Tuesday, July 3, 2012ತಾಲ್ಲೂಕು  ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ತವರೂರು
ಚಿಕ್ಕನಾಯಕನಹಳ್ಳಿ,ಜು.03 :  ತಾಲ್ಲೂಕು  ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ತವರೂರಾಗಿದ್ದು ಇವುಗಳ ಅಭಿವೃಧ್ಧಿಗೆ ಸಂಘ ಸಂಸ್ಥೆಗಳು ಹೆಚ್ಚು ಗಮನ ಹರಿಸಿ ಎಂದು  ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲಿ  ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂದಿನ ವರ್ಷದಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು ಕನ್ನಡ ಸಂಘದ ವೇದಿಕೆಯಲ್ಲಿ ನೆಡೆಸಲಾಗುವುದು ಎಂದರು.
ಸಮಾರಂಭದ ಉದ್ಗಾಟನೆಯನ್ನು ಅನ್ನಪೂಣರ್ೇಶ್ವರಿ ಕಲಾ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ನೆರೆವೆರಿಸಿದರು.
ಕಾರ್ಯಕ್ರಮದಲ್ಲಿ ಕೋ-ಅಪರೇಟಿವ್ ಬ್ಯಾಂಕ್ ಅದ್ಯಕ್ಷ ಸಿ ಎಸ್ ನಟರಾಜ್ , ಪುರಸಬಾದ್ಯಕ್ಷ ದೊರೆ ಮುದ್ದಯ್ಯ, ಕರವೇ ಅಧ್ಯಕ್ಷ ಸಿ ಟಿ ಗುರುಮೂತರ್ಿ, ಪುರಸಭಾ ಸದಸ್ಯ ಎಂ ಎನ್ ಸುರೇಶ್, ಜಿ.ಪಂ. ಸದಸ್ಯೆ ಜಾನಮ್ಮ ರಾಮಚಂದ್ರಯ್ಯ ,ತಾ.ಪಂ. ಸದಸ್ಯೆ ಚೇತನ್ ಗಂಗಾಧರ್ ಮುಂತಾದವರಿದ್ದರು.
ಜೂನಿಯರ್ ಸಿಂಗಲ್ಸ್ನಲ್ಲಿ ಹರಿಹರದ ಹರ್ಷಪಚ್ಚಿ ಪ್ರಥಮ ಸ್ಥಾನ, ರಾಯಚೂರು ಬಿಷಾ ದ್ವಿತೀಯ ಸ್ಥಾನ , ಜಾವಗಲ್ ರೂಪ ತೃತೀಯ ಸ್ಥಾನ ಪಡೆದರು.
ಸೀನಿಯರ್ ಸಿಂಗಲ್ಸ್  ತುಮಕೂರು ಸಂಸ್ಕ್ರುತಿ ಪ್ರಥಮ ಸ್ಥಾನ, ಬೆಂಗಳೂರಿನ ಪ್ರಶಾಂತ್ ದ್ವಿತೀಯ , ತುಮಕೂರು ಮನೋಜ್ ಕುಮಾರ್ ತೃತೀಯ ಸ್ಥಾನ ಪಡೆದರು.
   ಜೂನಿಯರ್ ಗ್ರೂಪ್ಸ್ ನಲ್ಲಿ ಭಟ್ಕಳದ ಸಾಗರ್ ಡ್ಯಾನ್ಸ್ ಗ್ರೂಪ್ ಪ್ರಥಮ ಸ್ಥಾನ, ಬೆಂಗಳೂರಿನ ದೀಶ ತಂಡ ದ್ವಿತೀಯ ,ಮಡಿಕೇರಿ ಗ್ರೂಪ್ಸ್ ಮೂರನೇ ಸ್ಥಾನ.
   ಹಿರಿಯರ ವಿಭಾಗದಲ್ಲಿ ಉಡುಪಿಯ ಸಾಗರ್ ಗೇಮ್ ಪ್ರಥಮ ಸ್ಥಾನ , ಆನೇಕಲ್ನ ನ್ಯೂ ಸ್ಟೀರೀಸ್ ತಂಡ ದ್ವಿತೀಯ ಸ್ಥಾನ , ಕೊಡಗು ಕೂರಗಿ ಫೈಲ್ ತೃತಿಯ ಸ್ಥಾನ ಪಡೆದರು.
ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಲ್ಲಿ 150 ತಂಡಗಳು ಭಾಗವಹಿಸಿದ್ದವು.


