Saturday, April 30, 2011

ಮೇ 5ರಿಂದ 9ರವರಗೆ ರಾಜ್ಯ ಮಟ್ಟದ ನಾಟಕೋತ್ಸವ : ಸಿಡಿಸಿ

ಚಿಕ್ಕನಾಯಕನಹಳ್ಳಿ,ಏ.30: ಸಿ.ಬಿ.ಮಲ್ಲಪ್ಪನವರ 125ನೇ ಜನ್ಮವಷಾಚರಣೆ, ರಾಜ್ಯ ಮಟ್ಟದ ನಾಟಕೋತ್ಸವ ಮತ್ತು ನಾಟಕ ಸ್ಪಧರ್ೆ ಹಾಗೂ ರಂಗಗೀಗೆಗಳ ಸ್ಪದರ್ೆ, ವಿಚಾರ ಸಂಕಿರಣವನ್ನು ಮೇ 5ರಿಂದ 9ರವರಗೆ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ದಿವ್ಯಜ್ಯೋತಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ.ದಿವ್ಯಜ್ಯೋತಿ ಹವ್ಯಾಸಿ ಕಲಾ, ರಾಜ್ಯ ನಾಟಕ ಅಕಾಡೆಮೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋದಲ್ಲಿ ನಾಟಕೋತ್ಸವ ಹಮ್ಮಿಕೊಂಡಿದ್ದು ಉದ್ಘಾಟನಾ ಸಮಾರಂಭವನ್ನು ಮೇ.5ರಂದು ಸಂಜೆ 5-30ಕ್ಕೆ ದಿ.ಎನ್.ಬಸವಯ್ಯನವರ ವೇದಿಕೆ ಯಲ್ಲಿ ಹಮ್ಮಿಕೊಂಡಿದ್ದು ಸಮಾರಂಭದ ಉದ್ಘಾಟನೆಯನ್ನು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಡಾ ಬಿ.ವಿ.ರಾಜಾರಾಂ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ರಂಗಾಯಣ ನಿದರ್ೇಶಕರಾದ ಲಿಂಗದೇವರು ಹಳೆಮನೆ, ಜಿಲ್ಲಾ ಹಿಂದುಳಿದ &ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ. ಮುದ್ದುಕುಮಾರ್, ಚಲನಚಿತ್ರ ನಿದರ್ೇಶಕ ಬೂದಾಳ್ ಕೃಷ್ಣಮೂತರ್ಿ, , ತಾ.ಪಂ.ಅಧ್ಯಕ ಸೀತಾರಾಮಯ್ಯ, ರಾಜ್ಯ ಅಡ್ವೋಕೇಟ್ ಸೊಸೈಟಿ ಅಧ್ಯಕ್ಷ ರಮೇಶ್ಬಾಬು, ಕೆ.ಬಿ.ರಮೇಶ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಜಿ.ಪಂ.ಸದಸ್ಯ ಪಂಚಾಕ್ಷರಯ್ಯ, ಚಲನಚಿತ್ರ ನಟಿ ಹೇಮಾಶ್ರೀ, ತಾ.ಪಂ.ಕಾರ್ಯನಿರ್ವಣಾಧಿಕಾರಿ ಎ.ಎಂ.ದಯಾನಂದ್, ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತಿಮಾ, ಪುರಸಭೆ. ಉಪಾಧ್ಯಕ್ಷ ರವಿ (ಮೈನ್ಸ್), ಪುರಸಭೆ ಸದಸ್ಯೆ ರುಕ್ಮಿಣಮ್ಮ, ಉಪಸ್ಥಿತರಿರುವರು.ಬಸವಜಯಂತಿ ಹಾಗೂ 2ನೇ ದಿನದ ನಾಟಕ ಸ್ಪಧರ್ೆ ಉದ್ಘಾಟನೆ : ಬಸವಜಯಂತಿ ಹಾಗೂ 2ನೇ ದಿನದ ನಾಟಕ ಸ್ಪಧರ್ೆ ಉದ್ಘಾಟನೆಯನ್ನು ಮೇ 6ರಂದು ಸಿ.ಎಚ್.ಲಿಂಗದೇವರುರವರ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಂಡಿದ್ದು ತಮ್ಮಡಿಹಳ್ಳಿ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ.ದಿವ್ಯಜ್ಯೋತಿ ಕಲಾ ಸಂಘದ ಮಾಜಿ ಅಧ್ಯಕ್ಷ ಚಿ.ನಿ.ಪುರಷೋತ್ತಮ್ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ತಾಲೂಕು ಮಾಜಿ ಬಿಜೆಪಿ ಅಧ್ಯಕ್ಷ ಸಿ.ಎಲ್.ಜಯದೇವ್, ಪಿ.ಎಲ್. ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ. ನಾಗರಾಜ್, ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ಭಾರತಿ ನಟರಾಜ್, ಪುರಸಭೆ ಮುಖ್ಯಾಧಿಕಾರಿ ಹೆಚ್.ಹೊನ್ನಪ್ಪ, ಪುರಸಭೆ ಸದಸ್ಯರಾದ ಎಂ.ಎಸ್.ರವಿಕುಮಾರ್, ಕವಿತಾ ಚನ್ನಬಸವಯ್ಯ, ರಾಜು, ಎಂ. ಎನ್. ಸುರೇಶ್, ಗಾಯಿತ್ರಿ ಪುಟ್ಟಯ್ಯ, ನೇತಾಜಿ ಯುವಕಸಂಘದ ಮಾಜಿ ಉಪಾಧ್ಯಕ್ಷ ಎಚ್. ಬಿ.ಕಿರಣ್, ತಾ ಬಿ.ಜೆ.ಪಿ. ಅಧ್ಯಕ ಶಿವಣ್ಣ, ಸಿ.ಪಿ.ಐ ರವಿಪ್ರಸಾದ್, ವಕೀಲರ ಸಂಘ ಅಧ್ಯಕ್ಷ ಶಿವಾನಂದ, ವಕೀಲ ಸಾ.ಚಿ.ರಾಜಕುಮಾರ, ಕನ್ನಡ ಯುವ ಕ್ರೀಡಾಕಲಾಸಂಘ ಅಧ್ಯಕ್ಷ ಸಿ.ಬಿ. ಲೋಕೇಶ್, ಉಪಸ್ಥಿತರಿರುವರು.ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ : ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭವನ್ನು ಮೇ 7ರಂದು ನಾಟಕರತ್ನ ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು ಶ್ರೀ ರಂಗರಂಗ ಹವ್ಯಾಸಿ ಕಲಾತಂಡದ ಅಧ್ಯಕ್ಷ ಎಸ್.ನಾಗಣ್ಣ ಉದ್ಘಾಟನೆ ನೆರವೇರಿಸಲಿದ್ದು ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ಪುರಸ್ಕೃತ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಹೊನ್ನವಳ್ಳಿ ನಟರಾಜ್, ರಾಜ್ಕುಮಾರ್ ವಿಶ್ವೇಶ್ವರಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಸದಸ್ಯ ವರದರಾಜು, ಈಶ್ವರಭಾಗವತ್, ಕೃಷ್ಣಮೂತರ್ಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವಲೋಚನ, ಬನಶಂಕರಿ ಸೊಸೈಟಿ ಅಧ್ಯಕ್ಷ ಸಿ.ಜಿ.ಕಿರಣ್, ಸಾಹಿತಿ ಎನ್.ನಾಗಪ್ಪ, ಸಿ.ಡಿ.ಪಿ.ಓ ಅನೀಸ್ಖೈಸರ್, ತಾ.ದೇವಾಂಗ ಸಂಘದ ಅಧ್ಯಕ್ಷ ಶೇಷಪ್ಪ, ಉಪಸ್ಥಿತರಿರುವರು.3ನೇ ದಿನದ ನಾಟಕೋತ್ಸವದ ಉದ್ಘಾಟನೆ: 3ನೇ ದಿನದ ನಾಟಕೋತ್ಸವದ ಉದ್ಘಾಟನೆಯನ್ನು 7ರ ಸಂಜೆ 6ಗಂಟೆಗೆ ದಿ.ಚಿಕ್ಕರಾಮಯ್ಯನವರ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿದರ್ೇಶಕ ಎಂ.ಎಸ್.ಚಂದ್ರಪ್ಪ ಉದ್ಘಾಟನೆ ನೆರವೇರಿಸಲಿದ್ದು ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು, ಜಿ.ಪಂ.ಸದಸ್ಯೆ ಲೋಹಿತಬಾಯಿ, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಿ, ಸಿ.ಜಿ.ರಾಜಣ್ಣ, ಸಿ.ಪಿ.ಮಹೇಶ್, ಬಾಬುಸಾಹೇಬ್, ಸುಮಿತ್ರ ಕಣ್ಣಯ್ಯ, ರೇಣುಕಾ ಗುರುಮೂತರ್ಿ, ಶಾರದ ಶಂಕರಬಾಬು, ಲಕ್ಷ್ಮಯ್ಯ, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್, ಸೃಜನಾ ಕಾರ್ಯದಶರ್ಿ ಎನ್.ಇಂದಿರಮ್ಮ, ಜಲಾನಯನ ಅಭಿವೃದ್ದಿ ಇಲಾಖೆಯ ಮಲ್ಲಿಕಾಜರ್ುನಯ್ಯ, ಯೋ.ವಿ.ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ವಿಶ್ವನಾಥ, ಛಲವಾದಿ ಸಂಘದ ಅಧ್ಯಕ್ಷ ದೇವರಾಜು ಉಪಸ್ಥಿತರಿರುವರು.ತಾಲೂಕು ಹತ್ತು ಕಲಾವಿದರಿಗೆ ಸನ್ಮಾನ: ತಾಲೂಕು ಹತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಮೇ 8ರಂದು ಸಂಜೆ 6ಕ್ಕೆ ದಿ.ಕುಪ್ಪೂರು ಗೋಪಾಲರಾವ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ರಂಗಭೂಮಿಯ ಪ್ರಸಿದ್ದ ನಟ ಬಾಬು ಹಿರಣ್ಣಯ್ಯ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂದರು ಹಾಗೂ ಒಳನಾಡು ಸಾರಿಗೆ ಸಚಿವಾಲಯದ ವಿಶೇಷಾಧಿಕಾರಿ ರಘುಶೆಟ್ಟಿಗಾರ್ ಸನ್ಮಾನಿತರಿಗೆ ಸನ್ಮಾನಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಕೆ.ಎಸ್.ಲೋಕೇಶ್, ತಾ.ಪಂ.ಮಾಜಿ ಅಧ್ಯಕ್ಷ ಹೆಚ್.ಎಂ.ಸುರೇಂದ್ರಯ್ಯ, ತಾ.ಪಂ.ಸದಸ್ಯ ಶಶಿಧರ್, ನಿವೃತ್ತ ಕೃಷಿ ಅಧಿಕಾರಿ ಸಿ.ಹೆಚ್.ನಾಗರಾಜು, ಪುರಸಭಾ ಸದಸ್ಯೆ ಶುಭಾ ಬಸವರಾಜು, ತಾ.ಕಸಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದಶರ್ಿ ಚಿದಾನಂದ್, ಪಿ.ಎಲ್.ಡಿ.ಟಿ ನಿದರ್ೇಶಕ ಟಿ.ಶಂಕರಲಿಂಗಪ್ಪ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಎಸ್.ಆರ್.ರಾಜ್ಕುಮಾರ್, ಟೌನ್ ಬ್ಯಾಂಕ್ ನಿದರ್ೇಶಕ ಶಶಿಕುಮಾರ್ ಉಪಸ್ಥಿತರಿರುವರು.ರಾಜ್ಯ ಮಟ್ಟದ ರಂಗಗೀತೆ ಹಾಗೂ ಪೌರಾಣಿಕ ದೃಶ್ಯಾವಳಿ ಉದ್ಘಾಟನೆ: ರಾಜ್ಯ ಮಟ್ಟದ ರಂಗಗೀತೆ ಹಾಗೂ ಪೌರಾಣಿಕ ದೃಶ್ಯಾವಳಿಯನ್ನು ಮೇ 9ರಂದು ಬೆಳಗ್ಗೆ 10 ಗಂಟೆಗೆ ದಿ.ಸಿ.ವಿ.ರಾಮಚಂದ್ರಮೂತರ್ಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೇಮೆನೆ ಶಿವನಂಜಪ್ಪ, ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ರಂಗಕಲಾವಿದೆ ಸುಮಿತ್ರಮ್ಮ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಹಸಿರು ಸೇನೆ ಜಿಲ್ಲಾ ಸಂಚಾಲಕ ಕೆಂಕೆರೆ ಸತೀಶ್, ಅನ್ನಪೂಣರ್ೇಶ್ವರಿ ಕಲಾ ಸಂಘದ ಅಧ್ಯಕ್ಷ ಸಿ.ಬಿ.ತಿಪ್ಪೇಸ್ವಾಮಿ, ದಿವ್ಯಜ್ಯೋತಿ ಕಲಾಸಂಘದ ಮಾಜಿ ಅಧ್ಯಕ್ಷ ಕೆ.ಜಿಕೃಷ್ಣೆಗೌಡ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ಸಿ.ಎಸ್.ರಮೇಶ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಬಿ.ಪ್ರಕಾಶ್, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಂಠಯ್ಯ, ಗುತ್ತಿಗೆದಾರ ಆಲದಕಟ್ಟೆ ತಿಮ್ಮಯ್ಯ, ಭುವನೇಶ್ವರಿ ಯುವಕ ಸಂಘದ ಅಧ್ಯಕ್ಷ ಸಿ.ಎಸ್.ರೇಣುಕಮೂತರ್ಿ, ದ.ಸಂ.ಸ ಸಂಚಾಲಕ ಲಿಂಗದೇವರು, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಜಿ.ಎಲ್.ಮಹೇಶ್, ಸ್ನೇಹಕೂಟ ಅಧ್ಯಕ್ಷ ವೈ.ವಿ.ನಂಜುಂಡಪ್ಪ ಉಪಸ್ಥಿತರಿರುವರು.ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಹುಮಾನಗಳ ವಿತರಣಾ ಸಮಾರಂಭ : ಮೇ 9ರಂದು ಸಿ.ಕೆ.ರಾಜಯ್ಯಶೆಟ್ಟರ ವೇದಿಕೆಯಲ್ಲಿ ಸಂಜೆ 7ಗಂಟೆಗೆ ಸಮಾರಂಭ ಹಮ್ಮಿಕೊಂಡಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಬಹುಮಾನ ವಿತರಣೆ ಮಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತ ಬಿ.ಎಸ್.ಲಿಂಗದೇವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.ತಾ.ಬಿ.ಜೆ.ಪಿ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ, ಮೈನಿಂಗ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಹೇಮಚಂದ್ರ, ಧರ್ಮದಶರ್ಿ ಸಿ.ಪಿ.ಚಂದ್ರಶೇಖರಶೆಟ್ಟರು, ಜಿಲ್ಲಾ ಪರಿಷತ್ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ, ಮಂಜುಳ ಗವಿರಂಗಯ್ಯ, ಶಂಕರಿ ಬಳಗದ ದ್ರಾಕ್ಷಾಯಣಮ್ಮ ಸೋಮಶೇಖರ್ ಉಪಸ್ಥಿತರಿರುವರು.ರಂಗಗೀತೆಗಳ ಸ್ಪಧರ್ೆ ಹಾಗೂ ಪೌರಾಣಿಕ ನಾಟಕಗಳ ದೃಶ್ಯಾವಳಿಗಳು: ಸಂಜೆ 5ಗಂಟೆಯಿಂದ ಪೌರಾಣಿಕ ನಾಟಕದ ದೃಶ್ಯಾವಳಿ, ದೃಶ್ಯಾವಳಿ 1: ಕುರುಕ್ಷೇತ್ರ: ಸನ್ನಿವೇಶ- ಶಯನಗೃಹ ವಿಧುರನ ಕುಠೀರ, ಸಂಗೀತ ನಿದರ್ೇಶನ ಸಿ.ಎಸ್.ಗಂಗಾಧರ್ ಮತ್ತು ತಂಡ, ದೃಶ್ಯಾವಳಿ 2: ಕುರುಕ್ಷೇತ್ರ : ಸನ್ನಿವೇಶ ದುಯರ್ೋಧನನ ದಬರ್ಾರು, ಸಂಗೀತ ನಿದರ್ೇಶನ ಕೆ.ಎಲ್.ಶಂಕರಲಿಂಗಪ್ಪ ಮತ್ತು ತಂಡ, ದೃಶ್ಯಾವಳಿ3: ಸಂಪೂರ್ಣ ರಾಮಾಯಣ- ಸುಗ್ರೀವ ಸಖ್ಯ, ಸಂಗೀತ ನಿದರ್ೇಶನ ಜಿ.ಎಲ್.ಮಹೇಶ್ ಮತ್ತು ತಂಡ, ದೃಶ್ಯಾವಳಿ4: ಸಂಪೂರ್ಣ ರಾಮಾಯಣ-ರಾವಣನ ದಬರ್ಾರು, ಸಂಗೀತ ನಿದರ್ೇಶನ ಸಿ.ಎಸ್.ಗಂಗಾಧರ್ ಮತ್ತು ತಂಡ, ದೃಶ್ಯಾವಳಿ 5 :ಯಕ್ಷಗಾನ ನೃತ್ಯ ರೂಪಕ, ಅನಂತು ಹೊಸಹಳ್ಳಿ ಸಂಗೀತ ನಿದರ್ೇಶಿಸಲಿದ್ದಾರೆ.

