Saturday, May 4, 2013



ಅಕ್ರಮ ಮರಳು ಸಾಗಾಣಿಕೆ: ಗ್ರಾಮಸ್ಥರಿಂದ  ದಿಬಂಧನ
 
ಚಿಕ್ಕನಾಯಕನಹಳ್ಳಿ,ಮೇ.3 : ಚುನಾವಣಾ ಗಲಾಟೆಯಲ್ಲಿ ಎಲ್ಲರೂ ಮತಪ್ರಚಾರ ಕಾರ್ಯದಲ್ಲಿ ತೊಡಗಿರುತ್ತಾರೆ, ಇದೇ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ವ್ಯಕ್ತಿಯೊಬ್ಬ ಕೆರೆಯಲ್ಲಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ತಮ್ಮ ತೋಟಕ್ಕೆ ರಾಶಿರಾಶಿ ಮರಳನ್ನು ದಾಸ್ತಾನು ಮಾಡಿದ್ದನ್ನು ಕಂಡ ಗ್ರಾಮಸ್ಥರು ಈ ಕೃತ್ಯವನ್ನು ಗಮನಿಸಿ ಮಾಧ್ಯಮದವರಿಗೆ ಸಾಕ್ಷಿ ಸಮೇತವಾಗಿ ಹಿಡಿದುಕೊಟ್ಟ ಘಟನೆ ಕಾಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಡೇನಹಳ್ಳಿ  ಕೆರೆಯಲ್ಲಿ ನರಸಿಂಹಮೂತರ್ಿ ಎಂಬ ವ್ಯಕ್ತಿ ಜೆಸಿಬಿಯಿಂದ ಮರಳನ್ನು ಎತ್ತೊಯ್ದು ತಮ್ಮ ಸ್ವಂತ ತೋಟದ ಸುಮಾರು ನೂರು ತೆಂಗಿನ ಮರಗಳ ಬದಿಯಲ್ಲಿ ಮರಳ ರಾಶಿಯನ್ನು ಅಕ್ರಮವಾಗಿ ಮಾಡಿಕೊಂಡಿದ್ದ ಮರಳನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ಸಾಕ್ಷಿ ಸಮೇತವಾಗಿ ಮಾಧ್ಯಮದವರಿಗೆ ತೋರಿಸಿದರು.
ಈ ಸಂದರ್ಭದಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ನರಸಿಂಹಮೂತರ್ಿ ಮತ್ತು ಗ್ರಾಮಸ್ಥರಲ್ಲಿ ಮಾತಿನ ಚಕಮಕಿ ನಡೆಯುತ್ತಿತ್ತು. ಆಗ ಗ್ರಾಮಸ್ಥರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಯಾರು ಇಲ್ಲದ ಸಂದರ್ಭವನ್ನು ಕಾಯ್ದಿದ್ದು ಬೆಳಗಿನ 10ರಿಂದ ಸಂಜೆ 3ರವರೆಗೆ ನಿರಂತರವಾಗಿ ಅಕ್ರಮವಾಗಿ ಮರಳನ್ನು ತಮ್ಮ ತೋಟದಲ್ಲಿ ಸಂಗ್ರಹ ಮಾಡಿ ನಿಧಾನವಾಗಿ ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ಅಕ್ರಮವಾಗಿ ತಮ್ಮ ತೋಟದಲ್ಲಿ ಸಂಗ್ರಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
 ಈ ವಿಚಾರವನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಸುಮಾರು ಐವತ್ತು ಲೋಡಿನಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಘಟನೆ ಬೆಳಕಿಗೆ ಬಂದಿತು.
