Wednesday, June 22, 2016


ವಿದ್ಯುತ್ ತಗುಲಿ ಹಸು ಸಾವು 

ಚಿಕ್ಕನಾಯಕನಹಳ್ಳಿ,: ಬೆಸ್ಕಾಂ ಬೇಜವಬ್ದಾರಿಯಿಂದ ಹಸುವೊಂದಕ್ಕೆ ಶಾಟರ್್ಸಕ್ಯರ್ೂಟ್ನಿಂದ ವಿದ್ಯುತ್ ತಾಕಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಶೆಟ್ಟಿಕೆರೆ ರಸ್ತೆಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬುಧವಾರ ನಡೆದಿದೆ.
ಬೆಸ್ಕಾಂ ಇಲಾಖೆಯವರು ರಸ್ತೆಗೆ ಹೊಂದಿಕೊಂಡಿರುವಂತೆ ವಿದ್ಯುತ್ ಪರಿವರ್ತಕವನ್ನು ಅಳವಡಿಸಿದೆ, ಮಧ್ಯಾಹ್ನ ಬಿದ್ದ ಮಳೆಯಿಂದ ನೆಲಕ್ಕೆ ವಿದ್ಯುತ್ ಪ್ರವಹಿಸಿ ಪಕ್ಕದಲ್ಲೇ ಮೇಯುತ್ತಿದ್ದ ಆರು ವರ್ಷ ಪ್ರಾಯದ ನಾಟಿಹಸುಗೆ ವಿದ್ಯುತ್ ತಾಗಿದ್ದರಿಂದ ಸ್ಥಳದಲ್ಲೇ ಹಸು ಸಾವನ್ನಪ್ಪಿದೆ.
ಹಸು ಮಾಲೀಕ ಕುರುಬರಹಳ್ಳಿ ಕಲ್ಲೇಶ್ವರ ಮಾತನಾಡಿ, ಹಸು ಆರು ವರ್ಷದ ಪ್ರಾಯದಾಗಿತ್ತು, ಪ್ರತಿನಿತ್ಯ ಆರು ಲೀಟರ್ ಹಾಲು ನೀಡುತ್ತಿತ್ತು, ಹಸು ಹಾಲು ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದೆವು ಈ ಘಟನೆಯಿಂದ ದಿಕ್ಕತೋಚದಂತಾಗಿದೆ, ನಷ್ಟವನ್ನು ಬೆಸ್ಕಾಂ ಇಲಾಖೆಯಲ್ಲೇ ಭರಿಸಬೇಕು ಎಂದು ಆಗ್ರಹಿಸಿದರು.
ನಿತ್ಯ ನೂರಾರು ವಾಹನಗಳು ಹಾಗೂ ಜನರು ಸಂಚರಿಸುವ ರಸ್ತೆಯ ಸಮೀಪ ಘಟನೆ ಸಂಭವಿಸಿದ್ದು ಬೆಸ್ಕಾಂ ಬೇಜವಬ್ದಾರಿಗೆ ಕನ್ನಡಿ ಹಿಡಿದಂತಾಗಿದೆ.
ೆಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಿಂದ ಹೆಚ್ಚಿದ ಅಂಕ
ಚಿಕ್ಕನಾಯಕನಹಳ್ಳಿ,ಜೂ.22 : ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದ ಬಳಿಕ ಪಟ್ಟಣದ ನವೋದಯ ಪ್ರೌಢಶಾಲೆಯ ವಿದ್ಯಾಥರ್ಿ ಎಂ.ಚಂದನ್ ಪಟ್ಟಣ ಪ್ರದೇಶದ ವಿದ್ಯಾಥರ್ಿಗಳಿಗೆ ಮೊದಲಿಗನಾಗಿ ಹೊರಹೊಮ್ಮಿದ್ದಾನೆ.