ಚಿಕ್ಕನಾಯಕನಹಳ್ಳಿ,ಏ.30: 2011-12ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿದೆ.ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಮೇ 4ರಂದು ಬೆಳಗ್ಗೆ 10 ಗಂಟೆಗೆ ತುಮಕೂರಿನ ಆರ್ಯನ್ ಪ್ರೌಡಶಾಲೆಯಲ್ಲಿ ನಡೆಯಲಿದ್ದು ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಬಿ.ಇ.ಓ ಸಾ.ಚಿ.ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, April 29, 2011

ಮೇ.2ರಂದು ಬಸವ ಜಯಂತಿ ಅಂಗವಾಗಿ ಜಿಲ್ಲಾ ಮಟ್ಟದ ಭಜನಾ ಮೇಳಚಿಕ್ಕನಾಯಕನಹಳ್ಳಿ,ಏ.29: ಶ್ರೀ ಬಸವೇಶ್ವರ ಜಯಂತಿ ಮಹೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಭಜನಾ ಮೇಳವನ್ನು ಮೇ 2ರ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಗೋಡೇಕೆರೆ ಶ್ರೀ ಸಿದ್ದರಾಮದೇಶೀಕೇಂದ್ರ ಸ್ವಾಮಿಗಳು ತಿಳಿಸಿದ್ದಾರೆ.ಪಟ್ಟಣದ ನನ್ನಯ್ಯ ಸ್ವಾಮಿಗಳ ಮಠದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಮೇಳವನ್ನು ಕೆ.ಬಿ.ಕ್ರಾಸ್ ಬಳಿ ಇರುವ ಶ್ರೀಮದ್ ರಂಭಾಪುರಿ ಶಾಲಾ ಸಂಕೀರ್ಣದಲ್ಲಿ ಏರ್ಪಡಿಸಲಾಗಿದೆ ಎಂದರಲ್ಲದೆ, ಜಾನಪದ ತತ್ವಪದಗಳು ನಶಿಸುತ್ತಿರುವ ಈಗಿನ ಕಾಲದಲ್ಲಿ ಅವುಗಳನ್ನು ಅಭಿವೃದ್ದಿ ಪಡಿಸಲು ಭಜನಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.6 ವರ್ಷಗಳಿಂದ ನಿರಂತರವಾಗಿ ಈ ಮೇಳವನ್ನು ಸಂಯೋಜಿಸಿಕೊಂಡು ಬರುತ್ತಿರುವುದಲ್ಲದೆ, ಪ್ರತಿ ತಿಂಗಳು ಏಕಾದಶಿಯೊಂದು ಸಂಜೆಯಿಂದ ಬೆಳಗಿನ ವರೆಗೆ ಮಠದಲ್ಲಿ ಭಜನಾ ಕಾರ್ಯಕ್ರಮ ಹಾಗೂ ತತ್ವಪದಗಳ ಮೇಲೆ ವಿಚಾರಗೋಷ್ಠಿಯನ್ನು ಹಮ್ಮಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಈ ಮೇಳದ ಉದ್ಘಾಟನೆಯನ್ನು ಮೇ 2ರ ಬೆಳಿಗ್ಗೆ 10ಕ್ಕೆ ಏರ್ಪಡಿಸಿದ್ದು ಗೋಡೇಕೆರೆ ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮದೇಶೀಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮಿಜಿ, ಗೋಡೆಕೆರೆ ಚರ ಪಟ್ಟಾಧ್ಯಕ್ಷರಾದ ಮೃತ್ಯಂಜಯ ದೇಶಿಕೇಂದ್ರ ಸ್ವಾಮಿ, ಜಯಚಂದ್ರ ಶೇಖರ್ ಸ್ವಾಮಿಜೀ, ಇಮ್ಮಡಿ ಕರಿ ಬಸವ ದೇಶೀಕೇಂದ್ರ ಸ್ವಾಮಿಜಿ, ಡಾ. ಅಭಿನವ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮಿ, ಡಾ. ಯತೀಶ್ವರ ಶಿವಾಚಾರ್ಯಸ್ವಾಮಿ ಹಾಗೂ ಬೆಂಗಳೂರಿನ ನೆಸ್ಟರ್ ಪ್ರಾಜೆಕ್ಟ್ನ ವ್ಯವಸ್ಥಾಪಕ ನಿದರ್ೇಶಕ ಕೆ.ಜಿ.ಶಿವರುದ್ರಯ್ಯ ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಭಜನಾ ಮೇಳದಲ್ಲಿ ನಿಜಗುಣರ ತತ್ವಪದಗಳು, ಶಂಕರಾನಂದರ ಪದ್ದತಿ ತತ್ವಪದಗಳು, ಸರ್ಪ ಭೂಷಣ ಶಿವಯೋಗಿ ತತ್ವಪದಗಳು, ಕೈವಲ್ಯ ನವನೀತ ಪದ್ದತಿ ತತ್ವಪದಗಳನ್ನಾದರೂ ಸ್ಪಧರ್ಿಗಳಲ್ಲಿ ಹಾಡಬಹುದು. ಮೇಳದಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ, ಹೆಣ್ಣು ಮತ್ತು ಗಂಡು ಮಕ್ಕಳು ಭಾಗವಹಿಸಬಹುದು, ಭಜನಾ ಸಲಕರಣೆಗಳನ್ನು ತಂಡಗಳೇ ತರಬೇಕು, ತಿಂಡಿ ಮತ್ತು ಊಟದ ವ್ಯವಸ್ಥೆ ಇದೆ, ಭಾಗವಹಿಸುವರಿಗೆಲ್ಲಾ ಪ್ರಶಸ್ತಿ ಪತ್ರ ನೀಡಲಾಗುವುದು, ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ 101ರೂಗಳನ್ನು ನಿಗದಿಪಡಿಸಲಾಗಿದೆ, ವೇಷಭೂಷಣಗಳಿಗೆ ಆದ್ಯತೆ ನೀಡಲಾಗುತ್ತದೆ, ಒಂದು ತಂಡಕ್ಕೆ ಕಾಲಮಿತಿ ನಿಗಧಿ ಪಡಿಸಲಾಗಿದೆ, ವಿಜೇತರಿಗೆ ನಗದು ರೂಪದಲ್ಲಿ ಬಹುಮಾನ ಕೊಡಲಾಗುವುದು. ಪ್ರಥಮ ಬಹುಮಾನವನ್ನು ಅತಿಹೆಚ್ಚು ಅಂಕ ಪಡೆದ ಮೊದಲ 5 ತಂಡಗಳಿಗೆ, ದ್ವಿತೀಯ ಬಹುಮಾನವನ್ನು ಹೆಚ್ಚು ಅಂಕ ಪಡೆದ 10 ತಂಡಗಳಿಗೆ, ತೃತೀಯ ಬಹುಮಾನವನ್ನು ಹೆಚ್ಚು ಅಂಕ ಪಡೆದ 10 ತಂಡಗಳಿಗೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ 9448709755, 9886806037, 9900684694 ಸಂಪಕರ್ಿಸಲು ಕೋರಿದೆ.

Thursday, April 28, 2011

Wednesday, April 27, 2011ಜೈವಿಕ ಇಂಧನ ಕಾರ್ಯಗಾರ
ಚಿಕ್ಕನಾಯಕನಹಳ್ಳಿ,ಏ.27: ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಹಾಗೂ ತುಮಕೂರು ವಿಜ್ಞಾನ ಕೇಂದ್ರ ವತಿಯಿಂದ ಜೈವಿಕ ಇಂಧನ ಕಾರ್ಯಗಾರವನ್ನು ಇದೇ 29ರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.ಕಾರ್ಯಗಾರವನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಉದ್ಟಾಟನೆ ನೆರವೇರಿಸಲಿದ್ದಾರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ.ಜಿ. ನಾಯ್ಕ ಆಶಯ ನುಡಿಗಳನ್ನಾಡಲಿದ್ದಾರೆ,ಮುಖ್ಯ ಅತಿಥಿಗಳಾಗಿ ತಾ,ಪಂ, ಉಪಾಧ್ಯಕ್ಷೆ, ಬೀಬಿ ಫಾತಿಮಾ, ಜಿಲ್ಲಾ ವಿಜ್ಞಾನ ಕೇಂದ್ರ ಅಧ್ಯಕ್ಷ ಸಿ.ವಿಶ್ವನಾಥ್ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಜಿ.ಪಂ.ಸದಸ್ಯರಾದ ಎನ್.ಮಂಜುಳ, ನಿಂಗಮ್ಮ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷರಿ, ಜಿ.ಲೋಹಿತಾಬಾಯಿ, ತಾ.ಪಂ.ಸದಸ್ಯರಾದ ಜಯಲಕ್ಷ್ಮಿ, ಕೆ.ಎಂ.ನವೀನ್, ಕೆ.ಎಸ್.ಸುಮಿತ್ರ, ವೈ.ಎಂ.ಉಮಾದೇವಿ, ಹೆಚ್.ಆರ್.ಶಶಿಧರ, ಎ.ಬಿ.ರಮೇಶ್ಕುಮಾರ್, ಡಿ.ಶಿವರಾಜು, ಹೆಚ್.ಜಯಣ್ಣ, ಎ.ಜಿ.ಕವಿತಾ, ಎಂ.ಇ.ಲತಾ, ಎಂ.ಎಂ.ಜಗದೀಶ, ಟಿ.ಡಿ.ಚಿಕ್ಕಮ್ಮ, ಕೆ.ಆರ್.ಚೇತನಗಂಗಾಧರಯ್ಯ, ಬಿ.ಸಿ.ಹೇಮಾವತಿ, ಆರ್.ಪಿ.ವಸಂತಯ್ಯ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಎ.ಸಿ.ಎಫ್ ಮಾಗಡಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ವಲಯ ಅರಣ್ಯಾಧಿಕಾರಿ ಪಿ.ಎಚ್.ಮಾರುತಿ, ಇ.ಓ ಎನ್.ಎಂ.ದಯಾನಂದ್, ಎ.ಸಿ.ಎಫ್(ಸಾ.ಅ) ಕೆ.ಜಿ.ಉಮೇಶ್, ಸಿ.ಡಿ.ಪಿ.ಓ ಅನೀಶ್ ಖೈಸರ್, ವಲಯ ಅರಣ್ಯಾಧಿಕಾರಿ(ಪ್ರಾ.ಅ) ನಂಜುಂಡಪ್ಪ, ಉಪಸ್ಥಿತರಿರುವರು.

