Wednesday, July 6, 2016



ವನಮಹೋತ್ಸವ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜು.06 : ಪಟ್ಟಣ, ಗ್ರಾಮ, ಹಳ್ಳಿಗಳಲ್ಲಿ ಮತ್ತಿತರ ರಸ್ತೆ ಬದಿ, ಊರಿನೊಳಗೆ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸಿದರೆ ನೆರಳಿನ ಜೊತೆಗೆ ಉತ್ತಮವಾದ ಮಳೆ, ಬೆಳೆ ಲಭಿಸಲಿದೆ ಎಂದು ತಾ.ಪಂ.ಸದಸ್ಯೆ ಶೈಲಾಶಶಿಧರ್ ಹೇಳಿದರು.
ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರವಿದ್ದರೆ ಉತ್ತಮವಾದ ಗಾಳಿ, ನೀರು, ಬೆಳಕು ದೊರಕುತ್ತದೆ, ಗಿಡ-ಮರಗಳನ್ನು ಬೆಳೆಸುವುದು ಇಲಾಖೆಯ ಜವಬ್ದಾರಿ ಮಾತ್ರವಲ್ಲ ಜಗತ್ತಿನ ಪ್ರತಿಯೊಬ್ಬರ ಕರ್ತವ್ಯ, ಶಾಲೆಗಳಲ್ಲಿ ಈಗಿನಿಂದಲೇ ಸಸಿಗಳನ್ನು ಬೆಳೆಸುವ ಅದರಿಂದ ಆಗುವ ಅನುಕೂಲಗಳು ತಿಳಿದರೆ ಪರಿಸರ ಉಳಿಸಲು ಅವರಲ್ಲಿ ಉತ್ತಮ ಪ್ರೇರೇಪಣೆ ದೊರಕಿದಂತಾಗುತ್ತದೆ ಎಂದ ಅವರು, ರೈತ ದೇಶದ ಬೆನ್ನೆಲುಬು ಅವರಿಲ್ಲದೆ ದೇಶಕ್ಕೆ ಅನ್ನ ನೀಡುವವೇ ಇಲ್ಲವಾಗುತ್ತಾರೆ, ರೈತರು ಒಂದೇ ಬೆಳೆ ಬೆಳೆಯುವುದರ ಬದಲು ಮಿಶ್ರ ಬೆಳೆ ಬೆಳೆಯಿರಿ, ಈಗಾಗಲೇ ತೆಂಗಿನ ಮರಗಳಿಗೆ ನುಸಿರೋಗ, ರಸ ಸೋರುವ ರೋಗ ಬರುತ್ತಿದೆ ಈ ಬಗ್ಗೆ ರೈತರು ವಿಜ್ಞಾನಿಗಳು, ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಮರಗಳನ್ನು ಉಳಿಸಿಕೊಳ್ಳಲು ಮುಂದಾಗಿ ಎಂದು ಸಲಹೆ ನೀಡಿದರು.
ಅರಣ್ಯ ಇಲಾಖಾಧಿಕಾರಿ ತಾರಕೇಶ್ವರಿ ಮಾತನಾಡಿ, ಜೀವ ಸಂಕುಲಕ್ಕೆ ಆಸರೆಯಾಗಿರುವ ಭೂಮಿ ಮಾನವನ ದುರಾಸೆಯಿಂದ ಜೈವಿಕ ಹಾಗೂ ಅಜೈವಿಕ ಘಟಕಗಳಲ್ಲಿ ಸಮತೋಲನೆ ತಪ್ಪಿ ಹೋಗುತ್ತಿದೆ, ಪರಿಸರ ವಿನಾಶದ ಅಂಚಿನಲ್ಲಿ ತಲುಪುತ್ತಿದೆ ರೈತರ ಬೆನ್ನೆಲುಬು ಎರೆಹುಳು ಮಣ್ಣಿನಲ್ಲಿ ಕಣ್ಮರೆಯಾಗಿದ್ದು ನಾವೆಲ್ಲರೂ ಜಾಗೃತರಾಗಿ ಅದಕ್ಕೆ ಗಿಡಮರಗಳ ಬೆಳೆಸಿ, ಸಂರಕ್ಷಿಸಿ ಹೊಸ ಕಾಡುಗಳನ್ನು ನಿಮರ್ಾಣ ಮಾಡಿ ನೀರು, ಗಾಳಿ, ಆಹಾರವನ್ನು ಶುದ್ದೀಕರಿಸಬೇಕು ಎಂದರು.
