Monday, November 26, 2012


ಚಿ.ನಾ.ಹಳ್ಳಿಗೆ ಯಡಿಯೂರಪ್ಪನವರನ್ನು ಕರೆಸಿ ಅವರ ಸಮ್ಮುಖದಲ್ಲಿ ಕೆ.ಜೆ.ಪಿ.ಗೆ ಸೇರ್ಪಡೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ನ.26: ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ಕನರ್ಾಟಕ ಜನತಾ ಪಕ್ಷ ಸೇರುವುದು ಶೇ.90ರಷ್ಟು ನಿಶ್ಚಿತವಾಗಿದೆ, ಡಿ.9ರಂದು ನಡೆಯುವ ಹಾವೇರಿ ಸಮಾವೇಶದ ಬಳಿಕ ಪಕ್ಷಕ್ಕೆ ಸೇರುವುದಾಗಿದ್ದು ಅಂದು ತಾಲ್ಲೂಕಿಗೆ ಯಡಿಯೂರಪ್ಪನವರನ್ನು ಕರೆಸಿ ಜನತೆ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ನವೋದಯ ಕಾಲೇಜು ಆವರಣದಲ್ಲಿ ಕರೆದಿದ್ದ ಜೆ.ಸಿ.ಎಂ. ಅಭಿಮಾನಿಗಳ    ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಯು ಪಕ್ಷವು ರಾಜ್ಯದಲ್ಲಿ ಆಥರ್ಿಕವಾಗಿ, ರಾಜಕೀಯವಾಗಿ  ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಪಕ್ಷದಿಂದ ಸಾಧ್ಯವಾಗದ ಕಾರಣ ಬದಲಿ ಪಕ್ಷ ಸೇರ್ಪಡೆಗೊಳ್ಳುವಂತೆ ಕಾರ್ಯಕರ್ತರು ಸೂಚಿಸಿದ್ದರು. ಆ ಸಂಬಂಧ ರಾಜ್ಯಮಟ್ಟದ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರುವಂತೆ ಹಲವು ಬಾರಿ ಒತ್ತಡ ಹೇರಿದ್ದರು ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ದೊರಕುವುದಿಲ್ಲ ಹಾಗೂ ರಾಮಕೃಷ್ಣ ಹೆಗ್ಗಡೆ, ಪಟೇಲ್ರು ಬೆಳಸಿದ ಜೆಡಿಯು ಪಕ್ಷವನ್ನು ಬಿಡಬಾರದು ಎಂಬ ಕಾರಣದಿಂದ ಪಕ್ಷ ಸೇರಲು ಹಿಂದೇಟು ಹಾಕಲಾಯಿತು ಎಂದರಲ್ಲದೆ, ಈಗ ಪಕ್ಷವು ರಾಜ್ಯದಲ್ಲಿ ನೆಲೆಯೂರಲು ಪರದಾಡುತ್ತಿದೆ, ಅಲ್ಲದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಆರಂಭವಾಗಲಿರುವ ಕನರ್ಾಟಕ ಜನತಾ ಪಕ್ಷ ಸೇರಲು ಪಕ್ಷದ ಮುಂದಾಳುಗಳು ಒತ್ತಾಯ ಮಾಡಿದ್ದಾರೆ, ಆದರೆ ಈ ಬಗ್ಗೆ ಕಾರ್ಯಕರ್ತರಲ್ಲಿ ಚಚರ್ಿಸಿ ಹಾಗೂ ಕೆಜೆಪಿ ಪಕ್ಷವು ಜಾತಿ ಸಂಕೋಲೆಯಿಂದ ಹೊರಗೆ ಬಂದರೆ ಅಲ್ಲದೆ ನಾವಿಟ್ಟಿರುವ ಬೇಡಿಕೆಗಳಲ್ಲಿ ಶೇ.10 ರಷ್ಟಾದರೂ ಬೇಡಿಕೆ ಈಡೇರಿದ ನಂತರ ಪಕ್ಷ ಸೇರುವುದಾಗಿ ತಿಳಿಸಿದರು.
