Tuesday, April 8, 2014

ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ : ಮಾಳವಿಕ ಅವಿನಾಶ್

ಚಿಕ್ಕನಾಯಕನಹಳ್ಳಿ,ಏ.07 : ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಅನುಕೂಲವಾಗುವಂತಹ  ಅಡುಗೆ ಅನಿಲ, ಶೌಚಾಲಯ ಬಳಕೆ, ವಿದ್ಯುತ್, ನೀರು, ಶಾಲಾ ಮಟ್ಟದಲ್ಲಿಯೇ ಮಹಿಳೆಯರಿಗೆ ತಮ್ಮ ಆತ್ಮ ರಕ್ಷಣೆಗೆ ತರಬೇತಿ, ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುವವರಿಗೆ ವಿಶೇಷ ಯೋಜನೆ ಸೇರಿದಂತೆ ಇನ್ನಿತರ ಹಲವು ಜನಪರ ಕಾರ್ಯಕ್ರಮಗಳಿಗೆ  ವಿಶೇಷ ಆದ್ಯತೆ ನೀಡಿದೆ ಎಂದು ಕಿರುತರೆ ಚಿತ್ರನಟಿ ಮಾಳವಿಕ ಅವಿನಾಶ್ ಹೇಳಿದರು. 
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಬಿಜೆಪಿ ಮಹಿಳೆಯರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬದುಕು ಜಟಕಾಬಂಡಿ ಕಾರ್ಯಕ್ರಮದ ಮೂಲಕ ಹಲವು ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ, ಅದೇ ರೀತಿ ದೇಶಾದ್ಯಂತ ಮಹಿಳೆಯರ ಸಮಸ್ಯೆ ನಿವಾರಿಸಲು ನರೇಂದ್ರಮೋದಿ ಗುಜರಾತ್ನಲ್ಲಿ ಜಾರಿಗೆ ತಂದಿರುವ 'ಬೇಟಿಬಚಾವ್ ನಾರಿಅದಾಲತ್' ಕಾರ್ಯಕ್ರಮ, ಮಹಿಳೆಯರ ಸಮಸ್ಯೆಯನ್ನು ತಾಲ್ಲೂಕು ಮಟ್ಟದಲ್ಲಿ ಬಗೆಹರಿಸುವ ಕಾರ್ಯಕ್ರಮವನ್ನು ರಾಷ್ಟ್ರಾದ್ಯಂತ ಜಾರಿಗೆ ತರಲು ನರೇಂದ್ರಮೋದಿ ದೇಶದಲ್ಲಿ ಪ್ರಧಾನಿಯಾಗಬೇಕು, ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಅತ್ಯಾಚಾರ ಪ್ರಕರಣ ಹಾಗೂ ರಾಷ್ಟ್ರಾದ್ಯಂತ ಇರುವ ಭ್ರಷ್ಠಾಚಾರವನ್ನು ತೊಲಗಿಸಲು ಬಿಜೆಪಿ ಸಕರ್ಾರದ ನರೇಂದ್ರಮೋದಿ ಪ್ರಧಾನಮಂತ್ರಿಯಾಗಲೇ ಬೇಕು ಎಂದರಲ್ಲದೆ ಎಲ್ಲಾ ಜನಾಂಗಕ್ಕೂ ಅನುಕೂಲವಾಗುವಂತಹ ಭಾಗ್ಯಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸಕರ್ಾರ ರಾಜ್ಯದಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರೆಂದು ನಮ್ಮಗಳ ಮಧ್ಯೆ ಭೇದ ತರುತ್ತಿದ್ದಾರೆ ಎಂದರು.
ದೆಹಲಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರವಾದರೂ ಪ್ರದಾನಮಂತ್ರಿ ಮನಮೋಹನಸಿಂಗ್ ಮಾತನಾಡದೆ ಮೌನಮೋಹನಸಿಂಗ್ ರೀತಿಯಿದ್ದರು ಅಲ್ಲದೆ ರಾಜ್ಯದಲ್ಲಿ ಇದೇ ಪ್ರಕರಣ ಮುಂದುವರೆದಾಗ ರಾಜ್ಯದ ಮುಖ್ಯಮಂತ್ರಿಯೂ ಮೌನ ವಹಿಸಿದ್ದರು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಹೆಣ್ಣುಮಕ್ಕಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲು ಕೇಂದ್ರದಲ್ಲಿ ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬರಬೇಕಿದೆ ಎಂದರು.