Monday, April 25, 2011

Saturday, April 23, 2011ನೆಮ್ಮದಿಯ ಜೀವನ ನಡೆಸಲು ಉತ್ತಮ ಆರೋಗ್ಯ ಬೇಕು : ಡಿ.ಸಿ.ಸೋಮಶೇಖರ್ಚಿಕ್ಕನಾಯಕನಹಳ್ಳಿ,
.23 : ಜೀವನದ ಅರ್ಧ ಆಯುಷ್ಯನ್ನು ಆರೋಗ್ಯವನ್ನು ಕಾಪಾಡಿಕೊಳ್ಳಲು, ಆರೋಗ್ಯ ಕಾಪಾಡಲು ತಾವು ಸಂಪಾದಿಸಿದ ಸಂಪತ್ತನ್ನು ಖಚರ್ು ಮಾಡುತ್ತಾ ಜೀವನ ಕಳೆಯುತ್ತೇವೆ, ಇದನ್ನು ತಪ್ಪಿಸಲು ಆರೋಗ್ಯವನ್ನು ಉತ್ತಮವಾಗಿರಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದೆಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಅರುಣೋದಯ ಮಹಿಳಾ ಮಂಡಳಿ ಉದ್ಗಾಟನಾ ಸಮಾರಂಭದ ಅಂಗವಾಗಿ ನಡೆದ ಉಚಿತ ಸ್ತ್ರೀರೋಗ ತಪಾಸಣೆ, ಚಿಕಿತ್ಸೆ ಮತ್ತು ಸಲಹಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಮ್ಮ ಜೀವನದ ಅರ್ಧ ಆಯುಷ್ನ್ನು ಹಣ ಸಂಪಾದನೆ ಮಾಡಲು, ಉಳಿದ ಅರ್ಧ ಆಯುಷ್ನ್ನು ಆರೋಗ್ಯ ಕಾಪಾಡಿಕೊಳ್ಳುವುದರಲ್ಲೇ ಜೀವನ ಕಳೆಯುತ್ತದೆ ಎಂದ ಅವರು ಇದನ್ನು ತಪ್ಪಿಸಲು ಆರೋಗ್ಯ ಉತ್ತಮವಾಗಿರಿಸಿಕೊಳ್ಳಬೇಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯು ಕಾರ್ಯನಿರ್ವಹಣಾಧಿಕಾರಿ ಶಿವಯೋಗಿ ಕಳಸದ ಮಾತನಾಡಿ ಮಹಿಳೆಯರು ಬಹಳ ಸಂಕೋಚ ಸ್ವಭಾವದವರಾಗಿದ್ದು, ತಮ್ಮ ಕಾಯಿಲೆಗಳ ಬಗ್ಗೆ ಬೇರೆಯವರ ಹತ್ತಿರ ಹೇಳಿಕೊಳ್ಳಲಾಗದಂತವರಿಗೆ ಆರೋಗ್ಯ ಆರೋಗ್ಯ ಶಿಬಿರಗಳು ಬಹಳ ಉಪಯುಕ್ತವಾಗಿದೆ, ಮತ್ತು ವೈಯಕ್ತಿಕ ಸ್ವಚ್ಚತೆಯ ಬಗ್ಗೆ ಗಮನಹರಿಸಬೇಕು, ಪ್ರತಿಕುಟುಂಬವು ಶೌಚಲಯವನ್ನು ಹೊಂದಬೇಕು ಎಂದರು. ಸಂಘದ ಅಧ್ಯಕ್ಷೆ ಜಿ.ಎಸ್.ಕುಶಲ ಮಾತನಾಡಿ ಗ್ರಾಮೀಣ ಪ್ರದೇಶದಿಂದ ಬಂದ ನಾನು ಗ್ರಾಮೀಣ ಪ್ರದೇಶದ ಮಹಿಳೆಯರು ಅನುಭವಿಸುತ್ತಿರುವ ಆರೋಗ್ಯದ ಸಮಸ್ಯಗಳನ್ನು ಬಹಳ ಹತ್ತಿರದಿಂದ ನೋಡಿರುವ ಕಾರಣ ಇಂತಹ ಕಾರ್ಯಕ್ರಮಗಳು ಹಲವು ಸಂಘ ಸಂಸ್ಥೆಗಳ ಸಹಕಾರದಿಂದ ನಡೆಸಲು ನನಗೆ ಸಾಧ್ಯವಾಹಿತೆಂದು ಹೇಳಿದರು. ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ಎನ್.ಎಂ.ದಯಾನಂದ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಚನ್ನಮಲ್ಲಯ್ಯ, ನಗರಾಭಿವೃದ್ದಿ ಆಯುಕ್ತ ಆದರ್ಶಕುಮಾರ್, ತಾ.ಪಂ.ಸದಸ್ಯ ಜಗದೀಶ್, ವೈದ್ಯರುಗಳಾದ ಶ್ರೀಧರ್, ಮಹೇಂದ್ರ, ಗಣೇಡ್, ಗಂಗಾಮಣಿ. ಸುದರ್ಶನ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವೀಣಾರಮೇಶ್ ಪ್ರಾಥರ್ಿಸಿ, ತಾರಾ ಸ್ವಾಗತಿಸಿ, ಸಿ.ಎ.ರಮೇಶ್ಕೆಂಬಾಳ್ ನಿರೂಪಿಸಿ ವಂದಿಸಿದರು.

ಚಿಕ್ಕನಾಯಕನಹಳ್ಳಿ,ಏ.23: ಗ್ರಾಮಾಂತರ ಪ್ರದೇಶದ ರೈತರು ಆಥರ್ಿಕವಾಗಿ ಸದೃಡವಾಗಲು ನಂದಿನಿ ಹಾಲು ಒಕ್ಕೂಟ ಹೆಚ್ಚಿನ ಪ್ರೋತ್ಸಾಹ ನೀಡಲು ಕಂಕಣ ಬದ್ದವಾಗಿದೆ ಎಂದು ಜಿಲ್ಲಾ ನಂದಿನಿ ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಪ್ರತಿಪಾದಿಸಿದರು. ತಾಲೂಕಿನ ನವಿಲೆ ಗ್ರಾಮದ ಕಲ್ಲೇನಹಳ್ಳಿಯಲ್ಲಿ ನಂದಿನಿ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ ಕನರ್ಾಟಕ ಸಕರ್ಾರ ಹಾಲು ಹಾಕುವ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ, ಹಸು ಕೊಳ್ಳುವವರಿಗೆ ಧನ ಸಹಾಯ ಹಸುವಿಗೆ ವಿಮೆ ಸೌಲಭ್ಯ ಒಂದು ಲೀಟರ್ ಹಾಲಿಗೆ ಹೆಚ್ಚುವರಿ 2ರೂ ನೀಡಿಕೆ, ಮೇವು ಕತ್ತರಿಸುವ ಯಂತ್ರ ಕೊಳ್ಳುವವರಿಗೆ ಶೇ.25 ಸಬ್ಸಿಡಿ ಗ್ರಾಹಕರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ 2400 ರೂ. ಸಹಾಯ ಧನ ನೀಡುವುದು, ಆರೋಗ್ಯದ ವ್ಯವಸ್ಥೆಗೆ ಯಶಸ್ವಿನಿ ಯೋಜನೆ, ಮನೆ ಬಾಗಿಲಿಗೆ ಮಾಕರ್ೆಟ್ ವ್ಯವಸ್ಥೆ ಮುಂತಾದ ಅತ್ಯಮೂಲ್ಯವಾದ ಸೌಲಭ್ಯಗಳನ್ನು ಒಕ್ಕೂಟ ಒದಗಿಸಲಿದೆ, ಆದುದರಿಂದ ಖಾಸಗೀಯವರೊಂದಿಗೆ ವ್ಯವಹರಿಸದೆ, ಸಕರ್ಾರದ ಅಧೀನದ ಈ ಸಂಸ್ಥೆಯೊಂದಿಗೆ ಸಹಕರಿಸಿ, ಮುಂದಿನ ದಿನಗಳಲ್ಲಿ 250ಕ್ಕೂ ಹೆಚ್ಚಿನ ಲೀಟರ್ ಹಾಲು ನೀಡುವುದರ ಮುಖಾಂತರ ಮುಖ್ಯ ಕೇಂದ್ರವನ್ನಾಗಿಸಲು ಎಲ್ಲಾ ರೈತರು ಸಹಕರಿಸಬೇಕೆಂದರು. ಸ್ಥಳೀಯ ಶಿಕ್ಷಕರಾದ ಅಧ್ಯಕ್ಷ ಹಾಗೂ ಅಧಿಕಾರಿಗಳಿಳ ಉಪಕೇಂದ್ರ ಸಥಾಪನೆಗೆ ಸಹಕರಿಸಿದ ಅಧ್ಯಕ್ಷ ಹಾಗೂ ಅಧಿಕಾರಿಗಳಿಗೆ ಅಭಿನಂದಿಸಿ ರೈತರು ಕೇಂದ್ರಕ್ಕೆ ಹಾಲು ಹಾಕುವುದರ ಮುಖಾಂತರ ಸದೃಡವಾಗಲು ಸಹಕರಿಸಬೇಕೆಂದರು. ಸಮಾರಂಭದಲ್ಲಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಪಂಚಾಯ್ತಿ ಸದಸ್ಯರುಗಳಾದ ಶಕುಂತಲಾ ನಾಗರಾಜ್, ಶ್ರೀಧರ್, ಸ್ವಾತಂತ್ರ ಹೋರಾಟಗಾರ ಕೆ.ಶಿವಪ್ಪ, ಜಿಲ್ಲಾ ವಿಸ್ತರಣಾಧಿಕಾರಿ ಯರಗುಂಟಪ್ಪ, ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್, ನವಿಲೆ ಒಕ್ಕೂಟದ ಅಧ್ಯಕ್ಷ ನಂಜುಡಪ್ಪ ಉಪಸ್ಥಿತರಿದ್ದರು.ಸಮಾರಂಭದಲ್ಲಿ ನಂದನ, ತನುಪ್ರಭ ಪ್ರಾಥರ್ಿಸಿ ಕೆ.ಎನ್.ಶಂಕರಯ್ಯ ಸ್ವಾಗತಿಸಿ, ನಾಗರಾಜ್ ನಿರೂಪಿಸಿರಾಜಶೇಖರ್ ವಂದಿಸಿದರು.

ಚಿಕ್ಕನಾಯಕನಹಳ್ಳಿ,ಏ.20: ರಾಜ್ಯ ನಿವೃತ್ತ ನೌಕರರ 8ನೇ ಮಹಾ ಸಮ್ಮೇಳನವು ಇದೇ ತಿಂಗಳ 25ರಂದು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ಏರ್ಪಡಿಸಿದ್ದು ತಾಲೂಕಿನ ಎಲ್ಲಾ ನಿವೃತ್ತ ನೌಕರ ಬಾಂದವರು ಈ ಸಮ್ಮೇಳನಕ್ಕೆ ಪಾಲ್ಗೊಳ್ಳಬೇಕೆಂದು ತಾಲೂಕು ನಿವೃತ ನೌಕರರ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಡಿ.ರುದ್ರಮುನಿ ಕೋರಿದ್ದಾರೆ.ಶ್ರೀ ಶಿವಕುಮಾರಸ್ವಾಮಿಯವರ ಸಾನಿದ್ಯದಲ್ಲಿ ಸಮ್ಮೇಳನ ನಡೆಯಲಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ನೌಕರರು ಪಾಲ್ಗೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

,ಏ.20;: 2011-12ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಹೆಚ್ಚುವರಿ ಹುದ್ದೆಗಳನ್ನು ಗುರತಿಸಿ ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಆದ್ಯತಾಪಟ್ಟಿಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.ತಾತ್ಕಾಲಿಕ ಆದ್ಯತಾಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ಶಿಕ್ಷಕರು ತಮ್ಮ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಇದೇ 23ರೊಳಗಾಗಿ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಿಗೆ ಸಲ್ಲಿಸಲು ತಿಳಿಸಿದ್ದು, ಸಲ್ಲಿಸಲು ವಿಳಂಬವಾದಲ್ಲಿ ಇಲಾಖೆಯು ಹೊಣೆಯಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, April 20, 2011