ಕಸಾಪ ಅಧ್ಯಕ್ಷೆ ಹಾಗೂ ಪರಿಸರ ತಜ್ಞೆ ಎನ್.ಇಂದಿರಮ್ಮ, ಗ್ರಾ.ಪಂ.ಅಧ್ಯಕ್ಷೆ ಲೋಕಮ್ಮ, ಮುಖ್ಯಶಿಕ್ಷಕ ಮೂಡಲಯ್ಯ ಮತ್ತಿತರರು ಭಾಗವಹಿಸಿದ್ದರು.

ಸಾಸಲು ಗ್ರಾಮದಲ್ಲಿ ನೂತನ ರೈತ ಸಂಘ
 
ಚಿಕ್ಕನಾಯಕನಹಳ್ಳಿ,ಜು.07 : ಪ್ರಧಾನಮಂತ್ರಿ ನರೇಂದ್ರಮೋದಿಯವರು ವಿದೇಶಗಳಿಂದ ಬಂಡವಾಳ ಹೂಡಿಕೆಗೆ ಒತ್ತು ಕೊಡುತ್ತಾರೆಯೇ ಹೊರತು ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದಶರ್ಿ ಕೆಂಕೆರೆ ಸತೀಶ್ ಆರೋಪಿಸಿದರು.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನೂತನ ರೈತ ಸಂಘದ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸ್ವತಂತ್ರ್ಯ ಬಂದಾಗಿನಿಂದಲೂ ಎಲ್ಲಾ ಸಕರ್ಾರಗಳು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾರೆಯೇ ಹೊರತು ರೈತರ ಬಗ್ಗೆ ಕಾಳಜಿ ಇಲ್ಲ, ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ರೈತರು ವಕ್ಕಲುತನದ ಬೆಲೆ, ಕೂಲಿನಾಲಿಗಳು ಹೆಚ್ಚಾದರೂ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ಸಿದ್ದರಾಮಯ್ಯನವರ ಸಕರ್ಾರ 3ವರ್ಷ ಕಳೆದರೂ ಸ್ವತಹ ಮುಖ್ಯಮಂತ್ರಿಗಳು ರೈತರಾದರೂ ರೈತರ ಬಗ್ಗೆ ಕಾಳಜಿ ಇಲ್ಲ, ಹೇಮಾವತಿ ನಾಲೆಯಿಂದ ತಾಲ್ಲೂಕಿಗೆ ನೀರು ಹರಿಸಲು 102 ಕೋಟಿ ರೂಪಾಯಿಗಳು ಬಿಡುಗಡೆಯಾದರೂ ಅಧಿಕಾರಿಗಳ, ರಾಜಕಾರಣಿಗಳ ನಿರ್ಲಕ್ಷದಿಂದ ಕಾಮಗಾರಿ ಕುಂಠಿತವಾಗಿದೆ ಎಂದರಲ್ಲದೆ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ, ಇದರ ವಿರುದ್ದ ರಾಜ್ಯಾದ್ಯಂತ ಬಂದ್ ಮಾಡಿದರೂ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಷಾಧಿಸಿದರು.
ಜಿಲ್ಲಾಧ್ಯಕ್ಷ ತಿಮ್ಲಾಪುರ ಶಂಕರಪ್ಪ ಮಾತನಾಡಿ, ಮಳೆ ಇಲ್ಲ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ, ಹೇಮಾವತಿ ನಾಲಾ ಕಾಮಗಾರಿ ಕುಂಠಿತಗೊಂಡಿದ್ದು ಇದರಿಂದ ತಾಲ್ಲೂಕಿನ ಜನ ನಗರಗಳಿಗೆ ಗುಳೇ ಹೋಗುತ್ತಿದ್ದಾರೆ ಆದ್ದರಿಂದ ಸಕರ್ಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗಧಿಪಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಲೋಕಣ್ಣ ಬಂಡಿಮನೆ, ದಭ್ಭೆಘಟ್ಟ ಜಗದಿಶ್,  ಮಲ್ಲಿಕಾಜರ್ುನಯ್ಯ, ಹೊನ್ನೇಬಾಗಗಿ ಉಮೇಶ್, ಸಾಸಲು ರೈತ ಸಂಘದ ಅಧ್ಯಕ್ಷ ಮರುಳಸ್ವಾಮಿ, ಪ್ರಕಾಶ್, ಕಾರ್ಯದಶರ್ಿ ಶಿವಾನಂದಯ್ಯ, ನಾಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಶನಿವಾರ ರೋಟರಿ ಕ್ಲಬ್ ಕಾರ್ಯಕ್ರಮ
  
ಚಿಕ್ಕನಾಯಕನಹಳ್ಳಿ,ಜು.06 : 41ನೇ ವರ್ಷದ ರೋಟರಿ ಸಂಭ್ರಮ ಮತ್ತು 41ನೇ ಪದವಿ ಪ್ರಧಾನ ಸಮಾರಂಭವನ್ನು ಜುಲೈ 9ರ ಶನಿವಾರ ಸಂಜೆ 6.40ಕ್ಕೆ ನಡೆಯಲಿದೆ ಎಂದು ನೂತನ ಅಧ್ಯಕ್ಷ  ದೇವರಾಜು(ಅನು) ತಿಳಿಸಿದರು.