ಬಿ.ಜೆ.ಪಿ.ಯಾ ಸೋಷಿಯಲ್ ಮೀಡಿಯಾ ವಕ್ತಾರೆ ಲತಾ ಭಾರಧ್ವಾಜ್ ಮಾತನಾಡಿ, ರಾಜ್ಯದಲ್ಲಿ 236 ಲಕ್ಷ ಮಹಿಳಾ ಮತದಾರರಿದ್ದಾರೆ, ಇಷ್ಟು ಜನ ಸಂಖ್ಯೆ ಇರುವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಶೇ33% ರಷ್ಟು ನೀಡುತ್ತಿದ್ದೇವೆ ಎಂದು ಮೋದಿ, ಮಹಿಳಾ ದಿನಾಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಹೆಣ್ಣು ಮಕ್ಕಳಿಗೆ ಬಿಜೆಪಿ ಪಕ್ಷ ಹೆಚ್ಚು ಗೌರವ ನೀಡುತ್ತದೆ, ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಹೆಣ್ಣುಮಕ್ಕಳ ಅಭಿವೃದ್ದಿಗೆ ಶ್ರಮಿಸಿದೆ, ಶೇ 50%ರಷ್ಟು ಮೀಸಲಾತಿ ನೀಡಿದೆ, ಹೆಣ್ಣು ಮಕ್ಕಳು ತಮ್ಮ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಪ್ರಚಾರ ಮಾಡಿ ಅಭ್ಯಥರ್ಿ ಜಿ.ಎಸ್.ಬಸವರಾಜು ಗೆಲುವಿಗೆ ಶ್ರಮಿಸಿ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ತಮ್ಮ ರಾಜಕೀಯ ಜೀವನದಲ್ಲಿ ಅತ್ಯಂತ ಬದ್ಧತೆಯ ಸಂಸತ್ ಪಟುಗಳಾಗಿ ಅಟಲ್ ಬಿಹಾರಿ ವಾಜಪೇಯಿ ಎಲ್.ಕೆ.ಅಡ್ವಾಣಿಯವಂತಹವರ ಜೊತೆಯಲ್ಲಿ ಕೆಲಸ ಮಾಡಿದ್ದೇನೆ, ಯುಪಿಯ ಸಕರ್ಾರದಲ್ಲಿ 7.5ಲಕ್ಷ ಕೋಟಿ ರೂ ಹಗರಣ ನಡೆದಿದ್ದರೂ ನಮ್ಮ ಪ್ರಧಾನಮಂತ್ರಿಗಳು ಚಕಾರವೆತ್ತುತ್ತಿಲ್ಲ 2ಜಿ ಹಗರಣ 2.75ಲಕ್ಷ ಕೋಟಿ, ಕಲ್ಲಿದ್ದಲೂ ಹಗರಣ 1.75 ಲಕ್ಷ ಕೋಟಿ 25ಸಾವಿರ, ಕಾಮನ್ವೆಲ್ತ್ ಹಗರಣದಲ್ಲಿ ಮಂತ್ರಿಗಳು,ಅಧಿಕಾರಿಗಳು ಭಾಗಿಯಾಗಿರುತ್ತಾರೆ ಇದರಿಂದ ಕೆಲವರು ಕೇಂದ್ರ ಮಂತ್ರಿಗಳು ಜೈಲಿಗೂ ಹೋಗಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ದೇಶ ರಕ್ಷಣೆಗೆ ಬಿಜೆಪಿ ಬದ್ಧವಾಗಿದ್ದು ಪಾಕಿಸ್ತಾನ ನಮ್ಮ ದೇಶದ ಮೇಲೆ ನಿರಂತರ ದಾಳಿ ನಡೆಸಿ ನಮ್ಮ ಸೈನಿಕರ ಹತ್ಯೆ ಮಾಡುತ್ತಿದ್ದರೂ ಇದರ ಬಗ್ಗೆ ಪ್ರಧಾನಮಂತ್ರಿಗಳಾಗಲಿ, ಗೃಹ ಸಚಿವರಾಗಲಿ ನಮ್ಮ ಸೈನಿಕರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಿಲ್ಲ ಎಂದು ವಿಷಾಧಿಸಿದ ಅವರು, ನೀರಾವರಿ ಸಲುವಾಗಿ ನಡೆಸುತ್ತಿರುವ ಹೋರಾಟದಲ್ಲಿ ಜಿ.ಎಸ್.ಬಸವರಾಜು, ಕಂದಿಕೆರೆ, ಹಂದನಕೆರೆಗಳಿಗೆ ನೀರು ತರಲು ಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಪ್ರೇಮಾಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕವಿತಾಕಿರಣ್ಕುಮಾರ್, ಕಾರ್ಯದಶರ್ಿ ನಾಗರತ್ನಮ್ಮ, ತಾಲ್ಲೂಕು ಅಧ್ಯಕ್ಷೆ ಮಾಲಾ, ರಾಜ್ಯ ಪ್ರಧಾನ ಕಾರ್ಯದಶರ್ಿ ನಂದೀಶ್,  ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ತಾ.ಪಂ.ಅಧ್ಯಕ್ಷ ಕೆಂಕೆರೆ ನವೀನ್, ಸದಸ್ಯ ಸೀತಾರಾಮಯ್ಯ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಮುಖಂಡರುಗಳಾದ ಮಿಲ್ಟ್ರಿಶಿವಣ್ಣ, ಶ್ರೀನಿವಾಸಮೂತರ್ಿ, ಬುಳ್ಳೇನಹಳ್ಳಿ ಶಿವಪ್ರಕಾಶ್ ಮುಂತಾದವರಿದ್ದರು.