Thursday, April 14, 2011ಹರಿಜನರಿಗೆ ಪ್ರತ್ಯೇಕ ರಾಜ್ಯ ಕೊಡಿ: ಬೇವಿನಹಳ್ಳಿ

ಚನ್ನಬಸವಯ್ಯಚಿಕ್ಕನಾಯಕನಹಳ್ಳಿ,ಏ.14: ಅಸ್ಪೃಶ್ಯತೆ, ಅಸಮಾನತೆಯನ್ನು ನಿವಾರಿಸಲು ಸಾಧ್ಯವಾಗದ ಮೇಲೆ ಹರಿಜನರಿಗಾಗಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಡಾ. ಅಂಬೇಡ್ಕರ್ ಅವರು ಅಂದೇ ಗಾಂಧಿಜೀಯವರನ್ನು ಕೇಳಿದ್ದರು ಎಂದು ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ, ದಲಿತ ಸಂಘಟನೆಗಳ ಹಾಗೂ ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ರವರ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು. ದಲಿತರನ್ನು ಹರಿಜನರೆಂದು ಕರೆಯುವ ಬಗ್ಗೆಯೇ ಆಕ್ಷೇಪವೆತ್ತಿದ್ದಲ್ಲದೆ, ಸಮಾನತೆಯನ್ನು ನೀಡುವ ವಿಷಯದಲ್ಲಿ ತೋರುತ್ತಿದ್ದ ಅಸಡ್ಡೆಯನ್ನು ಬಹಿರಂಗವಾಗಿ ಅಂಬೇಡ್ಕರ್ ಖಂಡಿಸುತ್ತಿದ್ದರು ಎಂದರು. ಇಡೀ ಪ್ರಪಂಚದಲ್ಲಿ ಬೃಹತ್ ಸಂವಿಧಾನವೆಂಬ ಖ್ಯಾತಿಗೆ ಒಳಗಾಗಿರುವ ನಮ್ಮ ಸಂವಿಧಾನವನ್ನು ರಚಿಸಿದ ಮುಖ್ಯಸ್ಥರಿಗೆ ಸಂವಿಧಾನದ ಆಶಯಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸುವ ಬಗ್ಗೆ ಅನುಮಾನಗಳಿದ್ದವು ಎಂದರು. ಅಂದು ಮೇಲ್ವರ್ಗದ ಜನ ತಮ್ಮ ಆಥರ್ಿಕ ಲಾಭಕ್ಕಾಗಿ ದಲಿತರನ್ನು ದುಡಿಸಿಕೊಳ್ಳುತ್ತಿದ್ದರೆ, ಇಂದು ರಾಜಕೀಯ ಲಾಭಕ್ಕಾಗಿ ನಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ ಇಂದಿಗೂ ದಲಿತರ ಕೈಗೆ ಅಧಿಕಾರ ಸಿಕ್ಕಿಲ್ಲ, ಸಿಗುವ ಲಕ್ಷಣಗಳೂ ಇಲ್ಲವೆಂದು ನಿರಾಸೆ ವ್ಯಕ್ತ ಪಡಿಸಿದರು. ಬಾಬು ಜಗಜೀವನ್ ರಾಂರವರು ಅಭಿವೃದ್ಧಿಯ ನೇತಾರರಾಗಿದ್ದರು, ಅವರು ಅಂದು ತಂದ ವಿಮಾ ಮಸೂದೆ, ವೈಮಾನಿಕ ಕ್ಷೇತ್ರದಲ್ಲಿ ತಂದ ರಾಷ್ಟ್ರೀಕರಣ ವ್ಯವಸ್ಥೆ, ಆಹಾರ ಉತ್ಪಾದನೆಯಲ್ಲಿ ಮಾಡಿದ್ದ ಕ್ಷಿಪ್ರ ಪ್ರಗತಿಯ ಕ್ರಾಂತಿ ಇವೆಲ್ಲವೂ ಅವರನ್ನು ಈ ರಾಷ್ಟ್ರ ಇಂದಿಗೂ ನೆನಪಿಸಿಕೊಳ್ಳುವಂತೆ ಮಾಡಿದೆ ಎಂದರು. ಜಲಾನಯನದ ಕಲ್ಪನೆಯನ್ನು ಆಗಲೇ ಅನುಷ್ಠಾನಕ್ಕೆ ತರುವ ಮೂಲಕ ಒಣ ಭೂಮಿಗೆ ನೀರುಣ್ಣಿಸುವ ಕಾರ್ಯವನ್ನು ಕೈಗೊಂಡಿದ್ದಲ್ಲದೆ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವಂತೆ ಮಾಡಿದ ಹರಿಕಾರ ಎಂಬ ಖ್ಯಾತಿಗೆ ಜಗಜೀವನ್ರಾಂ ಪಾತ್ರರಾದರು ಎಂದರು. ಅಂಬೇಡ್ಕರ್ರವರು ಸಂವಿಧಾನದ ಮೂಲಕ ದಲಿತರ ಏಳಿಗೆಯನ್ನು ಬಯಸಿದರೆ, ಜಗಜೀವನ್ ರಾಂ ಅಧಿಕಾರದ ಮೂಲಕ ದಲಿತರಲ್ಲಿ ಆತ್ಮವಿಶ್ವಾಸ ಮೂಡಿಸಿದವರು ಎಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಾಮಾಜಿಕ ಪಿಡುಗುಗಳ ಬಗ್ಗೆ ಹೋರಾಡುವ ಮೂಲಕ ಅಂಬೇಡ್ಕರ್ ಈ ದೇಶದ ನಾಯಕರಾದರು ಎಂದರಲ್ಲದೆ, ಪತ್ರಿಕೆಗಳಿಲ್ಲದ ಮುಂದಾಳು, ರೆಕ್ಕೆ ಇಲ್ಲದ ಪಕ್ಷಿಯಂತೆ. ಎಂಬುದನ್ನು ಅರಿತು ಮೂಕ ನಾಯಕ ಮತ್ತು ಸಮತಾ ಎಂಬ ಪತ್ರಿಕೆಗಳನ್ನು ಆರಂಭಿಸಿದರು ಎಂದರು. ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಮಾತನಾಡಿ, ಡಾ.ಅಂಬೇಡ್ಕರ್ ರವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದರು. ಶಾಸಕ ಸಿ.ಬಿ.ಸುರೇಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.ಸಮಾರಂಭದಲ್ಲಿ ಅಂಬೇಡ್ಕರ್ರವರ ಭಾವಚಿತ್ರವನ್ನು ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ ಅನಾವರಣಗೊಳಿಸಿದರೆ, ಬಾಬು ಜಗಜೀವನ್ರಾಂರವರ ಭಾವಚಿತ್ರವನ್ನು ಜಿ.ಪಂ.ಸದಸ್ಯೆ ಲೋಹಿತಬಾಯಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಮಾಜಿ ಶಾಸಕ ಬಿ.ಲಕ್ಕಪ್ಪ, ಸಿ.ಪಿ.ಐ,ಪಿ.ರವಿಪ್ರಸಾದ್ ಮಾತನಾಡಿದರು. ಸಮಾರಂಭದಲ್ಲಿ ಬಿ.ಸಿ.ಎಂ.ಕಾಲೇಜ್ ಹಾಸ್ಟೆಲ್ನ ವಿದ್ಯಾಥರ್ಿನಿಯರು ಪ್ರಾಥರ್ಿಸಿದರೆ, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಲಿಂಗದೇವರು ನಿರೂಪಿಸಿದರು.

Tuesday, April 12, 2011


ಶೀರಾಮ, ರಾಜ್ರ ಹೆಸರಿನಲ್ಲಿ ಪಾನಕ

,ಏ.12: ಶ್ರೀರಾಮ ನವಮಿ ಮತ್ತು ಡಾ.ರಾಜ್ ಕುಮಾರ್ ರವರಿಗೆ ಶ್ರದ್ದಾಂಜಲಿ ಅಪರ್ಿಸುವ ಸಲುವಾಗಿ ಪಟ್ಟಣದ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬ್ರಿಯನ್ನು ವಿತರಿಸಲಾಯಿತು. ಪಟ್ಟಣದ ನೆಹರು ವೃತ್ತದಲ್ಲಿ ಬೆಳಗ್ಗಿನ 11ಕ್ಕೆ ಆರಂಭಗೊಂಡ ವಿತರಣಾ ಕಾರ್ಯಕ್ರಮ ಸಂಜೆ 4ರವರೆಗೆ ನಿರಂತರವಾಗಿ ನಡೆಯಿತು, ಈ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಅಧಿಕ ಜನರು ಪಾನಕ, ಮಜ್ಜಿಗೆ ಮತ್ತು ಕೋಸಂಬ್ರಿಯನ್ನು ಸವಿದರು.ಈ ಕಾರ್ಯಕ್ರಮವನ್ನು ಗೆಳೆಯರ ಬಳಗದ ಎ.ಎಂ.ಉಮೇಶ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಅಂಜನಮೂತರ್ಿ, ಅಡಿಟರ್ ಲಿಂಗದೇವರು, ಜಯರಾಂ, ರಿದಂ ರೂಪೇಶ್, ಬಸವರಾಜು. ಶಿಲ್ಪಿ ವಿಶ್ವನಾಥ್ ಸೇರಿದಂತೆ ಹಲವು ಗೆಳೆಯರು ಪಾಲ್ಗೊಂಡಿದ್ದರು.

Monday, April 11, 2011

ಪ್ರಥಮ ದಜರ್ೆ ಕಾಲೇಜಿನ ವಾಷರ್ಿಕೋತ್ಸವ

ಚಿಕ್ಕನಾಯಕನಹಳ್ಳಿ,ಏ.10: ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಇದೇ 15ರ ಶುಕ್ರವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಕಾಲೇಜಿನ ಆವರಣದಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಶೇಷಾದ್ರಿಪುರಂ ಶಿಕ್ಷಣ ದತ್ತಿ ಧರ್ಮದಶರ್ಿ ಎಸ್.ವೀರಭದ್ರಯ್ಯ ಸಮಾರೋಪ ಭಾಷಣ ಮಂಡಿಸಲಿದ್ದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಭೇಡ್ಕರ್ ಮತ್ತು ಬಾಬು ಜಗಜೀವರಾಮ್ರವರ ಜನ್ಮದಿನಾಚರಣೆಚಿಕ್ಕನಾಯಕನಹಳ್ಳಿ,ಏ.10: ಡಾ.ಬಿ.ಆರ್.ಅಂಭೇಡ್ಕರ್ರವರ 120ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬು ಜಗಜೀವನರಾಮ್ರವರ 104ನೇ ಜನ್ಮದಿನಾಚರಣೆ ಸಮಾರಂಭವನ್ನು ಇದೇ 14ರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ ಮತ್ತು ದಲಿತ ಸಂಘಟನೆ, ಹಿಂದುಳಿದ ವರ್ಗ ಅಲ್ಪ ಸಂಖ್ಯಾತರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.ಡಾ.ಬಿ.ಆರ್.ಅಂಭೇಡ್ಕರ್ರವರ ಭಾವಚಿತ್ರವನ್ನು ಪುರಸಭಾಧ್ಯಕ್ಷ ರಾಜಣ್ಣ ಮತ್ತು ಡಾ.ಬಾಬು ಜಗಜೀವನರಾಂರವರ ಭಾವಚಿತ್ರವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಹಿತಬಾಯಿರವರ ಅನಾವರಣಗೊಳಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕಿರಣ್ಕುಮಾರ್, ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮರಾಮಚಂದ್ರಯ್ಯ, ನಿಂಗಮ್ಮ, ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತಿಮಾ, ಪುರಸಭಾ ಉಪಾಧ್ಯಕ್ಷ ಆರ್.ರವಿ, ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದಶರ್ಿಬೇವಿನಹಳ್ಳಿ ಚನ್ನಬಸವಯ್ಯ, ವಿಶೇಷ ಆಹ್ವಾನಿತರಾಗಿ ಇ.ಒ ಎನ್.ಎಂ.ದಯಾನಂದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಉಪಸ್ಥಿತರಿರುವರು. ರಾಜಕಾರಣಿಗಳು, ಅಧಿಕಾರಿಗಳಿಂದಲೇ ಭ್ರಷ್ಠತೆ

