Friday, August 27, 2010

ಬಂದ್ರೇಹಳ್ಳಿಯಲ್ಲಿ ಚಿಗುರು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಆ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 8ರಿಂದ 14 ವರ್ಷದ ಶಾಲಾ ಮಕ್ಕಳಿಗೆ ಚಿಗುರು ಕಾರ್ಯಕ್ರಮ ಇದೇ 28(ಇಂದು)ಶನಿವಾರ ಬೆಳಿಗ್ಗೆ 11-30ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ತಾಲೂಕಿನ ಬಂದ್ರೇಹಳ್ಳಿ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಮಲ್ಲಿಗೆರೆ ಗ್ರಾ.ಪಂ.ಅಧ್ಯಕ್ಷೆ ವಿಮಲಮ್ಮವೀರಭದ್ರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯೆ ಜಾನಕಮ್ಮ ರಾಮಚಂದ್ರಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಡಿ.ಇಡಿ.ಕಾಲೇಜ್ನ ಪ್ರಾಂಶುಪಾಲ ರಾಜ್ಕುಮಾರ್, ಮಲ್ಲಿಗೆರೆ ಗ್ರಾ.ಪಂ.ಉಪಾಧ್ಯಕ್ಷ ಚಂದ್ರನಾಯ್ಕ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ಗ್ರಾ.ಪಂ.ಸದಸ್ಯ ರಾಜಶೇಖರ, ಮಾಜಿ ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಮಲ್ಲಿಕಾಜರ್ುನಯ್ಯ ಉಪಸ್ಥಿತರಿದ್ದು ಶಿಕ್ಷಕ ಎ.ಸೋಮಶೇಖರಯ್ಯ ಕಾರ್ಯಕ್ರಮ ಭಾಗವಹಿಸಲಿದ್ದಾರೆ.
ಸಾಧಕನ ದೇಹಕ್ಕಷ್ಟೇ ಸಾವು, ಸಾಧನೆಗಲ್ಲ: ಗೀತಾಚಾರ್ಯ
ಚಿಕ್ಕನಾಯಕನಹಳ್ಳಿ,ಆ.27: ವಿಶ್ವದಲ್ಲಿ ಆಗಿಹೋಗಿರುವ ಮಹಾತ್ಮರೆಲ್ಲಾ ತಮ್ಮ ಸಾಧನೆಯಿಂದ ಮೇಲೆ ಬಂದವರು ಹಾಗೂ ಅವರು ಮಾಡಿರುವ ಕೆಲಸಗಳಿಂದ ಇಂದಿಗೂ ಅವರು ನಮ್ಮ ನಡುವೆ ಇದ್ದಾರೆ ಇಂತಹ ಮಹಾತ್ಮರ ಆದರ್ಶಗಳು ಇಂದಿನ ಯುವಕರಿಗೆ ದಾರಿದೀಪವಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಚಂದ್ರಮೋಹನ್ ಅಭಿಪ್ರಾಯಪಟ್ಟರು.
ಪಟ್ಟಣದ ನವೊದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿ.ಎಂ.ಶ್ರೀ ಪ್ರತಿಷ್ಠಾನ ವತಿಯಿಂದ ನಡೆದ ಎಂ.ವೀ.ಸಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂ.ವೀ.ಸಿ, ಪು.ತೀ.ನ ರವರನ್ನು ನಾವು ನೋಡುತ್ತ ಬೆಳೆದವರು ಅಂತವರ ಆದರ್ಶವನ್ನು ನಾವು ಪಾಲಿಸುತ್ತಿದ್ದೇವೆ, ಅವರ ಆದರ್ಶವನ್ನು ನಿಮ್ಮೆಲ್ಲರಿಗೂ ತಿಳಿಸಲು ಪ್ರಯತ್ನಿಸುತ್ತೇದ್ದೇವೆ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಅವರು ಸಾಕಷ್ಟು ಕೆಲಸಮಾಡಿದ್ದಾರೆ ಎಂದರಲ್ಲದೆ, ಭಾಷೆಯ ಭಾಗವಾಗಿ ಸಾಹಿತ್ಯವೂ ಇರುತ್ತದೆ, ಸಾಹಿತ್ಯ ಗ್ರಂಥಗಳನ್ನು ವೃದ್ದಿಸುವ ಮೂಲಕ ಭಾಷೆಯ ಬೆಳವಣಿಗೆಯನ್ನು ವಿಸ್ತರಿಸಬೇಕು ಎಂದರು.