ರಾಜ್ಯದಲ್ಲಿ ಬಿಜೆಪಿ ಸಕರ್ಾರ ಬಡವರ ಪರ ಕೆಲಸ ಮಾಡಲಿಲ್ಲ : ಎಂ.ಡಿ.ಲಕ್ಷ್ಮೀನಾರಾಯಣ್

ಚಿಕ್ಕನಾಯಕನಹಳ್ಳಿ,ಏ.07 : ರಾಜ್ಯದಲ್ಲಿ ಬಿಜೆಪಿ ಸಕರ್ಾರ ಆಡಳಿತ ನಡೆಸಿದಾಗ ಬಡವರ ಪರ ಕೆಲಸ ಮಾಡಲಿಲ್ಲ ಆದರೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸಕರ್ಾರ, ಜಾತಿಯತೆಯಲ್ಲಿ ಸಮಾನತೆ ತೋರಿಸುತ್ತಾ ಬಡವರ ಪರವಾಗಿ ಆಡಳಿತ ನಡೆಸುತ್ತಿದೆ, 1ರೂಗೆ 1ಕೆಜಿ ಅಕ್ಕಿಯ ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯ ಯೋಜನೆ ಸೇರಿದಂತೆ ನೇಕಾರರ ಸಮುದಾಯಕ್ಕೆ ವಿಶೇಷವಾಗಿ ಮೀಸಲು ಕಾರ್ಯಕ್ರಮಗಳು ಹಾಗೂ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗುತ್ತಿದೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದರು.
ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ದೇವಾಂಗ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೇರುವುದಕ್ಕೂ ಮುನ್ನ ಯಡಿಯೂರಪ್ಪನವರಿಗೆ 30ದಿನದೊಳಗೆ 15ಪ್ರಶ್ನೆಗೆ ಉತ್ತರ ನೀಡುವಂತೆ ತಿಳಿಸಿದ್ದೆನು ಆದರೆ ಅವರು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲವಾದ್ದರಿಂದ  ಹಾಗೂ ಕಾಂಗ್ರೆಸ್ ಪಕ್ಷ ಬಡವರ ಪರ ಕೆಲಸ ಮಾಡುತ್ತಿರುವ ತತ್ವ ಆದರ್ಶಗಳನ್ನು ನಂಬಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದಾಗಿ ಹೇಳಿದರಲ್ಲದೆ, ರಾಜ್ಯದಲ್ಲಿ ನರೇಂದ್ರಮೋದಿಯ ಹವಾ ಎದ್ದಿರುವುದು ಕೃತಕವಾಗಿದ್ದು ಬಿಜೆಪಿ ಪಕ್ಷ ವೈಟ್ಕಾಲರ್ ಪಕ್ಷವಾಗಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಮುಖಂಡರುಗಳಾದ ಸಿ.ಬಸವರಾಜು, ಚಂದ್ರಶೇಖರ್, ಕೆ.ಜಿ.ಕೃಷ್ಣೆಗೌಡ, ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಘನ್ನಿಸಾಬ್, ರೇವಣ್ಣ ಒಡೆಯರ್ ಮುಂತಾದವರು ಉಪಸ್ಥಿತರಿದ್ದರು.