Tuesday, November 29, 2011


ಚಿ.ನಾ.ಹಳ್ಳಿ 108 ಆಂಬ್ಯುಲೆನ್ಸ್ ಸಿಬ್ಬಂದಿಯ ಮೋಜು ಮಸ್ತಿ.
ಚಿಕ್ಕನಾಯಕನಹಳ್ಳಿ,ನ.29  : ಪಟ್ಟಣದ ಸಕರ್ಾರಿ ಆಸ್ಪತ್ರೆಯ ಆವರಣದಲ್ಲಿ ಬೀಡುಬಿಟ್ಟಿರುವ  108 ಆಬ್ಯೂಲೆನ್ಸ್ ವಾಹನದ ಸಿಬ್ಬಂದಿಯ ಮೋಜು ಮಸ್ತಿ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ,  ಇದು ಆಸ್ಪತ್ರೆ ಆವರಣ ಎಂಬುದನ್ನು ತಿಳಿಯದಷ್ಟು ಅರೆ ಪ್ರಜ್ಞಾವಸ್ಥೆ ತಲುಪಿದ್ದಾರೆ.
ಧೂಮಪಾನ ಮಾಡಬಾರದು, ಮಧ್ಯಪಾನ ಆರೋಗ್ಯಕ್ಕೆ ಹಾನಿಕರ, ಆಸ್ಪತ್ರೆಯ ಕಸದಿಂದ ರೋಗಗಳು ಹರಡುತ್ತವೆ ಎಂಬ ನಾಮಫಲಕ ಇರುವ ಆಸ್ಪತ್ರೆಯ ಆವರಣದಲ್ಲೇ ಮಧ್ಯಪಾನದ ಬಾಟಲುಗಳು, ಮಧ್ಯಪಾನದ ಸ್ಯಾಚೆಟ್ಗಳು, ಸೇರಿದಂತೆ ಹಲವು ರೀತಿಯ ಉದ್ದೀಪನ ಔಷಧಿಗಳ ಕುರುಹುಗಳು ಸಿಗುತ್ತಿರುವುದು ಸಾರ್ವಜನಿಕರಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.    
ಆಸ್ಪತ್ರೆಯ ಹಿಂಭಾಗದಲ್ಲಿರುವ 108ರ ವಾಹನ ಸಿಬ್ಬಂದಿಯ ಕೊಠಡಿಯ ಸುತ್ತಾಮುತ್ತಾ ಮಧ್ಯದಬಾಟಲ್ಗಳು, ಧೂಮಪಾನದ ಪಾಕೆಟ್ಗಳು ರಾಶಿರಾಶಿ ಬಿದ್ದಿವೆ, ಕೊಠಡಿಯಲ್ಲಿ ಸಿಬ್ಬಂದಿ ಕುಡಿದ ಅಮಲಿನಲ್ಲಿ ನಾವೆಲ್ಲಿ ಮಲಗಿದ್ದೇವೆಂಬ ಪರಿಜ್ಞಾನವಿಲ್ಲದೆ ಆರಾಮಾಗಿ ಕುಂಭಕರಣ ನಿದ್ದೆ ಮಾಡುತ್ತ ತಾವು ಎಸೆದಿರುವ ಬಾಟಲಿಗಳ ಬಗ್ಗೆ  ಮೈಮರೆತಿದ್ದಾರೆ. 
  108ರ ವಾಹನ ಹಾಗೂ ವಾಹನದ ಸಿಬ್ಬಂದಿಗಳನ್ನು ರೋಗಿಗಳ  ತುತರ್ುವ್ಯವಸ್ಥೆಗಾಗಿ ಸಕರ್ಾರ ನಿಯೋಜಿಸಿದೆ, ಆದರೆ ವಾಹನ ಸಿಬ್ಬಂದಿ ತಮ್ಮ ಕೊಠಡಿಯಲ್ಲಿ ಗಾಡನಿದ್ರೆ ಮಾಡುತ್ತಿದ್ದಾರೆ. ರೋಗಿಗಳಿಗೆ ಯಾವ ರೀತಿಯಲ್ಲಿ ತುತರ್ು ವ್ಯವಸ್ಥೆಯ ಔಷದೋಪಚಾರ ಮಾಡುತ್ತಾರೆ ಎಂಬುದು ಪ್ರತ್ಯಕ್ಷದಶರ್ಿಗಳ ಪ್ರಶ್ನೆ,  ಇವರ ಜವಬ್ದಾರಿಯನ್ನು ಹೊತ್ತಿರುವ ಕಂಪನಿ  ಇವರನ್ನು ಸುಮ್ಮನೆ ಮಲಗಲು ಸಂಬಳ ನೀಡುತ್ತಿದೆಯೇ ಎಂಬದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡುತ್ತಿದೆ.
