈಸುವ ಬದಲು ಗುಂಪುಗುಂಪುಗಳನ್ನೇ ಏಳಿಸಬೇಕು ಆದರೂ ಜೆಸಿಪುರ ನನ್ನ ಸ್ವಕ್ಷೇತ್ರದಲ್ಲಿ ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ ಆದರೂ ಪಿತೂರಿ ನಡೆಸುವವರಿಗೆ ಈ ಸಭೆ ಒಗ್ಗಟ್ಟಿನ ಪ್ರದರ್ಶನವಾಗಿದೆ ಎಂದರು.
    ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಜನಪ್ರತಿನಿಧಿ ಹಾಗೂ ಜನನಾಯಕ ಇಬ್ಬರಿಗೂ ವ್ಯತ್ಯಾಸವಿದೆ ಅದರಲ್ಲಿ ಜೆಸಿಮಾಧುಸ್ವಾಮಿ ಜನನಾಯಕರ ಸ್ಥಾನದಲ್ಲಿ ನಿಲ್ಲುವರು, ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಕಾರ್ಯಕರ್ತರು ಮುಂದಾಗಬೇಕು, ಅವರ ವಿರುದ್ದವಾಗಿ ಬರುವ ಅಪಪ್ರಚಾರವನ್ನು ಬದಿಗಿಟ್ಟು ಗೆಲ್ಲಿಸಬೇಕು ಎಂದ ಅವರು ತಾಲ್ಲೂಕಿನಲ್ಲಿ ಕೆಜೆಪಿಗೆ ಪ್ರತಿಸ್ಪಧರ್ಿ ಜೆಡಿಎಸ್ ಎಂದರು.
    ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಜೆ.ಸಿ.ಮಾಧುಸ್ವಾಮಿರವರು ನಿಷ್ಠೂರ ವ್ಯಕ್ತಿಯಾದರೂ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸುವ ವ್ಯಕ್ತಿ ಜನತೆ ಅವರನ್ನು ಬಿಟ್ಟು ಹಣ ಮತ್ತು ಹೆಂಡಕ್ಕೆ ಮಾರುಹೋಗಿ ತಾಲ್ಲೂಕಿನ ಏಳಿಗೆ ಕುಗ್ಗಿಸಬೇಡಿ ಎಂದರು.
    ಬಿ.ಎನ್.ಶಿವಪ್ರಕಾಶ್ ಮಾತನಾಡಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಜೆಸಿಎಂರವರು, ಬೆಂಗಳೂರಿನ ಐಷಾರಾಮಿ ಜೀವನ ಮಾಡುವ ಶಾಸಕರಿಗಿಂತ ಹಳ್ಳಿಗಳಲ್ಲಿ ಸಂಚರಿಸುವ ಶಾಸಕರ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ, ಶಿವರಾಜ್ಅಗಸರಹಳ್ಳಿ,  ಶಶಿಧರ್, ಶಂಕರಣ್ಣ, ಎಸ್.ಆರ್.ಸ್ವಾಮಿನಾಥ್, ಕೆ.ಆರ್.ಚನ್ನಬಸವಪ್ಪ, ಕೆ.ಎಮ್.ರಾಜಶೇಖರ್ ಮುಂತಾದವರಿದ್ದರು.

ಪಟ್ಟಣದ ಹಲವರು ಕೆ.ಜೆ.ಪಿ.ಯಿಂದ ಬಿ.ಜೆ.ಪಿ.ಗೆ ಸೇರ್ಪಡೆ

ಚಿಕ್ಕನಾಯಕನಹಳ್ಳಿ,ಏ.06 : ಪಟ್ಟಣದ ಕೆ.ಜಿ.ಪಿ ಪಕ್ಷದ ಮುಖಂಡರು ಕೆ.ಎಸ್.ಕಿರಣ್ಕುಮಾರ್ ಸಮ್ಮುಖದಲ್ಲಿ ಬಿ.ಜೆ.ಪಿಗೆ ಸೇರಿಕೊಂಡರು.
    ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕಿರಣ್ ಕುಮಾರ್ ಚಿಕ್ಕನಾಯಕನಹಳ್ಳಿಯನ್ನು ಹಳ್ಳಿಯಾಗೇ ಉಳಿಸಿದ್ದಾರೆ , ತಾಲ್ಲೂಕಿನ ಕೆರೆಗಳಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೇವೆ. ಹಿಂದೂ ಮುಸ್ಲಿಂ ಎಂಬ ಭಾವನೆ ಎಲ್ಲಾರನ್ನು ಪ್ರೀತಿಯಿಂದ ಅವರ ಸಮಸ್ಯೆಗೆ ಸ್ಪಂದಿಸಿದ್ದೇನೆ, ಈ ಬಾರಿ ನನ್ನನು ಗೆಲ್ಲಿಸಿದ್ದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ಮಾಡುವುದರಲ್ಲಿ ಅನುಮಾನ ಬೇಡ, ನಮ್ಮ ಕ್ಷೇತ್ರದ ಜನತೆ ಹಾಗೂ ನಮ್ಮ ಕಾರ್ಯಕರ್ತರ ಬೆಂಬಲಕ್ಕೆ ನಾನು ಸದಾ ಇರುತ್ತೆನೆ ಎಂದರಲ್ಲದೆ ಮಹೇಶ್ , ಸಾದಶಿವಯ್ಯ, ಮಂಜುನಾಥ್, ಗಾರೆಬಸವರಾಜು, ಈಶ್ವರಯ್ಯ, ರುದ್ರೇಶ್, ಹೊನ್ನಪ್ಪ, ಗೋಪಿ, ಹಾಗೂ ಹಲವರು ಬಿ.ಜೆ.ಪಿ ಸೇರಿಕೊಂಡರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರಾದ ತಾಲ್ಲೂಕು ಅಧ್ಯಕ್ಷ ಮಿಲ್ಟ್ರೀ ಶಿವಣ್ಣ , ಈಶ್ವರ್ ಭಾಗವತ್ , ಚೇತನ್ ಪ್ರಸಾದ್, ಗಂಗಾಧರ್ ಉಪಸ್ಥಿತರಿದರು,
ಎಂ.ವಿ.ನಾಗರಾಜರಾವ್ ರವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ.
ಚಿಕ್ಕನಾಯಕನಹಳ್ಳಿ,ಏ.05: ಸಾಹಿತಿ ಎಂ.ವಿ.ನಾಗರಾಜ ರಾವ್ ಅವರಿಗೆ ಶಿವಮೊಗ್ಗದ ಕನರ್ಾಟಕ ಸಂಘವು,  ಅವರ ಮಕ್ಕಳ ಸಾಹಿತ್ಯ ಸೇವೆಗಾಗಿ 2012ನೇ ಸಾಲಿನ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಿದೆ.
    ಕಳೆದ ಎಂಟು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕಲೆ, ಸಾಹಿತ್ಯ, ಸಂಸ್ಕೃತಿ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಕನರ್ಾಟಕ ಸಂಘ ಪ್ರತಿ ವರ್ಷ ನಾಡಿನ ನಾಲ್ವರು ಹಿರಿಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.  ಸಂಘವು ಕೊಡಮಾಡುವ ಈ ಪ್ರಶಸ್ತಿಗೆ  ಡಾ.ಚಂದ್ರಶೇಖರ ಕಂಬಾರವರು ಭಾಜನರಾಗಿದ್ದರು.
    ಎಂ.ವಿ.ನಾಗರಾಜ್ ರವರು ಮಕ್ಕಳಿಗಾಗಿ 25ಕ್ಕೂ ಹೆಚ್ಚ ಪುಸ್ತಕಗಳನ್ನು ಬರೆದಿದ್ದು, ಮಕ್ಕಳ ನಾಟಕಗಳು, ಮಹಾನ್ ವ್ಯಕ್ತಿಗಳ ಪರಿಚಯಾತ್ಮಕ ಪುಸ್ತಕಗಳು, ಜಾನಪದ ಕಥೆಗಳು,  ವಿದ್ಯಾಥರ್ಿಗಳಿಗೆ ಜ್ಞಾನಕೋಶ, ವ್ಯಾಕರಣ, ಸೇರಿದಂತೆ ಕೃತಿ ಶ್ರೇಣಿಯನ್ನು ನೀಡಿದ್ದಾರೆ.
