Saturday, July 3, 2010ನಾಡು ನುಡಿಯನ್ನು ಗೌರವಿಸುವವರೇ ನಿಜವಾದ ದೇಶಭಕ್ತರು: ದೇ.ಜ.ಗೌ.
ಚಿಕ್ಕನಾಯಕನಹಳ್ಳಿ,ಜು.3: ನಾಡು ನುಡಿಯ ಬಗ್ಗೆ ಅಭಿಮಾನ ಬೆಳಸಿಕೊಳ್ಳುವುದು ಎಲ್ಲರ ಕರ್ತವ್ಯ, ವ್ಯವಹಾರದ ದೃಷ್ಟಿಯಿಂದ ಎಲ್ಲಾ ಭಾಷೆ ಬೇಕು ನಿಜ ಆದರೆ ತಾಯಿ ಭಾಷೆ ಇವೆಲ್ಲಕ್ಕೂ ಶ್ರೇಷ್ಠವಾದದ್ದು, ತಾನು ಹುಟ್ಟಿದ ಭೂಮಿ ಪುಣ್ಯ ಕ್ಷೇತ್ರವೆಂಬುದನ್ನು ಪ್ರತಿಯೊಬ್ಬರು ಅರಿತಾಗಲೇ ದೇಶ ಭಕ್ತಿ ಮೂಡಲು ಸಾಧ್ಯ ಅದನ್ನು ಇಂದಿನ ಯುವಕರಿಗೆ ಕಲಿಸಬೇಕು ಎಂದು ಕನರ್ಾಟಕ ರತ್ನ ಡಾ.ದೇ.ಜವರೇಗೌಡ ಕರೆ ನೀಡಿದರು.
ತಾಲೂಕು ಸಾಹಿತ್ಯ ಪರಿಷತ್ತು ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಎಂ.ವಿ.ನಾಗರಾಜ್ ರಾವ್ ಅವರ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸರಸ್ವತಿಯ ಬಾಹುಗಳಲ್ಲಿ ಯಾವುದು ಶಕ್ತಿಶಾಲಿಯಾದ ಬಹು ಎಂಬುದನ್ನು ಹೇಳುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟವಾದ ಕೆಲಸ ಭಾಷೆಗಳ ವಿಷಯದಲ್ಲೂ ಸಹ ಎಂದ ಅವರು, ಮಾತೃ ಭಾಷೆಯನ್ನು ಸರಸ್ವತಿಗೆ ಹೋಲಿಸಿದರು.
ಯಾವುದೇ ಕ್ಷೇತ್ರದಲ್ಲಾಗಲಿ ಸೃಜನಶೀಲ ಮನಸ್ಸುಗಳು ಮಾತ್ರ ಉತ್ತಮ ಕೆಲಸವನ್ನು ಮಾಡಬಲ್ಲವು ಎಂದರಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಸೃಜನಶೀಲ ಮನಸ್ಸುಗಳು ಅಧಿಕವಾಗಬೇಕು ಎಂದರು.
ಸಾಹಿತಿ ಎಂ.ವಿ.ನಾಗರಾಜ್ ರಾವ್ರವರ ಹಿಂದಿ ಸಾಹಿತ್ಯ ಚರಿತ್ರೆ ಮೌಲ್ಯಯುತ ಗ್ರಂಥ ಇದನ್ನು ಲೇಖಕ ಸುಮಾರು ನಲವತ್ತು ವರ್ಷಗಳ ತನ್ನ ಅಧ್ಯಯನವನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಹಿಂದಿ ಸಾಹಿತ್ಯದ ಪ್ರತಿಯೊಂದು ಯುಗವನ್ನು ಉತ್ತಮವಾಗಿ ದಾಖಲಿಸುತ್ತಾ ಹೋಗಿದ್ದಾರೆ ಎಂದರಲ್ಲದೆ, ಹಿಂದಿ ಸಾಹಿತ್ಯ ಚರಿತ್ರೆಯನ್ನು ತನ್ನ ಮಾತೃಭಾಷೆಯಲ್ಲಿ ಬರೆಯುವ ಮೂಲಕ ಈ ಎರಡೂ ಭಾಷೆಗಳ ಕೊಂಡಿಯಂತೆ ಕೆಲಸ ಮಾಡಿದ್ದಾರೆ ಎಂದರು. ಈ ಪುಸ್ತಕವನ್ನು ಪ್ರತಿಯೊಬ್ಬ ಹಿಂದಿ ಸಾಹಿತ್ಯಾಸಕ್ತರು ಓದಲೇ ಬೇಕಾದಂತಹ ಕೃತಿಯೆಂದರು.
