Friday, May 14, 2010


ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ಪ್ರವೇಶಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.14: 2010-11ನೇ ಸಾಲಿನ ಬಿ.ಎ, ಬಿ.ಕಾಂ, ಬಿ.ಬಿ.ಎಂ, ಬಿ.ಎಸ್.ಡಬ್ಲಿಯೂ ಪ್ರಥಮ ಪದವಿ ತರಗತಿಗಳಿಗೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅಜರ್ಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಕರ್ಾರಿ ಪ್ರಥಮ ದಜರ್ೆಯಲ್ಲಿನ ಹೊಸ ಕಟ್ಟಡದಲ್ಲಿ ಅನುಭವಿ ಉಪನ್ಯಾಸಕರನ್ನು ಎಲ್ಲಾ ಕೋಸರ್್ಗಳಿಗೆ ನೇಮಿಸಲಾಗಿದ್ದು, ವಿದ್ಯಾಥರ್ಿಗಳಿಗೆ ಸ್ಮಧರ್ಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು, ವಿಶೇಷ ಉಪನ್ಯಾಸ, ಯೋಗ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗುವುದು ಮತ್ತು ಸುಸಜ್ಜಿತವಾದ ಗ್ರಂಥ ಭಂಡಾರದ ವ್ಯವಸ್ಥೆಯಿದೆ ಎಂದಿರುವ ಅವರು, ಈ ಬಾರಿ ಉತ್ತಮ ಪಲಿತಾಂಶ ಬಂದಿದ್ದು ಕಾಲೇಜಿಗೆ ಸೇರಬಯಸುವ ವಿದ್ಯಾಥರ್ಿಗಳು ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರ ದೂರವಾಣಿ. 9481067388 ಮತ್ತು ಅಧೀಕ್ಷಕರು 9481067388 ಸಂಪಕರ್ಿಸಬಹುದು ಎಂದು ತಿಳಿಸಿದ್ದಾರೆ.

ಜಿ.ಜೆ.ಸಿ.ಯ ಪಿ.ಯು.ಸಿ.ಫಲಿತಾಂಶ ಶೆ.75.
ಚಿಕ್ಕನಾಯಕನಹಳ್ಳಿ,ಮೇ.7: ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್ನ ದ್ವೀತಿಯ ಪಿ.ಯು.ಸಿ. ಫಲಿತಾಂಶ ಶೇ. 75.84 ಬಂದಿದೆ ಎಂದು ಪ್ರಾಂಶುಪಾಲ ಎಂ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಫಲಿತಾಂಶ 81.87 ಆಗಿದ್ದರೆ, ವಾಣಿಜ್ಯ ವಿಭಾಗದ ಫಲಿತಾಂಶ ಶೇ.74.40 ಆಗಿದೆ, ವಿಜ್ಞಾನ ವಿಭಾಗದಲ್ಲಿ ಶೇ.71.26 ರಷ್ಟು ಬಂದಿದೆ.