ಈ ಸಂದರ್ಭ ನರಸಿಂಹಮೂತರ್ಿಯವರು ಈ ವಿಚಾರವನ್ನು ತಳ್ಳಿ ಹಾಕಿ ನಾನು ತೋಟಕ್ಕೆ ಮಣ್ಣು ಹೊಡೆಯುವ ಉದ್ದೇಶದಿಂದ ಮರಳು ಮಿಶ್ರಿತ ಮಣ್ಣನ್ನು ತೋಟಕ್ಕೆ ಹೊಡೆದಿದ್ದೇನೆ ಯಾವುದೇ ಕಾರಣಕ್ಕೂ ಅಕ್ರಮ ಮರಳು ಸಾಗಾಣಿಕೆ ಮಾಡಿಲ್ಲ ಎಂದು ಗ್ರಾಮಸ್ಥರ ಮಾತನ್ನು ತಿರಸ್ಕರಿಸಿದರು. 
ಅದೇ ಸಂದರ್ಭಕ್ಕೆ ಸ್ಥಳಕ್ಕಾಗಮಿಸಿದ ಕಸಬಾ ಹೋಬಳಿಯ ಕಾರ್ಯದಶರ್ಿಹನುಮಂತನಾಯಕ್ರವರು ಸ್ಥಳ ಪರಿಶೀಲನೆ ಮಾಡಿ ನಡೆದಿರುವ ಘಟನೆಯನ್ನು ವೀಕ್ಷಿಸಿ ಈ ಅಕ್ರಮ ದಂಧೆಗೆ ಬಳಸಿದ ಜೆಸಿಬಿಯನ್ನು ಹಾಗೂ ಮರಳು ದಂಧೆಯ ವಿಚಾರವನ್ನು ತಹಶೀಲ್ದಾರ್ರವರಿಗೆ ದೂರು ಸಲ್ಲಿಸುತ್ತೇನೆಂದು ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮದ ಪ್ರತ್ಯಕ್ಷದಶರ್ಿಗಳಾದ ನವೀನ್, ಪ್ರತಾಪ್, ಶರತ್, ಗೋವಿಂದಯ್ಯ, ಕೋದಂಡರಾಮಯ್ಯ, ರುದ್ರಪ್ಪ, ಮೂರ್ತಣ್ಣ ಮುಂತಾದವರಿದ್ದರು.
 ಇದೇ ರೀತಿ ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಅಂತರ್ಜಲ ಕುಸಿದಿದೆ, ಈ ದಂಧೆಯ ಬಗ್ಗೆ ಗ್ರಾ.ಪಂ.ಕಾರ್ಯದಶರ್ಿಗಳು, ಪೋಲಿಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಕಂಡೂ ಕಾಣದಂತೆ ಜಾಣಕುರುಡನ್ನು ಪ್ರದಶರ್ಿಸುತ್ತಿದೆ ಎಂದು ಜನರು ದೂರಿದರು.

ಚಿ.ನಾ.ಹಳ್ಳಿ: 258 ಮತಗಟ್ಟೆಗಳಿಗೆ 1032 ಜನ ಚುನಾವಣಾ ಸಿಬ್ಬಂದಿ: ಆರ್.ಓ. ಇ.ಪ್ರಕಾಶ್
ಚಿಕ್ಕನಾಯಕನಹಳ್ಳಿ,ಮೇ.4 : ವಿಧಾನಸಭಾ ಕ್ಷೇತ್ರದಲ್ಲಿನ  258 ಮತಗಟ್ಟೆಯಲ್ಲಿ 44 ಸೂಕ್ಷ್ಮ, 38 ಅತಿಸೂಕ್ಷ್ಮ ಮತಗಟ್ಟೆಗಳಿದ್ದು ಶಾಂತಿಯುತ ಮತದಾನಕ್ಕಾಗಿ 1032 ಚುನಾವಣಾ ಸಿಬ್ಬಂದಿ, 379 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಇ.ಪ್ರಕಾಶ್ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರದಾದ್ಯಂತ ಚುನಾವಣಾ ಕಾರ್ಯಕ್ಕಾಗಿ ಸಿಬ್ಬಂದಿಗಳನ್ನು ವಾಹನಗಳಲ್ಲಿ  ಸಂಬಂಧಪಟ್ಟ ಮತಗಟ್ಟೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಚುನಾವಣಾ ಸಿಬ್ಬಂದಿಯು ತುಮಕೂರು ಗ್ರಾಮಾಂತರ, ತುರುವೇಕೆರೆ, ತಿಪಟೂರು ತಾಲ್ಲೂಕುಗಳಿಂದ ನಮ್ಮ ಕ್ಷೇತ್ರಕ್ಕೆ ನಿಯೋಜಿಸಲಾಗಿದೆ. ಕ್ಷೇತ್ರದಾದ್ಯಂತ 1244 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದು ಅದರಲ್ಲಿ 212ಮಂದಿ ಚುನಾವಣಾ ಸಿಬ್ಬಂದಿಯನ್ನು ಕಾಯ್ದಿರಿಸಿದ್ದು 1032 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಹಾಗೂ  ಒಟ್ಟು 45 ವಾಹನಗಳನ್ನು ಬಳಸಿದ್ದು ಅವುಗಳಲ್ಲಿ 36 ಬಸ್ಸುಗಳು, 2ಮಿನಿಬಸ್ ಹಾಗೂ 7ಜೀಪ್ಗಳನ್ನು ಏಪರ್ಾಟು ಮಾಡಲಾಗಿದೆ. 