ಸಕರ್ಾರ ಮಲ ಹೊರುವ ಪದ್ದತಿಯನ್ನು ತಡೆಗಟ್ಟಲು  ನೂತನವಾಗಿ ಸೆಪ್ಟಿಕ್ ಟ್ಯಾಂಕರ್ ಯೋಜನೆ
ಚಿಕ್ಕನಾಯಕನಹಳ್ಳಿ,ಜು.02 : ಸಕರ್ಾರ ಮಲ ಹೊರುವ ಪದ್ದತಿಯನ್ನು ತಡೆಗಟ್ಟಲು  ನೂತನವಾಗಿ ಸೆಪ್ಟಿಕ್ ಟ್ಯಾಂಕರ್ ಬಳಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಇದನ್ನು ಪಟ್ಟಣದಲ್ಲಿ ಪುರಸಭಾ ವ್ಯಾಪ್ತಿಗೆ ಬರುವ ಎಲ್ಲಾ ವಾಡರ್್ಗಳ ಜನಸಾಮಾನ್ಯರು ಬಳಸಲು ಇಂದು ಚಾಲನೆ ನೀಡಲಾಗಿದೆ ಎಂದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ತಿಳಿಸಿದರು.
ನೂತನವಾಗಿ ಬಂದಿರುವ ಸೆಪ್ಟಿಕ್ ಟ್ಯಾಂಕರ್ 6.5ಲಕ್ಷದ್ದಾಗಿದ್ದು, ಈ ಟ್ಯಾಂಕರ್ 3ಸಾವಿರ ಲೀಟರ್ ನೀರು ತುಂಬವಷ್ಟು ಸಾಮಥ್ರ್ಯ ಹೊಂದಿದೆ, ಇದನ್ನು ಸಾರ್ವಜನಿಕರು ಬಾಡಿಗೆ ಆಧಾರದ ಮೇಲೆ ಪಡೆಯಬಹುದಾಗಿದ್ದು ಅದಕ್ಕಾಗಿ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ನೂತನ ಸೆಪ್ಟಿಕ್ ಟ್ಯಾಂಕರ್ನ್ನು ಸಾರ್ವಜನಿಕರು ಬಾಡಿಗೆ ಆಧಾರದ ಮೇಲೆ  ಬಳಸಿಕೊಳ್ಳಲು ಮುಕ್ತಗೊಳಿಸುವ  ಕಾರ್ಯಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಂ.ರಂಗಸ್ವಾಮಿಯ್ಯ, ಸದಸ್ಯ ಸಿ.ಎಸ್.ರಮೇಶ್, ಸಿ.ಪಿ.ಮಹೇಶ್, ಬಾಬುಸಾಹೇಬ್, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ ಶೆಟ್ಟಿ ಸೇರಿದಂತೆ ಹಲವರು ಹಾಜರಿದ್ದರು. 
2012-13ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ 37ನೇ ಪದವಿ ಸ್ವೀಕಾರ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.03 : 2012-13ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ 37ನೇ ಪದವಿ ಸ್ವೀಕಾರ ಸಮಾರಂಭವನ್ನು ಇದೇ 8ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದು ಚಲನಚಿತ್ರ ಸಾಹಿತಿ ಸಿ.ವಿ.ಶಿವಶಂಕರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಡಿಸ್ಟ್ರಿಕ್ಟ್ ಟ್ರೈನರ್ ಜಿಲ್ಲಾ ಗವರ್ನರ್ ಪಿಡಿಜಿ ರೊ.ಯು.ಬಿ.ಭಟ್ ಪದವಿ ಪ್ರದಾನ, ಹೊಸ ಸದಸ್ಯರ ಸೇರ್ಪಡೆ, ಸನ್ಮಾನ ಹಾಗೂ ಎಸ್.ಎ.ನಭಿ ಜ್ಞಾಪಕಾರ್ಥ ರೋಟರಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಲಿದ್ದು ಗ್ರೂಪ್-1 ಅಸಿಸ್ಟೆಂಟ್ ಗವರ್ನರ್ ಬಿಳಿಗೆರೆ ಶಿವಕುಮಾರ್ ರೋಟರಿ ಪತ್ರಿಕೆ ನಾಯಕ ಬಿಡುಗಡೆ ಮಾಡಲಿದ್ದು 319ರ ಅಸೋಸಿಯೇಷನ್ ಪ್ರೆಸಿಡೆಂಟ್ ಶೈಲಜ ಭಟ್ ಸೇವಾಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಡಾ.ಬಿ.ಎಸ್.ರವೀಂದ್ರ, ಎಚ್.ಎಸ್.ಶಾಮಸುಂದರ್, ಎಚ್.ಎನ್.ಸುರೇಶಕುಮಾರ, ರಮೇಶಬಾಬು, ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಎಸ್.ಜಗದೀಶಯ್ಯ, ಸಿ.ಎಸ್.ಚಂದ್ರಶೇಖರ್, ಸಿ.ಎಂ.ಮುದ್ದುಕುಮಾರ್ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.