Wednesday, November 9, 2011


ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ
ಚಿಕ್ಕನಾಯಕನಹಳ್ಳಿ,ನ.09 : ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಇದೇ 10ರ ಗುರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್ ಉದ್ಘಾಟನೆ ನೆರವೇರಿಸಲಿದ್ದು ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲ ಅಧ್ಯಕ್ಷತೆ ವಹಿಸಲಿದ್ದು ಅಡಿಷನಲ್ ಸಿವಿಲ್ ನ್ಯಾಯಾಧೀಶರಾದ ಎ.ಜಿ.ಶಿಲ್ಪಾ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಸಹಾಯಕ ಸಕರ್ಾರಿ ಅಭಿಯೋಜಕರಾದ ಕೆ.ಎಲ್.ಭಾಗ್ಯಲಕ್ಷ್ಮೀ,  ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದಶರ್ಿ ರಾಜಶೇಖರಪ್ಪ ಹಾಗೂ ವಿವಿಧ ಸೇವಾ ಕೇಂದ್ರದ  ವಕೀಲರುಗಳು ಉಪಸ್ಥಿತರಿರುವರು.

ಸಿ.ಬಿ.ಎಸ್ ಹುಟ್ಟುಹಬ್ಬದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಹಾಗೂ ಆರೋಗ್ಯ ತಪಾಸಣಾ ಶಿಬಿರ 
ಚಿಕ್ಕನಾಯಕನಹಳ್ಳಿ,ನ.09 : ಸಿ.ಬಿ.ಸುರೇಶ್ಬಾಬುರವರ 41ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ಫೆ.16 2012ರಂದು ಉಚಿತ ಸಾಮೂಹಿಕ ವಿವಾಹ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು ಎಂದು ಸುರೇಶ್ಬಾಬು ಅಭಿಮಾನಿ ಬಳಗ ತಿಳಿಸಿದೆ.
ಪಟ್ಟಣದ ಪುರಸಭಾ ಸಭಾ ಭವನದಲ್ಲಿ ಏರ್ಪಡಿಸಿದ್ದ ಸುರೇಶ್ಬಾಬುರವರ ಜನ್ಮದಿನಾಚಾರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಅಂಗವಿಕಲ, ಅಂತಜರ್ಾತಿ, ವಿಧವಾ ವಿವಾಹವಾಗುವರಿಗೆ ವಿಶೇಷ ಆಧ್ಯತೆ ನೀಡಲಾಗುವುದು, ಹಾಗೂ 500ಕ್ಕೂ ಹೆಚ್ಚಿನ ಜೋಡಿಗಳಿಗೆ ವಿವಾಹ ನಡೆಸಲು ತಿಮರ್ಾನಿಸಲಾಗಿದ್ದು  ತಾಲ್ಲೂಕಿನ ಗ್ರಾ.ಪಂ. ಹಾಗೂ ತಾ.ಪಂ ಸದಸ್ಯರುಗಳು, ವಿವಾಹವಾಗಲಿಚ್ಚಿಸುವವರಿಗೆ ಕರೆತಂದು ಪ್ರೋತ್ಸಾಹಿಸಲು ಕರೆ ನೀಡಿದ ಅವರು ಅಭಿಮಾನಿ ಬಳಗ ಉಚಿತ ಸಾಮೂಹಿಕ ವಿವಾಹ ಹಾಗೂ ಆರೋಗ್ಯ ಶಿಬಿರ ನಡೆಸಲು ಇಚ್ಚಿಸಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆರವರು ವಿಶೇಷ ಆಹ್ವಾನಿತರಾಗಿರುವರು ಹಾಗೂ ಎಲ್ಲಾ ಸಮುದಾಯದ ಸ್ವಾಮೀಜಿಗಳನ್ನು ಆಹ್ವಾನಿಸಿ ವಧುವರರಿಗೆ ಆಶೀರ್ವಚನ ಕೊಡಿಸಲಾಗುವುದು. ಉಚಿತ ಸಾಮೂಹಿಕ ವಿವಾಹಕ್ಕೆ ಸಿದ್ದತೆಗೊಳ್ಳಲು ಅನುಕೂಲವಾಗಲು ಮೂರು ತಿಂಗಳ ಮುಂಚಿತವಾಗಿಯೇ ಮಾಹಿತಿ ನೀಡಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.
ಸಭೆಯಲ್ಲಿ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು. ತಾ.ಪಂ, ಗ್ರಾ.ಪಂ.ಸದಸ್ಯರು, ಮುಖಂಡರು, ಸಮಾಜಸೇವಕರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿಗೆ ಇಂದು ಸಚಿವ ವತರ್ೂರು ಪ್ರಕಾಶ್ ಆಗಮನ
ಚಿಕ್ಕನಾಯಕನಹಳ್ಳಿ,ನ.09 : ಕೇಂದ್ರ ಪುರಸ್ಕೃತ ಸಮಗ್ರ ಕೈಮಗ್ಗ ಅಭಿವೃದ್ದಿ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಹಾಗೂ  ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿಲು ಜವಳಿ ಸಚಿವ ವತರ್ೂರು ಪ್ರಕಾಶ್ ಚಿ.ನಾ.ಹಳ್ಳಿ ಪಟ್ಟಣದ ಕನಕ ಭವನಕ್ಕೆ ಇಂದು ಆಗಮಿಸಲಿದ್ದಾರೆ.