Monday, September 19, 2011



ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಕೀಯ ಧುರೀಣರೇ ಹಾಳುಮಾಡುತ್ತಿರುವುದು
ಚಿಕ್ಕನಾಯಕನಹಳ್ಳಿ,ಸೆ.18 : ನಮ್ಮ ಪ್ರಜಾಪ್ರಭುತ್ವದ ರಾಜಕೀಯದ ಧುರೀಣರು, ಜಾತಿ ಅಂಕುಶ, ಶ್ರೀಮಂತ ವರ್ಗಗಳ ಪ್ರಭಾವ ಹಾಗೂ ಆಮಿಷಗಳ ಅಂಕುಶಗಳಿಗೆ ಒಳಗಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾ ಇನ್ನೊಬ್ಬರ ಅಡಿಯಾಳಾಗಿ ಪ್ರಜಾಪ್ರಭುತ್ವದ ರಾಜಕಾರಣವನ್ನು ಹಾಳುಮಾಡುತ್ತಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆ ತರುತ್ತಿದಾರೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಹೇಳಿದರು.
ಪಟ್ಟಣದಲ್ಲಿ ನಡದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ಪ್ರಾಬಲ್ಯಕ್ಕಾಗಿ ಬದುಕಿನ ಅಸ್ಥಿರತೆ, ಅಶಾಂತಿ, ಗೊಂದಲಗಳು ಸ್ಥಷ್ಠಿಗೊಂಡು ನಿರುದ್ಯೋಗ, ಮತಧರ್ಮ ಸಂಸ್ಥೆಗಳ ದುರ್ಬಳಕೆ, ಶಿಕ್ಷಣದ ವೈರುಧ್ಯಗಳು, ವ್ಯಕ್ತಿ ಸಮಾಜದ ಮುಖಾಮುಖಿಯು ಮಾನವೀಯ ಸಂಬಂಧಗಳ ಅರ್ಥಹೀನತೆ ದಾರಿ ಕಾಣುತ್ತದೆ. ರಾಜಕೀಯ ಧುರೀಣರು ಕ್ರಿಯಾಶೀಲತೆಯನ್ನು ಪ್ರಕಟಗೊಳಿಸಿ ಸರಕಾರ ಮತ್ತು ಸಮುದಾಯ ಮಟ್ಟದಲ್ಲಿ ಮುಂದಾಲೋಚನೆಯ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ಪ್ರಯತ್ನ ಮಾಡಬೇಕಾಗಿದೆ. ನಿರಪೇಕ್ಷ ಸೇವೆ ಮತ್ತು ಪ್ರೀತಿಯು ಬಾಳಿನಲ್ಲಿ ಮಿಂಚಿನಂತೆ, ಹೊಳೆದಾಗಲೇ ಸಾಹಿತ್ಯ ಸಂಕೀರ್ಣ ಶುರುವಾಗಿ ಜಗತ್ತಿನ ವೈರುಧ್ಯಗಳ ಸಂಘರ್ಷವನ್ನು ಬಿಂಬಿಸಿ ಬದುಕಿನ ಆಶಯವನ್ನು ಕಟ್ಟಿಕೊಡಲು ಪ್ರಾರಂಭಿಸುತ್ತದೆ. ಈಗೆ ಬದುಕು ಸಮುದಾಯಗಳ ಬಿನ್ನಭಿಪ್ರಾಯವಿದ್ದರೂ ವಿರೋಧದಿಂದ ಕೂಡಿರದೆ ಪ್ರಾಕೃತಿಕ ಸಂಪನ್ಮೂಲ ವಿತರಣೆ, ರಕ್ಷಣೆ ಮೊದಲಾದವನ್ನು ಎಲ್ಲರ ಅಭ್ಯುದಯಕ್ಕೆ, ಸುಖಕ್ಕೆ ಬಳಕೆ ಮಾಡುವ ಚಿಂತನೆ ಹಾಗೂ ಕ್ರಿಯೆಯಲ್ಲಿ ತೊಡಗುವ ಆಲೋಚನೆಯೇ ಆಗಿರುತ್ತದೆ, ಹೀಗೆ ಜೀವನವನ್ನು ಹಲವು ಮಗ್ಗಲುಗಳಿಂದ ಕಂಡು, ಅನುಭವದ ದ್ರವ್ಯದಲ್ಲಿ ಅದ್ದಿ ಸಾಹಿತ್ಯ ಸೃಷ್ಠಿ ಮಾಡಬೇಕಾಗುತ್ತದೆ, ಈ ರೀತಿಯ ಸತ್ವಯುತ ಬರಹದಲ್ಲಿಯೇ ಸಾಹಿತಿ ಬದುಕನ್ನು ಬಿಂಬಿಸುವ ಕಾರ್ಯದಲ್ಲಿ ತೊಡಗುತ್ತಾ ಜೀವನ ಕಳೆಯುತ್ತಾನೆ ಎಂದ ಅವರು ಗ್ರಾಮೀಣ ಸೊಗಡಿನ ಜಾನಪದ, ಪಟ್ಟಣಗಳ ಶಿಷ್ಟ ಮಾತು ಹಾಗೂ ಸಂಸ್ಕೃತದ ಒಡನಟ ಹಾಗೂ ಪ್ರಭಾವ ಹಳಗನ್ನಡದ ಸಿರಿನುಡಿ, ಹೊಸಗನ್ನಡದ ಚೆಲುವು, ಕನ್ನಡ ಭಾಷೆಯಲ್ಲಿ ನುಡಿ ಸಂವಹನ ಹಾಗೂ ಬರಹ ಸಂವಹನ ಸೂಕ್ತ ರೀತಿಯಲ್ಲಿ ಸಜ್ಜುಗೊಳಿಸಿದ್ದು ಅದೇ ರೀತಿಯಲ್ಲಿ ನಮ್ಮ ಚಿಂತನಾ ಕ್ರಮ ಮತ್ತು ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವ ಬಗೆಯೂ ಹೊಸತನ ಕಂಡುಕೊಂಡಿದೆ. ತಾಲ್ಲೂಕಿನಲ್ಲಿ ಕೈಮಗ್ಗ ನೇಕಾರಿಕೆ ಹಾಗೂ ಉಣ್ಣೆ ಕಂಬಳಿಯ ಉದ್ಯಮದ ಪ್ರಾಧನ್ಯತೆಯು ನಿರುದ್ಯೋಗ ಪ್ರಪಾತದಲ್ಲಿ ಸಿಲುಕಿ ನೇಕಾರಿಕೆ ಹಾಗೂ ಕಂಬಳಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಇದರಿಂದ ಆಥರ್ಿಕ ಪರಿಸ್ಥಿತಿಯನ್ನು ತಂದುಕೊಡಲು ಸಾಧ್ಯವಾಗದೆ ರಾಜಕಾರಣ ಮಾತ್ರ ಪಲ್ಲವದ ಚೈತ್ರದಂತೆ ಜನಮನವನ್ನು ಸಂಪೂರ್ಣ ತಟ್ಟಿದೆ ಎಂದರು.