ಕ್ಷೇತ್ರದಲ್ಲಿ 258 ಮತಗಟ್ಟೆಗಳಿಗೆ 22ಜನ ಸೆಕ್ಟ್ರಲ್ ಆಫೀಸ್ರ್ಗಳನ್ನು ನೇಮಿಸಲಾಗಿದೆ. ಪ್ರತಿಯೊಬ್ಬ ಸೆಕ್ಟ್ರಲ್ ಆಫೀಸರ್ 10ರಿಂದ 12 ಬೂತ್ಗಳ ಮೇಲ್ವಿಚಾರಣೆ ವಹಿಸಿದ್ದಾರೆ ಹಾಗೂ ಚುನಾವಣಾ ಅಕ್ರಮವನ್ನು ತಡೆಯಲು 12 ತನಿಖಾ ದಳಗಳಿದ್ದು ಕ್ಷೇತ್ರದಾದ್ಯಂತ ಎಲ್ಲಾ ಪಂಚಾಯತ್ ಮಟ್ಟದ ವಿಭಾಗಗಳನ್ನು ಮಾಡಿ ಒಂದೊಂದು ವಿಭಾಗಗಳಲ್ಲಿ ಒಂದೊಂದು ತನಿಖಾದಳವನ್ನು ನೇಮಿಸಲಾಗಿದೆ ಎಂದರು. ಯಾವುದೇ ಚುನಾವಣಾ ಅಕ್ರಮಗಳು ನಡೆದಲ್ಲಿ ತನಿಖಾದಳು ವಿಷಯದ ತಿಳಿಸಿದ 15ನಿಮಿಷದಲ್ಲಿ ಹಾಜರಿರುತ್ತಾರೆಂದು ಚುನಾವಣಾಧಿಕಾರಿ ಇ.ಪ್ರಕಾಶ್ ಮಾಧ್ಯಮದವರಿಗೆ ತಿಳಿಸಿದರು. 
ವೃತ್ತ ನಿರೀಕ್ಷಕರಾದ ಕೆ.ಪ್ರಭಾಕರ್ರವರು ಪೋಲಿಸ್ ಸಿಬ್ಬಂದಿಯ ನಿಯೋಜನೆ ಬಗ್ಗೆ ತಿಳಿಸಿ, ಚುನಾವಣಾ ಕಾರ್ಯಕ್ಕಾಗಿ 2 ಸಿಪಿಐ, 7ಪಿಎಸ್ಐ, 15ಎ.ಎಸೈ, 47ಹೆಡ್ಕಾನ್ಸೇಟಬಲ್, 106ಪಿಸಿಗಳನ್ನು, 10ಹೋಮ್ಗಾಡ್ಸರ್್ ಹಾಗೂ 84 ಸಿಐಎಸ್ಎಫ್ಗಳನ್ನು ನಿಯೋಜಿಸಲಾಗಿದೆ ಒಟ್ಟಾರೆಯಾಗಿ ತಾಲ್ಲೂಕಿನಾದ್ಯಂತ 379 ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.