,ಏ.10: ವಿಧಾನಸಭೆ, ಲೋಕಸಭೆಗಳಲ್ಲಿರುವ ರಾಜಕಾರಣಿಗಳು, ಅಧಿಕಾರಿಗಳಿಂದಲೇ ಭ್ರಷ್ಠಾಚಾರ ಹೆಚ್ಚುತ್ತಿದ್ದು ಅವರಿಂದಲೇ ಸಾಮಾನ್ಯ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ಬಾಳೆಕಾಯಿ ಶಿವನಂಜಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ನೆಹರು ಸರ್ಕಲ್ ಬಳಿ ತಾಲೂಕು ಜನಪರ ವೇದಿಕೆ ವತಿಯಿಂದ ಅಣ್ಣ ಹಜಾರೆರವರ ಭ್ರಷ್ಠಚಾರ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದ ಸಂದರ್ಬದಲ್ಲಿ ಮಾತನಾಡಿದ ಅವರು ಭ್ರಷ್ಠಾಚಾರಕ್ಕೆ ತೊಡಗದೆ ಪ್ರಾಮಾಣಿಕವಾಗಿ ಇರುವವರನ್ನು ತಾತ್ಸಾರವಾಗಿ ನೋಡುತ್ತಾರೆ ಇಂತಹ ದೃಷ್ಠಿ ಬದಲಾಗಬೇಕು ಅದರಲ್ಲೂ ಭ್ರಷ್ಠಾಚಾರದಲ್ಲಿ ತೊಡಗಿ ಸಿಕ್ಕಿಹಾಕೊಂಡವರಿಗೆ ಕಾನೂನು ಬದ್ದವಾಗಿ ಯಾರಿಗೂ ಶಿಕ್ಷೆಯಾಗಿಲ್ಲ ಅಂತಹವರ ವಿರುದ್ದ ಈ ಹೋರಾಟ ಸಮಂಜಸವಾಗಿದೆ.ಭ್ರಷ್ಠಾಚಾರವನ್ನು ಮೈಗೂಡಿಸಿಕೊಂಡವರೇ ಇಂದು ರಾಜಕಾರಣಿಗಳು, ಅಧಿಕಾರಿಗಳು ಉನ್ನತ ಹುದ್ದೆಗಳನ್ನು ಹೊಂದಿ ಸಾಮಾನ್ಯ ಜನರಿಗೆ ಕಾಣದೆ ಹಿಂಸಿಸುತ್ತಿದ್ದಾರೆ ಎಂದ ಅವರು ರೈತರ ಆತ್ಮಹತ್ಯೆಗಳಿಗೆ ಹೆಚ್ಚಾಗಿ ಕಾಣುತ್ತಿರುವುದು ಭ್ರಷ್ಠಾಚಾರ, ಇದನ್ನು ತಪ್ಪಿಸಲು ಭ್ರಷ್ಠ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಿ ಉತ್ತಮೋತ್ತರಿಗೆ ಕೆಲಸ ನೀಡಬೇಕು ಎಂದರು.ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಭಾರತ ದೇಶ ಬಹುಜನಗಳ ರಾಷ್ಟ್ರ ಇಲ್ಲಿನ ಸಂಪತ್ತು ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಆದರೆ ಇಂದು ದೇಶದ ಸಂಪತ್ತು ರಾಜಕೀಯ ಬಲ, ಜಾತಿಯ ಬಲ, ತೋಳ್ ಬಲ ಇರುವ ಭ್ರಷ್ಠಾಚಾರಿಗಳ ಪಾಲಾಗುತ್ತಿದೆ, ಇದೇ ರೀತಿ ದೇಶದಲ್ಲಿ ಸಂಪತ್ತು ಒಂದೇ ಕಡೆ ಕ್ರೂಡೀಕೃತವಾದರೆ ಭ್ರಷ್ಠಾಚಾರ ಮುಂದುವರೆದರೆ ಈ ದೇಶ ಮತ್ತು ರಾಜ್ಯ ಕೆಲವೇ ವ್ಯಕ್ತಿಗಳ ಸಾಮ್ರಾಜ್ಯವಾಗುತ್ತದೆ, ಸ್ವಾತಂತ್ರದ ಅರ್ಥ ಕಳೆದು ಹೋಗಿ ಜನರು ಗುಲಾಮಗಿರಿ ದಾಸ್ಯಕ್ಕೆ ಒಳಪಡಬೇಕಾಗುತ್ತದೆ, ಇದನ್ನು ತಪ್ಪಿಸಲು ಜನಲೋಕಪಾಲ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ 64 ವರ್ಷಗಳಿಂದಲೂ ಭಾರತ ಭ್ರಷ್ಠಕೂಪದಿಂದ ಹೊರಬರದೇ ನರಳುತ್ತಿದ್ದು ಈ ಭ್ರಷ್ಠತೆಯನ್ನು ಹೋಗಲಾಡಿಸಲು ಗಾಂಧಿವಾದಿ ಅಣ್ಣ ಅಜಾರೆರವರು ಉಪವಾಸ ಕೈಗೊಂಡಿರುವುದಕ್ಕೆ ರಾಷ್ಟ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಇದ್ದು ಶೀಘ್ರವಾಗಿ ಜನಲೋಕಪಾಲ ಮಸೂದೆಯನ್ನು ಸಕರ್ಾರ ಜಾರಿಗೆ ತರಬೇಕು ಎಂದರು. ಉಪವಾಸ ಸತ್ಯಾಗ್ರಹದ ನಂತರ ಜನಲೋಕಪಾಲ ಮಸೂದೆ ಜಾರಿಗೆ ಬಂದ ಸಂತಸಕ್ಕಾಗಿ ಜನಪರ ವೇದಿಕೆ, ಕನರ್ಾಟಕ ರಕ್ಷಣಾ ವೇದಿಕೆ, ಭುವನೇಶ್ವರಿ ಕಲಾ ಸಂಘ, ಹಿಂದುಳಿದ ವರ್ಗಗಲ ಜಾಗೃತಿ ವೇದಿಕೆ, ದಲಿತ ಸಂಘರ್ಷ ಸಮಿತಿ, ಪತ್ರಕರ್ತರ ಸಂಘ, ಕುಂಚಾಂಕುರ ಕಲಾ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಎಲ್ಲಾ ಪಧಾದಿಕಾರಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಉಪವಾಸ ಸತ್ಯಾಗ್ರಹದಲ್ಲಿ ಸಿ.ಎಸ್.ರೇಣುಕಮೂತರ್ಿ, ಸಿ.ಟಿ.ಗುರುಮೂತರ್ಿ, ಸುಬ್ರಮಣ್ಯ, ಲಿಂಗದೇವರು, ಸಿ.ಹೆಚ್.ಗಂಗಾಧರ್, ಸಿ.ಎನ್.ಮಂಜುನಾಥ, ಕೆ.ಜಿ.ರಾಜೀವಲೋಚನ, ಸಿ.ಬಿ.ಲೋಕೇಶ್, ರವಿಕುಮಾರ್ ಉಪಸ್ಥಿತರಿದ್ದರು. ಅಭಾವಿಪ ಪತಿಯಿಂದ ಅಣ್ಣ ಅಜಾರೆರವರ ಸತ್ಯಾಗ್ರಹಕ್ಕೆ ಬೆನ್ಬಲಚಿಕ್ಕನಾಯಕನಹಲ್ಲಿ,ಏ.09

ಅಣ್ಣ ಅಜಾರೆರವರ ಉಪವಾಸ ಸತ್ಯಾಗ್ರಹಕ್ಕೆ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಬೆಂಬಲ ಸೂಚಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ವಿದ್ಯಾಥರ್ಿಗಳ ಮೂಲಕ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತಾಲೂಕ್ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಬ್ರಿಟೀಷರು ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದ ಸಂಪನ್ಮೂಲವನ್ನು ಕೊಳ್ಳೆಹೊಡಿದರು ಆದರೆ ಇಂದು ನಮ್ಮ ದೇಶದ ಸಂಸ್ಕೃತಿಯನ್ನು ಅರಿತ ಭ್ರಷ್ಠ ರಾಜಕಾರಣಿಗಳು ಕೋಟಿ ಕೋಟಿ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಭ್ರಷ್ಠಾಚಾರ ಎಂಬ ಪಿಡುಗು ದೇಶ ವ್ಯಾಪ್ತಿ ಹರಡಿರುವುದು ಶೋಚನೀಯ, ಸಾರ್ವಜನಿಕರ ಹಣವನ್ನು ಭ್ರಷ್ಠರು ಸಿಸ್ವ್ ಬ್ಯಾಂಕ್ನಲ್ಲಿ ಬಚ್ಚಿಟ್ಟಿದ್ದಾರೆ, ಇದನ್ನು ಹೊರತರಲು ಕೇಂದ್ರ ಸಕರ್ಾರ ವಿಫಲವಾಗಿದೆ. ಯುವ ಜನತೆಯು ಭ್ರಷ್ಠಾಚಾರತೆಯ ವಿರುದ್ದ ಸಮರ ಸಾರಬೇಕು ಈ ಭ್ರಷ್ಠತೆಯನ್ನು ಹೋಗಲಾಡಿಸಲು ಅಣ್ಣ ಅಜಾರೆರವರು ಕೈಗೊಂಡಿರುವುದು ಸ್ವಾಗತಾರ್ಹ ಎಂದರು.ಈ ಸಂದರ್ಭದಲ್ಲಿ ಅಭಾವಿಪ ಹಿರಿಯ ಕಾರ್ಯಕರ್ತ ರಾಕೇಶ್ ಮಾತನಾಡಿದರು.ಅಭಾವಿಪ ಕಾರ್ಯಕರ್ತರಾದ ಮನು, ವಿಜಯ್, ಗುರು, ದರ್ಶನ್, ನಂದನ್, ವಾಸು, ರವಿ, ಸುಷ್ಮಾ, ಸುಪ್ರಿಯಾ ಈ ಸಂದರ್ಭದಲ್ಲಿ ಹಾಜರಿದ್ದರು.