ಮೊದಲು 625ಕ್ಕೆ 599 ಅಂಕ ಬಂದಿತ್ತು, ಮರುಮೌಲ್ಯಮಾಪನದ ಬಳಿಕ 10ಅಂಕಗಳು ಹೆಚ್ಚಾಗಿ ಒಟ್ಟು 609ಅಂಕಗಳು ಲಭ್ಯವಾಗಿದೆ, ಈ ಮೊದಲು ಪಟ್ಟಣದ ವ್ಯಾಪ್ತಿಯಲ್ಲಿ 606ಅಂಕ ಅತಿ ಹೆಚ್ಚು ಅಂಕವಾಗಿದ್ದು ಎಂ.ಚಂದನ್ 609ಅಂಕ ಪಡೆಯುವ ಮೂಲಕ ಮೊದಲಿಗನಾಗಿ ಹೊರಹೊಮ್ಮಿದ್ದಾನೆ. ಕನ್ನಡದಲ್ಲಿ ಈ ಮೊದಲು 125ಕ್ಕೆ 115ಬಂದಿತ್ತು ಮರುಮೌಲ್ಯಪಾನದಲ್ಲಿ 120ಅಂಕ, ಸಮಾಜದಲ್ಲಿ 4ಅಂಕ ಹಾಗೂ ಹಿಂದಿಯಲ್ಲಿ 1ಅಂಕ ಸೇರಿ ಒಟ್ಟು 10ಅಂಕ ಹೆಚ್ಚಿದೆ. ತಂದೆ ಎಂ.ಎಸ್.ಮೋಹನ್, ಶಾಲಾ ಮುಖ್ಯೋಪಾಧ್ಯಾಯಿನಿ ಸುಧಾ ಹಾಗೂ ಸಿಬ್ಬಂದಿ ವಿದ್ಯಾಥರ್ಿಯನ್ನು ಶ್ಲಾಘಿಸಿದ್ದಾರೆ.ಸಕರ್ಾರಿ ಶಾಲೆಗೆ ಹಳೆ ವಿದ್ಯಾಥರ್ಿಗಳು, ಸಾರ್ವಜನಿಕರಿಂದ ಮರುಜೀವ 

ಚಿಕ್ಕನಾಯಕನಹಳ್ಳಿ,ಜೂ.21 : ಮುಚ್ಚುವ ಹಂತದಲ್ಲಿದ್ದ 8 ದಶಕಗಳ ಇತಿಹಾಸ ಹೊಂದಿರುವ ಸಕರ್ಾರಿ ಶಾಲೆಯೊಂದು ಹಳೆ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮರುಜೀವ ಪಡೆದಿದೆ.
 ತಾಲ್ಲೂಕಿನ ಗಡಿಗ್ರಾಮ ಗೋಪಾಲನಹಳ್ಳಿ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿದ್ದು 1935ರಲ್ಲಿ ಮೊದಲು ಶಾಲೆಯಲ್ಲಿ ವಿದ್ಯಾಥರ್ಿಗಳು ಕಿಕ್ಕಿರಿದಿರುತ್ತಿದ್ದರು. ಇಂಗ್ಲೀಷ್ ವ್ಯಾಮೋಹದಿಂದ ಪೋಷಕರು ತಮ್ಮ ಮಕ್ಕಳನ್ನು ಪಕ್ಕದ ತಿಪಟೂರು ಪಟ್ಟಣಕ್ಕೆ ಕಳಿಸಲು ಪ್ರಾರಂಭಿಸಿದಾಗ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಇಳಿಮುಖವಾಗತೊಡಗಿತು. ಕಳೆದ 5 ವರ್ಷಗಳಿಂದ ಮಕ್ಕಳ ಸಂಖ್ಯೆ 10ರ ಒಳಕ್ಕೆ ಇಳಿಯಿತು. ಇದರಿಂದ ಶಾಲೆ ಮುಚ್ಚುವ ಭೀತಿ ಎದುರಾಯಿತು. ಆಗ ಶಾಲೆಯ ಹಳೆ ವಿದ್ಯಾಥರ್ಿಗಳು, ಗ್ರಾಮಸ್ಥರು ಮುಂದೆ ಬಂದು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದರು. ಇದರ ಫಲವಾಗಿ ಈ ವರ್ಷ 4 ಮಕ್ಕಳನ್ನು ಪೋಷಕರು ಕಾನ್ವೆಂಟ್ ಬಿಡಿಸಿ ಶಾಲೆಗೆ ದಾಖಲಿಸಿದ್ದಾರೆ. ಅಕ್ಕ ಪಕ್ಕದ ಊರುಗಳಿಂದಲೂ ವಿದ್ಯಾಥರ್ಿಗಳು ದಾಖಲಾಗುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಕಲಾ ಸಂತಸದಿಂದ ಹೇಳುತ್ತಾರೆ.