ಇಷ್ಟೇ ಅಲ್ಲದೆ 108ರ ವಾಹನವನ್ನು ಸಕರ್ಾರಿ ಕೆಲಸಕ್ಕೆ ಹೆಚ್ಚಾಗಿ ಬಳಸಿಕೊಳ್ಳದೆ ಆಸ್ಪತ್ರೆಯ ಸಿಬ್ಬಂದಿ ತಮ್ಮ ಖಾಸಗಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. 
ಆಸ್ಪತ್ರೆಯ ಕಸದಿಂದ ರೋಗಗಳು ಹರಡುತ್ತವೆ ಎಂಬ ಫಲಕಗಳನ್ನು ಆಸ್ಪತ್ರೆಯಲ್ಲಿ ಹಾಕಿದ್ದರೂ ಆಸ್ಪತ್ರೆಯ ಆವರಣದಲ್ಲೇ ಹೆಚ್ಚಾಗಿ ಮಧ್ಯಬಾಟಲ್, ಧೂಮಪಾನದ ಪ್ಟಾಕೆಟ್ ಹಾಗೂ ಇನ್ನಿತರ ಕಸದ ರಾಶಿಯಿಂದ ಆಸ್ಪತ್ರೆಯ ಆವರಣ ದುವರ್ಾಸನೆಯಿಂದ ಕೂಡಿ ರೋಗಿಗಳಿಗೆ ಇನ್ನಷ್ಟು ಆರೋಗ್ಯ ಹದೆಗಡುತ್ತಿದೆ.  ಆಸ್ಪತ್ರೆಯ ಆವರಣದಲ್ಲಿ ಕಸವನ್ನು ತೆಗೆದು ಹಾಕಿ  ಶುಚಿ ಮಾಡುತ್ತಾರೋ ಇಲ್ಲವೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಇದರ ಬಗ್ಗೆ ವೈದ್ಯಾಧಿಕಾರಿಗಳು  ಸುಮ್ಮನಿರುವುದು ಸಕರ್ಾರಿ ಆಡಳಿತದ ವಿಪಯರ್ಾಸವೇ ಸರಿ. ಇದರ ಮೇಲುಸ್ತುವಾರಿ ವಹಿಸಿರುವ ಎನ್.ಜಿ.ಓ. ಅವರು ಸೂಕ್ತ ನಿದರ್ೇಶನ ನೀಡದಿದ್ದರೆ ಇದೊಂದು ಬಾರ್ ಅಂಡ್ ರೆಸ್ಟೋರೆಂಟ್  ಆಗಿ ಪರಿವರ್ತನೆಗೊಳ್ಳುವ ಕಾಲ ದೂರವಿಲ್ಲ.ಇಲಾಖೆಯಲ್ಲಿ  ಅನುದಾನವಿಲ್ಲದೆ ಅನಾಥವಾಗಿರುವ ಉದ್ಯಾನವನ.
ಚಿಕ್ಕನಾಯಕನಹಳ್ಳಿ,ನ.29 : ನಾಮಫಲಕದಲ್ಲಿ ಮಾತ್ರ ಸಸ್ಯಕ್ಷೇತ್ರ, ಪ್ರಕೃತಿ ಉದ್ಯಾನವನ, ಆದರೆ ಒಳಗಡೆ ಹೋದರೆ ಕಾಣುವುದು ಸಕರ್ಾರದ ನಿರ್ಲಕ್ಷತೆಯಿಂದ ಸೊರಗಿದ ಅದ್ಯಾನವನ. ಈ ರೀತಿ ಆಗಿರುವುದು ತಾಲ್ಲೂಕಿನರುವ ತರಬೇನಹಳ್ಳಿಯ ಉದ್ಯಾನವನ.