    1985ರಿಂದಲೂ ಸಾಹಿತ್ಯ ಸೇವೆಯನ್ನು ಮಾಡಿಕೊಂಡು ಬಂದಿರುವ ಎಂ.ವಿ.ಎನ್.ರವರು ಕಾಲೇಜ್ನ ಪ್ರಾಂಶುಪಾಲ ವೃತ್ತಿಯಿಂದ  ನಿವೃತ್ತರಾದ ನಂತರ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತೊಡಗಿಸಿಕೊಂಡಿದ್ದಾರೆ.
    ರಾಜಕೀಯದ ಅನುಭವ ಕಡಿಮೆ ಇದೆ: ಬಿ.ಎಸ್.ಆರ್.ಅಭಥರ್ಿ ದೇವರಾಜು
ಚಿಕ್ಕನಾಯಕನಹಳ್ಳಿ,ಏ.05 : ತಾಲ್ಲೂಕಿನ ತಾಲ್ಲೂಕಿನ ಕುಪ್ಪೂರು ಗ್ರಾಮದವನಾದ ನನಗೆ ಸ್ಥಳೀಯನಾಗಿರುವುದರಿಂದ ಬಿಎಸ್ಆರ್ ಪಕ್ಷದ ಅಭ್ಯಥರ್ಿಯನ್ನಾಗಿ ಪಕ್ಷದ ರಾಜ್ಯಧ್ಯಾಕ್ಷರಾದ ಶ್ರೀರಾಮುಲುರವರು ಘೋಷಿಸಿದ್ದಾರೆ.  ಎಂದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಕೆ.ಎಲ್.ದೇವರಾಜು ತಿಳಿಸಿದರು.
     ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯದ ಅನುಭವ ನನಗೆ ಕಡಿಮೆ ಇದೆ  ಎಂದರಲ್ಲದೆ, ಈಗಾಗಲೇ ತಾಲ್ಲೂಕಿನ ಹಲವು ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಎಂದರು.
    ತಾಲ್ಲೂಕಿನಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಅಧ್ಯಕ್ಷರಾದ ಶ್ರಿರಾಮುಲು, ಸೋಮಶೇಖರರೆಡ್ಡಿ, ಜೆ.ಶಾಂತ ಇನ್ನಿತರ ಮುಖಂಡರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

aPÀÌ£ÁAiÀÄPÀ£ÀºÀ½îAiÀÄ PÉeɦ ¥ÀPÀëzÀ ªÀ¸ÀAvïPÀĪÀiÁgï, ªÀÄ°èPÁdÄð£ÀAiÀÄå, gÁªÀÄtÚ, ²ªÀtÚ ¸ÉÃjzÀAvÉ ºÀ®ªÀgÀÄ ¹.©.¸ÀÄgÉñï¨Á§Ä £ÉÃvÀÈvÀézÀ°è eÉrJ¸ï ¥ÀPÀë ¸ÉÃjzÀgÀÄ.
  ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ
ಚಿಕ್ಕನಾಯಕನಹಳ್ಳಿ,ಏ.05 : ನವೋದಯ ಪ್ರಥಮ ದಜರ್ೆ ಕಾಲೇಜಿನ 2012-13ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಇದೇ 8ರ ಸೋಮವಾರ ಏರ್ಪಡಿಸಲಾಗಿದೆ.
    ಸಮಾರಂಭವನ್ನು ಕಾಲೇಜು ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಸಂತಶಿಶುನಾಳ ಶರೀಫ, ಶಿವಯೋಗಿಗಳ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂತರ್ಿ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉಪಸ್ಥಿತರಿರುವರು.