ಚುನಾವಣೆಗೆ ತಯಾರಿ : ಮುಂದಿನ ಮೂರು ತಿಂಗಳಲ್ಲಿ ಯಾವಾಗ ಬೇಕಾದರೂ ವಿದಾನಸಭೆ ಚುನಾವಣೆ ನಡೆಯಬಹುದು, ಅದಕ್ಕಾಗಿ ಕಾರ್ಯಕರ್ತರೆಲ್ಲಾ ಈಗಿನಿಂದಲೇ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಪ್ರಚಾರ ನಡೆಸಿ ಎಂದು ಕರೆ ಕೊಟ್ಟ ಜೆ.ಸಿ.ಮಾಧುಸ್ವಾಮಿ ಅದಕ್ಕಾಗಿ ಕಾರ್ಯಕರ್ತರು ನನ್ನನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಚುನಾವಣಾ ಬಿರಿಸಿನಲ್ಲಿ ತೊಡಗಿಸಿಕೊಳ್ಳವಂತೆ ತಿಳಿಸಿದ ಅವರು ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಈಗಿನಿಂದಲೇ ಪ್ರಾರಂಭಿಸಿ ಎಂದರು. ಪೋಲಿಸ್ ಇಂಟಲಿಜೆನ್ಸಿ ಹಾಗೂ ಮಾದ್ಯಮಗಳ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಜೆ.ಡಿ.ಎಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿದು ಬಂದಿದೆ ಎಂದರು.
ಕಾರ್ಯಕರ್ತರ ಅಭಿಪ್ರಾಯ : ಜೆ.ಸಿ.ಮಾಧುಸ್ವಾಮಿರವರು ಯಾವ ಪಕ್ಷಕ್ಕೆ ಹೋದರು ನಾವು ಅವರ ಹಿಂದೆ ಇದ್ದು ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡುತ್ತೇವೆ ಎಂದು ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರು ಅಭಿಪ್ರಾಯ ತಿಳಿಸಿದರಲ್ಲದೆ, ಪಕ್ಷದಲ್ಲಿ ಯುವಕರ ಕೊರತೆ ಇದೆ ಅದಕ್ಕಾಗಿ ಪಕ್ಷಕ್ಕೆ ಯುವ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಬೇಕು ಎಂದರಲ್ಲದೆ ಕಳೆದ
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬುಕ್ಕಾಪಟ್ಟಣ ಸೇರಿದಂತೆ ಆ ಭಾಗದ ಕೆಲವು ಪ್ರದೇಶಗಳಲ್ಲಿನ ಮತಗಳು ಸಿಗದೆ ಸೋಲನ್ನು ಅನುಭವಿಸಲಾಯಿತು. ಈ ಭಾರಿ ಆ ಭಾಗದಲ್ಲಿ ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ತಾ.ಪಂ.ಸದಸ್ಯ ಶಶಿಧರ್, ನಿರಂಜನಮೂತರ್ಿ, ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ, ಲೋಕೇಶ್ ಮೂತರ್ಿ, ತಾ.ಪಂ.ಮಾಜಿ ಸದಸ್ಯ ಶಿವಣ್ಣ,  ಶಂಕರಣ್ಣ, ಕೆ.ಎಂ.ರಾಜಶೇಖರಪ್ಪ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಕನಕ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ
ಚಿಕ್ಕನಾಯಕನಹಳ್ಳಿ,ನ.26 : ತಾಲ್ಲೂಕು ಮಟ್ಟದ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಇದೇ 1ರ ಶನಿವಾರ ಬೆಳಗ್ಗೆ 9ಗಂಟೆಗೆ ತಾಲ್ಲೂಕು ಆಡಳಿತ ವರ್ಗದ ಪರವಾಗಿ ಕನಕದಾಸರ ವೈಭವದ ಉತ್ಸವವು ಪುರಸಭೆಯ ಮುಂಭಾಗದಿಂದ ನಗರದ ರಾಜಬೀದಿಗಳಲ್ಲಿ ನಡೆಯುವುದು.