ಪಟ್ಟಣದ ರೋಟರಿ ಕನ್ವೆಷನ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಚಿತ್ರದುರ್ಗದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ 3190ರ ಗವರ್ನರ್ ಪಿಡಿಜಿ ಎಂ.ಎನ್.ಸುರೇಶ್ ಪದವಿ ಪ್ರಧಾನ, ಹೊಸ ಸದಸ್ಯರ ಸೇರ್ಪಡೆ ಮಾಡಲಿದ್ದಾರೆ. ಹಿರೇಮಗಳೂರು ಕಣ್ಣನ್ ಶುಭಾಂಸನೆ ನುಡಿಯಲಿದ್ದು ಜಿಲ್ಲಾ 3190ರ ಜೋನಲ್ ಗವರ್ನರ್ ಹೆಚ್.ವಿ.ವೀರೇಶ್ ನಾಯಕ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ರೊ.ಜಿಲ್ಲಾ ಯೂತ್ ಸವರ್ಿಸ್ ಡೈರೆಕ್ಟರ್ ಸಿ.ಎಸ್.ಪ್ರದೀಪ್ಕುಮಾರ್, ಅಸಿಸ್ಟೆಂಟ್ ಗವರ್ನರ್ ಎ.ನಟರಾಜು ವಿವಿಧ ಸೇವಾಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
ರೋಟರಿ ಜಿಲ್ಲಾ 9190ರ ಹೆಚ್.ಆರ್.ಶ್ರೀನಾಥ್ಬಾಬು ಎಂ.ವಿ.ನಾಗರಾಜ್ರಾವ್ ಅವರ ಆತಂಕದ ಕ್ಷಣಗಳು ಕಾದಂಬರಿ ಬಿಡುಗಡೆ ಮಾಡಲಿದ್ದು ರೋಟರಿ ಎಜುಕೇಷನ್ ಟ್ರಸ್ಟ್ನ ಡಾ.ಸಿ.ಎಂ.ಸುರೇಶ್ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ 2015-16ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಪಟ್ಟಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಹಾಗೂ ತಾಲ್ಲೂಕಿನಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರೊಟೇರಿಯನ್ಗಳಾದ ಕೆ.ಪ್ರಕಾಶ್, ಎಂ.ವಿ.ನಾಗರಾಜ್ರಾವ್, ಪ್ರಸನ್ನ, ಜಯದೇವ್, ಎಮ್.ಎಲ್.ಮಲ್ಲಿಕಾಜರ್ುನಯ್ಯ, ಮಿಲ್ಟ್ರೀಶಿವಣ್ಣ, ದಾನಪ್ಪ, ಕೆ.ಆರ್.ಚನ್ನಬಸವಯ್ಯ, ಉಪಸ್ಥಿತರಿರುವರು.


ಚಿ.ನಾ.ಹಳ್ಳಿ: ಜು.15 ರಿಂದ 17 ರವರೆಗೆ  ಏಕಾದಶಿ ಜಾತ್ರೆಯೊಂದಿಗೆ  ಸಾಂಸ್ಕೃತಿಕ ಹಬ್ಬ.