ತಾಲ್ಲೂಕಿನ ಗಣಿ ಉದ್ಯಮ ಎರಡು ದಶಕಗಳಿಗೂ ಹೆಚ್ಚು ಕಾಲ ಇಲ್ಲಿನ ಗುಡ್ಡಗಳನ್ನು ಕಬಳಿಸಿ ಭೂ ಸಂಪತ್ತನ್ನು ಬರಿದುಮಾಡುವ ಮಟ್ಟಕ್ಕೂ ನಡೆದಿದೆ, ಗಣಿಗಾರಿಕೆಯ ಕಾರಣದಿಂದ ಉತ್ತಮ ರಸ್ತೆ ಮಾಡಲ್ಪಟ್ಟರೂ, ಧೂಳಿನ ಪರಿಸರ ಊರಿನ ಜನತೆಗೆ ದುಷ್ಪರಿಣಾಮವನ್ನು ಉಂಟುಮಾಡಿ ತಾಲ್ಲೂಕಿನ ನೈಸಗರ್ಿಕ ಸಂಪತ್ತನ್ನು ಹಾಳುಮಾಡುತ್ತಿದ್ದು ಪ್ರಜ್ಞಾವಂತರಾದ ಎಲ್ಲಾ ರಂಗದ ಧುರೀಣರು ಒಗ್ಗೂಡಿ ಗಣಿಗಾರಿಕೆಯ ಉತ್ಪನ್ನವನ್ನು ಸೂಕ್ತ ವಹಿವಾಟಿನ ಮೂಲಕ ಮಾರಾಟ ಯೋಜನೆಗೆ ಸೀಮಿತಗೊಳಿಸಲು ಸರಕಾರಕ್ಕೆ ನೆರವಾಗಬೇಕು ಎಂದರು.

ಚಿಕ್ಕನಾಯಕನಹಳ್ಳಿ, ಅನುಭವದ ಅಭಿವ್ಯಕ್ತಿಯೇ ಸಾಹಿತ್ಯವಾಗಿದ್ದು, ಸಾಹಿತ್ಯ ಎನ್ನುವುದು ಅನುಭವದ ಸಾರ ಆಗಿರಬೇಕು ಎಂದು ನಾಡಿನ ಪ್ರಸಿದ್ದ ಕವಿ ಡಾ.ಸಾ.ಶಿ.ಮರುಳಯ್ಯ ನುಡಿದರು.
ಅವರು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿನ ಬಯಲು ರಂಗಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿನ ಅನುಭವವು ಸಾಹಿತ್ಯ ರಚಿಸುವ ಅಂಶ ಒಳಗೊಂಡಿದೆ, ಪ್ರತಿಯೊಬ್ಬರ ಅನುಭವದ ಬಗ್ಗೆ ಕುರಿತು ರಚಿಸುವವ ಸಾಹಿತ್ಯವು ಇನ್ನೊಬ್ಬರಿಗೆ ಆನಂದವನ್ನುಂಟು ಮಾಡುತ್ತದೆ. ಸಾಹಿತ್ಯವು ಸರ್ವರ ಸ್ವತ್ತಾಗಬೇಕಾಗಿದೆಯೇ ಹೊರತು ಯಾರೊಬ್ಬರ ಸ್ವತ್ತಾಗಬಾರದು ಎಂದರು. ಸ್ತ್ರೀಯರು ಸಾಹಿತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಉನ್ನತ ಸಾಧನೆ ಮಾಡುತ್ತಲೇ ಬಂದಿದ್ದಾರೆ ಅವರಿಗೆ ಈಗ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುವವರಿಗೆ ನಾವು ಪ್ರೋತ್ಸಾಹಿಸಬೇಕಾಗಿದೆ ಅಂತಹವರಿಗೆ ಸಾಹಿತ್ಯ ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದ ಅವರು ನಮ್ಮ ಹೊಟ್ಟೆಯ ಮುಂದೆ ಯಾವ ಫಿಲಾಸಪಿಯೂ ಫಲ ಕೊಡುವುದಿಲ್ಲ, ಆದ್ದರಿಂದ ನಮ್ಮ ಹೊಟ್ಟೆಗೆ ಅನ್ನ ಕೊಡುವ ಕೃಷಿಕರನ್ನು ನೆನೆಯಬೇಕಿದೆ ಅವರ ಬಗ್ಗೆ ಮಾತನಾಡಬೇಕಿದೆ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಬಿಟ್ಟು ವಲಸೆ ಹೋಗುತ್ತಿದ್ದಾರೆ ನಿರುದ್ಯೋಗ ಸಮಸ್ಯೆಯೂ ಸ್ಥಷ್ಠಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕ.ಪು. ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ ಇಂದು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಪರಿಷತ್ತಿನ ಪಧಾಧಿಕಾರಿಳಿಗೆ ಮಾತ್ರ ಸೀಮಿತವಾಗಿರಬಾರದು ಅದು ಪ್ರತಿಯೊಬ್ಬ ಕನ್ನಡಿಗರೂ ಮುಂದೆ ಬಂದು ಸಾಹಿತ್ಯ ಚಟುವಟಿಕೆಗಳಿಗೆ ಮುಂದಾಗಿ ಕನ್ನಡ ಸಾಹಿತ್ಯವನ್ನು ಉಳಿಸವಂತಾಗುವುದು ಎಂದ ಅವರು ಈಗಿನ ಜಾಗತಿಕ ವೇದಿಕೆಯಲ್ಲಿ ಸಂಸ್ಕೃತಿಯನ್ನು ಯುವಕರೇ ಹಾಳುಮಾಡುತ್ತಿದ್ದಾರೆ, ಕಲಿಯಬಾರದ ವ್ಯಸನಗಳನ್ನೆಲ್ಲಾ ಕಲಿತು ತಮ್ಮ ತಮ್ಮ ಹಳ್ಳಿಗಳನ್ನು ಬಿಟ್ಟು ದೂರದ ಊರುಗಳಿಗೆ ಗುಳೇ ಹೋಗುತ್ತಾ ಅಲ್ಲಿನ ಸಂಸ್ಕೃತಿಗಳಿಗೆ ಮಾರುಹೋಗಿ ನಮ್ಮ ಸಾಹಿತ್ಯ ಸಂಸ್ಕೃತಿಳನ್ನು ಮರೆಯುತ್ತಿದ್ದಾರೆ, ಇದರಿಂದಲೇ ಸಾಹಿತ್ಯವು ಈಗಿನ ಯುವಕರಲ್ಲಿ ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದರು.
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಉಳಿದುಕೊಂಡಿದ್ದ ಕನ್ನಡ ಭಾಷೆಯು ಕಾನ್ವೆಂಟ್ ಶಾಲೆಗಳಿಂದ ಆಂಗ್ಲ ಭಾಷೆಗೆ ಮಾರುಹೋಗಿ ಕನ್ನಡ ಸಂಸ್ಕೃತಿ ನಾಶವಾಗುತ್ತಿದೆ, ಇದರಿಂದ ಸಾಹಿತ್ಯಾಸಕ್ತಿಯು ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ನಗರದಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಪೂರ್ಣಕುಂಭ, ದೊಳ್ಳುಕುಣಿತ, ನಾಸಿಕ್ಡೋಲ, ನಂದಿಧ್ವಜ, ಸೋಮನಕುಣಿತ, ತಮಟೆವಾಧ್ಯ, ಸೇರಿದಂತೆ ಅನೇಕ ಜನಪದ ಕಲಾತಂಡಗಳು ಹಾಗೂ ಜನಪ್ರತಿನಿಧಿಗಳಾದ ಲೋಹಿತಾಬಾಯಿ, ಸಿ.ಎಸ್.ನಟರಾಜು, ಸಿ.ಎಲ್.ದೊಡ್ಡಯ್ಯ, ಸಿ.ಟಿ.ಗುರುಮೂತರ್ಿ, ಸಿ.ಬಿ.ರೇಣುಕಸ್ವಾಮಿ, ಸೀಮೆಎಣ್ಣೆಕೃಷ್ಣಯ್ಯ, ಕೆ.ಜಿ.ಕೃಷ್ಣೆಗೌಡ, ಎಂ.ಎನ್.ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಇ.ಒ. ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಪತ್ರಕರ್ತರಾದ ಜಿ.ಇಂದ್ರಕುಮಾರ್, ಚಿ.ನಿ,ಪುರುಷೋತ್ತಮ್, ಕೆ.ಜಿ.ರಾಜೀವಲೋಚನ, ಹಲವರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಉಪನ್ಯಾಸಕ ಕಣ್ಣಯ್ಯ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಇನ್ನರ್ವೀಲ್ ಕ್ಲಬ್ ಸದಸ್ಯರು ಕ್ನನಡಗೀತೆ ಹಾಡಿದರು. ಅಣ್ಣಪ್ಪರಾವ್ ವಂದಿಸಿದರು. ವೀಣಾಶಂಕರ್ ಹಾಗೂ ಭವಾನಿ ಜಯರಾಂ ನಿರೂಪಿಸಿದರು.