ವಿಜ್ಙಾನ ವಿಭಾಗದಲ್ಲಿ ಶೃತಿ(530) ಪಡೆದು ಕಾಲೇಜ್ಗೆ ಪ್ರಥಮಳೆನಿಸಿಕೊಂಡಿದ್ದರೆ, ಕಿರಣ್. ಎಲ್(516) ದ್ವೀತಿಯ ಸ್ಥಾನ ಪಡೆದಿದ್ದಾರೆ, ಈ ವಿಭಾಗದಲ್ಲಿ 3 ವಿದ್ಯಾಥರ್ಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದರೆ, 23 ಪ್ರಥಮ, 17 ದ್ವೀತಿಯ ಹಾಗೂ 19 ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ ಕರುಣ ಸಿ.ಜಿ.(530) ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದಾನೆ, ಮಂಜುನಾಥ್ ಜಿ.(499) ದ್ವೀತಿಯ ಸ್ಥಾನ ಪಡೆದಿದ್ದಾರೆ, ಕಾಲೇಜ್ನಲ್ಲಿ 61 ವಿದ್ಯಾಥರ್ಿಗಳು ಪ್ರಥಮ ದಜರ್ೆಯಲ್ಲಿ ಪಾಸಾಗಿದ್ದು, 38 ವಿದ್ಯಾಥರ್ಿಗಳು ದ್ವಿತೀಯ ದಜರ್ೆಯಲ್ಲಿ ಹಾಗೂ 40 ವಿದ್ಯಾಥರ್ಿಗಳು ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರಮೇಶ್ ಸಿ.ಎಂ.(510) ಪ್ರಥಮ, ಗುರುಸಿದ್ದರಾಮ ಕೆ.(492) ದ್ವೀತಿಯ, ಈ ವಿಭಾಗದಲ್ಲಿ ಒಂದು ಡಿಸ್ಟಿಂಕ್ಷನ್, 41 ಪ್ರಥಮ ಹಾಗೂ 35 ದ್ವೀತಿಯ ಹಾಗೂ 19 ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಬಸವ'ನಿಗೆ ಭಕ್ತಿಪೂರ್ವಕ ಶ್ರದ್ದಾಂಜಲಿ
ಚಿಕ್ಕನಾಯಕನಹಳ್ಳಿ,ಮೇ.14: ಶೆಟ್ಟೀಕೆರೆ ಹೋಬಳಿಯ ಹೆಂಜರೇಬೈರೇದೇವರು, ಶ್ರೀ ಗುರುಸಿದ್ದರಾಮೇಶ್ವರಸ್ವಾಮಿ ದೇವಾಲಯದ ಶಾಸ್ತ್ರೋತ್ತವಾಗಿ ಮುದ್ರೆ ಒತ್ತಿದ್ದ ಬಸವ, ದೇವಾಲಯದ ಮುಂದೆ ಸ್ವರ್ಗಸ್ಥವಾಗಿದ್ದು ಎಂಟು ಹಳ್ಳಿಯ ಗ್ರಾಮಸ್ಥರು ಒಟ್ಟಿಗೆ ಸೇರಿ ಕಾರೇಹಳ್ಳಿ ರಂಗನಾಥ ದೇವಾಲಯದ ಮುಂದೆ ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ಕ್ರಿಯಾಸಮಾಧಿಯನ್ನು ನೇರವೇರಿಸಲಾಯಿತು ಎಂದು ದುಗಡಿಹಳ್ಳಿ ಶಂಕರಪ್ಪ ತಿಳಿಸಿದ್ದಾರೆ
ಗುಬ್ಬಿ ತಾಲೂಕು ನಿಟ್ಟೂರಿನ ಚಂದ್ರಶೇಖರಯ್ಯ ನವರು ಒಂದು ಬಸವಣ್ಣನನ್ನು ದೇವಾಲಯಕ್ಕೆ ಶಾಸ್ತ್ರೋಕ್ತವಾಗಿ ಮುದ್ರೆ ಒತ್ತಿ ಬಿಟ್ಟಿದ್ದು ಬಸವಣ್ಣನು ಪ್ರತಿ ಮನೆಗೆ ಹೋಗಿ ಪೂಜೆ ಮಾಡಿಸಿಕೊಂಡು ಪ್ರಸಾದ ಸ್ವೀಕರಿಸುತ್ತಿದ್ದ ಬಸವಣ್ಣ ಅಕಾಲಿಕ ಸ್ವರ್ಗಸ್ಥವಾದ ಕಾರಣ ಭಕ್ತಾಧಿಗಳು ಅಂತಿಮ ಕಾರ್ಯವನ್ನು ಭಕ್ತಿಭಾವದಿಂದ ನೆರವೇರಿಸಿದರು. ನಿಟ್ಟೂರಿನ ಭಕ್ತಾದಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.