1998-99ನೇ ಇಸವಿಯಲ್ಲಿ ಸುಂದರ ಪ್ರವಾಸಿ ತಾಣವಾಗಿ ಸ್ಥಾಪನೆಗೊಂಡ ಈ ಉದ್ಯಾನವನವು ಇಂದು ಯಾವುದೇ ಅನುದಾನಗಳಿಲ್ಲದೇ ಸೊರಗುತ್ತಾ ಹೆಸರಿಗಷ್ಟೇ ಉದ್ಯಾನವನವಾಗಿದೆ.
ಸಸ್ಯ ಪ್ರೇಮಿಗಳು, ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿಯಲು, ಮನಸ್ಸಿನ ಶಾಂತಿಗಾಗಿ ಉದ್ಯಾನವನಗಳಿಗೆ ಆಗಮಿಸಿ ಸೌಂದರ್ಯವನ್ನು ಹೊಗಳುವುದು ಸವರ್ೆ ಸಾಮಾನ್ಯ ಆದರೆ ತರಬೇನಹಳ್ಳಿ ಉದ್ಯಾನವನಕ್ಕೆ ಆಗಮಿಸಿದವರು ಇಲ್ಲಿನ ವ್ಯವಸ್ಥೆಯನ್ನು ಗಮನಿಸಿ ಉಗುಳುವುದು ಸಾಮಾನ್ಯವಾಗಿದೆ.
ಉದ್ಯಾನವನವು ಒಟ್ಟು 14 ಎಕರೆ ಇದ್ದು 30 ಗುಂಟೆ ರಸ್ತೆಯಾಗಿದೆ, ಉಳಿದ ಪ್ರದೇಶ ಉದ್ಯಾನವನಕ್ಕೆ ಸೀಮಿತವಾಗಿದೆ, ಇಲ್ಲಿ ಬಿದಿರು, ಅಕೇಶಿಯಾ, ನೀಲಗಿರಿ, ಬಸವನಪಾದ, ನೇರಳೆ, ಹೆಬಲ್ಸ್, ಹೂವಿನಗಿಡ ಹಾಗೂ ವಿವಿಧ ಜಾತಿಯ ಹಲವಾರು ಮರಗಿಡಗಳು ಇದ್ದರೂ ಅವುಗಳೆಲ್ಲಾ ನೀರಿಲ್ಲದೆ ಒಣಗುತ್ತಿವೆ,  ಇರುವ ಈ ಉದ್ಯಾನವನದಲ್ಲಿ  ಅವ್ಯವಸ್ಥೆಯಿಂದ ಕೂಡಿದ್ದು ಪ್ರಕೃತಿ ಸೌಂದರ್ಯ ಹಾಗೂ ಸಸ್ಯಕಾಶಿಯು ಬರಡಾಗುತ್ತಿದೆ. ಬೋರ್ವೆಲ್ಗಳಲ್ಲಿ ನೀರು ಇಲ್ಲ,  ತಂತಿಬೇಲಿಗಳು ಹಾಳಾಗಿವೆ, ಆಸನಗಳು ಮುರಿದು ಮೂಲೆ ಸೇರಿವೆ, ಮಕ್ಕಳ ಆಟಿಕೆಗಳ ಅವ್ಯವಸ್ಥೆ ಅಲ್ಲದೆ ಇಲ್ಲಿರುವ  ಮೇಲ್ಛಾವಣಿಗಳ ಸಹಾಯಕ್ಕೆ ಹಾಕಿರುವ ತೆಂಗಿನ ಗರಿಗಳು ಮುರಿದು ಬಿದ್ದು ಅಲ್ಲಿಯೇ ಕಸದ ತೊಟ್ಟಿಯಂತಾದರೂ ಯಾರೂ ಗಮನ ಹರಿಸದಿರುವುದು ನೋಡಿದರೆ ಉದ್ಯಾನವನ ಅದ್ಯಾನವನ ಆಗಿರುವುದಕ್ಕೆ ಸಾಕ್ಷಿಯಾಗಿದೆ. ಇದು ಈಗೆ ಮುಂದುವರೆದು ಅಭಿವೃದ್ದಿ ಕಾಣದೇ ಇದ್ದರೆ ಮುಂದಿನ ಯುವಪೀಳಿಗೆ ತಾಲ್ಲೂಕಿನಲ್ಲಿ ಉದ್ಯಾನವನವಿತ್ತು ಎಂಬುದನ್ನು ಹಲವರ ಬಳಿ ಪ್ರಶ್ನಿಸಬೇಕಾಗುತ್ತದೆ.
ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಉದ್ಯಾನವನ ಅಭಿವೃದ್ದಿ ಪಡಿಸಲು ಮುಂದಾಗಬೇಕಿದೆ, ಅದಕ್ಕಾಗಿ ಉದ್ಯಾನವನದಲ್ಲಿ ನೀರಿನ ವ್ಯವಸ್ಥೆ, ನೀರಿನ ಟ್ಯಾಂಕ್, ಪರಗೋಲುಗಳ, ಆಟಿಕೆ, ವಾಚ್ಟವರ್ ತಂತಿಬೇಲಿ ವ್ಯವಸ್ಥೆಗಳನ್ನು ದುರಸ್ತಿ ಮಾಡಿಸಬೇಕಾಗಿದೆ ಇದಲ್ಲದೆ ಪ್ರಕೃತಿ ಉದ್ಯಾನವನದಲ್ಲಿ ಭೂಮಿ ಸಮತಟ್ಟು ಮಾಡಿ ರಸ್ತೆ ನಿಮರ್ಾಣ, ಬಂದ ಪ್ರವಾಸಿಗರಿಗೆ ವಿಶ್ರಾಂತಿಸಲು ಸಿಮೆಂಟ್ ಆಸನ ಹಾಗೂ ಹಳೆ ಗಿಡಗಳ ಜೊತೆ ಹೊಸ ಗಿಡಗಳನ್ನು ನೆಡುವುದು  ಅಲ್ಲದೆ ಹಳೆ ಕೊಠಡಿಯನ್ನು ದುರಸ್ತಿಗೊಳಿಸಿ ಕಾವಲುಗಾರನಿಗೆ ಕೊಠಡಿ ನಿಮರ್ಿಸಿಕೊಡುವುದನ್ನು ಮಾಡಿದರೆ ಉದ್ಯಾನವನ ಅಭಿವೃದ್ದಿಯತ್ತ ಮುಂದಾಗಿ ಜನಗಳ ಪ್ರಶಂಸನೀಯಗಳಿಸುತ್ತದೆ. ಈ ಬಗ್ಗೆ ಸಾಮಾಜಿಕ ಅರಣ್ಯ ಇಲಾಖೆಯವರನ್ನು ಬಗ್ಗೆ ಕೇಳಿದರೆ 1998-99ರಲ್ಲಿ 3 ವರ್ಷಕ್ಕೆ ಅನುಗುಣವಾಗುವಂತೆ ಬಿಡುಗಡೆಯಾಗಿತ್ತು. ಆಗ ಬಿಡುಗಡೆಯಾಗಿದ್ದು ಬಿಟ್ಟರೆ ಇಲ್ಲಿಯವರೆಗೂ ನಯಾ ಪೈಸೆಯೂ  ಬಿಡುಗಡೆಯಾಗಿಲ್ಲ ಇನ್ನೆಲ್ಲಿಂದ ನಾವು ಅಭಿವೃದ್ದಿ ಪಡಿಸಲಿ ಎನ್ನುತ್ತಾರೆ.
 ಈ ಉದ್ಯಾನವನವು ಜಿಲ್ಲಾ ಪಂಚಾಯತ್ ಇಲಾಖೆಗೆ ಒಳಪಡಲಿದ್ದು ತಾಲ್ಲೂಕಿನ ಜಿಲ್ಲಾ ಪಂಚಾಯತ್ ಸದಸ್ಯರು ಈ ಉದ್ಯಾನವನದ ಬಗ್ಗೆ ಜಿಲ್ಲಾಡಳಿತದಲ್ಲಿ ಗಮನ ಹರಿಸಿ, ತಾಲ್ಲೂಕಿನಲ್ಲಿ ಹೆಸರಿಗೆ ಹೇಳಲು ಇರವ ಉದ್ಯಾನವನ್ನು  ಅಭಿವೃದ್ದಿ ಪಡಿಸಿ ಮಾದರಿ ಉದ್ಯಾನವನ್ನಾಗಿ ಮಾಡುತ್ತಾರೋ, ಇಲ್ಲವೋ ಎಂದು ಕಾದುನೋಡಬೇಕಿದೆ ...!?.