ಲೇಖಕ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನದ ಕಾರ್ಯದಶರ್ಿ ಎಸ್.ವಿ.ಶ್ರೀನಿವಾಸರಾವ್ ಮಾತನಾಡಿ ಎಂ.ವಿ.ಸೀರವರ ಬರವಣಿಗೆಯನ್ನು ಆಧಾರವಾಗಿಟ್ಟುಕೊಂಡು ಲಕ್ಷಾಂತರ ಜನ ಲೇಖನ ಬರೆಯುವುದಕ್ಕೆ ಸ್ಪೂತರ್ಿಗೊಂಡಿದ್ದಾರೆ ಮತ್ತು ಯಾವುದೇ ವಿಷಯವನ್ನು ಪ್ರೀತಿಯಿಂದ ಸಲಹಿ ಪ್ರೋತ್ಸಾಹಿಸಿದರೆ ಅದು ಕಾಣದ ದಾರಿ ತೋರಿಸುತ್ತದೆ ಎಂದರು. ಸಾಹಿತ್ಯವನ್ನು ಬೆಳಸಬೇಕಾದರೆ ಅದರ ಹಿಂದಿನ ಮರ್ಮವನ್ನು ಹುಡುಕಿ ತೆಗೆದು ಸಾಹಿತ್ಯವನ್ನು ಕಾಣಬೇಕು ಎಂದ ಅವರು ಎಂ.ವಿ.ಸೀ ರವರ ಮಕ್ಕಳ ಸಾಹಿತ್ಯದ ಬಗ್ಗೆ ಪುಸ್ತಕ ರಚಿಸುತ್ತಿದ್ದೇವೆ ಎಂದರು.
ಡಾ.ನಾ.ಗೀತಾಚಾರ್ಯ ಮಾತನಾಡಿ ಎಂ.ವಿ.ಸೀತರಾಮಯ್ಯನವರು ಹಸ್ತಪ್ರತಿ ವಿಭಾಗದಲ್ಲಿ ಹೆಚ್ಚು ಕೆಲಸ ಮಾಡಿದವರು, ಅವರು ಸಂಗ್ರಹಿಸಿ ಸಂಸ್ಕರಿಸುವ ಮೂಲಕ ವಿನಾಶದಲ್ಲಿದ್ದ ಪ್ರಕಾರದ ಬಗ್ಗೆ ಹೆಚ್ಚು ಗಮನ ನೀಡಿ ಆ ಬಗ್ಗೆ ಸಂಶೋಧನೆ ನಡೆಸಿದ ಕೆಲವೇ ಸಂಶೋಧಕರಲ್ಲಿ ಎಂ.ವಿ.ಸೀ.ಅವರು ಒಬ್ಬರು, ಇವರು ಮೈಸೂರಿನವರಾದರೂ ಅವರ ಪೂವರ್ಿಕರ ಸ್ಥಳ ಚಿಕ್ಕನಾಯಕನಹಳ್ಳಿ. ಇದೇ ಕಾರಣಕ್ಕೆ ಅವರ ಜನ್ಮ ಶತಮಾನೋತ್ಸವದ ಕೊನೆಯ ಕಾರ್ಯಕ್ರಮವನ್ನು ಈ ಊರಿನಲ್ಲಿ ಹಮ್ಮಿಕೊಂಡಿದ್ದು, ಸೆ.9ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಕುವೆಂಪು, ಎಂ.ವೀ.ಸಿ ರಂತಹ ಕನ್ನಡ ಸಾಹಿತ್ಯ ಲೋಕದ ರತ್ನತ್ರಯರನ್ನು ಎಂದಿಗೂ ಮರೆಯಬಾರದು ಮತ್ತು ಇಂತಹ ಮಹನ್ ವ್ಯಕ್ತಿಗಳ ಆದರ್ಶವನ್ನು ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂಬ ಆಶಯದಿಂದ ನಮ್ಮ ಕಾಲೇಜನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.