ಚಿಕ್ಕನಾಯಕನಹಳ್ಳಿ,ಸೆ.19 : ನಮ್ಮ ಮಕ್ಕಳು ದೇಶದ ಪ್ರಜೆಯಾದರೆ ಸಾಲದು, ದೇಶ ರಕ್ಷಿಸುವಂತಹ ದೇಶಪ್ರೇಮಿಗಳಾಗಬೇಕು ಎಂದು ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಹೇಳಿದರು.
ಪಟ್ಟಣದ ಕಾಳಮ್ಮನ ಗುಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಡಿ,ಎಂ.ಸಿ ಮತ್ತು ಸಿ, ಎ, ಸಿ ,ಸದಸ್ಯರಿಗೆ ಸನಿವಾಸ ಕಾರ್ಯಕ್ರಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಉತ್ತಮ ವಿದ್ಯಾಭ್ಯಾಸ ಕಲಿತು ದೇಶದ ರಕ್ಷಣೆಯಂತಹ ಕಾರ್ಯಗಳಲ್ಲಿ ಭಾಗವಹಿಸಿಬೇಕು, ಹಲವಾರು ಸಂಘ ಸಂಸ್ಥೆಗಳು ದೇಶಪ್ರೇಮದ ಬಗ್ಗೆ ಉತ್ತಮ ತರಬೇತಿ ನೀಡುತ್ತಿದ್ದು ಮಕ್ಕಳು ಇದರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಉತ್ತಮ ವಿದ್ಯಾಭ್ಯಾಸದ ಬಗ್ಗೆ ಜವಾಬ್ದಾರಿ ವಹಿಸಿ ದೇಶ ರಕ್ಷಣೆಗೆ ಪರೋಕ್ಷವಾಗಿ ಮುಂದಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ್ ಶಾಲೆಗೆ ಬರುವ ಮಕ್ಕಳು ನಮ್ಮ ಮಕ್ಕಳೆಂದು ಭಾವಿಸಿ ಅವರ ಭವಿಷ್ಯದ ಕಡೆ ಯೋಚಿಸಿ ಯಾವ ಮಗುವೂ ಶಾಲೆಗೆ ಗೈರುಹಾಜರಾಗದಂತೆ ನೋಡಿಕೊಂಡು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗುವಂತೆ ಪ್ರೋತ್ಸಾಹಿಸಬೇಕು. ಶಾಲಾ ಆಸ್ತಿ ರಕ್ಷಣೆ ಹಾಗೂ ನಿರ್ವಹಣೆ ಮಾಡಬೇಕು. ಶಾಲಾ ಮಕ್ಕಳ ಕಲಿಕೆ ಕುರಿತಂತೆ ಅಧ್ಯಾಪಕರೊಂದಿಗೆ ಚಚರ್ಿಸಿ ಉತ್ತಮಪಡಿಸಲು ಪ್ರಯತ್ನಿಸಬೇಕು ಎಂದರು.
ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಶಿಕ್ಷಣ ಸಂಯೋಜಕ ಮರುಳಾನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಯ್ಯ ಮಾತನಾಡಿದರು.
ಸಮಾರಂಭದಲ್ಲಿ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿ, ಮು.ಶಿ ಶಂಕರಪ್ಪ ವಂದಿಸಿದರು.