ಕು.ವೆಂ.ಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಮಾತನಾಡಿ, ಸಂಶೋಧನೆ, ಅಧ್ಯಯನ ಮತ್ತು ವಿಶ್ಲೇಷಣೆ ಈ ಮೂರು ಗುಣಗಳನ್ನು ಹೊಂದಿರುವ ಪುಸ್ತಕಗಳು ಮಾತ್ರ ಉತ್ತಮ ಕೃತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು. ಈ ಕೃತಿಯಲ್ಲಿ ಈ ಅಂಶವನ್ನು ಮನಗಂಡಿದ್ದೇನೆ ಎಂದರು.
ಹಿಂದಿ ಮತ್ತು ಕನ್ನಡ ಎರಡೂ ಭಾಷೆಯನ್ನು ಅಧ್ಯಯನ ಮಾಡಿರುವುದರಿಂದ ಈ ಕೃತಿಯನ್ನು ನಾನು ಮುಕ್ತವಾಗಿ ವಿಮಶರ್ೆ ಮಾಡಿದ್ದೇನೆ ಎಂದ ಅವರು, ಹಿಂದಿ ಸಾಹಿತ್ಯದಲ್ಲಿ ಬರುವ ಪ್ರತಿಯೊಂದು ಯುಗವನ್ನು ವಿಶ್ಲೇಷಣಾತ್ಮಕವಾಗಿ ಇಲ್ಲಿ ದಾಖಲಾಸಲಾಗಿದೆ ಎಂದರು.
ಲೇಖಕ ಪ್ರೊ.ನಾ.ದಯಾನಂದ ಮಾತನಾಡಿ, ಈ ಕೃತಿಯ ಪ್ರತಿಯೊಂದು ಹೆಜ್ಜೆಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ಹಿಂದಿ ಸಾಹಿತ್ಯ ಚರಿತ್ರೆಯನ್ನು ಕನ್ನಡದಲ್ಲಿ ಬರೆಯುವ ಮೂಲಕ ಹಿಂದಿ ಬಾರದವರೂ ಈ ಗ್ರಂಥವನ್ನು ಅವಲೋಕಿಸಿದರೆ ಈ ಸಾಹಿತ್ಯ ಚರಿತ್ರೆಯ ಬಗ್ಗೆ ಅಧಿಕೃತವಾಗಿ ಮಾತನಾಡಬಹುದಾದಂತಹ ಶಕ್ತಿಯನ್ನು ಪಡೆಯುತ್ತಾನೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಈ ತಾಲೂಕಿನ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಿರುವ ಎಂ.ವಿ.ನಾಗರಾಜ್ ರಾವ್ ಅವರು ಇನ್ನಿಷ್ಟು ಸಾಹಿತ್ಯ ಸೇವೆಯನ್ನು ಮಾಡಲಿ ಎಂದರು.
ಸಾಹಿತಿ ಆರ್.ಬಸವರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ದೇ.ಜವರೇಗೌಡ ಅವರಿಗೆ ತಾಲೂಕಿನ ಪರವಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ತಹಶೀಲ್ದಾರ್ ಟಿ.ಸಿ.ಕಾಂತರಾಜು ಗೌರವಾರ್ಪಣೆ ಸಲ್ಲಿಸಿದರು. ಹೇಮಂತ ಸಾಹಿತ್ಯದ ಮಾಲೀಕ ವೆಂಕಟೇಶ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗಮಣಿ ತಂಡ ಪ್ರಾಥರ್ಿಸಿದರು, ಎಂ.ವಿ.ನಾಗರಾಜ್ ರಾವ್ ಸ್ವಾಗತಿಸಿದರೆ, ಸಿ.ಗುರುಮೂತರ್ಿ ಕೊಟ್ಟಿಗೆಮನೆ ನಿರೂಪಿಸಿದರು, ಅಣಪ್ಪ ವಂದಿಸಿದರು.