Thursday, April 7, 2011

ಪ್ರಥಮ ದಜರ್ೆ ಕಾಲೇಜ್ನಲ್ಲಿ ಹಲವು 'ಇಲ್ಲಗಳ' ಮಧ್ಯೆ ಅಭಿವೃದ್ದಿ ಚಿಕ್ಕನಾಯಕನಹಳ್ಳಿ, ಸಕರ್ಾರಿ ಕಾಲೇಜು ಎಂದರೆ ವಿದ್ಯಾಥರ್ಿಗಳು ದೂರ ಉಳಿಯುವ ಕಾಲ ಒಂದಿತ್ತು, ಆದರೆ ಇಂದು ಈ ಚಿತ್ರಣ ಬದಲಾಗಿದೆ. ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗೆ ವಿದ್ಯಾಬ್ಯಾಸದ ಜೊತೆಗೆ ಹಲವು ಹತ್ತು ತರಬೇತಿಗಳು, ಉದ್ಯೋಗಕ್ಕೆ ಅನುಕೂಲವಾಗುವಂತಹ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಿರುವುದರಿಂದ ನಾವೂ ಸಕರ್ಾರಿ ಕಾಲೇಜ್ನಲ್ಲಿ ಕಲಿಯಬೇಕು ಎಂಬ ಉದ್ದೇಶ ಹೊಂದಿ, ಇಲ್ಲಿಂದ ಬೇರೆ ತಾಲ್ಲೂಕಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದ ವಿದ್ಯಾಥರ್ಿಗಳು ಇಂದು ಈ ಕಾಲೇಜಿಗೆ ಸೇರ ಬಯಸುತ್ತಿದ್ದಾರೆ, ಆದರೆ ಈ ವಿದ್ಯಾಥರ್ಿಗಳು ಕಾಲೇಜಿನ ಮೂಲಭೂತ ಸೌಕರ್ಯಗಳಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. 1989ರಲ್ಲಿ ಸ್ಥಾಪನೆಯದ ಕಾಲೇಜು, ಇಂದಿಗೆ 22 ವಸಂತಗಳು ತುಂಬಿದ್ದರೂ ತರಗತಿಗಳಿಗಾಗಿ ಗ್ರಂಥಾಲಯ, ಉಗ್ರಾಣದ ಕೊಠಡಿಗಳಲ್ಲಿ ವಿದ್ಯಾಥರ್ಿಗಳು ಭೋದನೆ ಆಲಿಸಬೇಕಾಗಿದೆ, 3ವರ್ಷಗಳ ಹಿಂದೆ ಕೇವಲ 4 ಕೊಠಡಿಗಳಲ್ಲಿ ಬಿ.ಎ, ಬಿ.ಬಿ.ಎಂ, ಬಿ.ಕಾಂ ನ 7 ತರಗತಿ ನಡೆಯುತ್ತಿತ್ತಲ್ಲದೆ, ಕೊಠಡಿಗಳಿಲ್ಲದೆ ವಿದ್ಯಾಥರ್ಿಗಳು ತಮ್ಮ ಬೋಧನೆಗಾಗಿ ಗಂಟೆಗಟ್ಟಲೆ ಕಾಯಬೇಕಿತ್ತು, ಈ ವಿಷಯ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಆ ಸಂದರ್ಭದಲ್ಲಿ ಇದ್ದ ಪ್ರಾಂಶಪಾಲ ದಿವಂಗತ ಎಲ್.ಟಿ.ಶಿವಶಂಕರ್ರವರ ಒತ್ತಾಯದಿಂದ ಕಾಲೇಜಿನ ಕಟ್ಟಡ ಕಾಮಗಾರಿಗೆ ಅನುದಾನ ದೊರೆತು ಕಾಲೇಜಿಗೆ ಕೊಠಡಿಗಳ ಕಾಮಗಾರಿ ಶುರುವಾಯಿತು. ಆ ಸಂದರ್ಭದಲ್ಲಿ ಕಾಲೇಜಿಗೆ ಹೊಸದಾಗಿ ಬಂದ ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕೊಠಡಿಗಳ ಕಾಮಗಾರಿ ಪೂರ್ಣಗೊಳಿಸಿದರಲ್ಲದೆ, ತರಗತಿಗಳಿಗಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡರು. ಆದರೂ ಕಾಲೇಜಿನ ವಿದ್ಯಾಥರ್ಿಗಳಿಗೆ ಸಮಸ್ಯೆಗಳು ಹೆಚ್ಚಾಗಿದೆ, ಕಾಲೇಜಿಗೆ ಈಗಿರುವ ಹಾಜರಾತಿ ಗಮನಿಸಿದರೆ ಕೊಠಡಿಗಳ ಸಮಸ್ಯೆ ಇನ್ನೂ ಇದೆ, ವಿದ್ಯಾಥರ್ಿಗಳು ತಮ್ಮ ಬೋದನೆಗಾಗಿ ಗ್ರಂಥಾಲಯ, ಉಗ್ರಾಣ ಮತ್ತು ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳಲ್ಲಿ ಕುಳಿತು ಬೋದನೆ ಆಲಿಸುತ್ತಿದ್ದಾರೆ, ಕಾಲೇಜಿನಲ್ಲಿ ತರಗತಿ ನಡೆಸಲು 8 ಕೊಠಡಿಗಳಿದ್ದು ಗ್ರಂಥಾಲಯಕ್ಕೆ, ವಿದ್ಯಾಥರ್ಿಗಳ ಶೌಚಾಲಯಕ್ಕೆ, ಕಾಲೇಜಿನ ಸಭಾಂಗಣ, ಕಂಪ್ಯೂಟರ್ ಕೊಠಡಿಗಾಗಿ ಮತ್ತು ಮುಂದಿನ ವರ್ಷದ ದಾಖಲಾತಿ ಗಮನಿಸಿದರೆ ಇನ್ನೂ 10 ಕೊಠಡಿಗಳ ಕೊರತೆಯು ಎದ್ದು ಕಾಣುತ್ತಿದೆ ಅಲ್ಲದೆ ಕಾಲೇಜಿನ 5 ಎಕರೆ ಜಮೀನಿನಲ್ಲಿ ಸುಮಾರು 600 ಸಸಿಗಳನ್ನ ನೆಟ್ಟಿರುವ ಪರಿಸರ ಸಂರಕ್ಷಣೆಗಾಗಿ ಮತ್ತು ಕಾಲೇಜಿನ ಭದ್ರತೆಗಾಗಿ ಕಾಲೇಜಿಗೆ ಕಾಂಪೌಂಡ್ನ ಕೊರತೆಯನ್ನೂ ನೀಗಿಸಬೇಕಾಗಿದೆ. ಈ ಎಲ್ಲಾ ಕೊರತೆಗಳಿದ್ದರೂ ಸಹ ಕಾಲೇಜಿನ ವಿದ್ಯಾಥರ್ಿಗಳ ಹಾಜರಾತಿ 220 ಇದ್ದದ್ದು ಈಗ 477ಸಂಖ್ಯೆಗೆ ಏರಿದೆ. ಒಂದು ವರ್ಷದಲ್ಲಿ ಈ ಏರಿಕೆಗೆ ಕಾರಣವಾಗಿರುವ ಬಗ್ಗೆ ಪತ್ರಿಕೆ ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ತಾಲ್ಲೂಕಿನ ಸುತ್ತಮುತ್ತಲಿನಲ್ಲಿರುವ ಸುಮಾರು 25 ಕಾಲೇಜುಗಳಿಗೆ ಭೇಟಿ ಮಾಡಿ ಅಲ್ಲಿರುವ ಸೌಕರ್ಯಗಳು, ಅಲ್ಲಿನ ಉತ್ತಮವಾದ ಬೋದನೆ, ಈ ಎಲ್ಲಾ ಅಂಶಗಳನ್ನು ಗಮನಿಸಿ ಕಾಲೇಜಿನಲ್ಲೂ ಅಂತಹ ಸೌಕರ್ಯಗಳನ್ನು ನೀಡುವಲ್ಲಿ ಮುಂದಾದೆ, ಅಲ್ಲದೆ ಕಾಲೇಜಿಗಾಗಿ ಕನ್ನಡ ಮೇಜರ್, ಇಂಗ್ಲೀಷ್ ಮೇಜರ್, ಮತ್ತು ಬಿ.ಎಸ್.ಡಬ್ಲ್ಯೂ ಈ ಕೋಸರ್್ಗಳನ್ನು ತರುವಲ್ಲಿ ಯಶಸ್ವಿಯಾಗಿ ಪಕ್ಕದ ತಾಲ್ಲೂಕುಗಳಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದ ವಿದ್ಯಾಥರ್ಿಗಳನ್ನು ಕಾಲೇಜಿನತ್ತ ಸೆಳೆಯುವಲ್ಲಿ ಯಶಸ್ವಿಯಾಗಿ, ಗ್ರಾಮೀಣ ವಿದ್ಯಾಥರ್ಿಗಳಿಗೆ ಸಂವಹನ ಕೌಶಲ್ಯ, ಧ್ಯೆರ್ಯ, ಮತ್ತು ಬೌದ್ದಿಕ ಬೆಳವಣಿಗೆ ಬೆಳಸಿ ಅವರಿಗೆ ಉತ್ತಮ ತರಬೇತಿ ನೀಡುವ ಜೊತೆಗೆ ವಿದ್ಯಾಥರ್ಿಗಳ ಉದ್ಯೋಗಕ್ಕೆ ಸಹಾಯವಾಗುವಂತಹ ಶಿಬಿರಗಳು, ಯೋಗ ಶಿಬಿರಗಳನ್ನು ಹಲವು ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ಕಾರ್ಯಗಾರ, ಸಾಂಸ್ಕೃತಿಕ ಕಾರ್ಯಕ್ರಮ, ಇಂತಹ ಹಲವಾರು ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಏರ್ಪಡಿಸುವ ಮೂಲಕ ಕಾಲೇಜಿನಲ್ಲಿ ವಿದ್ಯಾಥರ್ಿಗಳ ಹೆಚ್ಚಿನ ಸಂಖ್ಯೆಯ ಹಾಜರಾತಿ ದಾಖಲಾಗಿದೆ ಮುಂದಿನ ವರ್ಷ ದಾಖಲಾತಿ 800ಕ್ಕೂ ಹೆಚ್ಚು ವಿದ್ಯಾಥರ್ಿಗಳ ದಾಖಲಾತಿ ಅವಕಾಶದ ಕನಸು ನನ್ನದಾಗಿದೆ ಎಂದಿರುವ ಪ್ರಾಂಶುಪಾರು ತಾಲೂಕಿನಲ್ಲಿ, ಇರದ ಬಿ.ಎಸ್ಸಿ(ವಿಜ್ಞಾನ) ಕೋಸರ್್ನ್ನು ಕಾಲೇಜಿಗೆ ತರುವಲ್ಲಿ ಯಶಸ್ವಿಯಾದರೂ ಕಾಲೇಜಿನಲ್ಲಿರುವ ಕೊರತೆಗಳಿಂದ ವಿಜ್ಞಾನ ಕೋಸರ್್ ತಾಲೂಕಿಗೆ ಮರೀಚಿಕೆಯಾಯಿತು ಮತ್ತು ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಕಾಲೇಜಿನ ಅಭಿವೃದ್ದಿ ಮತ್ತು ವಿದ್ಯಾಥರ್ಿಗಳ ಬೆಳವಣಿಗೆಗಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಪ್ರಾಂಶುಪಾಲರು ಇನ್ನು ಒಂದೂವರೆ ವರ್ಷದಲ್ಲಿ ಹಲವು ಕೆಲಸ ನಿರ್ವಹಿಸುವ , ತನ್ನ ವಿದ್ಯಾಥರ್ಿಗಳಿಗಾಗಿ ತೀವ್ರ ಆಸಕ್ತಿ ವಹಿಸಿ ಅಭಿವೃದ್ದಿಗಾಗಿ ಶ್ರಮಿಸುವ ಪ್ರಾಂಶುಪಾಲರ ಕನಸುಗಳಿಗೆ, ತಾಲೂಕಿನಲ್ಲಿ ಇರದ ವಿಜ್ಞಾನ ಕೋಸರ್್ ತಾಲೂಕಿಗೆ ತರುವಲ್ಲಿ ಶಾಸಕರು, ತಾಲೂಕು ಆಡಳಿತ ಮಂಡಳಿ ಸ್ಪಂದಿಸಿ ಕಾಲೇಜಿನ ಅಭಿವೃದ್ದಿ ಮತ್ತು ತಾಲೂಕಿನ ವಿದ್ಯಾಥರ್ಿಗಳ ಬೆಳವಣಿಗೆ ಬಗ್ಗೆ ಗಮನ ಹರಿಸುವರೇ ಎಂಬುದು ಶಿಕ್ಷಣಾಸಕ್ತರ ಒತ್ತಾಸೆ..