ಚಿಕ್ಕನಾಯಕನಹಳ್ಳಿ,ಸೆ.19 : ಲಂಬಾಣಿ ಸಮಾಜದ ತಮ್ಮದೇ ಆದ ಗುರುಪರಂಪರೆ ಸಂಸ್ಕೃತಿ ಇದ್ದು ಸಮಾಜ ಅಭಿವೃದ್ದಿ ಹೊಂದಲು ಶಿಕ್ಷಣ, ಸಂಸ್ಕಾರ, ಸ್ವಾಭಿಮಾನದಿಂದ ಬಾಳಬೇಕಾಗಿದೆ ಎಂದು ಚಿತ್ರದುರ್ಗದ ಸೇವಾಲಾಲ್ ಮಠದ ಸರದಾರ್ ಸೇವಾಲಾಲ್ ಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ಆಲದಕಟ್ಟೆ ತಾಂಡ್ಯದ ನೂತನ ಸೇವಲಾಲ್ ಪರಿಶಿಷ್ಠ ಜಾತಿ(ಲಂಬಾಣಿ) ವಿವಿದ್ದೋದ್ದೇಶ ಸಹಕಾರ ಸಂಘದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಪಾಲಿಸುವುದು ಲಂಬಾಣಿ ಜನಾಂಗದಲ್ಲಿ ಹೆಚ್ಚು, ನಮ್ಮಲ್ಲಿ ವ್ಯವಸಾಯ ವೃತ್ತಿ ಮಾಡುವವರೇ ಹೆಚ್ಚು, ದುಡಿದ ಹಣವನ್ನು ದುಶ್ಚಟಗಳಿಗೆ ವ್ಯಯಮಾಡದೆ ಸ್ವಲ್ಪ ಹಣ ಉಳಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿ ಎಂದರು. ಜನಾಂಗದ ಮಹಿಳೆಯರು ಸಂಸ್ಕೃತವಂತರಾಗಿ ಅಡುಗೆ ಜೊತೆಯಲ್ಲಿ ಸಮಾಜ ಸೇವೆ ಮಾಡುವಂತೆ ಸಲಹೆ ನೀಡಿದರು. ನಮ್ಮ ಜನಾಂಗದ ವಿದ್ಯಾವಂತರು ಹಾಗೂ ಸಕರ್ಾರಿ ನೌಕರರು ತಮ್ಮ ತಾಂಡ್ಯಗಳಿಗೆ ಭೇಟಿ ನೀಡಿ ಅನಕ್ಷರಸ್ಥರಿಗೆ ತಿಳುವಳಿಕೆ ನೀಡಲು ಸಲಹೆ ನೀಡಿದರು.
ಜಿ.ಪಂ.ಸದಸ್ಯ ಲೋಹಿತಾಬಾಯಿ ಮಾತನಾಡಿ ಸಹಕಾರ ಮನೋಭಾವವನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಂಡು ದ್ವೇಶ, ಅಸೂಹೆಗಳಿಂದ ದೂರವಿದ್ದರೆ ಮಾತ್ರ ಸಮಾಜ ಉದ್ದಾರವಾಗಲಿದೆ, ಇದಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯ. ನಮ್ಮ ಜನಾಂಗವನ್ನು ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಅಲ್ಪಸ್ವಲ್ಪ ಆಮಿಶ ಒಡ್ಡಿ ಮತ ಪಡದು ಕೈಬಿಡುತ್ತಾರೆ ಎಂದರು.
ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ,ಸಹಕಾರ ಸಂಘಗಳು ನಮ್ಮದು ಎನ್ನುವ ಭಾವನೆ ಬಂದಾಗ ಮಾತ್ರ ಸಂಘಗಳು ಉಳಿಯಲು ಸಾಧ್ಯ ಎಂದರಲ್ಲದೆ, ್ನ ತೆಗೆದುಕೊಂಡ ಸಾಲವನ್ನು ಸರಿಯಾಗಿ ಪಾವತಿಸಿ ಸಂಘದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸವುಂತೆ ತಿಳಿಸಿದರು.