   ಶಾಲಾಭಿವೃದ್ಧಿ ಸಮಿತಿ, ಸಾರ್ವಜನಿಕರು ಹಾಗೂ ಹಳೆ ವಿದ್ಯಾಥರ್ಿಗಳ ಸಹಕಾರದಿಂದ ಹೊರಗಿನಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ, ಇಂಗ್ಲಿಷ್ ಸಂವಹನ ಕೌಶಲ್ಯ, ಕ್ಯಾಲಿಗ್ರಫಿ, ಯೋಗ ತರಗತಿಗಳು ಹಾಗೂ ಕಂಪ್ಯೂಟರ್ ತರಗತಿಗಳನ್ನು ಕಲಿಸಲಾಗುತ್ತಿದೆ. ಯಾವ ಕಾನ್ವೆಂಟ್ಗಳಿಗೂ ಕಡಿಮೆ ಇಲ್ಲದಂತೆ ಪ್ರತೀ ವರ್ಷ ನಡೆಸುವ 'ಮನೋಲ್ಲಾಸ' ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಿಕ್ಷಕ ನವೀನ್ ಹೇಳುತ್ತಾರೆ.
   ಹಳೆ ವಿದ್ಯಾಥರ್ಿಗಳಿಂದ ಸವಲತ್ತು ವಿತರಣೆ: ಕಳೆದ ನಾಲ್ಕು ವರ್ಷಗಳಿಂದ ಹಳೆ ವಿದ್ಯಾಥರ್ಿಗಳು ಶಾಲೆಗೆ ವಿವಿಧ ಸವಲತ್ತುಗಳನ್ನು ನೀಡುತ್ತಾ ಬಂದಿದ್ದಾರೆ. ಗ್ರಾಮಸ್ಥರೇ ಮುಂದಾಗಿ ಕಟ್ಟಡ ದುರಸ್ತಿಗೆ ಜಿಲ್ಲಾ ಪಂಚಾಯ್ತಿ ವತಿಯಿಂದ 1ಲಕ್ಷ ಅನುದಾನ ಹಾಕಿಸಿದ್ದಾರೆ. ತಿಪಟೂರಿನ ಸಂಗೀತ ಟೆಕ್ಸ್ಟೋರಿಯಂ ಮಾಲೀಕ ಉತ್ತಮ್ ಪ್ರತೀ ವರ್ಷ ಮಕ್ಕಳಿಗೆ ಹೆಚ್ಚುವರಿ ಸಮವಸ್ತ್ರಗಳನ್ನು ಒದಗಿಸುತ್ತಾ ಬರುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಹಳೆ ವಿದ್ಯಾಥರ್ಿಯೂ ಆಗಿರುವ ನಿವೃತ್ತ ಉಪನ್ಯಾಸಕ ರಾಜಶೇಖರ್ ರೂ.7ಸಾವಿರ ಮೌಲ್ಯದ ಪಾಠೋಪಕರಣಗಳನ್ನು ಮಕ್ಕಳಿಗೆ ವಿತರಿಸಿದ್ದಾರೆ. ಹಳೆ ವಿದ್ಯಾಥರ್ಿನಿ ಪ್ರಮೀಳ 2ಸ್ಮಾಟರ್್ ಬೋಡರ್್ ಕೊಡಿಸಿದ್ದಾರೆ. ರಘು ಕಂಪ್ಯೂಟರ್ ಸ್ಟಾಂಡ್ ನೀಡಿದ್ದು ಸವಲತ್ತುಗಳ ವಿತರಣಾ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ನಾಗರಾಜ್, ಇಂಗ್ಲಿಷ್ ವಿಷಯ ಪರಿವೀಕ್ಷಕಿ ರೂಪಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷೆ ಶಂಕರಮಣಿ, ಸದಸ್ಯರಾದ ರಮೇಶ್, ಉಮಾ, ಮುಖ್ಯೋಪಾಧ್ಯಾಯಿನಿ ಕಲಾ, ಶಿಕ್ಷಕ ನವೀನ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.