Wednesday, February 22, 2012

ಎರಡು ಸಮಾಜಗಳ ನಡುವೆ ವೈಷಮ್ಯ ಮೂಡಿಸುತ್ತಿರುವ ಪೊಲೀಸ್ ಇಲಾಖೆ ಶೀಘ್ರ ಎಚ್ಚೆತ್ತುಕೊಳ್ಳಲಿ: ಸಿ.ಡಿ.ಸಿ.
ಚಿಕ್ಕನಾಯಕನಹಳ್ಳಿ,ಫೆ.22 : ತಾಲ್ಲೂಕಿನ ಅಜ್ಜಿಗುಡ್ಡೆ ಗ್ರಾಮದಲ್ಲಿ ಅಂಗವಿಕಲೆ ಲಕ್ಕಮ್ಮನಿಗೆ ಹಾಗೂ ಅವರ ಮನೆಯ ಮೇಲೆ ನಡೆದ ದಾಂಧಲೆಯನ್ನು  ಖಂಡಿಸಿರುವುದಲ್ಲದೆ, ದಾಂಧಲೆ ನಡೆಸಿದ ಆರೋಪಿಗಳ ವಿರುದ್ದ ಪೋಲಿಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಇದೇ 18ರಂದು ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯನ್ನು ಆಧಾರಿಸಿ ಅಜ್ಜಿಗುಡ್ಡೆ ಲಕ್ಕಮ್ಮ ಹಾಗೂ ಅವರ ಮಗನಿಗೆ ಸಾಂತ್ವಾನ ಹೇಳಲೆಂದು ಅಜ್ಜಿಗುಡ್ಡೆಯ ಮನೆಗೆ ತೆರಳಿದ್ದರು.  
ದಾಂಧಲೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಅಂಗವಿಕಲ ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಇಷ್ಟೋಂದು ತಾತ್ಸಾರ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಲಕ್ಕಮ್ಮ ಮತ್ತು ಅವರ ಕುಟುಂಬ ಅಶಕ್ತರಲ್ಲ ಅವರ ಜೊತೆ ನಾವಿದ್ದೇವೆ, ಕುರುಬ ಸಮಾಜದ ಒಂದೇ ಒಂದು ಮನೆ ಇದೆ ಎಂಬ ಕಾರಣಕ್ಕೆ ಇಷ್ಟೊಂದು ಕಿರುಕುಳ ನೀಡುವುದು ಸರಿಯಲ್ಲ. ಪೊಲೀಸ್ ಇಲಾಖೆ ಶೀಘ್ರ ಎಚ್ಚೆತ್ತುಕೊಂಡು ಅನ್ಯಾಯಕ್ಕೊಳಗಾಗಿರುವ ಈ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
  ಚರಂಡಿಯ ಕೊಳಚೆ ನೀರು ಹರಿಯುವ ವಿಷಯಕ್ಕೆ ಎದ್ದಿರುವ ಈ ವೈಷ್ಯಮ್ಯವನ್ನು ತಮನ ಮಾಡಲು  ತಾಲ್ಲೂಕು ಪಂಚಾಯಿತಿ ಶೀಘ್ರ ಇಲ್ಲಿ ಚರಂಡಿ ನಿಮರ್ಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಲಕ್ಕಮ್ಮನ ಮನೆಯವರು  ಅಜರ್ಿ ಕೊಟ್ಟು 2ವರ್ಷವಾದರೂ ತಾಲ್ಲೂಕು ಆಡಳಿತ ಯಾವ ಕ್ರಮವನ್ನು ಕೈಗೊಂಡಿಲ್ಲ ಆದ್ದರಿಂದ  ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ  ಈ ಬಗ್ಗೆ ಪರಿಶೀಲಿಸಿ ಅಂಗವಿಕಲೆ ಅಜ್ಜಿಗೆ ಹಾಗೂ ಅವರ ಮನೆಗೆ ನಡೆದಿರುವ ದಾಂಧಲೆಗೆ ಪರಿಹಾರ ನೀಡಬೇಕು ಎಂದ ಅವರು ಕೇವಲ 2ಮನೆಗಳ ನಡುವೆ ಉಂಟಾದ ಈ ಗಲಭೆಯು ಎರಡು ಸಮಾಜದ ನಡುವೆ ವೈಷಮ್ಯ ಬೆಳೆಯುವಂತೆ ಮಾಡದೆ ಪೊಲೀಸ್ ಇಲಾಖೆ ಲಕ್ಕಮ್ಮನ ದೂರನ್ನು ದಾಖಲೆ ಮಾಡಿಕೊಂಡು ಶೀಘ್ರ ಎಫ್.ಐ.ಆರ್. ನೀಡುವಂತೆ ಒತ್ತಾಯಿಸಿದ್ದಾರೆ.  