ಸಮಾರಂಭದಲ್ಲಿ ಬಿ.ವೆಂಕಟೇಶ್ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕ್ಯಾಪ್ಟನ್ ಸೋಮಶೇಖರ್, ಕೈಗಾರಿಕೋದ್ಯಮಿ ಟಿ.ಜಿ.ತಿಮ್ಮಯ್ಯ, ಆಲದಕಟ್ಟೆ ಶ್ರೀರಂಗನಾಯಕ, ಮಾಜಿ ತಾ.ಪಂ.ಉಪಾಧ್ಯಕ್ಷ ಕಮಲಾನಾಯಕ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಸದಸ್ಯರುಗಳಾದ ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಗ್ರಾ.ಪಂ.ಸದಸ್ಯರಾದ ನಾಗರಾಜನಾಯ್ಕ, ರಂಗಮ್ಮ ವೆಂಕಟೇಶ್, ವಿನೋದಬಾಯಿ ರಾಜಾನಾಯಕ, ಕರಿಯಮ್ಮರಾಮಚಂದ್ರನಾಯಕ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಮಲಾನಾಯಕ ಸ್ವಾಗತಿಸಿದರು. ರಾಮಚಂದ್ರನಾಯಕ ನಿರೂಪಿಸಿದರು.


ರಾಜ್ಯ ವೀರಶೈವ ವೇದಿಕೆಯ ಸೆ.26ರಂದು ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಸೆ.19 : ವೀರಶೈವ ಸಮಾಜದ ಸಂಘಟನೆಯನ್ನು ಮನೆ ಮನೆ ಹಾಗೂ ಹಳ್ಳಿಗಳಿಂದ ಸಂಘಟನೆ ಮಾಡಲು ಕನರ್ಾಟಕ ರಾಜ್ಯ ವೀರಶೈವ ವೇದಿಕೆ ತೀಮರ್ಾನಿಸಿದೆ ಎಂದು ರಾಜ್ಯಧ್ಯಾಕ್ಷ ಶಿವಮಹದೇವಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಲ್ಯಾಣ ಮಂಟಪ ಉಚಿತ ವಿದ್ಯಾಥರ್ಿನಿಲಯಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲಾ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಬಡವಿದ್ಯಾಥರ್ಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗುವುದು, ಬಸವ ಜಯಂತಿ ಹಾಗೂ ಶರಣರ ಜಯಂತಿ ಸೇರಿದಂತೆ ಶಾಲಾ ಮಕ್ಕಳಿಗೆ ಚಚರ್ಾ ಸ್ಪಧರ್ೆ, ಪ್ರಭಂದ ಸ್ಪಧರ್ೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳನ್ನು ನಡೆಸಲಾಗುವುದು ಹಾಗೂ ಸ್ಮಧರ್ಾತ್ಮಕ ಪರೀಕ್ಷೆ, ಉದ್ಯೋಗಕ್ಕೆ ಸಲಹೆ, ಗಾಂಧೀ ಜಯಂತಿ, ಸ್ವತಂತ್ರ ದಿನಾಚಾರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುವುದು ಎಂದರು. ಈ ಸಂಘಟನೆಯ ರೂಪರೇಷೆ ಹಾಗೂ ಸಂಘದ ಸಂಘಟೆನಯ ಬಗ್ಗೆ ಚಚರ್ಿಸಲು ಇದೇ 26ರಂದು ಪಟ್ಟಣದ ಎಸ್.ಎಂ.ಎಸ್. ಶಾಲೆಯ ಆವರಣಲದಲ್ಲಿ ಬೆಳಗ್ಗೆ 10.30ಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿಯವರ ಸಾನಿಧ್ಯದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಗಂಗಾಧರ, ತೋಟರಾಧ್ಯ ಉಪಸ್ಥಿತರಿದ್ದರು.