ಚಿಕ್ಕನಾಯಕನಹಳ್ಳಿ,ಜು.06 : ಪಟ್ಟಣದಲ್ಲಿ ಆಷಾಡ ಮಾಸದಲ್ಲಿ ನಡೆಯುವ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜುಲೈ 5ರಂದು ಪಟ ಹಾಕುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಇದೇ 23ರವರೆಗೆ ವಿವಿಧ ಧಾಮರ್ಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಆಷಾಡ ಮಾಸದಲ್ಲಿ ನಡೆಯುವ ಹಳೆಯೂರು ಆಂಜನೇಯಸ್ವಾಮಿ ಜಾತ್ರೆಗೆ ನೂತನ ವಧುವರರು ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಸಿದ್ದಿ ಪಡೆದಿರುವ ಆಂಜನೇಯಸ್ವಾಮಿ ಮಾತ್ರೆಗೆ ಜುಲೈ 5ರಿಂದ ಪ್ರಾರಂಭವಾಗುವ ಉತ್ಸವ ರಾತ್ರಿ ಹಾಗೂ ಬೆಳಗ್ಗೆ ನಡೆಯಲಿದೆ. 15ರಂದು ಕೆಂಚರಾಯಸ್ವಾಮಿ ಮಣೇವು, ಬಿರುದಾವಳಿ ಲಾಂಚನಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ, 16ರಂದು ಬ್ರಹ್ಮರಥೋತ್ಸವ, 17ರಂದು ರಥೋತ್ಸವ ಬೆಳಗ್ಗೆ ಹಾಗೂ ಸಂಜೆ ಜೋಗಿಹಳ್ಳಿ ಭಕ್ತ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ 16ರಂದು ನವದಂಪತಿಗಳ ಸ್ಪಧರ್ೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ನಡೆಯಲಿದ್ದು,  ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು ದಿವ್ಯಜ್ಯೋತಿ ಕಲಾ ಸಂಘದವರು ಹಮ್ಮಿಕೊಂಡಿದ್ದಾರೆ.  ಅನ್ನಪೂಣೇಶ್ವರಿ ಕಲಾಸಂಘದ ಹಾಗೂ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗದ ವತಿಯಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಕನ್ನಡ ಸಂಘದ ವೇದಿಕೆಯಲ್ಲಿ ನಡಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಜೇತ ತಂಡಗಳಿಗೆ ಸೀನಿಯರ್ ಗ್ರೂಪ್ ಪ್ರಥಮ ಬಹುಮಾನ 70ಸಾವಿರ, ದ್ವಿತಿಯ ಬಹುಮಾನ 30ಸಾವಿರ, ತೃತಿಯ ಬಹುಮಾನ 15ಸಾವಿರ ರೂಪಾಯಿಗಳು. ಪ್ರವೇಶ ದರ 1500ರೂ ಜೂನಿಯರ್ ಗ್ರೂಪ್. ; ಪ್ರಥಮ ಬಹುಮಾನ 20.000 ಸಾವಿರ ರೂಪಾಯಿಗಳು ದ್ವೀತೀಯ ಬಹುಮಾನ 10.000ಸಾವಿರ ರೂಪಾಯಿ ತ್ಥತೀಯ 5.000ಸಾವಿರ ರೂಪಾಯಿ ಪ್ರವೇಶ ದರ 500 ರೂಪಾಯಿ,ಜೂನಿಯರ್ ಸೋಲೋ: ಪ್ರಥಮ ಬಹುಮಾನ 5.000ರೂ, ದ್ವೀತೀಯ 3.000ರೂ, ತೃತೀಯ ಬಹುಮಾನ 2.000ರೂ ಪ್ರವೇಶ ದರ 200ರೂಪಾಯಿಗಳು, ಸೀನಿಯರ್ ಸೋಲೋ; ಪ್ರಥಮ ಬಹುಮಾನ 5.000ರೂ, ದ್ವೀತೀಯ 3000 ರೂ, ತೃತೀಯ ಬಹುಮಾನ 2000ರೂಪಾಯಿಗಳು ಮಧ್ಯಾಹ್ನ 3 ಗಂಟೆಗೆ ಕನ್ನಡ ಸಂಘದ ಸಾಂಸ್ಕೃತಿಕ ವೇದಿಕೆಯಿಂದ ನಗೆ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕುಂಚಾಕುರ ಕಲಾ ಸಂಘದ ವತಿಯಿಂದ ಕಲ್ಪವೃಕ್ಷ ಕೋ ಆಪರೇಟಿವ್ ಸಭಾಂಗಣದಲ್ಲಿ ಸಮೂಹ ಚಿತ್ರಕಲಾ ಹಾಗೂ ಚಿತ್ರಕಲಾ ಪ್ರದರ್ಶನ ಮಾರಾಟ 16 ಮತ್ತು 17 ರಂದು ನಡೆಯಲಿದೆ. ಜಾತ್ರಯ ಪ್ರಯುಕ್ತ ನಗೆಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.  17ರಂದು ತಾಲ್ಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.




.