Friday, February 18, 2011


ಚಿಕ್ಕನಾಯಕನಹಳ್ಳಿ ಜೆ.ಡಿ.ಎಸ್ ಬಿಜೆಪಿ ಒಂದಾಗಿ ತಾಲೂಕು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿರುವುದು ರಾಜ್ಯದಲ್ಲಿಯೇ ಪ್ರಥಮ
ಚಿಕ್ಕನಾಯಕನಹಳ್ಳಿ,ಫೆ.18: ಮೈಸೂರಿನಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷ ಒಂದಾಗಿ ಜಿಲ್ಲಾ ಪಂಚಾಯಿತ್ನಲ್ಲಿ ಅಧಿಕಾರ ಹಿಡಿದರೆ, ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್, ಬಿಜೆಪಿ ಒಂದಾಗಿ ತಾಲೂಕು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿರುವುದು ರಾಜ್ಯದಲ್ಲಿಯೇ ಪ್ರಥಮ.
ಬಿಜೆಪಿ ಮತ್ತು ಜೆಡಿಎಸ್ ಒಂದಾದ ಪರಿಣಾಮ ಬಿಜೆಪಿಯ ಗಾಣದಾಳು ಕ್ಷೇತ್ರದ ಜಿ.ಆರ್.ಸೀತರಾಮಯ್ಯ ಅಧ್ಯಕ್ಷರಾಗಿ, ಜೆ.ಡಿ.ಎಸ್ನ ಹುಳಿಯಾರು ಕ್ಷೇತ್ರದ ಬಿ.ಬಿ.ಫಾತೀಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಯು ರಾಷ್ಟ್ರಮಟ್ಟದಲ್ಲೂ ಹೊಂದಾಣಿಕೆ ಇದ್ದರೂ ಚಿನಾಹಳ್ಳಿಯಲ್ಲಿ ಮಾತ್ರ ಬಿನ್ನವಾಗಿ, ಜೆ.ಡಿ.ಎಸ್ ಮತ್ತು ಬಿ.ಜೆ.ಪಿಯ ತಾ.ಪಂ.ಸದಸ್ಯರು ಒಂದಾಗಿ ಸಂಮ್ಮಿಶ್ರ ಆಡಳಿತಕ್ಕೆ ಮತ ಹಾಕಿದ್ದಾರೆ.
ಒಟ್ಟು 19ಸ್ಥಾನದ ತಾಲೂಕು ಪಂಚಾಯಿತಿಯಲ್ಲಿ ಜೆ.ಡಿ.ಎಸ್ 7ಸ್ಥಾನ, ಬಿ.ಜೆ.ಪಿ 6ಸ್ಥಾನ, ಜೆ.ಡಿ.ಯು 6ಸ್ಥಾನಗಳನ್ನು ಹೊಂದಿದ್ದು ಇದರಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು.
ಈ ಸ್ಥಾನಗಗಳಿಗೆ ಜೆ.ಡಿ.ಎಸ್ನ ಸಿ.ಬಿ.ಸುರೇಶ್ಬಾಬು . ಬಿ.ಜೆ.ಪಿಯ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ತಾ.ಪಂ.ಸದಸ್ಯರು ಸಂಮ್ಮಿಶ್ರ ಆಡಳಿತಕ್ಕೆ ಒಪ್ಪಿಗೆ ಸೂಚಿಸಿ, ಮತ ಹಾಕಿ, ಅಧಿಕ ಮತದಿಂದ 13ಸ್ಥಾನಗಳನ್ನು ಪಡೆದು ಬಿಜೆಪಿಯ ಜಿ.ಆರ್.ಸೀತಾರಾಮಯ್ಯ ಅಧ್ಯಕ್ಷ ಮತ್ತು ಜೆ.ಡಿ.ಎಸ್ನ ಬಿ.ಬಿ.ಫಾತೀಮ ಉಪಾಧ್ಯಕ್ಷ ಸ್ಥಾನಗಳನ್ನು ಪಡೆದರು.
ಜೆಡಿಯುನ ಸ್ಪಧರ್ೆಯಲ್ಲಿ ಜೆಡಿಯು ಪಕ್ಷದ ಚಿಕ್ಕಮ್ಮ ಗಂಗಾಧರಯ್ಯ ಅಧ್ಯಕ್ಷ ಸ್ಥಾನಕ್ಕೂ ಉಪಾಧ್ಯಕ್ಷ ಸ್ಥಾನಕ್ಕೆ ಲತಾ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಎ.ಸಿ. ವೈ.ಎಸ್.ಪಾಟೀಲ್ ಉಪಸ್ಥಿತರಿದ್ದರು.
ರೋಟರಿ ವತಿಯಿಂದ ಉಚಿತ ಆರೋಗ್ಯ ಶಿಬಿರ
ಚಿಕ್ಕನಾಯಕನಹಳ್ಳಿ,ಫೆ.18: ರೋಟರಿ ಕ್ಲಬ್ ಮತ್ತು ಬ್ರಹ್ಮವಿದ್ಯಾ ಸಮಾಜದ ವತಿಯಿಂದ ಉಚಿತ ಶ್ರವಣ ರೋಗ ತಪಾಸಣಾ ಶಿಬಿರವನ್ನು ಇದೇ 20ರ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರವರಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನ ಬ್ರಹ್ಮ ವಿದ್ಯಾ ಸಮಾಜದ ಕಟ್ಟಡದಲ್ಲಿ ಏರ್ಪಡಿಸಿದ್ದು ವಿಶ್ವರ್ ಹಿಯರಿಂಗ್ ವಡ್ಸ್ನ ಡಾ.ಪುರುಷೋತ್ತಮ್, ನಾಯಕ್ ಹಿಯರಿಂಗ್ ಕೇರ್ನ ಡಾ.ಎಂ.ಎಸ್.ಜೆ.ನಾಯಕ್ ಈ ಶಿಬಿರದಲ್ಲಿ ಭಾಗವಹಿಸುವರು.
ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರ
ರೋಟರಿ ಕ್ಲಬ್ ಮತ್ತು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇದೇ 22ರ ಮಂಗಳವಾರ 9ರಿಂದ ಸಂಜೆ 1ರವರಗೆ ತಾಲೂಕಿನ ಬೆಳಗುಲಿ ಗ್ರಾಮದಲ್ಲಿ ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.