Friday, April 29, 2011













ಮೇ.2ರಂದು ಬಸವ ಜಯಂತಿ ಅಂಗವಾಗಿ ಜಿಲ್ಲಾ ಮಟ್ಟದ ಭಜನಾ ಮೇಳ







ಚಿಕ್ಕನಾಯಕನಹಳ್ಳಿ,ಏ.29: ಶ್ರೀ ಬಸವೇಶ್ವರ ಜಯಂತಿ ಮಹೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಭಜನಾ ಮೇಳವನ್ನು ಮೇ 2ರ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಗೋಡೇಕೆರೆ ಶ್ರೀ ಸಿದ್ದರಾಮದೇಶೀಕೇಂದ್ರ ಸ್ವಾಮಿಗಳು ತಿಳಿಸಿದ್ದಾರೆ.ಪಟ್ಟಣದ ನನ್ನಯ್ಯ ಸ್ವಾಮಿಗಳ ಮಠದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಮೇಳವನ್ನು ಕೆ.ಬಿ.ಕ್ರಾಸ್ ಬಳಿ ಇರುವ ಶ್ರೀಮದ್ ರಂಭಾಪುರಿ ಶಾಲಾ ಸಂಕೀರ್ಣದಲ್ಲಿ ಏರ್ಪಡಿಸಲಾಗಿದೆ ಎಂದರಲ್ಲದೆ, ಜಾನಪದ ತತ್ವಪದಗಳು ನಶಿಸುತ್ತಿರುವ ಈಗಿನ ಕಾಲದಲ್ಲಿ ಅವುಗಳನ್ನು ಅಭಿವೃದ್ದಿ ಪಡಿಸಲು ಭಜನಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.6 ವರ್ಷಗಳಿಂದ ನಿರಂತರವಾಗಿ ಈ ಮೇಳವನ್ನು ಸಂಯೋಜಿಸಿಕೊಂಡು ಬರುತ್ತಿರುವುದಲ್ಲದೆ, ಪ್ರತಿ ತಿಂಗಳು ಏಕಾದಶಿಯೊಂದು ಸಂಜೆಯಿಂದ ಬೆಳಗಿನ ವರೆಗೆ ಮಠದಲ್ಲಿ ಭಜನಾ ಕಾರ್ಯಕ್ರಮ ಹಾಗೂ ತತ್ವಪದಗಳ ಮೇಲೆ ವಿಚಾರಗೋಷ್ಠಿಯನ್ನು ಹಮ್ಮಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಈ ಮೇಳದ ಉದ್ಘಾಟನೆಯನ್ನು ಮೇ 2ರ ಬೆಳಿಗ್ಗೆ 10ಕ್ಕೆ ಏರ್ಪಡಿಸಿದ್ದು ಗೋಡೇಕೆರೆ ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮದೇಶೀಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮಿಜಿ, ಗೋಡೆಕೆರೆ ಚರ ಪಟ್ಟಾಧ್ಯಕ್ಷರಾದ ಮೃತ್ಯಂಜಯ ದೇಶಿಕೇಂದ್ರ ಸ್ವಾಮಿ, ಜಯಚಂದ್ರ ಶೇಖರ್ ಸ್ವಾಮಿಜೀ, ಇಮ್ಮಡಿ ಕರಿ ಬಸವ ದೇಶೀಕೇಂದ್ರ ಸ್ವಾಮಿಜಿ, ಡಾ. ಅಭಿನವ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮಿ, ಡಾ. ಯತೀಶ್ವರ ಶಿವಾಚಾರ್ಯಸ್ವಾಮಿ ಹಾಗೂ ಬೆಂಗಳೂರಿನ ನೆಸ್ಟರ್ ಪ್ರಾಜೆಕ್ಟ್ನ ವ್ಯವಸ್ಥಾಪಕ ನಿದರ್ೇಶಕ ಕೆ.ಜಿ.ಶಿವರುದ್ರಯ್ಯ ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಭಜನಾ ಮೇಳದಲ್ಲಿ ನಿಜಗುಣರ ತತ್ವಪದಗಳು, ಶಂಕರಾನಂದರ ಪದ್ದತಿ ತತ್ವಪದಗಳು, ಸರ್ಪ ಭೂಷಣ ಶಿವಯೋಗಿ ತತ್ವಪದಗಳು, ಕೈವಲ್ಯ ನವನೀತ ಪದ್ದತಿ ತತ್ವಪದಗಳನ್ನಾದರೂ ಸ್ಪಧರ್ಿಗಳಲ್ಲಿ ಹಾಡಬಹುದು. ಮೇಳದಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ, ಹೆಣ್ಣು ಮತ್ತು ಗಂಡು ಮಕ್ಕಳು ಭಾಗವಹಿಸಬಹುದು, ಭಜನಾ ಸಲಕರಣೆಗಳನ್ನು ತಂಡಗಳೇ ತರಬೇಕು, ತಿಂಡಿ ಮತ್ತು ಊಟದ ವ್ಯವಸ್ಥೆ ಇದೆ, ಭಾಗವಹಿಸುವರಿಗೆಲ್ಲಾ ಪ್ರಶಸ್ತಿ ಪತ್ರ ನೀಡಲಾಗುವುದು, ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ 101ರೂಗಳನ್ನು ನಿಗದಿಪಡಿಸಲಾಗಿದೆ, ವೇಷಭೂಷಣಗಳಿಗೆ ಆದ್ಯತೆ ನೀಡಲಾಗುತ್ತದೆ, ಒಂದು ತಂಡಕ್ಕೆ ಕಾಲಮಿತಿ ನಿಗಧಿ ಪಡಿಸಲಾಗಿದೆ, ವಿಜೇತರಿಗೆ ನಗದು ರೂಪದಲ್ಲಿ ಬಹುಮಾನ ಕೊಡಲಾಗುವುದು. ಪ್ರಥಮ ಬಹುಮಾನವನ್ನು ಅತಿಹೆಚ್ಚು ಅಂಕ ಪಡೆದ ಮೊದಲ 5 ತಂಡಗಳಿಗೆ, ದ್ವಿತೀಯ ಬಹುಮಾನವನ್ನು ಹೆಚ್ಚು ಅಂಕ ಪಡೆದ 10 ತಂಡಗಳಿಗೆ, ತೃತೀಯ ಬಹುಮಾನವನ್ನು ಹೆಚ್ಚು ಅಂಕ ಪಡೆದ 10 ತಂಡಗಳಿಗೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ 9448709755, 9886806037, 9900684694 ಸಂಪಕರ್ಿಸಲು ಕೋರಿದೆ.