ಭಾರತದ ಸುಪ್ರಸಿದ್ದ ರಂಗಕಲಾವಿದ ಸಿ.ಬಿ.ಮಲ್ಲಪ್ಪನವರ 125ನೇ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ನಾಟಕೋತ್ಸವ ಹಾಗೂ ನಾಟಕ ಸ್ಪಧರ್ೆ ಮತ್ತು ವಿಚಾರ ಸಂಕೀರಣವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ತಿಳಿಸಿದ್ದಾರೆ.ಸಂಘದ ಮುವತ್ತನೇ ವರ್ಷ ಆಚರಣೆ ಮತ್ತು ಪಟ್ಟಣದ ರಂಗಕಮರ್ಿಗಳಾದ ಸಿ.ಬಿ.ಮಲ್ಲಪ್ಪ, ಬಿ.ಕೆ.ಈಶ್ವರಪ್ಪ ಹಾಗೂ ಪಂಚಲಿಂಗಯ್ಯನವರ ಸ್ಮರಣೆಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಏಪ್ರಿಲ್ ಅಂತಿಮ ವಾರ ಅಥವಾ ಮೇ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಉತ್ಸವವನ್ನು ಐದು ದಿನಗಳ ವರೆಗೆ ಹಮ್ಮಿಕೊಳ್ಳಲು ನಿರ್ಧರಿಸಿದ್ದು ಸ್ಪಧರ್ೆಗೆ ಹೆಚ್ಚು ನಾಟಕಗಳು ಆಗಮಿಸಿದರೆ ಏಳು ದಿನಗಳ ವರೆಗೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿರುವ ಅವರು ಸಾಮಾಜಿಕ ಮತ್ತು ಪ್ರಯೋಗಿಕ ನಾಟಕಗಳಿಗೆ ಒತ್ತು ನೀಡಲಾಗಿದ್ದು ಕೊನೆಯ ದಿನ ಪೌರಾಣಿಕ ಮತ್ತು ಐತಿಹಾಸಕ ನಾಟಕಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಸ್ಫದರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ಬಿ.ಕೆ.ಈಶ್ವರಪ್ಪನವರ ಹೆಸರಿನ ಆಕರ್ಷಕ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ, ತೃತೀಯ ಬಹುಮಾನ 7 ಸಾವಿರ ರೂ., ಪಂಚಲಿಂಗಯ್ಯವರ ಹೆಸರಿನ ಆಕರ್ಷಕ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಇದಲ್ಲದೆ ಉತ್ತಮ ರಂಗಸಜ್ಜಿಕೆ ಉತ್ತಮ ನಿದರ್ೇಶಕ ಉತ್ತಮ ಕಥೆ, ಉತ್ತಮ ನಟ-ನಟಿ, ಉತ್ತಮ ಬೆಳಕು-ಧ್ವನಿ, ಉತ್ತಮ ಸಂಗೀತ, ಇವರುಗಳಿಗೆ ವೈಯಕ್ತಿಕ ನಗದು ಬಹುಮಾನಗಳಿರುತ್ತದೆ ಹಾಗೂ ಭಾಗವಹಿಸಿದ ಎಲ್ಲಾ ನಾಟಕ ತಂಡಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶ್ತಿ ಪತ್ರ ವಿತರಿಸಲಾಗುವುದು.ಸ್ಪಧರ್ೆಯಲ್ಲಿ ಭಾಗವಹಿಸುವ ತಂಡಗಳ ಕಲಾವಿದರ ಊಟ ಮತ್ತು ವಸತಿ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗುವುದು, ನಾಟಕ ಸ್ಪಧರ್ೆಯಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳಿಗೆ ಅಜರ್ಿ ನಮೂನೆಗಳನ್ನು ವಿತರಿಸಲಾಗುತ್ತಿದ್ದು, ಪ್ರವೇಶ ಧನ ಐದು ನೂರು ರೂಗಳೊಂದಿಗೆ ಅಜರ್ಿ ಸಲ್ಲಿಸುವುದಕ್ಕೆ ಏ.7 ಕೊನೆಯ ದಿನವಾಗಿರುತ್ತದೆ. ಸಂಘದ ಕಾರ್ಯದಶರ್ಿ ಸುಪ್ರೀಂ ಸುಬ್ರಹ್ಮಣ್ಯ ಮಾತನಾಡಿ, ಅಭಿನವ ಭಕ್ತಶಿರೋಮಣಿ ಸಿ.ಬಿ.ಮಲ್ಲಪ್ಪನವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ಮಲ್ಲಪ್ಪನವರ ವ್ಯಕ್ತಿ ಮತ್ತು ಪಾತ್ರ ಚಿತ್ರಣ ಹಾಗೂ ರಂಗ ಕಲೆಯ ವಿಷಯವಾಗಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.ಸಂಘದ 30ನೇ ವರ್ಷದ ಆಚರಣೆಗಾಗಿ ಹೊರತರುತ್ತಿರುವ ಸ್ಮರಣೆ ಸಂಚಿಕೆಗೆ ಲೇಖನವನ್ನು ಆಹ್ವಾನಿಸಿದ್ದು ಈ ಹಿಂದೆ ನಮ್ಮ ಸಂಘ ಹಮ್ಮಿಕೊಂಡಿದ್ದ ನಾಟಕೋತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು, ರಂಗಾಸಕ್ತರು ಲೇಖನಗಳನ್ನು ಕಳುಹಿಸಬಹುದು ಎಂದರು.ಗೋಷ್ಠಿಯಲ್ಲಿ ಸಿದ್ದು ಜಿ.ಕೆರೆ, ಸಿ.ಎಚ್.ಗಂಗಾಧರ್, ಸಿದ್ದರಾಮಯ್ಯ ಉಪಸ್ಥಿತರಿದ್ದರು.ಹೆಚ್ಚಿನ ವಿವರಗಳಿಗಾಗಿ ಸಿದ್ದು ಜಿ.ಕೆರೆ, ಮೊ.ನಂ. 9886531222, ಸುಪ್ರೀಂ ಸುಬ್ರಹ್ಮಣ್ಯ ಮೊ.ನಂ.9742192989, ಸಿ.ಎಚ್.ಗಂಗಾಧರ್ ನಂ, 9845007131, ಸಿ.ಕೆ.ಹರೀಶ್ 9740179009, ಶ್ರೀನಿವಾಸ ಸಾಲ್ಕಟ್ಟೆ 9448748206 ಇವರುಗಳನ್ನು ಸಂಪಕರ್ಿಸಲು ಕೋರಲಾಗಿದೆ.