ಅಧಿಕಾರಿಗಳ ನಿರ್ಲಕ್ಷ ಅಭಿವೃದ್ದಿ ಕಾರ್ಯಗಳು ಕುಂಠಿತ: ಆರೋಪ
ಚಿಕ್ಕನಾಯಕನಹಳ್ಳಿ,ಫೆ.22 :  ತಾಲ್ಲೂಕು ಪಂಚಾಯ್ತಿ ಸ್ವತ್ತನ್ನು ಅಳತೆ ಮಾಡಿಸಲು ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ರವರಿಗೆ  ಹಾಗೂ ಭೂಮಾಪನ ಇಲಾಖೆಯ ಸೂಪರ್ ವೈಸರ್ ಹೇಳಿ ಹಲವು ದಿನಗಳಾದರೂ ಇಲ್ಲಿಯವರೆಗೆ ಅಳತೆ ಮಾಡಿರುವುದಿಲ್ಲ ಎಂದು ತಾ.ಪಂ.ಸದಸ್ಯ ನಿರಂಜನಮೂತರ್ಿ ಆರೋಪಿಸಿದ್ದಾರೆ.
ತಿಮ್ಲಾಪುರ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ.15ರಷ್ಟು ಲಂಚಕೊಟ್ಟರೆ ಒಬ್ಬನೇ ವ್ಯಕ್ತಿಗೆ 15ಲಕ್ಷದಷ್ಟು ಕಾಮಗಾರಿ ಮಂಜೂರು ಮಾಡಿಕೊಡುತ್ತಾರೆ, ಇಲ್ಲಿಯ ಅಧಿಕಾರಿಗಳು ತಮಗೆ ಆಪ್ತರಾದವರಿಗೆ ಚಿ.ನಾ.ಹಳ್ಳಿ  ತಾ.ಪಂ.ನಿಂದಲೇ ಅನುಷ್ಠಾನಗೊಳಿಸಿ, ಉಳಿದವರಿಗೆ  ಜಿಲ್ಲಾ ಪಂಚಾಯ್ತಿಗೆ ಕಳುಹಿಸಿಕೊಡಿ ಎಂದು ಹೇಳಿ ತಲೆ ತಪ್ಪಿಸಿಕೊಳ್ಳುತ್ತಾರೆ ಎಂದು ನಿರಂಜನಮೂತರ್ಿ ಆರೋಪಿಸಿದ್ದಾರೆ. 
 2011-12ನೇ ಸಾಲಿನ ತಾ.ಪಂಚಾಯ್ತಿಯಲ್ಲಿ ಮಾಚರ್್ 15ಕ್ಕೆ 11-12ನೇ ಸಾಲಿನ ಹಣ ಖಚರ್ಾಗಬೇಕು ಇಲ್ಲದಿದ್ದರೆ ಸಕರ್ಾರ ವಾಪಸ್ ಪಡೆಯಲಿದೆ ಎಂದು ಖಜಾನೆಯಿಂದ ಪತ್ರ ಬಂದಿದೆ, 29 ಇಲಾಖೆಗಳಲ್ಲಿ ಹಣ ಸಕರ್ಾರಕ್ಕೆ ವಾಪಸ್ ಹೋದರೆ ನೇರವಾಗಿ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
  1. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಜವಬ್ದಾರಿ ಅರಿತು ಕೆಲಸ ಮಾಡಲಿ.

ಚಿಕ್ಕನಾಯಕನಹಳ್ಳಿ,ಫೆ.22 : ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಜವಾಬ್ದಾರಿಗಳು, ಕರ್ತವ್ಯಗಳನ್ನು ಅರಿತು ಶಾಲೆಯಲ್ಲಿ  ಕೆಲಸ ಮಾಡಬೇಕೆಂದು  ಪಟ್ಟಣದ ಕೆ.ಎಂ.ಎಚ್.ಪಿ.ಎಸ್.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಬಿ.ಲೋಕೇಶ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರ ಸಕರ್ಾರಿ ಶಾಲೆಯಲ್ಲಿ  ನಡೆದ ಶಾಲಾಭಿವೃದಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ನಾಗರೀಕ ಸೌಕರ್ಯ ಸ್ಥಾಯಿ ಸಮಿತಿ ಸದಸ್ಯರಿಗೆ 3ದಿನದ ಸಂಕಲ್ಪ ಸಮಕ್ಷಮ ಹಾಗೂ ಸಮಾವೇಶದ ತರಬೇತಿ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ತರಬೇತಿ ಕಾಯರ್ಾಗಾರದಲ್ಲಿ ಭಾಗವಹಿಸುವ ಮೂಲಕ ಶಾಲೆಗಳಲ್ಲಿ ಮಕ್ಕಳಿಗಾಗಿ ಯಾವ ರೀತಿಯ ಅಭಿವೃದ್ದಿ ಕಾರ್ಯಗಳು ಮಾಡಬೇಕು ಅದಕ್ಕಾಗಿ ಶಿಕ್ಷಕರಿಗೆ ಯಾವ ರೀತಿ ಮಾರ್ಗದರ್ಶನ ನೀಡಬಹುದು ಎಂಬುದನ್ನು ತಿಳಿಯಬಹುದಾಗಿದ್ದು ಶಾಲೆಗಳಲ್ಲಿನ ಶೈಕ್ಷಣಿಕ ಪ್ರಗತಿ ಬಗ್ಗೆ ಹಾಗೂ ಶಾಲೆಗಳ ಮುಂದಿನ ಅಭಿವೃದ್ದಿ ಕಾರ್ಯಗಳಿಗೆ ತರಬೇತಿ ಕಾರ್ಯಗಾರಗಳು ಅನುಕೂಲ ಮಾಡಿಕೊಡುತ್ತವೆ ಎಂದ ಅವರು ಶಾಲೆಗಳ ಅಭಿವೃದ್ದಿಗೆ ಎಸ್.ಡಿ.ಎಂ.ಸಿ ಸದಸ್ಯರ ಪಾತ್ರ ಬಹುಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಎಚ್.ಪಿ.ಎಸ್.ರೇವಣ್ಣ ಮಠ ಶಾಲೆಯ ಅಧ್ಯಕ್ಷ ರೇವಣ್ಣ ಉದ್ಘಾಟಿಸಿದರು, ರಾ.ಪ್ರಾ.ಶಾ.ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಿ.ಎಸ್.ಶೋಭಾ, ಸಿ.ಆರ್.ಪಿ. ದುರ್ಗಯ್ಯ ರಾಜಣ್ಣ  ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಪ್ರಕಾಶ್ ಪ್ರಾಥರ್ಿಸಿದರೆ, ಕೃಷ್ನಮೂತರ್ಿ ವಂದಿಸಿದರು.