ನಂತರ ಮಧ್ಯಾಹ್ನ 12.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭವನ್ನು ಏರ್ಪಡಿಸಿದ್ದು, ಈ ಉತ್ಸವದೊಂದಿಗೆ
ಸಂಗೊಳ್ಳಿ ರಾಯಣ್ಣ ವೇಷಗಾರಿಕೆ, ಪಾಳೇಗಾರರ ವೇಷ, ಕನಕ ದೃಶ್ಯಾವಳಿ, ಕನಕದಾಸರ ವೇಷಗಾರಿಕೆ, ಕನಕನ ಕಿಂಡಿ ದೃಶ್ಯಾವಳಿ ಹಾಗೂ  ನಾಡಿನ ಹೆಸರಾಂತ ಕಲಾ ತಂಡಗಳು ಮತ್ತು ಸ್ಥಳೀಯ ಜಾನಪದ ತಂಡಗಳಾದ ದೊಳ್ಳು ಕುಣಿತ, ವೀರಭದ್ರನ ಕುಣಿತ, ನಾಸಿಕ್ಡೋಲು, ಹಾಗೂ ಗೊರಪ್ಪನವರ ತಂಡ, ದಾಸಪ್ಪನ ತಂಡ, ಹಕ್ಕ-ಬುಕ್ಕರು, ಒನಕೆ ಓಬವ್ವನ ಸ್ಥಬ್ದ ಚಿತ್ರಗಳೊಂದಿಗೆ ಮೆರವಣಿಗೆಗಳನ್ನು ಏರ್ಪಡಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಸಮಾವೇಶಕ್ಕೆ ಅಧಿಕ ಜನರು ಭಾಗವಹಿಸುವಂತೆ ಮನವಿ
ಚಿಕ್ಕನಾಯಕನಹಳ್ಳಿ,ನ.26 : ತುಮಕೂರಿನಲ್ಲಿ ಬೆಂಗಳೂರು ವಿಭಾಗ ಮಟ್ಟದ ಅಲ್ಪ ಸಂಖ್ಯಾತರ ಸಮಾವೇಶವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಜನಾಂಗ ಸಮುದಾಯದ ಕ್ಷೇತ್ರ ವ್ಯಾಪ್ತಿಯ ಸಕ್ರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕ ಕ್ಯಾಪ್ಟನ್ ಸೋಮಶೇಖರ್ ಮನವಿ ಮಾಡಿದ್ದಾರೆ.
ತುಮಕೂರು ನಗರದ ಸಕರ್ಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಡಿಸೆಂಬರ್ 2ರ ಭಾನುವಾರ ನಡೆಯುವ ಸಮಾವೇಶಕ್ಕೆ  ಕೇಂದ್ರ ಸಚಿವ ರೆಹಮಾನ್ಖಾನ್ ಸೇರಿದಂತೆ ಕೇಂದ್ರ ಸಕರ್ಾರದ ಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋಡೆಕೆರೆಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ
ಚಿಕ್ಕನಾಯಕನಹಳ್ಳಿ,ನ.26 : ತಾಲೂಕಿನ ಗೋಡೆಕೆರೆಯಲ್ಲಿ ಭಾರತ್ ನಿಮರ್ಾಣ್ ರಾಜೀವ್ಗಾಂಧಿ ರಾಷ್ಟ್ರೀಯ ಸೇವಾ ಕೇಂದ್ರದ ಕಟ್ಟಡದ ಉದ್ಘಾಟನಾ ಮತ್ತು ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಶಿಲನ್ಯಾಸ ಸಮಾರಂಭವು ಇದೇ 30ರ ಶುಕ್ರವಾರ ನಡೆಯಲಿದೆ.
ಗೋಡೆಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮಿ, ಚಟಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮಿ ದಿವ್ಯ ಸಾನಿದ್ಯ
ವಹಿಸಲಿದ್ದಾರೆ.ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ಜಿ.ಎಸ್.ಕುಶಲ ಮರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಸದ ಜಿ.ಎಸ್.ಬಸವರಾಜು ಶಿಲಾ ಫಲಕ ಅನಾವರಣಗೊಳಿಸಲಿದ್ದಾರೆ.